Subscribe to Updates
Get the latest creative news from FooBar about art, design and business.
Author: kannadanewsnow05
ರಾಯಚೂರು : ರಾಯಚೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ದೇವಸ್ಥಾನಕ್ಕೆ ಭೇಟಿ ನೀಡಿದಾಗಲೇ ಸಿಡಿಲು ಬಡಿದು ಪತಿ ಸಾವನ್ನಪ್ಪಿದ್ದು, ಪತ್ನಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೆಗುಡದಿನ್ನಿ ಗ್ರಾಮದಲ್ಲಿ ನಡೆದಿದೆ. ದೇವಸ್ಥಾನಕ್ಕೆ ಸಿಡಿಲು ಬಡಿದು ಸಾಯಣ್ಣ ಎನ್ನುವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ದೇವಸ್ಥಾನಕ್ಕೆ ಸಿಡಿಲು ಪಡೆದು ಸಾಯಣ್ಣ ಇದೀಗ ಸಾವನಪ್ಪಿದ್ದಾರೆ. ಕುಟುಂಬ ಸಮೇತರಾಗಿ ಸಾಯಣ್ಣ ಎನ್ನುವವರು ದೇವಸ್ಥಾನಕ್ಕೆ ತೆರಳಿದ್ದರು. ಸಾಯಣ್ಣ ಪತಿಗೆ ಗಾಯಗಳಾಗಿದ್ದು ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಬೆಳಗಾವಿ : ಕಳೆದ ಕೆಲವು ದಿನಗಳ ಹಿಂದೆ ಬೆಳಗಾವಿ ನಗರದ ಗಣೇಶಪುರದಲ್ಲಿ ಅಪಾರ್ಟ್ಮೆಂಟ್ ಮನೆಯೊಂದಕ್ಕೆ ನುಗ್ಗಿ ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ, ಮೈಮೇಲಿನ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಬಾಲಕ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಹಣಕಾಸಿನ ವ್ಯವಹಾರ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೀ ನಗರದ ಜ್ಯೋತಿ ಬಾಂದೇಕರ್, ಅವರ ಪುತ್ರಿ ಸುಹಾನಿ ಬಾಂದೇಕರ್ ಮತ್ತು ಓರ್ವ ಬಾಲಕನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1.70 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ ಪೊಲೀಸರು, ಬಳಿಕ ಅವರ ಆರೋಗ್ಯ ಪರೀಕ್ಷೆಯನ್ನು ನಡೆಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ. ಕೊಲೆಗೆ ಕಾರಣ ಏನು? ಕೊಲೆಯಾದ ಅಂಜನಾ ದಡ್ಡಿಕರ್ ಸಾವಿಗೆ ಕೇವಲ 15 ಸಾವಿರ ರೂಪಾಯಿ ಕಾರಣವಾಗಿದೆ. ಕೋವಿಡ್ ಸಮಯದಲ್ಲಿ ಅಂಜನಾ ಅವರಿಂದ 15 ಸಾವಿರ ರೂ. ಸಾಲವನ್ನು ಜ್ಯೋತಿ ಪಡೆದಿದ್ದರು. ಇದಕ್ಕೆ…
ನವದೆಹಲಿ : ಪಹಲ್ಗಾಮ್ ಉಗ್ರರ ದಾಳಿಯಿಂದ ಹಲವಾರು ವ್ಯಾಪಾರ, ವಹಿವಾಟಿಗೆ ಹೊಡೆತ ಬಿದ್ದಿದ್ದು, ಇದೀಗ ಆಫ್ಘಾನಿಸ್ತಾನದಿಂದ ಆಮದು ಆಗುತ್ತಿದ್ದ ಡ್ರೈಫ್ರೂಟ್ಸ್ ಸಂಪೂರ್ಣವಾಗಿ ಕುಸಿತವಾಗಿದ್ದು, ಮುಂದಿನ ದಿನಗಳಲ್ಲಿ ಡ್ರೈಫ್ರೂಟ್ಸ್ ದರ ಹೆಚ್ಚಾಗುವ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೌದು ಉಗ್ರರ ದಾಳಿಯಿಂದ ಡ್ರೈಫ್ರೂಟ್ಸ್ ಗು ಇದೀಗ ಬಿಸಿ ತಟ್ಟಿದೆ. ಗಡಿ ಬಂದ್ ಹಿನ್ನೆಲೆಯಲ್ಲಿ ಡ್ರೈಫ್ರೂಟ್ಸ್ ಆಮದು ಸ್ಥಗಿತವಾಗಿದೆ. ಆಫ್ಗಾನಿಸ್ಥಾನದಿಂದ ಡ್ರೈಫ್ರೂಟ್ಸ್ ಬರುತ್ತಿತ್ತು. ಇದೀಗ ಅದಕ್ಕೆ ಬ್ರೇಕ್ ಬಿದ್ದಿದ್ದು, ಕಾಶ್ಮೀರದಿಂದಲೂ ಬೆಂಗಳೂರಿಗೆ ಒಣ ಹಣ್ಣು ಆಮದು ಆಗುತ್ತಿತ್ತು. ಡ್ರೈಫ್ರೂಟ್ಸ್ ಪೂರೈಕೆ ಇಲ್ಲದೆ ವ್ಯಾಪಾರ ಏಕಾಏಕಿ ಕುಸಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಡ್ರೈ ಫ್ರೂಟ್ಸ್ ದರ ಏರಿಕೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾಶ್ಮೀರದಿಂದ ಬಾದಾಮಿ ಗೋಡಂಬಿ ಕೇಸರಿ ಪೂರೈಕೆ ಇದೀಗ ಸಂಪೂರ್ಣವಾಗಿ ಇಳಿಮುಖವಾಗಿದ್ದು ಇದೀಗ ಹಲ್ಗಾಂ ದಾಳಿಯಿಂದ ಡ್ರೈ ಫ್ರೂಟ್ಸ್ ಎಫೆಕ್ಟ್ ತಟ್ಟಿದೆ.
ಚಾಮರಾಜನಗರ : ಮಾದೇಶ್ವರ ಬೆಟ್ಟದ ತಾಳಬೆಟ್ಟದಲ್ಲಿ ಕೆಎಸ್ಆರ್ಟಿಸಿ ಬಸ್ ಬ್ರೇಕ್ ಫೇಲ್ ಆಗಿ ಚಾಲಕ ಬಸ್ ಅನ್ನು ರಸ್ತೆಯ ಡಿವೈಡರ್ ಮೇಲೆ ಹತ್ತಿಸಿರುವ ಘಟನೆ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಾಳಬೆಟ್ಟ ತಿರುವಿನಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಳೆ ಮಹದೇಶ್ವರ ಬೆಟ್ಟ ದಿಂದ ಕೆಎಸ್ಆರ್ಟಿಸಿ ಬಸ್ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು. ಈ ವೇಳೆ KA 09 F 5311 ಸಂಖ್ಯೆಯ ಮೈಸೂರು ಡಿಪೋದ KSRTC ಬಸ್ ತಾಳಬೆಟ್ಟ ತಿರುವಿನಲ್ಲಿ ಬ್ರೇಕ್ ಫೇಲ್ ಆಗಿದೆ. ಈ ವೇಳೆ ಬಸ್ ನಲ್ಲಿ ಸುಮಾರು 60ಕ್ಕೂ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದರು. ಅಕಸ್ಮಾತ್ ಡಿವೈಡರ್ ಅನ್ನು ಚಾಲಕ ಹತ್ತಿಸದಿದ್ದರೆ ಬಸ್ ಕಂದಕಕ್ಕೆ ಬೀಳುವ ಸಾಧ್ಯತೆ ಇತ್ತು. ಹಾಗಾಗಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಇದೀಗ 60 ಜನ ಪ್ರಯಾಣಿಕರ ಜೀವ ಉಳಿದಿದ್ದು, ಪ್ರಯಾಣಿಕರು ಚಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಿಕ ಕಂಡಕ್ಟರ್ ಪ್ರಯಾಣಿಕರನ್ನು ಬೇರೆ…
ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿ ವಂಚಿಸಿದ್ದ ಐಶ್ವರ್ಯಾ ಗೌಡ ನಿವಾಸದಲ್ಲಿ 2 ಕೋಟಿ 25 ಲಕ್ಷ ನಗದು ಪತ್ತೆಯಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ. ಇನ್ನು ಶಾಸಕ ವಿನಯ್ ಕುಲಕರ್ಣಿ ಹಾಗೂ ಐಶ್ವರ್ಯಾ ಗೌಡ ನಡುವಿನ ಸಂಬಂಧದ ಕುರಿತು ರಹಸ್ಯ ಬಯಲಾಗಿದ್ದು, ED ಅಧಿಕಾರಿಗಳ ತನಿಖೆ ವೇಳೆ ಸ್ಫೋಟಕ ವಿಚಾರ ಬಹಿರಂಗವಾಗಿದೆ. ಹೌದು ಐಶ್ವರ್ಯಾ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಡುವೆ 24 ಕೋಟಿ ವ್ಯವಹಾರ ನಡೆದಿದ್ದಕ್ಕಾಗಿ ಇಡಿ ಅಧಿಕಾರಿಗಳು ಕುಲಕರ್ಣಿ ಮನೆ ಮೇಲೆ ದಾಳಿ ಮಾಡಿದ್ದು, ಸತತ 26 ಗಂಟೆ ದಾಳಿ ನಡೆಸಿ ಹಲವು ದಾಖಲೆಗಳ ಸಂಗ್ರಹಿಸಿದೆ. ಯೋಗೇಶ್ ಗೌಡ ಕೊಲೆ ಕೇಸ್ನಲ್ಲೂ ಶಾಸಕ ವಿನಯ್ ಕುಲರ್ಣಿಗೆ ಸಹಾಯ ಮಾಡಿದ್ದಳು ಎನ್ನುವುದು ಗೊತ್ತಾಗಿದೆ. ಐಶ್ವರ್ಯಾ ಹಾಗೂ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಡುವೆ 24 ಕೋಟಿ ವ್ಯವಹಾರ ನಡೆದಿದ್ದಕ್ಕಾಗಿ ಇಡಿ ಅಧಿಕಾರಿಗಳು ಕುಲಕರ್ಣಿ ಮನೆ ಮೇಲೆ ದಾಳಿ ಮಾಡಿದ್ದು,…
ಬೆಂಗಳೂರು : ದೇಶ ವಿಭಜನೆ ಆದ ಬಳಿಕವೂ ಮೂರು ಯುದ್ಧ ಮಾಡಿದ್ದಾರೆ. ಆದರೂ ಪಾಠ ಕಲಿತಿಲ್ಲ ಕೆಣಕಿ ಕೆಣಕಿ ಯುದ್ಧಕ್ಕೆ ಕರೀತಾರೆ. ತಿನ್ನೋಕೆ ಅನ್ನ ಇಲ್ಲ ದೇಶ ಸಂಪೂರ್ಣ ಕಂಗೆಟ್ಟಿದೆ ಎಂದು ಬಿಜೆಪಿ ಮಾಜಿ ಸಚಿವ ಅಶ್ವಥ್ ನಾರಾಯಣ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದರು. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯಗೆ ರಾಜಕೀಯ, ಆಡಳಿತದಲ್ಲಿ 50 ವರ್ಷಕ್ಕಿಂತ ಹೆಚ್ಚು ಅನುಭವವಿದೆ. ಯುದ್ಧ ಮಾಡಬಾರದು ಅಂತ ಸಾರ್ವಜನಿಕವಾಗಿ ಹೇಳಬೇಕಾ? ಬಿಗಿ ಭದ್ರತೆಯನ್ನು ಮಾಡಿ ಅಂತ ಹೇಳಿದ್ದಾರೆ ಸಂತೋಷ. ಬಿಗಿ ಭದ್ರತೆ ಮಾಡಿ ಅಂತ ಹೇಳಿ ಸತ್ತವರು ವಾಪಸ್ ಬರ್ತಾರ ಎಂದಿದ್ದಾರೆ. ಕುಮಕ್ಕು ಕೊಟ್ಟವರಿಗೆ ಪಾಠ ಕಲಿಸುವುದು ಬೇಡವಾ? ನಮ್ಮವರಿಗೆ ಬಂದು ಹೊಡೆದರು ಪರವಾಗಿಲ್ಲ? ಪಾಕಿಸ್ತಾನಕ್ಕೆ ಮಾತ್ರ ಏನು ಮಾಡಬೇಡಿ ಅನ್ನೋದು ಇವರ ಅರ್ಥವಾಗಿದೆ ಎಂದರು.
