Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರಾಜ್ಯದ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಇದೀಗ ಮತ್ತೊಂದು ಬಿಗ್ ಶಾಕ್ ನೀಡಿದೆ. ಟ್ಯಾಕ್ಸಿ ಲಘು ವಾಹನಗಳು ದುಬಾರಿ ಆಗಲಿವೆ 10 ಲಕ್ಷದೊಳಗಿನ ವಾಣಿಜ್ಯ ವಾಹನಗಳ ತೆರಿಗೆ ಹೆಚ್ಚಾಗಲಿದೆ. ಕರ್ನಾಟಕ ಮೋಟಾರ್ ವಾಹನಗಳ ವಿಧೇಯಕಕ್ಕೆ ರಾಜಪಾಲರು ಅಂಕಿತ ಹಾಕಿದ ಹಿನ್ನೆಲೆಯಲ್ಲಿ ಇದೀಗ ವಾಹನ ಮಾಲೀಕರಿಗೆ ತೆರಿಗೆ ಶಾಕ್ ನೀಡಲಾಗಿದೆ. ಹೌದು ನಾಳೆಯಿಂದ ವಾಹನಗಳ ಜೀವಿತಾವಧಿ ತೆರಿಗೆ ಏರಿಕೆ ಆಗಲಿದೆ. 10 ಲಕ್ಷದೊಳಗಿನ ಟ್ಯಾಕ್ಸಿ, ಲಘು ವಾಹನಗಳ ತೆರಿಗೆ ಏರಿಕೆಯಾಗಲಿದೆ. ವಾಹನಗಳ ಜೀವಿತಾವಧಿ ತೆರಿಗೆ ಶೇಕಡ 5ರಷ್ಟು ಏರಿಕೆಯಾಗಲಿದೆ. ವಾಣಿಜ್ಯ ಉದ್ದೇಶ ಬಳಕೆಯ ಎಲೆಕ್ಟ್ರಿಕ್ ವಾಹನಗಳ ತೆರಿಗೆಯು ಏರಿಕೆಯಾಗಲಿದೆ. 25 ಲಕ್ಷಕ್ಕೂ ಹೆಚ್ಚಿನ ವಾಣಿಜ್ಯ ಬಳಕೆ ಇವಿಗೆ ಶೇಕಡ 10 ರಷ್ಟು ತೆರಿಗೆ ಏರಿಕೆಯಾಗಿದೆ. ಇದುವರೆಗೂ 10 ಲಕ್ಷಕ್ಕಿಂತ ಕಡಿಮೆ ಮುಳ್ಳಿದ ವಾಹನಗಳಿಗೆ ತೆರಿಗೆ ಇರಲಿಲ್ಲ. ನಾಳೆಯಿಂದ ಈ ಎಲ್ಲ ವಾಹನಗಳ ಜೀವಿತಾವಧಿ ತೆರಿಗೆ ಏರಿಕೆ ಆಗಲಿದೆ.
ಬಾಂಗ್ಲಾದೇಶ : ಕಳೆದ 5 ತಿಂಗಳ ಹಿಂದೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಒಟ್ಟುಗೂಡಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಕ್ಕೆ ಬಂಧಿಸಲಾಗಿದ್ದ ಇಸ್ಕಾನ್ ಸಂಸ್ಥೆಯ ಮಾಜಿ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರಿಗೆ ಬಾಂಗ್ಲಾದ ಚಿತ್ತಗಾಂಗ್ ಹೈಕೋರ್ಟ್ 5 ತಿಂಗಳ ಬಳಿಕ ಜಾಮೀನು ನೀಡಿದೆ. ಹೌದು ದೇಶದ್ರೋಹದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದ ಚಿನ್ಮಯ್ ಕೃಷ್ಣದಾಸ್‌ರನ್ನು ನವೆಂಬರ್ 25, 2024ರಂದು ಬಾಂಗ್ಲಾದೇಶದಲ್ಲಿ ಬಂಧಿಸಲಾಗಿತ್ತು.ಚಿನ್ಮಯ್ ಕೃಷ್ಣ ದಾಸ್ ಅವರಿಗೆ ಬಾಂಗ್ಲಾದ ಚಿತ್ತಗಾಂಗ್ ಹೈಕೋರ್ಟ್ 5 ತಿಂಗಳ ಬಳಿಕ ಜಾಮೀನು ನೀಡಿದೆ. ಪ್ರಕರಣ ಹಿನ್ನೆಲೆ? ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಬಗ್ಗೆ ಚಿನ್ಮಯ್ ಕೃಷ್ಣದಾಸ್ ಅವರು ಧ್ವನಿ ಎತ್ತಿದ್ದರು. ಮಾಜಿ ಪ್ರಧಾನಿ ಶೇಖ್ ಹಸೀನಾ ಅಧಿಕಾರದಿಂದ ಕೆಳಗಿಳಿದ ನಂತರ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ನಡೆಯುತ್ತಿತ್ತು. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರವು ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ತಡೆಯಲು ವಿಫಲವಾಗಿದೆ ಎಂದು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ನವೆಂಬರ್ 25, 2024ರಂದು ಬಾಂಗ್ಲಾದೇಶದಲ್ಲಿ…
