Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳಿಯ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿತ್ತು.ಇದೀಗ ಕಾಡುಗೋಡಿ ಟ್ರೀ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಸಿಬ್ಬಂದಿಗಳ ಮೇಲೆ ಕುಡಿದ ಮತ್ತಿನಲ್ಲಿ ಇಬ್ಬರು ಆರೋಪಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹೌದು ನಿನ್ನೆ ಕುಡಿದ ಮತ್ತಿನಲ್ಲಿ ಇಬ್ಬರೂ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಗಳು ತಪಾಸಣೆ ಮಾಡಿ ಅವರನ್ನು ತಡೆದಿದ್ದರು. ಇದರಿಂದ ಕುಪಿತಗೊಂಡ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.ಈ ವೇಳೆ ಮಹಿಳಾ ಸಿಬ್ಬಂದಿ ಹಾಗೂ ಟಿಕೆಟ್ ಆಪರೇಟರ್ ಜೊತೆ ಅಸಭ್ಯ ಪದ ಬಳಸಿ ನಿಂದಿಸಿದ್ದಾರೆ. ಅದಾದ ಬಳಿಕ ಗಲಾಟೆ ತಾರಕಕ್ಕೆ ಏರಿದ್ದು ಈ ವೇಳೆ, ಸಿಬ್ಬಂದಿಗಳು ಇಬ್ಬರನ್ನು ಹಿಡಿದುಕೊಂಡಿದ್ದಾರೆ ಆದರೆ ಅದರಲ್ಲಿ ಓರ್ವ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ BMRCL ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ನವದೆಹಲಿ : ಜಾತಿ ಗಣತಿ ವರದಿ ಜಾರಿ ಮಾಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ವಿಚಾರವಾಗಿ ಅಧಿಕಾರದಿಂದ ಕೆಳಗಿಳಿಯುವ ಹೊತ್ತು ಬಂದಿದೆ.ಹಾಗಾಗಿ ಜಾತಿ ಗಣತಿ ಅಸ್ತ್ರದ ಬಗ್ಗೆ ಹೇಳುತ್ತಿದ್ದಾರೆ ಎಂದು ದೆಹಲಿಯಲ್ಲಿ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ ಪ್ರತಿಕ್ರಿಯೆ ನೀಡಿದರು. ನವದೆಹಲಿಯಲ್ಲಿ ಜಾತಿ ಗಣತಿ ವರದಿ ಜಾರಿ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿಗಣತಿಗೆ ತಕರಾರು ಇಲ್ಲ.ಆದರೆ ಅದು ಜಾತಿಗಣತಿನೆ ಅಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಸಹ ಹೇಳಿದ್ದಾರೆ. ಅಧಿಕಾರದಿಂದ ಕೆಳಗಿಳಿಯುವ ಹೊತ್ತು ಬಂದಿದೆ.ಹಾಗಾಗಿ ಜಾತಿ ಗಣತಿ ಅಸ್ತ್ರದ ಬಗ್ಗೆ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದು ಚುನಾವಣಾ ಪೂರ್ವದಲ್ಲಿ ಮಾಡುವ ಸಮೀಕ್ಷೆ ಇದ್ದಂತೆ ಹಾಗಾಗಿ ಈ ಸಮೀಕ್ಷೆಯನ್ನು ಬಿಡುಗಡೆ ಮಾಡುವುದು ಬೇಡ ಸಿದ್ದರಾಮಯ್ಯನವರು ಮಾಡಿಸಿದ್ದ ಜಾತಿ ಸಮೀಕ್ಷೆಗೆ ಸಹಿ ಇಲ್ಲ ಚಾದರ ಸದಸ್ಯ ಕಾರ್ಯದರ್ಶಿ ಸಮೀಕ್ಷೆಗೆ ಸಹಿ ಮಾಡಿಲ್ಲ. ಯಾಕೆ ಸಹಿ ಮಾಡಿಲ್ಲ ಅನ್ನೋದು ಇದುವರೆಗೂ ಗೊತ್ತಾಗಿಲ್ಲ…
