Subscribe to Updates
Get the latest creative news from FooBar about art, design and business.
Author: kannadanewsnow05
ಬೀದರ್ : ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಹತ್ತುವಾಗ 17 ವರ್ಷದ ಬಾಲಕನೊಬ್ಬ ಹೃದಯಾಘಾತದಿಂದ ಸಾವನಪ್ಪಿದ್ದ ವಿಧಾನ ಬಳಿಕ ಇದೀಗ ಬೀದರ್ ನಲ್ಲಿ ಸಾರಿಗೆ ಕಚೇರಿಯಲ್ಲಿ ಮೋಟಾರ್ ವಾಹನ ನಿರೀಕ್ಷಕರು ಒಬ್ಬರು ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತರನ್ನು ವಿಜಯಕುಮಾರ್ ಭಜಂತ್ರಿ (53) ಎಂದು ತಿಳಿದುಬಂದಿದ್ದು, ವಿಜಯಕುಮಾರ್ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿನ ಮೋಟಾರು ವಾಹನ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್ ನವರು ಎಂದು ತಿಳಿದುಬಂದಿದೆ.ನಾಲ್ಕು ತಿಂಗಳ ಹಿಂದೆ ಇಲ್ಲಿಗೆ ವರ್ಗವಾಗಿ ಬಂದಿದ್ದರು. ಇವರು ಮದುವೆಯಾಗದೆ ಹಾಗೆ ಇದ್ದಿದ್ದರಿಂದ ಇವರಿಂದ ಮನೆಯಲ್ಲಿ ಯಾವ ಕುಟುಂಬದ ಸದಸ್ಯರು ಇರಲಿಲ್ಲ.ಇಡೀ ದಿನ ಮನೆಯ ಬಾಗಿಲು ತೆರೆಯದಿದ್ದ ಕಾರಣ ಮತ್ತು ಮೊಬೈಲ್ ರಿಂಗಣಿಸುತ್ತಿದ್ದರಿಂದ ಮರುದಿನ ರಾತ್ರಿ ಬಾಗಿಲು ಒಡೆದು ಕೊಠಡಿಗೆ ಹೋಗಿ ಪರಿಶೀಲಿಸಲಾಯಿತು.ಹೀಗಾಗಿ ಇವರು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಹಗ್ಗ ಜಗ್ಗಾಟದ ನಡುವೆ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ ಎಲ್ಲವನ್ನು ತಣ್ಣಗೆ ಮಾಡಿದ್ದರು ಆದರೆ ಸಚಿವ ಸತೀಶ್ ಜಾರಕಿಹೊಳಿ ಇದೀಗ ತನ್ನ 25 ಆಪ್ತ ಶಾಸಕರೊಂದಿಗೆ ದುಬೈ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹೌದು ಕಳೆದ ಕೆಲವು ದಿನಗಳ ಹಿಂದೆ ಸಿಎಂ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಯಿಸಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಇದರ ಮಧ್ಯ ಕಾಂಗ್ರೆಸ್ ಹೈಕಮಾಂಡ್ ರಾಜ್ಯಕ್ಕೆ ಆಗಮಿಸಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರ ಎಲ್ಲಿಯೂ ಮಾತನಾಡದಂತೆ ಸೂಚನೆ ನೀಡಿತ್ತು. ಅಲ್ಲದೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದರು. ಆದರೆ ಇದು ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸತೀಶ್ ಜಾರಕಿಹೊಳಿ ಸುಮಾರು 25 ಮಂದಿ ಆಪ್ತ ಶಾಸಕರು ದುಬೈ ಪ್ರವಾಸಕ್ಕೆ ತೆರಳುತ್ತಿದ್ದು, ಇದರ ನೇತೃತ್ವವನ್ನು ಸತೀಶ್ ಜಾರಕಿಹೊಳಿ…
