Subscribe to Updates
Get the latest creative news from FooBar about art, design and business.
Author: kannadanewsnow05
ಚಿಕ್ಕಬಳ್ಳಾಪುರ : ಪ್ರಿಯಕರನ ಜೊತೆಗೆ ಇದ್ದಾಗಲೇ ವಿವಾಹಿತ ಪ್ರಿಯತಮೆಯು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಗುಂತಪನಹಳ್ಳಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.ಚಿಕ್ಕಬಳ್ಳಾಪುರದ ಬಾಪೂಜಿ ನಗರದ ನಿವಾಸಿ ಅನುಷಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪ್ರಿಯತಮೆಯನ್ನು ಪ್ರಿಯಕರನೆ ಕೊಂದಿದ್ದಾನೆ ಎಂದು ಶಂಕಿಸಿ ಇದೀಗ ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಗುಂತಪ್ಪನಹಳ್ಳಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಮಹಿಳೆಯ ಶವ ಪತ್ತೆಯಾಗಿದೆ. ಚಿಕ್ಕಬಳ್ಳಾಪುರದ ಬಾಪೂಜಿನಗರ ನಿವಾಸಿ ಅನುಷಾ ಅನುಮಾನಾಸ್ಪದ ಸಾವಾಗಿದೆ ವಿವಾಹಿತ ಪ್ರಿಯತಮೆ ಅನುಷಾ ಕೊಲ್ಲಲು ಪ್ರಿಯಕರ ಪವನ್ ಕಸರತ್ತು ನಡೆಸಿದ್ದ ಎನ್ನಲಾಗಿದೆ. ಗರ್ಭಿಣಿ ಅನುಷಾಗೆ ಮೊದಲು ಪವನ್ ವಿಷ ಕುಡಿಸಿ ಕೊಲ್ಲಲು ಯತ್ನಿಸಿದ್ದಾನೆ. ವಿಷ ಕುಡಿದರು ಬದುಕಿದ್ದ ಅನುಷಾ ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಹೊಂಗೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಅನುಷಾ ಶವ ಪತ್ತೆಯಾಗಿದೆ. ಗುಂತಪ್ಪನಹಳ್ಳಿಯ ಪವನ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಘಟನೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ…
BREAKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಬೆಂಗಳೂರಲ್ಲಿ ತಾಯಿಯ ಕತ್ತು ಹಿಸುಕಿ ಕೊಂದು, ನೇಣಿಗೆ ಶರಣಾದ ಪುತ್ರ!
ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಕುಡಿದ ನಶೆಯಲ್ಲಿ ತಾಯೊಂದಿಗೆ ಜಗಳ ಮಾಡಿದ ಮಗ ತಾಯಿಯ ಕತ್ತು ಹಿಸುಕಿ ಕೊಂದ ಬಳಿಕ ತಾನು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸೂರ್ಯ ಸಿಟಿ ಬಳಿಯ ಹಳೆ ಚಂದಾಪುರದಲ್ಲಿ ನಡೆದಿದೆ. ಕತ್ತು ಹಿಸುಕಿ ತಾಯಿಯನ್ನು ಕೊಂದು ಪುತ್ರನೊಬ್ಬ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಸೂರ್ಯ ಸಿಟಿ ಬಳಿಯ ಹಳೆ ಚಂದಾಪುರದಲ್ಲಿ ಈ ಒಂದು ಘಟನೆ ನಡೆದಿದೆ. ತಾಯಿ ಲಕ್ಷ್ಮಿ ದೇವಿ (41) ಕೊಂದು ಪುತ್ರ ರಮೇಶ್ (21) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕ ಹಳ್ಳಿಯ ನಿವಾಸಿಗಳು ಎಂದು ತಿಳಿದು ಬಂದಿದೆ. ಕೆಲವು ವರ್ಷಗಳ ಹಿಂದೆ ಕೂಲಿ ಅರಸಿಕೊಂಡು ತಾಯಿ ಮತ್ತು ಪುತ್ರ ಬೆಂಗಳೂರಿಗೆ ಬಂದಿದ್ದರು. ಕೂಲಿ ಕೆಲಸ ಮಾಡಿಕೊಂಡು ತಾಯಿ ಮತ್ತು ಮಗ ಜೀವನ ಸಾಗಿಸುತ್ತಿದ್ದರು. ಆದರೆ ಮಗನಿಗೆ ಕುಡಿತದ ಚಟ ಇತ್ತು. ಆಗಾಗ ತಾಯಿಯ ಜೊತೆಗೆ…
