Subscribe to Updates
Get the latest creative news from FooBar about art, design and business.
Author: kannadanewsnow05
2025 ರ ಬಳಿಕ ನಟ ದರ್ಶನ್ ‘ಪೊಲಿಟಿಕ್ಸ್ ಗೆ’ ಎಂಟ್ರಿ : ರಾಜಕೀಯದಲ್ಲಿ ದಾಸನಿಗೆ ಉತ್ತಮ ಭವಿಷ್ಯವಿದೆ ಎಂದು ಹೇಳಿದ್ಯಾರು?
ಮೈಸೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪಕರಣದಲ್ಲಿ ನಿನ್ನೆ ಹೈಕೋರ್ಟ್ ನಟ ದರ್ಶನ ಅವರಿಗೆ ಮಧ್ಯಂತರ ಜಾಮೀನು ನೀಡಿದೆ ಹಿನ್ನೆಲೆಯಲ್ಲಿ ನಟ ದರ್ಶನ ಅವರು ನಿನ್ನೆ ಬೆಂಗಳೂರಿನ ಪತ್ನಿ ವಿಜಯಲಕ್ಷ್ಮಿ ಮನೆಗೆ ಆಗಮಿಸಿದ್ದು ರಾತ್ರಿ ಮಗ ವಿನೇಶ್ ಬರ್ತಡೇ ಆಚರಿಸಿ ಇಂದು ಅಥವಾ ನಾಳೆ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಇದರ ನಡುವೆ ಮೈಸೂರಿನ ಅರ್ಜುನ್ ಅವಧೂತ ಗುರೂಜಿ ಅವರು ದರ್ಶನ್ ರಾಜಕೀಯ ಭವಿಷ್ಯ ಕುರಿತು ಮಾತನಾಡಿದ್ದು, ದರ್ಶನ ರಾಜಕೀಯಕ್ಕೆ ಬರುತ್ತಾರೆ. ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ರಾಜಕೀಯ ಪಕ್ಷಗಳೇ ಅವರ ಬಳಿಗೆ ಹೋಗುತ್ತವೆ ಎಂದು ದರ್ಶನ್ ರಾಜಕೀಯ ಎಂಟ್ರಿ ಕುರಿತು ಮೈಸೂರಿನ ಅರ್ಜುನ್ ಅವಧೂತ ಗುರೂಜಿ ತಿಳಿಸಿದರು. 2025 ನೇ ಇಸವಿಯಲ್ಲಿ ದರ್ಶನವರಿಗೆ ಒಳ್ಳೆಯ ಭವಿಷ್ಯವಿದೆ. ದರ್ಶನ್ ರಿಲೀಸ್ ಆಗಿರುವುದು ಕನ್ನಡಿಗರಿಗೆ ಹಾಗೂ ಅವರ ಅಭಿಮಾನಿಗಳು ತುಂಬಾ ಸಂತಸ ತಂದಿದೆ. ಅದರಲ್ಲೂ ಅಭಿಮಾನಿಗಳ ಪ್ರಾರ್ಥನೆ, ವಿಜಯಲಕ್ಷ್ಮಿ ಅವರ ತಪಸ್ಸು ಹಾಗೂ ದಿನಕರ್ ತೂಗುದೀಪ ಅವರ ಪ್ರಯತ್ನದಿಂದ ಅವರು ದರ್ಶನ್…
ಹಾವೇರಿ : ರಾಜ್ಯದ ಹಲವೆಡೆ ವಕ್ಫ್ ಆಸ್ತಿ ವಿವಾದ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಹಾವೇರಿ ಜಿಲ್ಲೆಗೂ ಕಾಲಿಟ್ಟಿದೆ. ಬೇರೆ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ಮಾಡುತ್ತಿದ್ದರೆ, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳದಲ್ಲಿ ಮುಸ್ಲಿಂ ಮುಖಂಡರ ಮನೆಯ ಮೇಲೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು 32 ಜನರನ್ನು ಅರೆಸ್ಟ್ ಮಾಡಿದ್ದಾರೆ. ಹೌದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಖಾತೆ ನೋಂದಣಿಯಾಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ತಾವು ವಾಸವಿದ್ದ ಮನೆಗಳನ್ನು ಖಾಲಿ ಮಾಡಿಸಬಹುದು ಎಂಬ ಭೀತಿಯಿಂದ ಉದ್ರಿಕ್ತರ ಗುಂಪು ಮುಸ್ಲಿಂ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದೆ. ಮುಸ್ಲಿಂ ಮುಖಂಡ ಮೊಹಮ್ಮದ್ ರಫಿ ಎಂಬುವರ ಮನೆ ಮೇಲೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದೆ. ಅಲ್ಲದೆ, ಮನೆ ಮುಂದಿದ್ದ ಬೈಕ್ ಅನ್ನು ಜಖಂ ಮಾಡಲಾಗಿದೆ. ವಕ್ಸ್ ಹೆಸರಿಗೆ ಆಸ್ತಿ ಮನೆಗಳನ್ನು ವರ್ಗಾಯಿಸಿಕೊಂಡು ಖಾಲಿ ಮಾಡಿಸುತ್ತಾರೆ ಎಂಬ ವದಂತಿಯಿಂದ…
ಬೆಳಗಾವಿ : ರಾಜ್ಯದಲ್ಲಿ ಇದೀಗ ವಕ್ಫ್ ವಿವಾದ ಭುಗಿಲೆದ್ದಿದ್ದು, ಕಳೆದ ಹಲವು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳ ರೈತರ ಪಹಣಿಗಳಲ್ಲಿ ಅವರ ಜಮೀನು ವಕ್ಫ್ ಅಸ್ತಿಗೆ ಸೇರಿದ್ದು ಎಂದು ನಮೂದಿ ಆಗಿರುವ ಕುರಿತು ರೈತರು ಆತಂಕಕ್ಕೆ ಒಳಗಾಗಿದ್ದರು. ಇದೀಗ ಮಾಜಿ ಸಚಿವರ ಜಮೀನನ್ನೇ ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಿಸಿದ್ದು, ದೊಡ್ಡ ಸಂಚನಲ ಸೃಷ್ಟಿಸಿದೆ. ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಾಕ್ಸಂಬಾ ಗ್ರಾಮದಲ್ಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಪುತ್ರ ಬಸವ ಪ್ರಭುಗೆ ಸೇರಿದ ಸುಮಾರು 2 ಎಕರೆ 13 ಗುಂಟೆ ಜಮೀನಿನಲ್ಲಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದರಿಂದ ಸಹಜವಾಗಿ ಅಣ್ಣಾಸಾಹೇಬ್ ಜಿಲ್ಲೆ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಶಾಕ್ ಗೆ ಒಳಗಾಗಿದ್ದಾರೆ. ಮಾಜಿ ಸಚಿವರ ಕುಟುಂಬಕ್ಕೂ ಇದೀಗ ವಕ್ಫ್ ಶಾಕ್ ನೀಡಿದೆ. ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ತೋರಿಸುತ್ತಿದೆ ಬಸವ ಪ್ರಭುಗೆ ಸೇರಿದ 2 ಎಕರೆ 13 ಗುಂಟೆ ಜಮೀನಿನಲ್ಲಿ ಪಹಣಿಯಲ್ಲಿ ನಮೂದಾಗಿದೆ. ರೈತರ…
ಚಿಕ್ಕಮಗಳೂರು : ವಿಶೇಷವಾಗಿ ದೀಪವಳಿ ಹಬ್ಬದಂದು ಬಿಂಡಿಗ ಐತಿಹಾಸಿಕ ದೇವಿರಮ್ಮನ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಳಿ ಇರುವ ಬೆಟ್ಟದಲ್ಲಿ ಭಕ್ತರು ಬೆಟ್ಟ ಹತ್ತಲು ಆರಂಭಿಸಿದ್ದಾರೆ. ಸುಮಾರು 3000 ಅಡಿ ಎತ್ತರದಲ್ಲಿ ಈ ಒಂದು ಬೆಟ್ಟ ಇದ್ದು, ಇದೀಗ ಬೆಟ್ಟದಿಂದ ಯುವಕನೊಬ್ಬ ಕಾಲು ಜಾರಿ ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೌದು ದೇವಿರಮ್ಮ ಬೆಟ್ಟದಿಂದ ಯುವಕ ಕಾಲು ಜಾರಿ ಬಿದ್ದಿದ್ದು, ಸ್ಟ್ರೆಕ್ಚರ್ ಮೂಲಕ ಪೊಲೀಸ್ ಸಿಬ್ಬಂದಿಗಳು ಯುವಕನನ್ನು