Subscribe to Updates
Get the latest creative news from FooBar about art, design and business.
Author: kannadanewsnow05
ಚಿತ್ರದುರ್ಗ : ಚಿತ್ರದುರ್ಗದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಜಮೀನಿನಲ್ಲಿ ಇರುವಂತಹ ಕೃಷಿ ಹೊಂಡಕ್ಕೆ ಈಜಲು ತೆರಳಿದ್ದ ಇಬ್ಬರು ವ್ಯಕ್ತಿಗಳು ಮುಳುಗಿ ಸಾವನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನೆಲ್ಲಿಕಟ್ಟೆ ಎಂಬ ಗ್ರಾಮದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ನೆಲ್ಲಿಕಟ್ಟೆ ಗ್ರಾಮದಲ್ಲಿ ಕೆರೆಯಲ್ಲಿ ಈಜಲು ಹೋಗಿ ಇಬ್ಬರು ವ್ಯಕ್ತಿಗಳು ಸಾವನಪ್ಪಿದ್ದಾರೆ. ಮೃತರನ್ನು ನಾಗರಾಜು (35) ಶ್ರೀನಿವಾಸ (40) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.ಗ್ರಾಮದ ಅಜ್ಜಪ್ಪ ಎಂಬುವವರ ಜಮೀನಿನಲ್ಲಿ ಈ ಒಂದು ಘಟನೆ ನಡೆದಿದೆ. ಈ ಕುರಿತು ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದರ್ : ಬೀದರ್ ನಲ್ಲಿರುವ ಬ್ರಿಮ್ಸ್ ಆಸ್ಪತ್ರೆ ಸೂಪರ್ ವೈಸರ್ ನಿಂದ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಹಿಳಾ ಆಯೋಗ ಅಧ್ಯಕ್ಷರ ಕಾಲಿಗೆರಗಿ ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾರೆ. ಬ್ರಿಮ್ಸ್ ಆಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿದ ವೇಳೆ ಮಹಿಳೆ ತನಗೆ ಕಿರುಕುಳ ನೀಡಿರುವ ಬಗ್ಗೆ ದೂರು ನೀಡಿದ್ದಾರೆ.ಆರೋಪಿ ಪ್ರಕಾಶ್ ತನ್ನ ಮಾತು ಕೇಳದಿದ್ದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆಯನ್ನೂ ಹಾಕಿದ್ದಾಗಿ ತಿಳಿಸಿದ್ದಾರೆ. ಕೆಲಸ ಮಾಡಿದರೂ ಸಂಬಳ ನೀಡುತ್ತಿಲ್ಲ, ಹಾಜರಿ ಹಾಕುತ್ತಿಲ್ಲ ಎಂದಿದ್ದಾರೆ. ನಾನು ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆದರೆ, ಕಳೆದ ಒಂದು ವರ್ಷದಿಂದ ಬ್ರಿಮ್ಸ್ ಸೂಪರ್ ವೈಸರ್ ಪ್ರಕಾಶ ಮಾಳಗೆ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮಾತು ಕೇಳಬೇಕು ಇಲ್ಲವಾದರೆ ನೋಡಿಕೊಳ್ಳುತ್ತೇನೆ ಎಂದು ಹೆದರಿಸಿ ಹಾಜರಿ ಸಹ ಕೊಡುತ್ತಿಲ್ಲ ಎಂದು ಆರೋಪಿಸಿದರು. ಈ ಸಂಬಂಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಿಳಾ ಪೊಲೀಸ್ ಠಾಣೆ ಹಾಗೂ ನ್ಯೂ…
