Author: kannadanewsnow05

ಹುಬ್ಬಳ್ಳಿ : ಜನರನ್ನ ರಕ್ಷಣೆ ಮಾಡುವ ಪೊಲೀಸರೇ ಹಾದಿ ತಪ್ಪಿದರೆ, ಸಾರ್ವಜನಿಕರ, ಹೆಣ್ಣುಮಕ್ಕಳ ಪರಿಸ್ಥಿತಿ ಏನು? ಇದೀಗ ಹುಬ್ಬಳ್ಳಿಯಲ್ಲಿ ಕೂಡ ಅದೇ ಘಟನೆ ನಡೆದಿದ್ದು, ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಬೇಕಿದ್ದ ಪೊಲೀಸಪ್ಪನೇ ಇದೀಗ ಬಾಲಕಿಯರ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ. ಹೌದು ಅಪ್ರಾಪ್ತ ಬಾಲಕಿಯರ ಜೊತೆ ಅನುಚಿತವಾಗಿ ವರ್ತಿಸಿದ ಹೆಡ್ ಕಾನ್ಸ್ಟೇಬಲ್​ಗೆ ಸಾರ್ವಜನಿಕರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಖದೀಮನವರ ತಮ್ಮ ಏರಿಯಾದಲ್ಲಿನ ಅಪ್ರಾಪ್ತ ಬಾಲಕಿಯರ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಹೆಡ್ ಕಾನ್ಸ್ಟೇಬಲ್​ಗೆ ಸಾರ್ವಜನಿಕರು ಥಳಿಸಿದ್ದಾರೆ. ಬಳಿಕ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

Read More

ಬೆಂಗಳೂರು : ಮಠ ಚಲನಚಿತ್ರದ ಖ್ಯಾತ ನಿರ್ದೇಶಕ ಹಾಗೂ ನಟ ಆಗಿದ್ದ ಗುರುಪ್ರಸಾದ್ ಅವರು ಬೆಂಗಳೂರಿನ ಉತ್ತರ ತಾಲ್ಲೂಕಿನಲ್ಲಿ ಮಾದನಾಯಕನಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಒಂದು ನಿಧನಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ನಿಧನದ ಸುದ್ದಿ ತಿಳಿದು ಮನಸ್ಸಿಗೆ ನೋವು ಉಂಟಾಗಿದೆ. ಸೃಜನಶೀಲ ನಿರ್ದೇಶಕರು ಹಾಗೂ ಕನಕಪುರ ಮೂಲದವರೇ ಆದ ಶ್ರೀ ಗುರುಪ್ರಸಾದ್ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಗಿದೆ. ಬೆಳ್ಳಿತೆರೆ ಹಾಗೂ ಕಿರುತೆರೆಗೆ ತಮ್ಮದೇ ಶೈಲಿಯ ಕೊಡುಗೆ ನೀಡಿದ ಗುರುಪ್ರಸಾದ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬದವರು ಹಾಗೂ ಆತ್ಮೀಯರ ನೋವಿನಲ್ಲಿ ನಾನೂ ಕೂಡ ಭಾಗಿ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಗುರುಪ್ರಸಾದ್ ನಿಂದಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕೂಡ…

