Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬಿಬಿಎಂಪಿ ಪಶ್ಚಿಮ ವಲಯ ಕಲ್ಯಾಣ ವಿಭಾಗದಲ್ಲಿ ಬಹುಕೋಟಿ ಹಗರಣ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದು, ಬಿಬಿಎಂಪಿ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ಅಲ್ಲದೆ ಹಲವು ದಾಖಲೆಗಳನ್ನು ಇದೀಗ ಪರಿಶೀಲನೆ ನಡೆಸುತ್ತಿದ್ದಾರೆ. ಹೌದು ಬಿಬಿಎಂಪಿ ಉಪ ಹಣಕಾಸು ನಿಯಂತ್ರಕ ಸತ್ಯಮೂರ್ತಿ ಮನೆ ಹಾಗೂ ಬಿಬಿಎಂಪಿ ಕಲ್ಯಾಣಾಧಿಕಾರಿ ಲಲಿತಾ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ದೇವಯ್ಯ ಪಾರ್ಕ್ ಬಳಿಯ ಲಲಿತಾ ನಿವಾಸ ಹಾಗೂ ವೈಯ್ಯಾಲಿಕಾವಲಿನಲ್ಲಿರುವ ಸತ್ಯಮೂರ್ತಿ ನಿವಾಸದಲ್ಲಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಿಬಿಎಂಪಿ ಪಶ್ಚಿಮ ವಲಯ ಕಲ್ಯಾಣ ವಿಭಾಗದಲ್ಲಿ ಬಹುಕೋಟಿ ಹಗರಣ ಆರೋಪದ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಕಲ್ಯಾಣ ಕಾರ್ಯಕ್ರಮ ಅನುಷ್ಠಾನದಲ್ಲಿ ಈ ಒಂದು ಹಗರಣ ನಡೆದಿತ್ತು. ಫಲಾನುಭವಿಗಳ ಹಣವನ್ನು ಸೊಸೈಟಿ ಗಳಿಗೆ ವರ್ಗಾಯಿಸಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿತ್ತು. ಡಿವೈಎಸ್ಪಿ ಸುನಿಲ್ ವೈ ನಾಯಕ್ ನೇತೃತ್ವದಲ್ಲಿ 8 ತಂಡಗಳಾಗಿ ದಾಳಿ…
BREAKING : ತುಂಬು ಗರ್ಭಿಣಿ ಸೇರಿ ಐವರನ್ನು ಹತ್ಯೆಗೈದಿದ್ದ ಆರೋಪಿಗೆ, ‘ಗಲ್ಲು ಶಿಕ್ಷೆ’ವಿಧಿಸಿ ತೀರ್ಪು ನೀಡಿದ ಕೋರ್ಟ್
ಮೈಸೂರು : ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಚಾಮೆಗೌಡನ ಹುಂಡಿ ಎಂಬ ಗ್ರಾಮದಲ್ಲಿ ಕಳೆದ 2021 ಏಪ್ರಿಲ್ 28ರಂದು ವ್ಯಕ್ತಿ ಒಬ್ಬ ತನ್ನ ತುಂಬು ಗರ್ಭಿಣಿ ಹೆಂಡತಿ ಸೇರಿದಂತೆ ಐವರನ್ನು ಭೀಕರವಾಗಿ ಕೊಲೆ ಮಾಡಿದ್ದ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮೈಸೂರು ಜಿಲ್ಲಾ ಸತ್ರ ನ್ಯಾಯಾಲಯವು ಆರೋಪಿ ಮಣಿಕಂಠಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ. ಹೌದು ಕೊಲೆ ಅಪರಾಧಿ ಮಣಿಕಂಠಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಇದೀಗ ತೀರ್ಪು ನೀಡಿದೆ. ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳರವರ ತೀರ್ಪು ನೀಡಿದ್ದಾರೆ. ಮಣಿಕಂಠ ಸ್ವಾಮಿ (35) ಎನ್ನುವ ಅಪರಾಧಿಗೆ ಮರಣ ದಂಡನೆ ಹಾಗೂ 10,000 ದಂಡ ವಿಧಿಸಿ ತೀರ್ಪು ಹೊರಡಿಸಿದ್ದಾರೆ. ತುಂಬು ಗರ್ಭಿಣಿ ಪತ್ನಿ ಸೇರಿದಂತೆ ಮಣಿಕಂಠ ಐವರನ್ನು ಕೊಲೆ ಮಾಡಿದ್ದ. ಗರ್ಭಿಣಿಯಾಗಿದ್ದ ಪತ್ನಿ ಗಂಗೆ, ತಾಯಿ ಕೆಂಪಂಜ್ಜಮ್ಮ, ಒಂದೂವರೆ ವರ್ಷದ ರೋಹಿತ್ ಹಾಗೂ 4 ವರ್ಷದ ಸಾಮ್ರಾಟನನ್ನು ಮಣಿಕಂಠ ಕೊಲೆ ಮಾಡಿದ್ದ. ಹೆಂಡತಿಯ ಬಗ್ಗೆ ಅನುಮಾನ ಪಟ್ಟು ಮಣಿಕಂಠ…