ಬೆಂಗಳೂರು : ಹೊಸ ವರ್ಷಾಚರಣೆಯ ದಿನ ಕರ್ತವ್ಯನಿರತ ಸಹದ್ಯೋಗಿ ಯುವತಿಗೆ ಮದ್ಯಪಾನ ಮಾಡಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಖಾಸಗಿ ಕಂಪನಿ ಮ್ಯಾನೇಜರ್ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಹೌದು ಬೆಂಗಳೂರಿನಲ್ಲಿ ಪಾರ್ಟಿಗೆ ಕರೆದೋಯ್ದು ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಯುವತಿಗೆ ಬಲವಂತವಾಗಿ ಮಧ್ಯಪಾನ ಮಾಡಿಸಿ ಲೈಂಗಿಕ ಕಿರುಕುಳ ನೀಡಲಾಗಿದೆ. ಖಾಸಗಿ ಕಂಪನಿಯ ವ್ಯವಸ್ಥಾಪಕ ಹೇಮಂತ್ ವಿರುದ್ಧ ಈ ಒಂದು ಗಂಭೀರವಾದ ಆರೋಪ ಕೇಳಿ ಬಂದಿದೆ. ಖಾಸಗಿ ಕಂಪನಿ ಮ್ಯಾನೇಜರ್ ಹೇಮಂತ್ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಅಲ್ಲದೇ ಯುವತಿಗೆ ಬಲವಂತವಾಗಿ ಮದ್ಯ ಕುಡಿಸಿ ಆಕೆಯ ಜೊತೆಗೆ ಅಸಭ್ಯವಾಗಿ ವರ್ತನೆ ತೋರಿದ್ದಾನೆ. ಕಾರಿನಲ್ಲಿ ಸುತ್ತಾಡಿಸಿ ಮಧ್ಯರಾತ್ರಿಯಲ್ಲಿಯೇ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಯುವತಿ ದೂರು ನೀಡಿದ್ದಾಳೆ. ಸಹೋದ್ಯೋಗಿಗಳ ಜೊತೆ…
ಬೆಂಗಳೂರು : ಶಾಲೆಯಿಂದ ಮನೆಗೆ ತೆರಳುತ್ತಿದ್ದ 15 ವರ್ಷದ ಬಾಲಕಿಯ ಮೇಲೆ ನಿರ್ಮಾಣ ಹಂತದ ಮರದ ತುಂಡು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವಿವಿ ಪುರಂ ಮೆಟ್ರೋ ನಿಲ್ದಾಣದ ಬಳಿ ಈ ಒಂದು ಘೋರ ದುರಂತ ನಡೆದಿದೆ. ಮೃತ ಬಾಲಕಿಯನ್ನು ತೇಜಸ್ವಿನಿ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ ಹ ಶಾಲೆಯಿಂದ ಮನೆಗೆ ತೆರಳುವ ಸಂದರ್ಭದಲ್ಲಿ ವಿವಿ ಪುರಂ ಬಳಿಯ ಮೆಟ್ರೋ ನಿಲ್ದಾಣದ ಬಳಿ ನಿರ್ಮಾಣ ಹಂತದ 4ನೇ ಮಹಡಿಯಿಂದ ಮರದ ತುಂಡು ಒಂದು ಏಕಾಏಕಿ ಬಾಲಕಿ ತೇಜಸ್ವಿನಿ ಮೇಲೆ ಬಿದ್ದಿದೆ. ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿದ್ದು ಘಟನೆ ಕುರಿತು ವಿವಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು : ಮುಂದಿನ 5 ವರ್ಷದಲ್ಲಿ ಬಿಜೆಪಿ ಜೊತೆಗೆ ಸೇರಿ ಸರ್ಕಾರ ಮಾಡುತ್ತೇನೆ. ಆಗ ನಾವು ರಾಮರಾಜ್ಯದ ಸರ್ಕಾರ ಮಾಡಬಹುದು. ನಾನು ರಾಮರಾಜ್ಯ ಮಾಡದಿದ್ದರೆ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು. ಇಂದು ಮೈಸೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಮುಂದಿನ ಬಾರಿ ಬಿಜೆಪಿ ಜೆಡಿಎಸ್ ಸರ್ಕಾರ ತಪ್ಪಿಸಲು ಸಾಧ್ಯವಿಲ್ಲ. 2028ಕ್ಕೆ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೆ ಅಂತಿಮವಲ್ಲ. ಉಪಚುನಾವಣೆಯಲ್ಲಿ ಆಡಳಿತ ಪಕ್ಷ ಗೆಲ್ಲುವುದು ಸಾಮಾನ್ಯ. 18 ಶಾಸಕರನ್ನು ಕರೆದೊಯ್ದಿದ್ದ ವೇಳೆ ಬಿಜೆಪಿ 17 ಸ್ಥಾನದಲ್ಲಿ ಗೆದ್ದಿತ್ತು ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಪಡೆದರು? 2023ರಲ್ಲಿ ಬಿಜೆಪಿಗೆ ಆದ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೂ ಬರುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜೆಡಿಎಸ್ ಗೆ ಉತ್ತಮ ಭವಿಷ್ಯವಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರದ ಕೆಟ್ಟ ಆಡಳಿತ…
ಬೆಂಗಳೂರು : ಜಪ್ತಿ ಮಾಡಿದಂತಹ ಆಟೋವನ್ನು ಬಿಡುಗಡೆಗೊಳಿಸಲು ಎಎಸ್ಐ ಅಧಿಕಾರಿ ಒಬ್ಬ ಆಟೋ ಚಾಲಕನ ಬಳಿ 40,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬೆಲೆಗೆ ಬಿದ್ದಿರುವ ಘಟನೆ ಬೆಂಗಳೂರಿನ ಸಂಜಯ್ ನಗರ ಠಾಣೆಯಲ್ಲಿ ನಡೆದಿದೆ. ಬೆಂಗಳೂರಿನ ಸಂಜಯ್ ನಗರ ಠಾಣೆಯ ASI ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಜಪ್ತಿ ಮಾಡಿದ್ದ ಆಟೋ ಬಿಡುಗಡೆಗಾಗಿ 40,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಎಎಸ್ಐ ವಿಜಯಕುಮಾರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. 50 ಸಾವಿರ ರೂಪಾಯಿ ಲಂಚ ನೀಡುವಂತೆ ಎಎಸ್ಐ ವಿಜಯಕುಮಾರ್ ಬೇಡಿಕೆ ಇಟ್ಟಿದ್ದ. ಮೊಹಮ್ಮದ್ ಸುಜತ್ ನಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಬ್ರೋಕರ್ ಸಯ್ಯದ್ ರಿಜ್ವಾನ್, ಎ ಎಸ್ ಐ ವಿಜಯ್ ಕುಮಾರ್ ನನ್ನು ಇದೀಗ ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 40,000 ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ವಿಜಯಕುಮಾರ್ ನನ್ನ ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ
ಬಾಗಲಕೋಟೆ : ಮೊದಲೇ ಈಗಿನ ಕಾಲದಲ್ಲಿ ಮದುವೆಯಾಗಲು ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಅಂತದ್ರಲ್ಲಿ ಬ್ರೋಕರ್ ಒಬ್ಬನನ್ನು ನಂಬಿದ ವ್ಯಕ್ತಿ ಆತನಿಗೆ 4 ಲಕ್ಷ ರೂಪಾಯಿ ನೀಡಿ ಈಗಾಗಲೇ ಎರಡು ಮದುವೆಯಾಗಿದ್ದ ಮಹಿಳೆಯನ್ನು ಮದುವೆ ಮಾಡಿಸಿದ್ದಾನೆ. ಆದರೆ ಕೆಲವೇ ತಿಂಗಳಲ್ಲಿ ಆಕೆ ಗಂಡನನ್ನು