Subscribe to Updates
Get the latest creative news from FooBar about art, design and business.
Author: kannadanewsnow05
ಹಾವೇರಿ : ಇಲ್ಲಿನ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಜ್ಯೋತಿ ಎಂಬಾಕೆ ಬಾಲಕನ ಗಾಯಕ್ಕೆ ಹೊಲಿಗೆ ಹಾಕೋ ಬದಲು ಫೆವಿಕ್ವಿಕ್ ಹಾಕಿ ಅಂಟಿಸಿ ಕಳುಹಿಸಿದ್ದ ಘಟನೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆಟವಾಡುವ ವೇಳೆ ಬಿದ್ದು ಗಾಯಗೊಂಡಿದ್ದ 7 ವರ್ಷದ ಬಾಲಕ ಗುರುಶಿಕನ್ ಅಣ್ಣಪ್ಪ ಹೊಸಮನಿಯನ್ನು ಈ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಆದ್ರೆ ಈ ವೇಳೆ ವೈದ್ಯರಿಲ್ಲದ ಕಾರಣ ನರ್ಸ್ ಜ್ಯೋತಿ ಗಾಯಗೊಂಡಿದ್ದ ಜಾಗಕ್ಕೆ ಡ್ರೆಸ್ಸಿಂಗ್ ಮಾಡಿ, ಫೆವಿಕ್ವಿಕ್ ಹಚ್ಚಿ, ಅದರ ಮೇಲೆ ಬ್ಯಾಂಡೇಜ್ ಟೇಪ್ ಹಚ್ಚಿ ಕಳುಹಿಸಿದ್ದಳು.ಈ ಬಗ್ಗೆ ವ್ಯಾಪಕ ಟೀಕೆ ಮತ್ತು ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಯಾಕೆ ಈ ರೀತಿ ಮಾಡಿದ್ದೀರಿ ಎಂದು ವ್ಯಕ್ತಿಯೊಬ್ಬರು ನರ್ಸ್ ಅನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನರ್ಸ್ ದರ್ಪ ಮೆರೆದಿದ್ದು, ತಾನು ಮಾಡಿದ್ದೇ ಸರಿ ಎಂಬಂತೆ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾಳೆ. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ, ನರ್ಸ್ ಜ್ಯೋತಿ ಅವರನ್ನು ಅಮಾನತು ಮಾಡಲಾಗಿದೆ. ಈ ಕುರಿತು…
ಬೆಂಗಳೂರು: ಇದೇ 11ರಿಂದ 14ರವರೆಗೆ ಇಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಶಶಿ ತರೂರ್, ಆನಂದ್ ಮಹೀಂದ್ರ, ಕಿರಣ್ ಮಜುಂದಾರ್ ಷಾ, ಪ್ರಶಾಂತ್ ಪ್ರಕಾಶ್, ಗ್ರೀಸ್ ಮಾಜಿ ಪ್ರಧಾನಿ ಜಾರ್ಜ್ ಪಪಾಂಡ್ರಿಯೂ, ವೋಲ್ವೊ ಸಮೂಹದ ಅಧ್ಯಕ್ಷ ಮಾರ್ಟಿನ್ ಲುಂಡ್ ಸ್ಟೆಡ್ ಸೇರಿದಂತೆ 75 ಸಾಧಕ ಉದ್ಯಮಿಗಳು ಮಾತನಾಡಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಬುಧವಾರ ತಿಳಿಸಿದ್ದಾರೆ. ಈ ಬಗ್ಗೆ ವಿವರ ಮಾಹಿತಿ ನೀಡಿರುವ ಅವರು, ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ, ಜಿಂದಾಲ್ ಸ್ಟೀಲ್ ವರ್ಕ್ಸ್ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್, ಆಯುಷ್ಮಾನ್ ಭಾರತ ಯೋಜನೆಯ ಮಾಜಿ ಸಿಇಒ ಇಂದುಭೂಷಣ್, ಸಿನಿಮಾ ನಿರ್ಮಾಪಕಿ ಕಿರಣ್ ರಾವ್, ಇಸ್ರೋ ಮಾಜಿ ಅಧ್ಯಕ್ಷ ಸೋಮನಾಥ್, ಏಕಸ್ ಸಿಇಒ ಅರವಿಂದ್ ಮೆಳ್ಳಿಗೇರಿ, ಅಮೆರಿಕದ ಇಂಧನ ಇಲಾಖೆಯ ಸಿಐಒ ಆ್ಯನ್ ಡಂಕಿನ್, ಝೆರೋದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ,…
ನವದೆಹಲಿ: ಇದೇ ತಿಂಗಳ 11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬುಧವಾರ ಖುದ್ದಾಗಿ ಆಹ್ವಾನಿಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಸಚಿವೆಯನ್ನು ಭೇಟಿಯಾದ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆಮಂತ್ರಣ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು, ಹೂಡಿಕೆದಾರರ ಸಮಾವೇಶದ ವೈಶಿಷ್ಟ್ಯಗಳನ್ನು ಮತ್ತು ರಾಜ್ಯ ಸರಕಾರದ ನೂತನ ಕೈಗಾರಿಕಾ ನೀತಿ ಹಾಗೂ ಸ್ವಚ್ಛ ಇಂಧನ ನೀತಿಯ ಬಗ್ಗೆ ನಿರ್ಮಲಾ ಅವರಿಗೆ ಮಾಹಿತಿ ನೀಡಿದರು. ಬಳಿಕ ಪಾಟೀಲ ಅವರು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಮತ್ತು ಎಐಸಿಸಿ ಕರ್ನಾಟಕ ಉಸ್ತುವಾರಿ, ಸಂಸದ ಕೆ ಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ, ಆಹ್ವಾನ ಪತ್ರಿಕೆ ನೀಡಿದರು.
BIG NEWS : ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಿಂದ ACT1 ರೇಕ್ನಿಂದ ‘SUV’ ಕಾರುಗಳನ್ನು ಸಾಗಿಸುವ ಕಾರ್ಯಕ್ಕೆ ಚಾಲನೆ
ಬೆಂಗಳೂರು : ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ಭಾರತದಲ್ಲಿಯೇ ಮೊದಲ ACT1 (ಬೋಗಿ ಕವರ್ಡ್ ಟಾಲರ್ ಹೈಟ್ ಆಟೋ-ಕಾರ್ ಕ್ಯಾರಿಯರ್) ರೇಕ್ ಇಂದು ಸಂಚರಿಸಿತು. ಈ ರೇಕ್ 264 ಎಸ್.ಯು.ವಿ. (ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ಕಾರುಗಳನ್ನು ಹೊತ್ತು ಪೆನುಕೊಂಡದಿಂದ ಹರಿಯಾಣದ ಗುರ್ಗಾಂವ್ ಜಿಲ್ಲೆಯ ಫರ್ರುಖ್ ನಗರಕ್ಕೆ ಸಾಗಿತು. ಈ ಸರಕು ಸಾಗಣೆಯಿಂದ ರೈಲ್ವೆಗೆ ₹34 ಲಕ್ಷ ಆದಾಯ ಬಂದಿದೆ.ACT1 ರೇಕ್, 33 ವಿಶೇಷವಾಗಿ ವಿನ್ಯಾಸಗೊಳಿಸಿದ ವ್ಯಾಗನ್ಗಳನ್ನು ಒಳಗೊಂಡಿದ್ದು, 264 SUV ಕಾರುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ವ್ಯವಸ್ಥೆ ಭಾರತದಾದ್ಯಂತ ದೊಡ್ಡ ವಾಹನಗಳ ಸಾಗಾಣಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದ್ದು, ಇದು ಸದ್ಯ ಬಳಕೆಯಲ್ಲಿರುವ BCACBM ರೇಕ್ ಗಳಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ACT1 ರೇಕ್ ವೈಶಿಷ್ಟ್ಯಪೂರ್ಣ ಡಬಲ್-ಡೆಕರ್ ವಿನ್ಯಾಸವನ್ನು ಹೊಂದಿದ್ದು SUVಗಳನ್ನು ಎರಡೂ ಡೆಕ್( ಮೇಲೆ ಮತ್ತು ಕೆಳಗೆ) ಗಳಲ್ಲಿ ಲೋಡ್ ಮಾಡಬಹುದಾಗಿದೆ. ಇದರಿಂದ ಒಟ್ಟಾರೆ ವಾಹನ ಸಾಗಣೆಯ ಸಾಮರ್ಥ್ಯ ವೃದ್ಧಿಯಾಗಲಿದ್ದು ಇದರಿಂದ ವಾಹನ ಸಾಗಣೆ ವೆಚ್ಚ ಇಳಿಕೆಯಾಗಲಿದೆ.ACT1 ರೇಕ್ನ…
ಬೆಂಗಳೂರು : ಕಳೆದ 1 ವಾರದಿಂದ DDoS ದಾಳಿಯಿಂದ ಸಮಸ್ಯೆಗೆ ತುತ್ತಾಗಿದ್ದ ಕಾವೇರಿ 2.0 ತಂತ್ರಾಂಶ ಈಗ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ ಮತ್ತು ಈ ತಂತ್ರಾಂಶ ಇದೀಗ ಎಂದಿನಂತೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಕಳೆದ ಕೆಲ ದಿನಗಳಿಂದ ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತು EC/CC ಸೇವೆಗಳ ಮೇಲೆ ಪರಿಣಾಮ ಉಂಟಾಗಿತ್ತು. ಇದು ಆದಾಯ ಸಂಗ್ರಹವನ್ನು ಮತ್ತಷ್ಟು ಕಡಿಮೆ ಮಾಡಿತು. ಇಂತಹ ಅನಿರೀಕ್ಷಿತ ದಾಳಿಗಳನ್ನು ಪರಿಹರಿಸಲು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯಗಳನ್ನು ತಗ್ಗಿಸಲು ವರ್ಧಿತ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ ಮತ್ತು ಅರ್ಜಿಯನ್ನು ರಕ್ಷಿಸಲು ಇ-ಆಡಳಿತ ಇಲಾಖೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ತಾಂತ್ರಿಕ ದಾಳಿಯ ಕಾರಣಕ್ಕೆ ಫೆಬ್ರವರಿ 1, 2025 ರಂದು ತಂತ್ರಾಂಶದ ಮೇಲೆ ವ್ಯತಿರೀಕ್ತ ಪರಿಣಾಮ ಉಂಟಾಗಿತ್ತು. ಪರಿಣಾಮ ನೋಂದಣಿಗಳ ಸಂಖ್ಯೆ 556 ಕ್ಕೆ ಇಳಿದಿತ್ತು. ಸಹಿ ಮಾಡಿದ ಇಸಿ (ಋಣಭಾರ ಪ್ರಮಾಣ ಪತ್ರ) ಸಂಖ್ಯೆ 1649 ಮತ್ತು ನೀಡಲಾದ ಸಿಸಿ ಸಂಖ್ಯೆ 405 ಆಗಿದ್ದು, 15,18,72,565.45 ರೂ. ಆದಾಯ…
BREAKING : ದೆಹಲಿ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟ : ಬಿಜೆಪಿಗೆ ಬಹುಮತ, ಕಾಂಗ್ರೆಸ್ ಶೂನ್ಯ ಸಾಧನೆ!
ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಹಲವು ಎಕ್ಸಿಟ್ ಪೋಲ್ ಗಳ ಪ್ರಕಾರ ಈ ಬಾರಿ ಬಿಜೆಪಿ ಬಹುಮತ ಪಡೆದುಕೊಂಡು ಗೆಲುವು ಸಾಧಿಸಲಿದೆ, ಅಲ್ಲದೇ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ ಎಂದು ಹಲವು ಸಮೀಕ್ಷೆ ಗಳ ಎಕ್ಸಿಟ್ ಪೋಲ್ ನಲ್ಲಿ ತಿಳಿದು ಬಂದಿದೆ. ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಬಿಜೆಪಿಗೆ ಹೆಚ್ಚಿನ ಸ್ಥಾನ ದೊರೆಯಲಿದ್ದು, ಬಿಜೆಪಿ ಈ ಬಾರಿ 35 ರಿಂದ 40 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಡಿವಿ ರಿಸರ್ಚ್ ಅಂತೆ ಆಪ್ ಗೆ 26 ರಿಂದ 34 ಸ್ಥಾನ, ಬಿಜೆಪಿಗೆ 36 ರಿಂದ 34 ಸ್ಥಾನ ಹಾಗೂ ಕಾಂಗ್ರೆಸ್ ಗೆ 0 ಮತ್ತು ಇತರರು 0 ಸ್ಥಾನ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇನ್ನು ಅದೇ ರೀತಿಯಾಗಿ ಪೀಪಲ್ಸ್ ಇನ್ಸೈಟ್ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಬಹುಮತ ಸಿಗುವ ಸಾಧ್ಯತೆ ಇದ್ದು, 40 ರಿಂದ 44 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಸಾಧ್ಯತೆ…
ಬೆಂಗಳೂರು : ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆ ಜಾರಿ ವಿಚಾರವಾಗಿ ಸದ್ಯ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯಲ್ಲಿ ಕೆಲ ಅಂಶ ಬದಲಾವಣೆ ಮಾಡಿದೆ. ಮೈಕ್ರೋ ಫೈನಾನ್ಸ್ ಪದ ಬಳಸಿದರೆ ಸಮಸ್ಯೆ ಆಗಬಹುದೆಂಬ ಲೆಕ್ಕಾಚಾರ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆಯಲ್ಲಿ ಸಣ್ಣ ಸಾಲ ಎಂಬ ಪದ ಸೇರಿಸಿದೆ. ಹೌದು ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು, ಅನೇಕ ಜನರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಸುಗ್ರೀವಾಜ್ಞೆ ಜಾರಿ ಮಾಡಲು ನಿರ್ಧರಿಸಿತ್ತು. ಇದೀಗ ಈ ಒಂದು ಸುಗ್ರೀವಾಜ್ಞೆ ಜಾರಿ ಮಾಡೋಕೆ ಮುಂಚೆ ರಾಜ್ಯ ಸರ್ಕಾರ ಹಲವು ಅಂಶಗಳನ್ನು ಬದಲಾವಣೆ ಮಾಡಿದೆ. ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ಸುಗ್ರೀವಾಜ್ಞೆ ಜಾರಿ ವಿಚಾರವಾಗಿ ಸದ್ಯ ರಾಜ್ಯ ಸರ್ಕಾರ ಸುಗ್ರೀವಾಜ್ಞೆಯಲ್ಲಿ ಕೆಲ ಅಂಶ ಬದಲಾವಣೆ ಮಾಡಿದೆ. ಮೈಕ್ರೋ ಸಾಲ ಮತ್ತು ಸಣ್ಣ ಸಾಲ, ದಬ್ಬಾಳಿಕೆ ಕ್ರಮಗಳ ತಡೆಗಟ್ಟುವಿಕೆ, ಸುಗ್ರೀವಾಜ್ಞೆ…