ಬೆಂಗಳೂರು : ಆದಾಯ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿರುವ ಉದ್ಯಮಿಗಳಿಗೆ ಹಾಗೂ ಬಿಲ್ಡರ್ ಗಳಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದು, ಉದ್ಯಮಿ ಮತ್ತು ಬಿಲ್ಡರ್ ಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಹೌದು ಬೆಂಗಳೂರಿನಲ್ಲಿ ಉದ್ಯಮಿಗಳಿಗೆ ಐಟಿ ಶಾಕ್ ನೀಡಿದ್ದು, 25 ಹೆಚ್ಚು ಕಡೆ ದಾಳಿ ನಡೆಸಿದ ಐಟಿ ಅಧಿಕಾರಿಗಳು, ಉದ್ಯಮಿಗಳು ಬಿಲ್ಡರ್ ಗಳ ಮನೆ ಹಾಗೂ ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ಕುರಿತಂತೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಬೆಂಗಳೂರು : ಮುಡಾದಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು RTI ಕಾರ್ಯಕರ್ತ ಗಂಗರಾಜು ಅವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಗಂಗರಾಜು ಅವರು ಬೆಂಗಳೂರಿನಲ್ಲಿರುವ ಜಾರಿ ನಿರ್ದೇಶನಾಲಯ ಕಛೇರಿಗೆ ದಾಖಲೆಗಳೊಂದಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗುವ ಮುನ್ನ ನಿನ್ನೆ ಮಧ್ಯಾಹ್ನ ಇಡಿ ಅಧಿಕಾರಿಗಳು ಕರೆ ಮಾಡಿ ವಿಚಾರಣೆಗೆ ಬರಲು ಹೇಳಿದ್ದರು. ಈ ಹಿಂದೆ ಬಂದಾಗ ಕೆಲ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದೆ. ಅಂದು ಹೇಳಿಕೆಯನ್ನು ದಾಖಲಿಸಿರಲಿಲ್ಲ. ಇವತ್ತು ನನ್ನ ಹೇಳಿಕೆಯನ್ನು ಅಧಿಕಾರಿಗಳು ದಾಖಲಿಸಬಹುದು. ಮುಡಾ ಅಕ್ರಮದ ದಾಖಲೆಗಳನ್ನು ತೆಗೆದುಕೊಂಡು ಬಂದಿದ್ದೇನೆ. ಕೇವಲ ಸಿಎಂ ಸಿದ್ದರಾಮಯ್ಯ ಪಡೆದಿದ್ದ ಸೈಟ್ ಗಳು ಮಾತ್ರ ಅಲ್ಲ ಮುಡಾದಲ್ಲಿ ನಡೆದ 5000 ಕೋಟಿ ಅಕ್ರಮದ ತನಿಖೆ ಕೂಡ ಆಗಬೇಕು. ಆ ನಿಟ್ಟಿನಲ್ಲಿ ನನ್ನ ಬಳಿ ಇರುವ ಎಲ್ಲಾ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡುತ್ತೇನೆ ಎಂದರು.ಸಚಿವ ಭೈರತಿ ಸುರೇಶ್ ಹಿಂದಿನ ಆಯುಕ್ತರಿಗೆ ಸರ್ಚ್ ವಾರಂಟ್ ಕುರಿತು ಮಾಹಿತಿ ಸೋರಿಕೆಯಾಗಿದೆ.ಜಿ ಟಿ ದಿನೇಶ್ ಕುಮಾರ್ ನಟೇಶ್ ಗೆ ಮಾಹಿತಿ…