ಕೊಪ್ಪಳ : ಇತ್ತೀಚಿಗೆ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಈ ಒಂದು ಹೃದಯಾಘಾತ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಹತ್ತುವಾಗ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಜಯೇಶ್ ಯಾದವ್ (18) ಎಂದು ತಿಳಿದುಬಂದಿದೆ. ಜಯೇಶ್ ಹೇಶ್ ಅಂಜನಾದ್ರಿ ಸಮೀಪವಿರುವ ಹುಲಗಿಯ ನಿವಾಸಿ ಎಂದು ತಿಳಿದು ಬಂದಿದೆ. ಸ್ನೇಹತರೊಂದಿಗೆ ಅಂಜನಾದ್ರಿಯ ಹನುಮಪ್ಪನ ದರ್ಶನಕ್ಕೆಂದು ಬಂದಿದ್ದಾನೆ. ಬೆಟ್ಟ ಏರುವಾಗ ಎದುರುಸಿರು ಹಾಕುತ್ತಿದ್ದ ಯುವಕನಿಗೆ ಇದ್ದಕ್ಕಿದ್ದಂತೆ ಹೃದಯ ಸ್ತಂಭನವಾಗಿದೆ. ಸಹಪಾಠಿ ಸ್ನೇಹಿತರು ಹಾಗೂ ಹನುಪ್ಪನ ದರ್ಶನಕ್ಕೆ ಬಂದಿದ್ದ ಸಹಯಾತ್ರಿಕರು, ಹೃದಯ ಸ್ತಂಭನಕ್ಕೆ ಒಳಗಾದ ಯುವಕನಿಗೆ ಪ್ರಾಥಮಿಕ ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗಿಲ್ಲ. ತಕ್ಷಣ ಬೆಟ್ಟದ ಸಿಬ್ಬಂದಿಗಳು ಆನೆಗುಂದಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರು ಯುವಕನನ್ನು ಚೆಕ್ ಮಾಡಿ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.
ಧಾರವಾಡ : ಉತ್ತರ ಪ್ರದೇಶದ ಪ್ರಯಾಗ ರಾಜ್ ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಕಾಲ್ತುಳಿತ ದುರಂತ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದುವರೆಗೂ ಬೆಳಗಾವಿ ಜಿಲ್ಲೆಯ ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೆ ಇನ್ನೂ ಎಂಟು ಜನರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದರು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿಯಿಂದ ಬೆಳಗಾವಿಯ ಇನ್ನೂ 8 ಜನರು ಸಂಪರ್ಕಕ್ಕೆ ಸಿಗುತ್ತಿಲ್ಲ. ನಾಪತ್ತೆಯಾದವರನ್ನು ಸಂಪರ್ಕಿಸಲು ನಾವು ಸತತವಾಗಿ ಪ್ರಯತ್ನ ಮಾಡುತ್ತಿದ್ದೇವೆ. 8 ಜನರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.8 ಜನ ನಿನ್ನೆ ರಾತ್ರಿಯಿಂದ ಸಂಪರ್ಕಕ್ಕೆ ಸಿಕ್ಕಿಲ್ಲ ಅವರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ ಈವರೆಗೂ ಅವರ ಬಗ್ಗೆ ಯಾವ ಮಾಹಿತಿಯೂ ಇಲ್ಲ ಎಂದು ಜಗದೀಶ್ ಶೆಟ್ಟರ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಡ್ಯ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಇದೀಗ ಮತ್ತೊಂದು ಹುಬಲಿಯಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ 34 ವರ್ಷದ ರೈತನೊಬ್ಬ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಾಳದೆ ನೀನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ. ಹೌದು ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದ್ದು, ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಾಳದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದುಗ್ಗನಹಳ್ಳಿ ಈ ಒಂದು ಘಟನೆ ನಡೆದಿದೆ. ನೇಣು ಬಿಗಿದುಕೊಂಡು ಯುವ ರೈತ ಸಂಜಯ್ (34) ಆತ್ಮಹತ್ಯೆಗೆ ಶರಣಾಗಿದ್ದಾರೆ ಕೃಷಿ ಮಾಡಲು ಇತ್ತೀಚಿಗೆ ಎರಡು ಬೋರ್ವೆಲ್ ಗಳನ್ನು ಕೊರೆಸಿದ್ದರು. ಬೋರ್ವೆಲ್ ಕೊರಿಸಲು ಫೈನಾನ್ಸ್ ನಲ್ಲಿ ಒಂದು ಲಕ್ಷ ಸಾಲವನ್ನು ಪಡೆದಿದ್ದರು. ಕೊಡಿಸಿದ್ದ ಎರಡೂ ಬೋರ್ವೆಲ್ ಗಳಲ್ಲಿ ನೀರು ಬಿದ್ದಿರಲಿಲ್ಲ. ಸೊಸೈಟಿ ಸೇರಿದಂತೆ ವಿವಿಧಡೆ 10 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಆದರೆ ಸಾಲ ತೀರಿಸುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದರು ಇದರಿಂದ ಮನನೊಂದ ರೈತ…
ರಾಮನಗರ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಬಡಾವಣೆ ಒಂದರ ಮನೆಯಲ್ಲಿ ಸ್ನಾನಕ್ಕೆ ಎಂದು ತೆರಳಿದ್ದ ಯುವತಿಯನ್ನು ಹೊತ್ತೊಯ್ದು ಅಸ್ಸಾಂ ಮೂಲದ ಯುವಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ಹೌದು ಅಸ್ಸಾಂ ಮೂಲದ ಮಂಜೂರ್ ಆಲಂ ಎಂಬಾತನಿಂದ ಈ ಒಂದು ಭೀಕರ ಕೃತ್ಯ ನಡೆದಿದ್ದು ಅತ್ಯಾಚಾರದ ಬಳಿಕ ಯುವತಿಗೆ ತೀವ್ರವಾಗಿ ರಕ್ತಸ್ರಾವವಾಗಿದೆ. ರಕ್ತಸಿಕ್ತವಾಗಿ ಹೊರಬಂದ 20 ವರ್ಷದ ಯುವತಿಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಡದಿಯ ಬಡಾವಣೆಯೊಂದರಲ್ಲಿ ಈ ಒಂದು ಭೀಕರ ಘಟನೆ ನಡೆದಿದೆ. ಯುವತಿ ಪಕ್ಕದ ಮನೆಯಲ್ಲಿದ್ದ ಈ ಅಸ್ಸಾಂ ಮೂಲದ ಮಂಜೂರ್ ಆಲಂ ಎನ್ನುವ ಯುವಕ ಸ್ನಾನ ಮಾಡಲು ಯುವತಿ ಬಾತ್ರೂಮಿಗೆ ತೆರಳಿದ್ದಾಳೆ. ಈ ವೇಳೆ ಯುವತಿಯನ್ನು ತನ್ನ ರೂಮ್ಗೆ ಹೊತ್ತೊಯ್ದಿದ್ದಾನೆ. ಯುವತಿಯ ಚಿರಾಟ ಕೇಳಿ ಜನರು ಸ್ಥಳಕ್ಕೆ ಬಂದಿದ್ದಾರೆ. ಘಟನೆ ಬಳಿಕ ಪರಾರಿಯಾಗುತ್ತಿದ್ದ ಆರೋಪಿಯನ್ನು ಕೂಡಲೇ ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಡದಿ ಪೊಲೀಸ್…
