Author: kannadanewsnow05

ಬೆಂಗಳೂರು : ಇಷ್ಟು ದಿನ ಖಾಸಗಿ ಎಜೆನ್ಸಿಯವರು 108 ಆಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದ್ದರು. ಆದರೆ ಇನ್ಮುಂದೆ ರಾಜ್ಯದಲ್ಲಿ 108 ಆಂಬುಲೆನ್ಸ್ ಸರ್ವಿಸ್ ರಾಜ್ಯ ಸರ್ಕಾರವೆ ನೀಡುತ್ತದೆ ಎಂದು ಆರೋಗ್ಯ ಸಚವ ದಿನೇಶ್ ಗುಂಡೂರಾವ್ ತಿಳಿಸಿದರು. ಆರೋಗ್ಯ ಇಲಾಖೆಯ ಕುರಿತು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್, ಇನ್ಮುಂದೆ ಸರ್ಕಾರವೇ 108 ಆ್ಯಂಬುಲೆನ್ಸ್ ಕಾರ್ಯ ನಿರ್ವಹಿಸುತ್ತೆ. ಯಾವುದೇ ಏಜೆನ್ಸಿ ಮೂಲಕ ಕಾರ್ಯ ನಿರ್ವಹಿಸುವುದಿಲ್ಲ ಎಂದು ಹೇಳಿದ್ದಾರೆ.108 ಆ್ಯಂಬುಲೆನ್ಸ್ ಸಿಬ್ಬಂದಿ ಮೂರು ಶಿಫ್ಟ್ ವಿಚಾರವಾಗಿ ಮಾತನಾಡಿದ ಅವರು, ಇದು ಏಜೆನ್ಸಿ ಮೂಲಕ ನಡೆಯುತ್ತದೆ. ಹೀಗಾಗಿ ಸಿಬ್ಬಂದಿಗಳು ಏಜೆನ್ಸಿ ಜೊತೆ ಮಾತನಾಡಬೇಕು ಎಂದಿದ್ದಾರೆ. 30 ಸಾವಿರ ಸಿಬ್ಬಂದಿ ವೇತನವಾಗದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, 2023-24 ರಲ್ಲಿ ಓಪನಿಂಗ್ ಬ್ಯಾಲೆನ್ಸ್ ಹೆಚ್ಚು ಇರ್ತಾ ಇತ್ತು. ಆದರೆ ಕಳೆದ ಸರ್ಕಾರದಿಂದ ಓಪನಿಂಗ್ ಬ್ಯಾಲೆನ್ ಕಡಿಮೆಯಾಗಿದೆ. ಹೀಗಾಗಿ ನಾವು ರಾಜ್ಯ ಸರ್ಕಾರದಿಂದ ಕೊಡಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ…

Read More

ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಬಾಲಕಿಯನ್ನು ಪುಸಲಾಯಿಸಿ, ನಗರ ಹೊರವಲಯದ ಪ್ರದೇಶಕ್ಕೆ ಕರೆದೊಯ್ದ ಮೂವರು ಬಾಲಕರು ಪಾರ್ಟಿ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಮೇ 6ರಂದು ನಡೆದಿದ್ದು, ಸೋಮವಾರ ಬಾಲಕಿಯ ಪಾಲಕರು ಠಾಣೆಗೆ ದೂರು ನೀಡಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಇಬ್ಬರು ಬಾಲಕರನ್ನು ಅರೆಸ್ಟ್ ಮಾಡಿ ಬಾಲ ಮಂದಿರಕ್ಕೆ ಸೇರಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿತರು ಬಾಲಕಿಯ ಮನೆಯ ಸುತ್ತಮುತ್ತಲು ಕೆಲಸ ಮಾಡಿಕೊಂಡು ಇದ್ದರು. ಈ ವೇಳೆ ಬಾಲಕಿಯನ್ನು ಪುಸಲಾಯಿಸಿ ಪ್ರೀತಿ ಪ್ರೇಮದ ನಾಟಕವಾಡಿದ್ದಾರೆ. ಬಳಿಕ ಮೇ 6ರಂದು ನಗರ ಹೊರವಲಯದ ಪ್ರದೇಶಕ್ಕೆ ಹೋಗಿ ಎಲ್ಲರೂ ಪಾರ್ಟಿ ಮಾಡಿದ್ದರು. ನಂತರ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನಿನ್ನೆ ಬಾಲಕಿಯ ಪೋಷಕರು ಘಟನೆ ಬೆಳಕಿಗೆ ಬಂದಾಗ ಠಾಣೆಗೆ ದೂರು ನೀಡಿದ್ದಾರೆ. ಹಾಗಾಗಿ ಪೊಲೀಸರು ಇಬ್ಬರು ಬಾಲಕರನ್ನು ಅರೆಸ್ಟ್ ಮಾಡಿ ಬಾಲಮಂದಿರಕ್ಕೆ ಕಳಿಸಿದ್ದು, ಇನ್ನೋರ್ವ ಬಾಲಕನಿಗೆ ಹುಡುಕಾಟ ನಡೆಸಿದ್ದಾರೆ.

