Author: kannadanewsnow05

ಮೈಸೂರು : ಮೈಸೂರು ಜಿಲ್ಲೆಯ ಪ್ರವಾಸಕ್ಕೆ ಎಂದು ತಮಿಳುನಾಡು ಮೂಲದ ಕಾಲೇಜು ವಿದ್ಯಾರ್ಥಿಗಳ ತಂಡ ಬಂದು ಆಗಮಿಸಿತ್ತು. ಈ ವೇಳೆ ವಿದ್ಯಾರ್ಥಿ ಒಬ್ಬ ಬಸ್ ಬಾಗಿಲ ಬಳಿ ನಿಂತಾಗ ಡೋರ್ ಲಾಕ್ ಮಾಡದೆ ಇದ್ದಿದ್ದರಿಂದ, ಆಯತಪ್ಪಿ ಕೆಳಗೆ ಬಿದ್ದು ಸಾವನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ತಮಿಳುನಾಡು ಮೂಲದ ದೀನಾ ದಯಾಳ್ (21) ಎಂಬ ವಿದ್ಯಾರ್ಥಿ ಮೃತ ದುರ್ದೈವಿ ಎನ್ನಲಾಗಿದೆ. ಬೈಲುಕೊಪ್ಪೆ ಗೋಲ್ಡನ್ ಟೆಂಪಲ್ ವೀಕ್ಷಿಸಲು ಹೋಗುವಾಗ ಈ ಒಂದು ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗೋಲ್ಡನ್ ಟೆಂಪಲ್ ನೋಡಲು ತೆರಳುವ ವೇಳೆ ಈ ಘಟನೆ ನಡೆದಿದೆ. ಬಸ್ ಡೋರ್ ಲಾಕ್ ಆಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ಪರಿಣಾಮ ಬಲವಾದ ಪೆಟ್ಟು ಬಿದ್ದು ದೀನಾ ದಯಾಳ್ ಸಾವನಪ್ಪಿದ್ದಾನೆ. ಘಟನೆ ಕುರಿತಂತೆ ಬೆಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಪೊಲೀಸರು ಹಾಗೂ ಸಿಸಿಬಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದು, ಡ್ರಗ್ಸ್ ವಿರುದ್ಧ ಸಮರ ಸಾರಿದ್ದಾರೆ. ಹಾಗಾಗಿ ಇಂದು ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ವಿವಿಧ ಕೊರಿಯರ್ ಏಜೆನ್ಸಿ ಹಾಗೂ ಅಂಚೆ ಕಚೇರಿಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಇಂದು ಬೆಂಗಳೂರು ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿದರು. ಬೆಂಗಳೂರಿನ ಕೊರಿಯರ್​ ಏಜೆನ್ಸಿ ಮತ್ತು ಅಂಚೆ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಂಪಂಗಿ ರಾಮನಗರದ ಕೊರಿಯರ್​ ಏಜೆನ್ಸಿಯಲ್ಲಿ ಸಿಸಿಬಿ ಮತ್ತು ಶ್ವಾನದಳ ಪಾರ್ಸೆಲ್​ಗಳ ಪರಿಶೀಲನೆ ನಡೆಸಿತು. ಅಲ್ಲದೆ ಅಂಚೆ ಕಚೇರಿಗಳಲ್ಲೂ ಕೂಡ ಮಾದಕ ವಸ್ತುಗಳು ಪಾರ್ಸೆಲ್ ಬರುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಅಲ್ಲೂ ಕೂಡ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಈ ವಿಚಾರವಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಮಾತನಾಡಿ, ವಿದೇಶದಿಂದ ಬರುತ್ತಿದ್ದ ಪಾರ್ಸಲ್‌ಗಳಲ್ಲಿ ಡ್ರಗ್ಸ್​ ಪತ್ತೆಯಾಗಿತ್ತು. ಹೀಗಾಗಿ, ಒಟ್ಟು ಏಳು ಕಡೆ ಪರಿಶೀಲನೆ ನಡೆಸಲಾಗಿದೆ. ಹೊಸ ವರ್ಷ ಹಿನ್ನೆಲೆ ಡ್ರಗ್ಸ್ ಹೆಚ್ಚಾಗಿ ಪೂರೈಸುತ್ತಿರುವ ಮಾಹಿತಿ ಇದೆ.…

