Author: kannadanewsnow05

ಚಿಕ್ಕಮಗಳೂರು : ಮನೆ ಮಾರಾಟ ಮಾಡಿದ್ದರು ಸಹ ಮನೆಯನ್ನು ತೊರೆದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಾವನನ್ನೇ ಬಾಮೈದ ಹತ್ಯೆಗೈದಿರುವ ಘಟನೆ ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮಂಜು (50) ಎಂದು ತಿಳಿದುಬಂದಿದೆ.ಇನ್ನು ಬಾವನನ್ನೇ ಕೊಂದ ಬಾಮೈದನನ್ನು ಗೋಪಾಲ್ ಎಂದು ಹೇಳಲಾಗುತ್ತಿದೆ. ಕೊಲೆಯಾದ ಮಂಜು ತನ್ನ ಬಾಮೈದನಿಗೆ ಕಳೆದ 3 ವರ್ಷಗಳ ಹಿಂದೆ 25,000 ಕ್ಕೆ ಮನೆಯನ್ನು ಮಾರಾಟ ಮಾಡಿದ್ದಾನೆ. 3 ವರ್ಷಗಳ ಹಿಂದೆಯೇ ಮನೆ ಮಾರಾಟ ಮಾಡಿದ್ದರು ಸಹ ಮಂಜು ಮನೆಯನ್ನು ಬಿಟ್ಟಿರಲಿಲ್ಲ. ಹೀಗಾಗಿ ಗೋಪಾಲ್ ಎಷ್ಟೇ ಬಾರಿ ಎಚ್ಚರಿಕೆ ನೀಡಿದರೂ ಸಹ ಮಂಜು ಮನೆಯನ್ನು ತೊರೆದಿರಲಿಲ್ಲ. ಆದರೆ ಇಂದು ಇಬ್ಬರ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಗೋಪಾಲ ಅಲ್ಲೇ ಇದ್ದ ಇಟ್ಟಿಗೆ ಯನ್ನು ತೆಗೆದುಕೊಂಡು ಮಂಜು ತಲೆಗೆ ಹೊಡೆದಿದ್ದಾನೆ. ತಕ್ಷಣ ಮಂಜುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮಂಜು ಸಾವನ್ನಪ್ಪಿದ್ದಾನೆ.

