Author: kannadanewsnow05

ಬೆಂಗಳೂರು : ಸಂಗೀತ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮ್ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದೆ.ಕರ್ನಾಟಕ ರಕ್ಷಣಾ ವೇದಿಕೆ ನೀಡಿದ ದೂರಿನ ಮೇರೆಗೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಈ ವಿಚಾರವಾಗಿ ಸೋನು ನಿಗಮ್ ಮೊದಲ ಪ್ರತಿಕ್ರಿಯೆ ನೀಡಿದ್ದು, ಕನ್ನಡ ಹಾಡು ಅನ್ನೋದಕ್ಕೂ ಬೆದರಿಕೆ ಹಾಕುವುದಕ್ಕೂ ತುಂಬಾ ವ್ಯತ್ಯಾಸವಿದೆ. ಅವರು ನನಗೆ ಬೆದರಿಕೆ ಒಡ್ಡಿದ್ದರು. ಎಲ್ಲಾ ಕಡೆಯೂ ಇಂತಹ ನಾಲ್ಕರಿಂದ ಐದು ಕೆಟ್ಟ ಮಂದಿ ಇದ್ದೇ ಇರುತ್ತಾರೆ. ಅವರು ಬೆದರಿಕೆ ಒಡ್ಡುವ ರೀತಿಯಲ್ಲಿ ಹಾಡುವಂತೆ ಕೇಳಿದರು. ಕಾಶ್ಮೀರದಲ್ಲಿ ಉಗ್ರರು ಭಾಷೆ ಕೇಳಲಿಲ್ಲ ಜಾತಿ ಕೇಳಿ ಕೊಂದರು. ಹಾಗಾಗಿ ನಾನು ಪಹಲ್ಗಾಮ್ ಘಟನೆಯನ್ನು ಉದಾಹರಣೆಯಾಗಿ ಹೇಳಿದೆ ಅಷ್ಟೇ ಎಂದು ತಿಳಿಸಿದರು. ಘಟನೆ ಹಿನ್ನೆಲೆ? ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಏಪ್ರಿಲ್ 25-26ರಂದು ನಡೆದ ಸಂಗೀತ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಮತ್ತು ಭಾವನಾತ್ಮಕವಾಗಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು. ಯುವಕನೊಬ್ಬ ಕನ್ನಡ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಪಿಜಿ ಯುವತಿಯೊಬ್ಬಳು ನಗ್ನ lವಾಗಿ ಹಾಡಹಗಲೇ ಯುವತಿ ರಸ್ತೆಯಲ್ಲಿ ಓಡಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಅಕ್ರಮ ಪಿಜಿಗಳಲ್ಲಿ ಅನಾಗರಿಕ ವರ್ತನೆ ಕಂಡುಬಂದಿದ್ದು, ಹಾಡಹಗಲೆ ರಸ್ತೆಯಲ್ಲಿ ಯುವತಿ ನಗ್ನವಾಗಿ ಓಡಾಟ ನಡೆಸಿದ್ದಾಳೆ. ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದೆ. ಅಕ್ರಮ ಪಿಜಿಗಳ ಪುಂಡಾಟಕ್ಕೆ ಸ್ಥಳೀಯ ಜನರು ಬೇಸತ್ತು ಹೋಗಿದ್ದಾರೆ. ನಗ್ನವಾಗಿ ರಸ್ತೆಯಲ್ಲಿಯೇ ಪಿಜಿ ಯುವತಿ ಓಡಾಡಿದ್ದಾಳೆ. ಬಿಬಿಎಂಪಿ ಮತ್ತು ಬೆಸ್ಕಾಂ ಹಾಗೂ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಲಾಗಿದೆ. ಸ್ಥಳೀಯ ನಿವಾಸಿಗಳು ದೂರು ನೀಡಿದರು ಕೂಡ ಪಿ ಜಿ ಹಾಗೂ ಯುವತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಬಿಎಂಪಿ ಮತ್ತು ಪೊಲೀಸರ ವಿರುದ್ಧ ಸ್ಥಳೀಯ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕೊಲೆಗಳು ನಡೆಯುತ್ತಿದ್ದು ಇದೀಗ ಬೆಂಗಳೂರಿನಲ್ಲಿ ವಕೀಲರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಕೊಚ್ಚಿ ಕೊಂದಿರುವ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ. ಹತ್ಯೆಯಾದ ವಕೀಲರನ್ನು ಕೆಂಗೇರಿಯ ಎಸ್‌‍ಎಂವಿ ಲೇಔಟ್‌ ನಿವಾಸಿ ಜಗದೀಶ್‌ (46) ಎಂದು ತಿಳಿದುಬಂದಿದೆ.ಕೆಂಗೇರಿಯ ಸಿವಿ ರಾಮನ್‌ ಎಸ್ಟೇಟ್‌ ಪಕ್ಕದ ನೈಸ್‌‍ ರಸ್ತೆಯಲ್ಲಿ ಜಗದೀಶ್‌ ರವರ ಕಾರು ಚಲಿಸುತ್ತಿದ್ದಾಗ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಹೋಗಿ ತಮ್ಮ ವಾಹನದಿಂದ ಕಾರಿಗೆ ಡಿಕ್ಕಿ ಹೊಡೆಸಿದ್ದಾರೆ. ಈ ವೇಳೆ ಜಗದೀಶ್ ಕಾರಿಗೆ ಏನು ಆಯಿತು ಎಂದು ಕೆಳಗಡೆ ಇಳಿದಿದ್ದಾರೆ. ಇದೆ ವೇಳೆ ಮಾರಕಾಸ್ತ್ರಗಳಿಂದ ಜಗದೀಶ್ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಜಗದೀಶ್ ಅವರು ಪರಾರಿಯಾಗಿದ್ದಾರೆ. ಆದರೂ ಬಿಡದೆ ಅವರನ್ನು ಬೆನ್ನಟ್ಟಿ ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ತಲೆಗೆ ಬಲವಾಗಿ ಹೊಡೆದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Read More

