Subscribe to Updates
Get the latest creative news from FooBar about art, design and business.
Author: kannadanewsnow05
ಬಾಗಲಕೋಟೆ : ಸೈಬರ್ ವಂಚಕರು ಜನಸಾಮಾನ್ಯರನ್ನು ಗುರಿಯಾಗಿಸಿ ಕೊಂಡು ಡಿಜಿಟಲ್ ಮತ್ತು ಒನ್ಲೈನ್ ವಂಚನೆಯ ಮೂಲಕ ಅವರ ಖಾತೆಯಲ್ಲಿದ್ದಂತಹ ಲಕ್ಷಾಂತರ ಹಣವನ್ನು ದೋಚಿರುವ ಪ್ರಕರಣಗಳನ್ನು ನಾವು ಕೇಳಿದ್ದೇವೆ. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕೂಡ ಇದೀಗ ವಂಚನೆ ಎಸಗಿರುವುದು ಬೆಳಗೆ ಬಂದಿದೆ. ಹೌದು ಬಾಗಲಕೋಟೆಯಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದ್ದು, ಮೊಬೈಲ್ನಲ್ಲಿ ಒಂದು ಲಿಂಕ್ ಬರುತ್ತದೆ. ಈ ಒಂದು ಲಿಂಕ್ ಓಪನ್ ಮಾಡಿದ್ ತಕ್ಷಣ ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರ ಕಾಣಿಸಿಕೊಳ್ಳುತ್ತದೆ. ಲಿಂಕ್ ಓಪನ್ ಮಾಡಿದ ತಕ್ಷಣ ನಿಮ್ಮ ಖಾತೆಯಲ್ಲಿನ ಹಣ ಫೋನ್ ಪೇ ಮೂಲಕ 749 ವಂಚಕರ ಖಾತೆಗೆ ವರ್ಗಾವಣೆಯಾಗುತ್ತದೆ. ಮೊಬೈಲ್ ರಿಚಾರ್ಜ್ ಹೆಸರಿನಲ್ಲಿ ವಂಚಕರು ಈ ಒಂದು ಲಿಂಕ್ ಕ್ರಿಯೇಟ್ ಮಾಡಿದ್ದಾರೆ ಎನ್ನಲಾಗಿದೆ. ಇದನ್ನ ಮೊಬೈಲ್ ಇಂದ ಮೊಬೈಲ್ ಗೆ ಫೇಕ್ ಲಿಂಕ್ ಪಾಸ್ ಆಗುತ್ತಿದ್ದು, ಮತ್ತೊಂದೆಡೆ ಫೇಕ್ ಲಿಂಕ್ ಓಪನ್ ಮಾಡಿದ್ರೆ ಸಿಎಂ ಸಿದ್ದರಾಮಯ್ಯ ಪೋಟೋ ಓಪನ್ ಆಗುತ್ತೆ.…
ಬೆಂಗಳೂರು : ನಿನ್ನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದುಷ್ಕರ್ಮಿ ಒಬ್ಬ ಹಸುಗಳ ಕೆಚ್ಚಲು ಕೊಯ್ದಿದ್ದ ಘಟನೆ ನಡೆದಿತ್ತು. ಘಟನೆ ಸಂಭಂದ ಎಂದು ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ ಈ ಒಂದು ಘಟನೆ ವಾಸುವ ಮುನ್ನವೇ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯ ಬಳಿ ಹಾಡು ಹಗಲೇ ಮೇಯುತ್ತಿದ್ದ ಲಕ್ಷಾಂತರ ಮೌಲ್ಯದ ಎರಡು ಹಸುಗಳನ್ನು ಕಳ್ಳತನ ಮಾಡಲಾಗಿದೆ. ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರಿಶಿಣ ಕುಂಟೆಯ ಬಳಿ ಹಾಡು ಹಗಲೇ ಮೇಯುತಿದ್ದ ಎರಡು ಹಸುಗಳನ್ನು ಕಳ್ಳತನ ಮಾಡಲಾಗಿದೆ. ಒಂದುವರೆ ಲಕ್ಷ ಮೌಲ್ಯದ ಜರ್ಸಿ ಹಸು ಹಾಗೂ ಮಲೆನಾಡಿನ ಗಿಡ್ಡ ತಳಿಯ ಹಸು ಕಳ್ಳತನ ಮಾಡಲಾಗಿದೆ.