Read More

ರಾಮನಗರ : ಜಿಲ್ಲಾ ಪಂಚಾಯತ್ FDA ನೌಕರನೊಬ್ಬ, ಸುಳ್ಳು ಆದೇಶ ಪತ್ರ ಸೃಷ್ಟಿಸಿ ಗುತ್ತಿಗೆ ಆಧಾರದ ಮೇಲೆ ನರೇಗಾ ಎಂಜಿನಿಯರ್ ನೇಮಕ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲಾ ಪಂಚಾಯತ್‌ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹೌದು ರಾಮನಗರ ಜಿ.ಪಂ FDA ಆಗಿ ಅಭಿಷೇಕ್ ಎನ್ನುವ ಯುವಕ ಕಾರ್ಯ ನಿರ್ವಹಿಸುತ್ತಿದ್ದ, ಈ ವೇಳೆ ಮಧು ಎಂಬ ವ್ಯಕ್ತಿಯನ್ನು ಗುತ್ತಿಗೆ ಆಧಾರದಲ್ಲಿ ಎಂಜಿನಿಯರ್ ಕೆಲಸಕ್ಕೆ ನೇಮಕ ಮಾಡುಕೊಳ್ಳುವ ವಿಷಯವಾಗಿ ಜಿ.ಪಂ ಸಿಇಓ ದಿಗ್ವಿಜಯ್ ಬೋಡ್ಕೆರವರ ನಕಲಿ ಸಹಿ ಮಾಡಿ ನಕಲಿ ಆದೇಶ ಪತ್ರ ನೀಡಿರೋದು ಬೆಳಕಿಗೆ ಬಂದಿದೆ. ಕಳೆದ ಮೂರು ತಿಂಗಳಿನಿಂದ ಮಧು ನರೇಗಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈ ಕುರಿತು ಮಧು ನೇಮಕಾತಿ ಮೇಲೆ ಅನುಮಾನ ವ್ಯಕ್ತಪಡಿಸಿ, ಪರಿಶೀಲನೆ ನಡೆಸಿದ ವೇಳೆ ನಕಲಿ ಆದೇಶದ ಮೂಲಕ ನೇಮಕಾತಿ ಮಾಡಿಕೊಂಡಿರೋದು ಬಯಲಾಗಿದೆ. ಈ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಡಿಎ ಅಭಿಷೇಕ್ ಹಾಗೂ ಮಧು ಮೇಲೆ ಎಫ್‌ಐಆರ್ ದಾಖಲಾಗಿದೆ.

Read More

ಬೆಂಗಳೂರು : ದರ ಏರಿಕೆಯಿಂದ ಕಂಗಾಲಗಿರುವ ರಾಜ್ಯದ ಜನತೆಗೆ ಇದೀಗ ಸರ್ಕಾರ ಮತ್ತೊಂದು ಶಾಕ್ ನೀಡಲು ಮುಂದಾಗಿದೆ. ಕರ್ನಾಟಕ ಹಾಲು ಒಕ್ಕೂಟವು ನಂದಿನಿ ಹಾಲಿನ ದರ ಮತ್ತೆ ಏರಿಯಾಗುವ ಸಾಧ್ಯತೆ ಇದೆ. ಈ ಹಿಂದೆ ಪ್ರತಿ ಲೀಟರ್​ನಲ್ಲಿ​ ಹೆಚ್ಚುವರಿಯಾಗಿ 50 ಎಂಎಲ್​​ ನೀಡಿ 2 ರೂಪಾಯಿ ಏರಿಕೆ ಮಾಡಿತ್ತು. ಇದೀಗ, ಮತ್ತೆ ಕೆಎಂಎಫ್​ ಹಾಲಿನ ದರ ಏರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೌದು ಕರ್ನಾಟಕ ಹಾಲು ಒಕ್ಕೂಟ ನಂದಿನಿ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ರೈತರು ಹಾಗೂ ಹಾಲು ಉತ್ಪಾದಕರು ಲೀಟರ್‌ಗೆ 5 ರೂಪಾಯಿ ಏರಿಕೆಗೆ ಒತ್ತಾಯಿಸಿದ್ದಾರೆ. ಕೆಎಂಎಫ್ ಅಧ್ಯಕ್ಷರಾದ ಭೀಮಾ ನಾಯ್ಕ್ ಚಳಿಗಾಲದ ಅಧಿವೇಶನದ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಂದಿನಿ ಹಾಲಿನ ದರದಲ್ಲಿ ಯಾವುದೇ ದರ ಏರಿಕೆ ಮಾಡೋದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹೇಳಿಕೆ ನೀಡಿದ್ದರು. ಆದರೆ ಇದೀಗ ಈ ಬಗ್ಗೆ…

