Author: kannadanewsnow05

ಮಂಡ್ಯ : ಇಂದು ಮಂಡ್ಯ ಜಿಲ್ಲೆಯಲ್ಲಿ 8 ವರ್ಷದ ಬಾಲಕಿಯ ಮೇಲೆ ಪಾಪಿಗಳು ಅತ್ಯಾಚಾರ ಎಸಿಗಿದ್ದ ಘಟನೆ ನಡೆದಿತ್ತು ಇದೀಗ ಈ ಒಂದು ಘಟನೆ ಮಾಸುವ ಮುನ್ನವೇ ಗದಗದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹೌದು ಗದಗ ಜಿಲ್ಲೆಯ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿಸೆಂಬರ್ ತಿಂಗಳಲ್ಲಿ ಘಟನೆ ನಡೆದಿದ್ದು, ಕಾಮಾಂಧರ ದುಷ್ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಿ ಆರೋಪಿ ಸುಲೇಮಾನ್​ ಸೇರಿದಂತೆ ಅತ್ಯಾಚಾರ ಎಸಗುವುದನ್ನು ವಿಡಿಯೋ ಮಾಡಿದ್ದ ಅಲ್ತಾಫ್ ಎನ್ನುವಾತನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಸುಲೇಮಾನ್ ಎನ್ನುವವ ಬಾಲಕಿಯನ್ನು ಕರೆದು ಅತ್ಯಾಚಾರ ಎಸಿಗಿದ್ದಾನೆ ಈ ವೇಳೆ ಆತನ ಜೊತೆಗೆ ಇದ್ದ ಅಲ್ತಾಫ್ ಎಂಬ ಇನ್ನೊಬ್ಬ ಆರೋಪಿ ಅತ್ಯಾಚಾರ ಎಸಗುವ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿದ್ದಾನೆ.ಇನ್ನು ಈ ಘಟನೆ ಬಾಲಕಿ ಪಾಲಕರಿಗೆ ತಡವಾಗಿ ಗೋತ್ತಾಗಿದ್ದು, ಈ ಸಂಬಂಧ ಇಂದು(ಫೆಬ್ರವರಿ 03) ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು, ಅತ್ಯಾಚಾರಿ ಆರೋಪಿ ಸುಲೇಮಾನ್ ಹಾಗೂ…

Read More

ಬೆಂಗಳೂರು : ಬೆಂಗಳೂರಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಗಳೂರಿನ ಲಾಲ್ ಬಾಗ್ ಮೆಟ್ರೋ ನಿಲ್ದಾಣದ ಬಳಿ ಈ ಒಂದು ಘಟನೆ ನಡೆದಿದೆ. ರಸ್ತೆಯ ಮೇಲೆ ಹೊತ್ತಿ ಉರಿದ ಕಾರು ಈ ವೇಳೆ ಕಾರಿನ ಪಕ್ಕದಲ್ಲಿದ್ದ ನಿಂತಿದ್ದ ಬೈಕ್ ಗೂ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ.ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದೆ. ಅಗ್ನಿ ಅವಘಡದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆ ಕುರಿತು ಬಸವನಗುಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.

