Author: kannadanewsnow05

ಮೈಸೂರು : HD ಕುಮಾರಸ್ವಾಮಿ ಒಂದು ವೇಳೆ ಗುಟುರು ಹಾಕಿಲ್ಲದಿದ್ದರೆ, ಶಾಸಕ ಜಿಟಿ ದೇವೇಗೌಡ ಜೈಲಿಗೆ ಹೋಗಬೇಕಾಗಿತ್ತು. ಜಿಟಿ ದೇವೇಗೌಡರನ್ನು ಅಂದು ಜೈಲಿಗೆ ಹೋಗೋದನ್ನು ತಪ್ಪಿಸಿದ್ದು HD ಕುಮಾರಸ್ವಾಮಿ ಎಂದು HD ರೇವಣ್ಣ ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ಜಿಟಿ ದೇವೇಗೌಡ ನಾನು, ನನ್ನ ಮಗ ಜೈಲಿಗೆ ಹೋಗುವಂತ ಅಪರಾಧ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಟಿ ದೇವೇಗೌಡಗೆ ಜೈಲಿಗೆ ಹೋಗುವ ಪರಿಸ್ಥಿತಿ ಬಂದಿತ್ತು ಎಂಬ ಎಚ್ ಡಿ ರೇವಣ್ಣ ಹೇಳಿಕೆಗೆ ರಾಜಕೀಯವಾಗಿ ನನ್ನ ವಿರುದ್ಧ ಯಾರೂ ಕೂಡ ದೂರು ನೀಡಿಲ್ಲ. ಏನು ಮಾತನಾಡಬಾರದು ಅಂತ ನಿರ್ಧಾರ ಮಾಡಿದ್ದೇನೆ ಆದರೆ ಪದೇ ಪದೇ ನನ್ನ ಹೆಸರನ್ನು ಏಕೆ ತೆಗೆದುಕೊಳ್ಳುತ್ತಿದ್ದಾರೆ? ಎಂದು ಜಿಟಿ ದೇವೇಗೌಡ ಎಚ್‌ಡಿ ರೇವಣ್ಣ ವಿರುದ್ಧ ಕಿಡಿಕಾರಿದರು. ಸಿದ್ದರಾಮಯ್ಯ ಸೇರಿ ಯಾರು ನನ್ನನ್ನು ಬಂಧಿಸುವಂತೆ ಹೇಳಿಲ್ಲ. ಯಾವುದಾದರೂ ಪ್ರಕರಣ ಇದ್ದರೆ ತಾನೆ ಬಂಧಿಸುವುದು? ಈ ರೀತಿ ಚಿಲ್ಲರೆ ಕೆಲಸ ನಮ್ಮ ಜಿಲ್ಲೆಯಲ್ಲಿ ಆಗಿಲ್ಲ ಸಿದ್ದರಾಮಯ್ಯ ಸೇಡು…

