Subscribe to Updates
Get the latest creative news from FooBar about art, design and business.
Author: kannadanewsnow05
ಗದಗ : ಗದಗ ಜಿಲ್ಲೆಯ ಲಕ್ಷ್ಮಿಶ್ವರ ತಾಲೂಕಿನ ಸುಣಧೂರು ಗ್ರಾಮದಲ್ಲಿ ನೀಲಗಿರಿ ತೋಪಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ 25 ಅಡಿ ಕಟೌಟ್ ಕಟ್ಟುವಾಗ ವಿದ್ಯುತ್ ಶಾಕ್ ತಗೋಲಿ ಮೂವರು ಯುವಕರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್ ಕೆ ಪಾಟೀಲ್ ಘಟನೆ ಕುರಿತಂತೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಗದಗಕ್ಕೆ ಹೋದಾಗ ಕುಟುಂಬಸ್ಥರಿಗೆ ಭೇಟಿಯಾಗಿ ಸಾಂತ್ವನ ಹೇಳುತ್ತೇನೆ. ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ. ಘಟನೇ ಹಿನ್ನೆಲೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುಣಧೂರು ಗ್ರಾಮದ ನೀಲಗಿರಿ ತೋಪಿನಲ್ಲಿ ತಡರಾತ್ರಿ ನಟ ಯಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಸುಮಾರು 25 ಅಡಿ ಕಟೌಟ್ ಅನ್ನು ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ…
ಬೆಂಗಳೂರು : ಕಾರ್ಯಕರ್ತರಂತೆ ನಾನು ಕೂಡ ಅವರನ್ನ ದೇವರೆಂದು ನೋಡುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ತಿರುಗೇಟು ನೀಡಿದ್ದು ಇಂತಹ ಉಸರವಳ್ಳಿ ರಾಜಕಾರಣಿಗಳಿಂದಲೇ ಉತ್ತರ ಕರ್ನಾಟಕ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದೆ ಎಂದು ಕಿಡಿ ಕಾರಿದ್ದಾರೆ. ಟ್ವೀಟ್ ನಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ವ್ಯಕ್ತಿ ಪೂಜೆ ಮಾಡೋದಿಲ್ಲ, ದೇವರಲ್ಲಿ ನಂಬಿಕೆಯಿಲ್ಲ, ಹಿಂದೂ ಪೂಜೆಗಳಲ್ಲಿ, ಆಚರಣೆಗಳಲ್ಲಿ ನಂಬಿಕೆ ಇಲ್ಲದವರು ರಾಜಕೀಯ ಅಸ್ತಿತ್ವಕ್ಕಾಗಿ ಸಿದ್ದರಾಮಯ್ಯನವರನ್ನು ತಮ್ಮ ‘ಮನೆ ದೇವ’ ರಾಗಿ ಮಾಡಿಕೊಂಡಿರುವ ನೀವು ಎಂತ ಅವಕಾಶವಾದಿಗಳು ಎಂದು ಜನತೆಗೆ ಗೊತ್ತಾಗುತ್ತಿದೆ.ಸಂದರ್ಭಕ್ಕೆ ತಕ್ಕಂತೆ ಊಸರವಳ್ಳಿಯ ರೀತಿ ಬಣ್ಣ ಬದಲಿಸುವ ರಾಜಕಾರಣಿಗಳಿಂದಲೇ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ಮರೀಚಿಕೆ ಆಗಿರುವುದುಎಂದು ಬರೆದುಕೊಂಡಿದ್ದಾರೆ. ಜಾರಕಿಹೊಳಿ ಹೇಳಿದ್ದೇನು? ನಿನ್ನೆ ಬೆಳಗಾವಿಯ ಹುಕ್ಕೇರಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕಾರ್ಯಕರ್ತರಂತೆ ನಾನು ಕೂಡ ಅವರನ್ನ ದೇವರೆಂದು ನೋಡುತ್ತೇನೆ ಎಂದು ತಿಳಿಸಿದ್ದಾರೆ. ಅವರವರ ನಾಯಕರನ್ನ…