Read More

ಬೆಂಗಳೂರು : ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಾಲಕನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಬೆಂಗಳೂರಿನ ಒಂದನೇ ಎಫ್ ಟಿ ಎಸ್ ಸಿ ಕೋರ್ಟ್ ನ ಸರಸ್ವತಿ ಕೆ.ಎನ್ ಪ್ರಕರಣದ ಕುರಿತು ತೀರ್ಪು ನೀಡಿದ್ದಾರೆ. ಅವಲಹಳ್ಳಿ 2022 ಸೆಪ್ಟೆಂಬರ್ 18ರಲ್ಲಿ ಈ ಒಂದು ಅತ್ಯಾಚಾರ ಪ್ರಕರಣ ನಡೆದಿತ್ತು. ಬಾಲಕಿಯನ್ನು ಮನೆಗೆ ಎಳೆದುದೋಯ್ದು ಬಾಲಕ ಅತ್ಯಾಚಾರ ಎಸಗಿದ್ದ. ಈ ವೇಳೆ ಬಾಲಕನನ್ನು ಹಿಡಿಯಲು ಹೋದ ಸಾಕ್ಷಿಗಳಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಅಪ್ರಾಪ್ತ ಬಾಲಕನ ವಿರುದ್ಧ ಸೆಕ್ಷನ್ 4 (2) ರ ಅಡಿಯಲ್ಲಿ ಪೋಕ್ಸೋ ಕೇಸ್ ದಾಖಲಾಗಿತ್ತು. ಗರಿಷ್ಠ ಶಿಕ್ಷೆ ವಿಧಿಸುವಂತೆ ಸರ್ಕಾರಿ ಪಿಪಿ ಬಿಕೆ ಕಾಮಾಕ್ಷಿ ಅವರು ಜಡ್ಜ್ ಗೆ ಮನವಿ ಮಾಡಿದರು.ಈ ವೇಳೆ ಜಡ್ಜ್ 20 ವರ್ಷ ಸಾದಾ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದರು. ಬಾಲಕನಿಗೆ 21 ವರ್ಷ ತುಂಬುವವರೆಗೆ ಸಂರಕ್ಷಿತ ಸ್ಥಳದಲ್ಲಿ ಇರಿಸಬೇಕು. 21 ವರ್ಷದ ಬಳಿಕ ವಯಸ್ಕ ಅಪರಾಧಿಯಂತೆ ಶಿಕ್ಷೆ ಅನುಭವಿಸಬೇಕು ಎಂದು…

