Author: kannadanewsnow05

ಶ್ರೀನಗರ : ಕಳೆದ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಂ ಬಳಿ 26 ಪ್ರವಾಸಿಗರ ಮೇಲೆ ಉಗ್ರರು ಭೀಕರವಾದ ಗುಂಡಿನ ದಾಳಿ ನಡೆಸಿದ್ದರು. ಇದೀಗ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಕಾಶ್ಮೀರದಲ್ಲಿ ನಡೆದಿದ್ದು, ಅಲೆಮಾರಿ ಮಹಿಳೆಯ ಮೇಲೆ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಹೌದು ಅಲೆಮಾರಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಶ್ರೀನಗರದ ಹೊರವಲಯದ ನಿಶಾತ್ ಪ್ರದೇಶದಲ್ಲಿ ನಡೆದಿದೆ. ಐವರು ಮಕ್ಕಳ ತಾಯಿಯಾಗಿದ್ದ ಮಹಿಳೆ ಅಲೆಮಾರಿ ಬಕರವಾಲ್ ಸಮುದಾಯಕ್ಕೆ ಸೇರಿದ್ದು, ಆಕೆ ಮತ್ತು ಸಮುದಾಯದ ಸದಸ್ಯರು ವಾರದ ಹಿಂದೆ ತಮ್ಮ ಜಾನುವಾರುಗಳೊಂದಿಗೆ ರಿಯಾಸಿ ಜಿಲ್ಲೆಯಿಂದ ವಲಸೆ ಬಂದಿದ್ದರು. ಮಹಿಳೆ ಹತ್ತಿರದ ಪ್ರದೇಶದಲ್ಲಿ ದನಗಳನ್ನು ಮೇಯಿಸಲು ಸಂಜೆ ಐದು ಗಂಟೆಯ ಸುಮಾರಿಗೆ ತನ್ನ ಟೆಂಟ್‌ನಿಂದ ಹೊರಬಂದಿದ್ದರು. ರಾತ್ರಿಯಾದರೂ ಅವರು ಜಾನುವಾರುಗಳೊಂದಿಗೆ ಮರಳದಿದ್ದಾಗ ನಾವು ಹುಡುಕಾಟ ಆರಂಭಿಸಿದ್ದೆವು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಅಸ್ವಸ್ಥಳಾಗಿ ಪತ್ತೆಯಾಗಿದ್ದಾಳೆ. ತಕ್ಷಣ ಆಸ್ಪತ್ರೆಗೆ ಸಾಗಿಸಿತ್ತಾದರು ಉಳಿಯಲಿಲ್ಲ ಎಂದು…

Read More

ದಕ್ಷಿಣಕನ್ನಡ : ರೌಡಿಶೀಟರ್ ಹಾಗೂ ಸುಹಾಸ್ ಶೆಟ್ಟಿ ಅತ್ತೆಯ ಬಳಿಕ ತಕ್ಷಣ ಕನ್ನಡ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಬಂದ್ ಕರೆ ನೀಡಿದ್ದ ಹಿನ್ನೆಲೆ ಇದೀಗ VHP ಮುಖಂಡ ಶರಣ್ ಪಂಪ್ ವೇಲ್ ವಿರುದ್ಧ FIR ದಾಖಲಾಗಿದೆ. ಹೌದು ದಕ್ಷಿಣ ಕನ್ನಡ ಜಿಲ್ಲಾ ಬಂದ್ ಕರೆ ನೀಡಿದ್ದ ಹಿನ್ನೆಲೆ ಇದೀಗ VHP ಮುಖಂಡ ಶರಣ್ ಪಂಪ್ ವೇಲ್ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವಿರುದ್ಧ FIR ದಾಖಲಾಗಿದೆ. ದಕ್ಷಿಣಕನ್ನಡ ಜಿಲ್ಲೆ ಬಂದ್ ದಿನದಂದು ಸರ್ಕಾರಿ ಬಸ್ ಗಳಿಗೆ ಕಲ್ಲೇಸೆದು ಹಾನಿ ಮಾಡಲಾಗಿತ್ತು. ಹಾಗಾಹಿ BNS ಕಾಯ್ದೆ 353 (2) 196 (b) (1) 49 ಹಾಗೂ 324 (2) (4) (5) ರಡಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