Read More

ತುಮಕೂರು : ರಾಜ್ಯದಲ್ಲಿ ನಿರಂತರವಾಗಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆಗಳು ನಡೆಯುತ್ತಿವೆ. ಇದರ ಮಧ್ಯ ಸಿಎಂ ಸಿದ್ದರಾಮಯ್ಯ ಶೀಘ್ರದಲ್ಲಿ ಸುಗ್ರೀವಾಜ್ಞೆ ಜಾರಿಗೆ ತರುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಆದರೂ ಸಹ ಆತ್ಮಹತ್ಯೆ ಪ್ರಕರಣಗಳು ನಿಲ್ಲುತ್ತಿಲ್ಲ ಇದೀಗ ಕೈ ಸಾಲದಿಂದ ಹೆದರಿ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜಿ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜಿ ಹೊಸಳ್ಳಿ ಗ್ರಾಮದ ಕೆರೆಯಲ್ಲಿ ಪಾಂಡುರಂಗಯ್ಯ (38) ಮೃತದೇಹ ಪತ್ತೆಯಾಗಿದೆ.ಶನಿವಾರ ಸಂಬಂಧಿಕರ ಮನೆಗೆ ಹೋಗುವುದಾಗಿ ಪಾಂಡುರಂಗಯ್ಯ ಹೆಂಡತಿಗೆ ಹೇಳಿ ಮನೆ ಬಿಟ್ಟಿದ್ದ. ಮೇಲ್ನೋಟಕ್ಕೆ ಕೈಸಲ ಹೆಚ್ಚಾಗಿ ಕೆರೆಗೆ ಹಾರಿದ್ದಾರೆ ಎಂದು ಶಂಕಿಸಲಾಗಿದೆ. ಸದ್ಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಗುಬ್ಬಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಡ್ಯ : ಇಂದು ಮಂಡ್ಯ ಜಿಲ್ಲೆಯ ತಿಬ್ಬನಹಳ್ಳಿ ಬಳಿ ವಿಸಿ ನಾಲೆಗೆ ಕಾರು ಬಿದ್ದು ಘೋರ ದುರಂತ ಸಂಭವಿಸಿದ್ದು, ಇದೀಗ ವಿಸಿ ನಾಲಿಗೆ ಬಿದ್ದಿದ್ದ ಇಂಡಿಕಾ ಕಾರಿನಲ್ಲಿ ಇನ್ನಿಬ್ಬರ ಮೃತ ದೇಹಗಳು ಪತ್ತೆಯಾಗಿವೆ. ಸುಮಾರು 15 ಅಡಿ ಆಳದಲ್ಲಿ ಸಿಲುಕಿದ್ದ ಕಾರಣ ಇದೀಗ ಕ್ರೇನ್ ಮೂಲಕ ಕಾರನ್ನು ಮೇಲೆ ಎತ್ತಲಾಗಿದೆ. ಹೌದು ವಿ.ಸಿ ನಾಲಿಯಲ್ಲಿ ಬಿದ್ದಿದ್ದ ಕಾರಿನಲ್ಲಿ ಇಬ್ಬರು ಶವಗಳು ಪತ್ತೆಯಾಗಿವೆ. ಕ್ರೇನ್ ಮೂಲಕ ಪೊಲೀಸರು ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರನ್ನು ಮೇಲೆ ಎತ್ತಿದ್ದಾರೆ. ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿ ಬಿಸಿ ನಾಲಿಗೆ ಕಾರು ಬಿದ್ದಿತ್ತು ವಿಸಿನಾಲಿಗೆ ಬಿದ್ದಿದ್ದ ಕಾರಿನಲ್ಲಿ ಸದ್ಯ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ. ಘಟನೆಯಲ್ಲಿ ಕಾರಿನ ಮಾಲೀಕ ಫಯಾಜ್ (40) ಸಾವನ್ನಪ್ಪಿದ್ದಾರೆ. ನಯಾಜ್ ಎಂಬುವರನ್ನು ರಕ್ಷಿಸಲಾಗಿದ್ದು, ಅಸ್ಲಂಪಾಷಾ ಮತ್ತು ಪೀರ್ಖಾನ್ ಸೇರಿದಂತೆ ಇಬ್ಬರು ನಾಪತ್ತೆಯಾಗಿದ್ದರು. ವಿಗ ಇವರು ಇಬ್ಬರ ಮೃತ ದೇಹಗಳನ್ನು ಕಾರಿನಿಂದ ಹೊರ ತೆಗೆಯಲಾಗಿದೆ.

Read More

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡಿ ಸಂಕಷ್ಟ ಎದುರಿಸುತ್ತಿದ್ದಾರೆ ಇದರ ಮಧ್ಯೆ ಅವರ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದ್ದು ಬೇನಾಮಿ ಆಸ್ತಿ ಖರೀದಿಸಿದ ಆರೋಪದಲ್ಲಿ ಸ್ನೇಹಮಯಿ ಕೃಷ್ಣ ಅವರು ಈಗ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಹೌದು ಎಂ ಸಿದ್ದರಾಮಯ್ಯ ವಿರುದ್ಧ ಬೇನಾಮಿ ಆಸ್ತಿ ಖರೀದಿಸಿದ ಆರೋಪದ ಅಡಿ ದೂರು ಸಲ್ಲಿಕೆ ಆಗಿದೆ. ಮೈಸೂರು ಲೋಕಾಯುಕ್ತ ಕಚೇರಿಗೆ ಸ್ನೇಹಮಯಿ ಕೃಷ್ಣ ಅವರಿಂದ ಸಿಎಂ ಸಿದ್ದರಾಮಯ್ಯ ಬೇನಾಮಿ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಬೇನಾಮಿ ಆಸ್ತಿ ಖರೀದಿಸಿರುವ ಆರೋಪ ಕೇಳಿ ಬಂದಿದೆ ಮೈಸೂರು ತಾಲೂಕಿನ ಆಲನಹಳ್ಳಿ ಭೂಮಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ವೆ ನಂಬರ್ 113/4 ರಲ್ಲಿ 1 ಎಕರೆ ಭೂಮಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. 1983ರ ಡಿಸೆಂಬರ್ 15 ರಂದು ಮಲ್ಲಿಕಾರ್ಜುನ ಸ್ವಾಮಿ ಖರೀದಿಸಿದ್ದ ಹನುಮಗೌಡ, ಹನುಮಯ್ಯ, ಕರಿಯಪ್ಪ ಮತ್ತು ಕೇತಮ್ಮ ಅವರಿಂದ ಭೂಮಿ ಖರೀದಿಸಿಲಾಗಿತ್ತು. ಭೂಮಿ ಖರೀದಿಸಿದ್ದ…

