Subscribe to Updates
Get the latest creative news from FooBar about art, design and business.
Author: kannadanewsnow05
ಒಬ್ಬರ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳಿದ್ದರೆ, ಅವರು ಕೆಲವು ಸಂದರ್ಭಗಳಲ್ಲಿ ಕಟ್ಟುನಿಟ್ಟಾಗಿ ಇತರರಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ಅವರು ಸಾಲವನ್ನು ಮರುಪಾವತಿಸಲು ಪ್ರಯತ್ನಗಳನ್ನು ಮಾಡಿದರೆ, ಆದರೆ ಆ ಪ್ರಯತ್ನಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗದಿದ್ದರೆ ಅಥವಾ ಸಾಲವನ್ನು ಪಾವತಿಸಲು ಯಾವುದೇ ಆರ್ಥಿಕ ಪ್ರಗತಿಯಿಲ್ಲದಿದ್ದರೆ, ಅವರು ಹಲವಾರು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳಿಂದ ಮುಕ್ತಿ ಹೊಂದಲು ಬಯಸುವವರು ಮೈತ್ರೇಯ ಮುಕುರ್ತವನ್ನು ಬಳಸಬೇಕು. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ, ನವೆಂಬರ್ ಮೂರನೇ ತಾರೀಖಿನಂದು ಬರಬಹುದಾದ ಮೈತ್ರೇಯ ಮುಗುರ್ತದಂದು ಪೂಜಿಸುವುದರಿಂದ ಸಾಲದ ಸಮಸ್ಯೆಗಳು ಹೇಗೆ ಪರಿಹರಿಸಲ್ಪಡುತ್ತವೆ ಎಂಬುದನ್ನು ನಾವು ನೋಡಲಿದ್ದೇವೆ. ಋಣ ಪರಿಹಾರ ಮೈತ್ರೇಯ ಮುಕುರ್ತಮ್ ಮೈತ್ರೇಯ ಮುಹೂರ್ತದ ಪ್ರತಿ ತಿಂಗಳು ಬರುತ್ತದೆ. ಸಾಲವನ್ನು ತೀರಿಸಲು ಸಹಾಯ ಮಾಡುವ ಸಲಹೆ…
ಉಡುಪಿ : ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಪ್ರವಾಸಿಗರ ಬಸ್ ಒಂದು ತೆರಳುತ್ತಿತ್ತು. ಈ ವೇಳೆ ನಸುಕಿನ ಜಾವ ರಸ್ತೆ ಬದಿಗೆ ನಿಂತಿದ್ದ ಲಾರಿಗೆ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ 17 ಪ್ರವಾಸಿಗರಿಗೆ ಗಾಯಗಳಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ಲಾರಿಗೆ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದು 17 ಪ್ರವಾಸಿಗರು ಗಂಭೀರವಾಗಿ ಗಾಯಗೊಂಡಿದ್ದಾರೆ.ಉದ್ಯಾವರ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಒಂದು ಅಪಘಾತ ನಡೆದಿದೆ. ಪ್ರವಾಸಿಗರ ಬಸ್ ಕೊಲ್ಲೂರು ದೇವಾಲಯಕ್ಕೆ ತೆರಳುತ್ತಿತ್ತು. ನಸುಕಿನ ವೇಳೆ ರಸ್ತೆ ಬದಿ ನಿಂತಿದ್ದ ಲಾರಿಗೆ ಪ್ರವಾಸಿಗರ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪ್ರವಾಸಿಗರ ಬಸ್ ನುಜ್ಗುಜ್ಜಾಗಿದೆ ತಕ್ಷಣ ಗಾಯಾಳುಗಳನ್ನ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಲಿ ಪ್ರತಿಪದ, ಬಲಿ ಪಾಡ್ಯಮಿ ಅಥವಾ ಪಾಡ್ವಾವನ್ನು ದೀಪಾವಳಿ ಹಬ್ಬದ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ಇದು ಹಿಂದೂ ಮಾಸವಾದ ಕಾರ್ತಿಕ ಮಾಸದಲ್ಲಿ ಪ್ರಕಾಶಮಾನವಾದ ಚಂದ್ರನ ಶುಕ್ಲ ಪಕ್ಷದ ಹದಿನೈದು ದಿನಗಳ ಮೊದಲ ದಿನವಾಗಿದೆ. ಈ ದಿನವು ವಾಮನ ಅವತಾರದಲ್ಲಿ ರಾಕ್ಷಸ-ರಾಜ ಬಲಿಯ ವಿರುದ್ಧ ಭಗವಾನ್ ವಿಷ್ಣುವಿನ ವಿಜಯವನ್ನು ಸ್ಮರಿಸುವ ದಿನವಾಗಿದೆ. ಹಾಗೆಯೇ ಜಗತ್ತಿಗೆ ರಾಕ್ಷಸ ರಾಜ ಬಲಿಯು ಹಿಂದಿರುಗುವ ಕ್ಷಣವನ್ನು ನೆನಪಿಸುತ್ತದೆ. ಈ ದಿನದಂದು ಶ್ರೀಕೃಷ್ಣನು ಗೋಕುಲದ ನಿವಾಸಿಗಳನ್ನು ಇಂದ್ರನ ಕೋಪದಿಂದ ಮುಕ್ತಗೊಳಿಸಿದನು ಎನ್ನುವ ಕಥೆಯಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ…
ಮೈಸೂರು : ಸೈಟ್ ಅಕ್ರಮವಾಗಿ ಹಂಚಲಾಗಿದೆ ಎಂದು ಈಗಾಗಲೇ ಮುಡಾದಲ್ಲಿ ಬಹುದೊಡ್ಡ ಹಗರಣ ನಡೆದಿದೆ. ಇದರ ಬೆನ್ನಲ್ಲೇ ಇದೀಗ ಮುಡಾದಲ್ಲಿ ಗ್ರಾಹಕರ ಕೋಟ್ಯಾಂತರ ಹಣವನ್ನು ಅಲ್ಲಿನ ಸಿಬ್ಬಂದಿಗಳೇ ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೌದು ಗ್ರಾಹಕರು ಕಟ್ಟುವ ಹಣವನ್ನು ಜೇಬಿಗೆಳಿಸಿದ ಮುಡಾ ನೌಕರರು, ಜನರು ಕಟ್ಟಿದ್ದ ದುಡ್ಡನ್ನೇ ಮುಡಾ ನೌಕರರು ನುಂಗಿದ ಆರೋಪ ಕೇಳಿ ಬಂದಿದೆ. ಖಾತೆ ವರ್ಗಾವಣೆ, ಕಂದಾಯ ವಿವಿಧ ಸೇವೆಗಳಿಗೆ ಕಟ್ಟುವ ಹಣ ಬ್ಯಾಂಕ್ ಚಲನ್ ಸೀಲ್ ಬಳಸಿಕೊಂಡು ಕೋಟ್ಯಾಂತರ ಹಣ ನುಂಗಿದ್ದಾರೆ ಎನ್ನಲಾಗಿದೆ. ಮುಡಾ ನೌಕರರ ಜೊತೆ ಬ್ಯಾಂಕ್ ಸಿಬ್ಬಂದಿ ಕೂಡ ಶಾಮೀಲು ಆಗಿರುವ ಆರೋಪ ಕೇಳಿ ಬಂದಿದೆ. 93 ಪ್ರಕರಣಗಳಲ್ಲಿ ಕೋಟ್ಯಂತರ ರೂಪಾಯಿ ಜಿಬಿ ಕೇಳಿಸಿರುವ ಆರೋಪ ಕೇಳಿ ಬಂದಿದೆ.ಹಣ ಪಾವತಿಸಿ ಎಂದು ಮುಡಾ ಹಣಕಾಸು ವಿಭಾಗದಿಂದ ಪತ್ರ ಬಂದಿದೆ. ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಿಗೆ ಸಿಬ್ಬಂದಿಗಳು ಪತ್ರ ಬರೆದಿದ್ದಾರೆ. 93 ಚಲನ್ ಗಳಲ್ಲಿ 92 ಚಲನ ಬ್ಯಾಂಕ್ ಖಾತೆಗೆ ಬಂದಿಲ್ಲ…
ಬೆಂಗಳೂರು : ರಾಜ್ಯದಲ್ಲಿ ವಕ್ಫ್ ವಿವಾದಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ರೈತರಿಗೆ ಕೊಟ್ಟಿದ್ದ ನೋಟಿಸ್ ಗಳನ್ನು ಕೂಡಲೇ ಹಿಂಪಡೆಯಿರಿ ಎಂದು ಖಡಕ್ ಸೂಚನೆ ನೀಡಿದ್ದಾರೆ. ಆದರೆ ಇಷ್ಟಕ್ಕೆ ತಣ್ಣಗಾಗದ ಬಿಜೆಪಿಯು ಈ ಕುರಿತಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಲು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮುಂದಾಗಿದ್ದಾರೆ ಎನ್ನಲಾಗಿದೆ. ಹೌದು ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಅವರು ಹೈ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸೋಕೆ ಸಿದ್ಧತೆ ಮಾಡಿಕೊಂಡಿದ್ದರೆ ಎನ್ನಲಾಗಿದೆ. ಸೋಮವಾರ ತೇಜಸ್ವಿ ಸೂರ್ಯ ರಿಟ್ ಅರ್ಜಿ ಸಲ್ಲಿಸಲಿದ್ದಾರೆ. ವಕ್ಫ್ ಕಾಯ್ದೆ ತಿದ್ದುಪಡಿ ಕುರಿತ ಜೆಪಿಸಿ ಸದಸ್ಯರಾಗಿರುವ ತೇಜಸ್ವಿ ಸೂರ್ಯ ಅವರು ರೈತರ ಪಹಣಿಯಲ್ಲಿ ವಕ್ಫ್ ಎಂದು ನೋಂದಣಿ ಮಾಡಿರುವುದು ಹಾಗೂ ನಾವು ರೈತರಿಗೆ ನೋಟಿಸ್ ನೀಡಿರುವ ವಿಚಾರವಾಗಿ ರಿಟ್ ಅರ್ಜಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ನವೆಂಬರ್ 6 ರಂದು ರಾಜ್ಯಕ್ಕೆ JPC ಭೇಟಿ! ರಾಜ್ಯದಲ್ಲಿ ಭುಗಿಲೆದ್ದ ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ನವೆಂಬರ್…
ಬೆಂಗಳೂರು : ಬೆಂಗಳೂರಿನಲ್ಲಿ ಭೀಕರವಾದಂತಹ ಕೊಲೆ ನಡೆದಿದ್ದು ಸ್ನೇಹಿತರೆ ಯುವಕನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿ ಈ ಒಂದು ಕೊಲೆ ನಡೆದಿದೆ. ಹೌದು ಅರಿಶಿನಕುಂಟೆಯಲ್ಲಿ ನೇಪಾಳದ ಹೇಮರಾಜು (28) ಎನ್ನುವ ಯುವಕನ ಬರ್ಬರ ಕೊಲೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಈ ಒಂದು ಕೊಲೆ ನಡೆದಿದೆ.ಬಿಹಾರ್ ಮೂಲದ ಲಕ್ಕಿ ಹಾಗೂ ಮುಕೇಶ್ ಎಂಬವರಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಬೈಕ್ ವಿಚಾರಕ್ಕೆ ಯುವಕರು ಗಲಾಟೆ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದ್ದು, ಈ ವೇಳೆ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಕತ್ತು ಕೊಯ್ದು ಹೇಮರಾಜುವನ್ನು ಹತ್ಯೆ ಮಾಡಲಾಗಿದೆ.ಕೊಲೆ ಮಾಡಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆ ಕುರಿತಂತೆ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೆಂಗಳೂರಿನ ಜನತೆಗೆ ಬಿಬಿಎಂಪಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಬೆಂಗಳೂರಿನ ಅತಿ ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ಬಿಬಿಎಂಪಿ ಇದೀಗ ಜಾಗ ಅಂತಿಮಗೊಳಿಸಿದೆ. ಬೆಂಗಳೂರಿನ ಹೊರವಲಯದ ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ನಿರ್ಧರಿಸಿದ್ದು, ಈ ಜಾಗದಲ್ಲಿ ಗೋಪುರ ನಿರ್ಮಾಣಕ್ಕೆ ಆಕ್ಷೇಪಣೆ ಇದ್ದರೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ನವೆಂಬರ್ 8ರ ಒಳಗಡೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಪ್ರವಾಸೋದ್ಯಮ ಉತ್ತೇಜನದ ಜೊತೆಗೆ ಬೆಂಗಳೂರು ನಗರವನ್ನು ವೀಕ್ಷಣೆ ಮಾಡುವ ಉದ್ದೇಶದಿಂದ ಆಕಾಶ ಗೋಪುರ ನಿರ್ಮಾಣ ಮಾಡಲು ಬಿಬಿಎಂಪಿ ತೀರ್ಮಾನಿಸಿತ್ತು. ಇದಕ್ಕಾಗಿ ಎನ್‌ಜಿಇಎಫ್, ಯಶವಂತಪುರ ಬಳಿಯ ಸಾಬೂನು ಕಾರ್ಖಾನೆ, ವೈಟ್‌ಫೀಲ್ಡ್, ಜಿಕೆವಿಕೆ, ರೇಸ್‌ಕೋರ್ಸ್, ಬೆಂಗಳೂರು ಅರಮನೆ ಆವರಣದ ಜಾಗಗಳನ್ನು ಗುರುತಿಸಲಾಗಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಬ್ರ‍್ಯಾಂಡ್ ಬೆಂಗಳೂರಿನಡಿ ಅತಿ ಎತ್ತರದ ಆಕಾಶ ಗೋಪುರ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಹೆಮ್ಮಿಗೆಪುರದಲ್ಲಿ ಜಾಗ ಕೂಡ ಫೈನಲ್ ಆಗಿದೆ. ಹೆಮ್ಮಿಗೆಪುರದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡೋದಕ್ಕೆ ಆಕ್ಷೇಪಣೆ ಇದ್ದರೆ ನವೆಂಬರ್ 8ರ ಒಳಗಡೆ ಆಕ್ಷೇಪಣೆ ಸಲ್ಲಿಸಲು ಬಿಬಿಎಂಪಿ…
ರಾಯಚೂರು : ರಾಜ್ಯದಲ್ಲಿ ವಕ್ಫ್ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ನಿನ್ನೆ ವಕ್ಫ್ ಮಂಡಳಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ನೀಡಿದ ನೋಟಿಸ್ ಗಳನ್ನು ಕೂಡಲೇ ಹಿಂಪಡೆಯಿರಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೆ, ರಾಯಚೂರಲ್ಲಿ ಸ್ಲಂ ಬೋರ್ಡ್ ನಿವೇಶನ ಹಕ್ಕು ವಿತರಣಾ ಕಾರ್ಯಕ್ರಮ ರದ್ದಾಗಿದೆ. ಹೌದು ರಾಯಚೂರಿನ ಮಸ್ಕಿಯಲ್ಲಿ ಈ ಒಂದು ಕಾರ್ಯಕ್ರಮ ನಡೆಯಬೇಕಿತ್ತು. 263 ಜನರ ನಿವೇಶನ ಹಕ್ಕು ಪತ್ರ ವಿತರಣೆಗೆ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ವಸತಿ ಇಲಾಖೆ ಹಾಗೂ ಸ್ಲಂ ಬೋರ್ಡ್ ಈ ಒಂದು ಸಮಾರಂಭ ಆಯೋಜನೆ ಮಾಡಿತ್ತು. ಸ್ಲಂ ಬೋರ್ಡ್ ಕೆಲವು ನಿವೇಶನಗಳು ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ಸದ್ಯ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ವಕ್ಫ್ ಆಸ್ತಿ ಅಂತ ನಿವೇಶನ ಹಂಚಿಕೆ ಕಾರ್ಯಕ್ರಮ ರದ್ದಾಗಿದೆ. ಕಾಂಗ್ರೆಸ್ ಶಾಸಕ ಬಸನಗೌಡ ತುರುವಿಹಾಳ ಅಧ್ಯಕ್ಷತೆಯಲ್ಲಿ ಒಂದು ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಇದೀಗ ಕಾರ್ಯಕ್ರಮ ರದ್ದಾಗಿದೆ. ಹಕ್ಕು ಪತ್ರ ವಿತರಣೆಗಾಗಿ ಆಹ್ವಾನ ಪತ್ರಿಕೆ ಇಲಾಖೆಯು ಮುದ್ರಿಸಿತ್ತು. ವಕ್ಫ್ ಆಸ್ತಿ ಎಂಬ…
