Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಗಣರಾಜ್ಯೋತ್ಸವದ ಅಂಗವಾಗಿ ಜನವರಿ 26ರಂದು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಹಾಗಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು ಅಧಿಕಾರಿಗಳ ಜೊತೆಗೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಕಮಿಷನರ್ ಬಿ ದಯಾನಂದ್ ಮಾಹಿತಿ ನೀಡಿದರು. ಬೆಂಗಳೂರಲ್ಲಿ ಈ ಕುರಿತು ಮಾತನಾಡಿದ ಅವರು, 26 ಜನವರಿ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲರಿಂದ ಧ್ವಜಾರೋಹಣ ನಡೆಯಲಿದ್ದು ಯಾವುದೇ ಸಮಸ್ಯೆಯಾಗದಂತೆ ರಾಜೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಎಲ್ಲಾ ವಿಭಾಗಗಳಿಂದ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ. 8ಡಿಸಿಪಿ, 7ಸಿಪಿ, 44ಪಿಐ, 114 ಪಿಎಸ್ಐ, 185 ಎಎಸ್ಐ, 80 ಮಹಿಳಾ ಸಿಬ್ಬಂದಿ 30 ಕ್ಯಾಮೆರಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. 10 ಕೆ.ಎಸ್.ಆರ್.ಪಿ ತುಕಡಿ 2 ಅಗ್ನಿಶಾಮಕ ವಾಹನ, ಕ್ಷೀಪ್ರಕಾರ್ಯ ಪಡೆ, ಭದ್ರತೆಗಾಗಿ ಒಟ್ಟು 1,051 ಅಧಿಕಾರಿಗಳು ಹಾಗೂ…
ಉಡುಪಿ : ರಾಜ್ಯದಲ್ಲಿ ಒಂದು ಕಡೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಬೇಸತ್ತು ಹಲವರು ಬೀದಿಗೆ ಬಂದರೆ, ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಉಡುಪಿಯಲ್ಲಿ ಬಡ್ಡಿ ದಂಧೆಕೊರರ ಅಟ್ಟಹಾಸ ಮಿತಿಮೀರಿದು, ಯಕ್ಷಗಾನ ಕಲಾವಿದನೊಬ್ಬನಿಗೆ ಸಾಲ ನೀಡಿದ ವ್ಯಕ್ತಿ ಬಾರುಕೋಲಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಹೌದು ಉಡುಪಿಯಲ್ಲಿ ಬಡ್ಡಿ ದಂಧೆಕೊರರ ಅಟ್ಟಹಾಸ ಮಿತಿ ಮೀರಿದ್ದು, ಯಕ್ಷಗಾನ ಕಲಾವಿದನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ವರದಿಯಾಗಿದೆ.ಯಕ್ಷಗಾನ ಕಲಾವಿದ ನಿತೀನ್ ಗೆ ಸಚಿನ್ ಎನ್ನುವ ವ್ಯಕ್ತಿ ಸಾಲ ನೀಡಿದ್ದ. 20 ಪರ್ಸೆಂಟ್ ಬಡ್ಡಿಗೆ 1.80 ಲಕ್ಷ ಸಚಿನ್ ಸಾಲ ನೀಡಿದ್ದ. ಸಾಲಕ್ಕೆ ಕಲಾವಿದ ಬಡ್ಡಿ ಕಟ್ಟಿ ಬೇಸತ್ತಿದ್ದ. ಈಗ ಬಡ್ಡಿ ಕಟ್ಟುತ್ತಿದ್ದರು ಬಡ್ಡಿ ನೀಡಿಲ್ಲ ಎಂದು ಸಚಿನ್ ಹಲ್ಲೆ ನಡೆಸಿದ್ದಾನೆ. ಸಾಲ ವ್ಯವಹಾರದಲ್ಲಿ ಭಿನ್ನಮತ ಮೂಡಿ ಗಲಾಟೆ ನಡೆದಿದೆ. ಕಂಬಳದ ಬಾರ್ಕೋಲಿನಲ್ಲಿ ಈ ಒಂದು ಭೀಕರ ಹಲ್ಲೆ ನಡೆದಿದೆ. ಕಾರಿನಲ್ಲಿ ಉದ್ಯಾವರಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ. ಪಡುಬಿದ್ರಿ ಆಸ್ಪತ್ರೆಯಲ್ಲಿ ಸದ್ಯ ನಿತಿನ್…