Read More

ಹಾವೇರಿ : ಹಾವೇರಿಯಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಕೆರೆಯಲ್ಲಿ ಈಜಲು ತೆರಳಿದ್ದಂತ ಇಬ್ಬರು ಯುವಕರು ನೀರಲ್ಲಿ ಮುಳುಗಿ ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ಹಾವೇರಿಯ ಚಿಕ್ಕಂಶಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಚಿಕ್ಕಂಶಿ ಹೊಸೂರು ಗ್ರಾಮದ ಕೆರೆಗೆ ಈಜೋದಕ್ಕೆ ಮಾಲತೇಶ್ ಕುರುಬರ(19) ಹಾಗೂ ಬಸವರಾಜ್(38) ತೆರಳಿದ್ದರು.ಇಬ್ಬರು ಕೆರೆಯ ಕೆಸಲಿನಲ್ಲಿ ಸಿಲುಕಿಕೊಂಡು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಮಾಲತೇಶ್ ಕುರುಬರ ಶವವನ್ನು ಹೊರ ತೆಗೆದಿದ್ದಾರೆ. ಬಸವರಾಜ್ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಳ್ಳಾರಿ : ರಾಜ್ಯದಲ್ಲಿ ಇಂದು ಒಂದೇ ದಿನ ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು 8 ಜನರು ಬಲಿಯಾಗಿರುವ ಘಟನೆ ವರದಿಯಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರವಿಯಲ್ಲಿ ಒಂದೇ ಕುಟುಂಬದ ಮೂವರು, ಹಾವೇರಿಯಲ್ಲಿ ಇಬ್ಬರು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ, ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಗೆದ್ಲೆಹಳ್ಳಿ ಹಾಗು ಗದಗದಲ್ಲಿ ಒಬ್ಬೊಬ್ಬರು ಸಿಡಿಲು ಬಡಿದು ಸಾವನಪ್ಪಿದ್ದಾರೆ. ಬಳ್ಳಾರಿಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ರಾರವಿ ಗ್ರಾಮದಲ್ಲಿ ಸಿಡಿಲು ಬಡಿದು ಮೂವರು ಸಾವನಪ್ಪಿದ್ದಾರೆ. ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಇದೀಗ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಮೃತರನ್ನು ಬೀರಪ್ಪ (45) ಸುನಿಲ್ (26) ಮತ್ತು ವಿನೋದ್ (14) ಎಂದು ತಿಳಿದು ಬಂದಿದೆ. ಕುರಿ ಮೇಯಿಸಲು ಹೋದಾಗ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಇದೀಗ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಳೆ ಬಂದಾಗ ಮೂವರು ಮರದ ಕೆಳಗೆ ನಿಂತಿದ್ದಾರೆ.…

Read More

ನವದೆಹಲಿ : ಆಪರೇಷನ್ ಸಿಂದೂರ್ ಮೂಲಕ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ವಿಚಾರವಾಗಿ ಇಂದು ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಇನ್ಮುಂದೆ ಪಾಕಿಸ್ತಾನದ ಗುಂಡುಗಳಿಗೆ ನಾವು ಸಹ ಗುಂಡುಗಳಿಂದಲೇ ಉತ್ತರಿಸುತ್ತೇವೆ ಎಂದು ರಣಧೀರ ಜೈಸ್ವಾಲ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದರು. ಆಪರೇಷನ್ ಸಿಂಧೂರದಿಂದ ಪಾಕಿಸ್ತಾನಕ್ಕೆ ಸಾಕಷ್ಟು ಹಾನಿಯಾಗಿದೆ. ಪಾಕಿಸ್ತಾನದ ಗುಂಡುಗಳಿಗೆ ನಾವು ಗುಂಡುಗಳಿಂದಲೇ ಉತ್ತರಿಸುತ್ತೇವೆ ಪಾಕಿಸ್ತಾನ ದಾಳಿ ನಿಲ್ಲಿಸಿದರೆ ಭಾರತ ಕೂಡ ದಾಳಿ ನಿಲ್ಲಿಸಲಿದೆ. ಪಾಕಿಸ್ತಾನ ಇದನ್ನು ಬೇಗ ಅರ್ಥ ಮಾಡಿಕೊಂಡಷ್ಟು ಅದಕ್ಕೆ ಒಳ್ಳೆಯದು. ಸೋಲಿನ ಬಳಿಕ ಗೆಲುವಿನ ಡ್ರಮ್ ಬಾರಿಸುವುದು ಹಳೆ ಮನೋಭಾವ ಎಂದರು. ಸೋಲಿನ ಬಳಿಕವೂ ಪಾಕಿಸ್ತಾನ ಸಂಭ್ರಮಾಚರಣೆ ಮಾಡುತ್ತಿದೆ. ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಭಯೋತ್ಪಾದನೆಯನ್ನು ಭಾರತ ಸಹಿಸಿಕೊಳ್ಳುವುದಿಲ್ಲ. ಪಾಕಿಸ್ತಾನದ ಉಗ್ರರು ಬಹಳ ಬಿಟ್ಟರೆ ಭಾರತ ತಕ್ಕ ಪಾಠ ಕಲಿಸಲಿದೆ ಎಂದು ದೆಹಲಿಯಲ್ಲಿ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ ಜೈಸ್ವಾಲ್ ಹೇಳಿಕೆ ನೀಡಿದರು. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ…

