Author: kannadanewsnow05

ಬೆಂಗಳೂರು : ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ರಣಬಿಸಿಲು ಹೆಚ್ಚುತ್ತಿದೆ. ಇಂದು ದಕ್ಷಿಣ ಒಳನಾಅಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ಮಂಡ್ಯ, ಕೋಲಾರ, ತುಮಕೂರು, ಶಿವಮೊಗ್ಗ, ರಾಮನಗರ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, , ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೊಪ್ಪಳ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

Read More

ಹುಬ್ಬಳ್ಳಿ : ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿರಾದಂತಹ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಇದೀಗ ಮುಂಬರುವ ವಿಜಯದಶಮಿಯ ಬಳಿಕ ರಾಜ್ಯದಲ್ಲಿ ಹೊಸ ಪಕ್ಷ ಕಟ್ಟುವ ಪ್ಲಾನ್ ಹಾಕಿಕೊಂಡಿದ್ದಾರೆ. ಈ ಕುರಿತು ಅವರು ಮಾತನಾಡಿ ವಿಜಯದಶಮಿ ವರೆಗೂ ಕಾದು ನೋಡುತ್ತೇನೆ ಬಳಿಕ ಹೊಸ ಪಕ್ಷ ರಚನೆ ಕುರಿತಂತೆ ಪ್ಲಾನ್ ಮಾಡಿದ್ದೇನೆ ಎಂದು ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನಲ್ಲ ನನ್ನ ಹೆಣ, ಚಪ್ಪಲಿನೂ ಕಾಂಗ್ರೆಸ್ ಗೆ ಹೋಗಲ್ಲ. ಹೊಸ ಪಕ್ಷದ ಬಗ್ಗೆ ಆಲೋಚನೆ ಇದೆ ಅದು ಅಷ್ಟು ಸುಲಭವಲ್ಲ. ಹಿಂದೂಗಳ ಮತ ವಿಭಜನೆ ಆಗಬಾರದು ಅನ್ನುವುದು ನನ್ನ ಪ್ಲಾನ್. ವಿಜಯದಶಮಿಯವರೆಗೂ ಕಾದು ನೋಡುತ್ತೇನೆ. ನಾನು ಪಕ್ಕಾ ಪ್ಲಾನ್ ಮಾಡಿದ್ದೇನೆ.ರಾಜಕೀಯ ಜೀವನದಲ್ಲಿ ಕೆಲವು ಬಾರಿ ಮಾತು ಮುಳುವಾಗಿದೆ. ಎಂದು ಪರೋಕ್ಷವಾಗಿ ಹೊಸ ಪಕ್ಷದ ಸುಳಿವು ನೀಡಿದ ಶಾಸಕ ಯತ್ನಾಳ್. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮತ್ತೆ ಕರೆ ತಂದಿದ್ದೆ ನಾನು. ಈ ಹಿಂದೆ ಹೊಸ ಪಕ್ಷ ಕಟ್ಟಿದವರು…

Read More

ಬೆಂಗಳೂರು : ಇತ್ತೀಚಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಬೆಂಗಳೂರಿನಲ್ಲಿ ಬೆಚ್ಚಿ ಬೆಳಿಸುವ ಘಟನೆ ಒಂದು ನಡೆದಿದ್ದು, ರಸೇಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವತಿಯರ ಮೇಲೆ ಯುವಕನೊಬ್ಬ ಹಿಂದಿನಿಂದ ಬಂದು ಖಾಸಗಿ ಅಂಗ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೌದು ಬೆಂಗಳೂರಿನ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ವಿಕೃತಿ ಮೆರೆದಿದ್ದು, ನಡೆದು ಹೋಗುತ್ತಿದ್ದ ಹೆಣ್ಣು ಮಕ್ಕಳ ಜೊತೆಗೆ ಕಾಮುಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಭಾರತಿ ಲೇಔಟ್ ನ 1ನೇ ಕ್ರಾಸ್ ನಲ್ಲಿ ಈ ಒಂದು ಘಟನೆ ನಡೆದಿದೆ. ಏಪ್ರಿಲ್ 3 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಸುದ್ಧಗುಂಟೆ ಪೊಲೀಸ್ ಠಾಣೆಯಿಂದ ಯುವತಿ ಮತ್ತು ಯುವಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Read More