Read More

ಉತ್ತರಪ್ರದೇಶ : ಒಂದು ಮದುವೆ ಎಂದರೆ ಪ್ರತಿಯೊಂದು ಅಚ್ಚುಕಟ್ಟಾಗಿ ನಡೆಯಬೇಕು. ವಧುವಿನ ಕಡೆಯವರಾಗಲಿ ಅಥವಾ ವರನ ಕಡೆಯವರಾಗಲಿ ಒಂದು ಸಣ್ಣ ತಪ್ಪು ಮಾಡಿದರೂ ಸಹ ಎಷ್ಟೋ ಮದುವೆಗಳು ಮುರಿದು ಬಿದ್ದಿರುವ ಘಟನೆ ಕೇಳಿದ್ದೇವೆ. ಈಗ ಉತ್ತರ ಪ್ರದೇಶದಲ್ಲಿ ಕೇವಲ ತಂದೂರಿ ರೊಟ್ಟಿಗಾಗಿ ಗಲಾಟೆ ನಡೆದು ಓರ್ವ ಅಪ್ರಾಪ್ತ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ಕೇವಲ ತಂದೂರಿ ರೊಟ್ಟಿಗಾಗಿ ಪರಸ್ಪರ ಹೊಡೆದಾಟ ನಡೆದಾಗ ಓರ್ವ ಅಪ್ರಾಪ್ತ ಸೇರಿ ಇಬ್ಬರು ಸಾವನಪ್ಪಿದ್ದಾರೆ. ಉತ್ತರ ಪ್ರದೇಶದ ಅಮೇಥಿಯ ಒಂದು ಸಣ್ಣ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ.ರವಿಕುಮಾರ್ ಅಲಿಯಾಸ್ ಕಲ್ಲು ಎಂಬ 18 ವರ್ಷದ ಯುವಕ ಮತ್ತು 17 ವರ್ಷದ ಆಶಿಶ್‍ ನಡುವೆ ತಂದೂರಿ ರೊಟ್ಟಿ ಯಾರು ಮೊದಲು ತೆಗೆದುಕೊಂಡಿದ್ದಾರೆ ಎಂಬ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದ್ದು, ಇಬ್ಬರೂ ಪರಸ್ಪರ ಕಬ್ಬಿಣದ ರಾಡ್‍ಗಳಿಂದ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಇಬ್ಬರಿಗೂ ತೀವ್ರ ಗಾಯಗಳಾಗಿವೆ. ಅಪ್ರಾಪ್ತ ಬಾಲಕ ಸ್ಥಳದಲ್ಲೇ ಮೃತಪಟ್ಟರೆ, ರವಿಯನ್ನು ಚಿಕಿತ್ಸೆಗಾಗಿ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.ಮೃತರ…

Read More

ಮಂಡ್ಯ : ಇಂದು ಮಂಡ್ಯ ಮೈಸೂರು ಭಾಗದಲ್ಲಿ ಭಾರಿ ಮಳೆ ಆಗುತ್ತಿದ್ದು, ಗುಡುಗು ಮಿಂಚು, ಆಲಿಕಲ್ಲು ಸಹಿತ ವರುಣ ಅಬ್ಬರಿಸಿದ್ದಾನೆ. ಬಿಸಿಲಿನಿಂದ ಬಸವಳಿದಿದ್ದ ಮಂಡ್ಯ ಮೈಸೂರು ಜನತೆಗೆ ಇದೀಗ ವರುಣ ತಂಪೆರೆದಿದ್ದಾನೆ. ಹೌದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ರಾಯಸಮುದ್ರ, ಶೀಳನೆರೆ, ಹರಳಹಳ್ಳಿ ಹಾಗು ನೀತಿಮಂಗಲ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ. ಬಿಸಿಲಿನ ಜಳಕ್ಕೆ ಬಳಲಿ ಬೆಂಡಾಗಿದ್ದವರಿಗೆ ಇದೀಗ ವರುಣ ತಂಪೆರಿದಿದ್ದಾನೆ. ಮಳೆಯ ಆಗಮನದಿಂದ ರೈತರ ಮುಖದಲ್ಲಿ ಇದೀಗ ಮಂದಹಾಸ ಮೂಡಿದೆ. ಬಿರುಗಾಳಿ ಸಹಿತ ಭಾರಿ ಮಳೆಗೆ ಬೃಹತ್ ಗಾತ್ರದ ಮರವೊಂದು ಧರೆಗುರುಳಿದಿದೆ. ಮೈಸೂರು ಮತ್ತು ಅರಸಿಕೆರೆ ರಾಜ್ಯ ಹೆದ್ದಾರಿಯಲ್ಲಿ ಈ ಒಂದು ಘಟನೆ ನಡೆದಿದೆ. ಹಾದನೂರು ಗ್ರಾಮದ ಬಳಿ ಗಾತ್ರದ ಮರ ಒಂದು ಧರೆಗೆ ಉರುಳಿದೆ. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಹಾದನೂರಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ಸ್ಥಳೀಯ ನಿವಾಸಿಗಳು ತೆರವುಗೊಳಿಸಿದ್ದಾರೆ.