Read More

ಬಾಗಲಕೋಟೆ : ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ ಮೂಲಕ ದಾಳಿ ಮಾಡಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಇದೇ ವಿಚಾರವಾಗಿ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? ಎಂದು ಪ್ರಶ್ನಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮೋದಿಯವರು ಬರೀ ಭಾಷಣ ಮಾಡಿದರೆ ನಡೆಯಲ್ಲ, ಕದನ ವಿರಾಮದ ಬಗ್ಗೆ ಉತ್ತರ ನೀಡಬೇಕು.ಪಾಕಿಸ್ತಾನಕ್ಕೆ ಯಾವ ಪಾಠ ಕಲಿಸಲು ಹೊರಟಿದ್ದೇವೆ. ಅದನ್ನು ಕಲಿಸಿದ್ವಾ? ನಾಲ್ಕೈದು ದಿನ ಯುದ್ಧ ಮಾಡಿ ಬಿಟ್ಟರೆ, ಇದು ಸರಿಯಾ? ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? ಅಮೆರಿಕ ಹೇಳಿದೆ ಎಂದು ಕದನ ವಿರಾಮ ಘೋಷಣೆ ಮಾಡಿದ್ರಾ? ಅಮೆರಿಕ ನಮ್ಮ ಆಂತರಿಕ ವಿಷಯಗಳ ಬಗ್ಗೆ ತೀರ್ಮಾನ ಮಾಡುವುದಾದರೆ ನಮ್ಮ ಸಾರ್ವಭೌಮತ್ವದ ಬಗ್ಗೆ ಏನು ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಆಪರೇಷನ್ ಸಿಂಧೂರ’…

Read More

ಹಾವೇರಿ : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾ ರವಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸಾವನಪ್ಪಿರುವ ಘಟನೆ ನಡೆದಿತ್ತು. ಇದೀಗ ಹಾವೇರಿ ಗದಗ ಜಿಲ್ಲೆಯಲ್ಲಿ ಕೂಡ ಸಿಡಿಲು ಬಡಿದು ಮೂವರು ಸಾವನಪ್ಪಿರುವ ಘಟನೆ ವರದಿಯಾಗಿದೆ. ಹೌದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಡಮ್ಮಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಹಿರೇಕೆರೂರು ತಾಲ್ಲೂಕಿನ ಡಮ್ಮಳ್ಳಿಯ ನಾಗಪ್ಪ ಬಸವಣೆಪ್ಪ ಕಣಸೋಗಿ (65), ರಟ್ಟೀಹಳ್ಳಿ ತಾಲ್ಲೂಕಿನ ಕುಡುಪಲಿ ಸುನೀಲ್ ಕಾಳೇರ (29) ಹಾಗೂ ಗದಗ ಜಿಲ್ಲೆಯ ಬಸಾಪುರದ ಮರಿಯವ್ವ ನಾಯ್ಕರ್ (60) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Read More

