Author: kannadanewsnow05

ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಭೀಕರವಾದ ಗೋಣಿನ ದಾಳಿ ನಡೆಸಿ 26 ಜನರನ್ನು ಬಳಿ ಪಡೆದಿದ್ದಾರೆ ಈ ಒಂದು ಘಟನೆ ಖಂಡಿಸಿ ಭಾರತ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮ ಕೈಗೊಂಡಿದ್ದು ಅಲ್ಲದೆ ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಪಾಕಿಸ್ತಾನ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ನಿಯಂತ್ರಣ ರೇಖೆ (ಎಲ್ಒಸಿ) ಉದ್ದಕ್ಕೂ ಕದನ ವಿರಾಮವನ್ನು ಉಲ್ಲಂಘಿಸಿವೆ. ಇದೀಗ ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಜೊತೆ ಯುದ್ಧ ಬೇಡವೆಂದು ಪಾಕಿಸ್ತಾನದ ಸರ್ಕಾರಕ್ಕೆ ಮಾಜಿ ಪ್ರಧಾನಿ ನವಾಜ್ ಶರೀಫ್ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಈ ಕುರಿತು ಹಾಲಿ ಪ್ರಧಾನ ಮಂತ್ರಿ ಶಾಬಾದ್ ಶರೀಫ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ನವಾಜ್ ಶರೀಫ್ ಗೆ ಕರೆ ಮಾಡಿ ಸದ್ಯದ ಪರಿಸ್ಥಿತಿ ಬಗ್ಗೆ ಶಹಾಬಾಜ್ ಶರೀಫ್ ವಿವರಿಸಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಜೊತೆಗೆ ಯುದ್ಧ ಬೇಡವೆಂದು ನವಾಜ್ ಶರೀಫ್ ಶಹಬಾದ್…

Read More

ಶ್ರೀನಗರ : ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ NIA ಅಧಿಕಾರಿಗಳಿಗೆ ದೊಡ್ಡ ಸುಳಿವು ಸಿಕ್ಕಿದ್ದು, ದಾಳಿಗೂ ಮುನ್ನವೇ ಉಗ್ರರು ಪಹಲ್ಗಾಮ್ ಗೆ ಬಂದು ಮಾರು ವೇಷದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದರು ಎಂದು ಎನ್ಐಎ ತನಿಖೆಯಲ್ಲಿ ಬಯಲಾಗಿದ್ದು,ಅಲ್ಲದೆ ಇನ್ನೂ ನಾಲ್ಕು ಅಂಶಗಳು NIA ತನಿಖೆಯಲ್ಲಿ ತಿಳಿದು ಬಂದಿದೆ. ಹೌದು ಉಗ್ರರು ಮಾರು ವೇಷದಲ್ಲಿ ಮೊದಲು ಕಾಶ್ಮೀರಕ್ಕೆ ಆಗಮಿಸಿ ಅಲ್ಲಿಂದ ಬಳಿಕ ಪಹಲ್ಗಾಮ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ಚೀನಾ ನಿರ್ಮಿತ ಡ್ರೋನ್ ಗಳನ್ನು ಉಗ್ರರು ಬಳಸಿದ್ದಾರೆ ಎನ್ನಲಾಗಿದೆ. ದಾಳಿ ನಡೆಸಬೇಕಾದ ಸ್ಥಳ ಕೂಡ ಮುಂಚೇನೆ ಪರಿಶೀಲನೆ ಮಾಡಿದ್ದರು ಎನ್ನಲಾಗುತ್ತಿದೆ. ಚೀನಾ ಡೋಂಟ್ ಬಳಸಿಯೇ ಉಗ್ರರಿಗೆ ಶಸ್ತ್ರಾಸ್ತ್ರವನ್ನು ಪೂರೈಕೆ ಆಗಿದೆ ಎನ್ನಲಾಗುತ್ತಿದೆ ದಾಳಿ ಬಳಿಕ ಕಾಶ್ಮೀರದಲ್ಲಿ ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗುತ್ತಿದೆ. ಅಲ್ಲದೇ ಅವರು ಪುಲ್ವಾಮಾ ಅಥವಾ ಅನಂತನಾಗಗೆ ಪಲಾಯನ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದೀಗ ಉಗ್ರರ ಜಾಡು ಬೆನ್ನತ್ತಿರುವ ಸೇನೆಯ ಕಾರ್ಯಾಚರಣೆ ಮುಂದುವರಿದಿದೆ. ಪ್ರವಾಸಿಗರ ಸೋಗಿನಲ್ಲಿ…