ಲಾಹೋರ್ : ಪಾಕಿಸ್ತಾನದ ಕರಾಳ ಮುಖ ಇದೀಗ ಮತ್ತೊಮ್ಮೆ ಬಯಲಾಗಿದ್ದು, ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಗು ಲಷ್ಕರ್ ಸಂಘಟನೆಯ ಮುಖ್ಯಸ್ಥ ಉಗ್ರ ಹಫೀಜ್ ಸಯೀದ್ ಮನೆಗೆ ಇದೀಗ ಪಾಕಿಸ್ತಾನ ಸೇನೆಯೇ ಬಿಗಿ ಭದ್ರತೆ ಒದಗಿಸಿದೆ. ಉಗ್ರರನ್ನು ನಾವು ಸಾಕುತ್ತಿಲ್ಲ ಎಂದು ಇತ್ತೀಚಿಗೆ ಪಾಕಿಸ್ತಾನ ಅಧಿಕಾರಿಯೊಬ್ಬ ಹೇಳಿದ್ದ ಇದೀಗ ಪಾಕಿಸ್ತಾನದ ಮತ್ತೊಂದು ಕರಾಳ ಮುಖ ಬಟಾ ಬಯಲಾಗಿದೆ. ಉಪಗ್ರಹಗಳ ಚಿತ್ರಗಳ ಪ್ರಕಾರ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ತಿಳಿದುಬಂದಿದ್ದು, ಉಗ್ರ ಹಫೀಜ್ ಸಯೀದ್ ಪಾಕಿಸ್ತಾನ ಜೈಲಲ್ಲಿ ಇದ್ದಾನೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ ಉಗ್ರ ಹಫೀಜ್ ಸಯೀದ್ ಜೈಲಲ್ಲಿ ಇಲ್ಲ ಲಾಹೋರ್ ನಲ್ಲಿ ತನ್ನ ಮನೆಯಲ್ಲಿ ಅಡಗಿ ಕುಳಿತಿದ್ದಾನೆ ಇದ್ದಾನೆ ಎಂದು ತಿಳಿದುಬಂದಿದೆ. ಹಾಗಾಗಿ ಇದೀಗ ಆತನ ಮನೆಗೆ ಪಾಕಿಸ್ತಾನ ಸೇನೆಯೇ ಬಿಗಿ ಭದ್ರತೆ ನೀಡಿದೆ ಎಂದು ತಿಳಿದುಬಂದಿದೆ.ಆತನ ಮನೆಗೆ ಡ್ರೋನ್ ಗಳ ಮೂಲಕ ಪಾಕಿಸ್ತಾನ ಸೇನೆ ಬಿಗಿ ಭದ್ರತೆ ಮೂಲಕ ಕಣ್ಗಾವಲು ಇರಿಸಿದೆ. ಲಾಹೋರ್ ನಲ್ಲಿ ತನ್ನ…
ಬೆಂಗಳೂರು : ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಬೆಂಗಳೂರಲ್ಲಿ ಇಂದು ಏಕಾಏಕಿ ಧಾರಾಕಾರ ಮಳೆ ಸುರಿಯುತ್ತಿದ್ದು, ಬೆಂಗಳೂರಿನ ಮೆಜೆಸ್ಟಿಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇದೀಗ ಭಾರಿ ಮಳೆ ಆಗುತ್ತಿದೆ ಬೆಂಗಳೂರಿನ ಹಲವೆಡೆ ಇಂದು ಧಾರಾಕಾರ ಮಳೆ ಸುರಿಯುತ್ತಿದ್ದು, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಟೌನ್ ಹಾಲ್, ಕಾರ್ಪೊರೇಷನ್ ಸರ್ಕಲ್, ಎಂ ಜಿ ರಸ್ತೆ, ಶಾಂತಿನಗರ, ಕೆಆರ್ ಮಾರ್ಕೆಟ್ ಹಾಗು ಜಯನಗರ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇದೀಗ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯಿಂದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.