ಮಹಾರಾಷ್ಟ್ರ : ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿ ಎ ನೇತೃತ್ವದ ಬಿಜೆಪಿಯು 230 ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ದಾಖಲೆ ನಿರ್ಮಿಸಿದೆ. ಫಲಿತಾಂಶ ಬಂದ ಬಳಿಕ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿ ನೇಮಕವಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಇದೀಗ ಬಿಜೆಪಿ ಮತ್ತು ಶಿವಸೇನೆಯ ಶಿಂಧೆ ಬಣದ ನಡುವೆ ಸಿಎಂ ಕುರ್ಚಿಗಾಗಿ ಹಗ್ಗಜಗಾಟ ನಡೆಯುತ್ತಿದೆ. ಹೌದು ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಆಯ್ಕೆ ಇನ್ನೂ ಬಗೆಹರಿದಿಲ್ಲ. ಸಿಎಂ ಕುರ್ಚಿಗೆ ಬಿಜೆಪಿ ಮತ್ತು ಶಿವಸೇನೆಯ ಶಿಂಧೆ ಬಣದ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. ಫಲಿತಾಂಶ ಮತ್ತು 4 ದಿನಗಳಾದರೂ ಸಹ ಸಿಎಂ ಆಯ್ಕೆ ಕಗ್ಗಂಟು ಇನ್ನೂವರೆಗೂ ಬಗೆಹರಿದಿಲ್ಲ. ಸಿಎಂ ಸ್ಥಾನವನ್ನು ಶಿವಸೇನೆಗೆ ಬಿಟ್ಟುಕೊಡಲು ಬಿಜೆಪಿ ಇದುವರೆಗೂ ಮನಸ್ಸು ಮಾಡಿಲ್ಲ. ಇನ್ನು ಮುಖ್ಯಮಂತ್ರಿ ಸ್ಥಾನ ತನಗೆ ಬೇಕು ಎಂದು ಶಿವಸೇನೆಯ ಶಿಂಧೆ ಬಣ ಪಟ್ಟು ಹಿಡಿದುಕೊಂಡಿದೆ. ಬಿಹಾರ ಮಾದರಿಯಲ್ಲಿ ಸಿಎಂ ಆಯ್ಕೆ ಇರಲಿ ಎಂದು ಶಿವಸೇನೆ ಬಣ ಹೇಳುತ್ತಿದೆ. ಬಿಹಾರ್ ಮಾದರಿಯ ಸಿಎಂ…
ಬೆಂಗಳೂರು : ಇತ್ತೀಚಿಗೆ ರಾಜ್ಯ ಸೇರಿದಂತೆ ಇಡೀ ದೇಶದಲ್ಲಿ ಕಾಮುಕರು ಅಟ್ಟಹಾಸ ಮೆರೆಯುತ್ತಿದ್ದಾರೆ. ಬೆಂಗಳೂರು ನಗರ ಕೂಡ ಇದೀಗ ಮಹಿಳೆಯರಿಗೆ ಸೇಫ್ ಅಲ್ಲ ಎನ್ನುವಂತಿದೆ. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ನಡು ರಸ್ತೆಯಲ್ಲಿಯೇ ಯುವತಿಗೆ ಕಾಮುಕನೊಬ್ಬ ಕೆಟ್ಟದಾಗಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಹೌದು ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾದ ಕಾಮುಕರ ಉಪಟಳ. ಕತ್ತಲಲ್ಲಿ ಹೋಗುತ್ತಿದ್ದ ಯುವತಿಗೆ ಬ್ಯಾಡ್ ಆಗಿ ಮೈಮುಟ್ಟಿ ಕಿರುಕುಳ ನೀಡಿದ್ದಾನೆ. ಬೈಕ್ ಸವಾರನಿಂದ ನಡು ಬೀದಿಯಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನವೆಂಬರ್ 11 ರ ರಾತ್ರಿ ಈ ಒಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪುಂಡನ ನೀತಿ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಇದೀಗ ಸೆರೆಯಾಗಿದೆ. ಘಟನೆ ನಡೆದ ಕೂಡಲೇ ಯುವತಿ ರಾಮಮೂರ್ತಿ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಕಾಮುಕ ಅರುಣ್ ಎನ್ನುವ ಆರೋಪಿಯನ್ನು ಕೂಡಲೆ ಅರೆಸ್ಟ್ ಮಾಡಿ ಪ್ರಕರಣವನ್ನು…