Read More

ವಿಜಯಪುರ : ವಿಜಯಪುರ ನಗರದ ನವಭಾಗ್ ರಸ್ತೆಯಲ್ಲಿ ಬೃಹತ್ ಫಿಶ್ ಟನಲ್ ಎಕ್ಸ್ಪೋ ಹಮ್ಮಿಕೊಂಡಿದ್ದು, ಈ ಒಂದು ಮನೋರಂಜನ ಆಟಗಳಲ್ಲಿ ಯುವತಿಯೊಬ್ಬಳು ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದಾಗ ಬೆಲ್ಟ್ ಕಟ್ ಆಗಿ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಹೌದು ಮೃತ ಯುತಿಯನ್ನು ನಿಕಿತಾ ಎಂದು ಗುರುತಿಸಲಾಗಿದ್ದು, ಅಕ್ಟೋಬರ್ 20ರಂದು ಈ ಒಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಒಂದು ರೇಂಜರ್ ಸ್ವಿಂಗ್ ನಲ್ಲಿ ಮೂವರು ಯುವತಿಯರು ಒಟ್ಟಿಗೆ ಕುಳಿತಿದ್ದು, ಅದರಲ್ಲಿ ನಿಖಿತಾಳ ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಕಟ್ಟಾಗಿ ಕೆಳಗೆ ಬಿದ್ದಿದ್ದಾಳೆ. ತಲೆ ಕೆಳಗಾಗಿ ಬಿದ್ದ ಪರಿಣಾಮ ನಿಖಿತಾ ತ್ರೀವವಾಗಿ ಗಾಯಗೊಂಡಿದ್ದರು. ತಕ್ಷಣ ನಿಖಿತಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಯುವತಿ ಮೃತಪಟ್ಟಿದ್ದಾಳೆ. ಘಟನೆ ಕುರಿತಂತೆ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಧಾರವಾಡ : ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಬಾರಿ ಮಳೆ ಆಗುತ್ತಿದ್ದು, ಸಾಕಷ್ಟು ಅವಾಂತರ ಕಳಾಗಿವೆ, ಅಲ್ಲದೆ ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಇದೀಗ ಧಾರವಾಡದಲ್ಲಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಗಾಯಗೊಂಡಿದ್ದ ಮಹಿಳೆ ಸಾವನಪ್ಪಿದ್ದಾರೆ. ಹೌದು ಮಳೆಯಿಂದ ಮನೆಗೋಡೆ ಕುಸಿದು ಗಾಯಗೊಂಡಿದ್ದ ಮಹಿಳೆ ಸಾವನ್ನಾಪ್ಪಿದ್ದರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ಅಕ್ಟೊಬರ್ 18 ರಂದು ಮನೆ ಗೋಡೆ ಕುಸಿದು ಮಹಿಳೆ ಮಂಗಳಾ ಪಾಟೀಲ್ ಗಾಯಗೊಂಡಿದ್ದರು. ಗಾಯಗೊಂಡ ಮಹಿಳೆಯನ್ನು ಕೂಡಲೇ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಿಸದೆ ಮಂಗಳಾ ಪಾಟೀಲ್ ಸಾವನಪ್ಪಿದ್ದಾರೆ. ಮೃತ ಮಹಿಳೆಯ ಕುಟುಂಬಸ್ಥರಿಗೆ ನವಲಗುಂದದ ಮಾಜಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಸಾಂತ್ವನ ಹೇಳಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆ ದಂಧೆಗೆ ತಳಲ್ಪಟ್ಟ ಸುಮಾರು 12 ಬಾಲಕಿಯರನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸರು ರಕ್ಷಿಸಿದ್ದಾರೆ. ಕರ್ನಾಟಕ ರಾಜ್ಯ ಸೇರಿದಂತೆ ಪಂಜಾಬ್ ಮಹಾರಾಷ್ಟ್ರ ತಿಪುರ ಹಾಗೂ ನೆರೆಯ ಬಾಂಗ್ಲಾದೇಶದ ಬಾಲಕಿಯರನ್ನು ರಕ್ಷಿಸಲಾಗಿದೆ. ಹೌದು ಕಳೆದ ಮೇ ತಿಂಗಳಿನಿಂದ i ಎನ್‌ಜಿಓ ಸಹಯೋಗದೊಂದಿಗೆ ಸಿಸಿಬಿ ಸುಮಾರು 11 ಕಡೆಗೆ ದಾಳಿ ಮಾಡಿದ್ದರು. ಈ ವೇಳೆ ಸುಮಾರು ವೇಶ್ಯಾವಾಟಿಕೆ ದಂಧೆಗೆ ತಳಲ್ಪಟ್ಟಿದ್ದ 14 ರಿಂದ 17 ವರ್ಷದ ವಯಸ್ಸಿನ 12 ಬಾಲಕಿಯರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರು ಸ್ಥಳೀಯ ಬಾಲಕಿಯರು, ತ್ರಿಪುರಾ, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳ ತಲಾ ಒಬ್ಬರು, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಮೂಲದ ತಲಾ ಮೂವರು ಸೇರಿದಂತೆ ಒಟ್ಟು 12 ಬಾಲಕಿಯರನ್ನು ರಕ್ಷಿಸಲಾಗಿದೆ. ದಾಳಿಯ ಬಳಿಕ ಸರ್ಕಾರೆತರ ಸಂಸ್ಥೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬಾಲಕಿಯರಿಗೆ ಮನೋ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲಾಗಿದೆ. ವಿದೇಶಿ ಮೂಲದ…

