Author: kannadanewsnow05

ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಕಲಬೆರಿಕೆ ಮತ್ತು ಕಳಪೆ ಗುಣಮಟ್ಟದ ಟೀ ಪೌಡರ್ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗಂಗಾವತಿ ಪಟ್ಟಣದಲ್ಲಿರುವ ಕಲಬೆರಿಕೆ ಮತ್ತು ಕಳಪೆ ಗುಣಮಟ್ಟದ ಟೀ ಪೌಡರ್ ಗೋದಾಮಿನ ಮೇಲೆ ಪೊಲೀಸರು ಹಾಗೂ ಟಿ ಸಿಬ್ಬಂದಿ ಕಂಪನಿಗಳು ದಾಳಿ ಮಾಡಿ ಪರಿಶೀಲಿಸಿದಾಗ ಈ ಒಂದು ವಿಚಾರ ಬೆಳಕಿಗೆ ಬಂದಿದೆ.  ವಿಷ್ಣುರಾಂ ಚೌದರಿ ಎಂಬಾತನಿಂದ ಕಲಬೆರಕೆ ಟೀ ಪೌಡರ್ ಮಾರಾಟ ಮಾಡುತ್ತಿದ್ದ. ಗೋದಾಮಿನಲ್ಲಿ ಪೊಲೀಸರು ಮತ್ತು ಖಾಸಗಿ ಟೀ ಕಂಪನಿ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದು, ಪರಿಶೀಲನೆ ಸಂದರ್ಭದಲ್ಲಿ ಅನಧಿಕೃತ ಕಲರ್ ಬಳಕೆ ಪತ್ತೆಯಾಗಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಕಳಪೆ ಗುಣಮಟ್ಟದ ಟೀ ಪೌಡರ್ ಪತ್ತೆಯಾಗಿದೆ. ಯಾವುದೇ ಪ್ರವಾದಿ ಪಡೆಯದೆ ಟೀ ಪೌಡರ್ ಮಾರಾಟ ಮಾಡುತ್ತಿದ್ದರು. ಬೇರೆ ರಾಜ್ಯದಿಂದ ಟೀ ಪೌಡರ್ ತಂದು ಕಲಬೆರಿಕೆ ಮಾಡಿ ಮಾರಾಟ ಮಾಡುತ್ತಿದ್ದರು. ಬೇರೆ ಕಂಪನಿಗಳ ಹೆಸರಿನಲ್ಲಿ ವಿಷ್ಣು ಚೌದರಿ ಮಾರಾಟ ಮಾಡುತ್ತಿದ್ದ ಕೆಲ ಕಂಪನಿಗಳ ಪೇಟೆ ಉಲ್ಲಂಘಿಸಿ…

Read More

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ಇದೀಗ ಲೋಕಾಯುಕ್ತ ವರದಿಯಲ್ಲಿ ಒಂದು ಹಗರಣಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಅಧಿಕಾರಿ ಸರ್ಚ್ ವಾರೆಂಟ್ ಹೊರಡಿಸಿದಾಗ ಡಿವೈಎಸ್ಪಿ ಮಾಲತೇಶ್ ಮುಡಾ ಕಚೇರಿಗೆ ಬಂದು 144 ಕಡತಗಳನ್ನು ತೆಗೆದುಕೊಂಡು ಹೋಗಿರುವ ವಿಚಾರವಾಗಿ, ವಿಪಕ್ಷ ನಾಯಕ ಆರ್. ಅಶೋಕ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಐಎಎಸ್ ಅಧಿಕಾರಿ ಫೈಲ್ ತಗೊಂಡು ಹೋಗಿದ್ದು ದಿಗ್ಭ್ರಮೆ ಮೂಡಿಸಿದೆ. ಬೈರತಿ ಸುರೇಶ್ ಇನ್ನು ಎಷ್ಟು ಫೈಲ್ಗಳನ್ನು ತಗೊಂಡು ಹೋದರೋ ಗೊತ್ತಿಲ್ಲ. ಅದಕ್ಕೂ ಮುಂಚೆ ಅಧಿಕಾರಿ ಮುಡಾ ಫೈಲ್ ತೆಗೆದುಕೊಂಡು ಹೋಗಿದ್ದಾರೆ. ರಾಜ್ಯದಲ್ಲಿ ಆಡಳಿತ ಯಾವ ಮಟ್ಟಕ್ಕೆ ಬಂದಿದೆ ಅಂತ ನೋಡಿ. ಮುಡಾ ಅಕ್ರಮ ರಕ್ಷಣೆಗೆ ಅಧಿಕಾರಿಗಳೇ ಮುಂದಾಗಿರುವುದು ಸರಿಯಲ್ಲ. ಈ ಪ್ರಕರಣ ಸಿಬಿಐ ತನಿಖೆಗೆ ಕೊಡಬೇಕು ಅಂತ ಆಗ್ರಹಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಗ್ರಹಿಸಿದರು. ಉಪಚುನಾವಣಾ ಫಲಿತಾಂಶ ಪಕ್ಷದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ. ನಮ್ಮ ಸರ್ಕಾರ ಇದ್ದಾಗ 18 ಕ್ಷೇತ್ರಗಳ ಉಪಚುನಾವಣೆಯಲ್ಲಿ…