Read More

ಚಾಮರಾಜನಗರ : ವೈದ್ಯರ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ಈ ಒಂದು ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ಆನಂದ್ ಹಾಗೂ ಶುಭಮಾನಸ ದಂಪತಿಯ ಮಗು ಪ್ರಖ್ಯಾತ ಎನ್ನುವ 6 ತಿಂಗಳ ಗಂಡು ಮಗು ಸಾವನಪ್ಪಿದ್ದಾನೆ. ಕಿವಿ ಚುಚ್ಚಿಸಲು PHC ಗೆ ಪೋಷಕರು ಮಗುವನ್ನು ಕರೆದುಕೊಂಡು ಹೋಗಿದ್ದರು. ಬೊಮ್ಮಲಾಪುರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಮಗುವಿಗೆ ಅನಸ್ತೇಷಿಯ ನೀಡಿದ್ದರಿಂದ ಅನೆಸ್ತೇಶಿಯ ನೀಡಿದ ಬಳಿಕ ಪ್ರಖ್ಯಾತ್ ಪ್ರಜ್ಞೆ ತಪ್ಪಿದ್ದಾನೆ. ಮಗುವಿಗೆ ಅನಾಸ್ತೇಶಿಯ ಕೊಟ್ಟ ಬಳಿಕ ಪಿಟ್ಸ್ ಸಹ ಬಂದಿತ್ತು.ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಪ್ರಖ್ಯಾತ ಸಾವನಪ್ಪಿದ್ದಾನೆ. ಪಿಎಚ್‌ಸಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗುಂಡ್ಲುಪೇಟೆ ತಾಲೂಕು ವೈದ್ಯಧಿಕಾರಿ ಡಾ. ಆಲಂಪಾಷಾ ಹೇಳಿಕೆ ನೀಡಿದ್ದಾರೆ.

Read More

ಬೀದರ್ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಶೀಘ್ರ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಞೆ ಜಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ, ಇದರ ಮಧ್ಯ ಇದೀಗ ಬೀದರ್ ನಲ್ಲಿ ತಾಯಿ ಮಾಡಿ ಸಾಲಕ್ಕೆ ಹೆದರಿ ಮಗ ಆತ್ಮಹತ್ಯೆ ಶರಣಾಗಿರುವ ಘಟನೆ ವರದಿಯಾಗಿದೆ. ಹೌದು ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ರಾಮಪುರದಲ್ಲಿ ಈ ಒಂದು ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಗಣೇಶ್ (25) ಎನ್ನುವ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಚಿಟಗುಪ್ಪ SBI ಬ್ಯಾಂಕ್ ನಲ್ಲಿ 5 ಲಕ್ಷ ರೂಪಾಯಿ ಸಾಲ ಮಾಡಿದ್ದ ಗಣೇಶ್ ತಾಯಿ,  ಹೇಗೆ ತೀರಿಸುವುದು ಅಂತ ನಿತ್ಯವೂ ತಾಯಿ ಕೊರಗುತ್ತಿದ್ದರು. ತಾಯಿ ನೋವನ್ನು ನೋಡಲಾಗದೆ ಗಣೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ.ಈ ಸಂಬಂಧ ಚಿಟ್ಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ತುಮಕೂರು : ತುಮಕೂರಲ್ಲಿ ಘೋರವಾದ ಘಟನೆ ನಡೆದಿದ್ದು, ರೈಲು ನಿಲ್ಲೋದಕ್ಕೂ ಮುನ್ನವೇ ಇಳಿಯಲು ಹೋಗಿ, ಹಳಿಗೆ ಕಾಲು ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಹಳಿಗೆ ರೈಲು ಸಿಲುಕಿ ಸಾವನ್ನಪ್ಪಿದ ಯುವಕನನ್ನು ತುರುವೇಕೆರೆ ಅಮ್ಮಸಂದ್ರ ಮೂಲದ ಛಾಯಾಂಕ್ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ ಯುವಕ ಪುಷ್ಪುಲ್ ಟ್ರೈನ್‌ಗೆ ಬಂದಿದ್ದ. ಈ ವೇಳೆ ರೈಲು ನಿಲ್ಲುವ ಮೊದಲು ಇಳಿಯಲು ಹೋಗಿ ಬ್ಯಾಗ್ ರೈಲಿನ ಹ್ಯಾಂಡಲ್‌ಗೆ ಸಿಲುಕಿ ಈ ಅವಘಡ ಸಂಭವಿಸಿದೆ. ಘಟನೆ ವೇಳೆ ರೈಲ್ವೆ ನಿಯಮದ ಪ್ರಕಾರ ಯಾರು ಮುಟ್ಟುವಂತಿಲ್ಲ ಹಾಗಾಗಿ ಸಾರ್ವಜನಿಕರು ಸಹ ಯಾರು ಯುವಕನಿಗೆ ಸಹಾಯ ಮಾಡಲಿಲ್ಲ.ಈ ವೇಳೆ ಯುವಕ ತಮ್ಮವರಿಗೆ ಕರೆ ಮಾಡಲು ಫೋನ್ ಹುಡುಕಾಡುತ್ತಿದ್ದ. ಆದರೆ 25 ನಿಮಿಷ ಕಳೆದರೂ ಗಾಯಾಳುವನ್ನು ಆಸ್ಪತ್ರೆ ಸಾಗಿಸದೆ, ಪೊಲೀಸರು ವಿಳಾಸ ಪತ್ತೆ ಮಾಡಲು ಕಾಲಹರಣ ಮಾಡಿದ್ದಾರೆ.ಕೊನೆಗೆ ಪೊಲೀಸರು ಸ್ಥಳಕ್ಕೆ ಬಾರದೆ ಯುವಕ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.