ಹುಬ್ಬಳ್ಳಿ : ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿತವಾದರೂ ಕೂಡ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ವಾಗ್ದಾಳಿ ಮುಂದುವರಿಸಿದ್ದಾರೆ ಎಂದಿಗೂ ಸಿಎಂ ಆಗಲ್ಲ ಆದರೆ ನನ್ನ ಹಣೆಬರದಲ್ಲಿ ಸಿಎಂ ಹುದ್ದೆ ಬರೆದಿದೆ ಎಂದು ಮತ್ತೆ ಗುಡುಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿವೈ ವಿಜಯೇಂದ್ರ ಎಂದು ಮುಖ್ಯಮಂತ್ರಿ ಆಗಲ್ಲ ನನ್ನ ಹಣೆಬರಹದಲ್ಲಿ ಸಿಎಂ ಹುದ್ದೆ ಬರದಿದೆ ಎಂದು ಶಾಸಕ ಬಸನಗೌಡ ಪಾಟೀಲ ಹೇಳಿಕೆ ನೀಡಿದರು. ಜಾರ್ಖಂಡ್ ನಲ್ಲಿ ಪಕ್ಷೇತರ ಶಾಸಕ ಸಹ ಮುಖ್ಯಮಂತ್ರಿ ಆಗಿದ್ದ. ಆದರೆ ಬಿವೈ ವಿಜಯೇಂದ್ರ ಎಂದು ಮುಖ್ಯಮಂತ್ರಿ ಆಗಲ್ಲ. ನಾನು ಬಿಜೆಪಿ ಬಿಟ್ಟು ಹೋಗಿಲ್ಲ ಪೂಜ್ಯ ತಂದೆ ಮತ್ತು ಮಗ ನನ್ನನ್ನು ಹೊರಗೆ ಹಾಕಿದ್ದಾರೆ, ಪೂಜ್ಯ ತಂದೆಯ ಹಿರಿಯ ಮಗ ಇದ್ದಾನೆ. ಅವನು ಸಂತೋಷ ಲಾಡ್ ಗೆ ಸಿಎಂ ಮಾಡಲು ಹೊರಟಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.

Read More

ಯಾದಗಿರಿ : ಸಾಮಾನ್ಯವಾಗಿ ಪುರುಷರು ಆಗಿರಬಹುದು ಅಥವಾ ಮಹಿಳೆಯರು ಆಗಿರಬಹುದು, ಮದುವೆಯಾಗಿ ಸ್ವಲ್ಪ ದಿನ ಸಾಂಸಾರಿಕ ಜೀವನ ನಡೆಸಿದ ಬಳಿಕ ಆಮೇಲೆ ಸನ್ಯಾಸತ್ವ ಸ್ವೀಕರಿಸೋದನ್ನು ನೋಡಿದ್ದೇವೆ. ಅಲ್ಲದೆ ಕೆಲವರು ಬಾಲ ಬ್ರಹ್ಮಚಾರಿಯಾಗಿಯು ಇದ್ದಿದನ್ನು ನೋಡಿದ್ದೇವೆ. ಆದರೆ ಯಾದಗಿರಿಯಲ್ಲಿ ಕೋಟ್ಯಾಧೀಶ್ವರನ ಪುತ್ರಿಯಾದ ಯುವತಿಯೋರ್ವಳು ಇದೀಗ ಜೈನ ಧರ್ಮ ಸ್ವೀಕರಿಸುವ ಮೂಲಕ 26ನೇ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದ್ದಾಳೆ. ಹೌದು ಸನ್ಯಾಸಿ ಜೀವನದ ಕಡೆ ಪಯಣ ಬೆಳೆಸಿದ ಕೋಟ್ಯಾಧಿಶ್ವರನ ಪುತ್ರಿ. ಯುವತಿ 26ನೇ ವಯಸ್ಸಿಗೆ ಆಡಂಬರದ ಜೀವನ ಸಾಕಾಗಿ ಇದೀಗ ಸನ್ಯಾಸತ್ವಕ್ಕೆ ಮೊರೆ ಹೋಗಿದ್ದಾಳೆ. ಯಾದಗಿರಿಯ ಜಿಲ್ಲೆಯ ಜೈನ ಬಡಾವಣೆಯ ನಿವಾಸಿ ನಿಖಿತಾ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಯಾದಗಿರಿಯ ಜೈನ ಬಡಾವಣೆಯ ನಿವಾಸಿ ನಿಖಿತಾ ನರೇಂದ್ರ ಗಾಂಧಿ ಮತ್ತು ಸಂಗೀತ ಗಾಂಧಿ ಪುತ್ರಿ ಎಂದು ತಿಳಿದುಬಂದಿದೆ. ನಿಖಿತ ಇದೀಗ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಕಠಿಣ ನಿಯಮ ಪಾಲನೆ ಕಡ್ಡಾಯ 1) ಸನ್ಯಾಸತ್ವ ಸ್ವೀಕರಿಸಿದ ಮೇಲೆ ಸರಳವಾಗಿ ಜೀವನ ಸಾಗಿಸಬೇಕು. 2) ಒಂದೇ ಜಾಗದಲ್ಲಿ ಎರಡು ದಿನಕ್ಕಿಂತ ಹೆಚ್ಚು ನಿಲುವಂತಿಲ್ಲ.…

