Author: kannadanewsnow05

ಬೆಂಗಳೂರು : ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಇದೀಗ ಹವಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಇಂದಿನಿಂದ ಮೇ 4 ರವರೇಗೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಎಲ್ಲಾ ಭಾಗದಲ್ಲೂ ಇಂದಿನಿಂದ ನಾಲ್ಕು ದಿನ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇಂದಿನಿಂದ ಮೇ 4ರ ವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ಮೈಸೂರು, ಮಂಡ್ಯ, ಚಿಕ್ಕಮಂಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ ಹಾಗು ಉತ್ತರ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

Read More

ಬೆಂಗಳೂರು : ಈಗಾಗಲೇ ಮಧ್ಯದ ಮೇಲಿನ ದರ ಎರಡು ಬಾರಿ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಇದೀಗ ಮೂರನೇ ಬಾರಿಗೆ ಮಧ್ಯದರ ಏರಿಕೆ ಮಾಡಿದ್ದು ಮಧ್ಯಪ್ರಿಯರಿಗೆ ರಜೆ ಸರ್ಕಾರ ಮತ್ತೊಮ್ಮೆ ಶಾಕ್ ನೀಡಿದೆ.ಹೌದು ಮದ್ಯ ಪ್ರಿಯರಿಗೆ ಮತ್ತೊಮ್ಮೆ ನೀಡಲು ಮುಂದಾದ ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸುವ ಬಗ್ಗೆ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, 195% ನಿಂದ 205% ಗೆ ಸುಂಕ ಹೆಚ್ಚಿಸುವ ಬಗ್ಗೆ ಕರುಡು ಅಧಿಸೂಚನೆ ಪ್ರಕಟಿಸಲಾಗಿದೆ. ಇನ್ನು ಈ ಕುರಿತು ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ಕೂಡ ಕಲ್ಪಿಸಲಾಗಿದೆ. ವಿದ್ಯುತ್ ದರ ಏರಿಕೆ ಬೆನ್ನಲ್ಲೆ ಇದೀಗ ಮದ್ಯದ ದರ ಏರಿಕೆಗೆ ರಾಜ್ಯ ಸರ್ಕಾರ ಮುಂದಾಗಿದೆ.ಈಗಾಗಲೇ ಡೀಸೆಲ್ ಹಾಲು ಮತ್ತು ವಿದ್ಯುತ್ ದರವನ್ನು ಸರ್ಕಾರ ಹೆಚ್ಚಿಸಿದೆ. ಬ್ರಾಂಡಿ, ವಿಸ್ಕಿ, ರಂ ಜಿನ್ ಗಳ ದರವನ್ನು ಪ್ರತೀ ಕ್ವಾಟರ್ ಗೆ 10 ರೂ.ಇಂದ 15 ರೂಪಾಯಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.ಬಿಯರ್ ದರ 10 ರೂ. ಇಂದ 20 ರೂ…

Read More

ಬೆಂಗಳೂರು : ಈಗಾಗಲೆ ಕಾವೇರಿ ನೀರಿನ ದರ ಹಾಗೂ ಮೆಟ್ರೋ ದರ ಏರಿಕೆ ಮಾಡಿ ಸರ್ಕಾರ ಬೆಂಗಳೂರಿನ ಜನತೆಗೆ ಶಾಕ್ ನೀಡಿದ್ದು, ಇದೀಗ ಬೆಂಗಳೂರು ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಲಿದೆ. ಆಟೋ ಪ್ರಯಾಣದ ದರ ಹೆಚ್ಚಳಕ್ಕೆ ಇದೀಗ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಬೆಂಗಳೂರಿನ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಹೌದು ಆಟೋ ದರ ಏರಿಕೆ ಮಾಡಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇನ್ನು ಅಧಿಕೃತ ಆದೇಶ ಹೊರ ಬೀಳುವುದು ಮಾತ್ರ ಬಾಕಿ ಇದೆ. ಮೇ 13 ರಂದು ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.ಈಗಾಗಲೇ ಅನೇಕ ಅಗತ್ಯ ವಸ್ತುಗಳ ದರ ಏರಿಕೆ ಆಗಿದೆ. ಹೀಗಾಗಿ ಆಟೋ ಮೀಟರ್ ದರ ಏರಿಕೆ ಮಾಡಲು ಜಿಲ್ಲಾಧಿಕಾರಿ ಕೂಡಲೇ ಗ್ರೀನ್ ಸಿಗ್ನಲ್ ನೀಡಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ. ಆಟೋ ಮೀಟರ್ ದರ ಏರಿಕೆ ಮಾಡುವಂತೆ ಕಳೆದ ಮೂರು ವರ್ಷಗಳಿಂದ ಆಟೋ ಚಾಲಕ ಹಾಗೂ ಮಾಲೀಕರ ಸಂಘಟನೆಗಳು…

