Subscribe to Updates
Get the latest creative news from FooBar about art, design and business.
Author: kannadanewsnow05
ನವದೆಹಲಿ : ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯಿಂದ ಇಬ್ಬರು ಕನ್ನಡಿಗರು ಸೇರಿದಂತೆ 30ಕ್ಕೂ ಹೆಚ್ಚು ಪ್ರವಾಸಿಗರು ಬಲಿಯಾಗಿದ್ದಾರೆ ಘಟನೆ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮ ಕೈಗೊಂಡಿದ್ದು, ಇದೀಗ ಗಡಿಯಲ್ಲಿ ಮತ್ತೆ ಪಾಕಿಸ್ತಾನ ಬಾಲ ಬಿಚ್ಚಿದ್ದು, ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ. ಹೌದು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ಮಾಹಿತಿ ಪ್ರಕಾರ ಎಲ್ ಓ ಸಿ ಯಲ್ಲಿ ಪಾಕ್ ಸೇನೆಯಿಂದ ಗುಂಡಿನ ದಾಳಿ ನಡೆದಿದ್ದು, ಪಾಕ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯಿಂದಲೂ ಫೈರಿಂಗ್ ನಡೆಸಲಾಗಿದೆ. ಪಾಕ್ ಸೇನಾ ಶಿಬಿರಗಳ ಮೇಲೆ ಭಾರತ ಫೈರಿಂಗ್ ಮಾಡಿದೆ ಎಂದು ತಿಳಿದುಬಂದಿದೆ. ನಿಯಂತ್ರಣ ರೇಖೆಯ ಕೆಲವು ಸ್ಥಳಗಳಲ್ಲಿ ಪಾಕಿಸ್ತಾನ ಸೇನೆಯು ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿತು. ಭಾರತೀಯ ಸೇನೆಯು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿತು. ಯಾವುದೇ ಸಾವುನೋವು ಸಂಭವಿಸಿಲ್ಲ. ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ…
ಕೊಡಗು : ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದ್ದು, ಕಾಡಾನೆ ದಾಳಿಯಿಂದ ಸೊಳ್ಳೆಕೊಡಿ, ಚಿನ್ನಪ್ಪ (70) ಇದೀಗ ಸಾವನ್ನಪ್ಪಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಬಹಿರ್ದೆಸೆಗೆ ತೆರಳಿದ್ದಾಗ ವೃದ್ಧನ ಮೇಲೆ ಕಾಡಾನೆ ದಾಳಿ ಮಾಡಿದೆ. ಸ್ಥಳಕ್ಕೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ ಪುವಯ್ಯ ಭೇಟಿ ನೀಡಿದ್ದಾರೆ. ಎರಡು ದಿನಗಳಲ್ಲಿ ಕಾಡಾನೆಗಳಿಗೆ ಇಬ್ಬರು ಬಲಿಯಾಗಿದ್ದಾರೆ. ಪಾಲಿ ಬೆಟ್ಟದಲ್ಲಿ ನಿನ್ನೆ ಕಾಡಾನೆ ವ್ಯಕ್ತಿ ಒಬ್ಬನನ್ನು ಬಲಿ ಪಡೆದಿತ್ತು.
