Subscribe to Updates
Get the latest creative news from FooBar about art, design and business.
Author: kannadanewsnow05
ರಾಯಚೂರು : ರಾಯಚೂರಿನಲ್ಲಿ ಇಂದು ಘೋರ ದುರಂತ ಒಂದು ಸಂಭವಿಸಿದ್ದು, ಬಟ್ಟೆ ತೊಳೆಯಲು ಎಂದು ತಾಯಿ ಮತ್ತು ಮಗ ಇಬ್ಬರು ಕೆರೆಗೆ ಹೋಗಿದ್ದಾರೆ.ಈ ವೇಳೆ ಕಾಲು ಜಾರಿ ಮಗ ಕೆರೆಗೆ ಬಿದ್ದಿದ್ದಾನೆ. ತಕ್ಷಣ ತಾಯಿ ಆತನ ರಕ್ಷಣೆಗೆ ತಾನು ಕೂಡ ಕೆರೆಗೆ ಜಿಗಿದಿದ್ದು ಇಬ್ಬರೂ ಕೂಡ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಮಲಯಾಬಾದ್ ಗ್ರಾಮದಲ್ಲಿ ನಡೆದಿದೆ. ಹೌದು ರಾಯಚೂರು ತಾಲೂಕಿನ ಮಲಯಾಬಾದ್ ಗ್ರಾಮದಲ್ಲಿ ತಾಯಿ ರಾಧಮ್ಮ (32) ಹಾಗೂ ಮಗ ಕೆ ಸಂಜು (5) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.ಬೆಳಿಗ್ಗೆ ಮಗನೊಂದಿಗೆ ರಾಧಮ್ಮ ಬಟ್ಟೆ ತೊಳೆಯಲು ಹೋಗಿದ್ದರು. ಇ ವೇಳೆ ಕಾಲು ಜಾರಿ ಕೆರೆಯಲ್ಲಿ ಮಗ ಸಂಜು ಬಿದ್ದಿದ್ದಾನೆ.ಮಗನನ್ನು ರಕ್ಷಿಸಲು ಹೋಗಿ ತಾಯಿ ರಾಧಮ್ಮ ಕೂಡ ಸಾವನ್ನಪ್ಪಿದ್ದಾರೆ ಯರಗೇರಾ ಪೊಲೀಸ್ ಠಾಣೆ ಎಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ : ಇದೆ ಡಿಸೆಂಬರ್ 20 ರಿಂದ 22 ರವರೆಗೆ ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿದ್ದು, ಈ ಒಂದು ಸಮ್ಮೇಳನಕ್ಕೆ ಬರುವ ಎಲ್ಲಾ ಅತಿಥಿಗಳಿಗೆ ಬಾಡೂಟ ಇರಬೇಕು ಎಂದು ಅಗ್ರಹಿಸಿ ಮಂಡ್ಯದ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಸಮಾನ ಮನಸ್ಕ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಮಂಡ್ಯದಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಮಂಡ್ಯ ಜಿಲ್ಲಾಧಿಕಾರಿ ಕಚೇರಿಯ ಬಳಿ ಬೇಯಿಸಿದ ಮೊಟ್ಟೆ ತಿನ್ನುವ ಮೂಲಕ ಧರಣಿ ನಡೆಸಿದ್ದಾರೆ. ನಾಟಿ ಕೋಳಿ ಸಾರು, ಮಟನ್ ಕಬಾಬ್ ನೀಡಬೇಕೆಂದು ಅಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಮಂಡ್ಯ ಅಂದರೆ ಬೆಳೆಯು ಇರಲಿ, ಮೂಳೆಯೂ ಇರಲಿ ನಾವು ಬಾಡೂಟ ನೀಡಿ ಅತಿಥಿ ಸತ್ಕಾರ ಮಾಡಬೇಕು. ಕೋಸಂಬರಿ ಜೊತೆಗೆ ಎಗ್ ಬುರ್ಜಿಯು ಇರಲಿ. ಹಪ್ಪಳ ಜೊತೆಗೆ ಕೊರಬಾಡು, ಕಬಾಬ್ ಇರಲಿ. ಮುದ್ದೆ ಜೊತೆಗೆ ಡ್ಯೂಟಿ ಗೊಜ್ಜು ಇರಲಿ ಎಂದು ಘೋಷಣೆ ಕೂಗಿ ಧರಣಿ ನಡೆಸಿದರು. ಬಾಡೂಟ ಕೊಡದಿದ್ದರೆ…