ಬೆಂಗಳೂರು : ಬೆಂಗಳೂರಿನಲ್ಲಿ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಬಿಹಾರ್ ಮೂಲದ ಚಾದರ್ ಗ್ಯಾಂಗ್ ಎಂದೆ ಖ್ಯಾತಿ ಪಡೆದಿದ್ದ ಸುಮಾರು 8 ಜನರ ಖದೀಮರ ಗ್ಯಾಂಗನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಇದೀಗ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ರಾಜಧಾನಿಯಲ್ಲಿ ಬಿಡು ಬಿಟ್ಟಿದ ಚಾದರ್ ಗ್ಯಾಂಗ್ ಅರೆಸ್ಟ್ ಆಗಿದೆ. ಬಿಹಾರ್ ಮೂಲದ ಚಾದರ್ ಗ್ಯಾಂಗ್ ಅನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಸುಮಾರು 8 ಜನರನ್ನು ಬೈಯಪ್ಪನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನವೆಂಬರ್ 21ರ ಮುಂಜಾನೆಯೇ ಮೊಬೈಲ್ ಅಂಗಡಿ ಒಂದನ್ನು ಖದೀಮರು ದೋಚಿದ್ದರು.ಬೈಯ್ಯಪನಹಳ್ಳಿಯ ಠಾಣಾ ವ್ಯಾಪ್ತಿಯ ಮೊಬೈಲ್ ಶಾಪ್ ನಲ್ಲಿ ಕಳ್ಳತನ ಮಾಡಿದ್ದರು. ಸುಮಾರು ಮುಂಜಾನೆ 5ಗಂಟೆಗೆ ಮೊಬೈಲ್ ಶಾಪ್ ಗೆ ನುಗ್ಗಿ 1.50 ಸಾವಿರ ನಗದು ಹಣ, 28 ಲಕ್ಷ ಮೌಲ್ಯದ ಸುಮಾರು 80 ಮೊಬೈಲ್ ಗಳನ್ನು ಸೇರಿದಂತೆ ಅನೇಕ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಮೊಬೈಲ್ ಶಾಪ್ ಕಳ್ಳತನ ಕುರಿತಂತೆ ಮೊಬೈಲ್ ಮಾಲೀಕರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಗ್ಯಾಂಗ್…
ಬೆಂಗಳೂರು : ಸಿಲಿಕಾನ್ ಸಿಟಿ ಎಂದರೆ ನೆನಪಾಗೋದು ಬರಿ ಟ್ರಾಫಿಕ್. ಆದರೆ ಸಿಲಿಕಾನ್ ಸಿಟಿಯ ಟ್ರಾಫಿಕ್ಗೆ ಇರುವ ಒಂದೇ ಒಂದು ಪರಿಹಾರವೆಂದರೆ ಅದು ನಮ್ಮ ಮೆಟ್ರೋ. ಇದೀಗ BMRCL ಬೆಂಗಳೂರು ಜನರಿಗೆ ಗುಡ್ ನ್ಯೂಸ್ ನೀಡಿದ್ದು, ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ಸೇರ್ಪಡೆಯಾಗಲಿದೆ. ಇನ್ನೂ ಹೊಸ ರೈಲುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಬಳಿಕ ಪ್ರತಿ 3 ನಿಮಿಷಕ್ಕೆ ಒಂದರಂತೆ ರೈಲು ಸಂಚಾರ ಮಾಡಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ನಮ್ಮ ಮೆಟ್ರೋದಲ್ಲಿ ಈಗಾಗಲೇ 57 ಮೆಟ್ರೋ ರೈಲು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಪ್ರತಿನಿತ್ಯ 55 ರೈಲುಗಳು ಸಾರ್ವಜನಿಕ ಸೇವೆ ನೀಡುತ್ತಿದ್ದು, ಇನ್ನೂಳಿದ ಎರಡು ರೈಲುಗಳನ್ನು ತುರ್ತುಪರಿಸ್ಥಿತಿಗಾಗಿ ಉಳಿಸಿಕೊಳ್ಳಲಾಗಿದೆ. ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗದ ಟೆಂಡರ್ ಪ್ರಕ್ರಿಯೆ ಸಮಯದಲ್ಲಿ ಒಟ್ಟು 78 ರೈಲುಗಳನ್ನು ಒದಗಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದನ್ವಯ ಮುಂದಿನ ವರ್ಷದೊಳಗೆ 21 ಹೊಸ ರೈಲುಗಳು ನಮ್ಮ ಮೆಟ್ರೋಕ್ಕೆ ಸೇರ್ಪಡೆಯಾಗಲಿದೆ. ಅಲ್ಲದೇ ನಮ್ಮ ಮೆಟ್ರೋ ರೈಲು ಈಗಾಗಲೇ ಸರಿಸುಮಾರು 76 ಕಿ.ಮೀ. ಸೇವೆಯನ್ನು ನೀಡುತ್ತದೆ.…
