Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರಾಜ್ಯದ ಜನತೆಗೆ ಸರ್ಕಾರ ಸಿಹಿ ಸುದ್ದಿ ಒಂದನ್ನು ನೀಡಿದ್ದು, ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ವೈಷ್ಟೋದೇವಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಸಹಾಯ ಧನ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ನಿನ್ನೆ ದಿನಾಂಕ 13-11-2024 ರಂದು ಮಾನ್ಯ ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅವುಗಳಲ್ಲಿ ಪ್ರಮುಖ ಅಂಶಗಳು ಈ ಕೆಳಗಿನಂತಿವೆ. * ವೈಷ್ಟೋದೇವಿಗೆ ಭೇಟಿ ನೀಡುವ ಕರ್ನಾಟಕ ರಾಜ್ಯದ ಯಾತ್ರಾರ್ಥಿಗಳಿಗೆ ತಲಾ ರೂ. 5000/-ಗಳ ಸಹಾಯ ಧನ* ನೀಡಲು ತೀರ್ಮಾನಿಸಲಾಯಿತು. * ಸರ್ಕಾರದ ಬಹುಮಹಡಿಗಳ ಕಟ್ಟಡದ ಎದುರು ಇರುವ ಮುಜರಾಯಿ ಇಲಾಖೆಗೆ ಸೇರಿದ 3/4 ಎಕರೆ ಜಾಗದಲ್ಲಿ ರೂ. 10 ಕೋಟಿ ವೆಚ್ಚದಲ್ಲಿ ಧಾರ್ಮಿಕ ಸೌಧ* ನಿರ್ಮಿಸಲು ತೀರ್ಮಾನಿಸಲಾಯಿತು. * 120 ವರುಷಗಳ ಹಳೆಯದಾದ ಮೈಸೂರಿನ ಸಂಸ್ಕೃತ ಮಹಾರಾಜ ಕಾಲೇಜಿನ ಸಂಸ್ಥೆಯ ಸಂಪೂರ್ಣ ಜೀರ್ಣೋದ್ಧಾರ ಮಾಡಲು…
ಬೆಂಗಳೂರು : ಕಳೆದ 2022 ಜೂನ್ ನಿಂದ 2023 ಜುಲೈ ವರೆಗೆ ಪ್ರಾಥಮಿಕ ಶಾಲೆಗೆ ಮಕ್ಕಳ ದಾಖಲಾತಿ ಪ್ರಮಾಣದಲ್ಲಿ ಇಡೀ ದೇಶದಲ್ಲಿ ನಮ್ಮ ಕರ್ನಾಟಕ ರಾಜ್ಯವು ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ ವರದಿಯಲ್ಲಿ ತಿಳಿಸಿದೆ. ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಸಿಎಎಂಎಸ್) ವರದಿ ಪ್ರಕಾರ, 2022ರ ಜೂನ್ನಿಂದ – 2023ರ ಜುಲೈ ನಡುವೆ 6 ರಿಂದ 10 ವರ್ಷದವರೆಗಿನ ಮಕ್ಕಳು ಪ್ರಾಥಮಿಕ ಶಾಲೆಗೆ ಪ್ರವೇಶ ಪಡೆಯುವುದರಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 1 ರಿಂದ 5ನೇ ತರಗತಿವರೆಗೆ ಶೇ.97.4ರಷ್ಟು ಮಕ್ಕಳು ದಾಖಲಾಗಿದ್ದಾರೆ. ಕರ್ನಾಟಕದಲ್ಲಿ ಶೇ.64.4 ರಷ್ಟು ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಿದ್ದರೆ, ಶೇ.10.1 ರಷ್ಟು ಮಕ್ಕಳು ಅನುದಾನಿತ, ಶೇ.25.5 ರಷ್ಟು ಮಕ್ಕಳು ಖಾಸಗಿ ಹಾಗೂ ಶೇ. 0.3 ರಷ್ಟು ಇತರೆ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ ವರದಿಯಲ್ಲಿ ತಿಳಿಸಿದೆ. https://twitter.com/KarnatakaVarthe/status/1856696996482203671?t=F_43tRVVoMKj42j8TWzBwA&s=19