ಬಳ್ಳಾರಿ : ಈಗಾಗಲೇ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ಭಾರಿ ಸದ್ದು ಮಾಡಿದ್ದು ಇದರ ಬೆನಲ್ಲೇ ಇದೀಗ ಬಳ್ಳಾರಿ ಪಾಲಿಕೆಯಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಮನೆ ತೆರಿಗೆ ಸಂಗ್ರಹ ಹೆಸರಿನಲ್ಲಿ ಪಾಲಿಕೆಯ ಬಿಲ್ ಕಲೆಕ್ಟರ್ ಗಳು ನಕಲಿ ಬಿಲ್ ಸೃಷ್ಟಿಸಿ ಲಕ್ಷಾಂತರ ರೂಪಾಯಿ ತೆರಿಗೆ ಹಣ ವಂಚಿಸಿರುವ ಆರೋಪ ಇದೀಗ ಕೇಳಿ ಬಂದಿದೆ. ಹೌದು ಮನೆ ತೆರಿಗೆ ಹೆಸರಿನಲ್ಲಿ ಒಂದೇ ರಸೀದಿಗೆ ಡಬಲ್ ಬಿಲ್ ಸೃಷ್ಟಿ ಮಾಡಿ ವಂಚನೆ ಎಸಗಲಾಗಿದೆ. ಮನೆತರಿಗೆ ಸಂಗ್ರಹ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಇದೀಗ ನುಂಗಿರುವ ಆರೋಪ ಕೇಳಿ ಬಂದಿದೆ. ಯಾರದ್ದು ಮನೆಯ ತೆರಿಗೆಯ ಬಿಲ್ ನಂಬರ್ ಬಳಸಿ ಅಕ್ರಮ ಎಸಗಿದ್ದು, ಮತ್ತೆ ಇನ್ಯಾರದ್ದು ಮನೆಯ ಅಸಲಿ ಬಿಲ್ ಎಂಬಂತೆ ನಂಬಿಸಿ ವಂಚನೆ ಎಸಗಲಾಗಿದೆ. ಬಿಲ್ ಕಲೆಕ್ಟರ್ ಗಳ ವಿರುದ್ಧ ಲಕ್ಷಾಂತರ ಹಣ ವಂಚಿಸಿರುವ ಆರೋಪ ಕೇಳಿ ಬಂದಿದೆ. ಮನೆ ತೆರಿಗೆ ಸಂಗ್ರಹದಲ್ಲಿ ಲಕ್ಷಾಂತರ ರೂಪಾಯಿ ಗೋಲ್ಮಾಲ್ ಯಾರದೋ ಮನೆಯ ತೆರಿಗೆ…
ತುಮಕೂರು : ತುಮಕೂರಿನ ಸಿದ್ದಗಂಗಾ ಮಠದಲ್ಲಿ ತಡರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಮಠದ ಸ್ಮೃತಿ ವನದ ಬಳಿ ಚಿರತೆ ಓಡಾಡಿರುವ ದೃಶ್ಯ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಚಿರತೆ ಓಡಾಡಿರುವ ವಿಷಯ ತಿಳಿದು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ಸಿದ್ದಗಂಗಾ ಮಠದ ಸ್ಮೃತಿ ವನದ ಬಳಿ ಚರಿತೆ ಓಡಾಡಿದೆ ನಾಯಿಯನ್ನು ಬೇಟೆ ಆಡಲು ಚಿರತೆ ಬಂದಿತು ಎಂದು ಶಂಕೆ ವ್ಯಕ್ತವಾಗಿದೆ ಆದರೆ ಇದೇ ವೇಳೆ ಜೋರಾಗಿ ನಾಯಿ ಬೊಗಳಿದ್ದರಿಂದ ಅಲ್ಲಿಂದ ಚಿರತೆ ಓಡಿಹೋಗಿದೆ ಎನ್ನಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಮಠದ ಸಿಬ್ಬಂದಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಓಡಾಡಿದ ಸ್ಥಳ ಪರಿಶೀಲಿಸಿದ ನಂತರ ಸೆರೆಗೆ ಬೋನು ಅಳವಡಿಸಿದ್ದಾರೆ. ಆದಷ್ಟು ಬೇಗ ಚಿರತೆಯನ್ನು ಸರಿ ಹಿಡಿಯಿರಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.