Read More

ವಿಜಯಪುರ : ರಾಜ್ಯಾದ್ಯಂತ ವಕ್ಫ್ ವಿವಾದ ಭುಗಿಲೆದ್ದಿದ್ದು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ರೈತರಿಗೆ ನೋಟಿಸ್ ನೀಡಿದ್ದನ್ನು ಕೂಡಲೇ ಹಿಂಪಡೆಯಿರಿ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ. ಆದರೆ ಬಿಜೆಪಿ ನಾಳೆ ಕೋಲಾರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು. ಇತ್ತ ವಿಜಯಪುರದಲ್ಲಿ ನಾಳೆಯಿಂದ ಬಿಜೆಪಿ ನಗರ ಶಾಸಕ ವಸನಗೌಡ ಪಾಟೀಲ್ ಯತ್ನಾಳ್ ಅಹೋರಾತ್ರಿ ಧರಣಿ ಆರಂಭಿಸಲಿದ್ದಾರೆ. ಹೌದು ವಕ್ಫ್ ಆಸ್ತಿ ವಿವಾದ ಸಂಬಂಧ ನಾಳೆಯಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ. ಅಹೋರಾತ್ರಿ ಧರಣಿಯ ಬಗ್ಗೆ ಶಾಸಕರ ಕಚೇರಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ರೈತರು, ಸಂಘ ಸಂಸ್ಥೆಗಳು, ಶಾಲೆಗಳು, ಮಠಮಾನ್ಯಗಳ ಜಮೀನು ಹಾಗೂ ಸರ್ಕಾರಿ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ. ವಕ್ಫ್ ಆಸ್ತಿ ಎಂದು ನಮೂದಿಸಿದ್ದನ್ನು ತೆಗೆಯುವಂತೆ ಒತ್ತಾಯ ಕೇಳಿ ಬಂದಿದ್ದು, ನಾಳೆಯಿಂದ ಹೋರಾಟ ನಡೆಸುವುದಾಗಿ ಶಾಸಕರ ಕಚೇರಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಅಲ್ಲದೆ ನವೆಂಬರ್ ಆರರಂದು ಜೆಪಿಸಿ ಅಧ್ಯಕ್ಷರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅಲ್ಲದೆ…

Read More

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಲೋಕಾಯುಕ್ತ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದು, ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್.ಆನಂದ್ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 2.77 ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಮಣ್ಣಗುಡ್ಡದಲ್ಲಿರುವ ಆಯುಕ್ತರ ಸರ್ಕಾರಿ ಬಂಗಲೆಗೆ ಆಗಮಿಸಿದ ಲೋಕಾಯುಕ್ತ ತಂಡ ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಡೆಸಿತು. ಪರಿಶೀಲನೆಯ ವೇಳೆ ಸುಮಾರು 2.77 ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಆನಂದ್ ಅವರಿಗೆ ಸಂಬಂಧಿಸಿದ ನಿವಾಸ, ಕಚೇರಿ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿ ದಾಳಿ ಸಂದರ್ಭದಲ್ಲಿ 3 ಮನೆಗಳು, 4 ಎಕರೆ ಕೃಷಿ ಭೂಮಿ, 2.12 ಕೋಟಿ ಮೌಲ್ಯದ ಸ್ಥಿರಾಸ್ತಿ, 19.4 ಲಕ್ಷ ಮೌಲ್ಯದ ಚಿನ್ನಾಭರಣ, 20.5 ಲಕ್ಷ ಮೌಲ್ಯದ ವಾಹನ, ಆಸ್ತಿ ಖರೀದಿಗೆ 10 ಲಕ್ಷ ಮುಂಗಡ, ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ 16 ಲಕ್ಷ ಮೌಲ್ಯದ ಆಸ್ತಿ ಇದೆ.

