Author: kannadanewsnow05

ಬಳ್ಳಾರಿ : ಬಳ್ಳಾರಿಯಲ್ಲಿ ಹಾಡ ಹಗಲೇ ವ್ಯಕ್ತಿಯ ಭೀಕರ ಕೊಲೆಯಾಗಿದ್ದು, ಬಳ್ಳಾರಿಯ ರಾಣಿತೋಟದ ಜುಮ್ಮಾ ಮಸೀದಿ ಮುಂಭಾಗದಲ್ಲಿ ಈ ಒಂದು ಹತ್ಯೆ ನಡೆದಿದೆ ಎನ್ನಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ವೆಂಕಟೇಶ್ ಎಂದು ತಿಳಿದುಬಂದಿದ್ದು, ಹತ್ಯೆ ಕುರಿತು ಬಳ್ಳಾರಿ ಜನತೆ ಬೆಚ್ಚಿ ಬಿದ್ದಿದ್ದಾರೆ. ಕೊಲೆಯಾದ ವೆಂಕಟೇಶ್ ಆರ್ ಜೆ ಕಾಟನ್ ಬಿಲ್ ಇಂಡಸ್ಟ್ರಿ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಶವಾಗಾರದ ಮುಂದೆ ಮೃತನ ಸಂಬಂಧಿಕರು ಗೋಳಾಡುತ್ತಿದ್ದಾರೆ ಬಳ್ಳಾರಿಯ ಕಣೇಕಲ್ ರಸ್ತೆಯ ರಾಣಿತೋಟದಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಬೆಲೆ ಏರಿಕೆ ಪರಿಣಾಮ ಜನರು ಹೊರಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದು ನಂದಿನಿ ಹಾಲಿನ ದರ, ವಿದ್ಯುತ್ ದರ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಇದೀಗ ಡೀಸೆಲ್ ಬೆಲೆ ಏರಿಕೆ ಆಗುತ್ತಿದ್ದಂತೆ ಲಾರಿ ಮಾಲೀಕರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದು, ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಹೌದು ಬೆಲೆ ಏರಿಕೆ ಹೊಡೆತದಿಂದ ಜನ ಕಂಗಾಲಾಗಿದ್ದಾರೆ. ಹಾಲು, ಮೊಸರು ದರ ಏರಿಕೆ ಹಾಗೂ ಕಸ ತೆರಿಗೆ ಇತ್ಯಾದಿಗಳಿಂದ ಕಂಗಟ್ಟಿರುವ ಜನರಿಗೆ ಇದೀಗ ಡೀಸೆಲ್ ಬೆಲೆ ಹೆಚ್ಚಳದ ಬಿಸಿ ಪರೋಕ್ಷವಾಗಿ ತಟ್ಟಲಿದೆ. ಆದರೆ ಲಾರಿ ಮಾಲೀಕರಿಗೆ ನೇರವಾಗಿ ಹೊಡೆತ ಬೀಳಲಿದೆ. ಡಿಸೆಲ್ ದರ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು ಮುಷ್ಕರ ನಡೆಸಲು ಮುಂದಾಗಿದ್ದಾರೆ. ಮುಷ್ಕರ ಕುರಿತಂತೆ ನಾಳೆ ಲಾರಿ ಮಾಲೀಕರ ಸಂಘ ಸಭೆ ನಡೆಸಲಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎರಡು ಬಾರಿ ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗಿದೆ.…

Read More

ದಕ್ಷಿಣಕನ್ನಡ : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾಗಿ ಓರ್ವ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೀರಕಟ್ಟೆ ಎಂಬಲ್ಲಿ ಶುಕ್ರವಾರ ಬೆಳಗ್ಗಿನ ಜಾವ ನಡೆಯಿತು. ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಬಸ್ ನೀರಕಟ್ಟೆಯ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಓರ್ವ ಪ್ರಯಾಣಿಕ ಬಸ್ಸಿನಡಿ ಸಿಲುಕಿ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಕೂಡಲೇ ಸ್ಥಳೀಯ ಪೊಲೀಸ್‌ ಠಾಣಾ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನೆರವಾಗಿದ್ದಾರೆ. ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನಿಮಗೆ ಬೀಳುವ ಕನಸುಗಳಲ್ಲಿ ಬರುವ ಆಯಾ ಪ್ರಾಣಿ ಏನನ್ನು ಸೂಚಿಸುತ್ತೆ. ಅನ್ನೋದನ್ನ ತಿಳಿಯೋಣ ಬನ್ನಿ.ಕನಸಿನಲ್ಲಿ ಈ ಪ್ರಾಣಿಗಳನ್ನು ಕಂಡರೆ ನಿಮಗೆ ಏನಾಗುತ್ತೆ ಗೊತ್ತಾ.ಕನಸುಗಳು ಎಲ್ಲರಿಗೂ ಬೀಳೋದು ಸಹಜ. ಇದು ಪ್ರತಿಯೊಬ್ಬರಿಗೂ ಜರುಗುವ ಸಂಗತಿ.ಪ್ರತಿಯೊಬ್ಬ ಮನುಷ್ಯ ರಾತ್ರಿ ಕನಸಿನಲ್ಲಿ 9 ನಿಮಿಷಗಳಿಂದ ಎರಡು ಗಂಟೆಗಳವರೆಗೆ ಪ್ರತಿ ರಾತ್ರಿ ಕನಸಿನಲ್ಲಿ ಜೀವಿಸುತ್ತಾ ಇರುತ್ತಾನಂತೆ.ಈ ಕನಸಿನಲ್ಲಿ ನಾವು ಸ್ನೇಹಿತರು,ಪ್ರೀತಿ ಪ್ರೇಮ ಮಾಡುವವರು,ಪ್ರಾಣಿಗಳು ಬರಬಹುದು. ವಿದೇಶದಲ್ಲಿ ಸಂದರ್ಶನಗಳು ಜರುಗಬಹುದು.ದೇವರ ಶ್ರೀ ಕ್ಷೇತ್ರ ದರ್ಶನ ಹೇಗೆ ಇತ್ಯಾದಿ ಇತ್ಯಾದಿ ಅನೇಕ ಕನಸುಗಳು ಬೀಳೋದು ಸಹಜ.ನಿಮಗೆ ಬೀಳುವ ಕನಸುಗಳನ್ನು ಆಧರಿಸಿ ಅದರ ಅರ್ಥ ಏನು ಅನ್ನೋದನ್ನ ಹೇಳಬಹುದು.ಆಯಾ ಕನಸುಗಳಿಗೆ ಅದರದ್ದೇ ಆದ ಅರ್ಥ ಇರತ್ತೆ.ಕನಸುಗಳಲ್ಲಿ ಬರುವ ಆಯಾ ಪ್ರಾಣಿ ಏನನ್ನು ಸೂಚಿಸುತ್ತೆ. ಅನ್ನೋದನ್ನ ತಿಳಿಯೋಣ ಬನ್ನ 1. ಜಿಂಕೆ:- ಜಿಂಕೆಯನ್ನು ಕನಸಿನಲ್ಲಿ ಕಂಡರೆ ಒಂದು ಉನ್ನತ ಮಟ್ಟದ ಕೆಲಸವನ್ನು ಪ್ರಯಾಸವಾದರೂ ಸಾಧಿಸಿ ತೀರುತ್ತೀರ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ . ಜಿಂಕೆ ಕನಸಿನಲ್ಲಿ ಸತ್ತು ಹೋದ ಹಾಗೆ ಕಂಡರೆ ಪ್ರೇಮ,ಪ್ರೀತಿಯಲ್ಲಿ ವೈಫಲ್ಯಗಳನ್ನು…

Read More

ಕಲಬುರ್ಗಿ : ನಾರಾಯಣಪುರ ಜಲಾಶಯದಿಂದ ಕಲ್ಬುರ್ಗಿ, ಯಾದಗಿರಿ ಹಾಗು ಜಿಲ್ಲೆಗಳಿಗೆ ನಾಳೆಯಿಂದ ಏಪ್ರಿಲ್ 6ರ ವರೆಗೆ 0.80 ಟಿಎಂ ಸಿ ನೀರು ಹರಿಸುವಂತೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹೌದು ನಾರಾಯಣಪುರ ಜಲಾಶಯದಿಂದ 0.80 ಟಿಎಂಸಿ ನೀರು ಹರಿಸುವಂತೆ ಕಲಬುರ್ಗಿ ಹೈಕೋರ್ಟ್ ಪೀಠದಿಂದ ರಾಜ್ಯ ಸರ್ಕಾರಕ್ಕೆ ಇದೀಗ ನಿರ್ದೇಶನ ನೀಡಿಲಾಗಿದೆ. ನಾಳೆಯಿಂದ ವರೆಗೆ 0.80 ಟಿಎಂಸಿ ನೀರು ಹರಿಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ರೈತರ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ಕೆ ನಾವದಗಿ ಅವರು ವಾದ ಮಂಡಿಸಿದರು. ಮಾರ್ಚ್ 14 ರಂದು ನೀರು ಹರಿಸಲು ಸರ್ಕಾರದ ಸಲಹಾ ಸಮಿತಿ ನಿರ್ಧರಿಸಿತ್ತು. ನಂತರ ನಿಲುವು ಬದಲಿಸಿ ಕೃಷಿಗೆ ನೀರು ಹರಿಸಲು ನಿರಾಕರಿಸಿದೆ. ಕೃಷಿ ಚಟುವಟಿಕೆಗೆ ನೀರು ಹರಿಸಲು ರೈತರು ನಿರ್ದೇಶನ ಕೋರಿದ್ದರು. ಇದರಿಂದ ಈ ಭಾಗದ ಸಾವಿರಾರು ರೈತರಿಗೆ ನಷ್ಟವೆಂದು ವಾದ ಮಂಡಿಸಿದರು. ಏಪ್ರಿಲ್ 4 ರಿಂದ ಏಪ್ರಿಲ್ 6ವರೆಗೆ 0.80 ಟಿಎಂಸಿ ನೀರು ಹರಿಸುವಂತೆ ಈ…