ಕಲಬುರ್ಗಿ : ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈಫಂಡ್ ದುರ್ಬಳಕೆ ಆರೋಪದಡಿ ಕಲಬುರ್ಗಿಯ ಕಾಂಗ್ರೆಸ್ ಮುಖಂಡ ಭೀಮಾಶಂಕರ ಬಿಲಗುಂದಿ ಸೇರಿದಂತೆ ಮೂವರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಇಂದು ದಾಳಿ ಮಾಡಿ, ಶೋಧ ನಡೆಸಿದ್ದಾರೆ. ಹೌದು 2018ರಿಂದ 2024ರವರೆಗೆ ಎಂಆರ್‌ಎಂಸಿಯ 282 ಪಿಜಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೇರಬೇಕಿದ್ದ 81.21 ರೂ.ಕೋಟಿ ಸ್ಟೈಫಂಡ್ ಹಣವನ್ನು ಭೀಮಾಶಂಕರ ಸೇರಿ ನಾಲ್ವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ 2023ರ ಮಾರ್ಚ್ 31ರಂದು ಕಲಬುರ್ಗಿಯ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿಗಳ ಖಾತೆಗೆ ಸ್ಟೈಫಂಡ್ ಹಣ ಜಮೆ ಮಾಡಿಸಿ, ಬಳಿಕ ವಿದ್ಯಾರ್ಥಿಗಳಿಂದ ಖಾಲಿ ಚೆಕ್‌ಗಳಿಗೆ ಅಕ್ರಮವಾಗಿ ಸಹಿ ಪಡೆದುಕೊಂಡಿದ್ದರು. ಆ ನಂತರ ಅಕ್ರಮವಾಗಿ ಸ್ಟೈಫಂಡ್ ಹಣವನ್ನು ವಿತ್‌ಡ್ರಾ ಮಾಡಿಕೊಂಡ ಈ ನಾಲ್ವರು, ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಪ್ರಕರಣ ಸಂಬಂಧ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಗೊತ್ತಾಗಿದೆ ಈ ಸಂಬಂಧ ಭೀಮಾಶಂಕರ ಬಿಲಗುಂದಿ, ಡಾ.ಎಸ್.ಎಂ. ಪಾಟೀಲ, ಸುಭಾಷ ಜಗನ್ನಾಥ ಅವರ ಮನೆಗಳಲ್ಲಿ…
ಠಾಣೆ : ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮೊಬೈಲ್ ಎಂಬ ಗೀಳಿಗೆ ಅಂಟಿಕೊಂಡಿದ್ದು, ಇದೀಗ ಅತಿಯಾದ ಮೊಬೈಲ್ ಬಳಕೆ ಮಾಡದಂತೆ ಮನೆಯವರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ನೊಂದ 20 ವರ್ಷದ ಯುವತಿ, 11ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಘಟನೆ ಠಾಣೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸಮೀಕ್ಷಾ ನಾರಾಯಣ ವಡ್ಡಿ ಎಂದು ಗುರುತಿಸಲಾಗಿದೆ.ಯುವತಿ ರಾತ್ರಿ ವೇಳೆಯಲ್ಲಿ ಮೊಬೈಲ್‌ನಲ್ಲಿ ಅತಿಯಾಗಿ ಮಾತನಾಡುತ್ತಿದ್ದರು. ಇದಕ್ಕೆ ಅವರ ಮನೆಯವರು ಆಕ್ಷೇಪ ವ್ಯಕ್ತಪಡಿಸಿ, ಮೊಬೈಲ್ ಬಳಕೆಯನ್ನು ತಗ್ಗಿಸುವಂತೆ ಸಲಹೆ ನೀಡಿದ್ದರು. ಇದಕ್ಕೆ ನಿರಾಕರಿಸಿದ ಯುವತಿಯಿಂದ ಮೊಬೈಲ್ ಕಸಿದುಕೊಳ್ಳಲಾಗಿತ್ತು. ಇದರಿಂದ ಯುವತಿ ಮನನೊಂದಿದ್ದಳು.