ಗುಜರಾತ್ : ಗುಜರಾತ್ ನಲ್ಲಿ ಭೀಕರವಾದಂತಹ ರಸ್ತೆ ಅಪಘಾತ ನಡೆದಿದ್ದು ರಸ್ತೆ ಬದಿಯ ಡಿವೈಡರ್ಗೆ ವೇಗವಾಗಿ ಬಂದಂತಹ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾಲೇಜಿಗೆ ಹೋಗುತ್ತಿದ್ದ ಐವರು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಏಳು ಜನರು ಸಾವನ್ನಪ್ಪಿರುವ ಘಟನೆ ಗುಜರಾತ್ನ ಜುನಾಗಢದಲ್ಲಿ ನಡೆದಿದೆ. ಕಾಲೇಜಿಗೆ ಹೋಗುತ್ತಿದ್ದ ಐವರು ವಿದ್ಯಾರ್ಥಿಗಳು ಒಂದು ಕಾರಿನಲ್ಲಿ ಚಲಿಸುತ್ತಿದ್ದು ವೇಗವಾಗಿ ಬಂದು ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮತ್ತೊಂದು ಕಾರಿಗೆ ಗುದ್ದಿದೆ. ಈ ವೇಳೆ ಮತ್ತೊಂದು ಕಾರಿನಲ್ಲಿ ಚಲಿಸುತ್ತಿದ್ದ ಇನ್ನಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಯಚೂರು : ಕಾಲೇಜಿಗೆ ಹೋಗುತ್ತಿರುವ ಯುವತಿಯರಿಗೆ, ಮಹಿಳೆಯರಿಗೆ ವಿಕೃತ ಕಾಮಿಯೊಬ್ಬ ತನ್ನ ಮರ್ಮಾಂಗ ತೋರಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ರಾಯಚೂರು ನಗರದ ಸಾಯಿಬಾಬಾ ಹಿಂಭಾಗದಲ್ಲಿ ನಡೆದಿದೆ. ಆರೋಪಿಯನ್ನ ಅಕ್ಬರ್ ಎಂದು ಗುರುತಿಸಲಾಗಿದ್ದು, ಅಕ್ಬರ್ ರಾಯಚೂರು ನಗರದ ನಿಲ್ದಾಣದ ಬಳಿಯ ಸಾಯಿಬಾಬಾ ದೇವಸ್ಥಾನದ ಹಿಂಭಾಗದ ರಸ್ತೆಯಲ್ಲಿ ಕಾಲೇಜಿಗೆ ಹೋಗುವ ಹಿಂದೂ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದನು ಎನ್ನಲಾಗಿದೆ. ನಂತರ ಅವರ ಮುಂದೆ ನಿಂತು ಮರ್ಮಾಂಗ ತೋರಿಸುತ್ತಿದ್ದನು. ವಿಕೃತ ಕಾಮಿ ಹಿಂದು ಯುವತಿಯರಿಗೆ ಮಾತ್ರ ಮರ್ಮಾಂಗ ತೋರಿಸುತ್ತಿದ್ದನು. ಈತನ ವಿಕೃತ ಕೃತ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಿತ್ಯ ಇದೇ ರೀತಿಯಾಗಿ ಮಾಡುತ್ತಿದ್ದ, ಅಕ್ಬರ್ನನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಕೂಡಲೇ ಪೊಲೀಸರು ಕಾಮುಕ ಅಕ್ಬರ್ನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಹಾಸನ : ಹಾಸನದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ನೀರು ಕುಡಿಯುತ್ತಲೇ ಕುಸಿದು ಬಿದ್ದು ಹೃದಯಘಾತವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಟೆಕ್ಕಿಯನ್ನು ಸಮರ್ಥ್ (26) ಎಂದು ಹೇಳಲಾಗುತ್ತಿದೆ.