Read More

ಕಲಬುರ್ಗಿ : ಸದ್ಯ ಬಳ್ಳಾರಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ತನಿಖೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಬದಲು ನಾಯಿಗಳು ತಮ್ಮದೇ ದರ್ಬಾರ್ ನಡೆಸುತ್ತಿವೆ. ಹೌದು ಈ ಒಂದು ಘಟನೆ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾವ್ ಗ್ರಾಮದಲ್ಲಿ ನಡೆದಿದೆ. ಸರ್ಕಾರಿ ಆಸ್ಪತ್ರೆಯ ಬೆಡ್ಗಳ ಮೇಲೆ ನಾಯಿಗಳದ್ದೇ ದರ್ಬಾರ್ ಎನ್ನಲಾಗುತ್ತಿದೆ. ನಾಯಿಗಳು ಬಂದು ಮಲಗಿದರು ಸಹ ಯಾರು ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ.ಸರ್ಕಾರಿ ಆಸ್ಪತ್ರೆಗಳು ಈಗ ನಾಯಿಗಳ ಅಡ್ಡೆಯಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಒಂದು ಘಟನೆ ನಡೆದಿದೆ. ಕಲ್ಬುರ್ಗಿ ಜಿಲ್ಲೆಯ ಡೊಂಗರಾವ್ನಲ್ಲಿ ಇರುವ ಆಸ್ಪತ್ರೆಯಲ್ಲಿ ಈ ಒಂದು ಘಟನೆ ಕಂಡು ಬಂದಿದೆ. ಕಮಲಾಪುರ ತಾಲೂಕಿನ ಡೊಂಗರಗಾವ್ ಗ್ರಾಮದಲ್ಲಿ ಈ ಕುರಿತು ಜನ ದೂರು ಕೊಟ್ಟರು ಕೂಡ ಡಿ ಎಚ್ ಓ ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದ್ದಾರೆ. ಡಿಎಚ್ಒನಲ್ ನಿರ್ಲಕ್ಷಕ್ಕೆ ಇದೀಗ ಗ್ರಾಮಸ್ಥರು ಆಕ್ರೋಶ ಹೊರ ಹಾಕುತ್ತಿದ್ದಾರೆ. ರೋಗ…

