Subscribe to Updates
Get the latest creative news from FooBar about art, design and business.
Author: kannadanewsnow05
ರಾಮನಗರ : ಜಿಲ್ಲೆಯ ಕನಕಪುರ ತಾಲೂಕಿನ ಹುಲಿಬೆಲೆ ಬಳಿ ಕಾರು ಹಾಗೂ ಲಾರಿಯ ನಡುವೆ ಭೀಕರ ಅಪಘಾತ ಒಂದು ಸಂಭವಿಸಿದ್ದು, ಕಾರು ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ದುರ್ಮರಣ ಹೊಂದಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹುಲಿಬೆಲೆ ಬಳಿ ನಡೆದಿದೆ. ಹೌದು ರಾಮನಗರ ಜಿಲ್ಲೆಯ ಕನಕಪುರದಲ್ಲಿ ಈ ಒಂದು ಭೀಕರ ರಸ್ತೆ ಅಪಘಾತ ನಡೆದಿದೆ.ಲಾರಿ ಒಂದು ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಮೂವರ ಮೃತದೇಹಗಳು ಛಿದ್ರ ಛಿದ್ರವಾಗಿವೆ. ಮೃತರ ಕುರಿತು ಇನ್ನು ಮಾಹಿತಿ ತಿಳಿದು ಬಂದಿಲ್ಲ. ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಬೀದರ್ : ರಾಜ್ಯದಲ್ಲಿ ಮತ್ತೆ ಮತಾಂತರ ಮುನ್ನೆಲೆಗೆ ಬಂದಿದ್ದು, ಇದೀಗ ಬೀದರ್ ನಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದ್ದು, ಮತಾಂತರಕ್ಕೆ ಒಪ್ಪದ ಮೂಗ ತಂದೆಯನ್ನು ಪತ್ನಿ ಹಾಗೂ ಮಕ್ಕಳೇ ಸೇರಿಕೊಂಡು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ತಾಲೂಕಿನ ರಾಥೋಳಿ ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಪಾಪಿ ಪತ್ನಿ ಹಾಗೂ ದುಷ್ಟ ಉತ್ತರ ಹೇಯ ಕೃತ್ಯಕ್ಕೆ ಬಸವರಾಜ್ ಶೇರಿಕಾರ್ (52) ಬಲಿಯಾಗಿದ್ದಾರೆ.ಮತಾಂತರಕ್ಕೆ ವಿರೋಧ ಮಾಡಿ, ಮನೆಯಲ್ಲಿ ಪೂಜೆ ಪುನಸ್ಕಾರ ಮಾಡಬೇಕೆಂದು ಮೃತ ವ್ಯಕ್ತಿ ಬಸವರಾಜ ಶೇರಿಕರ್ ಹೇಳಿದ್ದರಂತೆ, ಅಷ್ಟೇ ಅಲ್ಲದೇ ದಸರಾ ಹಬ್ಬದಲ್ಲಿ ಪೂಜೆ ಯಾಕೆ ಮಾಡಿಲ್ಲವೆಂದು ಪ್ರಶ್ನಿಸಿದ್ದಕ್ಕೆ ಬಸವರಾಜ್‌ನನ್ನ ಪತ್ನಿ, ಮಕ್ಕಳು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದರು ಎನ್ನಲಾಗಿದೆ. ಎಸ್ ಟಿ ಸಮುದಾಯದಲ್ಲಿದ್ದರೂ ಕೂಡ ಬಸವರಾಜ ಪತ್ನಿ ಹಾಗೂ ಮಕ್ಕಳು ಕ್ರಿಶ್ಚಿಯನ್ ಧರ್ಮವನ್ನು ಪಾಲನೆ ಮಾಡುತ್ತಿದ್ದರು. ಇದನ್ನು ಬಸವರಾಜ್ ಅವರಿಗೂ ಪಾಲನೆ ಮಾಡುವಂತೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದನ್ನು ವಿರೋಧಿಸಿದ್ದ ಮಾತು ಬಾರದ ಮೂಗ ಬಸವರಾಜ ಅವರನ್ನು ಪತ್ನಿ…