ಮಂಗಳೂರು : ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸೋದರ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ. 28 ಗಂಟೆಗಳ ಕಾರ್ಯಾಚರಣೆ ಬಳಿಕ ಕೂಳೂರಿನ ಸೇತುವೆ ಬಳಿ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ. ಇನ್ನು ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಒಬ್ಬಳು ಮುಮ್ತಾಜ್ ಅಲಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದ್ದು, ಈ ಒಂದು ಬ್ಲಾಕ್ ಮೇಲ್ ಗೆ ಮಹಿಳೆಯ ಪತಿ ಕೂಡ ಸಾತ್ ನೀಡಿದ್ದಾನೆ ಎಂದು ತಿಳಿದುಬಂದಿದೆ. ಹೌದು ಮಹಿಳೆ ಬ್ಲ್ಯಾಕ್ಮೇಲ್ ಗೆ ಆಕೆ ಪತಿಯೇ ಸಾತ್ ನೀಡಿದ್ದ ಎನ್ನಲಾಗುತ್ತಿದೆ. ರಹಮತ್ ಅಲಿಯಾಸ್ ಆಯೇಷಾ ಎಂಬ ಮಹಿಳೆಯಿಂದ ಬ್ಲಾಕ್ ಮೇಲ್ ಮಾಡಲಾಗಿತ್ತು. ಇದಕ್ಕೆ ಆಕೆಯ ಪತಿ ಕೂಡ ಬ್ಲಾಕ್ ಮೇಲ್ ಮಾಡಲು ಸಹಕರಿಸಿದ್ದಾನೆ. ಮುಮ್ತಾಜ್ ಅಲಿ ಆತ್ಮಹತ್ಯೆ ಕೇಸ್ ರೆಹಮತ್ ಅಲಿಯಾಸ್ ಆಯೇಷಾ ಎಂಬ ಮಹಿಳೆಯಿಂದ ಅಲಿಗೆ ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು. ಆರೋಪಿ ಮಹಿಳೆ ರೆಹಮತ್ ಅಲಿಯಾಸ್ ಆಯೇಷ ಎನ್ನುವ ಮಹಿಳೆ ಮುಮ್ತಾಜ್ ಅಲಿಯನ್ನು ಹನಿ ಟ್ರಾಪ್…
ಹಾಸನ : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಡಿ ಸಂಕಷ್ಟಕ್ಕೆ ಸಿಲುಕಿದ್ದು, ವಿಪಕ್ಷ ನಾಯಕರು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಅಗ್ರಹಿಸುತ್ತಿವೆ. ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಪ್ರತಿಕ್ರಿಯೆ ನೀಡಿ, ರಾಜ್ಯದ ಮುಖ್ಯಮಂತ್ರಿ 14 ಸೈಟ್ಗಳನ್ನು ತಗೋಬೇಕಾ? ಸಿಎಂ ಮನಸ್ಸು ಮಾಡಿ ಚಿಟಿಕೆ ಹೊಡೆದರೆ ನೂರಲ್ಲ ಸಾವಿರ ಸೈಟ್ ಬರುತ್ತವೆ ಎಂದರು. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿಯನ್ನು ಎದುರಿಸಿ ಸಿದ್ದರಾಮಯ್ಯ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥವಾಗಿ ಅಧಿಕಾರ ನಡೆಸುತ್ತಿದ್ದಾರೆ.ಇಂತಹ ಸಂದರ್ಭ ದಲ್ಲಿ ಆಪಾದನೆ ಮಾಡಿ ಸಿದ್ದರಾಮಯ್ಯ ಅವರನ್ನು ಇಡಿಸಿದರೆ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದು ಎಂದು ಕುತಂತ್ರ ಮಾಡುತ್ತಿದ್ದಾರೆ. ಇದು ಬಿಜೆಪಿ ಜೆಡಿಎಸ್ ಅನಿಸುತ್ತಿರುವ ಕುತಂತ್ರ ಮತ್ತು ಷಡ್ಯಂತರವಾಗಿದೆ ಎಂದು ಹಾಸನದಲ್ಲಿ ಗೃಹ ಮಂಡಳಿ ಅಧ್ಯಕ್ಷ ಶಾಸಕ ಶಿವಲಿಂಗೇಗೌಡ ಕಿಡಿ ಕಾರಿದರು. ದಲಿತರು ಮುಖ್ಯಮಂತ್ರಿ ಆಗಬಾರದು ಎಂಬುದು ನಮ್ಮ ಉದ್ದೇಶ ಅಲ್ಲ.ದಲಿತರು ಈ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು. ಆದರೆ ಸಿಎಂ…
