Author: kannadanewsnow05

ದಕ್ಷಿಣಕನ್ನಡ : ಭಾರತದ ಕ್ರಿಕೆಟ್ ತಂಡದ ಖ್ಯಾತ ಬ್ಯಾಟರ್ ಸೂರ್ಯ ಕುಮಾರ್ ಯಾದವ ಅವರು, ಇಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆಗಳನ್ನು ಸಲ್ಲಿಸಿದರು. ಸೂರ್ಯಕುಮಾರ್ ಯಾದವ್ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸೋಮವಾರ ಭೇಟಿ ನೀಡಿದರು. ಪತ್ನಿ ಸಮೇತ ದೇಗುಲಕ್ಕೆ ಆಗಮಿಸಿದ ಅವರು, ಆಶ್ಲೇಷ ಬಲಿ ಪೂಜೆ, ಮಹಾಪೂಜೆ ಹಾಗೂ ಅಭಿಷೇಕ ನೆರವೇರಿಸಿದರು. ಈ ವೇಳೆ, ಸೂರ್ಯಕುಮಾರ್ ಯಾದವ್ ದಂಪತಿಗೆ ದೇವಸ್ಥಾನದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.

Read More

ಬೆಂಗಳೂರು : ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವುದಿಲ್ಲ. ಬಡತನ ರೇಖೆಗಿಂತ ಮೇಲೆ ಇದ್ದವರು ಹಾಗೂ ಬಿಪಿಎಲ್ ಕಾರ್ಡ್ ಗಳಿಗೆ ಅರ್ಹರಲ್ಲದವರನ್ನು ಗುರುತಿಸಿ ಅಂತವರ ಕಾರ್ಡ್ ಗಳನ್ನು ಎಪಿಎಲ್ ಗೆ ಬದಲಾವಣೆ ಮಾಡಲಾಗುತ್ತದೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ಸ್ಪಷ್ಟನೆ ನೀಡಿದರು. ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದಿರಾಗಾಂಧಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರ್ಹ ಬಿಪಿಎಲ್ ಕಾರ್ಡ್ ದಾರರು ಯಾರು ಭಯಪಡಬೇಕಿಲ್ಲ. ಬಿಜೆಪಿಯವರು ಸುಮ್ಮನೆ ತರಲೆ ಮಾಡುತ್ತಿದ್ದಾರೆ. ಬಡವರಿಗೆ ಅಕ್ಕಿ ಕೊಡುತ್ತಿರುವುದರಿಂದ ಇವರಿಗೆ ಸಮಾಧಾನ ಇಲ್ಲ. 20 ರಿಂದ 25 ರಷ್ಟು ಅರ್ಹರಲ್ಲದವರು ಸೇರಿಕೊಂಡಿದ್ದಾರೆ. ಬಡವರು ಅಲ್ಲದವರು ಹಾಗೂ ಅರ್ಹರಲ್ಲದವರು ಸೇರಿಕೊಂಡಿದ್ದಾರೆ. ರಾಜ್ಯದಲ್ಲಿ ಬಡವರ ಪ್ರಮಾಣ ಶೇಕಡ 80ರಷ್ಟಿದೆ ಇದು ಸಾಧ್ಯವಾ? ಕರ್ನಾಟಕದ ಅಂತಹ ರಾಜ್ಯದಲ್ಲಿ ಶೇಕಡಾ 80ರಷ್ಟು ಬಡವರಿದ್ದಾರಾ? ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ. ಇದಕ್ಕೆ ರಾಜಕೀಯ ಬೆರೇಸಿ ದೊಡ್ಡ ಗದ್ದಲ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಯಾರು ಕೆಳಗಿದ್ದಾರೋ ಬಡತನ ರೇಖೆಗಿಂತ…