ಬೆಂಗಳೂರು : ಈಗಾಗಲೇ ಸರಕಾರ ಕೆಎಸ್ಆರ್ಟಿಸಿ ಬಸ್ ಹಾಗು ಮೆಟ್ರೋ ಟಿಕೆಟ್ ಪ್ರಯಾಣದ ಅದರ ಏರಿಕೆ ಮಾಡಿ ರಾಜ್ಯದ ಜನರಿಗೆ ಬಿಗ್ ಶಾಕ್ ನೀಡಿದೆ. ಇದರ ಬೆನ್ನಲ್ಲೇ ಗಾಯದ ಮೇಲೆ ಬರೆ ಎಳೆಯುವಂತೆ ಇದೀಗ ಮತ್ತೆ ದರ ಏರಿಕೆಯ ಶಾಕೆ ನೀಡುತ್ತಿದ್ದು, ಶೀಘ್ರದಲ್ಲಿ ನಂದಿನಿ ಹಾಲಿನ ದರ ಏರಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಬೆಂಗಳೂರಿನ ವಿಧಾನಸೌಧದಲ್ಲಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ಪಶುಸಂಗೋಪನಾ ಸಚಿವರು ಹಾಲಿನ ದರದ ಬಗ್ಗೆ ಹೇಳಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳ ಜೊತೆ ಕೂಡ ಹಾಲಿನ ದರ ಏರಿಕೆ ಆಗುವ ಕುರಿತು ಚರ್ಚೆಯಾಗಿದೆ ಎಂದರು. ಅಲ್ಲದೆ ಹಾಲಿನ ದರ ಏರಿಕೆಯಾಗುವ ಕುರಿತು ಇನ್ನು ಅಂತಿಮ ನಿರ್ಣಯ ಆಗಿಲ್ಲ. ಏರಿಕೆಯಾದಂತಹ ಅಷ್ಟು ಹಣ ರೈತರಿಗೆ ಹೋಗುತ್ತದೆ. ಹಾಲು ಉತ್ಪಾದನೆ ದರ ಹೆಚ್ಚಳವಾಗಿದೆ. ಹೆಚ್ಚುವರಿ ದರದ ಮೊತ್ತ ರೈತರಿಗೆ ತಲುಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಅತಿ ಶೀಘ್ರದಲ್ಲಿ ದರ ಏರಿಕೆ ಆಗಲಿದೆ ಎಂದು ತಿಳಿಸಿದರು.
ಬೆಂಗಳೂರು : ಅಪಾಯಕಾರಿ ವ್ಹೀಲಿಂಗ್ ಮಾಡಿ ಚಾಕು, ಚೂರಿ ತೋರಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದವರ ವಿರುದ್ಧ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ.ಅಲ್ಲದೇ ಇನ್ಮುಂದೆ ಅಪಾಯಕಾರಿ ವ್ಹೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 1342 ಪ್ರಕರಣಗಳು ದಾಖಲಾಗಿದ್ದು, 1046 ಜನರನ್ನು ಬಂಧಿಸಲಾಗಿದೆ ವ್ಹೀಲಿಂಗ್ ಮಾಡುವುದಲ್ಲದೆ ಚಾಕು, ಚೂರಿ ಹಾಗೂ ಲಾಂಗ್ ಹಿಡಿದುಕೊಂಡು ಓಡಾಡಿ ಸಮಾಜದ ಸ್ವಾಸ್ಥ್ಯ ಕದಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದೆಲ್ಲೆಡೆ ದಾಖಲಾದ ಒಟ್ಟು ವ್ಹೀಲಿಂಗ್ ಪ್ರಕರಣಗಳಲ್ಲಿ ಬೆಂಗಳೂರು ನಗರದಲ್ಲಿ 893 ಪ್ರಕರಣ ದಾಖಲಾಗಿದ್ದು, 788 ಮಂದಿಯನ್ನು ಬಂಧಿಸಲಾಗಿದೆ. ರಾಜ್ಯದ ಇತರೆಡೆ 449 ಪ್ರಕರಣ ದಾಖಲಾಗಿದ್ದು, 258 ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇವೆ ಎಂದು ಪ್ರಶೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಸ್.ಎಲ್.ಬೋಜೇಗೌಡ ಪ್ರಶ್ನೆಗೆ ಸಚಿವರು ಮಾಹಿತಿ ನೀಡಿದರು.
