Author: kannadanewsnow05

ದಕ್ಷಿಣಕನ್ನಡ : ಸುಹಾಸ್ ಶೆಟ್ಟಿ ಭೀಕರ ಕೊಲೆ ಘಟನೆ ಮಾಸುವ ಮುನವೇ ದಕ್ಷಿಣ ಕನ್ನಡದಲ್ಲಿ ಮತ್ತೆ ರಕ್ತ ಹರಿದಿದ್ದು, ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಅಬ್ದುಲ್ ರೆಹಮಾನ್ ಎನ್ನುವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಇದೀಗ ಈ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 15 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೌದು ನಿನ್ನೆ ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಹತ್ಯೆ ನಡೆದಿತ್ತು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇದೀಗ ಎಫ್ಐಆರ್ ದಾಖಲಾಗಿದೆ. ಅಬ್ದುಲ್ ರೆಹಮಾನ್ ಪರಿಚಯಸ್ಥರೇ ಆಗಿರುವ 15 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ದೀಪಕ್, ಸುಮಿತ್ ಸೇರಿದಂತೆ 15 ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ನಿಸಾರ್ ಎಂಬುವವರು ದೂರು ನೀಡಿದ್ದರು. ಇದೀಗ ಅವರ ದೂರನ್ನು ಆಧರಿಸಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. BNS ಕಾಯ್ದೆ 103,109, 118(1), 118 (2), 190 191(1),…

Read More

ಮೈಸೂರು : ಓನಡಿ ರಾಜ್ಯಾದ್ಯಂತ ಭಾರಿ ಮಳೆ ಆಗುತ್ತಿದೆ ಇನ್ನೊಂದು ಕಡೆ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗುತ್ತಿದ್ದು ಇದರಿಂದ ಅನೇಕರು ಬಿಳಿ ಆಗುತ್ತಿದ್ದಾರೆ ಇದೀಗ ಮೈಸೂರಿನಲ್ಲಿ ಭೀಕರ ಅಪಘಾತ ಒಂದು ಸಂಭವಿಸಿದ್ದು ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು ಮತ್ತೋರ್ವನಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನಲ್ಲಿ ನಡೆದಿದೆ. ಮರಕ್ಕೆ ಡಿಕ್ಕಿಯಾಗಿ ಓಮಿನಿ ಕಾರಿನಲ್ಲಿದ್ದ ಇಬ್ಬರು ದುರ್ಮರಣ ಹೊಂದಿದ್ದು, ಸಾಲಿಗ್ರಾಮ ತಾಲೂಕಿನ ಬೈಲಾಪುರ ಎಂಬ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಬೈಲಾಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಖಲೀಮ್ ರೆಹಮಾನ್ (65) ಹಾಗು ಶೇಖ್ ಅಬ್ದುಲ್ಲಾ ಖಾದರ್ (45) ಸಾವನಪ್ಪಿದ್ದಾರೆ. ಮೃತರು ಹಾಸನದ ಲಕ್ಷ್ಮಿಪುರಂ ಬಡಾವಣೆಯ ನಿವಾಸಿಗಳು ಎಂದು ತಿಳಿದು ಬಂದಿದೆ. ಇನ್ನು ಕಾರಿನಲ್ಲಿದಂತಹ ಮತ್ತೋರ್ವ ವ್ಯಕ್ತಿ ಶೇಕ್ ಮುನಿರ್ ಅಹಮದ್ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ನಿಯಂತ್ರಣ…

Read More

ರಾಯಚೂರು : ರಾಜ್ಯದಲ್ಲಿ ಈಗಾಗಲೇ ವರುಣ ಅಬ್ಬರಿಸುತ್ತಿದ್ದು, ನಿನ್ನೆ ರಾಜ್ಯದಲ್ಲಿ ಮಹಾಮಳೆಗೆ ಒಟ್ಟು 8 ಜನರು ಬಲಿಯಾಗಿದ್ದಾರೆ. ಇದೀಗ ರಾಯಚೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ತುಂಬಿ ಹರಿಯುತ್ತಿದ್ದ ಸೇತುವೆ ಮೇಲಿಂದ ಬೈಕ್ ಸವಾರ ನೊಬ್ಬ ಹಳ್ಳಕ್ಕೆ ಬಿದ್ದಿದ್ದಾನೆ. ಅದೃಷ್ಟವಶಾತ ಸ್ಥಳೀಯರ ಸಹಾಯದಿಂದ ಬಚಾವ್ ಆಗಿದ್ದಾನೆ. ಹೌದು ರಾಯಚೂರಿನಲ್ಲಿ ಮಳೆಗೆ ಹಳ್ಳದ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿವೆ. ತುಂಬಿ ಹರಿಯುತ್ತಿರುವ ಸೇತುವೆ ಮೇಲೆ ಇದೀಗ ಬೈಕ್ ಸವಾರನೊಬ್ಬ ದುಃಸಾಹಸಕ್ಕೆ ಮುಂದಾಗಿದ್ದು, ಮಾನ್ವಿ ತಾಲೂಕಿನ ದೋತರ ಬಂಡಿ ಬಳಿಯ ಸೇತುವೆ ಸಂಪೂರ್ಣವಾಗಿ ಮುಳುಗಿದೆ. ಈ ವೇಳೆ ಬೈಕ್ ಸಮೇತ ಹಳ್ಳಕ್ಕೆ ಸವಾರ ಬಿದ್ದಿದ್ದಾನೆ. ತಕ್ಷಣ ಸ್ಥಳಿಯರು ಆದನನ್ನು ರಕ್ಷಿಸಿದ್ದು ಬಳಿಕ ಜೆಸಿಬಿ ಮೂಲಕ ಬೈಕ್ ನನ್ನು ಹಳ್ಳದಿಂದ ಮೇಲಕ್ಕೆ ಎತ್ತಲಾಯಿತು.