ಕೋಲಾರ : ಕೊಚಿಮುಲ್ ನೇಮಕಾತಿಯಲ್ಲಿ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಮನೆಯ ಮೇಲೆ ಬೆಳ್ಳಂ ಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ಕೆ. ವೈ ನಂಜೇಗೌಡನ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಂಜೇಗೌಡರಿಗೆ ಸೇರಿದ ನಾಲ್ಕು ಕಡೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಲೂರು ತಾಲೂಕಿನ ಕಮ್ಮನಹಳ್ಳಿ ಯಲ್ಲಿರುವ ಮನೆಯಲ್ಲಿ ಈಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹುತ್ತೂರು ಹೋಬಳಿ ಕಚೇರಿಯಲ್ಲಿ ಕೂಡ ಅಧಿಕಾರಿಗಳು ದಾಖಲೆ ನಡೆಸುತ್ತಿದ್ದಾರೆ. ಅದೇ ರೀತಿಯಾಗಿ ಕೋಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್ನಲ್ಲು ಪರಿಶೀಲನೆ ನಡೆಸುತ್ತಿದ್ದಾರೆ.ಕೊಚಿಮುಲ್ ನೇಮಕಾತಿಯಲ್ಲಿ ಅವ್ಯವಹಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಗದಗ : ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಅಂಗವಾಗಿ ಗದಗ ಜಿಲ್ಲೆಯ ಲಕ್ಷ್ಮಿಪುರ ತಾಲೂಕಿನ ಸುಣದೂರು ಗ್ರಾಮದಲ್ಲಿ ನೀಲಗಿರಿ ತೋಪಿನಲ್ಲಿ ಯಶ್ ಅವರ ಭಾವಚಿತ್ರದ ಕಟಾವುಟನ್ನು ಅಳವಡಿಸಲು ಹೋದಾಗ ವಿದ್ಯುತ್ ಶಾಕ್ ಪ್ರವಹಿಸಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ನಾಲ್ವರು ಯುವಕರು ಮತ್ತೆ ಗಂಭೀರವಾದಂತಹ ಸ್ಥಿತಿಯಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ. ನೀಲಗಿರಿ ತೋಪಿನಲ್ಲಿ ತಡರಾತ್ರಿ ನಡೆದಿರುವಂತಹ ಘಟನೆಯಾಗಿದ್ದು, ಹನುಮಂತ್ ಹರಿಜನ್ (21) ಮುರಳಿ ನಡುವಿನಮನಿ (20) ನವೀನ್ (19) ಮೃತ ದುರ್ದೈವಿಗಳಾಗಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ದುರಂತದಲ್ಲಿ ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಮಂಜುನಾಥ್ ದೀಪಕ್ ಹರಿಜನ್ ಹಾಗೂ ಪ್ರಕಾಶ್ ಎಂಬ ಯುವಕರಿಗೆ ಗಂಭೀರವಾದಂತಹ ಗಾಯಗಳಾಗಿವೆ.ತಡರಾತ್ರಿ ಬರ್ತಡೆ ಬ್ಯಾನರ್ ಕಟ್ಟುವಾಗ ನಡೆದ ದುರಂತವಾಗಿದೆ ಎಂದು ತಿಳಿದುಬಂದಿದೆ. ತಡ ರಾತ್ರಿಯ ಸುಮಾರು 25 ಅಡಿಗು ಹೆಚ್ಚು ಎತ್ತರವಾಗಿರುವಂತಹ ಯಶ್ ಬ್ಯಾನರ್ ಅವರನ್ನು ಕಟ್ಟುವ ವೇಳೆ ವಿದ್ಯುತ್ ಶಾಕ್ ತಗೋಳಿ ಸ್ಥಳದಲ್ಲಿ ಮೂವರು ಯುವಕರು ಸಾವನಪ್ಪಿದ್ದಾರೆ. ಮೂವರು ಯುವಕರು ಕೂಲಿನಲ್ಲಿ…
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಗೋರಿ ಧ್ವಂಸ ಮಾಡಿದ್ದ 14 ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ಗೆ ಚಾರ್ಜ್ ಶೀಟ್ ಸಲ್ಲಿಸಲು ಸರ್ಕಾರ ಅನುಮತಿ ನೀಡಿ ಸಮನ್ಸ್ ಜಾರಿ ಮಾಡಿದೆ. ಸರ್ಕಾರದ ಅನುಮತಿ ಮೇರೆಗೆ 7 ವರ್ಷಗಳ ಬಳಿಕ ಪೊಲೀಸರು ದತ್ತ ಪೀಠ ಹೋರಾಟಗಾರರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಿಕ್ಕಮಗಳೂರು JMFC ನ್ಯಾಯಾಲಯದಿಂದ ಸಮನ್ಸ್ ಜಾರಿ ಆಗಿದೆ. ಈ ಹಿನ್ನೆಲೆ ಚಿಕ್ಕಮಗಳೂರು JMFC ನ್ಯಾಯಾಲಯಕ್ಕೆ 14 ಆರೋಪಿಗಳು ಇಂದು ಹಾಜರಾಗಲಿದ್ದಾರೆ. ಸರ್ಕಾರದ ಅನುಮತಿ ಮೇರೆಗೆ 7 ವರ್ಷಗಳ ಬಳಿಕ ಪೊಲೀಸರು ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗ, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್ ಮಹೇಂದ್ರ, ಸಂದೀಪ್, ರಾಮು ಸೇರಿದಂತೆ 14 ಆರೋಪಿಗಳು ಎಂದು ಹೇಳಲಾಗುತ್ತಿದೆ. ಡಿ.8 ರಂದು ನ್ಯಾಯಾಲಯಕ್ಕೆ…
