Author: kannadanewsnow05

ಬೆಂಗಳೂರು : ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಶಾಂತಿನಗರದ ಇಡಿ ಕಚೇರಿಗೆ ಕೆಲವೇ ಕ್ಷಣಗಳಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ವಿಚಾರಣೆಗೆ ಹಾಜರಾಗಲಿದ್ದಾರೆ.ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಸಿದ ಡಿಕೆ ಸುರೇಶ್ ಅವರು, ಯಾರೋ ಒಬ್ಬ ನಟ ನನ್ನ ಧ್ವನಿಯನ್ನು ಮಿಮಿಕ್ರಿ ಮಾಡಿ ಹಲವರಿಗೆ ವಂಚನೆ ಮಾಡಿದ್ದಾರೆ, ಧ್ವನಿ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು. ವಿಚಾರಣೆಗು ಮುನ್ನ ವಕೀಲರ ಮೂಲಕ ಮಾಹಿತಿ ಪಡೆದು ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗುತ್ತೇನೆ. ಪ್ರಕರಣಕ್ಕೆ ಸಂಬಂಧವಿಲ್ಲದೆ ನನಗೆ ನೋಟಿಸ್ ಯಾಕೆ ಕೊಟ್ಟಿದ್ದಾರೆ ಅಂತ ಗೊತ್ತಾಗುತ್ತಿಲ್ಲ. ಯಾರೋ ಒಬ್ಬ ಮಹಿಳೆ ಮೌಖಿಕವಾಗಿ ನನ್ನ ಸಹೋದರಿ ಅಂತ ಹೇಳಿ ವಂಚನೆ ಮಾಡಿದ್ದಾರೆ. Iವಿಚಾರವಾಗಿ ನಾನೇ ಪೊಲೀಸ್ ಕಮಿಷನರ್ ಗೆ ದೂರು ಸಹ ನೀಡಿದ್ದೆ. ಅವರು ಮಾಡಿದ ವಂಚನೆ ಪ್ರಕರಣಕ್ಕೂ ನನಗೂ ಯಾವುದೇ ವಿಧವಾದ ಸಂಬಂಧವಿಲ್ಲ. ನನ್ನ ಕ್ಷೇತ್ರದವರು ಅಂತ ಎರಡು ಮೂರು ಬಾರಿ ಭೇಟಿಯಾಗಿದ್ದಾರೆ. ನಾನು ಅವರ ಎರಡು ಕಾರ್ಯಕ್ರಮಗಳಿಗೆ ಭೇಟಿ ಕೊಟ್ಟಿದ್ದೆ…

