Subscribe to Updates
Get the latest creative news from FooBar about art, design and business.
Author: kannadanewsnow05
ಕಲಬುರ್ಗಿ : ಭೋವಿ ನಿಗಮದಲ್ಲಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ನಗರದ ತಮ್ಮ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಮಾತನಾಡಿದ MLC ಸುನೀಲ್ ವಲ್ಯಾಪುರೆ ಅವರು, ಈ ಪ್ರಕರಣದಲ್ಲಿ ನಮ್ಮದೇನೂ ಪಾತ್ರ ಇಲ್ಲ ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಮ್ಮದೇನೂ ಪಾತ್ರ ಇಲ್ಲ. ನಮ್ಮ ಮನೆಯಲ್ಲಿ ಏನಾದ್ರು ಸಿಗಬಹುದು ಅಂತ ನನ್ನ ಮನೆಯಲ್ಲಿ ಸರ್ಚ್ ಮಾಡ್ತಿದ್ದಾರೆ. ಇಲ್ಲೇನ್ ಬದನೇಕಾಯಿಯೂ ಸಿಗಲ್ಲ. ಸಿಐಡಿ ಅಧಿಕಾರಿಗಳು ಸರ್ಚ್ ಮಾಡ್ತಿದ್ದಾರೆ ನಾನು ಅವರಿಗೆ ಸಹಕಾರ ನೀಡುತ್ತೇನೆ. ಅಧಿಕಾರಿಗಳು ಅವರ ಕೆಲಸ ಮಾಡ್ತಿದ್ದಾರೆ ಎಂದು ತಿಳಿಸಿದರು. ಭೋವಿ ನಿಗಮದಲ್ಲಿ ಅವ್ಯವಹಾರ ಆಗಿದೆ ಅಂತ ನಾನೇ ಧ್ವನಿ ಎತ್ತಿದ್ದೆ. ಕಳೆದ ವಿಧಾನ ಪರಿಷತ್ ಅಧಿವೇಶನದಲ್ಲಿ ಭೋವಿ ನಿಗಮದಲ್ಲಿ ಅವ್ಯವಹಾರ ಆಗಿದೆ ಅಂತ ಪ್ರಸ್ತಾವನೆ ಸಲ್ಲಿಸಿ ಮಾತನಾಡಿದ್ದೆ. ಈ ಹಗರಣದಲ್ಲಿ ಕೆಲವು ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ. ಅವರೇ ನನ್ನ ಮೇಲೆ ಗೂಬೆ ಕುರಿಸಲು ಈ ರೀತಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರು : ನವೆಂಬರ್ 13ರಂದು ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅದರಲ್ಲೂ ತೀವ್ರ ಚುನಾವಣಾ ರಂಗೇರಿದ್ದು, ಚನ್ನಪಟ್ಟಣ ಕ್ಷೇತ್ರ ಎಂದು ಹೇಳಲಾಗುತ್ತಿದೆ. ಈ ಒಂದು ಉಪಚುನಾವಣೆ ಕುರಿತಾಗಿ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಖಾಸಗಿ ಕಾಲೇಜಿನಲ್ಲಿ ಸಭೆ ನಡೆಯಿತು. ಸಭೆಯ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಭೆಯಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಅಂತ ಹೇಳಿದ್ದೇನೆ. ಬೆಂಗಳೂರಿನಲ್ಲಿ ಸಭೆಯ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಪಕ್ಷದಿಂದ ಯಾರೇ ಸ್ಪರ್ಧಿಸಲಿ ಅದನ್ನು ನೋಡೋಕೆ ಹೋಗಬೇಡಿ. ಜೆಡಿಎಸ್ ನವರು ಸೀಟು ಬಿಟ್ಟು ಕೊಡುತ್ತಿದ್ದಾರೆಂದು ಯಾರೋ ಹೇಳಿದರು. ಸಭೆಯಲ್ಲಿದ್ದಾಗ ಯಾರೋ ಫೋನ್ ಕರೆ ಮಾಡಿ ನನಗೆ ಹೇಳಿದರು. ನಿನ್ನೆ ರಾತ್ರಿ ಎಲ್ಲಾ ಸಭೆಯ ಮೇಲೆ ಸಭೆ ಮಾಡಿದ್ದಾರೆ. ಅಷ್ಟು ವೀಕ್ ಆಗ್ತಾರೆ ಅಂತ ತಿಳಿದುಕೊಂಡಿರಲಿಲ್ಲ. ನೋಡೋಣ, ಫೈಟ್ ಮಾಡ್ತಾರೆ ಅಂತ ಅಂದುಕೊಂಡಿದ್ದೆ ಆದರೆ ಬಿಟ್ಟುಕೊಡುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಮುಖಂಡರ ಅಭಿಪ್ರಾಯವನ್ನು ಕೇಳಿದ್ದೇನೆ. ಸೇವೆ ಮಾಡುವ ಸಲುವಾಗಿ ನಾನು…
ರಾಯಚೂರು : ಕಾಲೇಜು ಫೀಸ್ ಕಟ್ಟಲು ವಿಳಂಬವಾಗಿದಕ್ಕೆ ಆಡಳಿತ ಮಂಡಳಿಯ ಅಧಿಕಾರಿಗಳು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ ಇದರಿಂದ ಬೇಸತ್ತ ವಿದ್ಯಾರ್ಥಿನಿಯು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಹೌದು ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಈ ಒಂದು ಘಟನೆ ನಡೆದಿದೆ. ಫೀಸ್ ಕಟ್ಟಲು ವಿಳಂಬವಾಗಿದ್ದಕ್ಕೆ ಬಡ್ಡಿ ಕಟ್ಟಲು ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಆಡಳಿತಾಧಿಕಾರಿ ಉಮಾಶಂಕರ್ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಾನ್ವಿಯ KPSVS ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಈ ಒಂದು ಘಟನೆ ನಡೆದಿದೆ.ಫೀಸ್ ಕಟ್ಟಲು ವಿಳಂಬವಾದರೆ ಬಡ್ಡಿ ಕಟ್ಟುವಂತೆ ಆಡಳಿತಾಧಿಕಾರಿ ಉಮಾಶಂಕರ್ ವಿರುದ್ಧ ಆರೋಪ ಕೇಳಿ ಬಂದಿದೆ. ಬಯೋಮೆಟ್ರಿಕ್ ನೀಡದೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಅಲ್ಲದೆ ಕೆಟ್ಟದಾಗಿ ನಿಂದಿಸಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಆಡಳಿತಾಧಿಕಾರಿ ಉಮಾಶಂಕರ ವಿರುದ್ಧ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈ ಒಂದು ವಿಚಾರ ತಿಳಿದು ವಿದ್ಯಾರ್ಥಿನಿಯರ ಪೋಷಕರು ಕಾಲೇಜಿಗೆ ಬಂದಿದ್ದಾರೆ. ಆಂಧ್ರ ಮಹಾರಾಷ್ಟ್ರ ಹಾಗೂ…
ಕೊಡಗು : ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಾದ ಹರಿಪ್ರಸಾದ್ ಹಾಗೂ ಅಜಯನಿಗೆ ಜೀವಾವಧಿ ಶಿಕ್ಷೆ ನೀಡಿ ಕೊಡಗು ಜಿಲ್ಲಾ 1ನೇ ಹೆಚ್ಚುವರಿ ಸೆಷನ್ ಕೋರ್ಟ್ ತೀರ್ಪು ನೀಡಿದೆ.ಅಪರಾಧಿಗಳಿಗೆ ಜಡ್ಜ್ ಪ್ರಶಾಂತಿ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ. 2019ರ ಮಾರ್ಚ್ 19 ರಂದು ತಾಳತ್ಮನೆ ಎಂಬಲ್ಲಿ ಈ ಒಂದು ಕೊಲೆ ನಡೆದಿತ್ತು. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಾಳತ್ಮನೆ ಪ್ರದೇಶದಲ್ಲಿ ಈ ಒಂದು ಹತ್ಯೆ ನಡೆದಿತ್ತು. ಲಾರಿ ಅಪಘಾತ ಮಾಡಿ ಬಾಲಚಂದ್ರ ಕಳಗಿ ಅವರನ್ನು ಕೊಲೆ ಮಾಡಿದ್ದರು. ಇದೀಗ ಈ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಬೆಳಗಾವಿ : ಇದೇ ಅಕ್ಟೋಬರ್ 23 ರಿಂದ 25 ರವರೆಗೆ ಮೂರು ದಿನಗಳ ಕಾಲ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಕಿತ್ತೂರು ಉತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಬಾಬಾ ಸಾಹೇಬ್ ಪಾಟೀಲ್ ಅವರು ದಿನಾಂಕ ಘೋಷಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ 5 ಕೋಟಿ ರೂ ಅನುದಾನ ನೀಡಿದೆ. ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ.ಕಿತ್ತೂರು ರಾಣಿ ಚೆನ್ನಮ್ಮರ 200ನೇ ವಿಜಯೋತ್ಸವ ಕಾರ್ಯಕ್ರಮ ಕೂಡ ಮಾಡುತ್ತೇವೆ. ಅ.25ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಬಾರಿಯ ಕಿತ್ತೂರು ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಅದರಲ್ಲೂ ಉತ್ಸವದ ವೇಳೆ ಮಹಿಳೆಯರಿಗೆ ವಿಶೇಷ ಕ್ರೀಡೆಗಳನ್ನು ಆಯೋಜಿಸಿದ್ದೇವೆ. ಅ.22ರ ಸಂಜೆ ಬೆಳಗಾವಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನು ಸಮಾರೋಪ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ…
ಮಂಡ್ಯ : 2028 ರ ವರೆಗೆ ಈ ಸರ್ಕಾರ ನಡೆಯುವುದು ಬಹಳ ಕಷ್ಟ. ಸರ್ಕಾರವನ್ನು ನಾವೇ ಕೆಡುವುತ್ತೇವೆ ಅಂತ ನಾನು ಹೇಳುವುದಿಲ್ಲ. ಆದರೆ ಈ ಒಂದು ಸರ್ಕಾರದಿಂದ ಜನರು ಬೇಸತ್ತು ಹೋಗಿದ್ದಾರೆ. ಹಾಗಾಗಿ ಜನರೇ ತೀರ್ಮಾನಿಸುತ್ತಾರೆ. ಜನ ಬಯಸಿದರೆ ಮತ್ತೆ ಯಾಕೆ ನಾನು ಸಿಎಂ ಆಗಬಾರದು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ಬಿಚ್ಚಿಟ್ಟಿದ್ದಾರೆ. ಮಂಡ್ಯದಲ್ಲಿ ಉದ್ಯೋಗ ಮೇಳ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲೇ ಸಚಿವರು ಮತ್ತು ಶಾಸಕರಗಳ ನಡುವೆ ಅಸಮಾಧಾನ ಸ್ಪೋಟವಾಗಿದೆ. ಅದು ಇನ್ನೂ ಹೊರ ಬಿದ್ದಿಲ್ಲ. ಅದು ಯಾವಾಗ ಸ್ಪೋಟಗೊಳ್ಳುತ್ತದೆ ಅವಾಗ ಸರ್ಕಾರ ಬೀಳಲಿದೆ. ಸರ್ಕಾರದ ನಿಷ್ಕ್ರಿಯತೆ ಹಾಗೂ ಹಳ್ಳಿಗಳಿಗೆ ಶಾಸಕರು ಭೇಟಿ ಮಾಡದೆ ಇರುವಂತಹ ವಾತಾವರಣ ನಿರ್ಮಾಣವಾಗಿದೆ. ಹಲವಾರು ಜನ ಕಾಂಗ್ರೆಸ್ ಶಾಸಕರು ಸರ್ಕಾರದ ನಡವಳಿಕೆಯ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.2028 ರ ವರೆಗೆ ಈ ಸರ್ಕಾರ ಇರುವುದಿಲ್ಲ. ಮತ್ತೆ ನಾನೇ ಈ ರಾಜ್ಯದ ಸಿಎಂ ಆಗ್ತೀನಿ ಜನ…
