Subscribe to Updates
Get the latest creative news from FooBar about art, design and business.
Author: kannadanewsnow05
ಕೇರಳ : ತಮ್ಮದೇ ಆದಂತ ವಿಭಿನ್ನ ಶೈಲಿಯಲ್ಲಿ ಯೂಟ್ಯೂಬ್ ಚಾನಲ್‌ನಲ್ಲಿ ಸಕ್ರಿಯವಾಗಿದ್ದ ದಂಪತಿ ಭಾನುವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕೇರಳದ ಪರಸ್ಸಾಲ ಪಟ್ಟಣದಲ್ಲಿ ನಡೆದಿದೆ. ಹೌದು ಮೃತ ದಂಪತಿಗಳನ್ನ ಸೆಲ್ವರಾಜ್ (45), ಪ್ರಿಯಾ (40) ಎಂದು ತಿಳಿಬಂದಿದೆ.ಸೆಲ್ವರಾಜ್ ಹಾಗೂ ಪ್ರಿಯಾ ದಂಪತಿ ‘ಸೆಲ್ಲು ಫ್ಯಾಮಿಲಿ’ ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಅವರ ಚಾನಲ್ ಸುಮಾರು 18,000 ಫಾಲೋವರ್ಸ್ ಅನ್ನು ಹೊಂದಿದ್ದು, 1,400ಕ್ಕೂ ಹೆಚ್ಚು ವೀಡಿಯೋಗಳನ್ನು ತಮ್ಮ ಚಾನಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೊನೆಯದಾಗಿ ಅ.25ರಂದು ತಮ್ಮ ಫ್ಯಾಮಿಲಿ ಫೋಟೋಗಳನ್ನ ಎಡಿಟಿಂಗ್ ಮಾಡಿ 55 ಸೆಕೆಂಡುಗಳ ವೀಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಎರಡು ದಿನಗಳಿಂದ ಮನೆಯಿಂದ ಆಚೆ ಬಾರದ ಕಾರಣ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸೆಲ್ವರಾಜ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಿಯಾ ಮೃತದೇಹ ಹಾಸಿಗೆ ಮೇಲೆ ಪತ್ತೆಯಾಗಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ಎರಡು ದಿನಗಳ ಹಿಂದೆ ಘಟನೆ ಸಂಭವಿಸಿರಬಹುದು…
‘BMTC’ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕೇಸ್ ಹಾಕೋದಲ್ಲ, ಕಠಿಣ ಶಿಕ್ಷೆ ಆಗಬೇಕು : ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು : ಕಳೆದ ಒಂದು ತಿಂಗಳಿನಲ್ಲಿ ಬೆಂಗಳೂರಿನ ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಗಳು ನಡೆದಿವೆ. ಹಾಗಾಗಿ BMTC ಸಿಬ್ಬಂದಿ ಮೇಲಿನ ಹಲ್ಲೆ ಕೇಸ್ ಗೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಕುರಿತಂತೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಡ್ರೈವರ್, ಚಾಲಕರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಕೇಸ್ ಮಾಡುವುದು ಮುಖ್ಯವಲ್ಲ, ಶಿಕ್ಷೆ ಆಗುವ ರೀತಿಯಲ್ಲಿ ಮಾಡಬೇಕು. ಜೈಲಿಗೆ ಹೋಗುವ ರೀತಿ ಮಾಡಬೇಕು, ಆಗ ಅವರಿಗೆ ಬುದ್ಧಿ ಬರುತ್ತದೆ ಎಂದು ಹೇಳಿದ್ದಾರೆ. ಇನ್ನು ಟ್ಯಾನರಿ ರಸ್ತೆಯಲ್ಲಿ ನಿನ್ನೆ ಸಂಜೆ ಕ್ಷುಲ್ಲಕ ಕಾರಣಕ್ಕೆ ಬಿಎಂಟಿಸಿ ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ಕುಡಿದ ಮತ್ತಿನಲ್ಲಿ ಕಿಡಿಗೇಡಿಗಳಿಂದ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ…
ಗುಜರಾತ್ : ಗುಜರಾತನ ಅಮ್ರೇಲಿ ಜಿಲ್ಲೆಯಲ್ಲಿ ಲಘು ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.7 ರಷ್ಟು ಕಂಪನದ ತೀವ್ರತೆ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ಭೂಕಂಪದಲ್ಲಿ ಸಾವು ನೋವುಗಳ ಕುರಿತು ಇನ್ನು ವರದಿಯಾಗಿಲ್ಲ ವಾದ್ದರಿಂದ, ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಅಯೋಧ್ಯೆ : ಇತ್ತೀಚಿಗೆ ದೇಶದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ, ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಹಾಗೂ ಕರೆಗಳು ಬರುತ್ತಿವೆ ಇದೀಗ ಬೆಂಗಳೂರು ಅಯೋಧ್ಯೆ ನಡುವೆ ಸಂಚರಿಸುವ ವಿಮಾನಕ್ಕೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಅಯೋಧ್ಯೆ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಸ್ಪರ್ಶ ಮಾಡಲಾಗಿದೆ. ಹೌದು ವಿಮಾನದಲ್ಲಿ ಬಾಂಬ್ ಬೆದರಿಕೆ ಕರೆ ಬಂದ ಬಳಿಕ ಪರಿಶೀಲನೆ ನಡೆಸಿದ ಸಿಬ್ಬಂದಿ ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆ ಹುಸಿಬಾಂಬ್ ಎಂದು ಅಯೋಧ್ಯೆ ಏರ್‌ಪೋರ್ಟ್ ಸಿಬ್ಬಂದಿಗಳು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಟು ಅಯೋಧ್ಯೆಗೆ 173 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಕಾಶ ಏರ್ಲೈನ್ಸ್ಗೆ ಹುಸಿಬಾಂಬ್ ಬೆದರಿಕೆ ಬಂದಿದೆ. ತಕ್ಷಣ ತುರ್ತು ಭೂಸ್ಪರ್ಶ ಮಾಡಿ ಒಟ್ಟು ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.