Read More

ಕೊಪ್ಪಳ : ವಿಜಯನಗರ ಜಿಲ್ಲೆಯ ಹಂಪಿ ಪ್ರವಾಸಕ್ಕೆ ಎಂದು ಕಲ್ಬುರ್ಗಿ ಜಿಲ್ಲೆಯ ಗುರುಮಿಟ್ಕಲ್ ನ ಶಾಲಾ ಮಕ್ಕಳಿದ್ದ KSRTC ಬಸ್ ಒಂದು ಪಲ್ಟಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಳಿ ನಡೆದಿದೆ. ಆದರೆ ಅದೃಷ್ಟವಶಾತ್ ಬಸ್ನಲ್ಲಿದ್ದ ಎಲ್ಲಾ ಮಕ್ಕಳು ಕೂಡ ಸೇಫ್ ಆಗಿದ್ದಾರೆ. ಕಲಬುರಗಿಯ ಗುರುಮಿಟ್ಕಲ್‌ನ ಶಾಲಾ ಮಕ್ಕಳಿದ್ದ ಸಾರಿಗೆ ಬಸ್‌ ಗಂಗಾವತಿಯ ಮರಳಿ ಸಮೀಪ ರಸ್ತೆ ಬದಿಯ ಹೊಲಕ್ಕೆ ಉರುಳಿದೆ. ಇಂದು ಬೆಳಗ್ಗೆ 4:30ರ ಸುಮಾರಿಗೆ ಘಟನೆ ನಡೆದಿದೆ. ಅದೃಷ್ಟವಶಾತ್, ಬಸ್‌ನಲ್ಲಿದ್ದ 60 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ವಿದ್ಯಾರ್ಥಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಶಾಲಾ ಮಕ್ಕಳು ಬುಧವಾರ ರಾತ್ರಿ ಪ್ರವಾಸ ಹೊರಟಿದ್ದರು. ಬೆಳಗ್ಗೆ ಮರಳಿ ಸಮೀಪ ಪೇಪರ್ ಸಾಗಿಸುವ ವಾಹನ ರಸ್ತೆ ಮಧ್ಯೆ ಎದುರಾಗಿದೆ. ಚಾಲಕ ಸದಾಶಿವಯ್ಯ ಸಂಭಾವ್ಯ ಅಪಘಾತ ತಪ್ಪಿಸಲು ಹೋಗಿದ್ದರಿಂದ ನಿಯಂತ್ರಣ ಕಳೆದುಕೊಂಡ ಬಸ್ ಅಪಘಾತಕ್ಕೀಡಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕಲಬುರ್ಗಿ : ಕಲಬುರ್ಗಿಯ ಸೆಂಟ್ರಲ್ ಜೈಲಿನ ಅಧೀಕ್ಷಕಿ ಅನಿತಾ ಎನ್ನುವವರ ಕಾರನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಯೊಬ್ಬ ಆಡಿಯೋ ಸಂದೇಶ ಕಳಿಸಿದ್ದಾನೆ. ಈ ನೆಲೆಯಲ್ಲಿ ಪೊಲೀಸರು ಕೇಂದ್ರ ಕಾರಾಗೃಹದ ಸುತ್ತಲೂ ಅಲರ್ಟ್ ಆಗಿದ್ದಾರೆ. ಅನಾಮದೇಯ ವ್ಯಕ್ತಿಯಿಂದ ಕಲಬುರಗಿ ನಗರದ ಪೊಲೀಸ್ ಇನ್ಸೆಪೆಕ್ಟರ್ ಮೊಬೈಲ್‍ಗೆ ಬೆದರಿಕೆ ಸಂದೇಶ ಬಂದಿದೆ. ಈ ಮಾಹಿತಿಯನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದರಿಂದ ಅಲರ್ಟ್ ಆಗಿರುವ ಅಧಿಕಾರಿಗಳು ಕಾರನ್ನು ಸಿಸಿಟಿವಿ ಇರುವೆಡೆ ಮಾತ್ರ ಪಾರ್ಕ್ ಮಾಡುವಂತೆ ಕಾರು ಚಾಲಕನಿಗೆ ಸೂಚಿಸಿದ್ದಾರೆ. ಜೈಲಿನಲ್ಲಿ ಬೀಡಿ, ಗುಟ್ಕಾ ಸಿಗರೇಟ್ ಬಂದ್ ಮಾಡಿದ್ದಕ್ಕೆ ಅನೀತಾ ವಿರುದ್ಧ ಕೈದಿಗಳು ಮಂಗಳವಾರ ಪ್ರತಿಭಟನೆ ಮಾಡಿದ್ದರು. ಕಟ್ಟು ನಿಟ್ಟಿನ ರೂಲ್ಸ್ ವಿರುದ್ಧ ಕೇರಳಿದ ಕೈದಿಗಳಿಂದ ಬಂದ ಬೆದರಿಕೆ ಆಡಿಯೋನಾ? ಹತ್ಯೆಗೆ ಸಂಚು ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಕಳೆದ ಒಂದೂವರೆ ತಿಂಗಳಿನ ಹಿಂದೆಯಷ್ಟೇ ಅನಿತಾ ಅವರು ಕಲಬುರಗಿ ಸೆಂಟ್ರಲ್ ಜೈಲಿಗೆ ವರ್ಗಾವಣೆ ಆಗಿದ್ದರು. ಜೈಲಿನಲ್ಲಿ ಕಠಿಣ ನಿಯಮ ಜಾರಿಗೊಳಿಸಲು ಮುಂದಾಗಿದ್ದಕ್ಕೆ ಕೈದಿಗಳೇ ಬೆದರಿಕೆ ಸಂದೇಶ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ.