ಚೈನ್ನೈ : ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿದ ಆರು ಜನ ಉಗ್ರರು ಚೆನ್ನೈನ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೌದು ಉಗ್ರರು ಚೈನ್ನೈ ವಿಮಾನದಲ್ಲಿ ಪ್ರತ್ಯಕ್ಷವಾದ ಬಗ್ಗೆ ಭಾರತದಿಂದ ಮಾಹಿತಿ ತಿಳಿದು ಬಂದಿದೆ. ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಒಂದು ಗುಡಿನ ದಾಳಿಯಲ್ಲಿ 26 ಅಮಾಯಕರು ಬಲಿಯಾಗಿದ್ದರು. ಈ ಮಾಹಿತಿಯನ್ನು ಶ್ರೀಲಂಕಾ ಸರ್ಕಾರಕ್ಕೆ ಭಾರತ ಸರ್ಕಾರ ನೀಡಿದೆ. ಚೈನ್ನೈ ವಿಮಾನದ ಮೂಲಕ ಶ್ರೀಲಂಕಾಕ್ಕೆ ಪರಾರಿಯಾಗುವ ಯತ್ನದಲ್ಲಿದ್ದಾರೆ ಎಂದು ಭಾರತ ಶ್ರೀಲಂಕಾಕ್ಕೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ಕೋಲಂಬೊದ ಬಂಡಾರನಾಯಕೆ ವಿಮಾನ ನಿಲ್ದಾಣದಲ್ಲಿ ಭಾರಿ ತಪಾಸಣೆ ನಡೆಯುತ್ತಿದ್ದು ಲಾಕ್ ಡೌನ್ ಮಾಡಲಾಗಿದೆ. ಉಗ್ರರನ್ನು ಬಂಧಿಸುವ ನಿಟ್ಟಿನಲ್ಲಿ ಕೋಲಂಬೋ ವಿಮಾನ ನಿಲ್ದಾಣ ಲಾಕ್ ಡೌನ್ ಮಾಡಿ ತಪಾಸಣೆ ನಡೆಸಲಾಗುತ್ತಿದೆ.

Read More

ರಾಯಚೂರು : ಸಚಿವ ಶರಣಪ್ರಕಾಶ್ ಪಾಟೀಲ್ ಗೆ ಕಾಂಗ್ರೆಸ್ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಇಂದು ಸಚಿವ ಶರಣಪ್ರಕಾಶ್ ಪಾಟೀಲ್ ಅವರು ರಾಯಚೂರು ಜಿಲ್ಲೆಯ ಲಿಂಗಸೂಗೂರಿಗೆ ಭೇಟಿ ನೀಡಿದ ವೇಳೆ ಕಾಂಗ್ರೆಸ್ ಕಾರ್ಯಕರ್ತ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ಶರಣಪ್ರಕಾಶ್ ಪಾಟೀಲ್ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಇಂದು ಭೇಟಿ ನೀಡಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತ ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರುತ್ತಿರಿ ಅಂತ ಪ್ರಶ್ನಿಸಿದ್ದಾನೆ. ಆಗ ನೀವು ಯಾರು ಕೇಳೋಕೆ ಎಂದು ಸಚಿವರು ಕೇಳಿದ್ದಾರೆ. ಆಗ ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಅಂತ ಶರಣಪ್ರಕಾಶ್ ಪಾಟೀಲ್ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.

Read More

ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ವಿದ್ಯೆ ಹೇಳುವ ಗುರುಗಳು ಎನಿಸಿಕೊಂಡವರು ಹೇಸಿಗೆಯ ಕೃತ್ಯ ಎಸಗುತ್ತಿದ್ದೂ, ಇದೀಗ ದಾವಣಗೆರೆಯಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕನೊಬ್ಬ ನೀನು ಮದುವೆ ಆಗು ಆದರೆ ನನ್ನ ಜೊತೆ ಡೇಟಿಂಗ್ ಮಾಡು ಎಂದು ಅಶ್ಲೀಲವಾಗಿ ಮೆಸೇಜ್ ಕಳುಹಿಸಿರುವ ಘಟನೆ ವರದಿಯಾಗಿದೆ. ಹೌದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಲಿಂಗೇಶ್ವರಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನಾಗಿರುವ ಮುರುಳಿ ಎಂಬಾತ ಬಿಎಸ್ಸಿ ವಿಭಾಗದ ವಿದ್ಯಾರ್ಥಿನಿಗೆ ಕಾಲ್ ಹಾಗೂ ಮೆಸೇಜ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಮುರುಳಿಯು ವಿದ್ಯಾರ್ಥಿನಿಗೆ ಐ ಲವ್ ಯು ಎಂದು ಮೆಸ್ಸೇಜ್ ಮಾಡಿದ್ದಲ್ಲದೆ, ವಿದ್ಯಾರ್ಥಿನಿ ನನಗೆ ಮಾಡುವೆ ಫಿಕ್ಸ್ ಆಗಿದೆ ಎಂದು ಹೇಳಿದರೂ ಕೂಡ ಅವನನ್ನು ಮದುವೆಯಾಗು ನನ್ನ ಜೊತೆ ಡೇಟಿಂಗ್ ಮಾಡು ಎಂದು ಪೀಡಿಸಿದ್ದಾನೆ.ಅಲ್ಲದೇ ಡೇಟಿಂಗ್ ಅಂದ್ರೆ ಏನು ಕೇಳಿದ್ದಕ್ಕೆ ಮದುವೆ ಆಗ್ತಿಯಾ ಅಲ್ವಾ ನಿನಗೆ ಗೊತ್ತಾಗುತ್ತೆ ಎಂದು ಅಸಭ್ಯವಾಗಿ ಮೆಸ್ಸೇಜ್ ಮಾಡಿದ್ದಾನೆ. ಆರೋಪಿ…