Read More

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಭೀಕರವಾದ ಕೊಲೆಯಾಗಿದ್ದು, ಮೈಕ್ ಸೆಟ್ ಬಾಕ್ಸ್ ನಿಂದ ಹೊಡೆದು ಬಿಕ್ಷುಕನನ್ನು ಕೊಲೆ ಮಾಡಲಾಗಿದೆ.ಬಿಹಾರ ಮೂಲದ ವಿಕಲಚೇತನ ಮಿತೇಶ್ (36) ಎನ್ನುವ ವ್ಯಕ್ತಿಯನ್ನು ರಾಜೇಶ್ ಹತ್ಯೆಗೈದಿದ್ದಾನೆ. ಹತ್ಯೆಯಾದ ಮಿತೇಶ್ ಹಾಗು ಕೊಲೆ ಆರೋಪಿ ರಾಜೇಶ್ ಕುಮಾರ್ ಇಬ್ಬರು ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಒಂದೇ ಬಾಡಿಗೆ ಮನೆಯಲ್ಲಿ ಮೀತೇಶ್ ಮತ್ತು ರಾಜೇಶ್ ವಾಸವಿದ್ದರು. ಇಬ್ಬರು ವಿಶೇಷ ಚೇತನರಾಗಿದ್ದು, ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ನಿನ್ನೆ ಮದ್ಯ ಸೇವಿಸಿ ಬಂದು ರಾಜೇಶ್ ತಾಯಿಗೆ ಮಿತೇಶ್ ಬೈದಿದ್ದ. ಇದರಿಂದ ಕೋಪಗೊಂಡು ರಾಜೇಶ್ ಮಿತೇಶ್ ತಲೆಗೆ ಹೊಡೆದಿದ್ದಾನೆ. ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮಿತೇಶ ಸಾವನಪ್ಪಿದ್ದಾನೆ, ಆರೋಪಿ ರಾಜೇಶ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ವಸತಿ ಯೋಜನೆ ಅಡಿ ಮನೆ ಹಂಚಿಕೆಗೆ ಲಂಚ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಇದೀಗ ರಾಜ್ಯಪಾಲ ಥಾವರ್ ಚೆಂದ ಗೆಹ್ಲೊಟ್ ಅವರಿಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಆದೇಶ ನೀಡುವಂತೆ ರಾಜ್ಯಪಾಲರಿಗೆ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ. ಆಳಂದ್ ಶಾಸಕ ಬಿ.ಆರ್ ಪಾಟೀಲ್ ಹೇಳಿಕೆಯಿಂದ ಸರ್ಕಾರದ ಭ್ರಷ್ಟಾಚಾರ ಹೊರಬಂದಿದೆ. ಬಡವರಿಗೆ ಹಂಚುವ ಮನೆಗಳಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಬಿ.ಆರ್ ಪಾಟೀಲ್ ಅಧಿಕೃತ ಹೇಳಿಕೆಯನ್ನು ಆಧಾರವಾಗಿ ಪರಿಗಣಿಸಿ. ಕೇವಲ ಒಂದು ಇಲಾಖೆ ಅಥವಾ ನಿರ್ದಿಷ್ಟ ಅಧಿಕಾರಿಗಳ ವೈಫಲ್ಯವಲ್ಲ ಇದು ಸರ್ಕಾರದ ಆಡಳಿತಾತ್ಮಕ ವೈಫಲ್ಯ. ಹಾಗಾಗಿ ಈ ಒಂದು ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಎಂದು ದಿನೇಶ್ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ನ್ಯಾಯ ಸಮ್ಮತ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ ಎಂದು ಬಿ.ಆರ್ ಪಾಟೀಲ್ ಹೇಳಿಕೆ ಆಡಿಯೋ ಸಮೇತ ದಿನೇಶ್ ಕಲಹಳ್ಳಿ ರಾಜಪಾಲರಿಗೆ ದೂರು ನೀಡಿದ್ದಾರೆ. ಸಂಬಂಧಪಟ್ಟ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು, ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ಟಕ್ಕಿ ಒಬ್ಬರು ಸ್ಥಳದಲ್ಲಿ ಸಾವನಪ್ಪಿರುವ ಘಟನೆ, ಬೆಂಗಳೂರಿನ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಟೆಕ್ಕಿಯನ್ನು ಆಂಧ್ರಪ್ರದೇಶದ ಕರ್ನೂಲ್ ಮೂಲದ ಸಲಗುಣ ಪ್ರದೀಪ್ (25) ಎಂದು ತಿಳಿದುಬಂದಿದೆ. ಸಾಫ್ಟ್ವೇರ್‌ಇಂಜಿನಿಯರ್ ಆಗಿದ್ದ ಸಲಗುಣ ಪ್ರದೀಪ್, ನಗರದ ಕಲ್ಕೆರೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಶನಿವಾರ ಸಂಜೆ ಬೈಕ್ ನಲ್ಲಿ ಕಲ್ಯಾಣನಗರದಲ್ಲಿ ತೆರಳುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಪರಿಣಾಮ ರಸ್ತೆಗೆ ಬಿದ್ದ ಸಲಗುಣ ಪ್ರದೀಪ್ ಗಾಯಗೊಂಡಿದ್ದರು, ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಬೈಕ್ಕೆ ಡಿಕ್ಕಿ ಹೊಡೆದ ಅಪರಿಚಿತ ವಾಹನದ ಚಾಲಕ ಪರಾರಿಯಾಗಿದ್ದು, ಘಟನಾ ಸ್ಥಳದ ಸಿಟಿಟಿವಿ ದೃಶ್ಯಾವಳಿ ಪರಿಶೀಲಿಸಿ ವಾಹನ ಸವಾರನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Read More