Read More

ಬೆಂಗಳೂರು : ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ಮಲಾ‌ ಸೀತಾರಾಮನ್ ಅವರು ದೇಶದ ಹಣಕಾಸು ಸಚಿವರು. ಅವರ ಬಗ್ಗೆ ನಮಗೆಲ್ಲ ಗೌರವ ಇರಬೇಕು. ಕರ್ನಾಟಕದಿಂದ ರಾಜ್ಯಸಭಾ ಸದಸ್ಯರಾಗಿ ಹೋಗಿ ಕರ್ನಾಟಕದ ಹಿತವನ್ನು ಕಾಪಾಡುವುದಕ್ಕೆ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈ ಬಾರಿಯಷ್ಟೇ ಅಲ್ಲ. ಕಳೆದ ಬಾರಿಯು ಸಹ ನಮ್ಮ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಸಚಿವೆ ನಿರ್ಮಲಾ‌ ಸೀತಾರಾಮನ್ ಅವರು ರಾಜ್ಯಕ್ಕೆ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿಕೊಳ್ಳುವಂತಹ ಒಂದೇಒಂದು ಯೋಜನೆಯನ್ನು ನೀಡಿಲ್ಲ. ಆ ರೀತಿ ಕೆಲಸ‌ ಮಾಡಿದ್ದರೆ ನಾನು ಸಹ ಅವರನ್ನು ಅಭಿನಂದಿಸುತ್ತೇನೆ ಎಂದರು. ಸುಮ್ಮನೆ ಕರ್ನಾಟಕದಲ್ಲಿ ಹೀಗಿದೆ, ಹಾಗೀದೆ ಅಂದರೆ ಒಪ್ಪುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೋಟಿ ರೂ. ಕೊಡುತ್ತೇವೆ. ರಾಷ್ಟ್ರೀಯ ಯೋಜನೆ ಎಂದು ಘೋಷಿಸುವುದಾಗಿ ಬಜೆಟ್‌ನಲ್ಲಿ ಓದಿ, ಅನುದಾನ ನೀಡದಿರುವುದಕ್ಕೆ ಏನು ಉತ್ತರ ಕೊಡುತ್ತಾರೆ ಎಂದು ಪ್ರಶ್ನಿಸಿದರು.ನಾವು ರಾಜ್ಯದ ಬಡ ಜನರ ಹಿತದೃಷ್ಟಿಯಿಂದ…

Read More

ಬೆಂಗಳೂರು : ನೇಣು ಬಿಗಿದುಕೊಂಡು ದ್ವಿತೀಯ ವರ್ಷದ ಸ್ನಾತಕೋತರ ಪದವಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ನಡೆದಿದೆ.ಮೃತ ವಿದ್ಯಾರ್ಥಿನಿಯನ್ನು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಹೆಬ್ಲಗುಪ್ಪೆ ಗ್ರಾಮದ ನಿವಾಸಿ ಎಂದು ತಿಳಿದಿದೆ. ಹೌದು ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಪಾವನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು ಬೆಳಿಗ್ಗೆ 10:30 ಸುಮಾರಿಗೆ ಹೆಬ್ಲಗುಪ್ಪೆಯ ಪಾವನ ಎಂಬ ಯುವತಿ ನೇಣಿಗೆ ಶರಣಾದ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Read More