ಬೆಂಗಳೂರು : ಸರಕು ಸಾಗಣೆ ಮಾಡಲು 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ವಾಣಿಜ್ಯ ತೆರಿಗೆ ಪರಿವೀಕ್ಷಕ ಎಂ.ಆರ್. ನಿಜಾನಂದಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಖಾಸಗಿ ವ್ಯಕ್ತಿ ಮನೋಜ್ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ನಗರದ ನಾಗರಭಾವಿ ಬಳಿಯ ನಮ್ಮೂರ ತಿಂಡಿ ಹೊಟೇಲ್ ಬಳಿ ಮನೋಜ್ ಅವರಿಂದ ಆರೋಪಿ 20 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ಸರಕು ಸಾಗಾಣಿಕೆ ಕಂಪನಿಗಳ ಮಾಲೀಕರ ಕಡೆಯಿಂದ ಪ್ರತಿ ತಿಂಗಳು ಲಂಚದ ಹಣವನ್ನು ಪಡೆದುಕೊಂಡು, ದೆಹಲಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆದ್ದಾರಿ ಮಾರ್ಗವಾಗಿ ಪಾನ್ ಮಸಾಲವನ್ನು ಸಾಗಾಣಿಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದರು. ಕಾನೂನನ್ನು ಪಾಲಿಸದೆ ಖಾಸಗಿ ಕಂಪನಿ ಹಾಗೂ ಖಾಸಗಿ ಜನರಿಗೆ ಕಾನೂನು ಬಾಹಿರ ಲಾಭ…
ಬೆಂಗಳೂರು : ಮಾಜಿ ಸಂಸದ ಡಿಕೆ ಸುರೇಶ್ ಹೆಸರು ಬಳಸಿ ಐಶ್ವರ್ಯಗೌಡ ವಂಚನೆ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ನಿವಾಸದ ಮೇಲೆ ದಾಳಿ ಮಾಡಿದ್ದರು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದೀಗ ಇಂದು ಕೂಡ ಇಡಿ ಅಧಿಕಾರಿಗಳ ಶೋಧ ಮುಂದುವರೆದಿದೆ. ಹೌದು ಇಡಿ ಅಧಿಕಾರಿಗಳು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಿವಾಸದಲ್ಲಿ ಪರಿಶೀಲನೆ ಇಂದು ಕೂಡ ಮುಂದುವರಿಸಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಶಾಸಕ ವಿನಯ್ ಕುಲಕರ್ಣಿ ನಿವಾಸದಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಬ್ಯಾಂಕ್, ಆಸ್ತಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಶಾಸಕ ವಿನಯ್ ಕುಲಕರ್ಣಿ ಮನೆಯಲ್ಲಿಯೇ ಇದ್ದಾರೆ. ಐಶ್ವರ್ಯ ಗೌಡ ವಂಚನೆ ಕೇಸ್ ನಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರುವ ಶಂಕೆ ವ್ಯಕ್ತವಾಗಿದ್ದು, ಐಶ್ವರ್ಯ ಗೌಡ ಐಶಾರಾಮಿ ಕಾರು ಶಾಸಕ ವಿನಯ್ ಕುಲಕರ್ಣಿ ಮನೆಯಲ್ಲಿ ಪತ್ತೆಯಾಗಿತ್ತು.…
ಬೆಳಗಾವಿ : ಬಡ್ಡಿ ವ್ಯವಹಾರಕ್ಕಾಗಿ ಇಬ್ಬರು ಸಹೋದರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ಮುಚ್ಚಂಡಿಯಲ್ಲಿ ನಡೆದಿದೆ. ಬಡ್ಡಿ ವ್ಯವಹಾರಕ್ಕಾಗಿ ಸಹೋದರರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಬಸವರಾಜ ಬಿರಾದಾರ್ ಹಾಗೂ ಜಗದೀಶ್ ಬಿರಾದಾರ್ ಎನ್ನುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಚೇತನ್ ಗುಡದೇವ್ವಗೋಳನಿಂದ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಈ ಒಂದು ಗಲಾಟೆಯಲ್ಲಿ ಎರಡು ಕಡೆಯವರಿಗೂ ತಲೆಗೆ ಗಾಯಗಳಾಗಿವೆ. ಮೂರು ತಿಂಗಳ ಹಿಂದೆ ಬಸವರಾಜ್ ಚೇತನ್ ಎನ್ನುವ ವ್ಯಕ್ತಿಯ ಬಳಿ ಹಣ ಪಡೆದಿದ್ದ. 10 ಸಾವಿರ ಸಾಲ ಪಡೆದಿದ್ದ. ಬಡ್ಡಿ ಹಣ ಕೊಡಲಿಲ್ಲ ಎಂದು ಮಾರಕಾಸ್ತ್ರಗಳಿಂದ ಇದೀಗ ಹಲ್ಲೆ ನಡೆಸಿದ್ದಾರೆ. ಬಸವರಾಜ ಮತ್ತು ಜಗದೀಶ್ ತಲೆಗೆ ಗಂಭೀರವಾದ ಗಾಯಗಳಾಗಿವೆ. ಚೇತನ್ ಗುಡದೇವ್ವಗೋಳ ತಲೆಗೂ ಗಾಯಗಳಾಗಿದ್ದು ಎಲ್ಲರನ್ನೂ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು : ಭತ್ತದ ರಾಶಿ ಮಾಡಲು ಕೂಲಿಕಾರರನ್ನು ಕರೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಒಂದು ಚಾಲಕನ ನಿಯಂತ್ರಣ ತಪ್ಪಿ ತುಂಗಭದ್ರಾ ಎಡದಂಡೆ ಉಪ ಕಾಲುವೆಯಲ್ಲಿ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 6 ಜನರಿಗೆ ಗಾಯಗಳಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಗಂಗಮ್ಮ (40) ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡ ಆರು ಜನರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ರಾಯಚೂರಿಗೆ ದಾಖಲಿಸಲಾಗಿದೆ.ಭತ್ತದ ರಾಶಿ ಮಾಡಲು ಕೂಲಿಕಾರರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಟ್ರ್ಯಾಕ್ಟರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ. ಘಟನೆ ತಿಳಿಯುತ್ತಲೇ ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ ರಾಯಚೂರಿಗೆ ಬಂದ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಧಿಕಾರವು (KEA) ಸಿಹಿ ಸುದ್ದಿ ನೀಡಿದ್ದು, ಮಾಸ್ಟರ್ ಆಫ್ ಆರ್ಕಿಟೆಕ್ಚರ್ ಗೆ ಪ್ರವೇಶ ಪಡೆಯಲು, ಯಾವುದೇ ಪ್ರತ್ಯೇಕವಾಗಿ ಪರೀಕ್ಷೆ ಇಲ್ಲ. ರಾಷ್ಟ್ರಮಟ್ಟದಲ್ಲಿ ನಡೆಸುವ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಅರ್ಹತಾ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಸ್ನಾತಕೋತರ ಆರ್ಕಿಟೆಕ್ಚರ್ ಪದವಿಗೆ ಪ್ರವೇಶ ಒಡೆಯಬಹುದು ಎಂದು ತಿಳಿಸಿದೆ. ಹೌದು ಇದುವರೆಗೂ ಪ್ರಾಧಿಕಾ ರವೇ ಪ್ರವೇಶ ಪರೀಕ್ಷೆ (PG CET) ಮಾಡಿ, ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಈ ವರ್ಷದಿಂದ ನಿಯಮ ಬದಲಿಸಿದ್ದು, ಆಸಕ್ತರು ರಾಷ್ಟ್ರಮಟ್ಟದ ಪರೀಕ್ಷೆ ತೆಗೆದುಕೊಂಡು, ಇಲ್ಲಿನ ಸೀಟುಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪ್ರಾಧಿಕಾರ ಯಾವುದೇ ಪ್ರವೇಶ ಪರೀಕ್ಷೆ ನಡೆಸು ವುದಿಲ್ಲ. ಹೀಗಾಗಿ ಆಸಕ್ತರು ರಾಷ್ಟ್ರಮಟ್ಟದ ಪರೀಕ್ಷೆ ತೆಗೆದು ಕೊಳ್ಳಲು ಕೋರಲಾಗಿದೆ ಎಂದು ಅವರು ವಿವರಿಸಿದ್ದಾರೆ. ಕಳೆದ ವರ್ಷ ಈ ಕೋರ್ಸ್ ನಲ್ಲಿ 136…
ಬೆಂಗಳೂರು : ಬೆಂಗಳೂರಲ್ಲಿ ನಿವೃತ್ತ ಡಿಜಿ-ಐಜಿಪಿ ಓಂಪ್ರಕಾಶ್ ಭೀಕರ ಕೊಲೆ ಪ್ರಕರಣದ ಆರೋಪಿ ಅವರ ಪತ್ನಿ ಪಲ್ಲವಿಯನ್ನು ಸಿಸಿಬಿ ಪೊಲೀಸರು 7 ದಿನ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸಿಸಿಬಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದ್ದು,ಪಲ್ಲವಿಯನ್ನುವಿಚಾರಣೆಗೆ ಒಳಪಡಿಸಲಾಗಿದೆ. ಈಗಾಗಲೇ ಆರೋಪಿ ಪಲ್ಲವಿ ತಾನೇ ಪತಿ ಓಂ ಪ್ರಕಾಶ್ ಅವರನ್ನು ಕೊಲೆ ಮಾಡಿದ್ದಾಗಿ ತಪ್ರೊಪ್ಪಿಕೊಂಡಿದ್ದಾರೆ. ಆದರೆ, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೌಟುಂಬಿಕ ಕಾರಣ ಅಥವಾ ಆಸ್ತಿ ವಿಚಾರಕ್ಕೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಕೊಲೆಗೆ ಕಾರಣ ಕುರಿತು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಎಚ್‌ಎಸ್‌ಆರ್ ಲೇಔಟ್‌ನ ನಿವಾಸದಲ್ಲಿ ಏ.20ರಂದು ಮಧ್ಯಾಹ್ನ ಓಂ ಪ್ರಕಾಶ್ ಅವರು ಊಟ ಮಾಡುತ್ತಿದ್ದರು. ಆಗ ಪತ್ನಿ ಪಲ್ಲವಿ ಚಾಕುವಿನಿಂದ ಇರಿದು ಅವರನ್ನು ಕೊಲೆ ಮಾಡಿದ್ದರು. ಬಳಿಕ ಪಲ್ಲವಿ ತನ್ನ ಸ್ನೇಹಿತೆಗೆ ವಿಡಿಯೋ ಕಾಲ್ ಮಾಡಿ ಪತಿಯ ಕೊಲೆ ವಿಚಾರ ತಿಳಿಸಿದ್ದರು. ಸುದ್ದಿತಿಳಿದ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು…
ಶ್ರೀನಗರ : ಜಮ್ಮು ಕಾಶ್ಮೀರದ ಪಹಲ್ಗಮ್ ನಲ್ಲಿ ನಡೆದ ಭೀಕರ ಉಗರ ದಾಳಿಗೆ ಇಬ್ಬರು ಕನ್ನಡಿಗರು ಸೇರಿದಂತೆ 30 ಪ್ರವಾಸಿಗರು ಸಾವನಪ್ಪಿದ್ದಾರೆ ಘಟನೆಯನ್ನು ಖಂಡಿಸಿದ ಭಾರತವು ಪಾಕಿಸ್ತಾನ ವಿರುದ್ಧ ಹಲವು ಕ್ರಮ ಕೈಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಜಮ್ಮು ಕಾಶ್ಮೀರದಲ್ಲಿ ‘LET’ ಸಂಪರ್ಕದಲ್ಲಿದ್ದ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಇದೀಗ ಅರೆಸ್ಟ್ ಮಾಡಿದ್ದಾರೆ. ಹೌದು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, LET ಸಂಪರ್ಕದಲ್ಲಿದ್ದ ಮೂವರು ಭಯೋತ್ಪಾದಕರನ್ನು ಇದೀಗ ಅರೆಸ್ಟ್ ಮಾಡಿದ್ದಾರೆ. ಮೂವರು ಭಯೋತ್ಪಾದಕರನ್ನು ಜಮ್ಮು ಕಾಶ್ಮೀರದ ಬಂಡಿಪೋರಾದಲ್ಲಿ ಅರೆಸ್ಟ್ ಮಾಡಲಾಗಿದೆ.
ನವದೆಹಲಿ : ಇಂದು ಇತ್ತೀಚೆಗೆ ಪಹಲ್ಗಾಮ್ ನಲ್ಲಿ ನಡೆದ ಮುಚ್ಚಿದ ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭದ್ರತಾ ಲೋಪವನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಬುಧವಾರ ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. ನಿನ್ನೆ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಕುರಿತಂತೆ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಏನೂ ತಪ್ಪಾಗಿಲ್ಲದಿದ್ದರೆ, ನಾವು ಇಲ್ಲಿ ಏಕೆ ಕುಳಿತುಕೊಳ್ಳುತ್ತಿದ್ದೆವು? ನಾವು ಕಂಡುಹಿಡಿಯಬೇಕಾದ ಎಲ್ಲೋ ಲೋಪಗಳು ನಡೆದಿವೆ ಎಂದು ಅಮಿತ್ ಶಾ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ. ಸಭೆಯ ಸಮಯದಲ್ಲಿ, ಹಲವಾರು ವಿರೋಧ ಪಕ್ಷಗಳು ಭದ್ರತಾ ಶಿಷ್ಟಾಚಾರಗಳ ಸ್ಪಷ್ಟ ವೈಫಲ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದವು. ಭದ್ರತಾ ಪಡೆಗಳು ಎಲ್ಲಿದ್ದವು? ಕೇಂದ್ರ ಮೀಸಲು ಪೊಲೀಸ್ ಪಡೆ ಎಲ್ಲಿತ್ತು? ಎಂದು ಹಲವಾರು ನಾಯಕರು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಜೂನ್‌ನಲ್ಲಿ ಅಮರನಾಥ ಯಾತ್ರೆಯವರೆಗೆ ಸಾಂಪ್ರದಾಯಿಕವಾಗಿ ನಿರ್ಬಂಧಿತವಾಗಿರುವ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್ ಬಳಿಯ ಬೈಸರನ್ ಪ್ರದೇಶವನ್ನು ತೆರೆಯುವ ಮೊದಲು ಸ್ಥಳೀಯ ಅಧಿಕಾರಿಗಳು…