Read More

ಬಳ್ಳಾರಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಈ ವೇಳೆ ಅವರಿಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊನೆಗೂ ಅವರು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ನಟ ದರ್ಶನ್ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಕಳೆದ ಕೆಲವು ದಿನಗಳ ಹಿಂದೆ ಕೂಡ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಈ ವೇಳೆ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿಗೆ ಭೇಟಿ ನೀಡಿ ನಟ ದರ್ಶನ್ ಅವರ ಆರೋಗ್ಯವನ್ನು ತಪಾಸಣೆ ಮಾಡಿದ್ದರು. ಈ ವೇಳೆ ವೈದ್ಯರು ಆಸ್ಪತ್ರೆಗೆ ದಾಖಲಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಇದೆ ವೇಳೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅಕ್ಟೋಬರ್ 28ಕ್ಕೆ ಮುಂದೂಡಿದೆ. ಜೈಲಾಧಿಕಾರಿಗಳಿಂದ ದರ್ಶನ್ ಬೆನ್ನು ನೋವಿನ ಬಗ್ಗೆ ವೈದ್ಯರು…

Read More

ಗದಗ : ಕೌಟುಂಬಿಕ ಕಲಹ ಹಾಗೂ ಸಾಲಬಾಧೆ ತಾಳದೆ ಮನನೊಂದ ಯುವಕನೊಬ್ಬ ತುಂಗಭದ್ರಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿಯ ಹಮ್ಮಗಿ ಬ್ಯಾರೇಜ್ ಬಳಿ ನಡೆದಿದೆ. ಘಟನೆಯು ಮೂರು ದಿನಗಳ ಹಿಂದೆ ನಡೆದಿದ್ದು, ಕಳೆದ ಮೂರು ದಿನಗಳ ಹಿಂದೆ ಯುವಕ ಹಮ್ಮಗಿ ಬ್ಯಾರೇಜ್ ಬಳಿ ಬಂದು ತನ್ನ ಬಳಿ ಇರುವಂತಹ ಮೊಬೈಲ್, ಚಪ್ಪಲಿ ಹಾಗೂ ಬೈಕ್ ಸೇರಿದಂತೆ ಎಲ್ಲ ವಸ್ತುಗಳನ್ನ ಅಲ್ಲಿಯೇ ಬಿಟ್ಟು ತುಂಗಭದ್ರಾ ನದಿಗೆ ಹಾರಿದ್ದಾನೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ, ಈಜು ತಜ್ಞರು ಸೇರಿದಂತೆ ಸ್ಥಳೀಯರು ಕೂಡ ಯುವಕನ ಶವಕ್ಕಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಇಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೊಂಬಳಿ ಬಳಿ ಶವ ಪತ್ತೆಯಾಗಿದೆ.

Read More

ತುಮಕೂರು : ಕಲುಷಿತ ನೀರು ಸೇವಿಸಿ ಸುಮಾರು 10ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಓರ್ವ ಮಹಿಳೆ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಸೋರಲಮಾವು ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಕಲುಷಿತ ನೀರು ಸೇವಿಸಿ ಗುಂಡಮ್ಮ (60) ಸಾವನ್ನಪ್ಪಿದ್ದರೆ. ಅಲ್ಲದೆ ಸೋರಲಮಾವು ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ.ಇನ್ನು ಘಟನೆಯಲ್ಲಿ ಅಸ್ವಸ್ಥಗೊಂಡಂತಹ ಎಲ್ಲಾ 10 ಜನರನ್ನು ಚಿಕ್ಕನಾಯಕನಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಬೆಂಗಳೂರು : ಬೆಂಗಳೂರಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವಾರು ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇದೀಗ ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ 16 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಒಂದು ಕುಸಿದು ಬಿದ್ದಿದ್ದು,ಕಟ್ಟಡದ ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ. ಹೌದು ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 16 ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಈ ಒಂದು ಘಟನೆ ನಡೆದಿದೆ. ಸ್ಥಳೀಯರು ಹೇಳುತ್ತಿರುವ ಪ್ರಕಾರ ಈ ಒಂದು ನಿರ್ಮಾಣ ಹಂತದ ಕಟ್ಟಡದ ಕೆಳಗಡೆ ಅನೇಕ ಕಾರ್ಮಿಕರು ವಾಸಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದು, ಕುಸಿದು ಬಿದ್ದಿರುವಂತ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಿ, ಅದರಡಿಯಲ್ಲಿ ಸಿಲುಕಿರುವಂತ ಕಾರ್ಮಿಕರನ್ನು ರಕ್ಷಣೆ ಮಾಡುವಂತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Read More