ಬೆಂಗಳೂರು : ಮಾಜಿ ಸಂಸದ ಅಡಿಕೆ ಸುರೇಶ್ ಸಹೋದರಿ ಎಂದು ಹೇಳಿ ಕೋಟ್ಯಾಂತರ ರೂಪಾಯಿ ಚೆನ್ನಾಭರಣ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ಕೋರ್ಟ್ ಐಶ್ವರ್ಯ ಗೌಡಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಅದೇ ದಿವಸ ಮಾಜಿ ಸಂಸದ ಡಿಕೆ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗಿ ಎಂದು ಇಡಿ ನೋಟಿಸ್ ಜಾರಿ ಮಾಡಿತ್ತು. ಹೌದು ಇತ್ತೀಚಿಗೆ ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಡಿ ಸಂಸದ ಡಿಕೆ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್ ನೀಡಿದ್ದರು. ಕಳೆದ ಜೂನ್ 19ರಂದೆ ಡಿಕೆ ಸುರೇಶ್ ವಿಚಾರಣೆಗೆ ಹಾಜರಾಗಬೇಕಿತ್ತು, ಆದರೆ ಕಾರಣಾಂತರಗಳಿಂದ ಹಾಜರಾಗಿಲ್ಲ. ಹಾಗಾಗಿ ಇಂದು ಇಡಿ ವಿಚಾರಣೆಗೆ ಅವರು ಹಾಜರಾಗಲಿದ್ದಾರೆ. ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ.

Read More

ಮಂಡ್ಯ : ನಿನ್ನೆ ತಾನೆ ಚಿತ್ರದುರ್ಗದಲ್ಲಿ 82 ವರ್ಷದ ವೃದ್ಧನನ್ನು ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸ್ವಂತ ಮಕ್ಕಳೇ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ನಡೆದಿತ್ತು. ಈ ಒಂದು ಘಟನೆ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲಿ ಮತ್ತೊಂದು ಮನಕಲಕುವ ಘಟನೆ ನಡೆದಿದ್ದು ಮಗನೊಬ್ಬ ತನ್ನ ಮಾನಸಿಕ ಅಸ್ವಸ್ಥಳಾದ ಹೆತ್ತ ತಾಯಿಯನ್ನೆ ಬೀದಿಗೆ ಬಿಟ್ಟು ಹೋಗಿರುವ ಘಟನೆ ನಡೆದಿದೆ. ಹೌದು ಮಾನಸಿಕ ಅಸ್ವಸ್ಥ ತಾಯಿಯನ್ನು ಮಗ ಬಿಟ್ಟು ರಸ್ತೆಯಲ್ಲಿ ಹೋಗಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ. ವೃದ್ಧೆಯ ವಿಡಿಯೋ‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಬರುತ್ತೇನೆ, ಇಲ್ಲೇ ಇರು’ ಎಂದು ರಸ್ತೆಯಲ್ಲಿ ತಾಯಿಯನ್ನು ಬಿಟ್ಟು ಮಗ ಹೋಗಿದ್ದ ಎನ್ನಲಾಗಿದೆ. ಮಗನ ಬರುವಿಕೆಗಾಗಿ ಕಾಯುತ್ತಿದ್ದ ತಾಯಿ, ‘ನನ್ನ ಮಗ ಬಂದು ಕರೆದುಕೊಂಡು‌ ಹೋಗುತ್ತಾನೆ’ ಎನ್ನುತ್ತಿದ್ದರು. ಸುಮಾರು 70 ರಿಂದ 80 ವರ್ಷದ ವೃದ್ಧೆಗೆ ಸ್ಥಳೀಯರು ಆಹಾರ ನೀಡಿ ರಕ್ಷಿಸಿದ್ದಾರೆ. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವೃದ್ಧೆಯನ್ನು…