Read More

ಚಿತ್ರದುರ್ಗ : ಶಾಲೆಗೆ ತೆರಳುವ ಸಂದರ್ಭದಲ್ಲಿ ವಿದ್ಯುತಂತೆ ಮೈ ಮೇಲೆ ಬಿದ್ದು ಶಿಕ್ಷಕಿ ಒಬ್ಬರು ಇಂದು ಸಾವನ್ನಪ್ಪಿದ್ದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿತ್ತು ಈ ಒಂದು ಘಟನೆ ಮಾತ್ರ ಮುನ್ನವೇ ಚಿತ್ರದುರ್ಗದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಬೋರಮ್ಮ (25) ಮತ್ತು ಪುತ್ರ ಪ್ರಣೀತ್ (3) ಎಂದು ತಿಳಿದುಬಂದಿದೆ.ಬಾತ್ ರೂಮ್​​​ಗೆ ಎಳೆದಿದ್ದ ವೈಯರ್ ಅನ್ನು ಮೊದಲು ಅಜಯ್ ಗೆ ತಾಗಿದ್ದು, ರಕ್ಷಣೆಗೆ ಹೋದ ತಾಯಿ ಬೋರಮ್ಮ ಅವರಿಗೂ ವಿದ್ಯುತ್ ಪ್ರವಹಿಸಿ ಇಬ್ಬರೂ ಸಾವನ್ನಪ್ಪಿದ್ದಾರೆ. ಕೊಪ್ಪಳದಲ್ಲಿ ಶಿಕ್ಷಕಿ ಸಾವು ಇನ್ನು ಕೊಪ್ಪಳದಲ್ಲಿ ಕೂಡ ಅಂತದ್ದೆ ಘಟನೆ ನಡೆದಿದ್ದು, ಶಾಲೆಗೆ ಹೊರಟಿದ್ದ ವೇಳೆ ವಿದ್ಯುತ್ ತಂತಿ ತುಳಿದು ಸ್ಥಳದಲ್ಲೇ ಶಿಕ್ಷಕಿಯೊಬ್ಬರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಜಂಗಮರ ಕಲ್ಗುಡಿಯಲ್ಲಿ ಮೃತ ಶಿಕ್ಷಕಿಯನ್ನು ಜಂಗಮರ ಕಲ್ಗುಡಿ ಗ್ರಾಮದ ಹೊಸಕೇರಿಯ…

Read More

ನವದೆಹಲಿ : ದೆಹಲಿಯಲ್ಲಿ ನೂತನವಾಗಿ ಕರ್ನಾಟಕ ಭವನ ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ಉದ್ಘಾಟಿಸಿದರು. ದೆಹಲಿ ಪ್ರವಾಸದಲ್ಲಿ ಇರುವ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದ ಕುರಿತು ಕಾಂಗ್ರೆಸ್ ಹೈಕಮಾಂಡ್ ನೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಪರಿಷತ್ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ ಪಕ್ಷದ ಹೈಕಮಾಂಡ್ಗೆ ಸಿಎಂ ಸಿದ್ಧರಾಮಯ್ಯ ನೀಡಿದರು. ಪ್ರಾದೇಶಿಕ ಮತ್ತು ಜಾತಿವಾರು ಲೆಕ್ಕಾಚಾರದಲ್ಲಿ ಸಿಎಂ ಸಿದರಾಮಯ್ಯ ಪರಿಷತ್ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ಗೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ವರಿಷ್ಠರಾದ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲಾ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Read More