ಮೈಸೂರು : ನನ್ನ ಸಾವಿಗೆ ಉಪ ತಹಶೀಲ್ದಾರರೇ ಕಾರಣ ಎಂದು ಅವರ ಹೆಸರನ್ನು ಡೆತ್ ನೋಟಲ್ಲಿ ಬರೆದಿಟ್ಟು ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ ಮಾಡಿ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ. ಉಪತಹಶೀಲ್ದಾರ್ ಶಿವಕುಮಾರ್ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು, ಹಿಂಸೆ ಕೊಡುತ್ತಿದ್ದಾರೆಂದು ಕಂಪ್ಯೂಟರ್ ಆಪರೇಟರ್ ಪರಮೇಶ್ ಎನ್ನುವ ವ್ಯಕ್ತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಪರಮೇಶನನ್ನು ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಂಪ್ಯೂಟರ್ ಆಪರೇಟರ್ ಪರಮೇಶ್ ಸಾವನ್ನಪ್ಪಿದ್ದಾರೆ. ನನ್ನ ಸಾವಿಗೆ ಉಪತಹಶಿಲ್ದಾರ್ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಲ್ಲಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿರುವಂತಹ ಪ್ರಕರಣವಾಗಿದೆ.
ಗದಗ : ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ದುರ್ಮರಣ ಹೊಂದಿ ಇನ್ನು ಮೂವರು ಯುವಕರಿಗೆ ಗಂಭೀರವಾದಂತ ಗಾಯಗಳಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುರಣಗಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ನೀಲಗಿರಿ ತೋಪಿನಲ್ಲಿ ತಡರಾತ್ರಿ ನಡೆದಿರುವಂತಹ ಘಟನೆಯಾಗಿದ್ದು, ಹನುಮಂತ್ ಹರಿಜನ್ (21) ಮುರಳಿ ನಡುವಿನಮನಿ (20) ನವೀನ್ (19) ಮೃತ ದುರ್ದೈವಿಗಳಾಗಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ದುರಂತದಲ್ಲಿ ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಮಂಜುನಾಥ್ ದೀಪ ಹರಿಜನ್ ಹಾಗೂ ಪ್ರಕಾಶ್ ಎಂಬ ಯುವಕರಿಗೆ ಗಂಭೀರವಾದಂತಹ ಗಾಯಗಳಾಗಿವೆ.ತಡರಾತ್ರಿ ಬರ್ತಡೆ ಬ್ಯಾನರ್ ಕಟ್ಟುವಾಗ ನಡೆದ ದುರಂತವಾಗಿದೆ ಎಂದು ತಿಳಿದುಬಂದಿದೆ. ನಟ ಯಶ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬ್ಯಾನರ್ ಕಟ್ಟುವ ವೇಳೆ ಬ್ಯಾನರನ್ನು ಮೇಲಕ್ಕೆ ಎತ್ತುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ತಗುಲಿದಾಗ ವಿದ್ಯುತ್ ಶಾಕ್ ಆಗಿ ಮೂರು ಯುವಕರು ದುರ್ಮರಣ ಹೊಂದಿದ್ದಾರೆ. ಅಪರಿಚಿತ ವಾಹನ ಡಿಕ್ಕಿ : ಇಬ್ಬರು ಬೈಕ್ ಸವಾರರ ಸಾವು ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ…
ಬೆಂಗಳೂರು : ಮನೆ ಕೆಲಸದವಳ ಜೊತೆ ಪತಿಯು ಅನೈತಿಕ ಸಂಬಂಧ ಹೊಂದಿದ್ದಾರೆ ಅಲ್ಲದೆ ಕುಡಿದು ಬಂದು ಹಲ್ಲೆ ನಡೆಸಿದ್ದಾರೆ ಎಂದು ಪತ್ನಿಯು ಪತಿಯ ವಿರುದ್ಧ ದೂರು ದಾಖಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಪತಿ ಸುನಿಲ್ ವಿರುದ್ಧ ಪತ್ನಿ ದೂರು ದಾಖಲಿಸಿದ್ದು,ಮನೆ ಕೆಲಸದವಳ ಜೊತೆ ಪತಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿರುವ ಪತ್ನಿ ಸುನಿಲ್ ವಿರುದ್ಧ ಬೆಂಗಳೂರಿನ ಚಂದ್ರಾ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿಗೆ ಜನೆವರಿ 3 ರಂದು ಪತಿ ಸುನೀಲ್ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಮಲಗಿಸಿದ್ದಾರೆ. ನಂತರ ಕೆಲಸದವಳ ಜೊತೆ ರಾಸಲೀಲೆ ನಡೆಸಿದ್ದಾರೆ ಎಂದು ಪತ್ನಿಯ ಆರೋಪವಾಗಿದೆ.