ಎರಡು ಹಸು ಕಳೆದುಕೊಂಡು ಸದ್ಯ ರೈತರ ರಾಮಕೃಷ್ಣ ಕಂಗಾಲಾಗಿದ್ದಾರೆ. ಈ ಕುರಿತು ನೆಲಮಂಗಲದ ಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಬೆಳಗಾವಿ : ಖಾಸಗಿ ಆಸ್ಪತ್ರೆಯಲ್ಲಿ ನೌಕರ ಒಬ್ಬ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನ ಆಜರಿ ಸರ್ಜಿಕಲ್ ಹಾಸ್ಪಿಟಲ್ ನಲ್ಲಿ ಈ ಒಂದು ಘಟನೆ ನಡೆದಿದೆ. ಸುಭಾಷ್ (32) ಆತ್ಮಹತ್ಯೆ ಮಾಡಿಕೊಂಡಂತಹ ವ್ಯಕ್ತಿ ಎಂದು ತಿಳಿದುಬಂದಿದೆ.ಭಾನುವಾರ ರಜೆ ಇದ್ದರೂ ಕೂಡ ಸುಭಾಷ್ ಆಸ್ಪತ್ರೆಯಲ್ಲೇ ಉಳಿದಿದ್ದ. ಆಸ್ಪತ್ರೆಯಲ್ಲಿ ಯಾರು ಇಲ್ಲದ ವೇಳೆ ಸುಭಾಷ್ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಇದುವರೆಗೂ ನಿಖರವಾದಂತ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತು ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಈ ಒಂದು ಪ್ರಕರಣ ದಾಖಲಾಗಿದೆ.
ವಿಜಯಪುರ : ತವರು ಮನೆಯಿಂದ ಅಣ್ಣ ಆಸ್ತಿ ಕೊಡಲ್ಲ ಎಂದು ಹೇಳಿದಾಗ ತಾಯಿಯೊಬ್ಬಳು ತನ್ನ ನಾಲ್ವರು ಮಕ್ಕಳನ್ನು ಕಾಲುವಿಗೆ ಎಸೆದು ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ನಡುಗುಂದಿ ತಾಲೂಕಿನ ಬೇನಾಳ ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ಆಲಮಟ್ಟಿಯ ಎಡದಂಡೆ ಕಾಲುವೆಯಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ನಾಲ್ವರು ಮಕ್ಕಳನ್ನು ಕಾಲುವಿಗೆ ಎಸೆದ ಬಳಿಕ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ವಿಜಯಪುರ ಜಿಲ್ಲೆಯ ನೀಡಗುಂದಿ ತಾಲೂಕಿನ ಬೆನಾಳ ಗ್ರಾಮದ ಬಳಿ ಇರುವ ಆಲಮಟ್ಟಿ ಎಡದಂಡೆ ಕಾಲುವೆಯ ಬಳಿ ತಾಯಿಯೋಬ್ಬಳು ತನ್ನ ನಾಲ್ವರು ಮಕ್ಕಳನ್ನು ಮೊದಲು ಕಾಲುವಿಗೆ ಎಸೆದಿದ್ದಾಳೆ. ಬಳಿಕ ತಾನು ಕೂಡ ಮಕ್ಕಳು ಸಾವನ್ನಪ್ಪಿದ ಬಳಿಕ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಘಟನೆಯಲ್ಲಿ ತನು ನಿಂಗರಾಜ್ ಭಜಂತ್ರಿ (5) ರಕ್ಷಾ ನಿಂಗರಾಜ್ ಭಜಂತ್ರಿ (3) ಹುಸೇನ್ ನಿಂಗರಾಜ್ ಭಜಂತ್ರಿ ಹಾಗೂ ಹಸನ್ ಸೇರಿದಂತೆ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ.…