Read More

ಹುಬ್ಬಳ್ಳಿ : ಎಲ್ಲಿಯವರೆಗೆ ರಾಜ್ಯದಲ್ಲಿ ಬಿಜೆಪಿ ಕುಟುಂಬ ಮುಕ್ತ ಆಗುವುದಿಲ್ಲವೋ, ಅಲ್ಲಿಯವರೆಗೆ ನಾನು ಬಿಜೆಪಿಗೆ ಮರು ಸೇರ್ಪಡೆ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಾಗ್ದಾಳಿ ಮುಂದುವರೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪೂಜ್ಯರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಂಸ್ಕೃತಿ ನಮ್ಮದಲ್ಲ. ಪೂಜ್ಯರನ್ನು ಯಾರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿದೆ. ಮಠಮಾನ್ಯಗಳಿಗೆ ಹಣ ನೀಡಿದ್ದು ನಾವೇ ಎಂದು ಬಹಳ ಮಾತನಾಡುತ್ತಾರೆ ಎಲ್ಲಿಯವರೆಗೆ ಒಂದು ಕುಟುಂಬದಿಂದ ಬಿಜೆಪಿ ಮುಕ್ತ ಆಗುವುದಿಲ್ಲವೋ, ಅಲ್ಲಿಯವರೆಗೆ ನಾನು ಬಿಜೆಪಿಗೆ ಮರು ಸೇರ್ಪಡೆ ಆಗಲ್ಲ ಎಂದರು. ಆ ಕುಟುಂಬ ಉತ್ತರ ಕರ್ನಾಟಕದವರ ಜೊತೆ ಹೇಗೆ ನಡೆದುಕೊಂಡಿದ್ದಾರೆ. ನೀರಾವರಿ ವಿಚಾರದಲ್ಲಿ ಬಹಳ ದೊಡ್ಡ ದ್ರೋಹವಾಗಿದೆ. ಭಾರತೀಯ ಜನತಾ ಪಕ್ಷದಲ್ಲಿ ಎಷ್ಟೋ ಜನ ಮುಖ್ಯಮಂತ್ರಿ ಆಗಿದ್ದಾರೋ ಅವರೆಲ್ಲರೂ ಉತ್ತರ ಕರ್ನಾಟಕದವರ ಆಶೀರ್ವಾದದಿಂದ ಆಗಿದ್ದು. ಬೆಂಗಳೂರಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುತ್ತಾರೆ ಅಂತೆ.…