Read More

ಧಾರವಾಡ : ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ, ಇದೀಗ ರಾಜ್ಯ ಡಿಜಿ ಮತ್ತು ಐಜಿಪಿ ಹಾಗೂ ಧಾರವಾಡದ ಎಸ್ ಪಿ ಅವರಿಗೆ ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗದಿಂದ ನೋಟಿಸ್ ಜಾರಿ ಮಾಡಲಾಗಿದೆ. ಹೌದು ಧಾರವಾಡದ ಅರುಣ ಹಿರೆಹಾಳ ನೀಡಿರುವ ದೂರಿನ ಮೇರೆಗೆ ನೋಟಿಸ್ ನೀಡಲಾಗಿದೆ. ಧಾರವಾಡ ಪೊಲೀಸ್ ವರಿಷ್ಠ ಅಧಿಕಾರಿ ಡಾ. ಗೋಪಾಲ್ ಬ್ಯಾಕೋಡ್ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಗೆ ನೋಟಿಸ್ ಜಾರಿ ಮಾಡಲಾಗಿದೆ ಕುದ್ದು ವಿಚಾರಣೆಗೆ ಹಾಜರಾಗುವಂತೆ ಎಸ್‌ಟಿ ಆಯೋಗ ಸೂಚನೆ ನೀಡಿದೆ. ಡಿಸೆಂಬರ್ 12ರಂದು ದೆಹಲಿಯ ಎಸ್ ಟಿ ಆಯೋಗದ ಕಚೇರಿಗೆ ಬರಲು ಸೂಚಿಸಿದೆ. ಧಾರವಾಡದ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಿಶಿಷ್ಟ ಪಂಗಡದ ವಾಲ್ಮೀಕಿ ಮಠಕ್ಕೆ ಸೇರಿದ್ದು ಎನ್ನಲಾದ ಸಂಸ್ಥೆಯಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧ ಅಕ್ರಮ ಎಸಗಿದ್ದ ಆರೋಪ ಕೇಳಿ ಬಂದಿತ್ತು. 2022ರ ನವೆಂಬರ್ ನಲ್ಲಿ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಗಲಾಟೆ ನಡೆದಿತ್ತು. ಘಟನೆಯ…

Read More

ಚಾಮರಾಜನಗರ : ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಅಧಿಕಾರ ಹಂಚಿಕೆಯ ಕುರಿತಾಗಿ ಹೇಳಿಕೆ ನೀಡಿದ್ದರು. ಈ ಒಂದು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಸ್ಪೋಟಕವಾದ ಹೇಳಿಕೆ ನೀಡಿದ್ದು, ನಾನು ಈಗ ರಾಜಕೀಯದ ಕೊನೆಗಾಲದಲ್ಲಿ ಇದ್ದೇನೆ ಎಂದು ತಿಳಿಸಿದ್ದಾರೆ. ಇಂದು ಚಾಮರಾಜನಗರ ಜಿಲ್ಲೆಯಕೊಳ್ಳೇಗಾಲ ತಾಲೂಕಿನಸತ್ತೇಗಾಲದಲ್ಲಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ನಾನು ಈಗ ರಾಜಕೀಯದಲ್ಲಿ ಕೊನೆಗಾಲದಲ್ಲಿ ಇದ್ದೇನೆ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೀರಾ ಎಂದಿದ್ದರು. ಜೆ.ಎಚ್ ಪಟೇಲರಿಗೆ ಆಗಿನ ಕೆಲ ಶಾಸಕರು ಹೇಳಿದರು. ಪಾಪ ಆಗಿನಿಂದ ಆ ಕಳಂಕ ಚಾಮರಾಜನಗರ ಮೇಲಿದೆ. ಈ ಮೂಢನಂಬಿಕೆಯನ್ನು ರಾಚಯ್ಯ ನಂಬಲಿಲ್ಲ. ನಾನು ಸಹ ನಂಬಲಿಲ್ಲ ಎಂದು ತನ್ನ ಹಳೆಯ ಗುರುಗಳಾದ ಬಿ ರಾಚಯ್ಯರನ್ನ ವೇದಿಕೆ ಮೇಲೆ ಸಿಎಂ ಸಿದ್ಧರಾಮಯ್ಯ ನೆನೆದರು. ಚಾಮರಾಜನಗರ ಹೊಸ ಜಿಲ್ಲೆ ಎಂದು ಘೋಷಿಸಿದಾಗ ನಾನು ಡಿಸಿಎಂ ಆಗಿದ್ದೆ. ನಾವು ಚಾಮರಾಜನಗರಕ್ಕೆ ಬಂದು ಜಿಲ್ಲೆಯನ್ನು ಘೋಷಣೆ…

Read More

ಬೆಂಗಳೂರು : ಅಧಿಕಾರ ಹಂಚಿಕೆಯ ಕುರಿತಂತೆ ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರು ನಮ್ಮಲ್ಲಿ ಯಾವುದೇ ರೀತಿಯ ಪವರ್ ಶೇರಿಂಗ್ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಯಾವುದೇ ಅಧಿಕಾರದ ಹಂಚಿಕೆ ಇಲ್ಲ. ರಾಜಕೀಯ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇನೆ. ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ನಾನು ಏನು ಇಲ್ಲ, ಎಲ್ಲೂ ಮಾತನಾಡಿಲ್ಲ. ನಮ್ಮಲ್ಲಿ ಯಾವುದೇ ರೀತಿಯ ಪವರ್ ಶೇರಿಂಗ್ ಇಲ್ಲ ಎಂದು ಸ್ಪಷ್ಟನೆ ನೀಡಿದರು.