Read More

ಮಂಡ್ಯ : ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ಲಂಚ ಪಡೆದ ವಿಚಾರ ಸದ್ಯ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರ ಮಧ್ಯ ಸಾಬ್ರ ಹೆಸ್ರರಿಗೆ ಏನಾದ್ರು ಪರಭಾರೆ ಮಾಡಿದ್ರೆ ನೇಣಿಗೆ ಹಾಕುವುದಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಶಾಸಕರಾದಂತಹ ರಮೇಶ್ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಧಮ್ಕಿ ಹಾಕಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಹೌದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಬ್ರು ಹೆಸರಿಗೆ ನೊಂದಣಿ ಮಾಡದಂತೆ ಜನರ ಮುಂದೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಇದುವರೆಗೂ ಮುಸ್ಲಿಂರ ಪರ ಇದ್ದ ಶಾಸಕ ಇದೀಗ ಸಾಬ್ರು ಎಂದು ಉಲ್ಟಾ ಹೊಡೆದಿದ್ದಾರೆ. ಬಂಡಿಸಿದ್ದೇಗೌಡರ ಈ ಒಂದು ಹೇಳಿಕೆಗೆ ವ್ಯಾಪಾಕ ವಿರೋಧ ವ್ಯಕ್ತವಾಗುತ್ತಿದೆ. ಕಾರ್ಯಕ್ರಮದ ಬಳಿಕ ಅಧಿಕಾರಿಗಳಿಗೆ ಬಹಿರಂಗವಾಗಿ ಧಮ್ಮಿ ಹಾಕಿದ್ದಾರೆ. ಬಗರ್ ಉಕ್ಕುಂನಲ್ಲಿ ಅರ್ಜಿ ಹಾಕಿರೋ ಸಾಬ್ರಿಗೆ ಖಾತೆ ಮಾಡದಂತೆ ತಾಕೀತು ಮಾಡಿದ್ದಾರೆ. ಸರ್ಕಾರಿ ಜಮೀನು ಸರ್ಕಾರಕ್ಕೆ ಇರಬೇಕು. ಯಾರಾದ್ರು ಅದನ್ನ ಸಾಬ್ರು ಹೆಸ್ರಿಗೆ ಮಾಡಿದ್ರೆ ನೇಣಾಕೋದು ಗ್ಯಾರಂಟಿ…

Read More

ಮಂಡ್ಯ : ಮಂಡ್ಯದಲ್ಲಿ ಇಂದು ಘೋರವಾದ ದುರಂತ ಒಂದು ನಡೆದಿದ್ದು, ವಿದ್ಯುತ್ ಕಂಬವನ್ನು ಅಳವಡಿಸುವ ವೇಳೆ ತಲೆಯ ಮೇಲೆ ವಿದ್ಯುತ್ ಕಂಬ ಮುರಿದುಬಿದ್ದು ಲೈನ್ ಮ್ಯಾನ್ ಒಬ್ಬರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಸಹಳ್ಳಿಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಮಳವಳ್ಳಿ ತಾಲೂಕಿನ ಹಲಸ ಹಳ್ಳಿಯಲ್ಲಿ ಇಂದು ವಿದ್ಯುತ್ ಕಂಬವನ್ನು ಅಳವಡಿಸಲಾಗುತ್ತಿತ್ತು. ವಿದ್ಯುತ್ ಕಂಬ ಅಳವಡಿಸುವ ವೇಳೆ ಕಂಬ ಏಕಾಏಕಿ ಮುರಿದುಬಿದ್ದಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಕುಲುಮೆ ದೊಡ್ಡಿ ಗ್ರಾಮದ ಕುಮಾರ್ (31) ಸಾವನ್ನಪ್ಪಿದ್ದಾರೆ. ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳಗಾವಿ : ನಿನ್ನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಶಿವಾಪುರ ಗ್ರಾಮದಲ್ಲಿರುವ ಅಡವಿಸಿದ್ದೇಶ್ವರ ಮಠದಲ್ಲಿ ಸ್ವಾಮೀಜಿಯ ಅನಾಚಾರ ಆರೋಪದ ವಿಚಾರವಾಗಿ, ಅಡವಿ ಸಿದ್ದರಾಮ ಶ್ರೀ ಮೇಲೆ ಹಲ್ಲೆ ಮಾಡಿ ಯುವಕರು ಎಳೆದಾಡಿರುವ ಘಟನೆ ನಡೆದಿದೆ. ಹೌದು ಮಠಕ್ಕೆ ಬಂದಿದ್ದ ಬಾಗಲಕೋಟೆ ಮೂಲದ ಮಹಿಳೆ ಮತ್ತು ಆಕೆಯ 15 ವರ್ಷದ ಮಗಳು ಮಠದಲ್ಲೇ ರಾತ್ರಿ ಉಳಿದುಕೊಂಡಿದ್ದರು. ಮಹಿಳೆಯರ ಜೊತೆ ಸ್ವಾಮೀಜಿ ಇದ್ದಾರೆಂದು ಯುವಕರು ಮಠಕ್ಕೆ ನುಗ್ಗಿದ್ದಾರೆ. ಈ ವೇಳೆ ಒಂದೇ ರೂಮ್ನಲ್ಲಿ ಸ್ವಾಮೀಜಿ ಮತ್ತು ಮಹಿಳೆ ಮತ್ತು ಆಕೆ ಮಗಳು ಇದ್ದರು. ಸ್ವಾಮೀಜಿಯನ್ನು ತಳ್ಳಿ ಮಹಿಳೆ ಅಪ್ರಾಪ್ತ ಮಗಳ ಜೊತೆಗೆ ಯುವಕರು ಅಸಭ್ಯ ವರ್ತನೆ ತೋರಿದ್ದಾರೆ. ಬಾಲಕಿ ಬಟ್ಟೆಹರಿದು ಯುವಕರು ಎಳೆದಾಡಿದ್ದಾರೆ. ಈ ವೇಳೆ ರಕ್ಷಣೆಗೆ ನಿಂತ ಸ್ವಾಮೀಜಿಗೆ ಯುವಕರು ಕಪಾಳ ಮೋಕ್ಷ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರು ಈ ವೇಳೆ ಮಹಿಳೆಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಬಳಿಕ ಗ್ರಾಮಸ್ಥರು ರಾತ್ರಿಯ ಅಡವಿಸಿದ್ದರಾಮ ಸ್ವಾಮೀಜಿಯನ್ನು ಮಠದಿಂದ ಹೊರ…