Read More

ಸೂರತ್ : ವಡೋದರಾ ರೈಲು ನಿಲ್ದಾಣದಿಂದ ಮುಂಬೈಗೆ ಹೋಗುವ ಎಕ್ಸ್‌ಪ್ರೆಸ್ ರೈಲಿನ ಅಕ್ರಮವಾಗಿ ಪಾರ್ಸೆಲ್ ವ್ಯಾನ್‌ನಲ್ಲಿ ಸಾಗಿಸಲಾಗುತ್ತಿದ್ದ 1,283 ಕೆಜಿ ಗೋಮಾಂಸವನ್ನು ಇದೀಗ ವಡೋದರ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಗೋಲ್ಡನ್ ಟೆಂಪಲ್ ಎಕ್ಸ್‌ಪ್ರೆಸ್‌ನಿಂದ ಮಾಂಸ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಸೂರತ್ ವಿಧಿವಿಜ್ಞಾನ ಪ್ರಯೋಗಾಲಯ ನಡೆಸಿದ ವಿಧಿವಿಜ್ಞಾನ ವಿಶ್ಲೇಷಣೆಯು ವಶಪಡಿಸಿಕೊಂಡ ಮಾಂಸವು ಗೋಮಾಂಸ ಎಂದು ದೃಢಪಡಿಸಿದ ನಂತರ ಶುಕ್ರವಾರ ವರದಿ (ಎಫ್‌ಐಆರ್) ಸಲ್ಲಿಸಲಾಯಿತು. ಪಂಜಾಬ್‌ನ ಅಮೃತಸರದಿಂದ ಸಾಗಿಸಲಾಗುತ್ತಿದ್ದ 1,283 ಕೆಜಿ ಮಾಂಸವನ್ನು ಹೊತ್ತ 16 ಪಾರ್ಸೆಲ್‌ಗಳನ್ನು ರೈಲಿನಿಂದ ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯವು ಅದು ಗೋಮಾಂಸ ಎಂದು ದೃಢಪಡಿಸಿದ ನಂತರ ಶುಕ್ರವಾರ ಸಂಜೆ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಡೋದರಾದ ಪಶ್ಚಿಮ ರೈಲ್ವೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸರೋಜ್ ಕುಮಾರಿ ತಿಳಿಸಿದ್ದಾರೆ. ಪಾರ್ಸೆಲ್‌ಗಳನ್ನು ಕಳುಹಿಸಿದ ಮತ್ತು ಸ್ವೀಕರಿಸಿದ ವಿಜಯ್ ಸಿಂಗ್ ಮತ್ತು ಜಾಫರ್ ಶಬೀರ್ ವಿರುದ್ಧ ಕ್ರಮವಾಗಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ…