Read More

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಭೀಕರವಾದಂತಹ ಕೊಲೆಯಾಗಿದ್ದು, ಪ್ರೀತಿಸಿ ಮದುವೆಯಾಗಿದ್ದ ಯುವಕನನ್ನು, ಯುವತಿಯ ಮನೆಯ ಸುಮಾರು 20 ಜನರು ಯುವಕನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಕೋಣನೂರು ಗ್ರಾಮದಲ್ಲಿ ನಡೆದಿದೆ. ಹೌದು ಕೊಲೆಯಾದ ಯುವಕನನ್ನು ಮಂಜುನಾಥ್ ಎಂದು ತಿಳಿದು ಬಂದಿದೆ.ಇನ್ನೂ ಯುವತಿ ರಕ್ಷಿತಾ ಮನೆಯವರು ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಕೂಡ ಕಳೆದ ಮೂರು ತಿಂಗಳ ಹಿಂದೆ ಇವರಿಬ್ಬರು ದೇವಸ್ಥಾನದಲ್ಲಿ ಕುಟುಂಬಸ್ಥರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಮಂಜುನಾಥ್ ಮೇಲೆ ಕೋಪಗೊಂಡಿದ್ದ ರಕ್ಷಿತಾ ಕುಟುಂಬ ಬುಧವಾರ ಮಧ್ಯಾಹ್ನ ಏಕಾಏಕಿ ಹಲ್ಲೆ ನಡೆಸಿದೆ. ಸುಮಾರು 20 ಮಂದಿ ಮಂಜುನಾಥ್ ಗೆ ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಮಂಜುನಾಥ್ ತಂದೆ ಚಂದ್ರಪ್ಪ ಹಾಗೂ ತಾಯಿ ಅನಸೂಯಮ್ಮಗೂ ಗಂಭೀರ ಗಾಯವಾಗಿದೆ .ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ರಹ್ಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಬೆಂಗಳೂರು : ಕಿರುತೆರೆ ನಟಿ ನಟಿ ದೀಪಿಕಾ ದಾಸ್ ಅವರ ತಾಯಿಗೆ, ಹಣ ನೀಡದೆ ಹೋದರೆ ನಿಮ್ಮ ಮಗಳು ಮತ್ತು ಅಳಿಯನ ವಿರುದ್ಧ ಅಪಪ್ರಚಾರ ಮಾಡುತ್ತೇನೆ ಎಂದು ಫೋನ್ ಮಾಡಿ ಯಶವಂತ ಎನ್ನುವ ವ್ಯಕ್ತಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಕುರಿತಂತೆ ದೀಪಿಕಾ ದಾಸ್ ಅವರ ತಾಯಿ ಪದ್ಮಲತಾ ಅವರು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಹೌದು ಹಣ ನೀಡದೆ ಹೋದರೆ ಮಗಳು ಅಳಿಯನ ಘನತೆಯ ಬಗ್ಗೆ ಅಪಪ್ರಚಾರ ಮಾಡುದಾಗಿ ಯಶವಂತ್ ಎನ್ನುವ ವ್ಯಕ್ತಿ ಬೆದರಿಕೆ ಹಾಕಿದ್ದು, ಆತನ ವಿರುದ್ಧ ನಟಿ ದೀಪಿಕಾ ದಾಸ್ ತಾಯಿ ದೂರು ಸಲ್ಲಿಸಿದ್ದಾರೆ. ನಟಿ ದೀಪಿಕಾ ದಾಸ್ ತಾಯಿ ಪದ್ಮಲತಾಗೆ ಯಶವಂತ್ ಕರೆ ಮಾಡಿದ್ದ. ಹಣ ನೀಡದಿದ್ದರೆ ಅಳಿಯನ ವಿರುದ್ಧ ಅಪಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಮಗಳಿಗೆ ಏಕೆ ಮದುವೆ ಮಾಡಿದ್ದೀರಿ ದೀಪಕ್ ಮೋಸ ಮಾಡಿದ್ದಾನೆ. ದೀಪಕ್ ಕುಮಾರ್ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ ಎಂದು ಯಶವಂತ್ ದೀಪಿಕಾ ದಾಸ್ ತಾಯಿಗೆ ಕರೆ…