ಬೆಂಗಳೂರು : ವಕ್ಫ್ ಆಸ್ತಿ ಕುರಿತಂತೆ ಪ್ರಚೋದನಕಾರಿ ಭಾಷಣ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಎಫ್ಐಆರ್ ದಾಖಲಾಗಿತ್ತು ಇದೀಗ ಈ ಒಂದು ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಯಾವುದೇ ಆಕ್ಷೇಪಾರ್ಹವಾದ ಮಾತುಗಳನ್ನು ಆಡದಿದ್ದರೂ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’ ಎಂದು ಪೀಠಕ್ಕೆ ತಿಳಿಸಿದರು. ಈ ವೇಳೆ ನಾವು ಬೇರೊಬ್ಬರ ಪರವಾಗಿ ಮಾತನಾಡಲಾಗದು. ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ ಎಂದು ಹೇಳುತ್ತಿಲ್ಲ. ಆದರೆ, ದೂರಿನಲ್ಲಿನ ಕೊನೆಯ ನಾಲ್ಕು ಸಾಲುಗಳಲ್ಲಿನ ಹೇಳಿಕೆಗಳು ಬೇಕಿರಲಿಲ್ಲ ಎಂದು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಪೀಠಕ್ಕೆ ವಿವರಿಸಿದರು. ಪ್ರಕರಣ ಹಿನ್ನೆಲೆ ಏನು? ಸವಣೂರಿನಲ್ಲಿ ನಿಂತು ಎಲ್ಲೇ ಕಲ್ಲು ಎಸೆದರೂ ಅದು ಬಿದ್ದ ಜಾಗ ವಕ್ಫ್ ಆಸ್ತಿ ಎನ್ನುವಂತಾಗಿದೆ. ಭೋವಿ ಸಮಾಜದವರಿಗೆ ಮನೆ ನಿರ್ಮಾಣ ಮಾಡಬೇಕು ಎಂದು ಮೂರು ವರ್ಷಗಳ…
ಬೆಂಗಳೂರು : ಮದುವೆಯಾಗುವಂತೆ 16 ವರ್ಷದ ಅಪ್ರಾಪ್ತೆ ಬಾಲಕಿಗೆ ಆಕೆಯ ಸೋದರ ಮಾವನೆ ಕಿರುಕುಳ ನೀಡಿದ್ದಾನೆ. ಇದರಿಂದ ಮನನೊಂದ ಬಾಲಕಿಯು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬಾಗಲಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಈ ಒಂದು ಘಟನೆ ನಡೆದಿದ್ದು ಇದೀಗ ತಡವಾಗಿ ಬಳಕೆಗೆ ಬಂದಿದೆ. ನವೆಂಬರ್ 11ರಂದು 16 ವರ್ಷದ ಅಪ್ರಾಪ್ತೆ ಬಾಲಕಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿಯು ಆತ್ಮಹತ್ಯೆ ಮಾಡಿಕೊಳ್ಳೋಕೂ ಮುಂಚೆ ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿ ಸೋದರ ಮಾವನ ವಿರುದ್ಧ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿದ್ದಾನೆ ಎಂದು ಬಾಲಕಿ ತಾಯಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲಿ ಪೊಲೀಸರು 28 ವರ್ಷದ ಬಾಲಕಿಯ ಸೋದರ ಮಾವನನ್ನು ಬಂಧಿಸಿದ್ದು, ಬಾಗಲಗುಂಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕೊಪ್ಪಳ : ತಹಶೀಲ್ದಾರ್ ಕಚೇರಿಗೆ ಏಕಾಏಕಿ ವ್ಯಕ್ತಿ ಓರ್ವ ನುಗ್ಗಿ ಕಬ್ಬಿಣದ ರಾಡ್ ನಿಂದ ಮಹಿಳಾ ಉಪತಾಶಿಲ್ದಾರ್ ಮೇಲೆ ಮೂರು ಬಾರಿ ಹಲ್ಲೆ ಮಾಡಿರುವ ಘಟನೆ ಕೊಪ್ಪಳ ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಈ ದೃಶ್ಯ ನೋಡಿ ಸ್ವತಃ ಕಚೇರಿಯ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಹೌದು ಕೊಪ್ಪಳ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಉಪದರ್ಶಿಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ರೇಖಾ ದೀಕ್ಷಿತ್ ಎನ್ನುವ ಮಹಿಳೆಯು ಆಕೆಯ ಪರಿಚಯಸ್ತನಿಂದಲೇ ಹಲ್ಲೆಗೆ ಒಳಗಾಗಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಪ್ರಭು