ಮಂಡ್ಯ : ಮಂಡ್ಯದಲ್ಲಿ ಘೋರ ದುರಂತ ಒಂದು ನಡೆದಿದ್ದು ಈಜು ಬಾರದೇ ಇದ್ದರೂ ಮಂಡ್ಯದ ವಿಸಿನಾಲಿಗೆ ಇಳಿದು ಯುವಕನೊಬ್ಬ ನಿರೂಪಳಾಗಿರುವ ಘಟನೆ ಮಂಡ್ಯ ಮಂಡ್ಯ ತಾಲೂಕಿನ ಯಲಿಯೂರು ಬಳಿ ವಿಸಿ ನಾಲೆಯ ಬಳಿ ಈ ಒಂದು ಘಟನೆ ಸಂಭವಿಸಿದೆ. ಈಜಲು ಬಾರದೆ ಇದ್ದರೂ ಈಜಲು ಹೋದ ಯಶ್ವಂತ್ (22) ಎನ್ನುವ ಯುವಕ ನೀರು ಪಾಲಾಗಿದ್ದಾನೆ. ಅನಿಲ್ ಕುಮಾರ್ ಉಮಾ ದಂಪತಿ ಪುತ್ರ ಯಶ್ವಂತ್ ಎಂದ್ ತಿಳಿದುಬಂದಿದೆ. ಯಶ್ವಂತ್ ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ನಿವಾಸಿ ಎಂದು ಹೇಳಲಾಗುತ್ತಿದೆ. ಕಾಲೇಜಿನಿಂದ ಮಧ್ಯಾಹ್ನ ಸ್ನೇಹಿತರೊಂದಿಗೆ ಯಶವಂತ್ ಈಜಲು ತೆರಳಿದ್ದ. ಕಾವೇರಿ ಇಂಜಿನಿಯರ್ ಕಾಲೇಜಿನಲ್ಲಿ ಯಶವಂತ್ ಬಿಇ ಓದುತ್ತಿದ್ದ. ಈಜು ಬಾರದಿದ್ದರೂ ನಾಲೇಗೆ ಇಳಿದಿದ್ದ. ಯಶವಂತ ಹಾಗೂ ಇಬ್ಬರು ಸ್ನೇಹಿತರು ನಾಲೆಯ ನೀರಿನ ರಭಸಕ್ಕೆ ಮೂವರು ಯುವಕರು ಕೊಚ್ಚಿ ಹೋಗುತ್ತಿದ್ದರು ಈ ವೇಳೆ ಸ್ಥಳೀಯರು ಇಬ್ಬರು ಯುವಕರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಯಶವಂತ ನೀರು ಪಾಲಾಗಿದ್ದಾನೆ ಅಗ್ನಿಶಾಮಕ ದಳದ ಸಿಬ್ಬಂದಿ ಇದ್ದ ಇದೀಗ…
ದಕ್ಷಿಣಕನ್ನಡ : ದಕ್ಷಿಣ ಕನ್ನಡದಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಪತ್ನಿ ಹಾಗೂ ನಾಲ್ಕು ವರ್ಷದ ಮಗನನ್ನು ಕೊಂದು ವ್ಯಕ್ತಿ ಒಬ್ಬ ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ನಡೆದಿದೆ. ಹೌದು ಪತ್ನಿ ಮಗನನ್ನು ಕೊಂದು ನಂತರ ರೈಲಿಗೆ ತಲೆ ಕೊಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಎಂಬಲ್ಲಿ ಒಂದು ಘಟನೆ ನಡೆದಿದೆ. ಫ್ಲಾಟ್ ನಲ್ಲಿ ಪತ್ನಿ ಪ್ರಿಯಾಂಕ (28) ಪುತ್ರ ಹೃದಯ್ (4) ಭೀಕರವಾಗಿ ಕೊಲೆ ಮಾಡಿದ್ದಾನೆ.ನಂತರ ರೈಲಿಗೆ ತಲೆ ಕೊಟ್ಟು ಕಾರ್ತಿಕ್ ಭಟ್ (32) ಆತ್ಮಹತ್ಯೆಗೆ ಶರಣಾಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹೊರ ವಲಯದ ಬೆಳ್ಳಾಯುರುವಿನಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿನ್ನೆಯೇ ಪತ್ನಿ ಮಗನನ್ನು ಕೊಂದು ನಂತರ ಕಾರ್ತಿಕ್ ಭಟ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಪ್ರಕರಣದ ತನಿಖೆ ವೇಳೆ ಕಾರ್ತಿಕ್…