Read More

ಬೆಳಗಾವಿ : ಬೆಳಗಾವಿಯಲ್ಲಿ ಭೀಕರವಾದ ಕಾರು ಅಪಘಾತವಾಗಿದ್ದು ಮಾಜಿ ಶಾಸಕ ಆರ್ ವಿ ಪಾಟೀಲ್ ಪುತ್ರ ಹಾಗೂ ಇನ್ನೊಂದು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ಒಂದು ಅಪಘಾತದಲ್ಲಿ ಪತಿ ಪತ್ನಿ ಹಾಗೂ ಓರ್ವ ಮಗು ಸಾವನ್ನಪ್ಪಿದ್ದರೆ ಇನ್ನೂ ಮಾಜಿ ಶಾಸಕ ಆರ್ ವಿ ಪಾಟೀಲ್ ಪುತ್ರನಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ಈ ಒಂದು ಅಪಘಾತ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಹೊರ ವಲಯದ ಬೈಲಹೊಂಗಲ-ಬೆಳಗಾವಿಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಸಂಭವಿಸಿದೆ.ಬೆಳಗಾವಿಯಿಂದ ಬೈಲಹೊಂಗಲ ಹೋಗುತ್ತಿದ್ದ ಕೀಯಾ ಕಾರು ಓವರ್ ಟೆಕ್ ಮಾಡಲು ಹೋಗಿ ಎದುರಗಡೆ ಬರುತ್ತಿದ್ದ ಅಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ. ಅಲ್ಟೋ ಕಾರಿನಲ್ಲಿದ್ದ ಗಂಡ ಅಯುಮ್, ಹೆಂಡತಿ, ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮತ್ತೊಂದು ಮಗುವಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಕೀಯಾ ಕಾರಿನಲ್ಲಿದ್ದ ಮಾಜಿ ಶಾಸಕ ಆರ್.ವಿ ಪಾಟೀಲ್ ಪುತ್ರ ಸೇರಿದಂತೆ ಮತ್ತೊಬ್ಬರು ಗಾಯಗೊಂಡಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಶವಗಳು…

Read More

ನವದೆಹಲಿ : ಸೆಕ್ಯೂರಿಟಿ ಗಾರ್ಡ್ ಒಬ್ಬರು ಕಾರಿನ ಚಾಲಕನಿಗೆ ಸುಖಾ ಸುಮ್ಮನೆ ಹಾರ್ನ್ ಮಾಡಬೇಡಿ ಎಂದು ಹೇಳಿದ್ದಾರೆ. ಈ ವೇಳೆ ಚಾಲಕ ಸೆಕ್ಯೂರಿಟಿ ಕಾರ್ಡ್ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಒಂದು ಘಟನೆ ನೈಋತ್ಯ ದೆಹಲಿ ವಸಂತ್ ಕುಂಜ್ ನಲ್ಲಿ ನಡೆದಿದೆ. ಥಾರ್ ಕಾರು ಚಾಲಕನೊಬ್ಬ ಹಾರ್ನ್ ಮಾಡಬೇಡಿ ಎಂದು ಹೇಳಿದ ಭದ್ರತಾ ಸಿಬ್ಬಂದಿ ಮೇಲೆ ಕಾರು ಹರಿಸಿರುವ ಭೀಕರ ಘಟನೆ ನಡೆದಿದೆ. ಕಾರು ಹರಿದ ಪರಿಣಾಮ ಸಿಬ್ಬಂದಿಯ ಎರಡೂ ಕಾಲುಗಳಲ್ಲಿ 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮೂಳೆಗಳು ಮುರಿದಿವೆ. ಗಾಯಾಳುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಸಂತ್ ಕುಂಜ್ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಥಾರ್ ಕಾರು ಚಾಲಕನನ್ನು ಪ್ರಸ್ತುತ ಬಂಧಿಸಲಾಗಿದೆ. ಬಂಧಿತ ಥಾರ್ ಚಾಲಕನನ್ನು ರಂಗಪುರಿ ನಿವಾಸಿ ವಿಜಯ್ ಅಲಿಯಾಸ್ ಲಾಲಾ (24) ಎಂದು ಗುರುತಿಸಲಾಗಿದೆ. ಘಟನೆ ಹಿನ್ನೆಲೆ? ಸಂತ್ರಸ್ಥ ಭದ್ರತಾ ಸಿಬ್ಬಂದಿ ರಾಜೀವ್ ಕುಮಾರ್ ತನ್ನ ಕುಟುಂಬದೊಂದಿಗೆ ಮಹಿಪಾಲ್‌ಪುರದಲ್ಲಿ…