Read More

ಮೈಸೂರು : ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಮೂವರು ಅಧಿಕಾರಿಗಳ ವಿರುದ್ಧ ಇದೀಗ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯ ತಹಶೀಲ್ದಾರ್ ಶ್ರೀನಿವಾಸ್, ಅಂತರಸಂತೆ ನಾಡಕಚೇರಿ ರೆವೆನ್ಯೂ ಇನ್ಸ್ಪೆಕ್ಟರ್ ಗೋವಿಂದರಾಜು, ಹಾಗೂ ಎನ್ ಬೆಳ್ತೂರು ಗ್ರಾಮಲೆಕ್ಕಿಗ ನಾಗರಾಜು ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಬಿ ವಿ ಮಮತಾ ಕುಮಾರಿ ಎಂಬುವವರ ಬಳಿ 50,000 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಗುಂಡತ್ತೂರು ಗ್ರಾಮದ ಸರ್ವೆ ನಂಬರ್ 10ರ 5 ಎಕರೆ 1 ಗುಂಟೆ ಭೂಮಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಆದೇಶ ಉಲ್ಲಂಘಿಸಿ ಅಧಿಕಾರಿಗಳು ಆಸ್ತಿಯನ್ನು ಪರಭಾರೆ ಮಾಡಿದ್ದರು. ಆಸ್ತಿ ಹಂಚಿಕೆ ಮಾಡಿ ಮಾರಾಟ ಮಾಡಲು ಅನುವು ಮಾಡಿಕೊಟ್ಟಿದ್ದರು. ಬಳಿಕ ಹಿಂದಿನಂತೆ ದಾಖಲೆ ಯಥಾ ಸ್ಥಿತಿ ಕಾಪಾಡಿಕೊಳ್ಳಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ನಡುವೆ ಮೊದಲ ಹಂತವಾಗಿ 5000 ಫೋನ್ ಮೂಲಕ ಲಂಚ ಪಡೆದುಕೊಂಡಿದ್ದರು. ಲಂಚ ಸ್ವೀಕರಿಸುವ ವೇಳೆ ಮೂವರು ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಗಿ ಬಿದ್ದಿದ್ದಾರೆ.