ಬಿಟ್ಟು ಪರಾರಿಯಾಗಿದ್ದು, ಇತ್ತ 4 ಲಕ್ಷ ಪಡೆದು ಬ್ರೋಕರ್ ಕೂಡ ಪರಾರಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನಡೆದಿದೆ. ಹೌದು ಕಳೆದ 2023ರಲ್ಲಿ ಕುನಾಳ ಗ್ರಾಮದ ಮ್ಯಾರೇಜ್ ಬ್ರೋಕರ್ ಸತ್ಯಪ್ಪ ಎಂಬಾತ ಮುಧೋಳ ನಗರದ ಸೋಮಶೇಖರ ಎಂಬಾತನಿಗೆ ಮದುವೆ ಮಾಡಿಸುತ್ತೇನೆ ಎಂದು 4 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದ. ಒಪ್ಪಂದದ ಪ್ರಕಾರ ಶಿವಮೊಗ್ಗದ ಮಂಜುಳಾ ಎಂಬ ಯುವತಿ ಜೊತೆ ಸೊಮಶೇಖರನ ಮದುವೆ ಆಗುತ್ತೆ. ಕೊಟ್ಟ ಮಾತಿನಂತೆ ಸೋಮಶೇಖರ್ ಬ್ರೋಕರ್ ಸತ್ಯಪ್ಪನಿಗೆ 4 ಲಕ್ಷ ನೀಡುತ್ತಾನೆ. ಆದರೆ ಒಂದು ತಿಂಗಳೊಳಗೆ ಹೆಂಡತಿ ಮಂಜುಳಾ ಶಿವಮೊಗ್ಗಕ್ಕೆ ವಾಪಾಸ್ ಹೋಗುತ್ತಾಳೆ. ಕಳೆದ ವರ್ಷ ಬಾಗಲಕೋಟೆ ಜಿಲ್ಲೆಯ ಮುಧೋಳದ ಕಾಳಿಕಾದೇವಿ ದೇಗುಲದಲ್ಲಿ ಸೋಮಶೇಖರ್…
ವಿಜಯಪುರ : ತರಗತಿಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರ ದೂರಿನ ಮೇರೆಗೆ ಇದೀಗ ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ ನನ್ನು ಅರೆಸ್ಟ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದಿದೆ. ಬಂಧಿತ ಪ್ರಿನ್ಸಿಪಾಲ್ ನನ್ನು ಸಚಿನ್ ಕುಮಾರ್ ಪಾಟೀಲ್ ಎಂದು ತಿಳಿದುಬಂದಿದೆ.ಕಳೆದ ಜುಲೈನಲ್ಲಿ ಈ ಕೃತ್ಯ ನಡೆದಿದೆ. ಇದೀಗ ಜನವರಿ 2ರಂದು ವಿದ್ಯಾರ್ಥಿನಿಯರು ಮನಗೂಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಪ್ರಾಂಶುಪಾಲ ವಿದ್ಯಾರ್ಥಿನಿಯರ ಮೈ-ಕೈ ಮುಟ್ಟುವುದು ಹಾಗೂ ಅಪ್ಪಿಕೊಳ್ಳುತ್ತಿದ್ದ. ಪ್ರತಿರೋಧಿಸಿದರೆ, ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಚಿನ್ ಪಾಟೀಲ್ ಕಿರುಕುಳಕ್ಕೆ ವಿದ್ಯಾರ್ಥಿನಿ ಒಬ್ಬಳು ಅರ್ಧಕ್ಕೆ ಕಾಲೇಜು ಬಿಟ್ಟಿದ್ದಳು. ಅಲ್ಲದೆ ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಕೂಡ ಫೇಲ್ ಮಾಡಲಾಗಿತ್ತು ಇದನ್ನು ಪ್ರಶ್ನಿಸಿದಾಗ ನನಗೆ ಸಹಕರಿಸಿದರೆ ಟಾಪರ್ ಮಾಡುತ್ತೇನೆ ಎಂದು ಹೇಳಿದ್ದನಂತೆ. ಇನ್ನು ಇನ್ನೊರ್ವ ವಿದ್ಯಾರ್ಥಿನಿಗೆ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಹೋದಾಗಲೂ ಕಿರುಕುಳ ನೀಡಲಾಗಿತ್ತು ಎಂದು ದೂರಲಾಗಿದೆ. ಈ ದೂರಿನ…
