Author: kannadanewsnow05

ಬೆಳಗಾವಿ : ಇತ್ತೀಚಿಗೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಬಾಣಂತಿಯರ ಸಾವು ಪ್ರಕರಣ ಬಾರಿ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಬೆಳಗಾವಿಯಲ್ಲಿ ಇದೀಗ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಹಸಿವಿನಿಂದ ನವಜಾತ ಶಿಶುವನ್ನು ಸಾವನ್ನಪ್ಪಿದೆ. ಇದರ ಬೆನ್ನಲ್ಲೇ ಬಾಣಂತಿ ಹಾಗೂ ಆಕೆಯ ಅತ್ತೆ ಆಸ್ಪತ್ರೆಯಿಂದ ಪರಾರಿಯಾಗಿರುವ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಹೌದು ನವಜಾತ ಶಿಶುವನ್ನು ಬಿಟ್ಟು ಪರಾರಿಯಾದ ತಾಯಿಯನ್ನು ಬಿಬಿಜಾನ್ ಸದ್ದಾಂ ಸಯ್ಯದ್ (28) ಸೇರಿದ್ದ ನವಜಾತ ಶಿಶು ಎಂದು ತಿಳಿದುಬಂದಿದೆ.ಕಳೆದ ಡಿಸೆಂಬರ್ ‌8 ರಂದು ಮಧ್ಯಾಹ್ನ ‌12ಕ್ಕೆ ಅತ್ತೆ ಜೊತೆಗೆ ಬಂದ ಗರ್ಭಿಣಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ರಾತ್ರಿ 9.30 ಕ್ಕೆ ಬೆಳಗಾವಿ ‌ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಅವಧಿ ಪೂರ್ವ ಹೆರಿಗೆ ಹಿನ್ನೆಲೆಯಲ್ಲಿ ಮಗು ಒಂದೂವರೆ ಕೆಜಿ ತೂಕ ಇತ್ತು. ತೂಕ ಕಡಿಮೆ ಆಗಿರುವ ಕಾರಣಕ್ಕೆ ವೈದ್ಯರು ಮಗುವನ್ನು ‌ಎನ್‌ಐಸಿಯುಗೆ ದಾಖಲಿಸಿ‌ ಚಿಕಿತ್ಸೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ತಾಯಿಯದವಳು ಶಿಶು ಎನ್‌ಐಸಿಯುಗೆ ಶಿಫ್ಟ್ ‌ಮಾಡಿದ ಬಳಿಕ ಆರೈಕೆ…

Read More

ಬೆಳಗಾವಿ : ಇತ್ತೀಚಿಗೆ ಪಿಎಸ್ಐ ಹುದ್ದೆಗಳಿಗೆ ಪರೀಕ್ಷೆ ನಡೆದಿದ್ದು, ಆಯ್ಕೆಯಾದ ಅಭ್ಯರ್ಥಿಗಳ ನೇಮಕಾತಿ ವಿಳಂಬವಾಗಿರುವ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಪಿಎಸ್ಐ ಆಯ್ಕೆಯಾದವರಿಗೆ ನೇಮಕಾತಿ ಪತ್ರ ವಿಳಂಬವಾಗಿರುವ ವಿಚಾರವಾಗಿ ಅಧಿವೇಶನದ ಬಳಿಕ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು. ಈ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಅವರು, ಈ ಹಿಂದೆ 565 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಹಗರಣ ನಡೆದಿತ್ತು. ಮರು ಪರೀಕ್ಷೆ ಮಾಡಿ ಈಗ ವೆರಿಫಿಕೇಶನ್ ಮಾಡಲಾಗುತ್ತಿದೆ.ಅಧಿವೇಶನದ ಬಳಿಕ ಆಯ್ಕೆಯಾದವರಿಗೆ ಆದೇಶ ಪತ್ರ ನೀಡುತ್ತೇವೆ. ಅಲ್ಲದೇ ಹೊಸದಾಗಿ ಇನ್ನು 402 ಪಿ.ಎಸ್.ಐ ನೇಮಕಾತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Read More