ಬೆಂಗಳೂರು : ಬೆಂಗಳೂರಲ್ಲಿ ಕಿಲ್ಲರ್ BMTC ಗೆ ಇದೀಗ ಮತ್ತೊಂದು ಬಲಿಯಾಗಿದ್ದು, ಮಹಿಳೆ ಒಬ್ಬರು ಸಿಗ್ನಲ್ ಬಿದ್ದಾಗ ಬಸ್ ಹತ್ತಲು ಓಡೋಡಿ ಹೋಗಿ ಕೆಳಗೆ ಬಿದಿದ್ದಾರೆ. ಈ ವೇಳೆ ಕೂಡಲೇ ಮಹಿಳೆಯ ಮೇಲೆ ಬಸ್ ಹರಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಬೆಂಗಳೂರಿನ ದೇವೇಗೌಡ ಪೆಟ್ರೋಲ್ ಬಂಕ್ ಸಿಗ್ನಲ್ ಬಳಿ ಈ ಒಂದು ಘಟನೇ ನಡೆದಿದ್ದು, ಸಿಗ್ನಲ್ ಬಿಡುತ್ತಿದ್ದಂತೆ ಬಸ್ ಹತ್ತಲು ಮಹಿಳೆ ಓಡಿದ್ದಾರೆ. ಈ ವೇಳೆ ಕೆಳಗೆ ಬಿದ್ದಾಗ ಮಹಿಳೆಯ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ಘಟನೆ ಕುರಿತು ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳದಲ್ಲಿ ಭೀಕರ ಕಾಲ್ತುಳಿತ ಘಟನೆ ನಡೆದಿದ್ದು, ಈ ಒಂದು ಮಹಾಕುಂಭ ಮೇಳದಲ್ಲಿ ಕಾಲ್ತುಳಿತಕ್ಕೆ ಒಳಗಾಗಿದ್ದ ಬೆಳಗಾವಿಯ ತಾಯಿ ಹಾಗೂ ಮಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿತ್ತು. ಇದೀಗ ಇದೆ ಬೆಳಗಾವಿ ಜಿಲ್ಲೆಯ ಇನ್ನಿಬ್ಬರು ಸಾವನ್ನಪ್ಪಿದ್ದು ಆ ಮೂಲಕ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ. ಹೌದು ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಮತ್ತಿಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಬಂದಿದ್ದು, ಶಿವಾಜಿನಗರದ ನಿವಾಸಿ ಮಹಾದೇವಿ ಹನುಮಂತ ಬಾಗನೂರು ಹಾಗೂ ಶೆಟ್ಟಿಗಲ್ಲಿಯ ಅರುಣ್ ಕೋಪರ್ಡೆ ಸಾವನಪ್ಪಿದ್ದಾರೆ. ಮಹಾದೇವಿ ಅವರು ಭಾನುವಾರ 30 ಜನರ ಜೊತೆಗೆ ಮಹಾ ಕುಂಭಮೇಳಕ್ಕೆ ತೆರಳಿದ್ದರು ಎನ್ನಲಾಗಿದೆ. ಇನ್ನು ಅರುಣ್ ಪತ್ನಿಯ ಜೊತೆಗೆ ಪ್ರಯಾಗ್ ರಾಜ್ ಗೆ ತೆರಳಿದ್ದರು. ನಿನ್ನೆ ನಡೆದ ಕಾಲ್ತುಳಿತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈಗಾಗ್ಲೇ ಬೆಳಗಾವಿ ನಗರದ ವಡಗಾವಿಯ ನಿವಾಸಿ ಜ್ಯೋತಿ ಹತ್ತರವಾಠ (50) ಹಾಗೂ ಇವರ ಪುತ್ರಿ ಮೇಘಾ ಹತ್ತರವಾಠ (18) ಮೃತಾಪಟ್ಟಿದ್ದಾರೆ ಎಂದು ಮೃತರ…