Read More

ಮಂಗಳೂರು : ನೂರಾರು ವಿದ್ಯಾರ್ಥಿನಿಯರು ಹಾಗೂ ಯುವತಿಯರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೀಡಿಯೋಗಳು ಪತ್ತೆಯಾದ ಹಿನ್ನೆಲೆಯಲ್ಲಿ ನೂರಾರು ವಿದ್ಯಾರ್ಥಿನಿಯರು ಹಾಗೂ ಯುವತಿಯರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೀಡಿಯೋಗಳು ಪತ್ತೆಯಾಗಿವೆ. ಬಂಧಿತನನ್ನು ಕಾರ್ಕಳ ನಿವಾಸಿ ಸೈಯದ್ ಎಂದು ಗುರುತಿಸಲಾಗಿದೆ. ಆರೋಪಿ ವಿದ್ಯಾರ್ಥಿನಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳಿಸಿ ಕಿರುಕುಳ ಕೊಡುತ್ತಿದ್ದ. ಈ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಥಳಿಸಿ, ಮೊಬೈಲ್ ಪರಿಶೀಲಿಸಿದ್ದಾರೆ. ಈ ವೇಳೆ ನೂರಾರು ವಿದ್ಯಾರ್ಥಿನಿಯರು ಹಾಗೂ ಯುವತಿಯರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೀಡಿಯೋಗಳು ಪತ್ತೆಯಾಗಿವೆ.ಸದ್ಯ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಇಂದು ಘೋರವಾದ ದುರಂತ ಸಂಭಾವಿಸಿದ್ದು, ಪಾಲಿಕೆಯ ತ್ಯಾಜ್ಯ ಸಂಗ್ರಹಿಸುವ ವಾಹನ ಹರಿದು 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಸೋನಿಯಾ ಗಾಂಧಿನಗರದಲ್ಲಿ ಇಂದು ನಡೆದಿದೆ. ವೇಗವಾಗಿ ಬಂದ ವಾಹನ ಹರಿದು ಹಮೀದಾ ಬಾನು ಕಬ್ಬಾಡೆ (6) ಎನ್ನುವ ಬಾಲಕಿ ಸ್ಥಳದಲ್ಲೇ ಸಾವನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ವಾಹನದ ಚಾಲಕನ ನಿರ್ಲಕ್ಷದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗುತ್ತಿದ್ದು, ಹುಬ್ಬಳ್ಳಿ ಧಾರವಾಡ ಪಾಲಿಕೆ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಬಾಲಕಿ ಶವವನ್ನು ಪೊಲೀಸರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಈಗಾಗಲೇ ಕಲ್ಬುರ್ಗಿ ಹಾಗೂ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇತ್ತೀಚಿಗೆ ಸಂಪುಟ ಸಭೆ ನಡೆಸಿದ್ದೇವೆ. ಹಾಗಾಗಿ ಮುಂದಿನ ಸಂಪುಟ ಸಭೆಯನ್ನು ನಂದಿ ಬೆಟ್ಟ ಹಾಗೂ ವಿಜಯಪುರದಲ್ಲಿ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೈರದೇನಹಳ್ಳಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೈರದೇನಹಳ್ಳಿ ಸರ್ಕಾರದ ಸಾಧನ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಸಂಪುಟ ಸಭೆಯನ್ನು ನಂದಿಬೆಟ್ಟ ಹಾಗು ವಿಜಯಪುರದಲ್ಲಿ ಬೆಳಗಾವಿ ವಿಭಾಗದ ಸಚಿವ ಸಂಪುಟ ಸಭೆ ಮಾಡುತ್ತೇವೆ. ಈಗಾಗಲೇ ಕಲಬುರ್ಗಿ ಹಾಗು ಮಲೆಮಾದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ಮಾಡಿದ್ದೇವೆ ಎಂದು ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.