Read More

ಕಲಬುರ್ಗಿ : ಕಲ್ಬುರ್ಗಿಯಲ್ಲಿ ಭೀಕರವಾದ ಕೊಲೆಯಾಗಿದ್ದು ಆಸ್ತಿಯ ವಿಚಾರವಾಗಿ ಅಳಿಯಂದರಿಬ್ಬರೂ ಸೇರಿ ಅತ್ತೆಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಅಫ್ಜಲ್ ಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನ ಬಂದರವಾಡ್ ಗ್ರಾಮದ ನಿವಾಸಿ ಲಕ್ಕಮ್ಮ (40) ಎಂದು ಗುರುತಿಸಲಾಗಿದೆ.ಮನೆ ಕಟ್ಟುವ ವಿಚಾರದಲ್ಲಿ ಈ ಹಿಂದೆ ಕುಟುಂಬದಲ್ಲೇ ಜಗಳವಾಗಿತ್ತು. ಅದೇ ಹಳೆಯ ವೈಶಮ್ಯದಿಂದಾಗಿ ಈಗ ಮಹಿಳೆಯ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ. ಸದ್ಯ ಕೊಲೆ ಆರೋಪಿಗಳಾದ ಸಂತೋಷ್ (35) ಮಂಜುನಾಥ್ (25) ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಫಜಲಪುರ ವೃತ್ತ ನಿರೀಕ್ಷಕ ಚನ್ನಯ್ಯ ಅವರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ದುರು ಶ್ರೀನಿವಾಸಲು ಸೇರಿದಂತೆ ಮತ್ತಿತರ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕೋಲಾರ : ಸೀಜ್ ಮಾಡಿದ ಬೈಕ್ ಬಿಡಲು PSI 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಇದೀಗ ಪಿಎಸ್ಐನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸದ್ದಾರೆ. ಬೂದಿಕೋಟೆ ಪಿಎಸ್ಐ ಸುನಿಲ್ ಕುಮಾರನ್ನು ಈಗ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆಯಲ್ಲಿ ಮಧ್ಯವರ್ತಿಗಳಿಂದ 10,000 ಲಂಚ ಪಡೆದ ಆರೋಪ ಪಿಎಸ್ಐ ಸುನಿಲ್ ಕುಮಾರ್ ಮೇಲೆ ಬಂದಿದೆ. ಬೂದಿಕೋಟೆ ಪೊಲೀಸ್ ಠಾಣೆ ಬಾಗಿಲು ಹಾಕಿ ಇದೀಗ ಲೋಕಾಯುಕ್ತ ಪೊಲೀಸರು ಪಿಎಸ್ಐ ಸುನಿಲ್ ಕುಮಾರ್ ವಿಚಾರಣೆ ನಡೆಯುತ್ತಿದೆ.