ಧಾರವಾಡ : ಬೇಸಿಗೆ ಶುರುವಾದರೆ ಸಾಕು ಮಾವಿನ ಹಣ್ಣಿನದೇ ದರ್ಬಾರ್, ಇತ್ತೀಚಿನ ದಿನಗಳಲ್ಲಿ ಅಂತೂ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಮಾವಿನ ಹಣ್ಣಿನಿಂದ ತರ ತರದಲ್ಲಿ ಖಾದ್ಯಗಳನ್ನು ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ 1 ಬಾಕ್ಸ್ ಮಾವಿನ ಹಣ್ಣಿಗೆ 300, 350 ಅಥವಾ 400 ರೂ. ಇರುತ್ತದೆ. ಆದರೆ ಇಲ್ಲೊಂದು ಮಾವಿನ ಹಣ್ಣಿನ ಕೆಜಿಗೆ ಬರೋಬ್ಬರಿ 2.7 ಲಕ್ಷ ರೂ. ಆಗಿದ್ದು, 1 ಮಾವಿನ ಹಣ್ಣಿಗೆ 10 ಸಾವಿರ ರೂ. ಬೆಲೆಯಿದೆ. ಹೌದು ಈ ಮಾವಿನ ಹಣ್ಣಿನ ಹೆಸರು ಮಿಯಾ ಜಾಕಿ, ಇದು ಜಪಾನ್ ದೇಶದ ಮಾವಿನ ಹಣ್ಣಿನತಳಿಯಾಗಿದೆ. ಈ ಹಣ್ಣನ್ನು ಧಾರವಾಡದ ರೈತ ಪ್ರಮೋದ ಗಾಂವಕರ ಕಲಕೇರಿಯ ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ಪ್ರತಿವರ್ಷ ಏಳೆಂಟು ಹಣ್ಣು ಬಿಡುತ್ತಿದ್ದ ಮಿಯಾ ಜಾಕಿ ಮರಗಳು, ಈ ವರ್ಷ 25-26 ಹಣ್ಣುಗಳನ್ನು ಬಿಟ್ಟಿವೆ. ಧಾರವಾಡದಲ್ಲಿ ನಡೆದ ಮಾವಿನ ಮೇಳದಲ್ಲೂ ಈ ಮಿಯಾ ಜಾಕಿ ಮಾವಿನ ಹಣ್ಣು ಎಲ್ಲರ ಗಮನ ಸೆಳೆಯಿತು. ಮಾವಿನ ಮೇಳದಲ್ಲಿ ಮಿಯಾ ಜಾಕಿ…

Read More

ಉತ್ತರಕನ್ನಡ : ಆಸ್ತಿ ಗಾಗಿ ನಾಲ್ವರನ್ನು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪ ಮಗನಿಗೆ ಇದೀಗ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ಅಪ್ಪನಿಗೆ ಜೀವಾವಧಿ ಮತ್ತು ಮಗನಿಗೆ ಗಲ್ಲು ಶಿಕ್ಷೆ ವಿಧಿಸಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪ್ರಕರಣ ಹಿನ್ನೆಲೆ? 2013 ಫೆಬ್ರವರಿ 24ರಂದು ಹಾಡುಹಳ್ಳಿಯಲ್ಲಿ ಈ ಒಂದು ಭೀಕರ ಕೊಲೆ ನಡೆದಿತ್ತು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುಹಳ್ಳಿ ಗ್ರಾಮದಲ್ಲಿ ಆಸ್ತಿಗಾಗಿ ಸೊಸೆಯಾದ ವಿದ್ಯಾ ಭಟ್ ತಂದೆ ಶ್ರೀಧರ್, ಹಾಗೂ ವಿದ್ಯಾ ಭಟ್ ತಮ್ಮನಾದ ಜನಾರ್ಧನ ಭಟ್ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿದ್ದರು. ವಿದ್ಯಾ ಭಟ್ ಳ ಅತ್ತೆ, ಮಾವ, ಮೈದುನ ಹಾಗೂ ಮೈದುನನ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದರು. ಅನಾರೋಗ್ಯದಿಂದ ಪತಿ ಮೃತಪಟ್ಟ ಬಳಿಕ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಕೊಟ್ಟಿದ್ದಕ್ಕೆ ಸೊಸೆ ವಿದ್ಯಾ ಭಟ್ ತಕರಾರು ತೆಗೆದಿದ್ದಾರೆ. ವಿದ್ಯಾ ಭಟ್ ಕಲಹದ ಹಿಂದೆ ತಂದೆ ಮತ್ತು ಆಕೆಯ ತಮ್ಮನ ಬೆಂಬಲವಿತ್ತು. ಶಂಭೋ ಭಟ್, ಮಹಾದೇವಿ…

Read More