Read More

ರಾಯಚೂರು : ಸಹೋದರರ ನಡುವೆ ಆಸ್ತಿ ವಿಚಾರಕ್ಕೆ ಗಲಾಟೆ ನಡೆದಿದ್ದು ಸಹೋದರರ ಕಿರುಕುಳಕ್ಕೆ  ಬೇಸತ್ತ, ರಾಯಚೂರು ಜಿಲ್ಲಾ ರೈತ ಅಧ್ಯಕ್ಷ ವಿಷ ಸೇವಿಸಿ ಆತ್ಮಹತ್ಯೆಗೆ ಯತಿಸಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ  ನಡೆದಿದೆ. ಹೌದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಗುಂಟೆ ಬಳಿ ಈ ಒಂದು ಘಟನೆ ನಡೆದಿದೆ. ರಾಯಚೂರು ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಪುತ್ರಪ್ಪ (42) ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ಗಲಾಟೆಯಾಗಿತ್ತು. ಸಹೋದರ ಕಿರುಕುಳಕ್ಕೆ ಬೇಸತ್ತು ಶಿವಪುತ್ರಪ್ಪ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಇದೀಗ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶಿವಪುತ್ರಪ್ಪಗೆ ಚಿಕಿತ್ಸೆ ನೀಡಲಾಗುತ್ತಿದೆ.ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಗರಣಗಳ ಮೇಲೆ ಹಗರಣಗಳು ನಡೆಯುತ್ತಲೇ ಇವೆ. ಇದೀಗ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಒಟ್ಟು 1.15 ಲಕ್ಷ ನೌಕರರ 2 ಸಾವಿರ ಕೋಟಿಗೂ ಅಧಿಕ ಪಿ ಎಫ್ ಹಣವನ್ನು ನಿಗಮದ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಹೌದು 1.15 ಲಕ್ಷ ಸಾರಿಗೆ ನೌಕರರಿಗೆ ಇದೀಗ ಬಿಗ್ ಶಾಕ್ ಎದುರಾಗಿದ್ದು, ಸಾರಿಗೆ ಸಿಬ್ಬಂದಿಯ ಪಿಎಫ್ ಹಣವನ್ನು ನಿಗಮದ ಅಧಿಕಾರಿಗಳು ನುಂಗಿ ನೀರು ಕುಡಿದರಾ? ಎನ್ನುವ ಅನುಮಾನ ಮೂಡಿದೆ. ಸಾರಿಗೆ ಸಂಸ್ಥೆಯಯಲ್ಲಿನ ಡ್ರೈವರ್ ಮತ್ತು ಕಂಡಕ್ಟರ್ಗಳ ಪಿಎಫ್ ಹಣವನ್ನು ಇದೀಗ ಅಧಿಕಾರಿಗಳು ನುಂಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. 4 ನಿಗಮಗಳ ಅಧಿಕಾರಿಗಳಿಂದ ಸಿಬ್ಬಂದಿಗಳ ಪಿಎಫ್ ಹಣ ದುರ್ಬಳಕೆಯಾಗಿದೆ. ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಸೇರಿ ಒಟ್ಟು 4 ನಿಗಮದ ನೌಕರರ ಹಣವನ್ನು ನಿಗಮದ ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ನಿಗಮದ ನೌಕರರ 2792.61 ಕೋಟಿ ಹಣ ನುಂಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಮೇಲಿಂದ ಮೇಲೆ ರೋಡ್ ರೇಸ್ ಪ್ರಕರಣಗಳ ಸಂಖ್ಯೆ ಹೆಚ್ಚು ತಲೆ ಇವೆ ಇದೀಗ ಬೆಂಗಳೂರಿನ ಎಂಟನೇ ಮೈಲಿಯಲ್ಲಿ  ಪವರ್ ಟೆಕ್ ವಿಚಾರವಾಗಿ ವಿದ್ಯಾರ್ಥಿಗಳ ಚಲಿಸುತ್ತಿದ್ದ ಕಾರು ಹಾಗೂ ಒಂದು ಕುಟುಂಬ ಚಲಿಸುತ್ತಿದ್ದ ಕಾರಿನವರ ಮಧ್ಯ ಹೊಡೆದಾಟ ನಡೆದಿದೆ. ಹೌದು ಬೆಂಗಳೂರಿನಲ್ಲಿ ಮತ್ತೆ ರೋಡ್ ರೇಜ್ ಪ್ರಕರಣ ನಡೆದಿದ್ದು,  ಓವರ್ಟೇಕ್ ವಿಷಯದಲ್ಲಿ ಎರಡು ಕಾರಿನ ಮಧ್ಯ ಬಡಿದಾಟ ನಡೆದಿದೆ. 8ನೇ ಮೈಲಿಯ ನವಯುಗ ಟೋಲ್ ನಲ್ಲಿ ಈ ಒಂದು ಘಟನೆ ನಡೆದಿದೆ. ಕಾರು ಪ್ರಾಯಾಣಿಕರ ಗಲಾಟೆ ದೃಶ್ಯ ಇದೀಗ ಮೊಬೈಲ್ನಲ್ಲಿ ಸೆರೆಯಾಗಿದೆ. ಒಂದು ಕಾರಿನಲ್ಲಿ ಕೇರಳದ ಕಾಲೇಜು ವಿದ್ಯಾರ್ಥಿಗಳು ಇದ್ದರು. I-20 ಕಾರಿನಲ್ಲಿದ್ದ ಮೂವರು ವಿದ್ಯಾರ್ಥಿಗಳು ಇದ್ದರು ಇನ್ನು ಇನ್ನೊಂದು ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಕುಟುಂಬ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಮತ್ತೊಂದು ಕಾರಿನಲ್ಲಿ ಇದ್ದ ಕುಟುಂಬ ಗಲಾಟೆ ಮಾಡಿದೆ. ವಿದ್ಯಾರ್ಥಿಗಳ ಕಾರನ್ನು ಬೆನ್ನಟ್ಟಿ ಟೋಲ್ ಬಳಿಗೆ ಹೊಡೆದಾಟ ನಡೆದಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ನ ಬಾತ್ರೂಮ್ ನಲ್ಲಿ ಇಟ್ಟಿಗೆ ಒಂದಕ್ಕೆ ನೇಣು ಬಿಗಿದುಕೊಂಡು ಕಾರ್ಪೆಂಟರ್ ಒಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೋರಮಂಗಲದ ಠಾಣೆಯ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಕಾರ್ಪೆಂಟರ್ ಅನ್ನು ಉಡುಪಿ ಜಿಲ್ಲೆಯ ಮುಲ್ಕಿಯ ಜಯರಾಮ್ (40) ಎಂದು ತಿಳಿದುಬಂದಿದೆ. ಇತ್ತೀಚಿಗೆ ಜಯರಾಮ್ ಅವರ ಚಿಕ್ಕಮ್ಮ ವಯೋ ಸಹಜ ಕಾಯಿಲೆಯಿಂದ ಮರತ ಪಟ್ಟಿದ್ದರು ಇದರಿಂದ ಮನನೊಂದ ಜಯರಾಮ ಮದ್ಯ ವ್ಯಸನಿಯಾಗಿದ್ದರು. ಬಳಿಕ ಜಯರಾಮ್ ಸಹೋದರ ವಾಸುದೇವ್, ಮಧ್ಯದ ಚಟ ಬಿಡಿಸಿ ಉಡುಪಿಯಿಂದ ಬೆಂಗಳೂರಿಗೆ ಕೆಲಸಕ್ಕೆ ಕರೆದುಕೊಂಡು ಬಂದಿದ್ದರು. ಬೆಂಗಳೂರಿನ ಕೋರಮಂಗಲದ ಖಾಸಗಿ ಹೋಟೆಲ್ನಲ್ಲಿ ಜಯರಾಮ್ ಸಹೋದರ ವಾಸುದೇವ ಸೇರಿದಂತೆ ಇತರೆ ಇಬ್ಬರು ತಂಗಿದ್ದರು. ರಾತ್ರಿ ಊಟ ಮಾಡಿದ ಬಳಿಕ ಎಲ್ಲರೂ ಮಲಗಿದ್ದಾಗ ಜಯರಾಮ್ ಬಾತ್ರೂಮ್ ಗೆ ಹೋಗಿ ಕೆಟಕಿಗೆ ನೀನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮುಂಜಾನೆ ಸಹೋದರ ವಾಸುದೇವ್‌, ಬಾತ್‌ರೂಮ್‌ ಬಾಗಿಲು ಒಡಿದರೂ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು…