Read More

ಬೆಂಗಳೂರು : ಕಾರ್ಯಕ್ರಮ ಒಂದರಲ್ಲಿ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿ ಫಿಲಂ ಚೇಂಬರ್ ನಿರ್ಧಾರ ಕೈಗೊಂಡಿತು ಈ ಕುರಿತು ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಸೋನು ನಿಗಮ್ ಅವರನ್ನು ಕನ್ನಡಿಗರ ಕ್ಷಮೆ ಕೇಳುವವರೆಗೂ ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದರು. ತನ್ನನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿರುವ ವಿಚಾರ ತಿಳಿದರೂ ಸಹ ಸೋನು ನಿಗಮ್ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಕನ್ನಡದಿಂದ ಸಹಕಾರ ಬೆನ್ನಲ್ಲೇ ಸೋನು ನಿಗಮ್ ನಾನು ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತಲೂ ಕೂಡ ಕನ್ನಡ ಹಾಡುಗಳನ್ನು ಅತಿ ಹೆಚ್ಚು ಗೌರವದಿಂದ ನೋಡಿದ್ದೇನೆ. ಈ ಮಾತಿಗೆ ಸಾಮಾಜಿಕ ಮಾಧ್ಯಮಗಳಲ್ಲಿನ ವಿಡಿಯೋಗಳು ಸಾಕ್ಷಿ ಎಂದಿದ್ದಾರೆ. ಕರ್ನಾಟಕದಲ್ಲಿನ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸಿರುತ್ತೇನೆ. ಒಂದು ಗಂಟೆಗೂ ಹೆಚ್ಚು ಕಾಲ ತಯಾರಿಯನ್ನು ನಡೆಸಿರುತ್ತೇನೆ. ಅಂದು ನಾನು ಮೊದಲ ಹಾಡು ಹಾಡಿದ ತಕ್ಷಣ ಪ್ರಚೋದಿಸಿದರು. ನಾನು ಅವರಿಗೆ ತುಂಬಾ ಶಾಂತವಾಗಿ ಪ್ರೀತಿಯಿಂದ ಹೇಳಿದೆ. ಕಾರ್ಯಕ್ರಮ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಮತ್ತೊಂದು ಭೀಕರವಾದ ಕೊಲೆ ನಡೆದಿದ್ದು, ತನ್ನ ಕಣ್ಣೆದುರೇ ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದ ಮಾವನನ್ನು ಅಳಿಯೊನೊಬ್ಬ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಹೌದು ಬೆಂಗಳೂರಿನಲ್ಲಿ ತಂದೆ ಕೊಲೆ ಪ್ರತೀಕಾರಕ್ಕೆ ಮಾವನ ಬರ್ಬರ ಹತ್ಯೆಯಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಮಾವ ಸಿರಾಜ್ (32) ಎನ್ನುವ ವ್ಯಕ್ತಿಯನ್ನು ಅಳಿಯ ಫಹಾದ್ ಹತ್ಯೆಗೈದಿದ್ದಾನೆ. ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಕೊಲೆ ನಡೆದಿದೆ. ಆರೋಪಿ ಚಿಕ್ಕವನಿದ್ದಾಗ ಆತನ ತಂದೆಯನ್ನು ಸಿರಾಜ್ ಕೊಲೆ ಮಾಡಿದ್ದ. ಕಣ್ಣೆದುರೇ ಆತನ ತಂದೆಯನ್ನು ಸಿರಾಜ್ ಕೊಚ್ಚಿ ಕೊಲೆ ಮಾಡಿದ್ದ. ಇದೀಗ 16 ವರ್ಷಗಳ ಸೇಡಿಗಾಗಿ ಮಾವ ಸಿರಾಜ್ ನನ್ನು ಫಹಾದ್ ಹತ್ಯೆಗೈದಿದ್ದಾನೆ. ತಂದೆ ಅನ್ಸರ್ ಪಾಷಾ ನನ್ನು ಸಿರಾಜ್ 16 ವರ್ಷಗಳ ಹಿಂದೆ ಕೊಲೆ ಮಾಡಿದ್ದ. ಅನ್ವರ್ ಪಾಷಾ ಹತ್ಯೆ ಪ್ರಕರಣದಲ್ಲಿ ಸಿರಾಜ್ 10 ವರ್ಷ ಜೈಲಿನಲ್ಲಿ ಇದ್ದ ಸದ್ಯ ಕೊಲೆಯಾದ ಸಿರಾಜ್ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ. ನಿನ್ನೆ ರಾತ್ರಿ ನಡು ರಸ್ತೆಯಲ್ಲಿಯೇ…

Read More