ರಾಯಚೂರು : ಮನೆಯಲ್ಲಿ ಪೇಟಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಇಟ್ಟಿದ್ದ ಥಿನ್ನರ್ ಅನ್ನು ಕುಡಿದು ಮೂರು ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಹಿರೇಕೊತ್ನೇಕರ್ ಎಂಬಲ್ಲಿ ನಡೆದಿದೆ. ಹೌದು ಆಕಸ್ಮಿಕವಾಗಿ ಮನೆಯಲ್ಲಿಟ್ಟಿದ್ದ ಥಿನ್ನರ್ ಕುಡಿದು ಬಾಲಕ ಸಾವನ್ನಪ್ಪಿದ್ದಾನೆ.ಮೃತ ಬಾಲಕನ ಮನೆಯಲ್ಲಿ ಪೇಂಟಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಮನೆಯಲ್ಲಿ ಇಟ್ಟಿದ್ದ ಥಿನ್ನರ್ ಅನ್ನು ಶಿವರ್ಜುನ್ (3) ಬಾಲಕ ಕುಡಿದಿದ್ದಾನೆ. ಅಸ್ವಸ್ಥನಾಗಿದ್ದ ಶಿವಾರ್ಜುನ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇದೀಗ ಮೂರು ವರ್ಷದ ಬಾಲಕ ಶಿವರ್ಜುನ್ ಸಾವನ್ನಪ್ಪಿದ್ದಾನೆ. ರಾಯಚೂರು ಜಿಲ್ಲೆಯ ಹಿರೇಕೊತ್ನೇಕರ್ ಎಂಬಲ್ಲಿ ನಡೆದಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಐಷಾರಾಮಿ ಕಾರುಗಳ ವೀಲ್ಗಳನ್ನು ಕದ್ದು ಅಂಗಡಿಗಳಿಗೆ ಹಾಗೂ ಆನ್ಲೈನ್ ಮುಖಾಂತರ ಮಾರಾಟ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಬೆಂಗಳೂರಲ್ಲಿ ಕಾರ್ ಟೈರ್ ಕದಿಯುತ್ತಿದ್ದ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮನೆಯ ಮುಂದೆ ನಿಲ್ಲಿಸಿದಂತಹ ಕಾರ್ ಟೈರ್ ಗಳನ್ನು ಕದಿಯುತ್ತಿದ್ದ ಹೈದರ್ ಅಲಿ ಹಾಗೂ ಗೌಸ್ ಬೇಗ್ ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾತ್ರಿಯಲ್ಲಿ ಸ್ಕೂಟಿಯಲ್ಲಿ ಬಂದು ವ್ಹಿಲ್ ಕದ್ದು ಪರಾರಿಯಾಗುತ್ತಿದ್ದರು. ಅಂಗಡಿ ಹಾಗೂ ಆನ್ಲೈನ್ ಮೂಲಕ ವ್ಹಿಲ್ ಗಳನ್ನು ಸೇಲ್ ಮಾಡುತ್ತಿದ್ದರು. ಸದ್ಯ ಆರೋಪಿಗಳಿಂದ 60 ಮ್ಯಾಗ್ ವೀಲ್ಗಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ಬಂಧನದಿಂದ 20 ಪ್ರಕರಣಗಳು ಇದೀಗ ಪತ್ತೆಯಾಗಿವೆ.
ಯಾದಗಿರಿ : ರಾಜ್ಯದಲ್ಲಿ ಮತ್ತೊಂದು ಭೀಕರವಾದಂತಹ ಅಪಘಾತ ಸಂಭವಿಸಿದ್ದು ಬೈಕ್ಗೆ ವೇಗವಾಗಿ ಬಂದು ಸಾರಿಗೆ ಬಸ್ ಗುದ್ದಿದ ಪರಿಣಾಮ ಬೈಕ್ ನಲ್ಲಿ ಚಲಿಸುತ್ತಿದ್ದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬಳಿ ನಡೆದಿದೆ. ಹೌದು ಬೈಕ್ ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಐವರು ಸಾವನ್ನಪ್ಪಿರುವ ಘಟನೆ ಯಾದಗಿರಿಯ ಸುರಪುರ ತಾಲೂಕಿನ ತಿಂಥಣಿ ಬಳಿ ಈ ಒಂದು ಭೀಕರ ಅಪಘಾತ ನಡೆದಿದೆ. ತಿಂಥಣಿ ಕಡೆಗೆ ಹೊರಟಿದ್ದ ಬೈಕಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದು, ಬಸ್ ಡಿಕ್ಕಿ ಹೊಡೆದ ಪರಿಣಾಮ ಆಂಜನೇಯ (35) ಪತ್ನಿ ಗಂಗಮ್ಮ (28) ಹಾಗೂ ಅವರ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸುರಪುರ ಪೊಲೀಸ್…