Read More

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ-2025ರ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿದೆ. ಭೌತಶಾಸ್ತ್ರದಲ್ಲಿ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗಿದ್ದು, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದಲ್ಲಿ ಕೆಲವು ಉತ್ತರಗಳನ್ನು ಪರಿಷ್ಕರಿಸಲಾಗಿದೆ. ಕನ್ನಡ ಭಾಷಾ ಪರೀಕ್ಷೆಯ ಅಂಕಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ. ಯುಜಿಸಿಇಟಿ 2025ರ ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಏ.16 ಮತ್ತು ಏ.17ರಂದು ಪರೀಕ್ಷೆಗಳನ್ನು ನಡೆಸಲಾಗಿದೆ. ಸದರಿ ಪರೀಕ್ಷೆಗಳ 16 ವರ್ಷನ್‌ಗಳ ಕೀ ಉತ್ತರಗಳನ್ನು ಏ.18ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಜೊತೆಗೆ, ಸದರಿ ಕೀ-ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಏ.22ರ ಒಳಗಾಗಿ ಸಲ್ಲಿಕೆ ಮಾಡುವುದಕ್ಕೆ ಕಾಲಾವಕಾಶ ನೀಡಲಾಗಿತ್ತು. ಅದರಂತೆ ಇದೀಗ ವಿಷಯ ತಜ್ಞರ ಸಮಿತಿಗಳ ಪರಿಶೀಲನೆ ನಂತರ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರದ ವಿಷಯಗಳಲ್ಲಿ ಬದಲಾದ ಪ್ರಶ್ನೆಗಳ ಪರಿಷ್ಕೃತ ಕೀ ಉತ್ತರ ಪ್ರಕಟಿಸಲಾಗಿದೆ. ಸ್ವೀಕೃತವಾದ ಆಕ್ಷೇಪಣೆಗಳನ್ನು ತಜ್ಞರ ಸಮಿತಿ ಪರಿಶೀಲಿಸಿ ಇದೀಗ ಕೀ ಉತ್ತರಗಳನ್ನು ಪ್ರಕಟಿಸಿದೆ. ಗಣಿತ ಶಾಸ್ತ್ರದ ಕೀ ಉತ್ತರಗಳಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲವೆಂಬ ಮಾಹಿತಿಯನ್ನೂ‌ ಕೆಇಎ ಪ್ರಕಟಣೆ ಮೂಲಕ ತಿಳಿಸಿದೆ.…

Read More

ಕೋಲಾರ : ಇಂದು ಕೋಲಾರದಲ್ಲಿ ಭೀಕರ ವಾದಂತಹ ಸರಣಿ ಅಪಘಾತ ಸಂಭವಿಸಿದ್ದು ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ, ಇವಂದು ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಇವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಕೋಲಾರ್ ಜಿಲ್ಲೆಯ ನರಸಾಪುರ ತಾಲೂಕಿನ ಬೆಳ್ಳೂರು ಬ್ರಿಡ್ಜ್ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಬೆಂಗಳೂರಿನ ಆರ್‌.ಟಿ ನಗರದ ನಿವಾಸಿ ಅಫ್ರೋಜ್ ಎಂದು ತಿಳಿದುಬಂದಿದೆ. ಬೆಳ್ಳೂರು ಗೇಟ್‌ ಬಳಿಯ ಚೆನ್ನೈ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 76ರಲ್ಲಿ ಇಂಡಿಕಾ, ಫಾರ್ಚುನರ್‌ ಹಾಗೂ ಪೊಲೋ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.ಘಟನೆಯಲ್ಲಿ ಗಾಯಗೊಂಡ ಐವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ವೇಮಗಲ್ ಠಾಣೆಯ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ

Read More

ಕೊಪ್ಪಳ : ಬೇಸಿಗೆಯ ಬಿಸಿಲಿನಿಂದ ಬಸವಳೆದಿದ್ದ ಜನರಿಗೆ ಇದೀಗ ವರುಣ ತಂಪಿರೆದಿದ್ದು ಇಂದಿನಿಂದ ಒಂದು ವಾರಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ ಚಿತ್ರದುರ್ಗ, ಬಾಗಲಕೋಟೆ ಮತ್ತು ಕೊಪ್ಪಳದಲ್ಲಿ ವರುಣ ಅಬ್ಬರಿಸುತ್ತಿದ್ದು ಭಾರಿ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಹೌದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಬಿರುಗಾಳಿ ಹಾಗೂ ಜೋರಾದ ಮಳೆಯಿಂದ ವಿದ್ಯುತ್ ಕಂಬಗಳು ದೊರೆಗೆ ಉರಳಿವೆ ಇನ್ನು ಕೆಲವೇ ಮರಗಳು ಸಹ ಧರೆಗೆ ಉರುಳಿವೆ ಎಂದು ತಿಳಿದು ಬಂದಿದೆ. ಬಿಂಜವಾಡಗಿ ಘಟ್ಟಿಗನೂರು ಸುತ್ತಮುತ್ತ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಬಿರುಗಾಳಿ ಹಾಗೂ ಮಳೆಗೆ ಮನೆಯ ಮೇಲ್ಚಾವಣಿಗಳು ಹಾರಿ ಹೋಗಿರುವ ಘಟನೆ ನಡೆದಿದೆ. ಗುಡುಗು ಮಿಂಚು ಸಹಿತ ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿದೆ. ಅದೇ ರೀತಿ ಚಿತ್ರದುರ್ಗದಲ್ಲಿ ಕಳೆದ ಒಂದು ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ ಗುಡುಗು ಮಿಂಚು ಸಹಿತ ಮಳೆ ಸುರಿಯುತ್ತಿದೆ.…

Read More

ನವದೆಹಲಿ : ಜಮ್ಮು ಕಾಶ್ಮೀರದ ಪಹಲ್ಗಾನ್ ನಲ್ಲಿ ನಡೆದ ಉಗ್ರರ ನರಮೇಧದಲ್ಲಿ ಇಬ್ಬರು ಕನ್ನಡಿಗರು ಸೇರಿ 22 ಜನ ಬಲಿಯಾಗಿದ್ದಾರೆ. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ತನಿಖೆ ಆರಂಭಿಸಿದ್ದು ತನಿಖೆಯಲ್ಲಿ ಸ್ಫೋಟಕವಾದ ವಿಷಯ ಬಹಿರಂಗವಾಗಿದೆ. ಹೌದು ಕಳೆದ ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗೂಡಿನ ದಾಳಿ ನಡೆಸಿದರು ಈ ಒಂದು ಘಟನೆಗೆ ಸಂಬಂಧಿಸಿದಂತೆ ಎನ್ಐಎ ಇದೀಗ ತನಿಖೆ ಕೈಗೊಂಡಿದ್ದು ಉಗ್ರರ ಜೊತೆಗೆ ವಿದೇಶಿ ಉಗ್ರರೂ ಸಹ ಕೈಜೋಡಿಸಿರುವ ಶಂಕೆ ವ್ಯಕ್ತವಾಗುತ್ತಿದೆ. ಹಾಗಾಗಿ ಎನ್ಐಎ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದೆ.

Read More

ವಿಜಯನಗರ : ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ಕೂಲಿ ಕಾರ್ಮಿಕ ಹಾಗೂ ಆಕಳು ಸಾವನ್ನಪ್ಪಿದೆ. ಸಿಡಿಲಿಗೆ ಕೂಲಿಕಾರ್ಮಿಕ ಬೆಂಡಿಗೇರಿ ಹಾಲೇಶಪ್ಪ (48) ಸಾವನ್ನಪ್ಪಿದ್ದು ಕೊಳದಲ್ಲಿ ಆಗುವ ಮೀಸಲು ಹೋಗಿದ್ದಾಗ ಈ ಒಂದು ದುರ್ಘಟನೆ ಸಂಭವಿಸಿದೆ. ಇನ್ನು ರಾಯಚೂರಿನಲ್ಲಿ ಕೂಡ ದೇವಸ್ಥಾನಕ್ಕೆ ಇಂದು ಕುಟುಂಬದ ಸಮೇತ ಬಂದಿದ್ದ ಸಾಯಣ್ಣ ಎಂಬ ವ್ಯಕ್ತಿ ಸಿಡಿಲು ಬಡಿದು ಸಾವನ್ನಪ್ಪಿದ್ದು, ಅವರ ಪತ್ನಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೆ.ಗುಡದಿನ್ನಿ ಎಂಬಲ್ಲಿ ನಡೆದಿದೆ. ಸದ್ಯ ಮಾನ್ವಿ ಸರ್ಕಾರಿ ಆಸ್ಪತ್ರೆಯಲ್ಲಿ ಅವರ ಪತ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Read More