Author: kannadanewsnow05

ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆ ರಾಜ್ಯ ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ ನೀಡಿದರು. ಭಾನುವಾರ ಅರಮನೆಯಲ್ಲಿರುವ ನಿವಾಸದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿ ಸಾಂಪ್ರದಾಯಿಕವಾಗಿ ಫಲತಾಂಬೂಲ ನೀಡಿ ದಸರಾ ಉತ್ಸವಕ್ಕೆ ಆತ್ಮೀಯವಾಗಿ ಆಹ್ವಾನಿಸಿ, ಸರ್ಕಾರದಿಂದ ಪ್ರತಿವರ್ಷ ನೀಡಲಾಗುವ ಗೌರವಧನದ ಚೆಕ್ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಟುವರ್ಧನ, ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ, ಅರಮನೆ ಎಸಿಪಿ ಚಂದ್ರಶೇಖರ್ ಸೇರಿದಂತೆ ಮುಂತಾದವರು ಹಾಜರಿದ್ದರು.

Read More

ಮೈಸೂರು : ಈ ಬಾರಿ ಮೈಸೂರು ದಸರಾ ಕಾರ್ಯಕ್ರಮಕ್ಕೆ ರಾಜವಂಶಸ್ಥೆ ಆದಂತಹ ಪ್ರಮೋದ ದೇವಿ ಒಡೆಯರ್ ಅವರಿಗೆ ಮೈಸೂರು ಜಿಲ್ಲಾ ಆಡಳಿತ ಅಧಿಕೃತವಾಗಿ ಆಹ್ವಾನ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವ HC ಮಹಾದೇವಪ್ಪ ಅವರಿಂದ ರಾಜವಂಶಸ್ಥೆ ಪ್ರಮೋದಾ ದೇವಿ ಅವರಿಗೆ ಅಹ್ವಾನ ನೀಡಲಾಯಿತು. ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಹಲವರು ಸಚಿವರಿಗೆ ಸಾಥ್ ನೀಡಿದ್ದಾರೆ. ಈ ವೇಳೆ ಪ್ರಮೋದಾ ದೇವಿಗೆ ಗೌರವಧನ ನೀಡಿ ಜಿಲ್ಲಾಡಳಿತ ಆಹ್ವಾನ ನೀಡಿದೆ ಎಂದು ತಿಳಿದುಬಂದಿದೆ.

Read More

ಬೀದರ್ : ಇಂದು ರಾಜ್ಯಾದ್ಯಂತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಪರೀಕ್ಷಾರ್ಥಿಯೊಬ್ಬ ಪರೀಕ್ಷಾ ಪ್ರಾಧಿಕಾರಕ್ಕೆ ದೂರು ನೀಡಿದ್ದಾನೆ.ಈ ಕುರಿತಂತೆ ಪರೀಕ್ಷೆ ಬರೆದ ಅಭ್ಯರ್ಥಿ ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾನೆ. ಹೌದು ಇಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಬೀದರ್‌ ಜಿಲ್ಲಾ ಕೇಂದ್ರದಲ್ಲಿನ ದತ್ತಗಿರಿ ಕಾಲೇಜಿನ ಗ್ರಾಮ ಲೆಕ್ಕಾಧಿಕಾರಿ ಹುದ್ದೆ ನೇಮಕಾತಿ ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗುತ್ತಿದ್ದ ಕೇಂದ್ರದಲ್ಲಿ ಈ ಎಡವಟ್ಟು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಹಾಜರಾಗಿದ್ದ ಅಭ್ಯರ್ಥಿ ತಮಗೆ ಸೀಲ್ ಓಪನ್ ಮಾಡಿದ ಪ್ರಶ್ನೆ ಪತ್ರಿಕೆ ಬಂದಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಜಿಲ್ಲೆ ಚಿಂಚೋಳಿ ಮೂಲದ ಸಂತೋಷ್ ಎಂಬ ಪರೀಕ್ಷಾರ್ಥಿ, ಬೀದರ್ ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಗ್ರಾಮ…