ಚೆನ್ನದಾಸರ್ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಕಚೇರಿಯಲ್ಲಿ ರೇಖಾ ಬ್ಯುಸಿಯಾಗಿದ್ರು. ಈ ವೇಳೆ ಪ್ರಭು, ಕಬ್ಬಿಣದ ರಾಡ್ ಹಿಡಿದು ಕಚೇರಿಗೆ ನುಗ್ಗಿ ಏಕಾಏಕಿ ರೇಖಾ ಮೇಲೆ ದಾಳಿ ಮಾಡಿದ್ದು, ರಾಡ್ನಿಂದ ರೇಖಾಳ ತಲೆಗೆ 3 ಬಾರಿ ಹೊಡೆದಿದ್ದಾನೆ. ರೇಖಾ ಕುಸಿದು ಬಿದ್ದರೂ ಸಹ ರಾಕ್ಷಸನಂತೆ ಥಳಿಸಿದ್ದಾನೆ. ಕೂಡಲೇ ಕಚೇರಿ ಸಿಬ್ಬಂದಿ ರೇಖಾರನ್ನ ರಕ್ಷಿಸಿ, ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಭು ರೇಖಾ ಗೆ ಕಳೆದ ಮೂರು ವರ್ಷಗಳಿಂದ…
ಮೈಸೂರು : ಮನೆಯೊಂದರಲ್ಲಿ ಎಂಟು ಚೀಲಗಳಲ್ಲಿ ಗಾಂಜಾವನ್ನು ಸಂಗ್ರಹಿಸಿದ್ದ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ಮಾಡಿ ಸುಮಾರು 154 ಕೆಜಿಗಳಷ್ಟು ಗಾಂಜಾ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹೌದು ಮೈಸೂರಿನಲ್ಲಿ 154 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದು, ಸೈಯದ್ ವಾಸಿಂ ಹಾಗೂ ಯಾಸ್ಮಿನ್ ತಾಜ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಲ್ಯಾಣಗಿರಿಯ ಕೆಎಚ್ಬಿ ಕಾಲೋನಿಯಲ್ಲಿ ಗಾಂಜಾ ಸಂಗ್ರಹಿಸಡಾಲಾಗಿತ್ತು.ಮನೆಯಲ್ಲಿ 8 ಚೀಲಗಳಲ್ಲಿ ಸುಮಾರು 154 ಕೆಜಿ ತುಂಬಿಸಿಡಾಲಗಿತ್ತು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ : ಡಾ. ಬಿ ಆರ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಕಾಂಗ್ರೆಸ್ಸಿನ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹೇಳಿಕೆಗೆ ಇದೀಗ ವಿರೋಧ ವ್ಯಕ್ತವಾಗಿದ್ದು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಅಜ್ಜಂಪಿರ್ ಖಾದ್ರಿ ವಿರುದ್ಧ ಇದೀಗ ದೂರು ದಾಖಲಾಗಿದೆ. ಹೌದು ಮಾಜಿ ಶಾಸಕ ಜಂಪರ್ ಖಾದ್ರಿ ಹೇಳಿಕೆ ಖಂಡಿಸಿ ಇದೀಗ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ. ಮಂಜುನಾಥ್ ತೇರದಾಳ್ ಎನ್ನುವವರಿಂದ ದೂರು ನೀಡಿದ್ದಾರೆ. ಅಜ್ಜಂಪೀರ್ ಖಾದ್ರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಜುನಾಥ್ ದೂರು ನೀಡಿದ್ದಾರೆ. ಅಜ್ಜಂಪೀರ್ ಖಾದ್ರಿ ಡಾ. ಅಂಬೇಡ್ಕರ್ ಅವರ ಚಾರಿತ್ರ ಹರಣ ಮಾಡಿದ್ದಾರೆ.ಖಾದ್ರಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.ಅಂಬೇಡ್ಕರ್ ಅವರು ಇಸ್ಲಾಂ ಧರ್ಮಕ್ಕೆ ಸೇರುತ್ತೇನೆ ಎಂದು ಹೇಳಿರಲಿಲ್ಲ. ಯಾವುದೇ ಆಧಾರವಿಲ್ಲದೆ ಹೇಳಿಕೆ ನೀಡಿದ ಅಜ್ಜಂಪೀರ್ ಖಾದ್ರಿ ವಿರುದ್ಧ ಕ್ರಮ ಕೈಗೊಳ್ಳಿ. ಎಂದು ಹಳೆ ಹುಬ್ಬಳ್ಳಿ ಠಾಣೆಗೆ ಮಂಜುನಾಥ ತೇರದಾಳ ದೂರು ನೀಡಿದ್ದಾರೆ.