ತುಮಕೂರು : ಹಾಸ್ಟೆಲಲ್ಲಿ ವಿದ್ಯಾರ್ಥಿನಿಯೋರ್ವಳು ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸಿದ್ದಾರ್ಥ ಕಾಲೇಜಿನಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಹೌದು ಸಿದ್ದಾರ್ಥ್ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದು ವೇಲ್ ನಿಂದ ನೇಣು ಬಿಗಿದುಕೊಂಡು ದೀಪಿಕಾ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ. ಹಾಸ್ಟೆಲ್ ಮಹಡಿಯ ಮೇಲೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತ ದೀಪಿಕಾ ಶಿರಾ ತಾಲೂಕಿನ ಗುಂಡೆಗೌಡನಪಾಳ್ಯ ನಿವಾಸಿ ಎಂದು ತಿಳಿದು ಬಂದಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಸಾಮಾನ್ಯವಾಗಿ ಹಣ, ಚಿನ್ನ, ಬೆಳ್ಳಿ ಕಳ್ಳತನ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಬೆಂಗಳೂರಿನಲ್ಲಿ ವಿಚಿತ್ರವಾದಂತಹ ಕಳ್ಳತನ ನಡೆದಿದ್ದು, ಸುಮಾರು ಕೋಟಿ ರೂಪಾಯಿ ಮೌಲ್ಯದ ಕೂದಲನ್ನು ಮೂಟೆ ಮೂಟೆ ಹೊತ್ತು ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ವರದಿಯಾಗಿದೆ. ಹೌದು ಬರೋಬ್ಬರಿ 27 ಮೂಟೆಗ ಕೂದಲು ಕಳವಾಗಿದೆ. ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಈ ಸಂಬಂದ ಗೋಡೌನ್ ಮಾಲೀಕ ವೆಂಕಟರಮಣ ಎಂಬವರು ದೂರು ನೀಡಿದ್ದಾರೆ. ಆರು ಜನ ಖದೀಮರು ವಾಹನದಲ್ಲಿ ಬಂದು ಕೂದಲು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ. ಖದೀಮರ ಕುಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದಲ್ಲ, ಎರಡಲ್ಲ ಮೂಟೆಗಟ್ಟಲೇ ಕೂದಲನ್ನು ಕಳ್ಳರು ಕದೊಯ್ದಿದ್ದಾರೆ. ಸೋಲದೇವನಹಳ್ಳಿ ಬಳಿಯ ಲಕ್ಷ್ಮೀ ಪುರ ಕ್ರಾಸ್‌ನಲ್ಲಿರುವ ಗೋಡೌನ್‌ನಲ್ಲಿ ಕೂದಲನ್ನು ಸಂಗ್ರಹಿಸಿಡಲಾಗಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಬೆಲೆಬಾಳುವ ಕೂದಲಿನ ಮೂಟೆಗಳನ್ನು ಎರಡು ದಿನಗಳ ಹಿಂದೆ ಕಳ್ಳತನ ಮಾಡಲಾಗಿದೆ. ಕಳೆದ ವಾರ ಚೀನಾದ ವ್ಯಕ್ತಿಗಳು ಬಂದು ವಿಗ್ ತಯಾರಿಕೆಗೆ ಕೂದಲು ಕಳುಹಿಸುವಂತೆ ಮಾತುಕತೆ ನಡೆಸಿದ್ದರು.…
ಬೆಂಗಳೂರು : 60 ಎಕರೆ ಅರಣ್ಯ ಪ್ರದೇಶವನ್ನು ಹೊತ್ತುವರಿ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು,ಅರಣ್ಯ ಸಂರಕ್ಷಣಾಧಿಕಾರಿ ನೋಟಿಸ್ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಹೈ ಕೋರ್ಟ್ ಏಕ ಸದಸ್ಯ ಪೀಠದಲ್ಲಿ ಇಂದು ರಮೇಶ್ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಯಿತು. ಮಾರ್ಚ್ 10 ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಇದೆ ವೇಳೆ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿತು. ಹೈಕೋರ್ಟ್ ನ್ಯಾ ಎಂ. ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ವೇಳೆ 60ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪವಿದೆ. ಜಮೀನಿನ ಸ್ವರೂಪ ಬದಲಿಸಿ ಪೋಡಿ ಮಾಡಿಸುತ್ತಿದ್ದಾರೆ ಎಂದು ಸರ್ಕಾರದ ವಾದವಾಗಿದ್ದು, ಇಂದಿನ ಎರಡು ಸರ್ವೆಗಳ ವರದಿ ಅರಣ್ಯ ಅಧಿಕಾರಿಗಳ ವಿರುದ್ಧವಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪರ ವಕೀಲರು ವಾದ ಮಂಡಿಸಿದರು. ಬಳಿಕ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 10ಕ್ಕೆ ನಿಗದಿಪಡಿಸಿ ಆದೇಶಿಸಿತು.
ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಅನೇಕ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೋಳಿಸಿದ್ದು, ಇದೀಗ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸಿ ರಕ್ಷಣೆ ನೀಡುವ ಉದ್ದೇಶದಿಂದ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ‍್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025 ನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಈ ವಿಧೇಯಕವರನ್ನು ಮಂಡಿಸಿದರು. ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಸಂಸ್ಥೆಗಳು ರೈತರಿಂದ ಕೃಷಿ ಉತ್ಪನ್ನಗಳನ್ನು ಪಡೆದು ಕೃಷಿ ಸರಕುಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿರುವ ಅಥವಾ ಬಡವರಿಗೆ ಸಾಲವನ್ನು ನೀಡುವ ಮತ್ತು ಅಸಲನ್ನು ಬಡ್ಡಿಯೊಂದಿಗೆ ನಗದು ಅಥವಾ ವಸ್ತು ರೂಪದಲ್ಲಿ ತೆಗೆದುಕೊಳ್ಳುವ ಸಂದರ್ಭದಲ್ಲಿ ದುಬಾರಿ ಬಡ್ಡಿದರಗಳು, ಅನುಚಿತ ತೊಂದರೆ, ಬಲವಂತ ಮತ್ತು ಅಮಾನವೀಯ ವಸೂಲಾತಿ ಮಾಡುವುದು ಕಂಡುಬಂದಿದೆ. ಈ ವಿಧೇಯಕದಲ್ಲಿ ಸಾಲಗಳನ್ನು ಪಡೆಯುವ ಮತ್ತು…