Read More

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಇದೀಗ ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ ಹಾಗಾಗಿ ನಾಳೆಯಿಂದ ಸಿಎಂ ಸಿದ್ದರಾಮಯ್ಯ ಹಾಗೂ ಕುಟುಂಬದವರ ಕುರಿತು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲೆ, ನಾನು ಯಾರಿಗೂ ಹೆದರಲ್ಲ ಜಗ್ಗಲ್ಲ ಬಗ್ಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ ಮೈಸೂರಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ನಿಮ್ಮ ಆಶೀರ್ವಾದ ಇರುವವರೆಗೂ ಏನು ಮಾಡೋಕಾಗಲ್ಲ. ಯಾರೂ ನನ್ನ ಏನು ಮಾಡೋಕಾಗಲ್ಲ. ಸ್ವಲ್ಪ ದಿನ ತೊಂದರೆ ಕೊಡಬಹುದು ಅಷ್ಟೇ. ಕಾನೂನು ಮೂಲಕ ಏನು ಮಾಡುವುದಕ್ಕೆ ಆಗಲ್ಲ. ವಿಪಕ್ಷದವರು ರಾಜೀನಾಮೆ ಕೇಳುತ್ತಿದ್ದಾರಂತೆ ಅಂತ ಹೇಳುತ್ತಿದ್ದಾರೆ. ರಾಜೀನಾಮೆ ಕೇಳುತ್ತಿದ್ದಾರೆ ಎಂದು ನನಗೆ ಎಷ್ಟೋ ಜನ ಹೇಳುತ್ತಿದ್ದಾರೆ. ನಾನು ಯಾರಿಗೂ ಹೆದರಲ್ಲ, ಜಗ್ಗಲ್ಲ, ಬಗ್ಗಲ್ಲ, ನನ್ನ ಆತ್ಮಸಾಕ್ಷಿಗೆ ಗೊತ್ತಿದೆ ನಾನು ಕ್ಲಿಯರ್ ಇದ್ದೇನೆ ಎಂದು. ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದು ವೇದಿಕೆಯ ಮೇಲೆ ಗುಡುಗಿದರು.

Read More

ಬೀದರ್ : ಇಂದು ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಯಾಕೆ ತಡವಾಗಿ ಬಂದಿದ್ದೀರಾ ಎಂದು ಪ್ರಶ್ನೆ ಮಾಡಿದ ಪಿಎಸ್ಐ ಮೇಲೆ ಕಾನ್ಸ್ಟೇಬಲ್ ಒಬ್ಬ ಹಲ್ಲೆ ನಡೆಸಿರುವ ಘಟನೆ ಬೀದರ್​ನ ಮಾದವನಗರದಲ್ಲಿ ನಡೆದಿದೆ. ಹೌದು ಇಂದು ಗ್ರಾಮ ಆಡಳಿತಾಧಿಕಾರಿ ಪರೀಕ್ಷಾ ಹಿನ್ನಲೆ ಬೀದರ್​ನ ಮಾದವನಗರದ ಪರೀಕ್ಷಾ ಕೇಂದ್ರದಲ್ಲಿ ಪೊಲೀಸರು ಭದ್ರತಾ ಕರ್ತವ್ಯದಲ್ಲಿದ್ದರು. ಅದರಂತೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪಿಸಿ ತಡವಾಗಿ ಬಂದಿದ್ದರು. ಇದನ್ನು ಪ್ರಶ್ನಿಸಿದ ಪಿಎಸ್ಐ ಯಲ್ಲಮ್ಮ ಅವರ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆಸಿದ್ದಾರೆ ಎಂದು ಪಿಎಸ್​ಐ ಗಂಭೀರ ಆರೋಪ ಮಾಡಿದ್ದಾರೆ.

Read More

ಮಂಡ್ಯ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದ್ದು ನಾಳೆಯಿಂದ ತನಿಖೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ ಇದರ ಮಧ್ಯ ಈ ಒಂದು ಹಗರಣದಲ್ಲಿ ನೀವು ರಾಜೀನಾಮೆ ನೀಡಬೇಡಿ ಎಂದು ಸಿದ್ದರಾಮಯ್ಯ ಅಭಿಮಾನಿ ಒಬ್ಬರು ರಕ್ತದ ಮೂಲಕ ಪತ್ರ ಬರೆದು ಮನವಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಹೌದು ರಾಜೀನಾಮೆ ನೀಡದಂತೆ ಮುಖ್ಯಮಂತ್ರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾನೆ. ಮಂಡ್ಯ ಜಿಲ್ಲೆಯ ಮುತ್ತಹಳ್ಳಿಯ ಸಚಿನ್, ಅರಸು ಬಳಿಕ ಅತಿ ಹೆಚ್ಚು ಸರಕಾರಿ ಯೋಜನೆ ನೀಡಿದ್ದೀರಿ. ಬಡ ಜನರಿಗೆ ಅತಿ ಹೆಚ್ಚು ಯೋಜನೆ ನೀಡಿದ ಮುಖ್ಯಮಂತ್ರಿ ನೀವು. ಬಡವರು ಹಾಗೂ ದೀನ ದಲಿತರ ಪರವಾಗಿರುವಂತಹ ಮುಖ್ಯಮಂತ್ರಿಗಳು ನೀವು. ಮುಡಾ ಹಗರಣದಲ್ಲಿ ನೀವು ರಾಜೀನಾಮೆ ನೀಡಬಾರದು ನಿಮ್ಮೊಂದಿಗೆ ನಾವಿದ್ದೇವೆ ಎಂದು ರಕ್ತದಲ್ಲಿ ಸಚಿನ್ ಪತ್ರ ಬರೆದಿದ್ದಾರೆ.