Read More

ಹಾಸನ : ವರ್ಷಕ್ಕೊಮೆ ದರ್ಶನ ಭಾಗ್ಯ ನೀಡುವ ನಗರದ ಅಧಿದೇವತೆ ಹಾಸನಾಂಬ ದೇವಿಯ ಈ ವರ್ಷದ ದರ್ಶನಕ್ಕೆ ಇಂದು ವಿಶ್ವರೂಪ ದರ್ಶನದ ಬಳಿಕ ಶಾಸೊತ್ರೕಕ್ತವಾಗಿ ಪೂಜೆ ಸಲ್ಲಿಸಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು. ಶಾಸಕ ಸ್ವರೂಪ್‌ಪ್ರಕಾಶ್‌ . ಜಿಲ್ಲಾಧಿಕಾರಿ ಸತ್ಯಭಾಮ, ಎಸ್‌‍,ಪಿ ಮಹಮದ್‌ ಸುಜೆತಾ , ಉಪವಿಭಾಗಾಧಿಕಾರಿ ಮಾರುತಿ ಸೇರಿದಂತೆ ಮತ್ತಿತರ ಗಣ್ಯರ ಸಮುಖದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು. ಇದೀಗ ಇಂದು ಹಾಸನಾಂಬೆ ದೇಗುಲದ ಗರ್ಭಗುಡಿ ಬಂದ್ ಮಾಡಲಾಗಿದೆ. ಅಕ್ಟೋಬರ್​ 24 ಗುರುವಾರ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್​ 25 ರಿಂದ ನವೆಂಬರ್​ 03 ನಸುಕಿನ ಜಾವ 6 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಒಂಬತ್ತು ದಿನಗಳಲ್ಲಿ ದಾಖಲೆಯ 20 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದರು. ಮತ್ತು ಹಾಸನಾಂಬ ದೇಗುಲಕ್ಕೆ 9 ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದು ಬಂದಿದೆ. ದೀಪವಾವಳಿ ಹಬ್ಬ ಇದ್ದರೂ ಕೂಡ ನಾಡಿನ ಮೂಲೆ…

Read More

ಬೆಂಗಳೂರು : ಮಠ ಚಲನಚಿತ್ರದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರು ಇಂದು ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನ ಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಒಂದು ವಿಚಾರವಾಗಿ ಹಿರಿಯ ನಟ ಜಗ್ಗೇಶ್ ಅವರು ನನಗೆ ಗುರುಪ್ರಸಾದ್, ಸಾವಿರ ಸಲ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದ ಎಂಬ ಶಾಕಿಂಗ್ ಮಾಹಿತಿ ಬಿಚ್ಚಿಟ್ಟರು. ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಜಗ್ಗೇಶ್, ಗುರುಪ್ರಸಾದ್ ಯಾರ ಮಾತು ಕೂಡ ಕೇಳುತ್ತಿರಲಿಲ್ಲ. ಗುರುಪ್ರಸಾದ್ ನಮ್ಮ ಮನೆಯಲ್ಲಿ ಬೆಳೆದಿರುವ ಹುಡುಗ. ಗುರುಪ್ರಸಾದ ರನ್ನು ನಾನು ಹೆಚ್ಚಿಗೆ ಮಾತನಾಡಿಸುತ್ತಿರಲಿಲ್ಲ. ಗುರುಪ್ರಸಾದ್ ಕುಡಿತದ ಚಟಕ್ಕೆ ಬಿದ್ದು ತುಂಬಾ ಹಾಳಾಗಿದ್ದ. ಒಳ್ಳೆಯ ಬರವಣಿಗೆ ತಾಕತ್ ಹೊಂದಿರುವ ವ್ಯಕ್ತಿಯಾಗಿದ್ದ. ಗುರುಪ್ರಸಾದ್ 1000 ಸಲ ಸಾಯುತ್ತೇನೆ ಎಂದು ಹೇಳಿದ್ದ. ಗುರುಪ್ರಸಾದ್ ಗೆ ನಾನು ಈ ಕುರಿತು ಬಹಳ ಸಲ ಬುದ್ಧಿವಾದ ಹೇಳಿದ್ದೆ.ಗುರುಪ್ರಸಾದ್ ಮೊದಲ ಪತ್ನಿ ಜೊತೆಗೂ ಸರಿಯಾಗಿ ಇರಲಿಲ್ಲ ಎಂದು ಅವರ ಸಾವಿಗೆ ಸಂತಾಪ ಸೂಚಿಸಿದರು. 1972ನೇ ನವೆಂಬರ್ 2 ಗುರುಪ್ರಸಾದ್ ಜನಿಸಿದ್ದರು. ರಾಮನಗರ…