ಬೆಳಗಾವಿ : ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಇದೀಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಿಹಿ ಸುದ್ದಿಯೊಂದನ್ನು ನೀಡಿದ್ದು ಪ್ರೌಢಶಾಲಾ ಸಹ ಶಿಕ್ಷಕರಿಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಬರುವ 2025ರ ಫೆಬ್ರವರಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯಲ್ಲಿ ಎಸ್ ವಿ ಸಂಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ 2013ನೇ ಸಾಲಿನವರೆಗೆ ಪದೋನ್ನತಿ ಪ್ರಕ್ರಿಯೆ ನಡೆಸಲಾಗಿದೆ. ಪದೋನ್ನತಿ ಪ್ರಕ್ರಿಯೆ ನಡೆಸುವ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಒಂದೇ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸುವ ಬಗ್ಗೆ ಮಾರ್ಗದರ್ಶನ ಕೋರಿ 2024ರ ಫೆಬ್ರವರಿ ಮತ್ತು ಮಾರ್ಚ್ ಮಾಸದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ)ಯ ಆಯುಕ್ತರು ಹಾಗೂ ಏಪ್ರಿಲ್ ಮಾಹೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯಮಟ್ಟದ ಪ್ರೌಢಶಾಲಾ ಸಹ ಶಿಕ್ಷಕರ ಒಂದೇ ಜ್ಯೇಷ್ಠತಾ…

Read More

ಬೆಂಗಳೂರು : ರೈಲ್ವೆ ಇಲಾಖೆಯಲ್ಲಿ ಟಿಕೆಟ್‌ ಕಲೆಕ್ಟರ್ ಕೆಲಸ ಕೊಡಿಸುವುದಾಗಿ ಹೇಳಿ ಖದೀಮರು ಉದ್ಯೋಗಾಕಾಂಕ್ಷಿಗಳ ಬಳಿ ಲಕ್ಷ ಲಕ್ಷ ಹಣ ವಂಚಿಸಿರುವ ಘಟನೆ ನಡೆದಿದ್ದು, ಈ ಕುರಿತಂತೆ ವಂಚನೆಗೆ ಒಳಗಾದಂತ ಅಭ್ಯರ್ಥಿಗಳು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಟಿಸಿ ಹುದ್ದೆ ಕೊಡಿಸುವುದಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಇದನ್ನೇ ನಂಬಿದ್ದ ವಿಜಯಪುರದ ಹುಸನಪ್ಪ ಮಾಡ್ಯಾಳ್, ಶಿವಕುಮಾರ್, ಅಶೋಕ್ ಹಾಗೂ ಇತರರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬಳಿಕ ಬೆಂಗಳೂರು, ವಿಜಯಪುರ ಸೇರಿ ಹಲವು ಕಡೆ ಕರೆಸಿ ಖದೀಮರು ಒಬ್ಬೊಬರಿಂದ ಹಂತಹಂತವಾಗಿ 20 ರಿಂದ 25 ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ. ಹಣ ಪಡೆದುಕೊಂಡು ಆನ್‌ಲೈನ್‌ ಮೂಲಕ ನಕಲಿ ಟ್ರೈನಿಂಗ್‌ ಆರ್ಡರ್‌ ಕಾಫಿ ಕೂಡ ಕೊಟ್ಟಿದ್ದರು. ನಂತರ ಮುಂಬೈ ಹಾಗೂ ಕಾನ್ಪುರದಲ್ಲಿ ಫೇಕ್‌ ಟ್ರೈನಿಂಗ್ ಕೂಡ ಕೊಡಿಸಿದ್ದರು. ಟ್ರೈನಿಂಗ್ ಮುಗಿದ ಕೆಲ ದಿನಗಳ ನಂತರ ಡ್ಯೂಟಿಗೆ ಜಾಯಿನ್ ಆಗಲು ಹೇಳಿದ್ದಾರೆ. ಕೆಲಸ ಸಿಕ್ಕೇ ಬಿಡ್ತು ಎಂಬ ಖುಷಿಯಲ್ಲಿದ್ದರಿಗೆ ತಿಂಗಳು ಉರುಳಿದ್ರು ನೇಮಕಾತಿ ಪತ್ರ ಬರಲಿಲ್ಲ.…