ಕಲಬುರ್ಗಿ : ತವರು ಮನೆಗೆ ಹೋಗಿದ್ದ ತನ್ನ ಪತ್ನಿಯನ್ನು ಕರೆತರುವಂತೆ ಪತಿಯೊಬ್ಬ ಕುಡಿದ ನಶೆಯಲ್ಲಿ ಪೊಲೀಸ್ ಠಾಣೆಗೆ ಬಂದು ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ನಡೆದಿದೆ. ಚಿಂಚೋಳಿ ತಾಲ್ಲೂಕಿನ ಚಿಂತಕುಂಟಾ ಗ್ರಾಮದ ನಿವಾಸಿ ಶಿವಕುಮಾರ ಅಮೃತ ಕಟ್ಟಿಮನಿ (28) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.ವಾಹನ ಚಾಲಕನಾದ ಶಿವಕುಮಾರ ಮದ್ಯ ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಗೆ ಬಂದಿದ್ದ. ತನ್ನ ಹೆಂಡತಿ ಯಲಕಪಳ್ಳಿಯ ತನ್ನ ತವರು ಮನೆಗೆ ಹೋಗಿದ್ದಾಳೆ. ಅವಳನ್ನು ಕರೆ ತಂದು ನನ್ನ ಜೊತೆಗೆ ಕಳುಹಿಸಬೇಕು ಎಂದು ಹೆಡ್ಕಾನ್ಸ್ಟೆಬಲ್ ಸುರೇಶ್ ಅವರಿಗೆ ಕೇಳಿಕೊಂಡರು. ಬಾಯಾರಿಕೆ ಆಗುತ್ತದೆ ಎಂದ ಶಿವಕುಮಾರ, ಠಾಣೆಯಲ್ಲಿದ್ದ ನೀರನ್ನು ಗ್ಲಾಸ್ನಲ್ಲಿ ತುಂಬಿಕೊಂಡರು. ನನ್ನ ಹೆಂಡತಿಯನ್ನು ನೀವು ಕರೆಸದೆ ಇದ್ದರೇ ಇಲ್ಲಿಯೇ ಸತ್ತು ಹೋಗುತ್ತೇನೆ ಎಂದು ಜೇಬಿನಲ್ಲಿ ಇರಿಸಿದ್ದ ಮಾತ್ರೆಗಳನ್ನು ಬಾಯಿಗೆ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಆತನ ವಿರುದ್ಧ ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ : ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿ ಆಲಮಟ್ಟಿಯ ಎಡದಂಡೆ ಕಾಲುವೆಯಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ನಾಲ್ವರು ಮಕ್ಕಳನ್ನು ಕಾಲುವಿಗೆ ಎಸೆದು ಕೊಂದ ಬಳಿಕ ತಾಯಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ. ಹೌದು ವಿಜಯಪುರ ಜಿಲ್ಲೆಯ ನಡುಗುಂದಿ ತಾಲೂಕಿನ ಬೆನಾಳ ಗ್ರಾಮದ ಬಳಿ ಇರುವ ಆಲಮಟ್ಟಿ ಎಡದಂಡೆ ಕಾಲುವೆಯ ಬಳಿ ತಾಯಿಯೋಬ್ಬಳು ತನ್ನ ನಾಲ್ವರು ಮಕ್ಕಳನ್ನು ಮೊದಲು ಕಾಲುವಿಗೆ ಎಸೆದಿದ್ದಾಳೆ ಬಳಿಕ ತಾನು ಕೂಡ ಮಕ್ಕಳು ಸಾವನ್ನಪ್ಪಿದ ಬಳಿಕ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಘಟನೆಯಲ್ಲಿ ತನು ನಿಂಗರಾಜ್ ಬಜಂತ್ರಿ (5) ರಕ್ಷಾ ನಿಂಗರಾಜ್ ಬಜಂತ್ರಿ (3) ಹುಸೇನ್ ನಿಂಗರಾಜ್ ಭಜಂತ್ರಿ ಸೇರಿದಂತೆ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತರನ್ನು ಕೋಲ್ಹಾರ ತಾಲೂಕಿನ ತಲೆಗಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಈ ವೇಳೆ ಕಾಲುವೆಗೆ ಜಿಗಿದಿದ್ದ ತಾಯಿ ಭಾಗ್ಯಗಳನ್ನು ಕೂಡಲೇ ಸ್ಥಳಿಯರು ರಕ್ಷಣೆ ಮಾಡಿದ್ದಾರೆ ಸದ್ಯ ಘಟನಾ ಸ್ಥಳಕ್ಕೆ ನಡೆಗುಂದಿ ಠಾಣೆ ಪೊಲೀಸರು ಭೇಟಿ ನೀಡಿದ್ದು…