Read More

ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಟ, ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ನಲ್ಲಿ ಸುಸೈಡ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು ಬೆಂಗಳೂರಿನ ಮಾದನಾಯಕನಹಳ್ಳಿಯ ಅಪಾರ್ಟ್ಮೆಂಟ್ ನಲ್ಲಿ ಗುರುಪ್ರಸಾದ್ (52) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಮಠ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದರು. ಗುರುಪ್ರಸಾದ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಮುಖ ಕಾರಣ, ಸಾಲಗಾರರ ಕಿರುಕುಳ ಎಂದು ಹೇಳಲಾಗುತ್ತಿದೆ. ಗುರುಪ್ರಸಾದ್ ಹಾಗಾಗಿ ಸಾಲಗಾರರ ಕಿರುಕುಳ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ಗೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

Read More

ತುಮಕೂರು : ಭಕ್ತರಿಗೆ ತಿಳಿಸದೆ ಮಠದ ಜಮೀನನ್ನು ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತುಮಕೂರು ತಾಲೂಕಿನ ಹೆಬ್ಬೂರು ಬಳಿಯಿರುವ ರಾಮೇನಹಳ್ಳಿ ಮಠದ ಶಿವಪಂಚಾಕ್ಷರಿ ಸ್ವಾಮೀಜಿ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಹೌದು ಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವುದು ಶಿವ ಪಂಚಾಕ್ಷರಿ ಸ್ವಾಮೀಜಿ. ಮಠದಲ್ಲಿ ಏನೇ ನಿರ್ಧಾರ ಮಾಡಬೇಕೆಂದರೂ ಮಠದ ಭಕ್ತರು , ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು. ಆದರೆ ಸ್ವಾಮೀಜಿ ಗ್ರಾಮಸ್ಥರಿಗೆ ತಿಳಿಯದಂತೆ ಮಠಕ್ಕೆ ಸೇರಿದ ಹತ್ತಾರು ಎಕರೆ ಜಮೀನು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಇದನ್ನ ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಅಲ್ಲದೆ ಮಠದೊಳಗೆ ಸಹೋದರನ ಕುಟುಂಬಸ್ಥರು ಕರೆತಂದು ಇಟ್ಟುಕೊಂಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಯಾರನ್ನ ಕೇಳಿ ಮಠದ ಜಮೀನು ಮಾರಾಟ ಮಾಡಿದ್ದೀರಿ, ಯಾರನ್ನ ಕೇಳಿ ಕುಟುಂಬಸ್ಥರನ್ನು ಮಠದೊಳಗೆ ಕರೆತಂದಿದ್ದೀರಿ? ಇದೇನು ನಿಮ್ಮ ಸ್ವಂತ ಆಸ್ತಿಯೇನು ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡು ಗ್ರಾಮಸ್ಥರ ವಿರುದ್ಧವೇ ಸ್ವಾಮೀಜಿ ಅವಾಚ್ಯವಾಗಿ ನಿಂದಿಸಿದ್ದಾರೆಂದು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ವಿಷಯ ತಿಳಿದು ಕೂಡಲೇ ಘಟನಾ ಸ್ಥಳಕ್ಕೆ…

