Author: kannadanewsnow05

ಚಿತ್ರದುರ್ಗ : ಬಯಲುಸೀಮೆ ಜನರ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿದ್ದು, ಇದೀಗ ವಾಣಿವಿಲಾಸ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಬಾಗಿನ ಅರ್ಪಿಸಿದರು. ಹೌದು ವಾಣಿ ವಿಲಾಸ್ ಸಾಗರ ಜಲಾಶಯ ನಿರ್ಮಾಣವಾದ ದಿನದಿಂದ ಇಲ್ಲಿಗೆ ಮೂರನೇ ಬಾರಿ ಕೂಡಿ ಬಿದ್ದಿದ್ದು ಈ ಹಿನ್ನಲೆಯಲ್ಲಿ ಇಂದು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಿರಿಯೂರು ತಾಲೂಕಿನಲ್ಲಿರುವ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರೊಂದಿಗೆ ಗಂಗಾ ಮಾತೆಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ವಾಣಿ ವಿಲಾಸ ಸಾಗರ ಕಡೆಗೂ ಕೋಡಿ ಬಿದ್ದಿದ್ದು, ಚಿತ್ರದುರ್ಗ ಜಿಲ್ಲೆಯ ರೈತರು ಫುಲ್ ಖುಷಿಯಾಗಿದ್ದಾರೆ. ಜಲಾಶಯ ನಿರ್ಮಾಣವಾದಾಗಿನಿಂದ ಮೂರು ಬಾರಿ ಭರ್ತಿಯಾಗಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬ ಡಿಕೆ ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಸೇರಿದಂತೆ ಹಲವು ಕಾಂಗ್ರೆಸ್ ಸಚಿವರು, ಶಾಸಕರು ಸ್ಥಳೀಯ ಮುಖಂಡರು ಕಾರ್ಯಕರ್ತರು ಈ ಒಂದು ಬಾಗಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Read More

ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಉಪಚುನಾವಣೆಯಲ್ಲಿ ಸಂಡೂರಿನಲ್ಲಿ ಸೋಲಲು ಶ್ರೀರಾಮುಲು ಅವರೇ ಕಾರಣ ಎಂದು ಹೇಳಿಕೆ ನೀಡಿದ್ದರಿಂದ ಸಹಜವಾಗಿ ಶ್ರೀರಾಮುಲು ಅವರು ಬೇಸರ ವ್ಯಕ್ತಪಡಿಸಿ ಪಕ್ಷ ತೊರೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈಗ ಇವರ ಒಂದು ಮುನಿಸ್ಸಿಗೆ ಹೈಕಮಾಂಡ್ ಎಂಟ್ರಿ ಆಗಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಫೋನ್ ಕರೆ ಮಾಡಿ ಮನವೊಲಿಕೆಗೆ ಮುಂದಾಗಿದ್ದಾರೆ. ಹೌದು ಶ್ರೀರಾಮುಲು ಮುನಿಸನ್ನು ತಣಿಸಲು ಇದೀಗ ಹೈಕಮಾಂಡ್ ಎಂಟ್ರಿ ಆಗಿದೆ. ರಾಮುಲುಗೆ ಕರೆ ಮಾಡಿ ಮನವೊಲಿಕೆಗೆ ಜೆಪಿ ನಡ್ಡಾ ಇದೀಗ ಪ್ರಯತ್ನಿಸಿದ್ದಾರೆ.ದೆಹಲಿಗೆ ಬನ್ನಿ ಎಂದು ಜೆಪಿ ನಡ್ಡಾ ಶ್ರೀರಾಮುಲು ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಆಗಿದ್ದರ ಬಗ್ಗೆ ಮನವರಿಕೆ ಮಾಡಿದ್ದಾರೆ.ಜೆಪಿ ನಡ್ಡಾಗೆ ಶ್ರೀರಾಮುಲು ಸಭೆಯಲ್ಲಿ ಏನೇನಾಯಿತು ಎಂಬುದರ ಕುರಿತು ಸಂಪೂರ್ಣವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.ಪಕ್ಷ ಬಿಡುವ ಬಗ್ಗೆ ಹಾಗೂ…

Read More

ಬೆಳಗಾವಿ : ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಇದೀಗ ಆತ್ಮಹತ್ಯೆ ಮಾಡಿಕೊಳ್ಳುವವರು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಬೆಳಗಾವಿ ತಾಲೂಕಿನ ಯಮನಾಪುರದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಮಹಿಳೆ ಒಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೌದು ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾವಿಗೆ ಹಾರಿ ಮಹಿಳೆ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಯಮನಾಪುರದಲ್ಲಿ ಈ ಒಂದು ಘಟನೆ ನಡೆದಿದೆ. 52 ವರ್ಷದ ಸರೋಜಾ ಕಿರಬಿ ಎನ್ನುವ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಸರೋಜ ಹುಕ್ಕೇರಿ ತಾಲೂಕಿನ ಶಿರೂರು ಮೂಲದ ಮಹಿಳೆ ಎಂದು ತಿಳಿದುಬಂದಿದೆ. ಸರೋಜ ಹೊಳೆಪ್ಪ ಎನ್ನುವವರು ಬಳಿ 2.3 ಲಕ್ಷ ಸಬ್ಸಿಡಿ ಸಾಲವನ್ನು ಪಡೆದಿದ್ದರು ಹೊಳೆಪ್ಪಾ ದಡ್ಡಿಯನ್ನು ನಂಬಿ ಸರೋಜಾ ಸಾಲವನ್ನು ಪಡೆದುಕೊಂಡಿದ್ದರು. ಹೊಳೆಪ್ಪನಿಗೆ ಅರ್ಧದಷ್ಟು ಹಣವನ್ನು ಸರೋಜಾ ನೀಡಿದ್ದರು. ಅರ್ಧ ಸಾಲ ಕಟ್ಟಿದ ಮೇಲೆ ಪೂರ್ತಿ ಸಾಲ ಕಟ್ಟಲು ಸರೋಜಾ ಗೆ ಸೂಚನೆ ನೀಡಲಾಗಿದೆ. ಸಬ್ಸಿಡಿ ಸಾಲ ಕೊಟ್ಟಿಲ್ಲ ಪೂರ್ತಿ ಹಣ ಕಟ್ಟಲು…

Read More

ಮಂಗಳೂರು : ಇಂದು ಮಂಗಳೂರಿನ ಬಿಜೆ ಬಳಿ ಇರುವ ಕಲರ್ಸ್ ಮಸಾಜ್ ಪಾರ್ಲರ್ ಮೇಲೆ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿ ಪಾರ್ಲರ್ ಅಲ್ಲಿದ್ದ ಪೀಠೋಪಕರಣಗಳನ್ನು ದ್ವಂಸ ಮಾಡಿದ್ದರು ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ, ರಾಮಸೇನೆ ಸಂಘಟನೆಯ ಸಂಸ್ಥಾಪಕನಾಗಿರುವ ಪ್ರಸಾದ ಅತಾವರ್ ಅವರನ್ನು ಸಿಸಿಬಿ ಇದೀಗ ವಶಕ್ಕೆ ಪಡೆದುಕೊಂಡಿದೆ. ಹೌದು ಮಸಾಜ್ ಸೆಂಟರ್ ನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಮಂಗಳೂರಿನ ಬಿಜೆ ಬಳಿಯ ಕಲರ್ಸ್ ಹೆಸರಿನ ಮಸಾಜ್ ಸೆಂಟರ್ ಮೇಲೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಪ್ರಸಾದ್ ಅತಾವರ್ ನೇತೃತ್ವದ ಸಂಘಟನೆ ಈ ಒಂದು ದಾಳಿ ನಡೆಸಿತ್ತು. ಮಸಾಜ್ ಸೆಂಟರ್ ಗಾಜು ಒಡೆದು ಹಾಗೂ ಪೀಠೋಪಕರಣ ಧ್ವಂಸಗೊಳಿಸಿತ್ತು.ನಮ್ಮ ಕಾರ್ಯಕರ್ತರೇ ದಾಳಿ ನಡೆಸಿದ್ದಾರೆ ಎಂದು ಪ್ರಸಾದ ಅತ್ತವರ್ ಒಪ್ಪಿಕೊಂಡಿದ್ದಾರೆ. ಇದೀಗ ಪ್ರಸಾದ್ ಅತ್ತಾವರ ಅವರನ್ನು ವಶಕ್ಕೆ ಪಡೆದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