ಕಾಫಿ ಬೆಳೆಗಾರ ಹೇಮಂತ್ ಹಾಗೂ ಸರಳ ಎಂಬುವವರ ಪುತ್ರ ಸಮರ್ಥ್ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸಮರ್ಥ್ ವರ್ಕ್ ಫ್ರಮ್ ಹೋಂ ಮೂಲಕ ಕೆಲಸ ಮಾಡಿತ್ತಿದ್ದರು. ಅದೇ ರೀತಿ ಭಾನುವಾರ ಬೆಳಗ್ಗೆಯವರೆಗೂ ಕೆಲಸ ಮಾಡಿ ಮಲಗಿದ್ದರು. ಸಂಜೆ ಮೇಲೆದ್ದು ನೀರು ಕುಡಿದ ಸಮರ್ಥ್ ತಕ್ಷಣವೇ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ.ಕೂಡಲೇ ಅವರ ತಾಯಿ ವೈದ್ಯರಿಗೆ ಕರೆ ಮಾಡಿ ಮನೆಗೆ ಕರೆಸಿದ್ದಾರೆ. ತಪಾಸಣೆ ಮಾಡಿದ ವೈದ್ಯರು ಸಮರ್ಥ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕೂಡಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿ : ಇನ್ನೇನು ಕೆಲವೇ ಕ್ಷಣಗಳಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ಆರಂಭವಾಗಲಿದೆ. ಈ ಒಂದು ಅಧಿವೇಶನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಾಲ್ಮೀಕಿ ಹಗರಣ, ಮುಡಾ ಹಗರಣ, ವಕ್ಫ್ ವಿವಾದ, BPL ಕಾರ್ಡ್ ಪರಿಷ್ಕರಣೆ ಕುರಿತಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಮಧ್ಯ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬಾಣಂತಿಯರ ಮರಣಗಳು ಆಗುತ್ತಿವೆ, ಪ್ರತಿ ವರ್ಷ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಇದ್ದೇ ಇರುತ್ತದೆ. ಅದನ್ನೆ ಮುಂದಿಟ್ಟುಕೊಂಡು ರಾಜಕೀಯ ಉದ್ದೇಶದಿಂದ ಮಾತನಾಡಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ವ್ಯವಸ್ಥೆಗಳನ್ನು ಸರಿಪಡಿಸುವ ಕೆಲಸ ಸಾಕಷ್ಟು ಆಗುತ್ತಿದೆ. ಬಾಣಂತಿಯರ ಮರಣಗಳ ಬಗ್ಗೆ ಬೆಳಗಾವಿ ಅಧಿವೇಶನಲ್ಲಿ ಉತ್ತರ ಕೊಡಲಾಗುವುದು. ಸರ್ಕಾರ ಮೇಡಿಕಲ್ ಮಾಫಿಯಾ ಹಿಡಿತಕ್ಕೆ ಸಿಲುಕಿದೆಯಾ ಎಂಬ ವಿಚಾರವಾಗಿ ಸದನದಲ್ಲಿ ನಾನು ಚರ್ಚೆ ಮಾಡುತ್ತೇನೆ ಎಂದರು. ಆರೋಗ್ಯ ಇಲಾಖೆ ಬಗ್ಗೆ ಮಾತನಾಡಬೇಕು. ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಮರಣದ ವಿಚಾರವಾಗಿ ನಮಗೆ…