ಹಾಸನ : ತನ್ನ ತಂದೆಯನ್ನು ಕೊಂದಿದ್ದಾನೆ ಎಂದು ಹದಿಮೂರು ವರ್ಷಗಳ ಸೇಡನ್ನು ಇಟ್ಟುಕೊಂಡು ವ್ಯಕ್ತಿ ಒಬ್ಬ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಯನ್ನು ಭೀಕರವಾಗಿ ಕೊಚ್ಚಿ, ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದಡದಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ತಂದೆಯನ್ನು ಕೊಂದು ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಯನ್ನು ವ್ಯಕ್ತಿಯೊಬ್ಬ ಭೀಕರವಾಗಿ ಕೊಲೆಗೈದಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದಡದಹಳ್ಳಿಯಲ್ಲಿ ಘಟನೆ ನಡೆದಿದೆ.2011ರಲ್ಲಿ ಲಕ್ಕಪ್ಪ ಕೊಲೆ ಪ್ರಕರಣದಲ್ಲಿ ನಿರ್ವಾಣಪ್ಪ (77) ಎನ್ನುವ ಆರೋಪಿ ಜೈಲು ಸೇರಿದ್ದ. ಇತ್ತೀಚಿಗೆ ನಿರ್ವಾಣಪ್ಪ ಜೈಲಿನಿಂದ ಬಿಡುಗಡೆ ಆಗಿದ್ದ. ನಿನ್ನೆ ನಿರ್ವಾಣಪ್ಪನನ್ನು ಲಕ್ಕಪ್ಪನ ಪುತ್ರ ಮೂರ್ತಿ ಎನ್ನುವವನು ಕೊಚ್ಚಿ ಕೊಲೆ ಮಾಡಿದ್ದಾನೆ. ತಂದೆಯ ಹತ್ಯೆಯ ಸೇಡಿಗಾಗಿ 13 ವರ್ಷಗಳ ಬಳಿಕ ಆರೋಪಿಯನ್ನು ಕೊಲೆ ಮಾಡಿದ್ದಾನೆ. ಹತ್ಯೆಯ ಕುರಿತಂತೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು : ಬೆಳಗಾವಿಯಿಂದ ಮೈಸೂರಿಗೆ ಪ್ರವಾಸಕ್ಕೆ ಎಂದು ಆಗಮಿಸಿದ್ದ, ಕೆ ಎಸ್ ಆರ್ ಟಿ ಸಿ ಬಸ್ ಒಂದು ನಿನ್ನೆ ಮೈಸೂರಿನಲ್ಲಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿದೆ. ಬಸ್ ಪಲ್ಟಿಯಾದ ಪರಿಣಾಮ 11 ವಿದ್ಯಾರ್ಥಿಗಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರದ ಶಾಂತಿನಿಕೇತನ ಶಾಲೆಯ ಮಕ್ಕಳು ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು. ಪ್ರವಾಸಿ ತಾಣಗಳನ್ನು ವೀಕ್ಷಿಸಿ ವಾಪಸ್ ತೆರಳುವಾಗ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಗೊಂಡ ಮಕ್ಕಳನ್ನು ಕೆ.ಆರ್.ಆಸ್ಪತ್ರೆ ಮತ್ತು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ಅಜಾಗರೂಕತೆಯಿಂದ ಡಿವೈಡರ್ಗೆ ಡಿಕ್ಕಿಯಾಗಿ ಬಸ್ ಮಗುಚಿ ಬಿದ್ದಿದೆ. ಬಸ್ನಲ್ಲಿದ್ದ 36 ಮಕ್ಕಳ ಪೈಕಿ 11 ಮಕ್ಕಳು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಯಾರೂ ಭಯಪಡುವ ಅವಶ್ಯಕತೆ ಇಲ್ಲ ಎಂದು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.