Read More

ಮಂಡ್ಯ : ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದ ವಾರ್ ಮತ್ತೆ ಭುಗಿಲೆದ್ದಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಕಾಂಗ್ರೆಸ್ ನಲ್ಲೂ ಕಿಂಡರ್ ಗಾರ್ಡನ್ ಪದ್ಧತಿ ಇದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಬೇಡಿಕೆ ಇಲ್ಲ. ಅದು ನನ್ನ ಹಕ್ಕು ಎಂದು ಮಂಡ್ಯದಲ್ಲಿ ಮಳವಳ್ಳಿಯ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಹೇಳಿಕೆ ನೀಡಿದ್ದಾರೆ. ಸಂಪುಟ ಪುನಾರಚನೆಯ ವೇಳೆ ಸಚಿವ ಸ್ಥಾನ ಪಡೆಯುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷದಲ್ಲೂ ಕಿಂಡರ್ ಗಾರ್ಡನ್ ಪದ್ಧತಿ ಇದೆ. ರಾಜಕೀಯ ಹಿನ್ನೆಲೆ ಇದ್ದರೆ ಮಾತ್ರ ಸ್ನಾನ ಮಾನ ಸಿಗುತ್ತದೆ. ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಹಾಗಾಗಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಮಂಡ್ಯದಲ್ಲಿ ಮಳವಳ್ಳಿಯ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಅಸಮಾಧಾನ ಹೊರಹಾಕಿದರು.

Read More

ಬೆಂಗಳೂರು : ವಿದ್ಯುತ್ ನಿರ್ವಹಣಾ ಕಾಮಗಾರಿ ನಿಮಿತ್ತ ನವೆಂಬರ್ 20 ರಂದು ಅಂದರೆ ನಾಳೆ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಯಾವ್ಯಾವ ಪ್ರದೇಶಗಳು? ಅರೇಹಳ್ಳಿ, ಇಟ್ಟಮಡು, ಏಜಿಎಸ್ ಲೇಔಟ್, ಚಿಕ್ಕಲಸಂದ್ರ, ಟಿ.ಜಿ. ಲೇಔಟ್, ಭುವನೇಶ್ವರಿನಗರ ಇಸ್ರೋ ಲೇಔಟ್, ಇಸ್ರೋ ಲೇಔಟ್ ಇಂಡಸ್ರ್ಟಿಯಲ್​ ಏರಿಯಾ, ಕುಮಾರಸ್ವಾಮಿ ಬಡಾವಣೆ, ವಿಠ್ಠಲ ನಗರ, ವಿಕ್ರಮ್ ನಗರ, ಯೆಲಚೇನಹಳ್ಳಿ, ರಾಮಾಂಜನೇಯ ನಗರ, ನಂದ ಕುಮಾರ್ ಲೇಔಟ್, ಉತ್ತರಹಳ್ಳಿ ಮೇನ್ ರೋಡ್, ಉದಯ ನಗರ, ಗೌಡನ ಪಾಳ್ಯ, ಟೆಲಿಕಾಂ ಲೇಔಟ್, ಮುನೇಶ್ವರ ನಗರ, ಚಿಕ್ಕಲಸಂದ್ರ ವಿಲೇಜ್, ಕದಿರೇನಹಳ್ಳಿ, ಅಬ್ಬಯ್ಯ ನಾಯ್ಡು ಸ್ಟುಡಿಯೋ ಸುತ್ತಮುತ್ತಲ ಪ್ರದೇಶ, ನಾಯ್ಡು ಲೇಔಟ್, ಎಜಿಎಸ್ ಲೇಔಟ್, ಹನುಮ ಆದಶð ಅಪಾಟ್ðಮೆಂಟ್ 1 & 2, ಹಿಲ್ಸ್ ಲೇಔಟ್, ಕಾಮಾಕ್ಯ ಲೇಔಟ್, ಹೊಸಕೆರೆಹಳ್ಳಿ, ಟಾಟಾ ಪ್ರಮೋಟ್, ಸಪ್ತಗಿರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.

Read More

ನವದೆಹಲಿ : ಮಲಯಾಳಂ ನಟ ಸಿದ್ದೀಕ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಿದ್ದಿಕ್ ಗೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಹೌದು ಮಲಯಾಳಂ ನಟ ಸಿದ್ದಿಕ್ಗೆ ಸುಪ್ರೀಂ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ತಿರುವನಂತಪುರಂ ನಲ್ಲಿ ಅತ್ಯಾಚಾರ ಎಸೆಗಿದ್ದ ಆರೋಪದ ಅಡಿ ಪ್ರಕರಣ ದಾಖಲಾಗಿತ್ತು. ಮಹಿಳೆ ಒಬ್ಬರು ನಟ ಸಿದ್ದಿಕ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಿದ್ಧಿಕ್ ಅಭಿನಯಿಸಿದ್ದಾರೆ. ಅಲ್ಲದೆ ನ್ಯಾ. ಹೇಮಾ ಸಮಿತಿ ವರದಿಯಲ್ಲೂ ಅತ್ಯಾಚಾರದ ಆರೋಪವಿತ್ತು.