ಶಿವಮೊಗ್ಗ : ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದಲ್ಲಿ ಶಾಂತಿ ಕದಡುವ, ದ್ವೇಷ ಹರಡುವವರ ಮೇಲೆ ನಿಗಾ ವಹಿಸಿ ಕಾನೂನು ಚೌಕಟ್ಟಿನೊಳಗೆ ಕಠಿಣ ಕ್ರಮ ಕೈಗೊಳ್ಳಿ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆಯು ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಶಾಂತಿ ಕದಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಪೂರಿತ, ಸುಳ್ಳು ಸುದ್ದಿ, ವಿವಾದಾತ್ಮಕ ಪೋಸ್ಟ್‌ಗಳನ್ನು ಪ್ರಕಟಿಸುವರ ಮೇಲೆ ನಿಗಾವಹಿಸಿ, ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು. ಅಧಿಕಾರಿ ಮತ್ತು ಸಿಬ್ಬಂದಿಗಳು ಚೆನ್ನಾಗಿ ಕೆಲಸ ಮಾಡಿ, ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ತಂದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ನಮ್ಮ ಇಲಾಖೆಯ ಮೇಲೆ ಹೆಚ್ಚು ಜವಾಬ್ಧಾರಿ ಇದೆ.ಬಡವರ ಪರ ಸರ್ಕಾರ ನಮ್ಮದು. ಸಮಾಜದಲ್ಲಿ ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸವಾಗಬೇಕು. ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಇದೆ. ಪ್ರಕರಣ ದಾಖಲಿಸುವ ಸಂದರ್ಭದಲ್ಲಿ…
ಬೆಂಗಳೂರು : ಇದೀಗ ಆನ್ಲೈನ್ನಲ್ಲಿ ಹಣ ಹೂಡಿಕೆ ಮಾಡುವುದು ಅಥವಾ ಸ್ಟಾಕ್ ಮಾರ್ಕೆಟ್ ಹೆಸರಲ್ಲಿ ಹಣ ಹೂಡಿಕೆ ಮಾಡುವುದರಿಂದ ಅನೇಕರು ಲಕ್ಷಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿ ಬೀದಿಗೆ ಬಂದಿದ್ದು, ಅಲ್ಲದೆ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಇದೀಗ ಇಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಆನ್ಲೈನ್ ನಲ್ಲಿ ಮದುವೆ ಹೆಸರಿನಲ್ಲಿ ಸೈಬರ್ ವಂಚಕರು ಯುವಕನಿಗೆ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ್ದಾರೆ. ಹೌದು ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ಪ್ರವೀಣ್ಗೆ 32 ಲಕ್ಷ ರೂಪಾಯಿ ವಂಚನೆ ಎಸಗಲಾಗಿದೆ. ವಂಚಕನೊಬ್ಬ ವಾಟ್ಸಾಪ್ನಲ್ಲಿ ಯುವಕನಿಗೆ ಕಲರ್ ಕಲರ್ AI ಹುಡುಗಿಯರ ಫೋಟೋ ಕಳುಹಿಸಿದ್ದಾನೆ. AI ಫೋಟೋಗಳನ್ನು ವಂಚಕ ಕಳುಹಿಸಿದ್ದ. ಎ ಐ ಫೋಟೋ ನೋಡಿ ಯುವತಿಯ ಜೊತೆಗೆ ಪ್ರವೀಣ್ ಮದುವೆಗೆ ಒಪ್ಪಿದ್ದ. ನಂತರ ಫೋನ್ ಕರೆ ಮಾಡಿ ಇಬ್ಬರೂ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಸದ್ಯ ಕೇರಳದಲ್ಲಿ ಸ್ಟಾಕ್ ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದೇನೆ.ನನ್ನ ಟಾರ್ಗೆಟ್ ಮುಗಿಸಿ ಬೆಂಗಳೂರಿಗೆ ಬಂದು ಭೇಟಿಯಾಗುತ್ತೇನೆ. ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಬರುತ್ತದೆ…