ಅಲ್ಲದೆ ಬೆಟ್ಟಿಂಗ್ ಹಾಗೂ ಕುಡಿದು ಬಂದು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮನೆ ಕೆಲಸ ಹೋದವಳ ಜೊತೆ ಪತಿ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾಳೆ.ಜನವರಿ ಮೂರರಂದು ಪತ್ನಿಗೆ ಊಟದಲ್ಲಿ ನಿದ್ರೆ ಮಾತ್ರ ಹಾಕಿದ್ದ ಪತಿ ಸುನಿಲ್ ನಂತರ ಪ್ರತಿ ಬಂದಾಗ ಮನೆ…
ಬೆಳಗಾವಿ : ಉಚ್ಚಗಾವಿಯಲ್ಲಿ ನಡೆದ ಹಿಂದೂ ಸ್ನೇಹ ಸಮ್ಮೇಳನದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಕರ್ನಾಟಕದಲ್ಲಿ ಈಗ ಔರಂಗಜೇಬನ ಮಾದರಿ ಆಡಳಿತ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಬೆಳಗಾವಿ ತಾಲೂಕಿನಲ್ಲಿ ಏನೆಲ್ಲಾ ಘಟನೆಗಳು ನಡೆದಿವೆ. ಮಣಿಪುರದಲ್ಲೂ ಆಗದಿರುವ ಅಂತಹ ರೀತಿ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿವೆ. ಮಹಿಳೆಯ ಮೇಲೆ ದೌರ್ಜನ್ಯ ನಡೆಸಲಾಗಿದೆ. ಎಂಥಾ ಸರ್ಕಾರ ಆಯ್ಕೆ ಮಾಡಿದ್ದೇವೆ ಎಂದು ಯೋಚನೆ ಮಾಡುವಂತಾಗಿದೆ ಎಂದು ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆದಿದೆ. ಯುವಕನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕೆಎಸ್ ದಾಖಲಾಗಿಲ್ಲ ಏಕೆಂದರೆ ಹಲ್ಲೆ ಮಾಡಿದವರು ಆಫ್ಜಲ್ ಗುರು ಹಾಗೂ ದಾವೂದ್ ಸಂಬಂಧಿಗಳಾಗಿದ್ದಾರೆ.ಎಂದು ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಬೆಂಗಳೂರು : ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನೆಲೆಯಲ್ಲಿ ರಾಜ್ಯದಲ್ಲೂ ಕೂಡ ಕರೋನ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದೀಗ ಗದಗ ಜಿಲ್ಲೆಯಲ್ಲಿ ಕರೋನಾ ಸೋಂಕಿಗೆ 48 ವರ್ಷದ ವ್ಯಕ್ತಿ ಒಬ್ಬರು ಬಲಿಯಾಗಿರುವ ಘಟನೆ ವರದಿಯಾಗಿದೆ. ಕೊರೊನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಗದಗ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಕೊರೊನ ಸೋಂಕಿಗೆ ಒಳಗಾಗಿ ಇದೀಗ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಬೆಂಗಳೂರಿನಲ್ಲಿ 177 ಜನರಿಗೆ ಕೊರೋನ ಸೋಂಕು ದೃಢವಾಗಿದ್ದು, ರಾಜ್ಯದಲ್ಲಿ ಕೊರೊನ ಪಾಸಿಟಿವ್ ರೇಟ್ ಶೇಕಡ 8.61 ಕ್ಕೆ ಏರಿಕೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ 1081 ಜನರಲ್ಲಿ ಕರೋನ ಸೋಂಕು ಸಕ್ರಿಯವಾಗಿದೆ ರಾಜ್ಯದಲ್ಲಿ ಈವರೆಗೆ 379 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಲ* ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರೋನ ಸೋಂಕು ಪ್ರಕರಣಗಳ ಕೇಸ್ ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.