ಹುಬ್ಬಳ್ಳಿ : ಚುನಾವಣೆಗೆ ಟಿಕೇಟ್ ಕೊಡಿಸುವುದಾಗಿ ಕೋಟಿ ಕೋಟಿ ಹಣ ಪಡೆದು ವಂಚನೆ ಮಾಡಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ, ಸಹೋದರಿ ವಿರುದ್ಧ ಆರೋಪ ಕೇಳಿ ಬಂದಿದೆ.ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸರು ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಅವರನ್ನು ಬಂಧಿಸಿದ್ದಾರೆ. ಈ ಕುರಿತು ಪ್ರಹ್ಲಾದ್ ಜೋಶಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಸಹೋದರನ ವಿರುದ್ಧ ಆರೋಪ ಬಂದಿದೆ. ನಾನು ಗೋಪಾಲ್ ಬೇರೆಯಾಗಿ 35 ವರ್ಷವಾಗಿದೆ. ನನ್ನ ಮತ್ತು ಗೋಪಾಲ್ ಮಧ್ಯೆ ಯಾವುದೇ ವ್ಯವಹಾರ ಇಲ್ಲ.ಗೋಪಾಲ ಜೋಶಿ ನನ್ನ ಸಹೋದರನಾಗಿದ್ದರೂ, ಅವರಿಂದ ನಾನು ಬೇರೆಯಾಗಿ 35 ವರ್ಷವಾಗಿದೆ. ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧ ಉಳಿದಿಲ್ಲ. ತಪ್ಪು ಮಾಡಿದವರ ವಿರುದ್ಧ ಧಾರಾಳವಾಗಿ ಕಠಿಣ ಶಿಕ್ಷೆ ಕೈಗೊಳ್ಳಬಹುದು ಎಂದು ಜೋಶಿ ಸ್ಪಷ್ಟನೆ ನೀಡಿದ್ದಾರೆ. ನಾವು ನಾಲ್ವರು ಸಹೋದರರು ಅದರಲ್ಲಿ ಓರ್ವ ತೀರಿಹೋಗಿದ್ದಾನೆ. ಇನ್ನೋರ್ವ ಗೋಪಾಲ್ ಜೋಶಿ. ಕಳೆದ ಬಾರಿ ಇವರ ಮೇಲೆ ಇಂಥದ್ದೇ ಆರೋಪ ಕೇಳಿ ಬಂದಿತ್ತು. ಪದೇ…
ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚನೆ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಅವರನ್ನು ಬೆಂಗಳೂರಿನ ಬಸವೇಶ್ವರ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹೌದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ ಜೋಶಿಯನ್ನು ಅರೆಸ್ಟ್ ಮಾಡಿದ್ದಾರೆ. ಜೆಡಿಎಸ್ ಮಾಜಿ ಶಾಸಕ ದೇವಾನಂದ್ ಚೌಹಾಣ್ ಪತ್ನಿ ಸುನಿತಾ ಚೌಹಾಣ್ ಅವರ ಬಳಿ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಹ್ಲಾದ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಅವರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಕರಣ ಹಿನ್ನೆಲೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂ. ಪಡೆದು ವಂಚಿಸಿದ ಆರೋಪದಡಿ ಇಲ್ಲಿನ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಸಹೋದರಿ ವಿಜಯ ಲಕ್ಷ್ಮೀ ಜೋಶಿ ಸಹಿತ ಮೂವರ…
ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಡಿ ಅಧಿಕಾರಿಗಳು ಮೈಸೂರಿನಲ್ಲಿರುವ ಮುಡಾ ಕಚೇರಿಯ ಮೇಲೆ ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ ಕೇಳಿ ಬಂದಿದೆ. ಅದು ಕೂಡ ಮುಡಾದಲ್ಲೇ ಆಗಿರುವಂಥದ್ದು ಎಂದು ಹೇಳಲಾಗುತ್ತಿದೆ. ಹೌದು ಮುಡಾದಲ್ಲೇ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಭೂ ಅಕ್ರಮ ಮಾಡಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರು ಗಂಭೀರವಾದಂತಹ ಆರೋಪ ಮಾಡಿದ್ದಾರೆ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 7 ಗುಂಟೆ ಜಾಗವನ್ನು 2023 ರಲ್ಲಿ ಸೆಪ್ಟೆಂಬರ್ 29 ರಂದು ರಂದು ಸಿಎಂ ಪತ್ನಿ ಪಾರ್ವತಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ನಗರದ ಕೆಆರ್ಎಸ್ ರಸ್ತೆಯಲ್ಲಿರುವ ಸರ್ವೇ ನಂಬರ್ 454ರ ಜಾಗ ನೋಂದಾಯಿಸಿಕೊಳ್ಳಲಾಗಿತ್ತು. ಅಲ್ಲಿ ಗಣೇಶ್ ದೀಕ್ಷಿತ್ ಎಂಬುವವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗವಿತ್ತು. ಅದರಲ್ಲಿ 20 ಗುಂಟೆ ಜಾಗವನ್ನು ಸಿಎಂ ಪತ್ನಿ ಪಾರ್ವತಿ…
ಬೆಂಗಳೂರು : ಬಿಗ್ಬಾಸ್ ಕನ್ನಡ ಸೀಸನ್ 11ರಿಂದ ಲಾಯರ್ ಜಗದೀಶ್ ಹೊರ ಹಾಕಲ್ಪಟ್ಟಿದ್ದಾರೆ. ಮನೆಯಲ್ಲಿ ಅಶಿಸ್ತು ತೋರಿ, ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ ಕಾರಣ ಜಗದೀಶ್ ಅನ್ನು ಹೊರಗೆ ಹಾಕಲಾಗಿದೆ. ಹೊರಗಡೆ ಬಂದ ಬಳಿಕ ಅವರು, ಸಾಮಾಜಿಕ ಜಾಲತಾಣದ ಮೂಲಕ ನನ್ನ ಹೀರೋ ಸುದೀಪ್, ನನ್ನ ಕ್ಷಮೆಯನ್ನು ದಯವಿಟ್ಟು ಸ್ವೀಕರಿಸಿ ಎಂದು ಅವರು ತಿಳಿಸಿದ್ದಾರೆ. ನಿಮ್ಮ ಪ್ರತಿ ಒಂದು ಚಪ್ಪಾಳೆ, ಸಂದೇಶ, ನಿಮ್ಮ ಆಶೀರ್ವಾದ ನನ್ನ ಈ ಬಿಗ್ಬಾಸ್ ಪಯಣ ಯಶಸ್ಸು, ಅದು ನೀವು ಇಟ್ಟ ಈ ನಂಬಿಕೆ. ಮತ್ತೊಮ್ಮೆ ಕೋಟಿ ಕೋಟಿ ನಮನ. ಸಾರ್ಥಕ ಆಯಿತು, ನನ್ನ ಈ ಹುಟ್ಟು, ಈ ಪ್ರೀತಿ, ನನ್ನ ಗೆಲುವಿಗೆ ನೀವು ಕೊಟ್ಟ ಆ ಒಡನಾಟ, ವಿಶ್ಲೇಷಣೆ ಮಾಡಲು ನನ್ನ ಬಳಿ ಪದಗಳು ಕಡಿಮೆ ಎಂದು ತಿಳಿಸಿದ್ದಾರೆ. ನೂರಾರು ಕ್ಯಾಮೆರಾ, ಸಾವಿರಾರು ಬಿಗ್ಬಾಸ್ ಸಿಬ್ಬಂದಿ, ಆ ನಿರ್ದೇಶಕ, ಆ ಮಾಂತ್ರಿಕ ತಂತ್ರಜ್ಞರು, ಅವರ 24/7 ಡೆಡಿಕೇಷನ್ ಹಾಗೂ 20 ಕೋಟಿಗೂ ಹೆಚ್ಚಿನ ಬಿಗ್ಬಾಸ್ ಅಭಿಮಾನಿ…