Read More

ಶಿವಮೊಗ್ಗ : ಇತ್ತೀಚಿಗೆ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಹೈವೇ ಪೆಟ್ರೋಲ್ ವಾಹನದ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಒಬ್ಬರು ಕರ್ತವ್ಯ ನಿರ್ವಹಿಸುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಪರಶುರಾಮ್ (43) ಎಂದು ತಿಳಿದುಬಂದಿದೆ. ಶಿವಮೊಗ್ಗಕ್ಕೆ ಕಾರ್ಯ ನಿಮ್ಮಿತ್ತ ಹೋಗಿದ್ದ ಸಂದರ್ಭದಲ್ಲಿ ಹೃದಯಘಾತ ಸಂಭವಿಸಿ ಮೃತಪಟ್ಟಿದ್ದಾರೆ.2005 ರ ಬ್ಯಾಚ್ ನಲ್ಲಿ ಪೊಲೀಸ್ ಕೆಲಸಕ್ಕೆ ಸೇರಿದ್ದರು. ತೀರ್ಥಹಳ್ಳಿಯಲ್ಲಿ ಹೈವೇ ಪೆಟ್ರೋಲ್ ವಾಹನದ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು.

Read More

ಬಾಗಲಕೋಟೆ : ಬಿಜೆಪಿ ಸರ್ಕಾರದಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದ ಸಮಯದಲ್ಲಿ 2ಎ ಮೀಸಲಾತಿ ಸಮಾಜಕ್ಕೆ ಒದಗಿಸಿಕೊಟ್ಟರೆ ಸಹೋದರಿ, ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರು ಬೆಳಗಾವಿಯಿಂದ ಕುಂದಾ ತಂದು, ಬಂಗಾರದ ಕಿರೀಟ ಹಾಕುವುದಾಗಿ ಹೇಳಿಕೆ ನೀಡಿದ್ದೀರಿ. ಇಂದು ನೀವು ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಒದಗಿಸಿ ಕೊಟ್ಟರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ 1 ಕೆಜಿ ಬಂಗಾರ ನೀಡುವ ಜೊತೆಗೆ ಬೆಳಗಾವಿ ಜಿಲ್ಲೆಯಾದ್ಯಂತ ರಥದ ಮೇಲೆ ಮೆರವಣಿಗೆ ಮಾಡುವುದಾಗಿ ಬಿಜೆಪಿಯ ಮಾಜಿ ಸಚಿವ ಮುರುಗೇಶ್ ನಿರಾಣಿ ವಾಗ್ದಾನ ಮಾಡಿದರು. ಇಂದು ಬೆಳಗಾವಿ ಸುವರ್ಣಸೌಧ ಮುಂದೆ ಪಂಚಮಸಾಲಿಗರ ಮೇಲೆ ಪೊಲೀಸರು ಲಾಠಿ ಜಾರ್ಜ್‌ ಮಾಡಿದ್ದನ್ನು ಖಂಡಿಸಿ ಬಾಗಲಕೋಟೆ ಶಿರೂರ ಅಗಸಿ ಬಳಿ ಪಂಚಮಸಾಲಿ ಸಮಾಜದಿಂದ ನಡೆದ ರಸ್ತೆ ತಡೆ, ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿದರೆ ಸಮಾಜದ ಋಣ ತೀರಿಸಿದಂತೆ ಆಗುತ್ತದೆ ಎಂದು ತಿರುಗೇಟು ನೀಡಿದರು. ಬಹಳ ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದ್ದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ…