ಮಂಗಳೂರು : ಜಾತಿ ಗಣತಿ ವಿಚಾರದಲ್ಲಿ ಸ್ವಾಮೀಜಿ ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದ ಬಿ.ಕೆ.ಹರಿ ಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಪೇಜಾವರಶ್ರೀಗಳು,ಮಾತನಾಡುವ ಹಕ್ಕು ಕೇವಲ ರಾಜಕಾರಣಿಗಳಿಗೆ ಮಾತ್ರನಾ? ಪ್ರಜೆಗಳಿಗೆ ಹಕ್ಕಿಲ್ವಾ? ರಾಜಕಾರಣಿಗಳಿಗೆ ಮಾತ್ರ ಹಕ್ಕಿದೆ ಅಂತ ಹೇಳಲಿ.ಪ್ರಜಾಪ್ರಭುತ್ವ ಇಲ್ಲ ಈಗ ರಾಜಕಾರಣಿಗಳ ರಾಜ್ಯ ಅಂತ ಹೇಳಲಿ ಎಂದು ವಾಗ್ದಾಳಿ ನಡೆಸಿದರು. ಇಂದು ಮಂಗಳೂರಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಶ್ರೀಗಳು, ಇಂತಹ ರಾಜಕಾರಣಿಗಳಿಗೆ ಸದ್ಬುದ್ಧಿ ಕೊಡುವಂತೆ ಪ್ರಾರ್ಥನೆ ಮಾಡಿದ್ದೇವೆ. ನಮ್ಮ ಪಂಗಡದಲ್ಲಿ ಯಾರಿಗೆಲ್ಲ ವೈಮನಸ್ಸು ಇದೆಯೋ ಅದು ದೂರವಾಗಲಿ. ಜಾತಿ ವ್ಯವಸ್ಥೆ ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ. ಒಂದೆಡೆ ನಾವು ಜಾತ್ಯಾತೀತರು ಎನ್ನುತ್ತಾರೆ, ಇನ್ನೊಂದೆಡೆ ಎಲ್ಲ ವಲಯದಲ್ಲೂ ಅದನ್ನು ಪೋಷಿಸುತ್ತಿದ್ದಾರೆ ಎಂದರು. ಜಾತ್ಯಾತೀತ ಅಂತ ಹೇಳಿಕೊಳ್ಳುವಾಗ ಇಲ್ಲಿ ಜಾತಿ ಪಂಗಡಗಳ ಲೆಕ್ಕಾಚಾರ ಯಾಕೆ ಅನ್ನೋದು ನಮ್ಮ ಅಭಿಪ್ರಾಯ. ಹೀಗೆ ಹೇಳಿದ್ದನ್ನ ಪುಡಿ ರಾಜಕಾರಣ ಅಂತಾರೆ, ನಾವು ಹೇಳಿದ್ದು ತಪ್ಪು ಅಂತಾರೆ. ಹಾಗಾದ್ರೆ ಇದು ಪ್ರಜಾಪ್ರಭುತ್ವ…
ಹಾಸನ : ಸದ್ಯ ರಾಜ್ಯದಲ್ಲಿ ಚನ್ನಪಟ್ಟಣ ಕ್ಷೇತ್ರ ಕೇಂದ್ರ ಬಿಂದುವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ರಾಜ್ಯ ಮಾತ್ರವಲ್ಲ ಇಡೀ ದೇಶದ ಗಮನವನ್ನು ಚನ್ನಪಟ್ಟಣ ಉಪಚುನಾವಣೆ ಸೆಳೆಯುತ್ತಿದೆ. ಇತ್ತ ಸ್ವಕ್ಷೇತ್ರದಲ್ಲಿ ಮಗನನ್ನು ಗಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಹೆಚ್‌ಡಿ ಕುಮಾರಸ್ವಾಮಿ ಇಂದು ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ಪಡೆದರು. ಈ ವೇಳೆ ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು. ಹೌದು ಹಾಸನಾಂಬೆಗೆ ಪೂಜೆ ಸಲ್ಲಿಸಿದ ಬಳಿಕ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಸ್ವಾಮಿಯ ಬಲಭಾಗದಿಂದ ಹೂ ಕೆಳಗೆ ಬಿದ್ದಿದೆ. ಇದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರಿಗೆ ಶುಭ ಸೂಚನೆ ನೀಡಿದ್ರಾ ಸಿದ್ದೇಶ್ವರ ಸ್ವಾಮಿಯವರು ಎಂಬ ಕುತೂಹಲ ಹೆಚ್ಚಿಸಿದೆ. ಸಾಮಾನ್ಯವಾಗಿ ಹಿಂದೂ ಸಂಪ್ರದಾಯ, ಪದ್ಧತಿಗಳಲ್ಲಿ ದೇವರ ಪೂಜೆ ನಡೆಯುವ ವೇಳೆ ಪ್ರಾರ್ಥಿಸುವಾಗ ಅಕಸ್ಮಾತಾಗಿ ದೇವರ ಬಲಗಡೆಯಿಂದ ಹೂವು ಬಿದ್ದರೆ ಶುಭ ಶಕುನ ಹಾಗೂ ಮನಸಲ್ಲಿ ಬೇಡಿಕೊಂಡಿರುವ ಇಚ್ಛೆ ಪೂರ್ತಿಯಾಗುತ್ತದೆ ಎಂದು ನಂಬಿಕೆ ಇದೆ…