ಸುಮಾರು 5 ಕಿಲೋಮೀಟರ್ ವರೆಗೆ ಹೊತ್ತು ತಂದಿದ್ದಾರೆ. ಬಳಿಕ ಆಂಬುಲೆನ್ಸ್ ಮೂಲಕ ಚಿಕ್ಕಮಗಳೂರಿಗೆ ಚಿಕ್ಕಮಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 3000 ಅಡಿ ಎತ್ತರದ ಬೆಟ್ಟದ ಮೇಲೆ ಭಕ್ತರ ದಂಡೆ ಹರಿದುಬಂದಿದೆ. ದೇವಿರಮ್ಮ ದರ್ಶನ ಪಡೆಯಲು ದಾಂಗುಯಿಡಿಟ್ಟ ಜನರು ದುರ್ಗಮ್ಮ ಮಾರ್ಗದ ಬೆಟ್ಟದಿಂದ ಜಾರಿ ಬಿದ್ದ ಯುವಕ.ಈ ವೇಳೆ ಯುವಕನ ಕಾಲಿಗೆ ಗಂಭೀರವಾಗಿ ಗಾಯಗಳಾಗಿದೆ. ತಕ್ಷಣ ಪೊಲೀಸ್ ಸಿಬ್ಬಂದಿ ಸ್ಟ್ರಕ್ಚರ್ ಮೂಲಕ ಯುವಕನನ್ನು ಹೊತ್ತು ತಂದು ಆಂಬುಲೆನ್ಸ್ ಮೂಲಕ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ…
ಜೀವನದಲ್ಲಿ ಎಲ್ಲ ರೀತಿಯ ಸವಲತ್ತುಗಳನ್ನು ಪಡೆದು ಮಾನಸಿಕ ಸಂತೋಷದಿಂದ ಬದುಕುವವನು ಸಕಲ ಸಂಪತ್ತಿನಿಂದ ಬಾಳುತ್ತಾನೆ ಎಂದು ಹೇಳಲಾಗುತ್ತದೆ. ಯಶಸ್ಸಿನ ನಂತರ ನಾವು ಎಲ್ಲಾ ಸಂಪತ್ತು ಮತ್ತು ಯಶಸ್ಸನ್ನು ಪಡೆಯಲು ವಿವಿಧ ರೀತಿಯ ಪೂಜೆಗಳಿವೆ. ಅದರಲ್ಲಿ ಡಂಬಳ ದೀಪಾರಾಧನೆಯೂ ಒಂದು. ಈ ಪೂಜೆಯನ್ನು ಸರಿಯಾಗಿ ನಡೆಸುವುದು ಹೇಗೆ ಎಂದು ನೋಡೋಣ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9686268564 ಐಶ್ವರ್ಯಮ್…
ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅವರ ನಟನೆಯ ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕಾಗಿ HMT ವಶದಲ್ಲಿದ್ದ ಅರಣ್ಯ ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೇ ಮೊದಲ ಬಾರಿಗೆ HMT ಗ್ರೂಪ್ ಆಫ್ ಕಂಪನೀಸ್ ಟ್ವೀಟ್ ಮುಖಾಂತರ ಸ್ಪಷ್ಟನೆ ನೀಡಿದೆ. ಎಚ್‌ಎಂಟಿ ವಶದಲ್ಲಿದ್ದ ಅರಣ್ಯ ಭೂಮಿಯನ್ನು ಸಿನಿಮಾ ಚಿತ್ರೀಕರಣಕ್ಕೆ ಮತ್ತು ಆ ಖಾಲಿ ಜಾಗವನ್ನು ದಿನದ ಬಾಡಿಗೆ ಆಧಾರದ ಮೇಲೆ ಬಾಡಿಗೆ ನೀಡಲಾಗುತ್ತಿದೆ. ಈ ಜಾಗವನ್ನು ಎಚ್‌ಎಂಟಿ ಕೆನರಾ ಬ್ಯಾಂಕ್‌ಗೆ ಮಾರಾಟ ಮಾಡಿದೆ ಎಂದೂ ಹೇಳಲಾಗುತ್ತಿದೆ. ಆ ಜಾಗದಲ್ಲಿದ್ದ ನೂರಾರು ಮರಗಳನ್ನು ಅರಣ್ಯ ಇಲಾಖೆಯ ಪೂರ್ವಾನುಮತಿ ಇಲ್ಲದೇ ಟಾಕ್ಸಿಕ್ ಸಿನಿಮಾ ತಂಡ ಕಡಿದು ಹಾಕಲಾಗಿದೆ ಎಂಬುದು ಅರಣ್ಯ ಇಲಾಖೆಯ ಗಂಭೀರ ಆರೋಪವಾಗಿದೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ HMT ಟ್ವೀಟ್ ಮುಖಾಂತರ ಸ್ಪಷ್ಟನೆ ನೀಡಿದ್ದು, ಸಿನೆಮಾ ಸೆಟ್ ಗಾಗಿ ಮರ ಕಡಿದಿರುವ ಪ್ರಕರಣ ವಿವಾದದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಹೆಚ್ ಎಂ ಟಿ, ಮರ ಕಡಿದ ಜಾಗ ಈಗ ಕೆನರಾ…