ನವದೆಹಲಿ : ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ ನಲ್ಲಿ ನಡೆಯಿತು. ಇವಳೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ರಾಜಕೀಯ ಲಾಭಕ್ಕಾಗಿ ಯಾಕೆ ಇಂತಹ ಅರ್ಜಿ ಹಾಕುತ್ತೀರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತರಾಟೆ ತೆಗೆದುಕೊಂಡರು. ಶಾಸಕ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿರುವುದನ್ನು ಹಿಂಪಡೆದಿದ್ದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌದ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿಗಳು ರಾಜಕೀಯ ಲಾಭಕ್ಕಾಗಿ ಯಾಕೆ ಇಂತಹ ಅರ್ಜಿ ಹಾಕುತ್ತೀರಿ? ರಾಜಕೀಯ ಮಾಡುವುದಾದರೆ ನೀವು ಫೀಲ್ಡ್ ನಲ್ಲಿ ಮಾಡಿ. ಎಂದು ಯತ್ನಾಳ್ಗೆ ಸುಪ್ರೀಂ ಕೋರ್ಟ್, ನ್ಯಾಯಮೂರ್ತಿಗಳು ತರಾಟೆ ತೆಗೆದುಕೊಂಡರು. ಬಳಿಕ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದರು. ಡಿಕೆಶಿಗೆ ಸೇರಿದ ಆಸ್ತಿಗಳಲ್ಲಿ 2017ರ ಆಗಸ್ಟ್ 2ರಂದು ಆದಾಯ ತೆರಿಗೆ ಇಲಾಖೆ ಶೋಧ ನಡೆಸಿತ್ತು. ಈ ವೇಳೆ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಆದಾಯ…
ಬೆಂಗಳೂರು : ವಿಜಯೇಂದ್ರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರ ಜೊತೆಗೆ ಕೆಲಸ ಮಾಡಿದಕ್ಕಾಗಿ ದ್ವೇಷ ಮಾಡುತ್ತಿದ್ದಾರೆ. ಬಸವಣ್ಣನವರ ಪಾದದ ಮೇಲೆ ಪ್ರಮಾಣ ಮಾಡಿದ್ದು ಗೊತ್ತಿಲ್ವಾ? ಬಸವಣ್ಣನವರ ಪಾದದ ಮೇಲೆ ಆಣೆ ಮಾಡಿದಂತೆ ನಡೆದುಕೊಂಡರಾ? ಬಿಎಸ್ ವೈ ಅವರ ಯಾವ ಗುಣ ವಿಜಯೇಂದ್ರ ಬಳಿ ಇಲ್ಲ. ಕೇವಲ ಹಠ, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿವೈ ವಿಜಯೇಂದ್ರ ರಾಜಕೀಯವಾಗಿ ನನ್ನ ಸಮಾಧಿ ಮಾಡಲು ಹೊರಟಿದ್ದಾರೆ ಎಂದು ಬಿವೈ ವಿಜಯೇಂದ್ರ ವಿರುದ್ಧ ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್ ಆಕ್ರೋಶ ಅವರ ಹಾಕಿದರು. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಬಹಳ ಪ್ರಬಲವಾಗಿರುವ ಕಡೆಗೆ ತಿಣುಕಾಡಿಕೊಂಡು ಗೆದ್ದಿದ್ದೀರಿ. ವರಿಷ್ಠರನ್ನು ಭೇಟಿಯಾಗಿ ನಿಮ್ಮ ಎಲ್ಲಾ ವ್ಯವಹಾರ ಗಮನಕ್ಕೆ ತರುತ್ತೇನೆ. ಬೊಮ್ಮಾಯಿ ಜೊತೆಗೆ ಚೆನ್ನಾಗಿ ಕೆಲಸ ಮಾಡಿದ್ದೇವೆ ಎಂದು ನಮ್ಮ ಮೇಲೆ ದ್ವೇಷನಾ? ವಿಜಯೇಂದ್ರ ಮಾಜಿ ಸಿಎಂ ಯಡಿಯೂರಪ್ಪನವರ ಮಗ ಆಗಿರಬಹುದು ಆದರೆ ಬಿಎಸ್ ಯಡಿಯೂರಪ್ಪ ಗೆ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಇವರದ್ದು ದ್ವೇಷದ…