ಬೆಂಗಳೂರು : ಬೆನ್ನು ನೋವಿನ ಸಮಸ್ಯೆ ಹಿನ್ನೆಲೆಯಲ್ಲಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಕೊಲೆ ಆರೋಪಿಯಾಗಿರುವ ನಟ ದರ್ಶನವರು ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಕೆಂಗೇರಿಯ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ದರ್ಶನ್ ಗೆ ಚಿಕಿತ್ಸೆ ನೀಡಲಾಗುತ್ತದೆ. ಕೊಲೆ ಆರೋಪಿ ದರ್ಶನಿಗೆ ಪದೇಪದೇ ಮೆಡಿಕಲ್ ಟೆಸ್ಟ್ ಮಾಡಲಾಗುತ್ತಿದೆ. ಇಂದು ದರ್ಶನ್ ವೈದ್ಯಕೀಯ ಪರೀಕ್ಷೆಯ ವರದಿಗಳು ವೈದ್ಯರ ಕೈ ಸೇರಲಿದೆ ಪರೀಕ್ಷೆಯ ವರದಿ ರಿಪೋರ್ಟ್ ನೋಡಿ ಚಿಕಿತ್ಸೆ ಬಗ್ಗೆ ವೈದ್ಯರು ನಿರ್ಧಾರ ಮಾಡಲಿದ್ದಾರೆ. ಬುಧವಾರ ದರ್ಶನ್ ರಿಪೋರ್ಟ್ ಕೋರ್ಟಿಗೆ ಸಲ್ಲಿಕೆ ಆಗಲಿದೆ. ದರ್ಶನ್ ಅವರ ವೈದ್ಯಕೀಯ ಅವರಾದಿ ವೈದ್ಯರ ಕೈ ಸೇರಿದ ಬಳಿಕ ದರ್ಶನ ಮತ್ತು ಕುಟುಂಬದ ಜೊತೆಗೆ ವೈದ್ಯರು ಚರ್ಚಿಸಲಿದ್ದಾರೆ. ನಂತರ ಬೆನ್ನುನೋವಿನ ಆಪರೇಷನ್ ಮಾಡಬೇಕಾ? ಅಥವಾ ಫಿಸಿಯೊಥೆರಪಿ ಸಾಕಾ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ವೈದ್ಯಕೀಯ ವರದಿ ಚಿಕಿತ್ಸಾ ವರದಿ ಸಿದ್ಧಪಡಿಸಲಿದ್ದಾರೆ. ಹಾಗಾಗಿ ದರ್ಶನ್ ವೈದ್ಯಕೀಯ ವರದಿಯನ್ನು…
ಹಾಸನ : ಹಾಸನದ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನ ಇಂದು ಅಂತ್ಯವಾಗಲಿದೆ. ಈ ವೇಳೆ ಕಳೆದ 11 ದಿನಗಳಲ್ಲಿ ದಾಖಲೆ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಹಾಸನಾಂಬೆ ದೇಗುಲಕ್ಕೆ 9 ಕೋಟಿಗೂ ಅಧಿಕ ಆದಾಯ ಬಂದಿದೆ. ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲು, ಕ್ಷಣಗಣನೆ ಶುರುವಾಗಿದೆ.ಈಗಾಗಲೇ ಭಕ್ತರಿಂದ ದೇವಾಲಯ ಆವರಣ ತುಂಬಿ ತುಳುಕುತ್ತಿದೆ.ಬೆಳಿಗ್ಗೆ 11.50ರ ನಂತರ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ವಿಶ್ವರೂಪದ ದರ್ಶನ ಬಳಿಕ ಗರ್ಭಗುಡಿಯ ಬಾಗಿಲು ಬಂದ್ ಮಾಡಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ, ಶಾಸಕ ಸ್ವರೂಪ್ ಡಿಸಿ ಸತ್ಯಭಾಮ, ಎಸ್ ಪಿ ಮೊಹಮ್ಮದ್ ಸುಜಿತ ಹಾಗೂ ಎಸಿ ಮಾರುತಿ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ. ಅಕ್ಟೋಬರ್ 24ರಂದು ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು, ತೆರೆದಿತ್ತು. ಬಳಿಕ ಸತತ 11 ದಿನಗಳ ಕಾಲ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಇದೀಗ ಇಂದು ಸಾರ್ವಜನಿಕ ದರ್ಶನಕ್ಕೆ ತೆರೆ ಬೀಳಲಿದ್ದು ಮಧ್ಯಾಹ್ನದ 11.50ಕ್ಕೆ…