ಉಡುಪಿ : ಮೊಬೈಲ್ಗಳಿಗೆ ಬ್ಯಾಂಕ್ ಹೆಸರಿನಲ್ಲಿ ಸೈಬರ್ ವಂಚಕರು ಮೆಸೇಜ್ ಕಳಿಸಿದಾಗ ಅಪ್ಪಿ ತಪ್ಪಿಯು ಕೆವೈಸಿ ನಂಬರ್ ಹೇಳಬೇಡಿ ಏಕೆಂದರೆ ಇದೀಗ ಉಡುಪಿಯಲ್ಲಿ ಕೆವೈಸಿ ನಂಬರ್ ಹೇಳಿದ ವ್ಯಕ್ತಿಯ ಅಕೌಂಟ್ ನಿಂದ ಸೈಬರ್ ವಂಚಕರು 50 ಸಾವಿರ ಹಣ ಎಗರಿಸಿರುವ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ನಡೆದಿದೆ. ಹೆಬ್ರಿಯ ಶೇಖರ ಎಂಬುವವರ ಮೊಬೈಲಿಗೆ ಕೆವೈಸಿ ಅಪ್‌ಲೋಡ್ ಎಂಬ ಎಸ್‌ಎಂಎಸ್ ಬಂದಿದ್ದು ಅದರಂತೆ ಎಸ್‌ಎಂಎಸ್‌ನಲ್ಲಿದ್ದ ಸಂಖ್ಯೆಗೆ ಕರೆ ಮಾಡಿದಾಗ ಕೆನರಾ ಬ್ಯಾಂಕಿನವರು ಎಂದು ಹೇಳಿ ನಿಮ್ಮ ಕೆವೈಸಿ ಅಪ್‌ಡೇಟ್ ಆಗದೆ ಇದ್ದು ಅಕೌಂಟ್ ಬ್ಲಾಕ್ ಮಾಡುವುದಾಗಿ ಹೇಳಿದ್ದಾರೆ. ಸಿನಿಮಾ ಈ ಸಂದರ್ಭದಲ್ಲಿ ಶೇಖರ್ ಅವರು ಬ್ಯಾಂಕ್ ಖಾತೆ ಸಂಖ್ಯೆ, ಹೆಸರು ವಿಳಾಸ ಹಾಗೂ ಎಟಿಎಂ ಕಾರ್ಡ್ ಕೊನೆಯ ನಾಲ್ಕು ಸಂಖ್ಯೆಯನ್ನು ಕೊಟ್ಟಿದ್ದಾರೆ. ಬಳಿಕ ವಂಚಕರು ಓಟಿಪಿ ಪಡೆದುಕೊಂಡು ಹಣ ಎಗರಿಸಿದ್ದಾರೆ. ನಂತರ 15 ನಿಮಿಷಗಳ ನಂತರ ಮತ್ತೆ ಕರೆ ಮಾಡಿ ಕನ್ನಡ ಭಾಷೆಯಲ್ಲಿ ಮಹಿಳೆಯೊಬ್ಬರು ಮಾತನಾಡಿ ಕೆನರಾ ಬ್ಯಾಂಕಿನಿಂದ ಮಾತನಾಡುತ್ತಿರುವುದಾಗಿ ತಿಳಿಸಿ…
ಬೆಂಗಳೂರು : ಹಾಸ್ಟೆಲ್ ನಲ್ಲಿ ಇದ್ದಂತಹ ಬಾಲಕಿಯ ಮೇಲೆ ಕನ್ನಡ ಶಿಕ್ಷಕಿಯೊಬ್ಬರು ಗಲಾಟೆ ಮಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಕೋಪದಿಂದ ಕೋಲಿನಿಂದ ಹಲ್ಲೆ ಮಾಡಿದ ಪರಿಣಾಮ ಇದೀಗ ಬಾಲಕಿಯ ಬಲ ಭುಜದ ಮೂಳೆ ಮುರಿತದಿಂದ ನರಳಾಡುತ್ತಿರುವ ಘಟನೆ ಬೆಂಗಳೂರಿನ ರಾಜಾಜಿನಗರದ ಅಂಬೇಡ್ಕರ್ ಮೆಮೋರಿಯಲ್ ಸ್ಕೂಲ್ ನಲ್ಲಿ ಘಟನೆ ನಡೆದಿದೆ. ಹೌದು ಬೆಂಗಳೂರಿನ ರಾಜಾಜಿನಗರದ ಅಂಬೇಡ್ಕರ್ ಮೆಮೋರಿಯಲ್ ಸ್ಕೂಲ್ ನಲ್ಲಿ ಕಳೆದ ಅಕ್ಟೊಬರ್ 28 ರಂದು ಈ ಒಂದು ಘಟನೆ ನಡೆದಿದೆ. ಅನ್ನಪೂರ್ಣ ಎನ್ನುವ ಮಗುವಿನ ಕೈ ಮುರಿದ ಕನ್ನಡ ಟೀಚರ್. ಸ್ಕೂಲ್ ನಲ್ಲಿ ಗಲಾಟೆ ಮಾಡುತ್ತಿದ್ದಳು ಎಂದು ಶಿಕ್ಷಕಿ ಹಲ್ಲೆ ಮಾಡಿದ್ದಾರೆ. ಹಾಸ್ಟೆಲ್ ನಲ್ಲಿರುವ ಮಗುವಿನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಕೋಲಿನಿಂದ ಬಾಲಕಿಯ ಮೇಲೆ ಟೀಚರ್ ಹಲ್ಲೆ ಮಾಡಿದ್ದಾರೆ. ಹಲ್ಲೆಯ ತೀವ್ರತೆಗೆ ಬಾಲಕಿಯ ಭುಜದ ಮೂಳೆ ಮುರಿದುಹೋಗಿದೆ. ಎಕ್ಸರೆ ಮಾಡಿಸಿದಾಗ ಮೂಳೆ ಮುರಿತವಾಗಿದ್ದು, ಕಂಡುಬಂದಿದೆ. ಕನ್ನಡ ಟೀಚರ್ ಮಮತಾ ವಿರುದ್ಧ ಇದೀಗ ಪೋಷಕರು ಆರೋಪ ಮಾಡಿದ್ದಾರೆ. ಅಕ್ಟೋಬರ್ 28 ರಂದು…
ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ವಿದ್ಯುತ್ ತಂತಿ ತಗುಲಿ 30 ವರ್ಷದ ವಿಕ್ರಾಂತ್ ಎನ್ನುವ ಕಾಡಾನೆ ಒಂದು ದಾರುಣವಾಗಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪುರ ಗ್ರಾಮದ ಬಳಿ ನಡೆದಿದೆ. ಹೌದು ವಿದ್ಯುತ್ ತಂತಿ ತಗುಲಿ ವಿಕ್ರಾಂತ ಹೆಸರಿನ 30 ವರ್ಷದ ಕಾಡಾನೆ ಸಾವನನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪುರ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಮೂರು ದಿನಗಳಿಂದ ಆಲ್ದೂರು ಪುರ ಗ್ರಾಮದಲ್ಲಿ ಕಾಡಾನೆ ಹಿಂಡು ಬಿಡು ಬಿಟ್ಟಿದ್ದವು. ಸಕಲೇಶಪುರ ಮಾರ್ಗವಾಗಿ ಸುಮಾರು 24 ಕಾಡಾನೆಗಳು ಚಿಕ್ಕಮಗಳೂರಿಗೆ ಬಂದಿದ್ದವು. ಬೀಟಮ್ಮ, ಭುವನೇಶ್ವರಿ ತಂಡದಿಂದ 24 ಕಾಡಾನೆಗಳು ಬೇರ್ಪಟ್ಟಿದ್ದವು. ಈ ಒಂದು 24 ಆನೆಗಳಲ್ಲಿ ವಿಕ್ರಾಂತ್ ಎಂಬ 30 ವರ್ಷದ ಆನೆ ಕೂಡ ಇತ್ತು ಇದೀಗ ವಿದ್ಯುತ್ ತಂತಿ ತುಳಿದು ಈ ಒಂದು ಧಾರಣವಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಘಟನೆ ಕುರಿತಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ : ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದ ಜನತೆ ಭಯ, ಆತಂಕದಲ್ಲಿ ದೇವರ ಪ್ರಾರ್ಥನೆ ಮಾಡುತ್ತಿದ್ದಾಗ ಬಿಜೆಪಿ ಸರ್ಕಾರ ಮತ್ತು ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಚಿವ ಶ್ರೀರಾಮುಲು ಅವರು ಹಣ ಲೂಟಿ ಮಾಡುವುದರಲ್ಲಿ ಮುಳುಗಿದ್ದರು. ಮುಗ್ಧ ಜನರ ಮೃತದೇಹಗಳ ಹೆಸರಲ್ಲೂ ಭ್ರಷ್ಟಚಾರ ನಡೆಸಿದ ಬಿಜೆಪಿ ನಾಯಕರನ್ನು ಯಾವ ದೇವರೂ ಕ್ಷಮಿಸಲ್ಲ, ನೀವೂ ಕ್ಷಮಿಸಬೇಡಿ ಎಂದು ಬಳ್ಳಾರಿಯಲ್ಲಿ ಸಿಎಂ ಸಿದ್ದರಾಮಯ್ಯ ಗುಡುಗಿದ್ದರು. ಬಳ್ಳಾರಿಯ ಸಂಡೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ಮತ್ತು ಆರೋಗ್ಯ ಮಂತ್ರಿ ಶ್ರೀರಾಮುಲು ಇಬ್ಬರೂ ಕೋವಿಡ್ ಸಂದರ್ಭದಲ್ಲಿ ಚೀನಾದಿಂದ ಪಿಪಿಇ ಕಿಟ್ ತರಿಸಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾ.ಮೈಕೆಲ್ ಡಿ ಕುನ್ಹಾ ಅವರ ತನಿಖಾ ಆಯೋಗ ಶಿಫಾರಸು ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದ ಜನತೆ ಭಯ, ಆತಂಕದಲ್ಲಿ ದೇವರ ಪ್ರಾರ್ಥನೆ ಮಾಡುತ್ತಿದ್ದಾಗ ಬಿಜೆಪಿ ಸರ್ಕಾರ…