Read More

ಕಲಬುರ್ಗಿ : ವಕ್ಫ್ ವಿವಾದ ರಾಜ್ಯದಲ್ಲಿ ತಾರಕಕ್ಕೆ ಏರಿದ್ದು, ನಾಳೆ ಕೋಲಾರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಅಲ್ಲದೆ, ಈ ನಡುವೆ ವಕ್ಫ್ ಕಾಯ್ದೆ ತಿದ್ದುಪಡಿಗೆ ಬಿಜೆಪಿ ಆಗ್ರಹಿಸಿದ್ದು, ನವೆಂಬರ್ 6 ರಂದು ರಾಜ್ಯಕ್ಕೆ ಕೇಂದ್ರದಿಂದ ವಿಶೇಷ ತಂಡ ಕೂಡ ಭೇಟಿ ನೀಡುವ ಸಾಧ್ಯತೆ ಇದೆ. ಇದರ ಬೆನ್ನಲ್ಲೆ ಸಚಿವ ಜಮೀರ್ ಅಹ್ಮದ್ ಇಂದು ನಿನ್ನೆದಲ್ಲ ಇದು ಸ್ವಾತಂತ್ರಕ್ಕೂ ಮೊದಲೇ ಇದೆ ಎಂದು ಹೇಳಿಕೆ ನೀಡಿದ್ದಾರೆ. ಕಲ್ಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿದೆ. ಕೇಂದ್ರ ಏನು ಬೇಕಾದರೂ ತರಲಿ. ತಂದ ಬಳಿಕ ಮುಂದೆ ಏನು ಮಾಡಬೇಕೋ ಅದನ್ನ ಮಾಡುತ್ತೇವೆ.ಆದರೆ ವಕ್ಫ್ ಇಂದು ನಿನ್ನೆಯದಲ್ಲ ಸ್ವಾತಂತ್ರ್ಯಕ್ಕೂ ಮೊದಲೇ ವಕ್ಫ್ ಇದೆ ಎಂದು ತಿಳಿಸಿದರು. ಮುಂದುವರೆದು ವಕ್ಫ್ ಬಳಿ ಇರುವುದು ಸರ್ಕಾರ ಕೊಟ್ಟ ಜಮೀನಲ್ಲ. ಈ ಕುರಿತು ಹಲವರಿಗೆ ತಪ್ಪು ಕಲ್ಪನೆ ಇದೆ. ವಕ್ಫ್ ಎಂದರೆ ಅದು ಸರ್ಕಾರವೇ ಅದಕ್ಕೆ ಕೊಟ್ಟ ಜಮೀನು ಎಂದುಕೊಂಡಿದ್ದಾರೆ. ಆದರೆ…

Read More

ಚಿತ್ರದುರ್ಗ : ವಕ್ಫ್ ವಿವಾದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ರೈತರಿಗೆ ನೀಡಿದ ನೋಟಿಸ್ ಗಳನ್ನು ಹಿಂಪಡೆಯಿರಿ ಎಂದು ಖಡಕ್ ಆಗಿ ಸೂಚನೆ ನೀಡಿದ್ದಾರೆ. ಇದೀಗ ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಇಷ್ಟಕ್ಕೆಲ್ಲ ಮೂಲ ಕಾರಣಿಕರ್ತರಾದ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ರಾಜ್ಯದಿಂದ ಗಡಿಪಾರು ಮಾಡಿದರೆ ಒಳ್ಳೆಯದಾಗುತ್ತೆ ಎಂದು ಅಗ್ರಹಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಬಿ ವೈ ವಿಜಯೇಂದ್ರ ಅವರು, ಜಮೀರ್ ಅಹ್ಮದ್ ಸಂವಿಧಾನದ ಬಗ್ಗೆ ಮಾತಾಡುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ದಬ್ಬಾಳಿಕೆ ಮಾಡಿ ರೈತರ ಜಮೀನು, ಮಠಮಾನ್ಯಗಳ ಆಸ್ತಿ ಕಬಳಿಕೆ ಮಾಡುತ್ತಿದ್ದಾರೆ. ಜಮೀರ್ ಅಹ್ಮದ್ ಭೂಕಬಳಿಕೆ ಕೆಲಸ ಮಾಡುತ್ತಿದ್ದಾರೆ. ಜಮೀರ್ ಅಹ್ಮದರನ್ನು ಕೂಡಲೇ ಗಡಿಪಾರು ಮಾಡಿದರೆ ರಾಜ್ಯಕ್ಕೆ ಒಳಿತಾಗುತ್ತೆ. ಸಚಿವ ಜಮೀರ್ ಅಹಮದ್ ಎಲ್ಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ಶಾಂತಿಯುತ ರಾಜ್ಯದಲ್ಲಿ ಮಂತ್ರಿಯಿಂದ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೂಡ ವಾಗ್ದಾಳಿ ನಡೆಸಿದ…

Read More