ಬೆಂಗಳೂರು : ಕಳೆದ ವರ್ಷ ರಾಜ್ಯದ ಬಳ್ಳಾರಿ ಬೆಳಗಾವಿ ರೈಚೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣಗಳು ನಡೆದಿತ್ತು. ಇದೀಗ ಈ ಒಂದು ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌದರಿ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪ್ರಕರಣದ ವರದಿಯನ್ನು ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಹೆರಿಗೆಯ ನಂತರ ತಾಯಂದಿರ ಸಾವುಗಳ ಬಗ್ಗೆ ರಾಜ್ಯ ಮಹಿಳಾ ಆಯೋಗದ ವರದಿ ಗಂಭೀರ ಸಮಸ್ಯೆಗಳನ್ನು ಬಹಿರಂಗಪಡಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿನ ಅನುಚಿತ ನೈರ್ಮಲ್ಯ, ಸಿಬ್ಬಂದಿ ಕೊರತೆ, ಪೌಷ್ಟಿಕಾಂಶದ ಕೊರತೆ ಮತ್ತು ಸೂಕ್ತ ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ವರದಿ ಉಲ್ಲೇಖಿಸಿದೆ. ತುರ್ತು ಆರೋಗ್ಯ ಸುಧಾರಣೆಗಳನ್ನು ಕೈಗೊಳ್ಳುವಂತೆ ವರದಿ ಶಿಫಾರಸು ಮಾಡಿದೆ. ವರದಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ನೀರಿನ ಟ್ಯಾಂಕ್‌ಗಳಲ್ಲಿ ಪಾಚಿಕಟ್ಟಿದ್ದು ನೀರು ಕಲುಷಿತಗೊಂಡಿದ್ದು ಅದೇ ನೀರು ಹೆರಿಗೆ ಕೊಠಡಿಗೂ ಸರಬರಾಜು ಆಗುತ್ತಿದೆ. ಆ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟಿರಿಯಾಗಳು ಇರುವ ಸಾಧ್ಯತೆ ಇದ್ದು ಪ್ರಾಣಾಪಾಯಕ್ಕೂ ಎಡೆಮಾಡಿಕೊಡುವ ಸಂಭವವಿರುತ್ತದೆ. ಹಾಗಾಗಿ ಆಸ್ಪತ್ರೆಗಳಲ್ಲಿನ ನೀರಿನ…
BREAKING : ಬೆಂಗಳೂರಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್ : ಪತ್ನಿ ನಿಖಿತಾ ಸೇರಿ ಮೂವರಿಗೆ ಜಾಮೀನು ಮಂಜೂರು!
ಬೆಂಗಳೂರು : ಪತ್ನಿಯ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಇತ್ತೀಚಿಗೆ ಬೆಂಗಳೂರಿನಲ್ಲಿ ಉತ್ತರ ಪ್ರದೇಶದ ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಒಂದು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾಣಿಯ, ನಿಖಿತಾ ತಾಯಿ ನಿಶಾ ಹಾಗೂ ಅನುರಾಗ್ ಗೆ ಬೆಂಗಳೂರಿನ 29ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಮಂಜೂರು ನೀಡಿ ಆದೇಶಿಸಿದೆ. ಹೌದು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಪತ್ನಿ ನಿಕಿತಾ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ನಿಖಿತಾ ಸೇರಿ ಮೂವರಿಗೆ ಜಾಮೀನು ಮಂಜೂರು ನೀಡಿ ಆದೇಶಸಿದೆ. ಬೆಂಗಳೂರಿನ 29ನೇ ಸಿಸಿಎಚ್ ನ್ಯಾಯಾಲಯದಿಂದ u ಆದೇಶ ಹೊರಡಿಸಲಾಗಿದೆ. ಪತ್ನಿ ನಿಖಿತ ಸಿಂಘಾಣಿಯ ನಿಶಾ ಹಾಗೂ ಸಹೋದರ ಅನುರಾಗ ಗೆ ಜಾಮೀನು ಮಂಜೂರು ನೀಡಿ ಆದೇಶ ಹೊರಡಿಸಿದೆ. ಪ್ರಕರಣದ ಹಿನ್ನೆಲೆ? ಪತ್ನಿ ಹಾಗೂ ಆಕೆಯ ಮನೆಯವರು ಕಿರುಕುಳ ನೀಡಿರುವುದಾಗಿ ಆರೋಪಿಸಿ ಸುದೀರ್ಘ ಡೆತ್ ನೋಟ್ ಬರೆದು…