Read More

ಕೋಲಾರ : ಹಿಂದೂ ಕೋಲಾರದಲ್ಲಿ ಭಾರಿ ಅನಾಹುತ ಒಂದು ತಪ್ಪಿದ್ದು, ತರಬೇತಿ ನಿಮಿತ್ಯ ಹಾರಾಟ ನಡೆಸುತ್ತಿದ್ದ ಸೇನಾ ಹೆಲಿಕ್ಯಾಪ್ಟರ್ ಒಂದು ತಾಂತ್ರಿಕ ದೋಷ ಕಂಡುಬಂದಿದ್ದರಿಂದ ತುರ್ತಾಗಿ ಭೂಸ್ಪರ್ಶ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಡಿಕೆ ಹಳ್ಳಿ ಎಂಬಲ್ಲಿ ನಡೆದಿದೆ. ಹೌದು ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಡಿಕೆ ಹಳ್ಳಿಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಡಿಕೆ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಗ್ರಾಮದ ಕರೆ ಅಂಗಳದಲ್ಲಿ ಹೆಲಿಕಾಪ್ಟರ್ ತುರ್ತು ಸ್ಪರ್ಶ ಮಾಡಿದೆ. ಹೆಲಿಕ್ಯಾಪ್ಟರ್ ನಲ್ಲಿ ಇದ್ದ ಅಧಿಕಾರಿಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ತರಬೇತಿ ನಿಮಿತ್ಯ ಕೆಜಿಫ್ ಹಾಗೂ ಬಂಗಾರಪೇಟೆಯಲ್ಲಿ ಸೇನಾ ಹೆಲಿಕಾಪ್ಟರ್ ಹಾರಾಟ ನಡೆಸಲಾಗುತ್ತಿತ್ತು.

Read More

ಮೈಸೂರು : ಕೆಆರ್​​ಎಸ್ ಹಿನ್ನೀರಿನ ಬಳಿ ಇರುವ ಎಡಹಳ್ಳಿಯಲ್ಲಿ ಇಂದು ಅನುಮತಿ ಪಡೆಯದೆ ರೇವ್ ಪಾರ್ಟಿ ಆಯೋಜನೆ ವಿಚಾರವಾಗಿ ಬಂಧಿತ 64 ಜನರ ಪೈಕಿ 8 ಯುವತಿಯರಿದ್ದಾರೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ 64 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಹೌದು ಇಂದು ಕೆಆರ್​​ಎಸ್ ಹಿನ್ನೀರಿನ ಬಳಿ ಇರುವ ಎಡಹಳ್ಳಿಯಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ಸಂತೋಷ್ ಎಂಬಾತನಿಂದ ರೇವ್​ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮಧು ಎಂಬಾತನಿಗೆ ಸೇರಿದ ಜಮೀನಿನಲ್ಲಿ ಪಾರ್ಟಿ ಆಯೋಜಿಸಿದ್ದರು. ಇನ್ನು ಪಾರ್ಟಿಗೆ ಅಧಿಕೃತವಾಗಿ ಅನುಮತಿ ಪಡೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ್ ಅಪ್ಲೋಡ್​ ಮಾಡಿದ್ದರು. ಇದನ್ನು ನಂಬಿ 50ಕ್ಕೂ ಹೆಚ್ಚು ಜೋಡಿ ಪಾರ್ಟಿಗೆ ನೋಂದಾಯಿಸಿಕೊಂಡಿದ್ದರು. 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ತಲಾ 2 ಸಾವಿರ ವಸೂಲಿ ಮಾಡಿ, ಇಸ್ರೇಲ್​​ನಿಂದ ರ‍್ಯಾಪರ್​ ಗ್ರೇನ್ ರಿಪ್ಪರ್ ಕರೆಸಿದ್ದರು. ಡಿಜೆ ಮೂಲಕ ಅಬ್ಬರದ ಮ್ಯೂಸಿಕ್ ಹಾಕಿದ್ದ ಕಾರಣ ಎಸ್​​ಪಿಗೆ ಮಾಹಿತಿ ನೀಡಲಾಗಿದೆ. ಮೈಸೂರು ಎಸ್​ಪಿ ಆದೇಶದಂತೆ…