Read More

ಬೆಂಗಳೂರು : ಮಹಾರಾಷ್ಟ್ರ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಕರ್ನಾಟಕದ ಬಗ್ಗೆ ಅವಮಾನ ಆಗುವ ರೀತಿಯಲ್ಲಿ ಜಾಹೀರಾತು ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ ಬಳಿಕ ಬಿಜೆಪಿಯವರು, ‘ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳು ಅನುಷ್ಟಾನಗೊಂಡಿಲ್ಲ. ಮಹಾರಾಷ್ಟ್ರದಲ್ಲಿಯೂ ಅನುಷ್ಟಾನವಾಗುವುದಿಲ್ಲ’ ಎಂದು ಸುಳ್ಳು ಜಾಹೀರಾತು ನೀಡಿದ್ದಾರೆ. ಇದಕ್ಕೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಚಿಂತನೆ ನಡೆಸಲಾಗಿದೆ ಎಂದರು. ನಮ್ಮ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ 56 ಸಾವಿರ ಕೋಟಿ ರೂ. ಮೀಸಲಿಟ್ಟು, ಸಂಪೂರ್ಣವಾಗಿ ಅನುಷ್ಟಾನಗೊಳಿಸಿದೆ. ಇದಕ್ಕೆ ವಿರುದ್ಧವಾಗಿ ಇಡೀ ದೇಶದಲ್ಲಿ ಕರ್ನಾಟಕದ ಬಗ್ಗೆ ಅವಮಾನ ಆಗುವ ರೀತಿಯಲ್ಲಿ ಜಾಹೀರಾತು ಪ್ರಕಟಿಸಿದ್ದಾರೆ ಎಂದರೆ ನಾವು ಖಂಡಿತವಾಗಿ ಸಹಿಸುವುದಿಲ್ಲ. ಸಂಬಂಧಪಟ್ಟ ಐದು ಇಲಾಖೆಗಳು ಜಾಹೀರಾತು ನೀಡಿದವರ ಮೇಲೆ ಕ್ರಮ ತೆಗೆದುಕೊಳ್ಳಲು ದೂರು…

Read More

ಬೆಂಗಳೂರು : ಸಿನಿಮಾ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಆರೋಪಿಸಿ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಸಿನಿಮಾ ನಟ ತಾಂಡವ್ ರಾಮ್ ನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ನಿರ್ದೇಶಕನಿಗೆ ಬೆದರಿಕೆ ಹಾಕಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಚಂದ್ರಲೇಔಟ್ ನಲ್ಲಿ ನಡೆದಿದೆ. ಲೈಸೆನ್ಸ್ ಗನ್ ತೋರಿಸಿ ಬೆದರಿಕೆ ಹಾಕಿದ್ದು, ಒಂದು ಸುತ್ತು ಗುಂಡು ಸಹ ತಾಂಡವ ರಾಮ್ ಹಾರಿಸಿದ್ದ ಮುಗಿಲ್ ಪೇಟೆ ಸಿನಿಮಾ ನಿರ್ದೇಶಕ ಭರತ್ ಹತ್ಯೆಗೆ ಯತ್ನಿಸಿದ ರಾಮ್. ಸಿನಿಮಾ ಅರ್ಧಕ್ಕೆ ನಿಲ್ಲಿಸಿದ ಕಾರಣಕ್ಕೆ ಗಲಾಟೆ ವೇಳೆ ಹತ್ಯೆಗೆ ಯತ್ನಿಸಿದ್ದಾರೆ. ಚಂದ್ರ ಲೇಔಟ್ ಆಣೆ ಪೊಲೀಸ್ ರಿಂದ ತಾಂಡವ ರಾಮ್ ಬಂಧನವಾಗಿದ್ದು, ಜೋಡಿಹಕ್ಕಿ, ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ತಾಂಡಾವ್ ರಾಮ್ ನಟಿಸಿದ್ದ. ಸದ್ಯ ಕೊಲೆ ಯತ್ನ ಪ್ರಕರಣದಲ್ಲಿ ತಾಂಡವ ರಾಮ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆನ್ನು ನೋವಿನ ಸಮಸ್ಯೆಯ ಕಾರಣ ತಿಳಿಸಿ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದುಕೊಂಡು ಇತ್ತೀಚಿಗೆ ನಟ ದರ್ಶನ್ ಬಳ್ಳಾರಿ ಜೈಲಿಂದ ಬಿಡುಗಡೆಯಾಗಿದ್ದರು.ಇದೀಗ ಪೊಲೀಸರು ನಟ ದರ್ಶನ್ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಆರೋಪಿ ದರ್ಶನ್ಗೆ ಜಾಮೀನು ಮಂಜೂರು ವಿಚಾರವಾಗಿ ದರ್ಶನ್ ಜಾಮೀನು ರದ್ದು ಕೋರಿ ಶೀಘ್ರದಲ್ಲೇ ಮೇಲ್ಮನವಿ ಸಲ್ಲಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಗೆ ಮೇಲ್ಮನ ವಿಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಮೇಲ್ಮನವಿ ಸಲ್ಲಿಸಲು ಈಗಾಗಲೇ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಕನ್ನಡದಲ್ಲಿರುವ ಮಾಹಿತಿಯನ್ನು ಇಂಗ್ಲೀಷ್ ಗೆ ಭಾಷಾಂತರ ಮಾಡಿ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಬಳ್ಳಾರಿ ಜೈಲಿನಿಂದ ಬಿಡುಗಡೆಯಾದ ನಟ ದರ್ಶನ್ ಎರಡು ದಿನ ಪತ್ನಿ ಮಗ ಹಾಗೂ ಕುಟುಂಬದ ಜೊತೆಗೆ ಕಾಲ ಕಳೆದರು. ನಂತರ ನೇರವಾಗಿ ಬೆಂಗಳೂರಿನ ಕೆಂಗೇರಿ ಬಳಿ ಇರುವ…