Read More

ಹುಬ್ಬಳ್ಳಿ : ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯು, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರನ್ನು 6 ವರ್ಷಗಳ ಕಾಲ ಪಕ್ಷದಿಂದ ಉದ್ಘಾಟನೆಯಾಗಿದ್ದಾರೆ. ಆದರೂ ಸಹ ಶಾಸಕ ಯತ್ನಾಳ್ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಇದೀಗ ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ಕೊಡುತ್ತೇನೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ, ನೀನು ರಾಜೀನಾಮೆ ಕೊಟ್ಟು ಚುನಾವಣೆಗೆ ಬಾ ಎಂದು ಬಿ.ವೈ ವಿಜಯೇಂದ್ರಗೆ ಶಾಸಕ ಯತ್ನಾಳ್ ಸವಾಲು ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ರಾಜೀನಾಮೆ ಕೊಡುತ್ತೇನೆ, ನೀನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಾ ಚುನಾವಣೆ ಎದುರಿಸೋಣ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದರು. ನಾನು ಕೇವಲ ಭಗವಾ ಧ್ವಜದ ಮೇಲೆ ಚುನಾವಣೆಯಲ್ಲಿ ಗೆಲ್ಲುತ್ತೇನೆ. ನನಗೆ ಮುಸ್ಲಿಮರ ವೋಟ್ ಬೇಡ. ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಶಾಸಕ…

Read More

ಚಾಮರಾಜನಗರ : ಸಾಮಾನ್ಯವಾಗಿ ಮನೆಯಲ್ಲಿ ಕರೆಂಟ್ ಹೋದ ಸಂದರ್ಭದಲ್ಲಿ ಮೇಣದಬತ್ತಿ ಹಚ್ಚುವುದು ಹಿಂದಿನಿಂದಲೂ ಬಂದಂತಹ ಒಂದು ವಾಡಿಕೆ. ಆದರೆ ಚಾಮರಾಜನಗರದಲ್ಲಿ ಈ ಒಂದು ಮೇಣದಬತ್ತಿಯಿಂದ ಘೋರವಾದ ದುರಂತ ಒಂದು ಸಂಭವಿಸಿದ್ದು ವ್ಯಕ್ತಿಯೊಬ್ಬರು ಬೆಂಕಿಯಲ್ಲಿ ಸಜೀವವಾಗಿ ದಹನಗೊಂಡಿದ್ದಾರೆ. ಈ ಒಂದು ಘಟನೆ ಚಾಮರಾಜನಗರದ ಮೂಡಗೂರಿನಲ್ಲಿ ಈ ಒಂದು ಘಟನೆ ನಡೆದಿದ್ದು ಸಿದ್ದೇಶ್ (41) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸಿದ್ದೇಶ್ ವಿದ್ಯುತ್ ಇಲ್ಲದೆ ಮನೆಯಲ್ಲಿ ಮೇಣದ ಬತ್ತಿಯನ್ನು ಹಚ್ಚಿಟ್ಟಿದ್ದ. ರಾತ್ರಿ ಮಲಗಿದ್ದಾಗ ಮೇಣದಬತ್ತಿ ಹಾಸಿಗೆ ಮೇಲೆ ಬಿದ್ದಿತ್ತು. ಈ ವೇಳೆ ಹಾಸಿಗೆ ಸಮೇತ ಬೆಂಕಿಯಲ್ಲಿ ಬಿದ್ದು ಸಿದ್ದೇಶ್ ನರಳಾಡಿ ಪ್ರಾಣ ಬಿಟ್ಟಿದ್ದಾರೆ.