ಬೆಳಗಾವಿ : 4 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಪರಾಧಿಗೆ 20 ವರ್ಷ ಜೈಲು ಶಿಕ್ಷ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ಬೆಳಗಾವಿಯ ಪೋಕ್ಸೋ ಕೋರ್ಟ್ ಜಡ್ಜ್ ಸಿಎಂ ಪುಷ್ಪಲತಾ ಆದೇಶ ಹೊರಡಿಸಿದ್ದಾರೆ. ಅಪರಾಧಿ ನಿಸಾರ್ ಅಹ್ಮದ್ ಫಕ್ರು ಸಾಬ್ ಚಪ್ಗಾವಿಗೆ 20 ವರ್ಷ ಶಿಕ್ಷೆ ವಿಧಿಸಿ ಬೆಳಗಾವಿಯ ಪೋಕ್ಸೋ ಕೋರ್ಟ್ ಜಡ್ಜ್ ಸಿಎಂ ಪುಷ್ಪಲತಾ ಆದೇಶ ಹೊರಡಿಸಿದ್ದಾರೆ. ಕೃತ್ಯ ನಡೆದ ಒಂದೇ ವರ್ಷದಲ್ಲಿ ವಿಚಾರಣೆ ಮುಗಿಸಿ ಶಿಕ್ಷೆ ಪ್ರಕಟಿಸಿದ್ದಾರೆ. 4 ವರ್ಷದ ಬಾಲಕಿಗೆ ಆರೋಪಿ ಚಾಕೊಲೇಟ್ ಆಮಿಷ ಒಡ್ಡಿ ಕರೆದೊಯ್ದಿದ್ದ. ಮನೆಗೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. 2024 ಫೆಬ್ರವರಿ 27 ರಂದು ನಂದಗಡ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು. ತನಿಖೆ ನಡೆಸಿ ಪೊಲೀಸರು ಎರಡು ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದೀಗ ಆರೋಪಿಗೆ ಜಡ್ಜ್ 20 ವರ್ಷ ಶಿಕ್ಷೆ ತಂಡ ವಿಧಿಸಿ…

Read More

ತುಮಕೂರು : ತುಮಕೂರಿನಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಇಬ್ಬರು ದಿವ್ಯಾಂಗ ಮಕ್ಕಳೊಂದಿಗೆ ತಾಯಿ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅದಲಗೆರೆ ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಅದಲಗೆರೆ ಯಲ್ಲಿ ಇಬ್ಬರು ದಿವ್ಯಾಂಗ ಮಕ್ಕಳ ಜೊತೆಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಆಗಲ ಗೆರೆ ಗ್ರಾಮದಲ್ಲಿ ಈ ಒಂದು ದುರಂತ ಸಂಭವಿಸಿದೆ. ತಾಯಿ ವಿಜಯಲಕ್ಷ್ಮಿ (45) ಮಗಳು ಚೂಡಾಮಣಿ (23) ಹಾಗು ಪುತ್ರ ನರಸಿಂಹರಾಜು (14) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಮಹದೇವಯ್ಯ ಮನೆಯಲ್ಲಿ ಇಲ್ಲದಿದ್ದಾಗ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಚೇಳೂರು ಠಾಣೆಯ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿಜಯಪುರ : ಬೇಸಿಗೆ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ತೆಪ್ಪ ಮುಗುಚಿ ಆರು ಜನರ ಪೈಕಿ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ವಿಜಯಪುರ ತಾಲೂಕಿನ ಕುಮಟಗಿ ಕೆರೆಯಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಮೊಹಮ್ಮದ್ ಕೈಫ್ ನಿಸಾರ್ ಜಮಾದಾರ್ (19) ಹಾಗೂ ಸೋಯಲ್ ಹತ್ತರಕಿಹಾಳ (25) ಎಂಬಿಬ್ಬರು ಮೃತಪಟ್ಟಿದ್ದಾರೆ. ಅಗ್ನಿಶಾಮಕದಳ, ಪೊಲೀಸರು ಹಾಗೂ ಸ್ಥಳೀಯ ಈಜುಗಾರರು ಸ್ಥಳಕ್ಕೆ ಬಂದು ಶೋಧ ನಡೆಸಿದ್ದರು. ಮೊಹಮ್ಮದ್ ಕೈಫ್ ನಿಸಾರ್ ಜಮಾದಾರ್ ಎಂಬವರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇಂದು ಸೋಯಲ್ ಹತ್ತರಕಿಹಾಳ ಅವರ ಶವ ಸಿಕ್ಕಿದೆ.

Read More