ಬೆಂಗಳೂರು : ಬೆಂಗಳೂರಿನಲ್ಲಿ ಸಿಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೃಹತ್ ಡ್ರಗ್ ಜಾಲವೊಂದನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ಬರೋಬ್ಬರಿ ಆರು ಕೋಟಿ ರೂ ಮೌಲ್ಯದ ಎಂಡಿಎಂಎ ಡ್ರಗ್ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ಎಂಡಿಎಂಎ ಮಾರಾಟ ವೇಳೆ ಹೈದರ್ ಅಲಿ ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಈತ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರ ತಂಡವು ಬೆಂಗಳೂರಿಗೆ ತೆರಳಿ ವಿತರಣೆಗೆ ಸಿದ್ಧವಾಗಿದ್ದ ಡ್ರಗ್ಸ್ ವಶಕ್ಕೆ ಪಡೆದಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿದ್ದ ನೈಜಿರಿಯಾ ಪ್ರಜೆ ಪೀಟರ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪೀಟರ್ ಬೆಂಗಳೂರಿನ ವಿವೇಕಾನಂದ ನಗರದ ಮನೆಯೊಂದರಲ್ಲಿ ಬಾಡಿಗೆ ಇದ್ದ ಈ ವೇಳೆ ದಾಳಿ ಮಾಡಿದ ಪೊಲೀಸರು ಮನೆಯಲ್ಲಿದ್ದ ಒಟ್ಟು 6 ಕೋಟಿ ಮೌಲ್ಯದ 6.310 ಕೆಜಿ ಎಂಡಿಎಂಎ, 3 ಮೊಬೈಲ್ ಫೋನುಗಳು, ಡಿಜಿಟಲ್ ತೂಕ ಮಾಪಕ, ಒಟ್ಟು 35 ಎಟಿಎಂ/ಡೆಬಿಟ್ ಕಾರ್ಡ್ ಗಳು, 17 ಇನ್ ಅಕ್ಟಿವ್…
ಬೆಂಗಳೂರು : ಕೆ ಪಿ ಅಗ್ರಹಾರದ ಭುವನೇಶ್ವರ ನಗರದಲ್ಲಿ ಕೇಕ್ ತಿಂದು ಐದು ವರ್ಷದ ಮಗು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಅಂಜಿನಪ್ಪ ಅವರು ಹೇಳಿಕೆ ನೀಡಿದ್ದು, ಕೇಕ್ ತಿಂದ ಕೆಲವೇ ಕ್ಷಣಗಳಲ್ಲಿ ಮಗು ಸಾವನಪ್ಪಿದೆ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಪ್ರಕರಣದ ಕುರಿತು ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಅಂಜನಪ್ಪ ಹೇಳಿಕೆ ನೀಡಿದ್ದು, ಇದು ಫುಡ್ ಪಾಯ್ಸನ್ ಇಂದ ಆಗಿದೆ. ಆಹಾರ ಸೇವಿಸಿದ ಬಳಿಕ ಮಗು ಸಡನ್ ಆಗಿ ಮೃತಪಟ್ಟಿದೆ. ಅಲ್ಟ್ರಾ ಸೌಂಡ್ ಸ್ಕ್ಯಾನ್ಟ್ ಮಾಡಲಾಗಿದೆ. ಮಗುವಿನ ಸಾವಿನ ನಿಖರ ಕಾರಣ ವರದಿಯಲ್ಲಿ ತಿಳಿಯಬೇಕಿದೆ. ಯಾವ ಕಾರಣ ಅಂತ ವರದಿ ನೋಡಿದ ಬಳಿಕ ಹೇಳುತ್ತೇವೆ. ಮೃತ ಮಗುವಿನ ತಂದೆ ತಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಅಜಿನಪ್ಪ ಹೇಳಿಕೆ ನೀಡಿದರು. ಕೆ ಪಿ ಅಗ್ರಹಾರದ ಭುವನೇಶ್ವರ ನಗರದಲ್ಲಿ ಈ ಒಂದು ಘಟನೆ ನಡೆದಿತ್ತು.
ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮುರುಘಾಶ್ರೀಗೆ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಇದೀಗ ಕೋರ್ಟ್ ಆದೇಶದ ಪ್ರತಿ ಜಿಲ್ಲಾ ಕಾರಾಗೃಹ ಅಧಿಕಾರಿಗಳ ತಲುಪಿದ್ದರಿಂದ ಚಿತ್ರದುರ್ಗದ ಜೈಲಿನಿಂದ ಮುರುಘಾ ಶ್ರೀಗಳು ಬಿಡುಗಡೆಯಾಗಿದ್ದಾರೆ. ಹೌದು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗ ಮುರುಘಾಶ್ರೀ ಅವರನ್ನು ಬಿಡುಗಡೆಗೆ ನ್ಯಾಯಾಲಯ ಆದೇಶ ಹೊರಡಿಸಿದೆ. ಸಾಕ್ಷ್ಯಗಳ ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ. ಜೈಲಿನಿಂದ ರಿಲೀಸ್ ಆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವರ ಆಶೀರ್ವಾದದಿಂದ ಜೈಲಿನಿಂದ ಬಿಡುಗಡೆ ಆಗಿದ್ದೇನೆ. ಇದೀಗ ದಾವಣಗೆರೆ ಶಿವಯೋಗಿ ಆಶ್ರಮಕ್ಕೆ ತೆರಳುತ್ತೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರ ಮಾಡಿ ಮುಂದೆ ಹೆಜ್ಜೆ ಇಡುತ್ತೇನೆ. ಕಾನೂನು ಹೋರಾಟ ನಡೆಯುತ್ತಿದ್ದು ಸದ್ಯಕ್ಕೆ ಜಯ ಸಿಗಬಹುದು ಎಂಬ ನಿರೀಕ್ಷೆ ಇದೆ.ಇದು ಮೌನವಹಿಸುವಂತಹ ಕಾಲವಾಗಿದೆ ಎಂದು ತಿಳಿಸಿದರು. ಈ ಹಿಂದೆ ಫೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು…
ಕೋಲಾರ : ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಪತ್ನಿ ಒಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಕಂಗನಲ್ಲೂರು ಗ್ರಾಮದಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನ ಕೆಜಿಎಫ್‌ನ ಕಂಗನಲ್ಲೂರು ಗ್ರಾಮದ ಸೌಮ್ಯ (25) ಎಂದು ಗುರುತಿಸಲಾಗಿದೆ. ಸೌಮ್ಯ ಕಳೆದ ರಾತ್ರಿ ಬಂಗಾರಪೇಟೆಯಲ್ಲಿರುವ ಅಮರಾವತಿ ನಗರದಲ್ಲಿರುವ ತನ್ನ ತವರು ಮನೆಗೆ ಬಂದಿದ್ದಳು. ತಡರಾತ್ರಿ ಎಲ್ಲರೂ ಮಲಗಿಕೊಂಡ ವೇಳೆ, ಸೌಮ್ಯ ಮನೆಯಿಂದ ತೆರಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಇನ್ನು ಕಳೆದ ಎರಡು ವರ್ಷದ ಹಿಂದೆ ಸುನಿಲ್ ಕುಮಾರ್ ಎಂಬಾತನ ಜೊತೆ ಸೌಮ್ಯ ಮದುವೆಯಾಗಿದ್ದಳು. ಮದುವೆಯ ಹೊಸತರಲಿ ಎಲ್ಲವೂ ಚೆನ್ನಾಗಿತ್ತು ಆದರೆ ಬರಬರುತ್ತ ಸುನಿಲ್ ಸೌಮ್ಯಾಗೆ ವರದಕ್ಷಿಣೆ ಕಿರುಕುಳ ನೀಡಿದ್ದಾನೆ.