ಹಾವೇರಿ : ಇಂದು ರಾಜ್ಯದಲ್ಲಿ ಪ್ರತ್ಯೇಕ ಮೂರು ಅಗ್ನಿ ಅವಘಡಗಳು ಸಂಭವಿಸಿವೆ. ಮೊದಲನೆಯದಾಗಿ ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು 7 ಜನ ಗಾಯಗೊಂಡಿದ್ದಾರೆ. ಬಳಿಕ ಬೆಂಗಳೂರಿನ ನೆಲಮಂಗಲದಲ್ಲಿ ಗಾರ್ಮೆಂಟ್ಸ್ ಅಂಗಡಿಗೆ ಬೆಂಕಿ ತಗುಲಿ 40 ಲಕ್ಷಕ್ಕೂ ಅಧಿಕ ಬಟ್ಟೆಗಳು ಸುಟ್ಟು ಕರಕಲಾಗಿವೆ. ಇದೀಗ ಹಾವೇರಿಯಲ್ಲಿ ಫ್ರಿಡ್ಜ್ ಸ್ಪೋಟಗೊಂಡು ಎರಡು ಲಕ್ಷಕ್ಕೂ ಅಧಿಕ ವಸ್ತುಗಳು ಸುಟ್ಟು ಭಸ್ಮವಾಗಿದೆ. ಹೌದು ಹಾವೇರಿಯ ಮಂಜುನಾಥ ನಗರದಲ್ಲಿ ಫ್ರಿಡ್ಜ್ ಸ್ಫೋಟಗೊಂಡಿರುವ ಘಟನೆ ನಡೆದಿದೆ. ನಗರದ ಚನ್ನಬಸಪ್ಪ ಗೂಳಪ್ಪನವರ್ ಎಂಬುವರಿಗೆ ಸೇರಿದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಮನೆಯಲ್ಲಿದ್ದ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.ಅಗ್ನಿ ಅವಘಡದ ಕುರಿತು ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಾವ ಕಾರಣಕ್ಕಾಗಿ ಫ್ರಿಡ್ಜ್ ಸ್ಪೋಟಗೊಂಡಿದೆ ಎಂದು ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು : ಈಗಾಗಲೇ ಮುಖ್ಯಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯ ಅವರು ಇದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಯಾವುದೇ ರೀತಿಯಾಗಿ ಭಿನ್ನಾಭಿಪ್ರಾಯ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಧೀರ್ ಸಿಂಗ್ ಸುರ್ಜೆವಾಲಾ ಅವರು ತಿಳಿಸಿದರು. ಇಂದು ಬೆಂಗಳೂರಿಗೆ ಆಗಮಿಸಿದ ಅವರು, ಭಾರತ ಜೋಡೋ ಭವನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಅವರು, ಈ ಒಂದು ಸಭೆಯಲ್ಲಿ ಭಾಗವಹಿಸಲು ಅವರು ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಡಿಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಕೆಲ ಸೆಲೆಕ್ಟೆಡ್ ಗ್ರೂಪ್ ಆಫ್ ಮೀಡಿಯಾದಿಂದ ಇತರ ಗೊಂದಲ ಸೃಷ್ಟಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಲ ಹೇಳಿಕೆ ನೀಡಿದರು. ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಆರೋಪಿಸುತ್ತಿದ್ದಾರೆ. ಸರ್ಕಾರದಲ್ಲಿ ಅಧಿಕಾರ ಬದಲಾವಣೆ, ಹೊಸ ನೇಮಕ ಯಾವುದು ಇಲ್ಲ.ಬಿಜೆಪಿ ಬಸನಗೌಡ ಪಾಟೀಲ ಯತ್ನಾಳ್ ಬಣ…
ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ಹಲವು ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದು, ಇದೀಗ ಮಾಗಡಿ ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ಅವರು ಸಿಎಂ ಸಿದ್ದರಾಮಯ್ಯ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಕುರಿತು ಶಾಸಕರು ಚರ್ಚೆ ಮಾಡುತ್ತಿಲ್ಲ. ಸದ್ಯ ಈ ಕುರಿತು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ಸಿದ್ದರಾಮಯ್ಯ ಬಳಿಕ ಉಪ ಮುಖ್ಯಮಂತ್ರಿ ಸಿಎಂ ಆಗಬೇಕಲ್ವ? ಎಂದು ತಿಳಿಸಿದರು. ಬೇರೆ ಬೇರೆಯವರು ಆಕಾಂಕ್ಷಿಗಳು ಇದ್ದಾರೆ ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ನೀಡಬೇಕು ಎಂದು ಒಕ್ಕಲಿಗರ ಸಭೆಯ ವಿಚಾರವಾಗಿದೆ.ಅವರವರ ಜಾತಿ ಅಭಿಮಾನದ ಮೇಲೆ ಹೇಳಿದ್ದಾರೆ. ಅಷ್ಟೇ ಹೈಕಮಾಣ್ ನಾಯಕರು ಅಂತಿಮವಾಗಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಬೆಂಗಳೂರಿನಲ್ಲಿ ಮಾಗಡಿ ಶಾಸಕ ಹೆಚ್ಚಿಸಿ ಬಾಲಕೃಷ್ಣ ಹೇಳಿಕೆ ನೀಡಿದರು.
ರಾಯಚೂರು : ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಸಿದ್ಧಿ ಆದಂತಹ ಚಿಂತಕ ಕೆ ಎಸ್ ಭಗವಾನ್ ಅವರು ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಿಂದೂ ಅನ್ನುವುದು ಒಂದು ಅವಮಾನಕರ ಶಬ್ದ ಎಂದು ಭಗವಾನ್ ಅವರು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ರಾಯಚೂರಿನ ದೇವದುರ್ಗದ ಕನಕಗುರುಪೀಠ ತಿಂಥಿಣಿ ಬ್ರಿಡ್ಜ್ನಲ್ಲಿ ನಡೆಯುತ್ತಿರುವ ಹಾಲುಮತ ಉತ್ಸವಕ್ಕೆ ಆಗಮಿಸಿದ್ದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಹಿಂದೂ ಅನ್ನೋದು ಅವಮಾನಕರ ಶಬ್ದ. ಯಾರು ಹೀನನಾಗಿದ್ದಾನೋ, ಯಾರು ದೂಷಣೆಗೆ ಒಳಗಾಗಿದ್ದಾನೋ ಅವನೇ ಹಿಂದೂ ಅಂತ ಚಿಂತಕ ಕೆ.ಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಶ್ಮೀರದ ಶೈವ ಗ್ರಂಥಗಳಲ್ಲಿ ಹಿಂದೂ ಪದಕ್ಕೆ ಯಾರೂ ಹೀನನಾಗಿದ್ದಾರೊ, ಯಾರು ದೂಷಣೆಗೆ ಒಳಗಾಗಿದ್ದಾರೋ ಅವನು ಹಿಂದೂ ಅಂತ ಇದೆ. ಹಾಗಾಗಿ ಹಿಂದೂ ಅನ್ನೋ ಶಬ್ದ ಬಹಳ ಅಪಮಾನಕರವಾಗಿದೆ. ಚಾತುರ್ವಣದಲ್ಲಿ ಶೂದ್ರ ಅನ್ನೋ ಶಬ್ದ ಸಹ ಮನುಸ್ಮೃತಿ ಪ್ರಕಾರ ಅಪಮಾನಕ್ಕೆ ಒಳಗಾಗಿದೆ. ಸಂವಿಧಾನದಲ್ಲಿ ಸಮಾನತೆ ಸ್ವಾತಂತ್ರ್ಯ ಸೇರಿ ದೊಡ್ಡ ತತ್ವವನ್ನ ಬಾಬಾ…