ಗುಜರಾತ್ : ಇಂದು ಭಾರತದ ಉಕ್ಕಿನ ಮನುಷ್ಯ ಸರದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನ. ಅಲ್ಲದೆ ರಾಷ್ಟ್ರೀಯ ಏಕತಾ ದಿನಾಚರಣೆ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದು, ಶೀಘ್ರದಲ್ಲಿ ಒಂದು ದೇಶ ಒಂದು ಚುನಾವಣೆ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದರು. ಇಂದು ಅವರು ಗುಜರಾತನ ಕೆವಡಿಯಾದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನದ ಅಂಗವಾಗಿ ಮಾತನಾಡಿದ ಅವರು, ಇಡೀ ದೇಶವನ್ನು ಒಂದಾಗಿ ಮಾಡಿದ್ದು ಸರ್ದಾರ್ ವಲ್ಲಭಭಾಯಿ ಪಟೇಲ್. ಅವರು ದೇಶದ ಏಕತೆ ರಕ್ಷಣೆಗಾಗಿ ಶ್ರಮಿಸಿದ ಉಕ್ಕಿನ ಮನುಷ್ಯ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಸೇವೆ ಎಲ್ಲರಿಗೂ ಸ್ಪೂರ್ತಿಯಾಗಿದೆ. ಎಂದು ಗುಜರಾತಿನ ಕೇವಾಡಿಯದಲ್ಲಿ ನರೇಂದ್ರ ಮೋದಿ ಹೇಳಿಕೆ ನೀಡಿದರು. ಇದೇ ವೇಳೆ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಒಂದು ದೇಶ ಒಂದು ಚುನಾವಣೆಯನ್ನು ಕೂಡ ಶೀಘ್ರದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಗುಜರಾತಿನ ಕೇವಾಡಿಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು…
ಕಲಬುರ್ಗಿ : ಕಲುಷಿತ ನೀರು ಸೇವಿಸಿ ಐದು ವರ್ಷದ ಮಗು ಸಾವನ್ನಪ್ಪಿದ್ದು ಹಲವರು ಅಸ್ವಸ್ಥರಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಹೂಡ(ಬಿ) ಎಂಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಕಲುಷಿತ ನೀರು ಕುಡಿದು ಮಗು ಸಾವನ್ನಪ್ಪಿದ್ದು, ಹಲವರು ಅಸ್ವಸ್ಥರಾಗಿದ್ದಾರೆ. ಕಲುಷಿತ ನೀರಿಗೆ ಮಮತಾ ಹನುಮಂತ ಜೋಗುರ್ (5) ಎಂಬ ಮಗು ಬಲಿಯಾಗಿದೆ. ಇನ್ನು ಗ್ರಾಮದ ಹಲವರು ನೀರು ಕುಡಿದು ಅಸ್ವಸ್ಥರಾಗಿದ್ದಾರೆ. ವಾಂತಿಭೇದಿಯಿಂದ ಬಳಲುತ್ತಿರುವ ಗ್ರಾಮದ ಹಲವು ಜನರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೆ ವೇಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಕೂಡ ಜಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಸೇಡಂ ತಾಲೂಕು ಪಟ್ಟಣದಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ 69 ದಿನಗಳ ಬಳಿಕ ನಿನ್ನೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಳ್ಳಾರಿಯ ಹೈ ಸೆಕ್ಯೂರಿಟಿ ಸೆಲ್ ನಿಂದ ಕುಂಟುತ್ತಲೇ ಹೊರ ಬರುವ ವೇಳೆ ಜೈಲು ಸಿಬ್ಬಂದಿಗಳಿಗೆ ನಟ ದರ್ಶನವರು ನನ್ನಿಂದ ನಿಮಗೆ ತುಂಬಾ ತೊಂದರೆಯಾಗಿದೆ ಕ್ಷಮಿಸಿ ಎಂದು ಕ್ಷಮೆ ಕೇಳಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇದಕ್ಕೂ ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಅಲ್ಲಿ ರಾಜಾತಿಥ್ಯ ಪ್ರಕರಣ ನಡೆದ ಬಳಿಕ ಬಳ್ಳಾರಿ ಜಿಲ್ಲೆಗೆ ಶಿಫ್ಟ್ ಆಗಿದ್ದರು. ಸುಮಾರು 69 ದಿನಗಳ ಬಳಿಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ನಿನ್ನೆ ದರ್ಶನ್ ಬಳ್ಳಾರಿ ಜೈಲ್ ನಿಂದ ರಿಲೀಸ್ ಆಗಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಇರುವಷ್ಟು ದಿನಗಳ ಕಾಲ ಕೂಡ ಹಲವು ವಸ್ತುಗಳಿಗೆ ನಟ ದರ್ಶನ್ ಬೇಡಿಕೆ ಇಟ್ಟಿದ್ದರು. ಮೊದಲು ಟಿವಿಗಾಗಿ ನಟ ದರ್ಶನ್ ಜೈಲು ಸಿಬ್ಬಂದಿಗೆ ಸಿಕ್ಕಾಪಟ್ಟೆ ಬೇಡಿಕೆ ಇಟ್ಟಿದ್ದರು. ಬೇಡಿಕೆಯಂತೆ ಸಿಬ್ಬಂದಿಗಳು ಟಿವಿ ಕೂಡ…
ಬೆಂಗಳೂರು : ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದ್ದು, ಇಂದು ಮತ್ತೊಂದು ರೋಡ್ ರೇಜ್ ಘಟನೆ ನಡೆದಿದೆ.ದೀಪಾವಳಿ ಶಾಪಿಂಗ್ ಮುಗಿಸಿಕೊಂಡು ಮನೆಗೆ ತೆರಳುವಾಗ ದಂಪತಿಗಳ ಕಾರಿನ ಮೇಲೆ ಪುಂಡರು ದಾಳಿ ಮಾಡಿದ್ದು, ಕಾರಿಗೆ ಕಲ್ಲು ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿಯ 5 ವರ್ಷದ ಮಗನಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ನಡೆದಿದೆ. ಹೌದು ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ತನ್ನ 5 ಹಾಗೂ 11 ವರ್ಷದ ಇಬ್ಬರು ಮಕ್ಕಳ ಜೊತೆಗೆ ದಂಪತಿ ಕಾರಿನಲ್ಲಿ ತೆರಳುತ್ತಿದ್ದರು. ದೀಪಾವಳಿ ಶಾಪಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ಅನುಪ್ ದಂಪತಿ. ಈ ವೇಳೆ ಕಾರನ್ನು ಅಡಗಟ್ಟಿ ಗ್ಲಾಸ್ ಇಳಿಸುವಂತೆ ಪುಂಡರು ದಂಪತಿಗೆ ಆವಾಜ್ ಹಾಕಿದ್ದಾರೆ. ಈ ವೇಳೆ ಅನೂಪ್ ಜಾರ್ಜ್ ಹಾಗೂ ಜೀಸ್ ದಂಪತಿ ಹೆದರಿಕೊಂಡ ಕಾರಣ ಗ್ಲಾಸು ತೆರೆಯದೆ ಮುಂದೆ ತೆರಳಿದ್ದಾರೆ. ಬಳಿಕ ಕಾರನ್ನು ಫಾಲೋ ಮಾಡಿದ ಪುಂಡರು ಕಾರಿನ ಮೇಲೆ ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ. ಪುಂಡರು ಕಲ್ಲು ತೂರಿದ್ದರಿಂದ 5 ವರ್ಷದ ಮಗುವಿನ…