Read More

ಬೆಂಗಳೂರು : ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ಇಂದು ಭಾರಿ ಅನಾಹುತ ಒಂದು ತಪ್ಪಿದೆ, ನಿಂತಿದ್ದ ಲಾರಿ ಒಂದು ಏಕಾಏಕಿ ಚಲಿಸಿದ್ದು ಎದುರುಗಡೆ ಮಾರಾಟಕ್ಕೆ ಎಂದು ಇಟ್ಟಿದ್ದ ಗಣಪತಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಎದುರುಗಡೆ ಯಾವುದೇ ವಾಹನಗಳು ಇಲ್ಲದಿರುವುದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ಹೌದು ನಿಂತಿದ್ದ ಟಿಪ್ಪರ್ ಲಾರಿ ಚಲಿಸಿ ಒಂದು ಲೈಟ್ ಕಂಬ ಹಾಗೂ ರಸ್ತೆ ಬದಿ ಮಾರಾಟಕ್ಕೆ ಇಟ್ಟಿದ್ದ ಗಣಪತಿ ಮೂರ್ತಿಗೆ ಡಿಕ್ಕಿ ಹೊಡೆದಿದೆ.ರಾತ್ರಿ 1.30 ಸುಮಾರಿಗೆ ಟಿಪ್ಪರ್ ಲಾರಿ ಚಾಲಕ, ಜಲ್ಲಿ ಕಲ್ಲು ಅನ್ ಲೋಡ್ ಮಾಡಲು ಟಿಪ್ಪರ್ ನಿಲ್ಲಿಸಿ ಜಲ್ಲಿ ಕಲ್ಲಿನ ಫೋಟೋ ತೆಗೆದುಕೊಳ್ಳುತ್ತಿದ್ದ. ಈ ವೇಳೆ ಬ್ರೇಕ್ ಫೇಲ್ ಆಗಿ ಟಿಪ್ಪರ್ ಏಕಾಏಕಿ ಚಲಿಸಿದ್ದು, ರಸ್ತೆ ದಾಟಿ ಎದುರುಗಡೆಗೆ ಹೋಗಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ವಾಹನ ಓಡಾಟ ಇಲ್ಲದಿರುವುದರಿಂದ ಅನಾಹುತ ತಪ್ಪಿದೆ.ಇದೀಗ ಲೈಟ್ ಕಂಬವನ್ನು ಬೆಸ್ಕಾಂ ಸಿಬ್ಬಂದಿ ತೆರವು ಗೊಳಿಸಿದ್ದು, ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ…

Read More

ಮೈಸೂರು : ಮಹಿಷ ದಸರಾ ಕಾರ್ಯಕ್ರಮದಲ್ಲಿ ಪ್ರೊಫೆಸರ್ ನಂಜರಾಜ ಅರಸ್ ಅವರು ಇದೀಗ ವಿವಾದಾತ್ಮಕ ಹೇಳಿಕೆ ನೀಡಿದ್ದು, ಚಾಮುಂಡಿ ಕೇವಲ ಕಾಲ್ಪನಿಕ ವ್ಯಕ್ತಿ. ಆದರೆ ಮಹಿಶಾಸುರ ಜೀವಂತ ವ್ಯಕ್ತಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದು ಮೈಸೂರಿನ ಮಹಿಷ ದಸರಾದಲ್ಲಿ ಪ್ರೊಫೆಸರ್ ನಂಜರಾಜ್ ಅರಸ್ ಮಾತನಾಡಿ, ಚಾಮುಂಡಿ ಜೀವಂತ ವ್ಯಕ್ತಿ ಅಲ್ಲ. ಕೇವಲ ಕಾಲ್ಪನಿಕ. ಮಹಿಷಾಸುರ ಜೀವಂತ ವ್ಯಕ್ತಿ. ಚಾಮುಂಡಿ ಕೇವಲ ಕಾಲ್ಪನಿಕ ಅಸುರ ಮತ್ತು ರಾಕ್ಷಸ ಅನ್ನೋದು ಸಮುದಾಯಗಳ ಹೆಸರು. ದೇವರ ಪುರಾಣ ಓದಿದರೆ ಸೂಸೈಡ್ ಮಾಡ್ಕೋಬೇಕು. ಇಷ್ಟು ಕೀಳಾದವರು ಎನಿಸುತ್ತದೆ. ಚಾಮುಂಡಿ ಮಹಿಷಾಸುರನನ್ನು ಕೊಂದಿಲ್ಲ. ಚಾಮುಂಡಿ ಜೀವಂತ ವ್ಯಕ್ತಿ ಅಲ್ಲ ಕೇವಲ ಕಾಲ್ಪನಿಕ ಎಂದು ಪ್ರೊಫೆಸರ್ ನಂಜರಾಜೇ ಇದೆ ವೇಳೆ ವಿವಾದಾತ್ಮಕ ಮಾತು ಹೇಳಿದ್ದಾರೆ.

Read More