Subscribe to Updates
Get the latest creative news from FooBar about art, design and business.
Author: kannadanewsnow05
Rain Alert : ಮುಂದಿನ 2 ದಿನಗಳ ಕಾಲ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು : ಮುಂದಿನ 2 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಭಾರೀ ಗಾಳಿ ಮತ್ತು ಮಳೆಯಾಗುವ ಸಾಧ್ಯತೆ ಇರುವುದರಿಂದ ನಾಗರಿಕರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಶಿವಮೊಗ್ಗ, ರಾಯಚೂರು, ಬೀದರ್, ಬೆಂಗಳೂರು (ನಗರ ಮತ್ತು ಗ್ರಾಮಾಂತರ), ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಚಿತ್ರದುರ್ಗ, ಹಾವೇರಿ, ಚಾಮರಾಜನಗರ, ಮೈಸೂರು, ಬಳ್ಳಾರಿ ಮತ್ತು ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಮಳೆ ಈಗಾಗಲೇ ಆರಂಭವಾಗಿದ್ದು, ನಗರದ ಉತ್ತರ ಮತ್ತು ಈಶಾನ್ಯ ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಭಾರೀ ಗಾಳಿ ಬೀಸುತ್ತಿರುವ ಕುರಿತು ವರದಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯೂ ಸುರಿದಿದೆ. ಅದೇ ರೀತಿ ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬಳ್ಳಾರಿ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಇಂದು ಮಧ್ಯಾಹ್ನ…
ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಗೃಹಲಕ್ಷ್ಮಿ ಯೋಜನೆಯ ಹಣ 2 ತಿಂಗಳ ಹಿಂದಿನ ಕಂತು ಜಮೆ ಆಗಿತ್ತು. ಆದರೆ ಇತ್ತೀಚಿನ 2 ಕಂತುಗಳ ಹಣ ಇನ್ನು ಜಮೆ ಆಗಿಲ್ಲ ಎಂಬುದು ಯಜಮಾನಿಯರ ಆರೋಪವಾಗಿದೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇನ್ನೊಂದು ವಾರ ಅಂದರೆ ಮಾರ್ಚ್ 31ರ ಬಳಿಕ 2 ಕಂತುಗಳ ಹಣ ಖಾತೆಗೆ ಜಮೆ ಆಗಲಿದೆ ಎಂದ್ ಸ್ಪಷ್ಟನೆ ನೀಡಿದ್ದಾರೆ. ಹೌದು ಈ ಕುರಿತು ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣವನ್ನು ಮಾರ್ಚ್ 31ರ ಬಳಿಕ ಅಂದರೆ ಇನ್ನೊಂದು ವಾರ ಬಿಟ್ಟು ಹಾಕಲಾಗುತ್ತದೆ. ಈಗಾಗಲೇ ಹಿಂದಿನ 2 ಕಂತುಗಳ ಹಣ ಖಾತೆಗೆ ಹಾಕಲಾಗಿದೆ. ಇನ್ನು ಉಳಿದ 2 ಕಂತುಗಳ ಹಣವನ್ನು ಮಾರ್ಚ್ 31 ರ ನಂತರ ಅಕೌಂಟಿಗೆ ಹಾಕಲಾಗುತ್ತದೆ ಎಂದು ಅವರು ಸ್ಪಷ್ಟನೆ ನೀಡಿದರು. ನಮ್ಮ ಸರ್ಕಾರದ ಅವಧಿಯಲ್ಲೆ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 2000 ರೂಪಾಯಿ ಹೆಚ್ಚಿಸಿದೆವು. ಅದಾದ ನಂತರ ಯಾವುದೇ…
ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಭೀಕರವಾದ ಕೊಲೆ ಆಗಿದ್ದು, ನಿರ್ಮಾಣ ಹಂತದ ಕಟ್ಟಡದಲ್ಲಿ ಉದ್ಯಮಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಿಜಿಎಸ್ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ.ಕೊಲೆಯಾದ ಉದ್ಯಮಿಯನ್ನು ಲೋಕನಾಥ್ ಸಿಂಗ್ (37) ಎಂದು ತಿಳಿದುಬಂದಿದೆ. ಈ ತಿಂಗಳಲ್ಲಿ ಕೊಲೆಯಾದ ಲೋಕನಾಥ್ ಸಿಂಗ್ ಗೆ ಮದುವೆ ನಿಶ್ಚಯವಾಗಿತ್ತು. ಆದರೆ ಇದೀಗ ದುಷ್ಕರ್ಮಿಗಳ ಕೈಯಿಂದ ಬರ್ಬರವಾಗಿ ಕೊಲೆಯಾಗಿದ್ದು, ಕೊಲೆಯಾದ ಬಳಿಕ ಲೋಕನಾಥ್ ಗನ್‌ಮ್ಯಾನ್ ನಾಪತ್ತೆಯಾಗಿದ್ದ. ನಂತರ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷನಾಗಿದ್ದಾನೆ. ಸದ್ಯ ಪೊಲೀಸರು ಈತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಚಿಕ್ಕಬಳ್ಳಾಪುರ : ಪ್ರವಾಸಿಗರ ಅಚ್ಚು ಮೆಚ್ಚಿನ ತಾಣವಾದ ನಂದಿ ಹಿಲ್ಸ್ ಎಂದೇ ಪ್ರಸಿದ್ಧವಾಗಿರುವ ನಂದಿ ಗಿರಿಧಾಮ ನಾಳೆಯಿಂದ 1 ತಿಂಗಳವರೆಗೆ ಅಂದರೆ ನಾಳೆಯಿಂದ ಮಾರ್ಚ್ 24 ರವರೆಗೆ ವರೆಗೆ 1 ತಿಂಗಳ ಕಾಲ ವಿಶ್ವವಿಖ್ಯಾತ ಪ್ರವಾಸಿತಾಣ ನಂದಿಗಿರಿಧಾಮ ಬಂದ್ ಇರಲಿದೆ.ಕಾರಣ ನಂದಿಗಿರಿಧಾಮದ ರಸ್ತೆ ನವೀಕರಣ ಕಾಮಗಾರಿ ಹಿನ್ನಲೆಯಲ್ಲಿ 1 ತಿಂಗಳು ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶ ಹೊರಡಿಸಿದ್ದಾರೆ. ಹೌದು ನಂದಿಗಿರಿಧಾಮದ ಅಂಕು ಡೊಂಕಿನ ರಸ್ತೆಗೆ ಡಾಂಬರೀಕರಣ ಮಾಡುವ ಸಲುವಾಗಿ ಮಾರ್ಚ್ 24 ರಿಂದ ಏಪ್ರಿಲ್ 25 ರವರೆಗೂ ಬರೋಬ್ಬರಿ 1 ತಿಂಗಳ ಕಾಲ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗುತ್ತಿದೆ. ಆದ್ರೆ ಪ್ರವಾಸಿಗರ ಹಿತದೃಷ್ಟಿಯಿಂದ ವೀಕೆಂಡ್ ಶುಕ್ರವಾರ ಸಂಜೆ 6-30 ರಿಂದ ಸೋಮವಾರ ಬೆಳಿಗ್ಗೆ 8 ಗಂಟೆಯವರೆಗೆ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ವೀಕೆಂಡ್ ನಲ್ಲಿ ಮಾತ್ರ ಅವಕಾಶ ವಾರಾಂತ್ಯದ ದಿನಗಳಲ್ಲಿ ಶುಕ್ರವಾರ ಸಂಜೆ 6:30ರಿಂದ ಸೋಮವಾರ ಬೆಳಿಗ್ಗೆ 08…
ಕಲಬುರ್ಗಿ : ಸ್ನೇಹಿತರ ಜೊತೆಗೆ ಕೃಷಿ ಹೊಂಡಕ್ಕೆ ಈಜಲು ತೆರಳಿದ್ದ SSLC ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಫ್ಜಲ್ಪುರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಅಫ್ಜಲ್ಪುರದ ಮಹಾಂತೇಶ್ವರ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಶ್ರೀಶೈಲ ನಿಲೆಗಾರ (16) ಶನಿವಾರ ಕೃಷಿ ಹೊಂಡದಲ್ಲಿ ಈಜಲು ಹೋಗಿ ಅವನು ಮೃತನಾಗಿದ್ದಾನೆ. ಈ ವೇಳೆ ಡಬ್ಬಿಗೆ ಕಟ್ಟಿರುವ ಹಗ್ಗ ಹರಿದು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಶ್ರೀಶೈಲ ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆ ಬರೆದಿದ್ದ.ಬಾಲಕನ ತಂದೆ ಪಾನಿಪುರಿ ವ್ಯಾಪಾರ ಮಾಡುತ್ತಿದ್ದರು.
