Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಹಲವು ಬಿಜೆಪಿ ನಾಯಕರು ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಬಿಜೆಪಿ ಬಂಡಾಯ ನಾಯಕರು ಪ್ರತ್ಯೇಕ ಸಭೆ ನಡೆಸಿದ್ದಾರೆ.ಹೌದು ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಅವರ ಸದಾಶಿವನಗರ ನಿವಾಸದಲ್ಲಿ ಬಿಜೆಪಿ ಅಸಮಾಧಾನಿತ ನಾಯಕರ ಸಭೆ ನಡೆದಿದೆ. ಈ ಒಂದು ಸಭೆಯಲ್ಲಿ ಪ್ರಮುಖವಾದಂತಹ ನಿರ್ಧಾರ ಕೈಗೊಂಡಿದ್ದು, ಮೈಸೂರು ದಸರಾ ಹಬ್ಬ ಮುಗಿದ ಬಳಿಕ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಕೋಟ್ಯಾಂತರ ರೂಪಾಯಿ ಅಕ್ರಮದ ಕುರಿತಾಗಿ ಬಸವಕಲ್ಯಾಣದಿಂದ ಬಳ್ಳಾರಿಯ ವರೆಗೆ ಪಾದಯಾತ್ರೆ ನಡೆಸಲು ಬಿಜೆಪಿಯ ಅಸಮಾಧಾನಿತ ನಾಯಕರು ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಬಸವಕಲ್ಯಾಣದಿಂದ ಬಳ್ಳಾರಿಯವರಿಗೆ ಬಿಜೆಪಿ ಮತ್ತೊಂದು ಪಾದಯಾತ್ರೆಗೆ ಸಿದ್ಧತೆ ಮಾಡಿಕೊಂಡಿದೆ. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ತಂಡದಿಂದ ಈ ಒಂದು ನಿರ್ಧಾರ ಕೈಗೊಳ್ಳಲಾಗಿದೆ. ಪಾದಯಾತ್ರೆಯ ರೂಪುರೆಷೆಯ ಬಗ್ಗೆ ಪ್ಲಾನ್ ಮಾಡಲಾಗಿದ್ದು, ಈ ಕುರಿತು ಬಸನಗೌಡ ಪಾಟೀಲ ಯತ್ನಾಳ…
ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ವೈಯಲಿಕಾವಲ್ ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೊಲೆ ಆರೋಪಿ ಆಗಿದ್ದ ಮುಕ್ತಿ ರಂಜನ್ ರಾಯ್ ಅವರ ತಾಯಿ ಮಹಾಲಕ್ಷ್ಮಿ ವಿರುದ್ಧ ಸ್ಪೋಟಕ ವಾದಂತಹ ಆರೋಪ ಮಾಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿಯ ತಾಯಿ ಕುಂಜಲತಾ ರಾಯ್, ನನ್ನ ಮಗನ ವಿರುದ್ಧ ಕೊಲೆಯಾದ ಮಹಿಳೆ ಟ್ರ್ಯಾಪ್ ಮಾಡಿದ್ದಳು. ಅವಳು ಅವನಿಂದ ನಿರಂತರವಾಗಿ ಹಣ ಕೇಳುತ್ತಲೇ ಇದ್ದಳು. ಈ ವಿಚಾರವನ್ನು ಆತ ಹೇಳಿಕೊಂಡಿದ್ದ. ನಾನು ಅವನನ್ನು ಬೆಂಗಳೂರು ತೊರೆಯುವಂತೆ ಹೇಳಿದ್ದೆ ಎಂದು ಹೇಳಿಕೊಂಡಿದ್ದಾರೆ. ಮುಕ್ತಿ ರಂಜನ್ ರಾಯ್ ಹಾಗೂ ಮಹಾಲಕ್ಷ್ಮಿ ಬೆಂಗಳೂರಿನ ಅಂಗಡಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮೊದಲ ಪರಿಚಯ ಸ್ನೇಹದಿಂದ ಆರಂಭವಾಗಿ ನಂತರ ಪ್ರೀತಿಗೆ ತಿರುಗಿತ್ತು. ಬಳಿಕ ಮಹಾಲಕ್ಷ್ಮಿ ಮುಕ್ತಿ ರಂಜನ್ ರಾಯ್ಗೆ ಮದುವೆಯಾಗು ಎಂದು ಪೀಡಿಸುತ್ತಿದ್ದಳು.ಇದಕ್ಕೆ ಬೇಸತ್ತು ಮುಕ್ತಿ ರಂಜನ್ ರಾಯ್ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದ.ಬಳಿಕ ಒಡಿಶಾಕೆ ತೆರಳಿ ಪೊಲೀಸರು ಎಲ್ಲಿ ನನ್ನನ್ನು ಅರೆಸ್ಟ್ ಮಾಡುತ್ತಾರೆ…
ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ವಿಪಕ್ಷ ನಾಯಕರು, ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಮಧ್ಯ ಮಾಜಿ ಸ್ಪೀಕರ್ ಆಗಿರುವಂತಹ ಕೆಬಿ ಕೋಳಿವಾಡ ಅವರು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ.ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ನಾನು ಏನು ತಪ್ಪು ಮಾಡಿಲ್ಲ.ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆಗೆ ಕೆ.ಬಿ ಕೋಳಿವಾಡ ಆಗ್ರಹದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕೆ ಬಿ ಕೋಳಿವಾಡ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಯಾಕೆಂದರೆ ನಾನು ಈ ಒಂದು ಕೇಸ್ ನಲ್ಲಿ ಏನು ತಪ್ಪೇ ಮಾಡಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಿದರು. ಕೆಬಿ ಕೋಳಿವಾಡ ಹೇಳಿದ್ದೇನು? ಈ ಕುರಿತಾಗಿ ಕೆಬಿ ಕೋಳಿವಾಡ, ಸಿಎಂ ಸಿದ್ದರಾಮಯ್ಯ ಎಷ್ಟೇ ಕಳಂಕ ರಹಿತರಾದರೂ ಪಕ್ಷದ ದೃಷ್ಟಿಯಿಂದ ರಾಜೀನಾಮೆ ನೀಡಲಿ.…
ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಲೋಕಾಯುಕ್ತ ಎಸ್ ಪಿ ಅವರನ್ನು ಅಕ್ರಮ ಬಂಧನದಲ್ಲಿ ಇಟ್ಟಿರಬೇಕು, ಇಲ್ಲವಾದರೆ ಕಿಡ್ನಾಪ್ ಮಾಡಿರಬಹುದು ಎಂದು ಆರೋಪಿಸಿ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ ಕಾಣೆಯಾಗಿದ್ದಾರೆ ಎಂದು ಇದೀಗ ಸ್ನೇಹಮಯಿ ಕೃಷ್ಣ ದೂರು ದಾಖಲಿಸಿದ್ದಾರೆ.ಮೈಸೂರಿನ ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಏನಿದೆ? ಬೆಳಗ್ಗೆಯಿಂದಲೂ ಲೋಕಾಯುಕ್ತ ಎಸ್ ಪಿ ಉದೇಶ ಸಂಪರ್ಕಕ್ಕೆ ಸಿಗುತ್ತಿಲ್ಲ. ಎಸ್ ಪಿ ಉದೇಶ ಯಾವ ಕಾರಣಕ್ಕೆ ಹಾಗೂ ಎಲ್ಲಿಗೆ ಹೋಗಿದ್ದಾರೆ? ಎಂದು ಗೊತ್ತಿಲ್ಲ. ಲೋಕಾಯುಕ್ತ ಕಚೇರಿಯಲ್ಲಿ ಕೇಳಿದರು ನನಗೆ ಮಾಹಿತಿ ನೀಡುತ್ತಿಲ್ಲ. ದೂರವಾಣಿ ಕರೆ ಮಾಡಿದ್ದೇನೆ, ಮೆಸೇಜ್ ಮಾಡಿದರು ಸಹ ಎಸ್ ಪಿ ಉದೇಶ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹಾಗಾಗಿ ಲೋಕಾಯುಕ್ತ ಎಸ್ಪಿ ಅವರನ್ನು ಅಕ್ರಮ ಬಂಧನದಲ್ಲಿ ಇಟ್ಟಿರಬೇಕು. ಇಲ್ಲದಿದ್ದರೆ ಅಪಹರಣ ಮಾಡಿರಬೇಕು ಎಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿ ಎಂದು ಮೈಸೂರು ನಗರದ ದೇವರಾಜ ಪೊಲೀಸ್…
ಶಿವಮೊಗ್ಗ : ಮುಡಾ ಹಗರಣದಲ್ಲಿ ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಇಂದು ವಿಧಾನಸೌಧ ಮುಂಭಾಗದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಸಿದ್ದರಾಮಯ್ಯ ರಾಜೀನಾಮೆ ಕುರಿತು ಕೇಂದ್ರ ಸಚಿವರಾದ ವಿ. ಸೋಮಣ್ಣ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಜೊತೆಗೆ ಶಾಸಕನಾಗಿ, ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಕಾನೂನನ್ನು ಸಿಎಂ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಒಬ್ಬ ಸೂಕ್ಷ್ಮ ರಾಜಕಾರಣಿ ಎಂದು ಅವರು ತಿಳಿಸಿದರು. ಅವರು ರಾಜೀನಾಮೆ ಕೊಟ್ಟೆ ಕೊಡ್ತಾರೆ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ತನಿಖೆ ಎದುರಿಸಲು ರಾಜೀನಾಮೆ ಕೊಡುತ್ತಾರೆ ಎಂಬುದು ನನ್ನ ಅಭಿಪ್ರಾಯ ಎಂದು ಶಿವಮೊಗ್ಗದಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿಕೆ ನೀಡಿದರು.