Read More

ಬಳ್ಳಾರಿ : ಬಿಜೆಪಿಯ ಶಾಸಕ ಜನಾರ್ಧನ ರೆಡ್ಡಿ ಹಾಗೂ ಮಾಜಿ ಸಚಿವ ಬಿ ಶ್ರೀರಾಮುಲು ನಡುವಿನ ಸ್ನೇಹದಲ್ಲಿ ಇದೀಗ ಬಿರುಕು ಮೂಡಿದೆ. ಇದರ ಮಧ್ಯ ಬಿ ಶ್ರೀರಾಮುಲು ಅವರು ಮತ್ತೊಂದು ಹೇಳಿಕೆ ನೀಡಿದ್ದು, ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಕೂಡ್ಲಿಗಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿದರು. ಇಂದು ಬಳ್ಳಾರಿಯಲ್ಲಿ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದು, ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಶ್ರೀರಾಮುಲು ಅವರೇ ಕಾರಣ ಎಂದು ಜನಾರ್ದನ ರೆಡ್ಡಿ ಅವರು ಹೇಳಿಕೆ ನೀಡಿದ್ದರಿಂದ ನೆನ್ನೆ ಶ್ರೀರಾಮುಲು ಪಕ್ಷ ತೊರೆಯುವುದಾಗಿ ಬೇಸರದಿಂದ ಹೇಳಿಕೆ ನೀಡಿದ್ದರು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಕ್ಷೇತ್ರದಲ್ಲಿ ನಾನೇ ಸ್ಪರ್ಧಿಸುತ್ತೇನೆ ಎಂದು ಶ್ರೀರಾಮುಲು ಅವರು ಘೋಷಿಸಿದ್ದಾರೆ ನನಗೂ ರಾಜ್ಯಾಧ್ಯಕ್ಷ ಆಗುವ ಆಸೆ ಇದೆ ಸಂದರ್ಭದಲ್ಲಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಆಯ್ಕೆ ಕುರಿತು ಚುನಾವಣೆ ನಡೆಯಲಿದ್ದು ಈ ಕುರಿತು ಮಾತನಾಡಿದ ಅವರು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನವನ್ನು ಕೊಟ್ಟರೆ ಒಪ್ಪಿಕೊಳ್ಳುತ್ತೇನೆ. ಸಣ್ಣವರೆಲ್ಲ ರಾಜ್ಯಾಧ್ಯಕ್ಷರಾಗುತ್ತಿದ್ದಾರೆ…