Read More

ಬೆಂಗಳೂರು : ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್ ಪುಟ್ಟೇಗೌಡ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ಬೆಂಗಳೂರಿನ ಸ್ವಗೃಹದಲ್ಲಿ ಕೆ ಎನ್ ಪುಟ್ಟೇಗೌಡ ಅವರು ನಿಧನರಾಗಿದ್ದಾರೆ. ದೃಷ್ಟಿ ಹೀನರಿಗೆ ನೆರವಾಗಲೆಂದು ಅವರ ನೇತೃದಾನ ಮಾಡಲಾಗುತ್ತಿದೆ. ಕುಟುಂಬಸ್ಥರ ಮಾಹಿತಿ ಪ್ರಕಾರ ಆದಿಚುಂಚನಗಿರಿ ಆಸ್ಪತ್ರೆಗೆ ಕೆ.ಎನ್ ಪುಟ್ಟೇಗೌಡ ದೇಹದಾನ ಮಾಡಲು ಇದೀಗ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಕೆ.ಎನ್ ಪುಟ್ಟೇಗೌಡ ಪ್ರಮಾಣಿಕ ಮತ್ತು ಮೌಲ್ಯಯುತ ವಕೀಲರಾಗಿ ಹೆಸರಾಗಿದ್ದರು. ಬಿಬಿಎಂಪಿ ವಕೀಲರಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ರಕ್ಷಿಸಿದ್ದರು. ವಕೀಲರ ಸಂಘದ ಅಧ್ಯಕ್ಷರಾಗಿಯೂ ಕೂಡ ಉತ್ತಮ ಆಡಳಿತವನ್ನು ನಡೆಸಿದ್ದರು.

Read More

ಬೆಂಗಳೂರು : ಗಿಗ್ ಕಾರ್ಮಿಕರ ಸಾಮಾಜಿಕ‌ ಭದ್ರತೆ ಕಲ್ಪಿಸುವ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಸೂದೆ 2025ಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ಇದೀಗ ಅಧಿಸೂಚನೆ ಹೊರಡಿಸಿದೆ. ಈ ಸುಗ್ರೀವಾಜ್ಞೆಯಿಂದ ಪ್ಲಾಟ್‌ಫಾರ್ಮ್ ಆಧಾರಿತ ಸೇವೆಗಳಾದ ಸ್ವಿಗ್ಗಿ, ಜೊಮಾಟೊಗಳಲ್ಲಿ ಫುಡ್‌ ಡೆಲವರಿ ಮಾಡುವ, ರೈಡ್‌ ಶೇರಿಂಗ್‌ ಸೇವೆಗಳಾದ ಓಲಾ, ಉಬರ್‌, ರ್‍ಯಾಪಿಡೋ ಯಾತ್ರಿ ಇತ್ಯಾದಿ ಅಪ್ಲಿಕೇಷನ್ ಆಧಾರಿತ ಚಾಲಕರು, ಇ–ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್‌, ಪ್ಲಿಪ್‌ಕಾರ್ಟ್‌, ಬಿಗ್‌ ಬಾಸ್ಕೆಟ್‌ ಮತ್ತಿತ್ತರ ಕ್ಷೇತ್ರಗಳಲ್ಲಿ ಪೂರ್ಣಕಾಲಿಕ ಅಥವಾ ಅರೆಕಾಲಿಕ ಡೆಲವರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು, ಕಾರ್ಮಿಕ ಕಾನೂನುಗಳಡಿ ಲಭ್ಯವಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಕೌನ್ಸೆಲಿಂಗ್​ ಮೂಲಕ ವೈದ್ಯಾಧಿಕಾರಿಗಳ ವರ್ಗಾವಣೆ: ಕೌನ್ಸಿಲಿಂಗ್ ಮೂಲಕ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಾವಣೆ ಮಾಡಲು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವೈದ್ಯಾಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ ತಿದ್ದುಪಡಿ ಮಸೂದೆ 2025ಕ್ಕೂ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.‌ಇದೆ ಪ್ರಕಾರ ವೈದ್ಯಾಧಿಕಾರಿ ಮತ್ತು…