Read More

ಬೆಂಗಳೂರು : ಇತ್ತೀಚಿಗೆ ಈ ಹೃದಯಾಘಾತ ಅನ್ನುವುದು ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಸಾಮಾನ್ಯ ಕಾಯಿಲೆಯಂತೆ ಆಗಿಬಿಟ್ಟಿದೆ. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಈ ಹೃದಯ ಸಂಬಂಧಿ ಕಾಯಿಲೆಗೆ ಏನು ಕಾರಣ ಅನ್ನೋದು ತಜ್ಞರು ಇದೀಗ ಬಹಿರಂಗಪಡಿಸಿದ್ದಾರೆ. ಮನೆಯಲ್ಲಿ ಪಾಲಿಶ್ ಮಾಡುವ ಅಕ್ಕಿ ಸೇವನೆಯಿಂದ ಈ ಒಂದು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ ಎಂದು ಅಘಾತಕಾರಿ ಅಂಶವನ್ನು ತಜ್ಞರು ಬಹಿರಂಗಪಡಿಸಿದ್ದಾರೆ. ಹೌದು ದಿನನಿತ್ಯದ ನಮ್ಮ ಆಹಾರ ಪದ್ಧತಿಯಲ್ಲಿ ಆರೋಗ್ಯ ಕುತ್ತು ತರುವ ಅನೇಕ ತಿನಿಸು,‌ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದೇವೆ. ಅದರಲ್ಲೂ ಅನ್ನ ಎಲ್ಲ ಮನೆಗಳಲ್ಲಿ ಸಾಮಾನ್ಯವಾಗಿ ದಿನನಿತ್ಯ ಸೇವಿಸುವ ಒಂದು ಆಹಾರವಾಗಿದೆ. ಬಿಳಿ ಅಕ್ಕಿಯಲ್ಲೇ ಬಗೆ ಬಗೆಯ ಅಡುಗೆ ಮಾಡಿ ಸೇವಿಸಲಾಗುತ್ತದೆ. ಈ ಬೆನ್ನಲ್ಲೇ ಇದೀಗ ಈ ಬಿಳಿ ಪಾಲಿಶ್ ಅಕ್ಕಿ ಸೇವಿಸುವವರು ಎಚ್ಚರದಿಂದ ಇರಬೇಕಾದ ಪರಿಸ್ಥಿತಿ ಬಂದಿದೆ. ಏಕೆಂದರೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಇದೇ ಪಾಲಿಶ್ ಅಕ್ಕಿ ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ಇತ್ತೀಚಿಗೆ ಪುಟ್ಟ ಮಕ್ಕಳಿಗೂ ಕೂಡ ಹೃದಯ…

Read More

ಮಡಿಕೇರಿ : ಮಡಿಕೇರಿಯಲ್ಲಿ ಅಡುಗೆ ಅನೀಲ ಸೋರಿಕೆಯಾಗಿ ಗ್ಯಾಸ್ ಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮನೆಯಲ್ಲಿದ್ದ ದಂಪತಿಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪರಾಗಿರುವ ಘಟನೆ ಮಡಿಕೇರಿಯ ಸುಂಟಿಕೊಪ್ಪದಲ್ಲಿ ನಿನ್ನೆ ನಡೆದಿದೆ. ಸುಂಟಿಕೊಪ್ಪ 1ನೇ ವಿಭಾಗದ ನಿವಾಸಿಗಳಾದ ತಲೆ ಹೊರೆ ಕಾರ್ಮಿಕ ವಿಜಯ, ಅವರ ಪತ್ನಿ ಸಾವಿತ್ರಿ ಮನೆಯ ಅಡುಗೆ ಕೆಲಸ ನಿರ್ವಹಿಸುತ್ತಿದ್ದ‌ ವೇಳೆ ಅನಿಲ ಸೋರಿಕೆಯಾಗಿ ಏಕಾಏಕಿ ಸಿಲಿಂಡರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಪ್ರಯತ್ನಿಸಿದ ವೇಳೆ ಈ ದಂಪತಿಗಳಿಗೆ ಗಾಯವಾಗಿದೆ. ಬೆಂಕಿ ಗಮನಿಸಿದ ಅಕ್ಕಪಕ್ಕದವರು ಸಿಲಿಂಡರ್ ಗಾಬರಿಯಿಂದ ಹೊರ ಹಾಕಿದ್ದಾರೆ. ಬಳಿಕ ದಂಪತಿಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Read More

ಬೆಂಗಳೂರು : ಜನಗಣತಿ ಜೊತೆಯಲ್ಲಿ ಜಾತಿ ಗಣತಿಯನ್ನೂ ನಡೆಸುವ ಕೇಂದ್ರ ಸರ್ಕಾರದ ತೀರ್ಮಾನವನ್ನು ನಮ್ಮ ಸರ್ಕಾರ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ. ಇದೇ ಸಂದರ್ಭದಲ್ಲಿ ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗ್ರಹಪಡಿಸಿದ್ದಾರೆ. ಈ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಜನಗಣತಿ ಜೊತೆಯಲ್ಲಿ ಜಾತಿ ಗಣತಿಯನ್ನೂ ನಡೆಸುವ ಕೇಂದ್ರ ಬಿಜೆಪಿ ಸರ್ಕಾರದ ತೀರ್ಮಾನವನ್ನು ನಮ್ಮ ಸರ್ಕಾರ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ. ಇದೇ ಸಂದರ್ಭದಲ್ಲಿ ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕೆಂದು ನರೇಂದ್ರಮೋದಿ ಅವರ ಸರ್ಕಾರವನ್ನು ಆಗ್ರಹಪಡಿಸುತ್ತಿದ್ದೇನೆ. ಕರ್ನಾಟಕದಲ್ಲಿ ನಾವು ಕೇವಲ ಜಾತಿ ಗಣತಿ ನಡೆಸದೆ ಅದರ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಯನ್ನು ನಡೆಸಿದ್ದೇವೆ. ಈ ದತ್ತಾಂಶಗಳ ಆಧಾರದಲ್ಲಿ ಈಗಿನ ಮೀಸಲಾತಿ ನೀತಿಯನ್ನು ಪರಿಷ್ಕರಿಸಿ ಅದರ ಮಿತಿಯನ್ನು ಹೆಚ್ಚಿಸುವ ಪ್ರಯತ್ನ ಕೂಡಾ ನಡೆದಿದೆ. ಜಾತಿ ಗಣತಿಯ ಜೊತೆಯಲ್ಲಿ ಈ…

Read More

ಹಾವೇರಿ : ಹಾವೇರಿಯಲ್ಲಿ ಚಲಿಸುತ್ತಿದ್ದ ಬಸ್ ಅನ್ನು ಸಡನ್ ಆಗಿ ಚಾಲಕ ನಿಲ್ಲಿಸಿ ಹಿಂದುಗಡೆ ಇರುವ ಸೀಟ್ ಗೆ ಬಂದು ನಮಾಜ್ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್-ಹಾವೇರಿ ಮಾರ್ಗದ ಮಧ್ಯದಲ್ಲಿ ನಡೆದಿದೆ. ಈ ಒಂದು ವಿಡಿಯೋವನ್ನು satish_kandagalpura ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಸ್ ಚಾಲಕ ನಮಾಜ್ ಮಾಡುವ ದೃಶ್ಯವನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಭಾರೀ ವೈರಲ್ ಆಗುತ್ತಿದೆ.ಜೊತೆಗೆ, ಸರ್ಕಾರಿ ಕೆಲಸದ ಅವಧಿಯಲ್ಲಿ ಹತ್ತಾರು ಪ್ರಯಾಣಿಕರನ್ನು ಬಸ್‌ನಲ್ಲಿ ಕೂರಿಸಿ ನಮಾಜ್ ಮಾಡಿದ ಡ್ರೈವರ್‌ನ ನಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಾರ್ವಜನಿಕರಿಗೆ ಸೇವೆ ನೀಡುವ ಸರ್ಕಾರಿ ಸಂಸ್ಥೆಯ ಬಸ್‌ನಲ್ಲಿ ಕರ್ತವ್ಯದ ವೇಳೆ ಈ ರೀತಿಯ ಧಾರ್ಮಿಕ ಚಟುವಟಿಕೆಯನ್ನು ಮಾಡುವುದು ಸರಿಯಾದ ಚಟುವಟಿಕೆ ಅಲ್ಲ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಸಾರ್ವಜನಿಕ ಸೇವೆಯ ದುರಪಯೋಗವೆಂದು ನಿಂದಿಸಿದ್ದಾರೆ. ಇದಲ್ಲದೆ, ಬಸ್ ಸಕಾಲದಲ್ಲಿ ತಲುಪದೇ ವಿಳಂಬವಾಗಿರುವ ಬಗ್ಗೆ ಸಹ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸ್‌ ನಲ್ಲಿ ಹಲವು…