ಬೆಂಗಳೂರು : ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಮಂಡಿ ನೋವು ಸಮಸ್ಯೆ ಕಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಅವರು ಸರ್ಕಾರದ ಯಾವುದೇ ಕಾರ್ಯಕ್ರಮಕ್ಕೆ ಬರುವಾಗಲೂ ಕೂಡ ಚೇರ್ ನಲ್ಲಿಯೇ ಆಗಮಿಸುತ್ತಿದ್ದಾರೆ ಇದೇ ವಿಚಾರವಾಗಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಮಂಡಿ ನೋವಿನ ಕುರಿತು ಲೇವಡಿ ಮಾಡಿದ್ದು, ನಮ್ಮ ಜನಕ್ಕೆ ಅನ್ಯಾಯ ಮಾಡಿದ್ದಕ್ಕೆ ಇಂದು ಕುಂಟುತ್ತಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ. ಎಸಿಪಿ ಹಾಗೂ ಟಿಎಸ್‌ಪಿ ಹಣವನ್ನು ಗ್ಯಾರೆಂಟಿಗಳಿಗೆ ಬಳಸುವದನ್ನು ಖಂಡಿಸಿ ಇಂದು ಬಿಜೆಪಿ ಪ್ರತಿಭಟನೆ ನಡೆಸಿತು. ಈ ವೇಳೆ ಭಾಷಣದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮಂಡಿ ನೋವಿನ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ. ಸಿಎಂ ಮಂಡಿ ನೋವು ಉಲ್ಲೇಖಿಸಿದ ಛಲವಾದಿ ನಾರಾಯಣಸ್ವಾಮಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸುವ ಭರದಲ್ಲಿ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಭಾಷಣದ ಆರಂಭದಲ್ಲಿ ನಮ್ಮ ಜನರಿಗೆ ಅನ್ಯಾಯ ಮಾಡಿದ್ದಕ್ಕೆ ಕುಂಟುತ್ತಿದ್ದೀರಿ. ನಮ್ಮವರ ಹಣ ದುರುಪಯೋಗ ಮಾಡಿದ್ದಕ್ಕೆ ನೀವು ಈಗ ವೀಲ್ ಚೇರ್ ನಲ್ಲಿ ಬರುತ್ತಿರುವುದು…
ಬೆಂಗಳೂರು : ಯುವಕನೊಬ್ಬ ತಿಂಡಿ ಸೇವಿಸಲು ಕೆಫೆಗೆ ತೆರಳಿದ್ದಾ. ಈ ಬೆಳೆ ಇಡ್ಲಿ ಸಾಂಬಾರ್ ನಲ್ಲಿ ಜಿರಳೆ ಪತ್ತೆಯಾಗಿದ್ದು ಯುವಕ ಬಿಚ್ಚಿ ಬಿದ್ದಿದ್ದಾನೆ. ಈ ಕುರಿತು ಹೋಟೆಲ್ ಸಿಬ್ಬಂದಿಗಳಿಗೆ ಪ್ರಶ್ನಿಸಿದರೆ ಸಿಬ್ಬಂದಿಗಳು ಉಡಾಫೆ ಉತ್ತರ ನೀಡಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಬೊಮ್ಮಸಂದ್ರದ ಬಳಿ ನಡೆದಿದೆ. ಹೌದು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ದಲ್ಲಿ ನಾರಾಯಣ ಹೃದಯಾಲಯದ ಆಸ್ಪತ್ರೆಯ ಬಳಿ ಕೆಫೆಯಲ್ಲಿ ಇಡ್ಲಿ ಸಾಂಬಾರ್ ಸೇವಿಸುವ ವೇಳೆ ಜಿರಳೆ ಪತ್ತೆಯಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಯುವಕ ದೂರು ನೀಡಿದ್ದಾನೆ. ಬೊಮ್ಮಸಂದ್ರ ಬಳಿ ಈ ಘಟನೆ ನಡೆದಿದ್ದು, ಪುರಸಭೆಯಿಂದ ಯಾವುದೇ ಅನುಮತಿ ಪಡೆಯದೆ ಮಾಲೀಕರು ಹೋಟೆಲ್ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಈ ವೇಳೆ ಪರಿಶೀಲನೆ ಬಳಿಕ ಪುರಸಭೆ ಅಧಿಕಾರಿಗಳಿಂದ ಸದ್ಯ ಹೋಟೆಲ್ಗೆ ಬೀಗ ಜಡಿಯಲಾಗಿದೆ. ಬ್ರಾಹ್ಮಿನ್ಸ್ ಕೆಫೆಯ ಮಾಲೀಕ ಗೋಪಾಲ್ ಈ ಹೋಟೆಲ್ ನಡೆಸುತ್ತಿದ್ದು, ಇಡ್ಲಿ ಸಾಂಬಾರ್ ಸೇವಿಸುವ ಜಿರಳೆ ಇರುವುದು ಪತ್ತೆಯಾಗಿದೆ. ಆದರೆ ಈ ಬಗ್ಗೆ…