Read More

ನ್ಯೂಯಾರ್ಕ್ : ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕಾ ಸರ್ಕಾರ ಇದೀಗ ಬಿಗ್ ಶಾಕ್ ನೀಡಿದೆ. ಅಮೆರಿಕಾದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ವೀಸಾ ನಿಷೇಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಹೊಸದಾಗಿ ವೀಸಾ ಸಲ್ಲಿಸುವ ಪ್ರಕ್ರಿಯೆಗೆ ಡೊನಾಲ್ಡ್ ಟ್ರಂಪ್ ಇದೀಗ ತಡೆ ನೀಡಿದ್ದಾರೆ. ವೀಸಾ ನಿಷೇಧದಿಂದ ಅಮೆರಿಕದ ಹಲವು ವಿಶ್ವವಿದ್ಯಾಲಯಗಳಿಗೆ ಸಂಕಷ್ಟ ಎದುರಾಗಿದೆ. ಹೌದು ಟ್ರಂಪ್ ಸರ್ಕಾರವು ಹೊಸದಾಗಿ ವೀಸಾಗೋಸ್ಕರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ವೀಸಾ ನೀಡದಂತೆ ನಿಗದಿಪಡಿಸದಂತೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಪ್ರಪಂಚದಾದ್ಯಂತದ ಯುಎಸ್ ರಾಯಭಾರ ಕಚೇರಿಗಳಿಗೆ ಆದೇಶಿಸಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ, ಅಗತ್ಯವಿರುವ ಸಾಮಾಜಿಕ ಮಾಧ್ಯಮ ತಪಾಸಣೆ ಮತ್ತು ಪರಿಶೀಲನೆಯ ವಿಸ್ತರಣೆಗೆ ಸಿದ್ಧತೆಯಾಗಿ, ಮುಂದಿನ ಮಾರ್ಗದರ್ಶನ ನೀಡುವವರೆಗೆ ಕಾನ್ಸುಲರ್ ವಿಭಾಗಗಳು ಯಾವುದೇ ಹೆಚ್ಚುವರಿ ವಿದ್ಯಾರ್ಥಿ ಅಥವಾ ವಿನಿಮಯ ಸಂದರ್ಶಕರ (ಎಫ್, ಎಂ ಮತ್ತು ಜೆ) ವೀಸಾ ನೇಮಕಾತಿ ಸಾಮರ್ಥ್ಯವನ್ನು ಸೇರಿಸಬಾರದು ರೂಬಿಯೊ ಸೂಚಿಸಿದ್ದಾರೆ. ನೀವು ಶಾಲೆ ಬಿಟ್ಟರೆ, ತರಗತಿಗಳನ್ನು ಬಿಟ್ಟುಬಿಟ್ಟರೆ ಅಥವಾ ನಿಮ್ಮ ಶಾಲೆಗೆ ತಿಳಿಸದೆ ನಿಮ್ಮ ಅಧ್ಯಯನ ಕಾರ್ಯಕ್ರಮವನ್ನು…

Read More

ಬೆಂಗಳೂರು : ಬೆಂಗಳೂರಿನಲ್ಲಿ ಭೀಕರವಾದ ಕೊಲೆ ನಡೆದಿದ್ದು, ಪತಿಯೊಬ್ಬ ಮನೆಯಲ್ಲಿದ್ದ ಡಂಬಲ್ಸ್ ಗಳಿಂದ ರೂಂನಲ್ಲಿ ಮಲಗಿದ್ದ ಪತ್ನಿಯನ್ನು ಭೀಕರವಾಗಿ ಕೊಲೆಮಾಡಿ ಬಳಿಕ ಪತಿ ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಸುಮಾ ಎಂದು ತಿಳಿದುಬಂದಿದ್ದು, ಸುಮಾಳನ್ನು ಕೊಲೆ ಮಾಡಿದ ಗಂಡ ಬಸವಚಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಎಸ್ ಪಿ ವೆಂಕಟೇಶ್ ಪ್ರಸನ್ನ ಹಾಗೂ ಡಿವೈಎಸ್ಪಿ ರವಿ ಭೇಟಿ ನೀಡಿ ಮಾಹಿತಿ ಪಡೆದರು.