Read More

ಕೊಲ್ಕತ್ತಾ : ಕೋಲ್ಕತ್ತಾದ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಫಾಲ್ಪಟ್ಟಿ ಮಚುವಾ ಬಳಿ ಇರುವ 6 ಅಂತಸ್ತಿನ ರಿತುರಾಜ್ ಹೋಟೆಲ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 14 ಜನರು ಸಜೀವ ದಹನ ಹೊಂದಿದ್ದಾರೆ. ಈಗಾಗಲೇ ಅಗ್ನಿ ಶಾಮಕ ಸಿಬ್ಬಂದಿಗಳು ಆಗಮಿಸಿ 14 ಮೃತ ದೇಹಗಳನ್ನು ಹೊರಗರೇ ತೆಗೆದಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲ್ ನಲ್ಲಿ ಹಲವರು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದರೆ, ಬೆಂಕಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಕಟ್ಟಡದಿಂದ ಬಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಗರದ ಬುರ್ರಬಜಾರ್ ಪ್ರದೇಶದ ಮದನ್ಮೋಹನ್ ಬೀದಿಯಲ್ಲಿರುವ ಋತುರಾಜ್ ಹೋಟೆಲ್‌ನಲ್ಲಿ ಸಂಜೆ 7:30 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಹತ್ತು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಬುಧವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

Read More

ಬೆಂಗಳೂರು : ಕಳೆದ ಏಪ್ರಿಲ್ 13 ರಂದು ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಬಿಹಾರ್ ಮೂಲದ ರಿತೇಶ್ ಎಂಬ ಆರೋಪಿ ಕಿಡ್ನ್ಯಾಪ್ ಮಾಡಿ ಅತ್ಯಾಚಾರಗೈದು ಕೊಲೆ ಮಾಡಿದ್ದ. ಬಳಿಕ ಆತನನ್ನು ಬಂಧಿಸಲು ಹೋದಾಗ ಆರೋಪಿ ರಿತೇಶ್ ಪೊಲೀಸರ ಎನ್ಕೌಂಟರ್ ಗೆ ಬಲಿಯಾಗಿದ್ದ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದು, ಸಂತ್ರಸ್ತೆಯ ಹಾಗೂ ಆರೋಪಿ ಆರೋಪಿಯ ಮರಣೋತ್ತರ ಪರೀಕ್ಷೆ ವರದಿ ಮ್ಯಾಜಿಸ್ಟ್ರಿರಿಯಲ್ ತನಿಖಾವರದಿ ಸೇರಿದಂತೆ ಒಟ್ಟಾರೆಯಾಗಿ ಎಲ್ಲಾ ವರದಿಯನ್ನು ನಾಲ್ಕು ವಾರದೊಳಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ. ಕಳೆದ ಏಪ್ರಿಲ್ 13 ರಂದು 5 ವರ್ಷದ ಬಾಲಕಿಯನ್ನು ಬಿಹಾರ್ ಮೂಲದ ರಿತೇಶ್ ಎಂಬ ಆರೋಪಿ ಅಪಹರಣ ಮಾಡಿ ಬಳಿಕ ಅತ್ಯಾಚಾರ ಎಸಗಿದ್ದ.…

Read More

ಮೈಸೂರು : ಜಮೀನು ಸರ್ವೆ ಮಾಡಲು ಎಂದು ತೆರಳಿದ ಇಲಾಖೆಯ ಇಬ್ಬರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ. ಬೆಟ್ಟದಬೀಡು ಗ್ರಾಮದಲ್ಲಿ ಇಲಾಖೆಯ ಇಬ್ಬರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಬೆಟ್ಟದ ಬಿಡು ಗ್ರಾಮದಲ್ಲಿ ಈ ಘಟನೆ ನಡೆದಿ. ಜಮೀನು ಸರ್ವೆಗೆ ಎಂದು ಸಿಬ್ಬಂದಿಗಳು ತೆರಳಿದ್ದರು. ಇಲಾಖೆ ಸಿಬ್ಬಂದಿಗಳಾದ ಮಂಜುನಾಥ ಹಾಗೂ ಇನ್ನೊರ್ವ ಸಿಬ್ಬಂದಿಯ ಮೇಲೆ ಗ್ರಾಮದ ಶಿವಣ್ಣೇಗೌಡ ಸ್ವಾಮಿಗೌಡ ಸಹೋದರ ವಿರುದ್ಧ ಇದೀಗ ಹಲ್ಲೆಯ ಆರೋಪ ಕೇಳಿ ಬಂದಿದೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಮೊಬೈಲ್ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸರ್ವೇ ನಂಬರ್ 32ರ ಜಮೀನು ಸರ್ವೆ ನಡೆಸಿ ಜಾಗ ಗುರುತಿಸಲು ತೆರಳಿದ್ದಾಗ ಇಬ್ಬರು ಸಹೋದರರು ಹಲ್ಲೆ ಮಾಡಿದ್ದಾರೆ. ಇಬ್ಬರು ಸಿಬ್ಬಂದಿಗಳ ಮುಖ ಮತ್ತು ಎದೆಯ ಭಾಗಕ್ಕೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಇಬ್ಬರಿಗೂ ಎಚ್ ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಎಚ್ ಡಿ…

Read More