Read More

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11ಕೆ.ವಿ ರೆಮಕೊ ಸ್ಟೇಷನ್ ನಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ: 14.12.2024 (ಶನಿವಾರ) ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮೈಸೂರು ರೋಡ 7ನೇ ಅಡ್ಡರಸ್ತೆ, ಶ್ಯಾಮಣ್ಣ ಗಾರ್ಡನ, ಮಂಜುನಾಥ ನಗರ, ಪೈಪಲೈನ್, ಸಂತೋಷ ಟೆಂಟ, ಅನಂತ ರಾಮಯ್ಯ ಕಂಪೋಂಡ್, ಹೊಸ ಮತ್ತು ಹಳೆ ಗುಡ್ಡದ ಹಳ್ಳಿ, ಕುವೆಂಪುನಗರ, 6ನೆ ಮತ್ತು 4ನೆ ಮೈಸೂರು ರೋಡ ಅಡ್ಡರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 66/11ಕೆ.ವಿ ‘ಸಿ’ ಸ್ಟೇಷನ್ ನಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ ದಿನಾಂಕ: 14.12.2024 (ಶನಿವಾರ) ಮತ್ತು ದಿನಾಂಕ: 15.12.2024 (ಭಾನುವಾರ) ರಂದು ಬೆಳಗ್ಗೆ 05:00 ರಿಂದ ಮಧ್ಯಾಹ್ನ 09:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಬೆನ್ಸನ್ ಟೌನ್, ಶಿವಾಜಿನಗರ, ವಸಂತ ನಗರ, ಎಸ್.ಜಿ.ರಸ್ತೆ, ಟಾಸ್ಕರ್ ಟೌನ್, ಪಿ.ಜಿ.ಹಳ್ಳಿ, ಚಂದ್ರಯ್ಯ & ಕ್ವೀನ್ಸ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ…

Read More

ಯಾದಗಿರಿ : ಅಂತರ್ಜಾತಿ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಗ್ರಾಮದ ಸಂಗೀತ ಹಾಗೂ ನಿಂಗಪ್ಪ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಸಂಗೀತಾ ಸಹವಾಸ ಬಿಡುವಂತೆ ನಿಂಗಪ್ಪಗೆ ಸಂಗೀತಾ ಕುಟುಂಬಸ್ಥರು ತಾಕಿತು ಮಾಡಿದ್ದರು.ಆನಂತರ ಸಂಗೀತಾಳೊಂದಿಗೆ ನಿಂಗಪ್ಪ ಅಂತರ ಕಾಯ್ದುಕೊಂಡಿದ್ದ. ಆದರೆ ನಿಂಗಪ್ಪನೊಂದಿಗೆ ಸಂಗೀತ ಓಡಿ ಹೋಗಿದ್ದಳು. ಒಂದು ತಿಂಗಳ ಹಿಂದೆ ಓಡಿ ಹೋಗಿ ಇಬ್ಬರು ಗುಜರಾತ್ ನಲ್ಲಿ ವಾಸವಿದ್ದರು. ಬಳಿಕ ನ್ಯಾಯ ಪಂಚಾಯಿತಿ ಮಾಡಿದ ನಂತರ ಆಕೆಯನ್ನು ಮನೆಗೆ ಕಳುಹಿಸಲಾಗಿತ್ತು. ನಂತರ ಕೂಲಿ ಕೆಲಸಕ್ಕಾಗಿ ಯುವಕ ನಿಂಗಪ್ಪ ಚಿತ್ತಾಪುರಕ್ಕೆ ತೆರಳಿದ್ದಾನೆ. ಈ ವೇಳೆ ಸಂಗೀತ ನಿಂಗಪ್ಪನಿಗೆ ಕರೆ ಮಾಡಿ ಮತ್ತೆ ಪರಾರಿಯಾಗಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಸಂಗೀತ ಕುಟುಂಬಸ್ಥರು ಯುವಕ ನಿಂಗಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ನಿಂಗಪ್ಪನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಯಾದಗಿರಿ…

Read More

ಕಲಬುರ್ಗಿ : ಕಲ್ಬುರ್ಗಿಯಲ್ಲಿ ಭೀಕರವಾದಂತಹ ಅಪಘಾತ ನಡೆದಿದ್ದು ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಚಲಿಸುತ್ತಿದ್ದ ದಂಪತಿಗಳು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಕಲಬುರ್ಗಿ ನಗರದ ಹೊರವಲಯದ ಬೀದರ್ ರಸ್ತೆಯ ಸ್ವಾಮಿ ಸಮರ್ಥ ದೇವಸ್ಥಾನದ ಬಳಿ ನಡೆದಿದೆ. ನಿನ್ನೆ ಈ ಒಂದು ಅಪಘಾತ ನಡೆದಿದ್ದು, ಮೃತರನ್ನು ಮಹಮದ್ ಶೇಕಿಬ್ ಜಿಲ್ಹಾನಿ (32), ಶೇರಿನ್‌ ಶೆಕಿಬ್ (28) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.ಕಾರು ಹುಮನಾಬಾದ್ ಕಡೆಯಿಂದ ಕಲಬುರಗಿ ಕಡೆಗೆ ಬರುತ್ತಿತ್ತು, ಕಲಬುರಗಿಯಿಂದ ಹುಮನಾದ್ ಕಡೆಗೆ ತೆರಳುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಕುರಿತಂತೆ ಸಂಚಾರಿ ಪೊಲೀಸ್ ಠಾಣೆ ಎರಡರಲ್ಲಿ ಪ್ರಕರಣ ದಾಖಲಾಗಿದೆ.

Read More

ತುಮಕೂರು : ಕೃಷಿ ಹೊಂಡವೊಂದರಲ್ಲಿ ಸೋಡಿಯಂ ಮೆಟಲ್ ಬಳಸಿಕೊಂಡು, ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡ್ರೋನ್ ಪ್ರತಾಪ್ ಹಾಗೂ ಕೃಷಿ ಹೊಂಡ ಜಮೀನು ಮಾಲಿಕನ ವಿರುದ್ಧ ಇದೀಗ ಮಿಡಿಗೇಶಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಡ್ರೋನ್ ಪ್ರತಾಪ್ ಅವರನ್ನು ಅರೆಸ್ಟ್ ಮಾಡಿದ್ದು, ಡ್ರೋನ್ ಪ್ರತಾಪ ರನ್ನು ಘಟನಾ ಸ್ಥಳಕ್ಕೆ ಪೊಲೀಸರು ಇದೀಗ ಕರೆ ತರಲಿದ್ದಾರೆ. ಮಧುಗಿರಿ ತಾಲೂಕಿನ ಜನಕಲೋಟಿ ಗೆ ಪೊಲೀಸರು ಪ್ರತಾಪ್ ಅವರನ್ನು ಕರೆ ತರಲಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಇಟ್ಟಕಲೋಟಿ ಗ್ರಾಮದ ಸ್ಫೋಟದ ಸ್ಥಳಕ್ಕೆ ಡ್ರೋನ್ ಪ್ರತಾಪ್ ಕರೆ ತಂದು ಮಹಜರು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಜನಕಲೋಟಿ ಬಳಿ ಕೃಷಿ ಹೊಂಡಕ್ಕೆ ಪ್ರತಾಪ್ ಸೋಡಿಯಂ ಎಸೆದು ಸ್ಪೋತಿಸಿದ್ದ. ಶ್ರೀರಾಯರ ಬೃಂದಾವನ ಫಾರ್ಮ್ಸ್ ನಲ್ಲಿರುವ ಕೃಷಿಹೊಂಡದಲ್ಲಿ ಡ್ರೋನ್ ಪ್ರತಾಪ್ ಸ್ಪೋಟಗೊಳಿಸಿದ್ದ, ಇದೀಗ ಪ್ರತಾಪ್ ಭೂಮಿ ಮಾಲಿಕ ಜಿತೇಂದ್ರ ಕುಮಾರ್ ಜೈನ ವಿರುದ್ಧ ಇದೀಗ FIR ದಾಖಲಾಗಿದೆ. ಪ್ರಕರಣ ಹಿನ್ನೆಲೆ ಮಧುಗಿರಿ ತಾಲೂಕಿನ ಜನಕಲೋಟಿ…

Read More