ಶಿವಮೊಗ್ಗ : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಗುಚಿ 3 ಯುವಕರು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಿಗಂದೂರು ಸಮೀಪದ ಕಳಸವಳ್ಳಿಯಲ್ಲಿ ಇವತ್ತು ಘಟನೆ ಸಂಭವಿಸಿದೆ. ಹೌದು ಶರಾವತಿ ಹಿನ್ನೀರಿನಲ್ಲಿ ತೆಪ್ಪದಲ್ಲಿದ್ದ ಚೇತನ್ ಸಂದೀಪ್ ರಾಜು ಎನ್ನುವವರು ಕಣ್ಮರೆಯಾಗಿದ್ದಾರೆ. ಇವರು ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರದವರು ಎಂದು ತಿಳಿದು ಬಂದಿದೆ.ಈ ವೇಳೆ ಇನ್ನಿಬ್ಬರು ಯುವಕರು ದಡ ಸೇರಿದ್ದಾರೆ. ಇದೀಗ ಶರಾವತಿ ಹಿನ್ನೀರಿನಲ್ಲಿ ನಾಪತ್ತೆಯಾಗಿರುವ ಮೂವರು ಯುವಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ತೆಪ್ಪದಲ್ಲಿ ಒಟ್ಟು ಐವರು ಯುವಕರು ಪ್ರಯಾಣಿಸುತ್ತಿದ್ದರು. ಸದ್ಯ ಶರಾವತಿ ನೀರಿನಲ್ಲಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧಕಾರ್ಯ ಮುಂದುವರೆದಿದೆ. ಯುವಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಮೈಸೂರು : ನನ್ನ ಕಂಡರೆ ಬಿಜೆಪಿಯವರಿಗೆ ಹೊಟ್ಟೆ ಉರಿ. ಬಡವರ ಪರ ಕೆಲಸ ಮಾಡುತ್ತೇನೆ ಅಂತ ನನ್ನನ್ನು ಇಳಿಸಲು ಪ್ರಯತ್ನಿಸುತ್ತಿದ್ದಾರೆ. ನಾನು 40 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಸಚಿವ, ಡಿಸಿಎಂ, ಪ್ರತಿಪಕ್ಷ ನಾಯಕ, ಸಿಎಂ ಕೂಡ ಆಗಿದ್ದೇನೆ. ನನ್ನನ್ನು ಮುಟ್ಟಿದರೆ ನಮ್ಮ ಕರ್ನಾಟಕ ಜನ ಸುಮ್ಮನೆ ಬಿಡಲ್ಲ ಎಂದು ಪ್ರತಿಪಕ್ಷ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹೊರಳಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ಸಿನ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಫರ್ ನೀಡಿದರು ಆದರೆ ನಮ್ಮ ಶಾಸಕರು ಯಾವುದಕ್ಕೂ ಬಗ್ಗಲಿಲ್ಲ ಹೀಗಾಗಿ ನನ್ನ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹೊರಾಳಹಳ್ಳಿ ಗ್ರಾಮದಲ್ಲಿ ಬಿಜೆಪಿ ವಿರುದ್ಧ ಗಂಭೀರವಾದ ಆರೋಪ ಮಾಡಿದರು. ನಮ್ಮ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿಯವರು ಕಾಂಗ್ರೆಸ್ ಐವತ್ತು ಶಾಸಕರಿಗೆ 50 ಕೋಟಿ ರೂಪಾಯಿ ಆಫರ್…
ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ ಒಂದು ಡಿವೈಡರ್ ಏರಿದ ಘಟನೆ ಇಂದು ಶಿವಮೊಗ್ಗ ಜಿಲ್ಲೆಯ ಹೊಳೆ ಬಸ್ ನಿಲ್ದಾಣ ಬಳಿ ನಡೆದಿದೆ.ಅಪಘಾತದಿಂದ ಬಸ್ಸಿನ ಮುಖ್ಯದ್ವಾರ ಜಾಮ್ ಆಗಿದ್ದರಿಂದ ತುರ್ತು ಬಾಗಿಲು ಮೂಲಕ ಪ್ರಯಾಣಿಕರನ್ನು ಇಳಿಸಲಾಯಿತು. ಘಟನೆಯಿಂದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ ಮೇಲೆ ಏರಿದೆ. ಈ ವೇಳೆ ಬಸ್ಸಿನ ಮೇನ್ ಡೋರ್ ಜಾಮ್ ಆಗಿತ್ತು. ಹಾಗಾಗೆ ಬಾಗಿಲು ತೆಗೆಯಲು ಪ್ರಯಾಣಿಕರು ಪರದಾಡಿದ್ದಾರೆ. ಬಳಿಕ ತಕ್ಷಣ ಬಸ್ಸಿನ ತುರ್ತು ನಿರ್ಗಮನದ ಕಿಟಕಿಯಿಂದ ಪ್ರಯಾಣಿಕರು ಇಳಿದಿದ್ದಾರೆ. ಘಟನೆಯಲ್ಲಿ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಘಾತದಿಂದ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.