Read More

ಬೆಳಗಾವಿ : ಸ್ನೇಹಿತೆಯ ಮನೆಗೆ ಊಟಕ್ಕೆ ತೆರಳಿದ್ದ ಒಂದೇ ಒಂದು ಕಾರಣಕ್ಕೆ, ಯುವಕ ಮತ್ತು ಆತನ ಪ್ರಿಯತಮೆ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಪ್ರಿಯತಮೆಯ ಜೊತೆಗೆ ಬಂದಿದ್ದ ಮೂವರು ಯುವಕನ ಮೇಲೆ ಗುಂಡಿನ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬೆಳಗಾವಿಯ ಆಂಜನೇಯ ನಗರದಲ್ಲಿ ನಡೆದಿದೆ. ಹೌದು ಗುಂಡು ತಗುಲಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನನ್ನು ಪ್ರಣಿತ್ (31) ಎಂದು ತಿಳಿದುಬಂದಿದೆ. ಈತ ಬೆಳಗಾವಿ ನಗರದ ಟಿಳಕವಾಡಿಯ ದ್ವಾರಕಾನಗರದ ನಿವಾಸಿ ಎನ್ನಲಾಗಿದೆ. ನಿನ್ನೆ ಈತ ಸ್ನೇಹಿತೆ ಸ್ಮಿತಾ ಮನೆಗೆ ಊಟಕ್ಕೆ ಹೋಗಿದ್ದಾನೆ. ಇನ್ನೇನು ಊಟ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಪ್ರಣಿತ್ ಮಾಜಿ ಗರ್ಲ್ ಫ್ರೆಂಡ್ ಸ್ಮಿತಾಳ ಮನೆಗೆ ಬಂದಿದ್ದಾಳೆ. ಸಹಜವಾಗಿ ತಾನು ಪ್ರೀತಿಸುವ ಹುಡುಗ ಬೇರೆ ಹೆಣ್ಣಿನೊಂದಿಗೆ ಕಂಡಾಗ ಯಾರಿಗೆ ಆಗಲಿ ಕೋಪ ಬರುತ್ತದೆ. ಇದೇ ರೀತಿ ಕೂಡ ಪ್ರಣಿತ್  ಗರ್ಲ್ ಫ್ರೆಂಡ್ ಗು ಆಗಿದ್ದು, ಗಂಡ ಸತ್ತ ಸ್ಮಿತಾ ಒಬ್ಬಳೆ ಇದ್ದು ಆಕೆ ಮನೆಗೆ ಪ್ರಣಿತ್ ಯಾಕೆ ಬಂದಾ…

Read More

ಮಂಡ್ಯ : ಈ ಹಿಂದೆ ಅಬಕಾರಿ ಇಲಾಖೆಯ ಸಚಿವ ಸಚಿವ ಆರ್ ಬಿ ತಿಮ್ಮಾಪುರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಇದೀಗ ಮಂಡ್ಯ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಗಾಗಿ ಅರ್ಜಿ ಸಲ್ಲಿಸಿದವರ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಅರ್ಜಿದಾರರು ಲೋಕಾಯುಕ್ತಕ್ಕೆ ಇಬ್ಬರು ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದಾರೆ. ಹೌದು ಮಂಡ್ಯದ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಸಿ ಎಲ್-7 ಲೆಸೆನ್ಸ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ. ಲಕ್ಷ್ಮಮ್ಮ ಎಂಬುವರ ಹೆಸರಿನಲ್ಲಿ ಬಾರ್ ಲೈಸೆನ್ಸ್ ಗೆ ಅರ್ಜಿ ಹಾಕಲಾಗಿತ್ತು. ಮಂಡ್ಯದ ಜಿಲ್ಲೆಯ ಮದ್ದೂರು ತಾಲೂಕಿನ ಚಂದುಪುರ ಗ್ರಾಮದಲ್ಲಿ ಬಾರ್ ಹಾಗೂ ರೆಸ್ಟೋರೆಂಟ್ ಗೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಲಾಗಿತ್ತು. ಮೊದಲು ಆನ್ಲೈನ್ ನಲ್ಲಿ ಲಕ್ಷ್ಮಮ್ಮ ಅವರ ಮಗ ಪುನೀತ್ ಅರ್ಜಿ ಸಲ್ಲಿಸಿದ್ದರು. ಆಮೇಲೆ ಅರ್ಜಿಯನ್ನು ರಿಜೆಕ್ಟ್…