Read More

ಬಳ್ಳಾರಿ : ಬಿಜೆಪಿಯ ಶಾಸಕ ಜನಾರ್ಧನ ರೆಡ್ಡಿ ಹಾಗೂ ಮಾಜಿ ಸಚಿವ ಬಿ ಶ್ರೀರಾಮುಲು ನಡುವಿನ ಸ್ನೇಹದಲ್ಲಿ ಇದೀಗ ಬಿರುಕು ಮೂಡಿದೆ. ಇದರ ಮಧ್ಯ ಬಿ ಶ್ರೀರಾಮುಲು ಅವರು ಮತ್ತೊಂದು ಹೇಳಿಕೆ ನೀಡಿದ್ದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ನೀಡಿದರೆ ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು. ಇಂದು ಬಳ್ಳಾರಿಯಲ್ಲಿ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದು, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನವನ್ನು ಕೊಟ್ಟರೆ ಒಪ್ಪಿಕೊಳ್ಳುತ್ತೇನೆ. ಸಣ್ಣವರೆಲ್ಲ ರಾಜ್ಯಾಧ್ಯಕ್ಷರಾಗುತ್ತಿದ್ದಾರೆ ಅದಕ್ಕಾಗಿ ರಾಜ್ಯಾಧ್ಯಕ್ಷರ ಆಯ್ಕೆಗೆ ವೋಟಿಂಗ್ ಮಾಡಿದ್ದಾರೆ ಎಂದು ಶ್ರೀರಾಮುಲು ಅವರು ತಿಳಿಸಿದ್ದಾರೆ. ನನಗೂ ಅಧ್ಯಕ್ಷರಾಗಬೇಕೆಂಬ ಆಸೆ ಇದೆ ನೇಮಿಸಿದರೆ ಒಪ್ಪಿಕೊಳ್ಳುತ್ತೇನೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಎಲೆಕ್ಷನ್ ಮಾಡಿದರೆ ಒಪ್ಪಿಕೊಳ್ಳಲ್ಲ. ನಾನು ಎಲೆಕ್ಷನ್ ನಲ್ಲಿ ಸೋತಿದ್ದೇನೆ. ನಿರುದ್ಯೋಗಿಯಾಗಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಗೆ ಕೂಡ್ಲಿಗಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಕೂಡ್ಲಿಗಿಯಲ್ಲಿ ಮುಂದುವರಿಯುವೆ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಳ್ಳಾರಿಯಲಿ ಬಿಜೆಪಿಯ ಮಾಜಿ ಸಚಿವ ಶ್ರೀರಾಮುಲು ತಿಳಿಸಿದರು. ಇದೆ ವೇಳೆ ಬಳ್ಳಾರಿಯಲ್ಲಿ ಬೆಂಬಲಿಗರ…

Read More

ಬೆಂಗಳೂರು : ಕಳೆದ ಹಲವಾರು ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಬ್ಯಾಂಕ್ ದರೋಡೆ ಪ್ರಕರಣಗಳು ನಡೆದಿದ್ದು ಇಡೀ ರಾಜ್ಯವನ್ನೇ ಬೆಚ್ಚಿ ಬೆಳಿಸಿವೆ. ಇದೀಗ ಬೆಂಗಳೂರಿನಲ್ಲಿ ಕಾರಿನಲ್ಲಿದ್ದಂತಹ ಬ್ಯಾಗನ್ನು ಕ್ಷಣಾರದದಲ್ಲಿ ಗಾಜು ಒಡೆದು ಕಳ್ಳರು ಬ್ಯಾಕ್ ಕದ್ದೊಯ್ದಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ. ಹೌದು ಕಾರಿನ ಗಾಜು ಒಡೆದು ಕ್ಷಣಮಾತ್ರದಲ್ಲಿ ಬ್ಯಾಗ್ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಿನ್ನೆ ಸಂಜೆ ಈ ಒಂದು ಕಳ್ಳತನ ನಡೆದಿದೆ. ಹೊಂಚು ಹಾಕಿ ಕಾರಿನಲ್ಲಿದ್ದಂತಹ ಬ್ಯಾಗನ್ನು ಖದೀಮರು ಕಳ್ಳತನ ನಡೆಸಿದ್ದಾರೆ.ಬ್ಯಾಗ್ ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹಾಸನ : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದುಷ್ಕರ್ಮಿ ಒಬ್ಬ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಘಟನೆ ನಡೆದಿತ್ತು. ಅದಾದ ಬಳಿಕ ಮೈಸೂರಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಕೂಡ ಹಸುಗಳ ಬೆಲೆ ಹಲ್ಲೆ ನಡೆದಿತ್ತು. ಇದೀಗ ಹಾಸನದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ಚರಂಡಿಯಲ್ಲಿ ಕಿಡಿಗೇಡಿಗಳು ಹಾವುಗಳ ಚರ್ಮ ಸುಲಿದು ಬಿಸಾಡಿರುವ ಘಟನೆ ವರದಿಯಾಗಿದೆ. ಹೌದು ಹಾಸನ ಜಿಲ್ಲೆಯ ಹೊಳೆನರಸೀಪುರದ ದರ್ಜಿ ಬೀದಿಯಲ್ಲಿ ಒಂದು ಘಟನೆ ನಡೆದಿದೆ. ಚರಂಡಿಯಲ್ಲಿ ಹಾವುಗಳ ಚರ್ಮ ಮತ್ತು ಅವಶೇಷಗಳು ಪತ್ತೆಯಾಗಿವೆ. ಹಾವುಗಳ ಚರ್ಮ ಸುಲಿದು ಕಿಡಿಗಿಡಿಗಳು ಮಾಂಸ ಬೇರ್ಪಡಿಸಿದ್ದಾರೆ. ಚರಂಡಿಯಲ್ಲಿ ಹಾವುಗಳ ಚರ್ಮ ಹಾಗೂ ಅವಶೇಷಗಳು ಪತ್ತೆಯಾಗಿವೆ. ಘಟನೆಯಿಂದ ಸಹಜವಾಗಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕಿಡಿಗೇಡಿಗಳು ಹಾವುಗಳ ಮಾಂಸಕ್ಕಾಗಿ ಹಾವಿನ ಚರ್ಮ ಸುಲಿದಿರುವ ಶಂಕೆ ವ್ಯಕ್ತವಾಗುತ್ತಿದೆ. ಸದ್ಯ ಸ್ಥಳೀಯರಲ್ಲಿ ಈ ಒಂದು ಘಟನೆ ಆತಂಕ ಸೃಷ್ಟಿ ಮಾಡಿದೆ. ಘಟನೆ ಕುರಿತು ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ…