Read More

ಉತ್ತರಕನ್ನಡ : ರಾಜ್ಯದಲ್ಲಿ ಪರಿಸಿದ್ಧವಾದ ಹಿಂದೂ ದೇವಸ್ಥಾನವಾಗಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಸ್ಥಾನದಲ್ಲಿ ಇದೀಗ ವಸ್ತ್ರ ಸಂಹಿತೆ ನಿಯಮ ಜಾರಿಗೆ ಮಾಡಿದ್ದು, ಮುರುಡೇಶ್ವರದಲ್ಲಿರುವ ಶಿವನ ದರ್ಶನಕ್ಕೆ ಭೇಟಿ ಕೊಡುವ ಭಕ್ತಾದಿಗಳು ಕಡ್ಡಾಯವಾಗಿ ವಸ್ತ್ರ ಸಂಹಿತೆ ನಿಯಮ ಪಾಲಿಸಬೇಕು ಎಂದು ದೇವಸ್ಥಾನದ ಆಡಳಿತ ಸೂಚನೆ ಹೊರಡಿಸಿದೆ. ಈ ಕುರಿತು, ಭಕ್ತರು ವಸ್ತ್ರಸಂಹಿತೆ ಪಾಲಿಸುವಂತೆ ವಿನಂತಿಸಿ ಸಾರ್ವಜನಿಕರ ಗಮನಕ್ಕೆ ಬರುವಂತೆ ಬ್ಯಾನರ್ ಹಾಕಲಾಗಿದೆ. ಪುರುಷರು-ಅಂಗಿ ಧೋತಿ, ಪ್ಯಾಂಟ್ ಮತ್ತು ಕುರ್ತಾ ಪೈಜಾಮ, ಮಹಿಳೆಯರು-ಸೀರೆ, ಚೂಡಿದಾರ ಧರಿಸಿ ದೇವರ ದರ್ಶನ ಮಾಡಬಹುದೆಂದು ತಿಳಿಸಲಾಗಿದೆ. ದೇವಸ್ಥಾನದ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಆಗ್ರಹಿಸಿ 2022ರ ಡಿಸೆಂಬರ್ ನಲ್ಲಿ ಸನಾತನ ಹಿಂದೂ ಜನಜಾಗೃತಿ ಸಮಿತಿ ಸ್ಥಳೀಯ ಘಟಕ ಮತ್ತು ವಿವಿಧ ಹಿಂದೂ ಪರ ಸಂಘಟನೆ ವತಿಯಿಂದ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಲಾಗಿತ್ತು.

Read More