Read More

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗು ಸಾಕಷ್ಟು ತನಿಖೆಯ ಪ್ರಗತಿ ಕಂಡಿದೆ. ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದು ಹಾಗೂ ಇಡಿ ಅಧಿಕಾರಿಗಳು ಕೂಡ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದು, ಎಲ್ಲವೂ ಆದ ಬಳಿಕ ಕೇಸ್ ಇನ್ನು ಕೋರ್ಟ್ ನಲ್ಲಿ ಇದೆ. ಇದರ ಮಧ್ಯ ಇದೀಗ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಭೂಮಾಲಿಕ ದೇವರಾಜಯ್ಯ ಅಣ್ಣನ ಮಗಳು ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಹಾಗೂ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ವಿರುದ್ಧ ಕೋರ್ಟ್ ನಲ್ಲಿ ದಾವೆ ಹೊಡಿದ್ದಾರೆ. ಹೌದು ಸಿಎಂ, ಪತ್ನಿ ಪಾರ್ವತಿ ಬಾಮೈದ ಸೇರಿ 12 ಜನರ ವಿರುದ್ಧ ಮೈಸೂರಿನ JMFC ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಭೂಮಿ ಮಾರಿದ ದೇವರಾಜಯ್ಯ ಸಂಬಂಧಿಕರಿಂದ ಭೂಮಿ ಪಡೆದುಕೊಂಡು, ಸಿಎಂ ಬಾಮೈದ ಮಲ್ಲಿಕಾರ್ಜುನ್ ಗೆ ಭೂಮಿ ಮಾರಿದ್ದ. ದೇವರಾಜು ಮೋಸ ಮಾಡಿದ್ದಾರೆ ಎಂದು ದೇವರಾಜ್ ಸಂಬಂಧಿಕರು ಆರೋಪಿಸಿದ್ದಾರೆ. ದೇವರಾಜು ಆರೋಪಿಸಿ ಸಂಬಂಧಿಕರು ಇದೀಗ ದಾವೇ ಹೂಡಿದ್ದಾರೆ.ದೇವರಾಜು ಅಣ್ಣನ ಮೈಲಾರಯ್ಯನ ಮಗಳು ಜಮುನಾ ಎನ್ನುವವರು…