Read More

ಬೆಂಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರು ಅಶ್ಲೀಲ ಪದ ಬಳಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೈಕೋರ್ಟ್ ಸಿಟಿ ರವಿ ಅವರಿಗೆ ಬಿಗ್ ರಿಲೀಫ್ ನೀಡಿದ್ದು ಫೆಬ್ರವರಿ 30ರವರೆಗೆ ಸಿಟಿ ರವಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದೆ. ಹೌದು ಇಂದು ಹೈಕೋರ್ಟ್ ನಲ್ಲಿ ಈ ಪ್ರಕರಣದ ವಿಚಾರವಾಗಿ ವಾದ ಪ್ರತಿವಾದ ನಡೆಯಿತು. ವಿಧಾನಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಬಿಜೆಪಿ ಎಂಎಲ್​​ಸಿ ಸಿಟಿ ರವಿಗೆ ಕರ್ನಾಟಕ ಹೈಕೋರ್ಟ್ ಇಂದು ಬಿಗ್ ರಿಲೀಫ್ ನೀಡಿದೆ. ಸಿಟಿ ರವಿ ವಿರುದ್ಧ ಫೆಬ್ರವರಿ 30 ರವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚಿಸಿದೆ. ಸಿಟಿ ರವಿ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದರು. ಇದಕ್ಕೆ ಪ್ರತಿಯಾಗಿ ಕ್ರಿಮಿನಲ್ ಕೃತ್ಯಗಳಿಗೆ ವಿನಾಯಿತಿ ಇಲ್ಲವೆಂದು ಎಸ್​ಪಿಪಿ ಬಿಎ ಬೆಳ್ಳಿಯಪ್ಪ ವಾದ ಮಂಡಿಸಿದರು. ತನಿಖೆ ವ್ಯಾಪ್ತಿಯ ಪ್ರಶ್ನೆಯನ್ನು ನಾವು ತೀರ್ಮಾನಿಸಬೇಕಿದೆ…

Read More

ರಾಯಚೂರು : ನಿನ್ನೆಯಷ್ಟೇ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅರಗಿನಮರ ಕ್ಯಾಂಪ್ ಬಳಿ ಟೈರ್ ಸ್ಫೋಟಗೊಂಡು ವಾಹನ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿತ್ತು. ಇದೀಗ ಈ ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದ್ದು ಲಾರಿ ಹಾಗೂ ಕಾರಿನ ಮಧ್ಯ ಭೀಕರ ಅಪಘಾತ ಸಂಭವಿಸಿ ಜೆಸ್ಕಾಂ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೊಮ್ಮನಾಳ ಕ್ರಾಸ್ ಸಮೀಪ ಲಾರಿ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ವೆಂಕಟಾಚಲಪತಿ (48) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸ್ಥಳಕ್ಕೆ ಮಾನ್ವಿ ತಾಲೂಕು ಮಾನ್ವಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More