ಹಾಗಾಗಿ ಪತಿ ಸುನಿಲ್ ಕುಮಾರ್ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಸೌಮ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆರೋಪಿಸಿ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು : ಇತ್ತೀಚಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪರ್ವೆಜ್ ವಿಚಾರಣೆ ವೇಳೆ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಹೌದು ಆರೋಪಿ ಪರ್ವೇಜ್ ಮೂಲತಃ ಉತ್ತರ ಪ್ರದೇಶದವನು ಎಂದು ಹೇಳಲಾಗುತ್ತಿದೆ. ಪರ್ವೇಜ್ ಪತ್ನಿ ಮೂಲ ಪಾಕಿಸ್ತಾನದವಳು ಆದರೂ ಕೂಡ ದೆಹಲಿಯಲ್ಲಿ ವಾಸವಿದ್ದರು. ಕೋರ್ಟ್ ಆದೇಶದಂತೆ ದೆಹಲಿಯಲ್ಲಿ ಪರ್ವೆಜ್ ಪತ್ನಿ ವಾಸವಾಗಿದ್ದರು. ಪ್ರತಿ ತಿಂಗಳು ಕೋರ್ಟ್ ನಲ್ಲಿ ಪರ್ವೆಜ್ ಪತ್ನಿ ಸಹಿ ಮಾಡುತ್ತಿದ್ದಾರೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪರ್ವೇಶ್ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಪ್ರಮುಖ ಆರೋಪಿ ಪರ್ವೆಜ್ ಸಂಪರ್ಕದಲ್ಲಿ 50ಕ್ಕೂ ಹೆಚ್ಚು ಜನರು ಇದ್ದಾರೆ. ತರಬೇತಿ ಸಂಪರ್ಕದಲ್ಲಿ ಇರುವವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಎರಡು ತನಿಖಾ ತಂಡಗಳು ಮುಂಬೈ ಮತ್ತು ಚೆನ್ನೈನಲ್ಲಿ ಬೀಡು ಬಿಟ್ಟಿವೆ. ಮೆಹಂದಿ ಫೌಂಡೇಶನ್ ಚಟುವಟಿಕೆಗಳ ಬಗ್ಗೆಯೂ ಪೊಲೀಸರು ನಿಗಾವಹಿಸಿದ್ದಾರೆ.
ಮಂಗಳೂರು : ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಸೋದರ ಮುಮ್ತಾಜ್ ಅಲಿ ಮೃತದೇಹ ಪತ್ತೆಯಾಗಿದೆ. 28 ಗಂಟೆಗಳ ಕಾರ್ಯಾಚರಣೆ ಬಳಿಕ ಕೂಳೂರಿನ ಸೇತುವೆ ಬಳಿ ಮುಮ್ತಾಜ್ ಅಲಿ ಶವ ಪತ್ತೆಯಾಗಿದೆ. ಇನ್ನು ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್, ಮಮ್ತಾಜ್ ಅಲಿ ಅವರ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ ಎಂದು ದೂರಿನಲ್ಲಿ ಅವರ ಸಹೋದರ ಉಲ್ಲೆಖಿಸಿದ್ದಾರೆ ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಮ್ತಾಜ್ ಅಲಿ ಆತ್ಮಹತ್ಯೆಗೆ ಸಂಬಂಧಪಟ್ಟ ಆರೋಪಿಗಳು ದೇಶ ಬಿಟ್ಟು ಹೋಗದಂತೆ ಎಲ್ ಓ ಸಿ ಜಾರಿ ಮಾಡಿದ್ದೇವೆ. ನಿನ್ನೆ ಮುಂಜಾನೆ ಮುಮ್ತಾಜ್ ಅಲಿ ನದಿಗೆ ಹಾರಿರುವ ಮಾಹಿತಿ ಬಂದಿತ್ತು. ಬೆಳಿಗ್ಗೆ 10 ಗಂಟೆಗೆ ಮುಮ್ತಾಜ್ ಅಲಿ ಮೃತದೇಹ ಸಿಕ್ಕಿದೆ.ಮುಮ್ತಾಜ್ ಅಲಿ ಸಹೋದರ ಕಾವೂರು ಠಾಣೆಗೆ ದೂರು ನೀಡಿದ್ದಾರೆ.ಹನಿ ಟ್ರ್ಯಾಪ್ ಮಾಡಿದ್ದಾರೆಂದು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾವೂರು ಠಾಣೆಯಲ್ಲಿ ಆರು ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ದೂರಿನಲ್ಲಿ ಮೂರು ತಿಂಗಳಿನಿಂದ…