ಕಲಬುರ್ಗಿ : ಬೆಳೆ ಬೆಳೆಯಲು ಫೈನಾನ್ಸ್ ಒಂದರಲ್ಲಿ ಲಕ್ಷಾಂತರ ಸಾಲ ಪಡೆದಿದ್ದ ರೈತ ಅವರ ಕಿರುಕುಳ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನರನಾಳ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು ನರನಾಳ ಗ್ರಾಮದ ನಾಗಪ್ಪ ಎಂದು ತಿಳಿದು ಬಂದಿದೆ. ನಾಗಪ್ಪ ಫೈನಾನ್ಸ್ ಒಂದರಲ್ಲಿ ಎರಡು ಲಕ್ಷ ರೂಪಾಯಿ ಬೆಳೆ ಸಾಲ ತೆಗೆದಿದ್ದ. ಈ ವೇಳೆ ಫೈನಾನ್ಸ್ ನವರು ಮನೆಗೆ ಬಂದು ಸಾಲ ಕಟ್ಟುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ನಾಗಪ್ಪ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಘಟನೆ ಕುರಿತಂತೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೆಂಗಳೂರಲ್ಲಿ ಜುವೆಲ್ಲರೀ ಶಾಪ್ ಒಂದರ ಮಾಲೀಕರ ಮೆನೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ವ್ಯಕ್ತಿ ಒಬ್ಬ ಮಾಲೀಕರು ಇಲ್ಲದ ಸಮಯದಲ್ಲಿ ಉಂಡ ಮನೆಗೆ ಕನ್ನ ಹಾಕಿದ್ದು ಮನೆಯಲ್ಲಿದ್ದ ಸುಮಾರು 15 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಹೌದು ವಿಜಯನಗರದ ಹೊಸಹಳ್ಳಿ ಎಕ್ಸ್‌ಟೆನ್ಸನ್ ನಿವಾಸಿ ಸುರೇಂದ್ರ ಕುಮಾರ್‌ಜೈನ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ದೂರುದಾರ ಸುರೇಂದ್ರ ಕುಮಾರ್ ಜೈನ್ ಮಾಗಡಿ ರಸ್ತೆಯ ವಿದ್ಯಾರಣ್ಯ ನಗರದಲ್ಲಿ ಸುಮಾರು 30 ವರ್ಷಗಳಿಂದ ಅರಿಹಂತ್ ಜ್ಯುವೆಲ್ಲರಿ ಅಂಗಡಿ ಹೊಂದಿದ್ದಾರೆ.ನೇಪಾಳ ಮೂಲದ ನಮ್ರಾಜ್‌ಗೆ ಮನೆ ಇಲ್ಲದ ಕಾರಣ ಮಾಲೀಕ ಸುರೇಂದ್ರ ಕುಮಾರ್‌ಜೈನ್ ಅವರ ಮನೆಯ ಪಾರ್ಕಿಂಗ್ ಸ್ಥಳದಲ್ಲಿರುವ ಸೆಕ್ಯೂರಿಟಿ ರೂಮ್‌ನಲ್ಲಿ 6 ತಿಂಗಳಿನಿಂದ ಪತ್ನಿ ಜತೆಗೆ ವಾಸವಿದ್ದ. ಮಾಲೀಕ ಸುರೇಂದ್ರ ಕುಮಾರ್‌ಜೈನ್ ದೇವರ ಜಾತ್ರೆ ಪ್ರಯುಕ್ತ ನ.1ರಂದು ಕುಟುಂಬದ ಜತೆ ಗುಜರಾತ್‌ಗೆ ತೆರಳಿದ್ದರು. ಜಾತ್ರೆ ಮುಗಿಸಿ ನ.7ರಂದು ಮುಂಜಾನೆ ಮನೆಗೆ ವಾಪಾಸಾದಾಗ…