ಬೆಂಗಳೂರು : ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘೋರ ದುರಂತವೊಂದು ನಡೆದಿದ್ದು, ಕೆಂಗೇರಿ ಕೆರೆಯಲ್ಲಿ ಕೊಚ್ಚಿ ಹೋಗಿ ಅಣ್ಣ, ತಂಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತಂಗಿ ಮಹಾಲಕ್ಷ್ಮಿ ಶವ ಪತ್ತೆಯಾಗಿದೆ. ಹೌದು ಬೆಂಗಳೂರು ನಗರದಲ್ಲಿ ಸುರದ ಬಾರಿ ಮಳೆಗೆ ಇಡೀ ಬೆಂಗಳೂರು ನಗರದ ಜನತೆ ತತ್ತರಿಸಿ ಹೋಗಿದೆ. ಈ ವೇಳೆ ಕೆಂಗೇರಿಯ ಕೆರೆಯ ಬಳಿ ಅಣ್ಣ ತಂಗಿ ಇಬ್ಬರು ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿಗಳ ಶೋಧ ಕಾರ್ಯದಿಂದ ಅಣ್ಣನ ಶವ ಸಿಕ್ಕಿದ್ದು ಇದೀಗ ತಂಗೆ ಮಹಾಲಕ್ಷ್ಮಿ ಶವ ಪತ್ತೆಯಾಗಿದೆ. ಬಾಲಕಿ ಮಹಾಲಕ್ಷ್ಮಿ ಬಿದ್ದಂತಹ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಬಾಲಕಿ ಮಹಾಲಕ್ಷ್ಮಿಯ ಶವ ಪತ್ತೆಯಾಗಿದೆ. ಮಗಳ ಮೃತದೇಹವನ್ನು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿತು. ಇಂದು ಬೆಳಿಗ್ಗೆ ಮಹಾಲಕ್ಷ್ಮಿಯ ಅಣ್ಣ ಜಾನ್ ಸೇನಾ ಮೃತದೇಹವನ್ನು ಅಗ್ನಿಶಾಮಕದಳ ಸಿಬ್ಬಂದಿ ಹೊರ ತೆಗೆದಿದ್ದರು.

Read More

ಬೆಂಗಳೂರು : ಬೆಂಗಳೂರಿನ ಕೆಂಗೇರಿಯ ಗುರೂರು ಕೆರೆಯಲ್ಲಿ ಅಣ್ಣ ತಂಗಿ ಬಿದ್ದು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಕ ಜಾನ್ ಸೇನಾ ಮೃತದೇಹ ಹೊರ ತೆಗೆಯಲಾಗಿದೆ.ಆದರೆ ಮಹಾಲಕ್ಷ್ಮಿಯ ಶವ ಪತ್ತೆಯ ವೇಳೆ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಹೌದು ಕೆಂಗೇರಿಯ ಕೆರೆಯಲ್ಲಿ ಅಣ್ಣ ತಂಗಿ ಬಿದ್ದು ಸಾವನ್ನಪ್ಪಿದ್ದರು. ಈ ವೇಳೆ ಬಾಲಕ ಜಾನ್ ಸೇನಾ ಶವವನ್ನು ಅಗ್ನಿಶಾಮಕ ದಳ ಸಿಬ್ಬಂದಿಯವರು ಹೊರಗಡೆ ತೆಗೆದಿದ್ದಾರೆ. ಆದರೆ ಇದೇ ವೇಳೆ ಮತ್ತೊಂದು ಮೃತದೇಹ ಪತ್ತೆಯಾಗಿದೆ.ಇದು ಮಹಾಲಕ್ಷ್ಮಿ ಮೃತದೇಹನ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

Read More