ಚಿಕ್ಕಬಳ್ಳಾಪುರ : ಜಮೀನು ವಿವಾದದ ಹಿನ್ನೆಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸೊನಗನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಹೌದು 100ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿರುವ ದುಷ್ಕರ್ಮಿಗಳು, ಗ್ರಾಮದ ಗಂಗಮ್ಮಗೆ ಸೇರಿದ ತೋಟದಲ್ಲಿ ಈ ಒಂದು ಕೃತ್ಯ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸೊನಗನಹಳ್ಳಿ ಗ್ರಾಮದಲ್ಲಿ ಗಂಗಮ್ಮ ಎಂಬುವರಿಗೆ ಸೇರಿದ ತೋಟದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಡಿಕೆ ಮರಗಳನ್ನು ಬೆಳೆದಿದ್ದರು. ಜಮೀನು ವಿವಾದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಅಡಕೆ ಮರಗಳನ್ನು ನಾಶ ಮಾಡಿರುವ ಶಂಕೆ ವ್ಯಕ್ತವಾಗಿದೆ. ತಹಶೀಲ್ದಾರ್ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದಕ್ಕೆ ಈ ಒಂದು ಕೃತ್ಯ ಎಸಗಲಾಗಿದೆ ಎನ್ನಲಾಗಿದ್ದು, ಘಟನೆ ಕುರಿತು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಹಂಗಾಮದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭೇಟಿಯಾಗಿದ್ದಾರೆ.ಇಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಮಲ್ಲಿಕಾರ್ಜುನ್ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಭೇಟಿಯಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸುಮಾರು 45ಕ್ಕೂ ಹೆಚ್ಚು ನಿಮಿಷಗಳ ಕಾಲ ಸಿಎಂ ಸಿದ್ದರಾಮಯ್ಯ ಮಲ್ಲಿಕಾರ್ಜುನ ಖರ್ಗೆ ಮಾತುಕತೆ ನಡೆಸಿದ್ದಾರೆ. ಹನಿ ಟ್ರಾಪ್ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಎಂ ಸಿದ್ದರಾಮಯ್ಯ ಅವರು ನನ್ನ ನಿವಾಸಕ್ಕೆ ಬರುತ್ತೇನೆ ಅಂತ ಹೇಳಿದ್ದರು. ಅವರಿಗೆ ನಡೆಯಲು ಆಗದಿದ್ದಕ್ಕೆ ನಾನೇ ಅವರನ್ನು ಭೇಟಿಯಾದೆ ಸಿಎಂ ಸಿದ್ದರಾಮಯ್ಯ ಅವರನ್ನು ಸೌಜನ್ಯಯುತ ಭೇಟಿ ಮಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಯೋಗ ಕ್ಷೇಮ ಕೇಳೋದು ನಮ್ಮ ಕರ್ತವ್ಯ. ಆದಷ್ಟು ಇಂದ ಭೇಟಿ ಮಾಡಿದ್ದೇನೆ ಎಂದು ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ತುಮಕೂರು : ರಾಜ್ಯದಲ್ಲಿ ಸದ್ಯ ಹಾನಿ ಟ್ರ್ಯಾಪ್ ಭಾರಿ ಸುದ್ದಿಯಾಗುತ್ತಿದ್ದು, ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಶಾಸಕ ಯತ್ನಾಳ್ ಆರೋಪ ಮಾಡಿದ ಮೇಲೆ ಹಲವು ಬೆಳವಣಿಗೆ ನಡೆದಿದ್ದವು. ಇದೀಗ ಸಚಿವ ರಾಜಣ್ಣ ಪುತ್ರ ರಾಜೇಂದ್ರ ಅವರು ಸಹ ನನಗೂ ವೀಡಿಯೋ ಕಾಲ್ ಮೂಲಕ ಹನಿಟ್ರ‍್ಯಾಪ್ ಮಾಡಲು ಪ್ರಯತ್ನಿಸಿದ್ದರು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ತುಮಕೂರಲ್ಲಿ ಮಾತನಾಡಿದ ಅವರು, ಸಚಿವ ರಾಜಣ್ಣ ಅವರನ್ನ ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಲೇಡಿ ಸೇರಿ ಮೂರ್ನಾಲ್ಕು ಜನ ಪ್ರಯತ್ನ ಮಾಡಿದ್ದಾರೆ.