Read More

ತುಮಕೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಡೆಗೆ ರಾಜ್ಯ ಸರ್ಕಾರ ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಿತ್ತು. ಆದರೆ ಈ ಒಂದು ಕಾನೂನಿಗೆ ಕ್ಯಾರೆ ಎನ್ನದ ಮೈಕ್ರೋ ಫೈನಾನ್ಸ್ ಗಳು ಇದೀಗ ಕಿರುಕುಳವನ್ನು ಮುಂದುವರಿಸಿದ್ದು, ಇದೀಗ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಹಣ್ಣಿನ ವ್ಯಾಪಾರಿ ವಿಡಿಯೋ ಮಾಡಿ ಲೈವ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಹೌದು ತುಮಕೂರಿನಲ್ಲಿ ವಿಷ ಕುಡಿದ ಹಣ್ಣಿನ ವ್ಯಾಪಾರಿ ಕಿರುಕುಳಕ್ಕೆ ತಾಳದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಲಾಗಿದೆ. ಮಂಡ್ಯ ಮೂಲದ ಮುಜೀಬ್ ಎಂಬ ಹಣ್ಣಿನ ವ್ಯಾಪಾರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೀಟರ್ ಬಡ್ಡಿ ಖಾಸಗಿ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದರು. ಬಡ್ಡಿ ಕಿರುಕುಳ ತಾಳದೆ ಮುಜೀಬ್ ಮಂಡ್ಯದಿಂದ ತುಮಕೂರಿಗೆ ಬಂದಿದ್ದ. ಈ ವೇಳೆ ಲೈವ್ ವಿಡಿಯೋ ದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ…

Read More

ಬಳ್ಳಾರಿ : ಇತ್ತೀಚಿಗೆ ಬಳ್ಳಾರಿಯ ಕಣೆಕಲ್ ರಸ್ತೆಯ ರಾಣಿತೋಟದಲ್ಲಿ ವೆಂಕಟೇಶ್ ಎನ್ನುವ ವ್ಯಕ್ತಿಯ ಭೀಕರ ಕೊಲೆಯಾಗಿತ್ತು. ಈ ಒಂದು ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಕೊಲೆಯಾದ 24 ಗಂಟೆಯೊಳಗೆ 11 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಆದರೆ ಈ ಒಂದು ಕೊಲೆಯ ಹಿಂದಿನ ರಹಸ್ಯ ಬೇಧಿಸಿದ ಪೊಲೀಸರು ಸ್ವತಃ ಬೆಚ್ಚಿಬಿದ್ದಿದ್ದಾರೆ. ಹೌದು ಕೊಲೆ ಸಂಬಂಧ 24 ಗಂಟೆಯಲ್ಲೇ 11 ಆರೋಪಿಗಳ ಬಂಧನವಾಗಿದೆ. ನಿನ್ನೆ ಕಣೆಕಲ್ ರಸ್ತೆಯ ರಾಣಿ ತೋಟದಲ್ಲಿ ವೆಂಕಟೇಶ್ ಕೊಲೆ ಆಗಿತ್ತು. ಶುಕ್ರವಾರ ಬೆಳಗಿನ ಜಾವ ವೆಂಕಟೇಶ್ ಕೊಲೆಯಾಗಿತ್ತು. ಆದರೆ ಈ ಕೊಲೆಯ ಹಿಂದೆ ಪತ್ನಿಯ ಕೈವಾಡ ಇರುವುದು ಪತ್ತೆಯಾಗಿದೆ. ಪತಿಯ ಕೊಲೆಗೆ ಪತ್ನಿ ನೀಲವೇಣಿ ಸುಪಾರಿ ಕೊಟ್ಟಿದ್ದಳು ಎನ್ನಲಾಗಿದೆ. ಹೌದು ಆನಂದ್ ಜೊತೆಗೆ ಪತ್ನಿ ನೀಲವಣಿಗೆ ವ್ಯವಹಾರದ ಸಂಬಂಧ ಸಲುಗೆ ಇತ್ತು. ಸಲುಗೆ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ನೀಲವೇಣಿ ನಡತೆಯ ಬಗ್ಗೆ ಪತಿ ವೆಂಕಟೇಶ್ ಸಂಶಯ ಪಟ್ಟಿದ್ದ. ಇದೇ ಕಾರಣಕ್ಕೆ ಪದೇ ಪದೇ ವೆಂಕಟೇಶ್ ಮತ್ತು ಪತ್ನಿ ನೀಲವೇಣಿ ಮಧ್ಯೆ ಗಲಾಟೆ…

Read More