Read More

ನವದೆಹಲಿ : ಇತ್ತೀಚಿಗೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಸಿಪಿ ಯೋಗೇಶ್ವರ್ ಅವರ ವಿರುದ್ಧ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೀನಾಯವಾಗಿ ಸೋತಿದ್ದರು. ಇದರ ಬೆನ್ನಲ್ಲೆ, ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ನೀಡಲಾಗುತ್ತದೆ ಎಂಬುದರ ಕುರಿತು, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಈ ಕುರಿತು ಸುಳಿವು ನೀಡಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಇನ್ನು ಮುಂದೆ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಇದೀಗ ಸುಳಿವು ನೀಡಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರೀಕರಿಗೆ ಇ-ಖಾತಾ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ, ವೃತ್ತಿಪರ, ಏಕ ಇ-ಖಾತಾ ನಾಗರೀಕ ಸಹಾಯವಾಣಿಯನ್ನು 9480683695 ಪ್ರಾರಂಭಿಸಲಾಗಿದೆ. ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರ ನಿರ್ದೇಶನದಂತೆ ಸಾರ್ವಜನಿಕರಿಗೆ ಇ-ಖಾತಾಗಳು ಸುಗಮವಾಗಿ ಸಿಗುವುದನ್ನು ಖಚಿತಪಡಿಸಿಕೊಳ್ಳಲು, ಬಿಬಿಎಂಪಿಯು ತಕ್ಷಣದ ಕ್ರಮಗಳನ್ನು ಕೈಗೊಂಡಿದೆ. ಬಿಬಿಎಂಪಿಯು ಕೈಗೊಂಡಿರುವ ತಕ್ಷಣದ ಕ್ರಮಗಳ ವಿವರ 1. ವೃತ್ತಿಪರ, ಏಕ ಇ-ಖಾತಾ ನಾಗರೀಕ ಸಹಾಯವಾಣಿಯನ್ನು ಪ್ರಾರಂಭ eKhata Citizen Helpline – 9480683695 2. ಯಾರೇ ಲಂಚ ಕೇಳಿದರೆ ಅಥವಾ ವಿಳಂಬವಾದರೆ, ದಯವಿಟ್ಟು ನಾಗರೀಕ ಸಹಾಯವಾಣಿಗೆ ಕರೆ ಮಾಡಿ. 3. ನಾಗರೀಕರು ತಾವೇ ಆನ್‌ಲೈನ್‌ನಲ್ಲಿ ಇ-ಖಾತಾವನ್ನು ರಚಿಸಲು ಪ್ರೋತ್ಸಾಹಿಸಲಾಗುತ್ತದೆ. https://BBMPeAasthi.karnataka.gov.in ನಾಗರಿಕರು YouTube ತರಬೇತಿ ವೀಡಿಯೊಗಳನ್ನು ನೋಡಬಹುದು: ಕನ್ನಡ ಭಾಷೆ: https://youtu.be/JR3BxET46po ಆಂಗ್ಲ ಭಾಷೆ: https://youtu.be/GL8CWsdn3wo 4. ಸಹಾಯಕ ಕಂದಾಯ ಅಧಿಕಾರಿ ಕಛೇರಿಗಳನ್ನು ನಾಗರೀಕರಿಗೆ ಸುಗಮವಾಗಿ ಇ-ಖಾತಾ ನೀಡಲು ವಿಸ್ತರಿಸಲಾಗಿದೆ: I. 1000ಕ್ಕೂ ಅಧಿಕ ಹೆಚ್ಚುವರಿ ಕೇಸ್ ವರ್ಕರ್ ಲಾಗಿನ್‌ಗಳನ್ನು ನೀಡಲಾಗಿದೆ.…

Read More