ಈ ಬಗ್ಗೆ ಹೈಕಮಾಂಡ್‌ಗೆ ದೂರು ಕೊಡುತ್ತೇನೆ. 3-4 ದಿನ ಬಿಟ್ಟು ದೆಹಲಿಗೆ ಹೋಗಿ ಹೈಕಮಾಂಡ್‌ಗೆ ಹೇಳುತ್ತೇವೆ ಎಂದು ಅವರು ತಿಳಿಸಿದರು. ನನಗೂ ಫೋನ್ ಕಾಲ್ ಹಾಗೂ ವೀಡಿಯೋ ಕಾಲ್ ಮೂಲಕ ಟ್ರ‍್ಯಾಪ್ ಮಾಡಲು ಪ್ರಯತ್ನ ಮಾಡಿದ್ದರು. ಆ ಎಲ್ಲಾ ನಂಬರ್ ಹಾಗೂ ಕಾಲ್ ಡೀಟೆಲ್ಸ್ ನನ್ನ ಬಳಿ ಇದೆ. ಡಿಜಿಗೆ ಈ ಮೂಲಕ ದೂರು ಕೊಡುತ್ತೇನೆ. ಜೊತೆಗೆ ರಾಜಣ್ಣರಿಗೆ ಲೇಡಿ…
ತುಮಕೂರು : ತುಮಕೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಅರೆಸ್ಟ್ ಮಾಡಿದ್ದು, ಬಂಧಿತರಿಂದ 13 ಲಕ್ಷ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಮೈಸೂರಿನ ರಾಕೇಶ್, ಮಂಡ್ಯದ ಹರ್ಷ ಪಿ.ಜೆ. ಎಂದು ತಿಳಿದುಬಂದಿದೆ. ತುಮಕೂರು ನಗರದ ಗಾರ್ಡನ್ ರಸ್ತೆಯ ಟೂಡಾ ಲೇಔಟ್ನಲ್ಲಿ ಮಾರಾಟ ಮಾಡಲು ಆರೋಪಿಗಳು ಗಾಂಜಾ ಸಾಗಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಇದೀಗ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಚಾಮರಾಜನಗರ : ಚಾಮರಾಜನಗರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.ಮೊದಲನೇ ಅಪಘಾತ ಚಾಮರಾಜನಗರ ತಾಲೂಕಿನ ಹರದನಹಳ್ಳಿ, ಎರಡನೇ ಅಪಘಾತ ಗುಂಡ್ಲುಪೇಟೆಯಲ್ಲಿ ನಡೆದಿದೆ. ಮೊದಲನೇ ಅಪಘಾತ ಬೈಕ್ಗೆ ಈಚರ್ ವಾಹನ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದರುವ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಚಾಮರಾಜನಗರ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಅಭಿಷೇಕ್(23) ಹಾಗೂ ಅಭಿ(21) ಎನ್ನಲಾಗಿದೆ. ಮಾದೇಶ್(21) ಎಂಬಾತನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಮೈಸೂರಿಗೆ ರವಾನಿಸಲಾಗಿದೆ. ಎರಡನೇ ಅಪಘಾತವು ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಹಳ್ಳದಮಾದಹಳ್ಳಿ ಗೇಟ್ ಬಳಿ ನಡೆದಿದೆ. ರಾಘವಾಪುರ ಗ್ರಾಮದ ನಾಗಶೆಟ್ಟಿ(37) ಮೃತರು ಎಂದು ತಿಳಿದುಬಂದಿದೆ.ಬೈಕ್ನಲ್ಲಿ ಬೇಗೂರು ಕಡೆ ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಕಾರು ವಿದ್ಯುತ್ ಕಂಬಕ್ಕೆ ಗುದ್ದಿ ನಿಂತಿದೆ. ಕಾರು…