ವಿಜಯಪುರ : ಮೊಬೈಲ್‌ನಲ್ಲಿ ಅತಿಯಾಗಿ ಚಾಟ್ ಮಾಡುತ್ತಿದ್ದ ಪತ್ನಿಗೆ ಬುದ್ಧಿವಾದ ಹೇಳಿದಕ್ಕೆ ಪತ್ನಿಯೊಬ್ಬಳು ತನ್ನ ಪತಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ವಿಜಯಪುರ ನಗರದ ಆಲಕುಂಟೆ ನಗರದಲ್ಲಿ ಇಂದು ನಸುಕಿನ ಜಾವ 3 ಗಂಟೆಗೆ ನಡೆದಿದೆ. ತೇಜು ರಾಠೋಡ್ ಎಂಬಾಕೆ ತನ್ನ ಪತಿ ಅಜೀತ್ ರಾಠೋಡ್ ಗಾಢ ನಿದ್ರೆಯಲ್ಲಿದ್ದಾಗ ಕತ್ತಿಗೆ ಚಾಕುವಿನಿಂದ ಇರಿದಿದ್ದಾಳೆ. ಅಜೀತ್ ಕಿರುಚಿಕೊಂಡಾಗ ಮನೆಯವರಿಗೆ ವಿಷಯ ಗೊತ್ತಾಗಿದ್ದು, ಕೂಡಲೇ ಅವರನ್ನು ಬಿಎಲ್‌ಡಿಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಜೀತ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ತೇಜು ಸದಾ ಮೊಬೈಲ್‌ನಲ್ಲಿ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದುದ್ದಕ್ಕೆ ಅಜೀತ್ ಬುದ್ಧಿವಾದ ಹೇಳಿದ್ದರು. ಇದು ತೇಜುಗೆ ಸಿಟ್ಟು ತಂದಿದ್ದು, ಆಕೆ ಈ ದುಸ್ಸಾಹಸಕ್ಕೆ ಕೈಹಾಕಿದ್ದಾಳೆ ಎಂದು ಆರೋಪಿಸಲಾಗಿದೆ. ಆದರ್ಶನಗರ ಪೊಲೀಸರು ತೇಜು ರಾಠೋಡ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಪ್ರಕರಣ ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
BREAKING : ಮಂಡ್ಯದಲ್ಲಿ ಘೋರ ದುರಂತ : ಕಬಡ್ಡಿ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಓರ್ವ ಸಾವು, 13 ಜನರಿಗೆ ಗಾಯ
ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ನಡೆದಿದ್ದು, ಜಿಲ್ಲೆಯ ಮಲ್ಲನಾಯಕನ ಕಟ್ಟೆ ಗ್ರಾಮದಲ್ಲಿ ಕಬಡ್ಡಿ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿ, 13ಜನರು ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಪಾಪಣ್ಣಚಾರಿ ಮೃತ ದುರ್ವೈವಿ. ಕಬಡ್ಡಿ ಪಂದ್ಯ ವೀಕ್ಷಿಸಲು ಸ್ಥಳದಲ್ಲಿ ಸಾಕಷ್ಟು ಜನ ನೆರೆದಿದ್ದರು. ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ವೀಕ್ಷಕರ ಗ್ಯಾಲರಿ ಕುಸಿದು ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಶ್ರೀ ಭೈರವ ಕಪ್ ಹೆಸರಿನಲ್ಲಿ ಮೈಸೂರು ವಿಭಾಗ ಮಟ್ಟದ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು. ನಿನ್ನೆ ಮತ್ತು ಇಂದು ನಡೆಯಬೇಕಿದ್ದ ಪಂದ್ಯಾವಳಿ ನಡೆಯಬೇಕಿತ್ತು. ಆದ್ರೆ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಮತ್ತಷ್ಟು ಉಗ್ವಿಗ್ನತೆ ನಡುವೆ ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಹಾಕಿದ್ದಾರೆ. ಹೌದು ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸ್ ಬೆದರಿಕೆ ಹಾಕಿದ್ದಾರೆ. ಈ ಕುರಿತು ಮಾತನಾಡಿದ ಅವರು, ಸಿಂಧೂ ನದಿಯಿಂದ ನೀರು ಸರಬರಾಜು ನಿಲ್ಲಿಸಿದರೆ ಭಾರತ ಯುದ್ಧಕ್ಕೆ ಸಿದ್ಧವಾಗಬೇಕು. ನಮ್ಮಲ್ಲಿ 130 ಪರಮಾಣು ಸಿಡಿಲತಲೆಗಳನ್ನು ಇರಿಸಲಾಗಿದೆ.ಅಲ್ಲದೇ ಘೋರಿ, ಶಾಹೀನ್ & ಘಜ್ನಿ ಕ್ಷಿಪಣಿಗಳನ್ನು ಭಾರತದ ಮೇಲೆ ದಾಳಿ ಮಾಡಲು ಇಟ್ಟಿದ್ದೇವೆ ಹೊರತು ಅವುಗಳನ್ನು ಪ್ರದರ್ಶನಕ್ಕೆ ಇಟ್ಟಿಲ್ಲ ಎಂದು ಪಾಕಿಸ್ತಾನ ಸಚಿವ ಹೇಳಿಕೆ ನೀಡಿದ್ದಾರೆ. ಭಾರತ ನೀರು ಸರಬರಾಜನ್ನು ನಿಲ್ಲಿಸಲು ಧೈರ್ಯ ಮಾಡಿದರೆ ಭಾರತ ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು. ಪಾಕಿಸ್ತಾನದ ಪರಮಾಣು ಶಸ್ತ್ರಸ್ತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿಲ್ಲ ಸಿಂಧೂ ನದಿ ನೀರಿನಲ್ಲಿಸಿದರೆ ನಾವು ಯುದ್ಧಕ್ಕೆ ಸಿದ್ದ ಅವುಗಳ ಸ್ಥಳಗಳು ದೇಶದಾದಂತ ಅಡಗಿಕೊಂಡಿವೆ. ದಾಳಿ ಮಾಡೋದು ಸಿದ್ಧವಾಗಿವೆ ಎಂದು ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸ್ ವಾರ್ನಿಂಗ್ ನೀಡಿದ್ದಾರೆ.
ಜಮ್ಮು ಕಾಶ್ಮೀರ : ಜಮ್ಮು ಕಾಶ್ಮೀರದಲ್ಲಿ ಏಪ್ರಿಲ್ 22 ರಂದು ಪ್ರವಾಸಿಗರ ಮೇಲೆ ಉಗ್ರರು ಭೀಕರ ದಾಳಿ ನಡೆಸಿದರು. ಈ ಒಂದು ದಾಳಿಯಲ್ಲಿ 26 ಜನ ಅಮಾಯಕರು ಬಲಿಯಾಗಿದ್ದಾರೆ. ಅದರಲ್ಲಿ ಇಬ್ಬರು ಕನ್ನಡಿಗರು ಸಹ ಸಾವನ್ನಪ್ಪಿದ್ದರೆ. ಇದೀಗ ಉಗ್ರರಿಗೆ ನೆರವು ನೀಡುತ್ತಿದ್ದ 64 ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹೌದು ಗುಂಡಿನ ದಾಳಿ ನಡೆದ ಬಳಿಕ ಕಾಶ್ಮೀರದಲ್ಲಿ ಹೈ ಅಲರ್ಟ್ ಇದ್ದು, ಈಗಾಗಲೇ ಭಾರತೀಯ ಸೈನಿಕರು, ಕಾಶ್ಮೀರಿ ಪೊಲೀಸರು ಉಗ್ರರ ಮಟ್ಟ ಹಾಕಲು ಯೋಜನೆ ರೂಪಿಸಿದ್ದಾರೆ. ಇದೀಗ ಉಗ್ರರಿಗೆ ನೆರವು ನೀಡ್ತಿದ್ದ ಕಾಶ್ಮೀರದ 64 ಆರೋಪಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.ಕಾಶ್ಮೀರದ ಕಣಿವೆಯ್ಯಾದ್ಯಂತ ಪೊಲೀಸರಿಂದ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.