ಈ ವೇಳೆ ತಾನು ವಾಸವಿದ್ದ ಅಪಾರ್ಟ್ಮೆಂಟ್ 12ನೇ ಮಹಡಿಯಿಂದ ಜಿಗಿದು ಜಿಗಿದಿದ್ದಾಳೆ. ಈ ವೇಳೆ ತಕ್ಷಣ ಇವರನ್ನು ಆಸ್ಪತ್ರೆಗೆ ಕರೆತರಲಾಯಿತಾದರೂ, ಆ ಹೊತ್ತಿಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಮೈಸೂರು : ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಅರಣ್ಯ ವೀಕ್ಷಕನೊಬ್ಬ ಕ್ವಾರ್ಟರ್ಸ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನಲ್ಲಿ ನಡೆದಿದೆ. ಪಿ.ಸುರೇಶ್ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಸುರೇಶ್ ಅರಣ್ಯ ಸಿಬ್ಬಂದಿಗೆ ನೀಡಿದ ಕ್ವಾರ್ಟರ್ಸ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲಧಿಕಾರಿಗಳು ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸುರೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.ಎಸಿಎಫ್ ಅಮೃತ ಮಾಯಪ್ಪನವರ್ ವಿರುದ್ಧ ಆರೋಪ ಕೇಳಿಬಂದಿದೆ. ಆದರೆ ಸರಗೂರು ಪೊಲೀಸ್ ಠಾಣೆಯಲ್ಲಿ ಹೊಟ್ಟೆನೋವು ತಾಳಲಾರದೇ ಸಾವು ಎಂದು ಪ್ರಕರಣ ದಾಖಲಾಗಿದೆ. ಡೆತ್ ನೋಟ್ ಇದ್ದರೂ ಹೊಟ್ಟೆ ನೋವು ಎಂದು ಎಫ್ .ಐ. ಆರ್‌ನಲ್ಲಿ ಉಲ್ಲೇಖ ಮಾಡಿದ್ದಾರೆಂದು ಸುರೇಶ್ ಪೋಷಕರು ಆರೋಪಿಸಿದ್ದಾರೆ. ಹಿರಿಯ ಅಧಿಕಾರಿಗಳ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು : ಇಂದು ಅಕ್ಷಯ ತೃತೀಯ ಹಿನ್ನೆಲೆ ಎಲ್ಲೆಡೆ ಜನರು ಚಿನ್ನ ಖರೀಡಿಸಲು ಚಿನ್ನದ ಅಂಗಡಿಗಳಿಗೆ ಮುಗಿ ಬಿದ್ದಿದ್ದಾರೆ. ಚಿನ್ನದ ದರ 1 ಲಕ್ಷಕ್ಕೆ ಏರಿಕೆಯಾದರು ಸಹ ಜನ ಚಿನ್ನ ಖರೀದಿ ಮಾಡಲು ಮುಗಿ ಬಿದ್ದಿದ್ದಾರೆ. ಇದೆ ವೇಳೆ ಇಂದು ಜ್ಯುವೆಲ್ಲರಿ ಶಾಪ್ ತೆರೆಯಲು ತೆರಳುತಿದ್ದ ಸಿಬ್ಬಂದಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಲ್ಲಿ ಶ್ರೀರಾಮ್ ಪುರದಿಂದ ನ್ಯೂಬಿಎಲ್ ಕಡೆಗೆ ತೆರಳುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ. ಮೃತ ಸಿಬ್ಬಂದಿಯನ್ನು ಹರ್ಷ ಎಂದು ತಿಳಿದುಬಂದಿದ್ದು, ಸಚಿನ ಎಂಬಾತನಿಗೆ ಗಂಭೀರವಾಗಿ ಗಾಯಗಳಾಗಿವೆ.ಮೃತ ಹಾಗೂ ಗಾಯಾಳು ಇಬ್ಬರು ಶ್ರೀರಾಮ ಪುರದ ನಿವಾಸಿಗಳಾಗಿದ್ದು, ಅಕ್ಷಯ ತೃತೀಯ ಹಿನ್ನಲೆ ನಿಗದಿತ ಸಮಯಕ್ಕಿಂತ ಬೇಗ ಶಾಪ್ ತೆರೆಯಲು ತೆರಳುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸದಾಶಿವನಗರ ಸಂಚಾರ ಪೋಲಿಸರು ಭೇಟಿ ಮಾಡಿದ್ದು, ಮರಣೋತ್ತರ ಪರೀಕ್ಷೆಗೆಂದು ಹರ್ಷ ಮೃತದೇಹ ಎಮ್‌ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಚಿನ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.