Read More

ಉತ್ತರಪ್ರದೇಶ : ಕೆಲವೊಂದು ಬಾರಿ ನಾವು ನೋಡದಿರುವಂತಹ ಸ್ಥಳಗಳಿಗೆ ತೆರಳಲು ಸಹಜವಾಗಿ ಗೂಗಲ್ ಮ್ಯಾಪ್ ಮೇಲೆ ಅವಲಂಬಿತರಾಗುತ್ತೇವೆ. ಆದರೆ ಗೂಗಲ್ ಮ್ಯಾಪ್ ನಂಬಿ ಅದೆಷ್ಟೋ ಅವಘಡಗಳು ಸಂಬಂಧಿಸಿದ್ದು, ಇದೀಗ ಉತ್ತರ ಪ್ರದೇಶದಲ್ಲಿ ಇದೆ ಒಂದು ಗೂಗಲ್ ಮ್ಯಾಪ್ ನಂಬಿ ಮದುವೆಗೆ ಎಂದು ಹೊರಟಿದ್ದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಖಲ್ಪುರ್‌-ದಾತ್‌ಗಂಜ್‌ ಪ್ರದೇಶದಲ್ಲಿ ನಡೆದಿದೆ. ಹೌದು ಉತ್ತರ ಪ್ರದೇಶದ ಬರೇಲಿಯಲ್ಲಿ ಗೂಗಲ್‌ ಮ್ಯಾಪ್ಸ್‌ನಲ್ಲಿನ ಎಡವಟ್ಟಿನ ಕಾರಣದಿಂದ ಭಾರೀ ದುರಂತ ಸಂಭವಿಸಿದೆ. ಮದುವೆ ಮನೆಗೆ ರೀಚ್‌ ಆಗಲು ವ್ಯಕ್ತಿಗಳು ಗೂಗಲ್‌ ಮ್ಯಾಪ್ಸ್‌ ನೆಚ್ಚಿಕೊಂಡಿದ್ದರು. ಆದರೆ, ಗೂಗಲ್‌ ಮ್ಯಾಪ್‌ ಕಾಮಗಾರಿ ನಡೆಯುತ್ತಿದ್ದ ಬ್ರಿಜ್‌ಅನ್ನು ದಾರಿಯಾಗಿ ತೋರಿಸಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಸಾಗಿದ ಕಾರು, ನದಿಗೆ ಉರುಳಿ ಬಿದ್ದು ಮೂವರು ಸಾವು ಕಂಡಿರುವ ಘಟನೆ ನಡೆದಿದೆ. ಬೆಳಗ್ಗೆ 10 ಗಂಟೆಯ ವೇಳೆಗೆ ಖಲ್ಪುರ್‌-ದಾತ್‌ಗಂಜ್‌ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದ್ದ ಸೇತುವೆಯ ಮಾಹಿತಿ ತಿಳಿಯದೇ ವಾಗವಾಗಿ ಚಲಿಸಿದೆ. ಈ ವೇಳೆ ಕಾರು ರಾಮ್‌ಗಂಗಾ ನದಿಗೆ ಉರುಳಿ ಬಿದ್ದಿದ್ದು ಪ್ರಯಾಣ…