Read More

ಬೆಂಗಳೂರು : ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಹಾಗಾಗಿ 5 ಗ್ಯಾರಂಟಿ ಯೋಜನೆಗಳಲ್ಲಿ ಯಾವುದಾದರು ಎರಡು ನಿಲ್ಲಿಸಿ ಎಂದು ಶಾಸಕ ಗವಿಯಪ್ಪ ಹೇಳಿಕೆ ನೀಡಿದ್ದರು. ಈ ಒಂದು ಹೇಳಿಕೆಯನ್ನ ಗೃಹ ಸಚಿವ ಜಿ ಪರಮೇಶ್ವರ್ ಅವರು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಹೇಳಿಕೆ ನೀಡಿದ್ದು, ನಾನು ಕೂಡ ಅನುದಾನ ಕೇಳುತ್ತೇನೆ ಅದರಲ್ಲಿ ತಪ್ಪೇನಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದೆರಡು ಗ್ಯಾರಂಟಿ ನಿಲ್ಲಿಸಬೇಕು ಎಂದು ಗವಿಯಪ್ಪ ಹೇಳಿಕೆ ವಿಚಾರವಾಗಿ ಅವರವರ ಅಭಿಪ್ರಾಯ ಹೇಳುತ್ತಾರೆ. ಗ್ಯಾರಂಟಿ ಬಗ್ಗೆ ರಾಜ್ಯ ಸರ್ಕಾರ ಪಕ್ಷ ನಿರ್ಧಾರ ತೆಗೆದುಕೊಂಡಿದೆ. ಗ್ಯಾರೆಂಟಿ ಯೋಜನೆಗಳ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದ್ದು, ಗ್ಯಾರಂಟಿ ಯೋಜನೆ ನಂಬಿಕೊಂಡೆ ಜನ ನಮಗೆ ಮತ ಹಾಕಿದ್ದಾರೆ. ಶಾಸಕರು ಅನುದಾನ ಕೇಳಲಿ ಅದರಲ್ಲಿ ತಪ್ಪಿಲ್ಲ. ಈಗ ನಾನು ಕೂಡ ಅನುದಾನವನ್ನು ಕೇಳುತ್ತೇನೆ ಅದು ತಪ್ಪಾ? ಅನೇಕ ಕಾರ್ಯಕ್ರಮಗಳನ್ನು ಇಂದಿನ ಸರ್ಕಾರ ಬಿಟ್ಟು ಹೋಗಿತ್ತು. ಅನುದಾನಕ್ಕೆ ಯಾವುದೇ ತೊಂದರೆ ಆಗಲ್ಲ ಈಗಾಗಲೇ ಬ್ಯಾಲೆನ್ಸ್ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ…

Read More

ಬಳ್ಳಾರಿ : ಕಳೆದ ಎರಡು ದಿನಗಳ ಹಿಂದೆ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿ ಒಬ್ಬರು ಸಾವನ್ನಪ್ಪಿದ್ದರು. ಇದೀಗ ಇಂದು ಕೂಡ ಬಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ರಕ್ತಸ್ರಾವವಾಗಿ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ಒಂದು ತಿಂಗಳಿನಲ್ಲಿ ಬಳ್ಳಾರಿಯಲ್ಲಿ ಇದು ಐದನೇ ಪ್ರಕರಣವಾಗಿದೆ. ಹೌದು ವೈದ್ಯರ ನಿರ್ಲಕ್ಷದಿಂದ ಬಾಣಂತಿ ಮಹಾಲಕ್ಷ್ಮಿ (20) ಸಾವನನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಭಾನುವಾರ ಬಿಮ್ಸ್ ಆಸ್ಪತ್ರೆಗೆ ಮಹಾಲಕ್ಷ್ಮಿ ಹೆರಿಗೆಗೆ ದಾಖಲಾಗಿದ್ದಳು. ಹೆರಿಗೆ ಬಳಿಕ ರಕ್ತಸ್ರಾವಾಗಿ ಬಾಣಂತಿಯ ಮಹಾಲಕ್ಷ್ಮಿ ಸಾವನ್ನಪ್ಪಿದ್ದಾಳೆ. ಭಾನುವಾರ ಬಿಮ್ಸ್ ಆಸ್ಪತ್ರೆಯಲ್ಲಿ ಮಹಾಲಕ್ಷ್ಮಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಹಾಲಕ್ಷ್ಮಿ ಮೂಲತಃ ಕೂಡ್ಲಿಗಿ ತಾಲೂಕಿನ ಸಿ ಎಸ್ ಪುರ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಮಹಾಲಕ್ಷ್ಮಿ ಆಸ್ಪತ್ರೆಗೆ ಬರುವ ವೇಳೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಕೆಮ್ಮು ಇತರೆ ಕಾಯಿಲೆಯಿಂದ ಇಂದು ಮಹಾಲಕ್ಷ್ಮಿ ಮೃತಪಟ್ಟಿದ್ದಾಳೆ ಎಂದು ಬಾಣಂತಿ ಸಾವಿನ ಬಗ್ಗೆ ಭೀಮ್ಸ್ ನಿರ್ದೇಶಕ ಡಾಕ್ಟರ್ ಗಂಗಾಧರ ಗೌಡ ಸ್ಪಷ್ಟನೆ ನೀಡಿದರು. ಆಸ್ಪತ್ರೆಯ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.…

Read More