ಬೆಳಗಾವಿ : ದೇವಸ್ಥಾನದಲ್ಲಿ ಕಳ್ಳತನ ಮಾಡಿರುವುದನ್ನು ನೋಡಿದ ಮಹಿಳೆಯನ್ನೇ ಕಳ್ಳರು ಬಾವಿಗೆ ನೂಕಿ ಅಮಾನವೀಯವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಶಿಂದೊಳಿ ಗ್ರಾಮದಲ್ಲಿ ನಡೆದಿದೆ. ಶಿಂದೊಳಿ ಗ್ರಾಮದ ಭಾರತಿ ಪೂಜಾರಿ (48) ಮೃತ ಮಹಿಳೆ ಎಂದು ತಿಳಿದುಬಂದಿದೆ. ಬೆಳ್ಳಂಬೆಳಗ್ಗೆ ಶಿಂದೊಳಿ ಗ್ರಾಮದ ಮಸಣವ್ವ ದೇವಸ್ಥಾನಕ್ಕೆ ಕಳ್ಳರು ನುಗ್ಗಿದ್ದಾರೆ. ಇದನ್ನು ನೋಡಿದ ಮಹಿಳೆ ಗ್ರಾಮಸ್ಥರಿಗೆ ತಿಳಿಸಿ, ನಮ್ಮ ಕೃತ್ಯ ಬೆಳಕಿಗೆ ಬರುತ್ತದೆ ಎಂದು ಮಹಿಳೆಯನ್ನೇ ಹತ್ಯೆ ಮಾಡಿ ಬಳಿಕ ದೇಗುಲದಲ್ಲಿನ ಬೆಳ್ಳಿ ಆಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ತನ್ನ ಮನೆಯ ದನಕರುಗಳ ಸಗಣಿ ಎತ್ತಿ ತಿಪ್ಪೆಗೆ ಎಸೆಯಲು ಇವರು ಬಂದಿದ್ದರು. ಆಗ ಮನೆ ಪಕ್ಕದಲ್ಲಿದ್ದ ಮಸಣವ್ವ ದೇಗುಲದಲ್ಲಿನ ಆಭರಣಗಳನ್ನು ಕಳ್ಳರು ಕದಿಯಲು ಮುಂದಾಗಿದ್ದರು. ಸಗಣಿ ಎಸೆದು ಮನೆಗೆ ಬರುವಾಗ ದೇಗುಲದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಭಾರತಿ ನೋಡಿದ್ದಾರೆ. ಆಗ ಭಾರತಿಯನ್ನು ಹೊತ್ತೊಯ್ದು ದೇಗಲದ ಹಿಂದಿದ್ದ ಬಾವಿಗೆ ಕಳ್ಳರು ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.ಘಟನೆ ಕುರಿತು ಮಾರಿಹಾಳ…
ಬೆಂಗಳೂರು : ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವಿಧಾನಸೌಧದ ಮುಂದೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು ಈ ಒಂದು ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಒಂದು ವಿಚಾರವಾಗಿ ತಮ್ಮ ಟ್ವಿಟ್ಟರ್ ಖಾತೆಯ X ನಲ್ಲಿ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಕಳೆದ ಹನ್ನೊಂದು ವರ್ಷಗಳಲ್ಲಿ ಪ್ರಧಾನಿ @narendramodi ಅವರ @BJP4India ಸರ್ಕಾರದ ವಾಷಿಂಗ್ ಮೆಷಿನ್ ಒಳಹೋಗಿ ಹೊರಬಂದು ಪರಮಪವಿತ್ರರಾದ ಭ್ರಷ್ಟರ ಪಟ್ಟಿ ಬೇಕಾ? ಜಾಮೀನಿನ ಮೇಲಿರುವ ಕುಮಾರಸ್ವಾಮಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಮುದ್ದಾಡುತ್ತಿರುವ ನಿಮ್ಮ ದ್ವಂದ್ವ ನೀತಿಗೆ ಮಿತಿಯಿಲ್ಲವೇ ಮೋದಿ ಅವರೇ? ಮುಖ್ಯಮಂತ್ರಿ ಹುದ್ದೆಯನ್ನೇ ಎರಡೂವರೆ ಸಾವಿರ ಕೋಟಿಗೆ ಮಾರಾಟ ಮಾಡಿದ್ದೀರೆಂಬ ಆರೋಪ ಹೊತ್ತಿರುವ ನಿಮ್ಮ ಬಾಯಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತು ಬರುವುದೇ ನಾಚಿಕೆಗೇಡು ಎಂದು ಸಿಎಂ ಸಿದ್ದರಾಮಯ್ಯ ಪ್ರಧಾನ…
ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಎನ್ಐಎ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಪ್ರದೇಶದಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಿದ್ದಾರೆ. ಹೌದು ಜಿಗಣಿಯಲ್ಲಿ ಗಿರೀಶ್ ಬೋರಾ ಅಲಿಯಾಸ್ ಗೌತಮ್ ಎಂಬ ಶಂಕಿತ ಉಗ್ರನನ್ನು ಎನ್ ಐ ಎ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.ಖಚಿತ ಮಾಹಿತಿಯ ಮೇರೆಗೆ ಎನ್ಐಎ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಪ್ರದೇಶಕ್ಕೆ ತೆರಳಿದ್ದಾರೆ. ಈ ವೇಳೆ ಗಿರೀಶ್ ಬೋರಾ ಅಲಿಯಾಸ್ ಗೌತಮನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ತುಮಕೂರು : ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದಿದೆ. ಮೃತರನ್ನು ತಾಯಿ ಹಸೀನಾ (25) ಮಕ್ಕಳಾದ ಹಸಿಮಾ (8), ಹಾಗೂ 3 ವರ್ಷದ ಇನ್ನೊಂದು ಮಗುವಿನ ಜೊತೆಗೆ ತಾಯಿ ಹಸೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ಇದೀಗ ವ್ಯಕ್ತವಾಗಿದೆ. ಘಟನೆ ಕುರಿತಂತೆ ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಮಿತಿ ಮೀರಿದ ಜನದಟ್ಟಣೆ, ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಮಧ್ಯ ಮೆಟ್ರೋ ಟ್ರೈನ್ ನಲ್ಲಿ ಎಲ್ಲಿಯೂ ಸಹ ನಿಂತುಕೊಳ್ಳುವುದಕ್ಕೂ ಜಾಗವಿಲ್ಲದಷ್ಟು ಜನಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಮೆಟ್ರೋ ಟ್ರೈನಿನಲ್ಲಿ ಯುವತಿ ಒಬ್ಬಳು ತಲೆ ತಿರುಗಿ ಬಿದ್ದಿರುವ ಘಟನೆ ನಡೆದಿದೆ. ಹೌದು ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ನೇರಳೆ ಮಾರ್ಗದಲ್ಲಿ ವೈಟ್ಫೀಲ್ಡ್-ಕೆಂಪೇಗೌಡ ಇಂಟರ್ಚೇಂಜ್ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದ ಮೆಟ್ರೋ ರೈಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸಿದ್ದು, ಈ ವೇಳೆ ಯುವತಿಯೊರ್ವಳು ತಲೆ ತಿರುಗಿ ಬಿದ್ದಿದ್ದಾರೆ.ಕೂಡಲೇ ಸಹ ಪ್ರಯಾಣಿಕರು ಅವರನ್ನು ರಕ್ಷಣೆ ಮಾಡಿ, ನೀರು ಕೊಟ್ಟಿದ್ದಾರೆ. ನಿನ್ನೆ ಸಂಜೆ ಆರು ಗಂಟೆಗೆ ಕೆ ಆರ್ ಪುರದಲ್ಲಿ ಯುವತಿ ಮೆಟ್ರೋ ಟ್ರೈನ್ ಹತ್ತಿದ್ದಾಳೆ. ಈ ವೇಳೆ ಟ್ರೈನ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿತ್ತು. ಕೂಡಲೇ ಯುವತಿಗೆ ನಿಂತಲ್ಲಿ ಕುಸಿದು ಬೀಳಲು ಆರಂಭಿಸಿದ್ದಾಳೆ ತಕ್ಷಣ ಸಹ ಪ್ರಯಾಣಿಕರರು ಆಕೆಯನ್ನು ಆಸನದಲ್ಲಿ ಕೂರಿಸಿ ಸ್ವಲ್ಪ ನೀರು ಕೊಟ್ಟು ಉಪಚರಿಸಿದ್ದಾರೆ. ಅಷ್ಟರಲ್ಲಿ…