Read More

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಲೋಕಾಯುಕ್ತ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಭೂ ಮಾಲೀಕ ದೇವರಾಜು ಒಳಗೊಂಡಂತೆ ಅನೇಕರನ್ನು ವಿಚಾರಣೆಗೆ ಒಳಪಡಿಸಿದೆ. ಈ ನೆಲೆಯಲ್ಲಿ ಇಂದು ಹೈಕೋರ್ಟ್ ಗೆ ಲೋಕಾಯುಕ್ತ ಅಧಿಕಾರಿಗಳುತನಿಖಾ ವರದಿಯನ್ನು ಸಲ್ಲಿಸಲಿದ್ದರೆ. ಇದೆ ವೇಳೆ ಮುಡಾ ಹಗರಣವನ್ನು ಸಿಬಿಐಗೆ ವಹಿಸುವಂತೆ ಅರ್ಜಿ ಸಲ್ಲಿಸಲಾಗಿದ್ದು, ನಾಳೆ ಹೈಕೋರ್ಟ್ ನಲ್ಲಿ ಈ ಒಂದು ಅರ್ಜಿಯ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಕೋರ್ಟ್ ಗೆ ಮಧ್ಯಂತರ ವರದಿ ಸಲ್ಲಿಕೆ ಮಾಡಲಾಗುತ್ತದೆ.ಲೋಕಾಯುಕ್ತ ಪೊಲೀಸರು ಮಧ್ಯಂತರ ಪ್ರಗತಿಯ ತನಿಖಾ ವರದಿ ಸಲ್ಲಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರಭಾವದ ಬಗ್ಗೆ ಲೋಕಯುಕ್ತ ಅಧಿಕಾರಿಗಳು ಇದೀಗ ತನಿಖೆ ನಡೆಸಿದ್ದಾರೆ. ಸಿಎಂ ಪತ್ನಿ ಪಾರ್ವತಿ ಅವರು ಪಡೆದಿರುವ 14 ಸೈಟ್ಗಳ ಬಗ್ಗೆ ಕೂಡ ತನಿಖೆ ನಡೆಸಿದ್ದಾರೆ. ತನಿಖೆ ಸಂಬಂಧ ಇದುವರೆಗೆ ಸಿದ್ದರಾಮಯ್ಯ ಅವರನ್ನು ಕೂಡ ವಿಚಾರಣೆgs ಒಳಪಡಿಸಿದ್ದಾರೆ. ಹಾಗಾಗಿ ಮಧ್ಯಂತರ ತನಿಖಾ ಪ್ರಗತಿಯ ವರದಿಯನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

Read More

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇತ್ತೀಚಿಗೆ ವಿವಾದಗಳಿಂದಲೇ ಸುದ್ದಿ ಯಾಗುತ್ತಿರುವುದು ಹೆಚ್ಚಾಗುತ್ತಿದೆ. ಈ ನಡುವೆ ಸಹಾಯವಾಣಿ 080-23460460ಗೆ ಕರೆ ಮಾಡಿದರೆ ಯಾವುದೇ ಸಂಪರ್ಕಸಾಧಿಸಲು ಸಾಧ್ಯವಾಗುತಿಲ್ಲ ಎನ್ನುವ ಆರೋಪವನ್ನು ಅನೇಕ ಮಂದಿ ಹೇಳುತ್ತಿದ್ದಾರೆ. ಇದಲ್ಲದೆ ಕ್ಯೂ ನಂಬರ್‌ ಒಂದಕ್ಕೆ ಕರೆ ಬಂದ ಕೂಡಲೇ ಕಾಲ್‌ ಡ್ರಾಪ್‌ ಆಗುತ್ತಿದ್ದು, ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೈತಿಕತೆಯನ್ನು ಪ್ರಶ್ನೆ ಮಾಡುವಂತಿದೆ. ಇನ್ನೂ KEA ಅಧಿಕೃತ ವೆಬ್‌ಸೈಟ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ, ಆಡಳಿತಾಧಿಕಾರಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ, ಸಾರ್ವಜನಿಕ ಸಂಪರ್ಕಾಧಿಕಾರಿ , ಕರ್ನಾಟಕ ಪರೀಕ್ಷಾ ಪ್ರಾಧಿಕಾರ. ನಂಬರ್‌ಗಳು ಕೂಡ ಒಂದೇ ನಂಬರ್‌ ಅನ್ನು ಉಲ್ಲೇಖ ಮಾಡಿದ್ದು, ಬೇರೆ ನಂಬರ್‌ಗಳನ್ನು ಯಾಕೆ ನೀಡಿಲ್ಲ ಎನ್ನುವುದು ಈಗ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ KEA ಜನಪರವಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದು ಈಗ ಅನುಮಾನ ಮೂಡಿಸಿದೆ.

Read More