ಉತ್ತರಕನ್ನಡ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರ ಸಾವು ಹಿನ್ನೆಲೆಯಲ್ಲಿ ಭಾರತದ ವಿವಿಧ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಸ್ಥಳಗಳ ಮೇಲೆ ಪೊಲೀಸರ ಹದ್ದಿನಕಣ್ಣಿಟ್ಟಿದ್ದಾರೆ. ಹೌದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡುವ ಗೋಕರ್ಣ ಹಾಗೂ ಮುರುಡೇಶ್ವರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೇ ಹೋಮ್ಸ್ಟೇ, ರೆಸಾರ್ಟ್ಗಳಲ್ಲಿ ಪ್ರವಾಸಿಗರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಲ್ಲದೇ ಹೋಟೆಲ್, ಲಾಡ್ಜ್, ಹೋಮ್ಸ್ಟೇಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಜಿಲ್ಲಾ ಪೊಲೀಸ್ ಖಡಕ್ ಸೂಚನೆ ನೀಡಿದ್ದು. ಇನ್ನು ಕರಾವಳಿ ಸಮುದ್ರ ಭಾಗದಲ್ಲಿ ಕರಾವಳಿ ಕಾವಲುಪಡೆ ಹಾಗೂ ಭಾರತೀಯ ಕೋಸ್ಟ್ ಗಾರ್ಡ್ ಸಹ ಕಾರ್ಯಾಚರಣೆ ನಡೆಸಿದ್ದು, ಸಮುದ್ರ ಮಾರ್ಗದ ಮೂಲಕ ಶತ್ರುಗಳು ಒಳ ನುಗ್ಗದಂತೆ ತಡೆಯಲು ಬೋಟ್ಗಳ ದಾಖಲೆ ತಪಾಸಣೆ ಮಾಡುತ್ತಿದೆ.
ಬೆಂಗಳೂರು : ಪಹಲ್ಗಾಮ್ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನ ಕೆಲ ನಾಯಕರು ಯುದ್ಧ ಆದರೆ ನಷ್ಟವಾಗುತ್ತದೆ ಅಂತಾರೆ. ದೇಶಕ್ಕೆ ನಷ್ಟವಾಗುತ್ತೆ ಅಂತ ನಾವು ಉಗ್ರರಿಂದ ಹೊಡೆಸಿಕೊಳ್ಳಬೇಕಾ? ನಮಗೆಲ್ಲ ಒಂದು ಹೊತ್ತು ಊಟ ಇಲ್ಲದಿದ್ದರೂ ಪರವಾಗಿಲ್ಲ. ಆದಷ್ಟು ಬೇಗ ಯುದ್ಧ ಘೋಷಣೆ ಮಾಡಬೇಕು ಎಂದು ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಬೆಂಗಳೂರಲ್ಲಿ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ದೇಶ ಹಾಗು ವಿದೇಶಗಳು ಭಯೋತ್ಪಾದಕರ ಕೃತ್ಯವನ್ನು ಖಂಡಿಸಿವೆ. ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದಾರೆ. ಪಾಕಿಸ್ತಾನದವರಿಗೆ ಕೇವಲ ಬುದ್ಧಿ ಮಾತಲ್ಲ ತಕ್ಕ ಶಾಸ್ತಿ ಮಾಡಬೇಕು. ರಕ್ಷಣಾ ಸಚಿವರು ಮೂರು ಸೇನಾ ಪಡೆಗಳ ಜೊತೆಗೆ ಸಭೆ ನಡೆಸಿದ್ದಾರೆ. ಯಾರಿಗೆ ಹೊಡಿಬೇಕು ಅವರನ್ನು ಹೊಡೆಯಿರಿ ಎಂದು ಹೇಳಿದ್ದಾರೆ. ನಮ್ಮ ಯೋಧರು ಪಾಕಿಸ್ತಾನವನ್ನು ಭೂಪಟದಿಂದ ಅಳಿಸಿ ಹಾಕುತ್ತಾರೆ ಎಂದರು. ಕಾಂಗ್ರೆಸ್ಸಿನ ಕೆಲ ನಾಯಕರು ಯುದ್ಧ ಆದರೆ ನಷ್ಟವಾಗುತ್ತದೆ ಅಂತಾರೆ. ದೇಶಕ್ಕೆ ನಷ್ಟವಾಗುತ್ತೆ ಅಂತ ನಾವು ಉಗ್ರರಿಂದ ಹೊಡೆಸಿಕೊಳ್ಳಬೇಕಾ? ನಮಗೆಲ್ಲ ಒಂದು ಹೊತ್ತು…