ಬೆಂಗಳೂರು : ಟೈಟಾಗಿ ಕುಡಿದು ಬಂದು ಕನ್ನಡ ಬರಲ್ಲ ಎಂದಿದ್ದಕ್ಕೆ ಅಂಗಡಿ ಕ್ಯಾಶಿಯರ್ ಮೇಲೆ ಕುಡುಕನೊಬ್ಬ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವಿಜಯನಗರದ ಬಳಿ ಹಂಪಿ ನಗರದಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ 3 ಗಂಟೆಗೆ ಈ ಒಂದು ಘಟನೆ ನಡೆದಿದ್ದು, ಘಟನೆ ಕುರಿತಂತೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುಡಿದು ಟೈಟ್ ಆಗಿ ಬಂದಿದ್ದ ವ್ಯಕ್ತಿ ತನಗೆ ಏನು ಬೇಕೋ ಅದನ್ನೆಲ್ಲ ಅಂಗಡಿಯಲ್ಲಿ ಆರ್ಡರ್ ಮಾಡಿದ್ದಾನೆ. ಈ ವೇಳೆ ಕ್ಯಾಶಿಯರ್ ದುಡ್ಡು ಪೇ ಮಾಡಿ ಎಂದು ಹೇಳಿದ್ದಾನೆ. ಈ ವೇಳೆ ಕುಡುಕ ವ್ಯಕ್ತಿ ಕನ್ನಡ ಬರೋದಿಲ್ವ ಎಂದು ಕೇಳಿದಾಗ ಕ್ಯಾಶಿಯರ್ ಬರಲ್ಲ ಎಂದಿದ್ದಾನೆ. ಕೂಡಲೇ ಕ್ಯಾಶಿಯರ್ ಮೇಲೆ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಬಳಿಕ ಕನ್ನಡ ಬರಲ್ಲ ಅಂದರೆ ಕಲಿ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ತಿಳಿದುಬಂದಿದೆ.
ಬೆಳಗಾವಿ : ಜಗತ್ತಿನಲ್ಲಿ ಎಂತೆಂಥ ಮಕ್ಕಳು ಇರುತ್ತಾರೆ ನೋಡಿ. ಕುಡಿತದ ಚಟಕ್ಕೆ ಒಳಗಾಗಿರುವ ಮಗ ತಂದೆಗೆ ಮದ್ಯ ಸೇವಿಸಲು ದುಡ್ಡು ಕೊಡು ಎಂದು ಕೇಳಿದಾಗ ತಂದೆ ಒಪ್ಪಲ್ಲ. ಇದಕ್ಕೆ ಕೋಪಗೊಂಡ ಮಗ ತಂದೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿಯಲ್ಲಿ ನಡೆದಿದೆ. ಹೌದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿ ಗ್ರಾಮದಲ್ಲಿ ತುಕಾರಾಮ ವನಖಂಡೆ (89) ಎನ್ನುವವರನ್ನು ಮಗ ಬಾಳಾಸಾಬ ಮಲ್ಲು ವನಖಂಡೆಯನ್ನು (49) ಎಂಬಾತ ಕೊಲೆ ಮಾಡಿದ್ದಾನೆ. ಆರೋಪಿ ಬಾಳಾಸಾಬ್ ವನಖಂಡೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಗೆ ಒಳಗಾದಂತಹ ತುಕಾರಾಮ್ ಅವರನ್ನು ಕೂಡಲೇ ಮೀರಜ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದರು. ಘಟನೆ ಕುರಿತಂತೆ ಅಥಣಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿ ಮಗನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.