Read More

ಬೆಂಗಳೂರು : ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ರಾಜ್ಯದ ಉದ್ದಗಲಕ್ಕೂ ಮುಂಗಾರಿನ ಮೊರೆತ ಹೆಚ್ಚಾಗಿದೆ. ಕರಾವಳಿ, ಮಲೆನಾಡಿನಲ್ಲಿ ಮುಂಗಾರು ಮಳೆ ಅಬ್ಬರಿಸಿದರೆ, ಹಲವೆಡೆ ಮಳೆ ಸಂಬಂಧಿತ ಅವಘಡಗಳಿಂದ 8 ಮಂದಿ ಪ್ರಾಣ ಬಿಟ್ಟಿದ್ದಾರೆ. ಹೌದು ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 8 ಮಂದಿ ಮೃತಪಟ್ಟಿದ್ದಾರೆ. ಬೆಳಗಾವಿಯಲ್ಲಿ ಇಬ್ಬರು ಬಾಲಕರು ಸಾವು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನಾಗನೂರ ಪಿಎ ಗ್ರಾಮದ ಗಣೇಶ್ ಕಾಂಬಳೆ ಎಂಬ 9 ವರ್ಷದ ಬಾಲಕ ಹಾಗೂ ದೀಪಕ್ ಕಾಂಬಳೆ ಎಂಬ 11 ವರ್ಷದ ಬಾಲಕ ಎತ್ತಿನಗಾಡಿಯಲ್ಲಿ ತೆರಳುತ್ತಿದ್ದರು. ನಿರಂತರ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳದಲ್ಲಿ ದಾರಿ ಕಾಣದೇ ಎತ್ತಿನ ಬಂಡಿ ಮಗುಚಿಬಿದ್ದಿದೆ. ಪರಿಣಾಮವಾಗಿ ಮಕ್ಕಳಿಬ್ಬರು ಮೃತಪಟ್ಟಿದ್ದು, ಒಂದು ಎತ್ತು ಕೂಡ ಸಾವನ್ನಪ್ಪಿದೆ. ಹೇಳಿ ತಂದೆ ಇಬ್ಬರು ಮಕ್ಕಳನ್ನು ಅಪ್ಪಿಕೊಂಡು ಅಳುತ್ತಿರುವುದು ನೋಡುಗರ ಕರುಳು ಕಿವುಚಿದಂತಾಗಿದೆ. ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿ ಮಳೆ ಹೆಚ್ಚಾಗುತ್ತಿದ್ದಂತೆಯೇ ನದಿಗಳ ಅಬ್ಬರ ಕೂಡಾ ಹೆಚ್ಚಾಗಿದೆ. ಈ ಮಧ್ಯೆ, ಕಾವೇರಿ ನದಿಯಲ್ಲಿ ಈಜಲು…

Read More

ಬೆಂಗಳೂರು : ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ದಾಳಿ ನಡೆಸಿ, ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದು ಅಲ್ಲದೆ ಈ ಒಂದು ದಾಳಿಯಲ್ಲಿ ನೂರಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದಿದೆ. ಈ ನೆಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಸೈನಿಕರಿಗೆ ಗೌರವ ಸೂಚಿಸಲು ಜೈ ಹಿಂದ್ ಕಾರ್ಯಕ್ರಮ ಆಯೋಜನೆ ಮಾಡಿದೆ. ಹೌದು ಆಪರೇಷನ್ ಸಿಂಧೂರ್ ಯಶಸ್ವಿ ಹಿನ್ನೆಲೆಯಲ್ಲಿ ಜೈ ಹಿಂದ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸೈನಿಕರಿಗೆ ಧನ್ಯವಾದ ಅರ್ಪಿಸಲು ಇಂದು ಜೈ ಹಿಂದ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಟೌನ್ ಹಾಲ್ ನಲ್ಲಿ ಈ ಒಂದು ಜೈಹಿಂದ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಸಚಿವರು, ಶಾಸಕರು ಸೇರಿದಂತೆ ಪ್ರಮುಖರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Read More

ದಕ್ಷಿಣಕನ್ನಡ : ರಾಜಧಾನಿ ಬೆಂಗಳೂರು ಮಹಾನಗರ ಸೇರಿದಂತೆ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ವರುಣಾರ್ಭಟದಿಂದ ಅನೇಕ ಕಡೆಗಳಲ್ಲಿ ಅವಾಂತರ ಸೃಷ್ಟಿಯಾಗಿದ್ದು ಹಲವು ಜನರು ಮಹಾಮಳೆಗೆ ಬಲಿಯಾಗಿದ್ದಾರೆ. ಈಗ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೌದು ಮಳೆಗೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮೀನುಗಾರರ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಪ್ರವಾಸಿಗರು ಮತ್ತು ಸಮುದ್ರ ತೀರ ಮತ್ತು ಚಾರಣಕ್ಕೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.

Read More