Read More

ರಾಮನಗರ : ಕಳೆದ ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಪತ್ರ ಬರೆದು ವಿದ್ಯಾರ್ಥಿಯೋರ್ವ ಮನೆ ಬಿಟ್ಟು ಹೋಗಿದ್ದ ಘಟನೆ ನಡೆದಿತ್ತು. ಇದೀಗ ರಾಮನಗರ ಜಿಲ್ಲೆಯ ಕನಕಪುರದಲ್ಲಿ ಕೂಡ ಅಂತಹ ಘಟನೆ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಯೋರ್ವ 8 ವರ್ಷದ ಬಳಿಕ ನಾನು ಮತ್ತೆ ಬರುತ್ತೇನೆ ನನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು ಮನೆ ಬಿಟ್ಟು ಹೋಗಿದ್ದಾನೆ. ಹೌದು ಕನಕಪುರ ತಾಲೂಕಿನ ದಾಳೇಗೌಡ ಎನ್ನುವವರ ಮಗ ತೇಜಸ್ (14) ಮನೆ ಬಿಟ್ಟು ಹೋದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಈತ ಕನಕಪುರದ ಎಸ್ಎನ್ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದ. ನಾನು ಎಂಟು ವರ್ಷದ ಬಳಿಕ ಮತ್ತೆ ಬರುತ್ತೇನೆ ಎಂದು ಪತ್ರ ಬರೆದಿದ್ದಾನೆ. ರಜೆ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದ ಬಾಲಕ ಏಕಾಏಕಿ ಪತ್ರದಲ್ಲಿ ನಾನು 8 ವರ್ಷದ ಬಳಿಕ ಮತ್ತೆ ಬರುತ್ತೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಅಕಸ್ಮಾತ್ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ನಾನು ಸತ್ತಂತೆ ಎಂದು ಭಾವಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, KSRTC ಬಸ್ ಡಿಕ್ಕಿಯಾಗಿ ಓರ್ವ ಬಾಲಕಿ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಲ್ಲರ ಬಾಣವಾಡಿಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಬೆಂಗಳೂರು ನಿಂದ ಕೆಎಸ್ಆರ್ಟಿಸಿ ಬಸ್ ಹೊರನಾಡಿಗೆ ತೆರಳುತ್ತಿತ್ತು. ಈ ವೇಳೆ ಆಟೋಗೆ ಬಸ್ ಡಿಕ್ಕಿಯಾಗಿದೆ. ಚಾಲಕ ಯೂಟರ್ನ್ ತೆಗೆದುಕೊಳ್ಳುತ್ತಿದ್ದಾಗ ಕೆಎಸ್ಆರ್ಟಿಸಿ ಬಸ್ ಆಟೋಗೆ ಡಿಕ್ಕಿಯಾಗಿದೆ. ಈ ವೇಳೆ ಸಂಬಂಧಿಕರ ಮನೆಗೆ ಆಟೋದಲ್ಲಿ ಒಂದೇ ಕುಟುಂಬದ ಆರು ಜನರು ತೆರಳುತ್ತಿದ್ದರು. ಘಟನೆಯಲ್ಲಿ ಆಟೋ ಚಾಲಕ ಶ್ರೀನಿವಾಸ (40) ಮತ್ತು ಪುಟ್ಟಮ್ಮ (55) ಹಾಗು ಬಾಲಕಿ ವರ್ಷಿಣಿ (13) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಆಟೋದಲ್ಲಿ ತೆರಳುತ್ತಿದ್ದ ಲೇಖನ (11) ಸ್ಥಿತಿ ಗಂಭೀರವಾಗಿದೆ. ತಕ್ಷಣ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಗದಗ : ಗದಗದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿಯೊಂದು ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿಗೆ ಇರುವ ನ್ಯೂ ಮಹಾಂತೇಶ ಬೇಕರಿಯಲ್ಲಿ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು. ಆದರೆ, ಆಗಲೇ ಅಂಗಡಿಯೊಳಗಿನ ಅಪಾರ ಮೌಲ್ಯದ ತಿನಿಸು ಪದಾರ್ಥಗಳು ಹಾಗೂ ಸಾಮಾನುಗಳು ಸುಟ್ಟು ಭಸ್ಮವಾಗಿದ್ದು, ಸುಮಾರು 25 ಲಕ್ಷಕ್ಕೂ ಹೆಚ್ಚು ಹಣದ ಆಸ್ತಿ ನಷ್ಟವಾಗಿದೆ ಎಂಬ ಅಂದಾಜು ಮಾಡಲಾಗಿದೆ. ಘಟನೆ ಕುರಿತು ಮಾಹಿತಿಯನ್ನು ಪಡೆದ ತಕ್ಷಣ ತಹಶೀಲ್ದಾರರಾದ ಪಿ.ಎಸ್. ಯರ್ರಿಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಸಂಬಂಧ ತನಿಖೆ ಆರಂಭಿಸಿದ್ದಾರೆ. ಘಟನೆ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More