Read More

ಬೆಂಗಳೂರು : ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರು ದುರ್ಮರಣ ಹೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಶ್ರೀನಿವಾಸಪುರದ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರು ಸಾವನ್ನಪ್ಪಿದ್ದರೆ. M ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಶ್ರೀನಿವಾಸಪುರದ ಜೀವನ್ ಹಾಗೂ ಆದಿತ್ಯ ಮೃತಪಟ್ಟ ಬೈಕ್ ಸವಾರರು ಎನ್ನಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಿಕ್ಕಮಗಳೂರು : ಚಿಕ್ಕಮಗಳೂರು ಭಾಗದಲ್ಲಿ ನಕ್ಸಲ ಚಟುವಟಿಕೆ ಹಿನ್ನೆಲೆಯಲ್ಲಿ ಇಂದು ಪೊಲೀಸರು ಹಾಗೂ ನಕ್ಸಲ್ ವಿಕ್ರಂ ಗೌಡ ಮಧ್ಯ ಗುಂಡಿನ ಚಿಕಮಕಿ ನಡೆದಿದ್ದು ಇದರಲ್ಲಿ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಲಾಗಿದೆ ಆದರೆ ಅವರ ಜೊತೆಗಿದ್ದ ಮೂವರು ಪರಾರಿ ಯಾಗಿದ್ದು ಇದೀಗ ಗುಂಡಗಾರು ಲತಾ ಜಯಣ್ಣ ಸೇರಿದಂತೆ ಮೂವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹೌದು ಮುಂಡಗಾರು ಲತಾ, ಜಯಣ್ಣ ಸೇರಿ ಮೂವರ ವಿರುದ್ಧ ಕೇಸ್ ದಾಖಲಾಗಿದೆ. ಜಯಪುರ ಪೊಲೀಸ್ ಠಾಣೆಯಲ್ಲಿ ಇದೀಗ ಮೂವರ ವಿರುದ್ಧ FIR ದಾಖಲಾಗಿದೆ. UAPA 1967 ಅಡಿ 329 (4) 351(2) 61(2) 147 BNS 25 B ಶಾಸ್ತ್ರಸ್ತ್ರ ಕಾಯಿದೆ 110, 13, 16,18, 20 38ರ ಅಡಿ ಪ್ರಕರಣ ದಾಖಲಾಗಿದೆ. ನಕ್ಸಲರು ಪ್ರಯಾರಿಯಾದ ಸ್ಥಳದಲ್ಲಿ ಶಾಸ್ತ್ರಸ್ತ್ರ, ಮೂರು ಎಸ್ ಬಿ ಎಂ ಎಲ್ ಬಂದೂಕು ಹಾಗೂ ಮದ್ದು ಗುಂಡುಗಳು ಪತ್ತೆಯಾಗಿದ್ದವು. ಮುಂಡಗಾರು ಲತಾ ಮತ್ತು ತಂಡ ಸುಬ್ಬೆಗೌಡ ಮನೆಗೆ ಭೇಟಿ ನೀಡಿತ್ತು.…

Read More