ಬಳ್ಳಾರಿ : ಬಳ್ಳಾರಿಯಲ್ಲಿ ಕೇವಲ ಒಂದೇ ತಿಂಗಳಲ್ಲಿ 6 ಜನ ಬಾಣಂತಿಯರು ಸಾವನ್ನಪ್ಪಿರುವ ಘಟನೆ ಭಾರಿ ಸದ್ದು ಮಾಡುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲಾಖೆಯ ಅಧಿಕಾರಿಗಳು ಬಾಣಂತಿಯರಿಗೆ ನೀಡಿದ್ದ ‘IV ಫ್ಲೂಯಿಡ್’ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ವರದಿ ಅಧಿಕಾರಿಗಳ ಕೈ ಸೇರಿದೆ. ‘ಎಂಡೋ ಟಾಕ್ಸಿನ್’ ಎಂಬ ಬ್ಯಾಕ್ಟೀರಿಯಾ ಅಂಶ ಪತ್ತೆ! ಅಧಿಕಾರಿಗಳ ಕೈ ಸೇರಿದ IV ಫ್ಲೂಯಿಡ್ ವರದಿಯಲ್ಲಿ ಬೆಚ್ಚಿಬಿಳಿಸುವ ಮಾಹಿತಿ ಬಹಿರಂಗವಾಗಿದ್ದು, ಫ್ಲೂಯಿಡ್ನಲ್ಲಿ ಎಂಡೋ ಟಾಕ್ಸಿನ್ ಎಂಬ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದೆ. ಇದು ಸಾವಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾ ಎಂದು ಹೇಳಲಾಗುತ್ತದೆ. ಅಲ್ಲದೇ ಬಾಣಂತಿಯರಿಗೆ ಕೊಟ್ಟಿದ್ದ ಗ್ಲೂಕೋಸ್ ನಲ್ಲಿ ನ್ಯೂನತೆ ಕಂಡು ಬಂದಿದೆ.ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸಲು ಗ್ಲೂಕೋಸ್ ಕಾರಣವಾಗಿದೆ. ಯೋಗ್ಯವಲ್ಲದ ಐವಿ ಫ್ಲೂಯಿಡ್ ಬಳಕೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ತಯಾರಿಕಾ ಘಟಕಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದರು. ಈಗಾಗಲೇ…
ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಮತ್ತೊಂದು ಜೋಡಿ ಕೊಲೆ ನಡೆದಿದ್ದು, ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್ ಬಸವೇಶ್ವರ ದೇವಸ್ಥಾನದ ಬಳಿ ಈ ಒಂದು ಜೋಡಿ ಕೊಲೆ ನಡೆದಿದೆ. ವಿಕ್ರಂ (21) ಮತ್ತು ತೂರಿ (33) ಕೊಲೆಯಾದ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಯಲಹಂಕ ಬಳಿಯ ಬಯಲು ಬಸವೇಶ್ವರ ದೇವಸ್ಥಾನದ ಬಳಿ ಈ ಒಂದು ಘಟನೆ ನಡೆದಿದೆ ಎನ್ನಲಾಗಿದೆ. ಇವರಿಬ್ಬರು ಸೆಕ್ಯೂರಿಟಿ ಗಾರ್ಡ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ನೇಪಾಳ ಮತ್ತು ಬಿಹಾರ ಮೂಲದ ಸೆಕ್ಯೂರಿಟಿ ಗಾರ್ಡ್ ಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ತಡರಾತ್ರಿ ಪಾರ್ಟಿ ಮಾಡುವ ವೇಳೆ ಗಲಾಟೆಯಾಗಿ ಕೊಲೆ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಘಟನ ಸ್ಥಳಕ್ಕೆ ಯಲಹಂಕ ನ್ಯೂ ಟೌನ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.