ಬೆಂಗಳೂರು : ನಿನ್ನೆ ತಾನೆ ಬೆಂಗಳೂರಿನಲ್ಲಿ ಹಲವು ಬಾಲಕರು ನಾಪತ್ತೆಯಾಗಿದ್ದು ಬಳಿಕ ಮೈಸೂರಲ್ಲಿ ಪ್ರತ್ಯಕ್ಷವಾಗಿದ್ದ ಘಟನೆ ನಡೆದಿತ್ತು. ಈ ಒಂದು ಘಟನೆ ಮಾಸುವ ಮುನ್ನವೇ ಮತ್ತೋರ್ವ ವಿದ್ಯಾರ್ಥಿ ನಾನು ಅಸತ್ಯ ಪ್ರಪಂಚದಲ್ಲಿ ಸತ್ಯ ಹುಡುಕುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಕಾಲೇಜು ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಮೋಹಿತ್ ಋಷಿ ಎಂದು ತಿಳಿದುಬಂದಿದೆ.ಈತ ಜನವರಿ 16 ರಂದು ಮುಂಜಾನೆ 4 ಗಂಟೆ ಸುಮಾರಿಗೆ ಮನೆಯಲ್ಲೇ ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದಾನೆ.ಮೋಹಿತ್ ನಗರದ ಕಾಲೇಜುವೊಂದರಲ್ಲಿ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಎಂದು ತಿಳಿದುಬಂದಿದೆ. ಮನೆಯಿಂದ ನಾಪತ್ತೆಯಾಗುವ ಮುನ್ನ ಆತ ತನ್ನ ಬುಕ್ ನಲ್ಲಿ ನಾನು ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಹೊರಟಿದ್ದೇನೆ. ಈ ಅಧರ್ಮದ ಜಗತ್ತಿನಲ್ಲಿ ನನಗೆ ಇರಲು ಆಗುವುದಿಲ್ಲ.ನಾನು ವಿಷ್ಣುವಿನ ಮಗ ನನಗೆ ಏನು ಆಗಲ್ಲ ದಯವಿಟ್ಟು ಯಾರು ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಬರೆದಿದ್ದಾನೆ. ಪೋಷಕರು ಎಂದಿನಂತೆ ಆತನನ್ನು ಎಬ್ಬಿಸಲು ಆತನ ರೂಮ್ಗೆ ತೆರಳಿದಾಗ ಆತ…
ಬೆಳಗಾವಿ : ನಿನ್ನೆ ಮಂಗಳೂರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ರಾಮಸೇನೆಯ ಕಾರ್ಯಕರ್ತರು ಪಾರ್ಲರ್ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ನಾಶ ಮಾಡಿದ್ದರು. ಇದೀಗ ಬೆಳಗಾವಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮೇಲೆ ದಾಳಿ ಮಾಡಿದ ಪೊಲೀಸರು 6 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಹೌದು ಬೆಳಗಾವಿಯಲ್ಲಿ ಸ್ಪಾ ಬ್ಯೂಟಿ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನಗರದ ಅನಗೋಳಗೋಳದಲ್ಲಿರುವ ಅಂಜಲಿ ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಮೇಲೆ ದಾಳಿ ಮಾಡಿದ್ದು ದಾಳಿಯ ವೇಳೆ ವೇಶ್ಯಾವಾಟಿಕೆ ನಡೆಸುತ್ತಿರುವುದು ಬಹಿರಂಗವಾಗಿದೆ. ದಾಳಿಯ ವೇಳೆ 6 ಮಹಿಳೆಯರನ್ನು ಪೊಲೀಸರು ಇದೇ ಸಂದರ್ಭದಲ್ಲಿ ರಕ್ಷಣೆ ಮಾಡಿದ್ದಾರೆ. ಸ್ಪಾ ಮತ್ತು ಬ್ಯೂಟಿ ಪಾರ್ಲರ್ ಓನರ್ ಅಂಜಲಿ ಸಂಜಯ್ ಕಾಳೆ ಎನ್ನುವ ಮಹಿಳೆಯನ್ನು ಅರೆಸ್ಟ್ ಮಾಡಿದ್ದಾರೆ. ಈ ಕುರಿತು ಬೆಳಗಾವಿಯ ಸೆಂಡ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಬೆಂಗಳೂರು : 2019ನೇ ಸಾಲಿನ ಚಲನಚಿತ್ರ ಪ್ರಶಸ್ತಿಯನ್ನು ಇತ್ತೀಚಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.ಈ ಒಂದು ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಎಂದು ಪೈಲ್ವಾನ್ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಕಿಚ್ಚ ಸುದೀಪ್ ಅವರಿಗೆ ಈ ಒಂದು ಪ್ರಶಸ್ತಿ ಲಭಿಸಿತ್ತು. ಆದರೆ ನಟ ಕಿಚ್ಚ ಸುದೀಪ್ ಅವರು ಟ್ವೀಟ್ ಮುಖಾಂತರ ನನಗೆ ಈ ಪ್ರಶಸ್ತಿ ಬೇಡ ಎಂದು ನಯವಾಗಿ ತಿರಸ್ಕರಿಸಿದ್ದಾರೆ. ಆದರೆ ಇದಕ್ಕೆ ಆ ಒಂದು ಎರಡು ಘಟನೆಗಳೆ ಕಾರಣ ಎಂದು ಹೇಳಲಾಗುತ್ತಿದೆ. ಹೌದು ಕಿಚ್ಚ ಸುದೀಪ್ ಅವರ ಜೀವನದಲ್ಲಿ ನಡೆದ ಆ ಎರಡು ಘಟನೆಗಳಿಂದ ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. 2004 ರಲ್ಲಿ ನಿಮಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ ಅಂತ ಕನ್ನಡ ಚಲನಚಿತ್ರ ಕಮಿಟಿ ಅವರು ಸುದೀಪ್ ಗೆ ಫೋನ್ ಮಾಡಿದ್ದರು. ಆ ವಿಷಯ ಕೇಳಿ ಕಿಚ್ಚ ಸುದೀಪ್ ಅವರು ಸಂಭ್ರಮಿಸಿದ್ದರಂತೆ.ಪ್ರಶಸ್ತಿ ಘೋಷಿಸಿದಾಗ ಅದು ಬೇರೆ ನಟರ ಪಾಲಾಗಿತ್ತಂತೆ. 2004 ರಲ್ಲಿ ಕಿಚ್ಚ ಸುದೀಪ್ ಅಭಿನಯದ ರಂಗ SSLC ಮತ್ತು ಮುಸಂಜೆ…
ಬಳ್ಳಾರಿ : ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಅವರ ತಮ್ಮ 30 ವರ್ಷಗಳ ಗೆಳೆತನದಲ್ಲಿ ಬಿರುಕು ಮೂಡಿದೆ. ಈ ಒಂದು ಬಿರುಕು ಎಷ್ಟರಮಟ್ಟಿಗೆ ಮುಂದೆ ಹೋಗಿದೆ ಅಂದರೆ, ಬಳ್ಳಾರಿಯ ಅವಂಬಾವಿಯಲ್ಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಮನೆಯ ನಡುವೆ ಇರುವಂತಹ ಗೇಟ್ ಕೂಡ ಇದೀಗ ಶ್ರೀರಾಮುಲು ಅವರು ಕ್ಲೋಸ್ ಮಾಡಿಸಿದ್ದಾರೆ. ಹೌದು ಬಳ್ಳಾರಿಯ ಅವಂಬಾವಿಯಲ್ಲಿ ಶ್ರೀರಾಮುಲು ಹಾಗೂ ಶಾಸಕ ಜನರದನ್ನ ರೆಡ್ಡಿ ನಡುವೆ ಕೇವಲ 50 ಮೀಟರ್ ಅಂತರವಿದ್ದು ಇವರ ಇಬ್ಬರ ಮನೆಯ ನಡುವೆ ಒಂದು ಗೇಟ್ ಇತ್ತು. ಸದ್ಯ ಇದೀಗ ಅದನ್ನು ಸಿಮೆಂಟ್ ಪ್ಲಾಸ್ಟರ್ ಮೂಲಕ ಶ್ರೀರಾಮುಲು ಅವರು ಗೇಟ್ ಅನ್ನು ಬಂದ್ ಮಾಡಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಶ್ರೀರಾಮುಲು ಅವರನ್ನ ಪ್ರಶ್ನಿಸಿದಾಗ ವಾಸ್ತು ಪ್ರಕಾರ ಗೇಟ್ ಅನ್ನು ಬಂದ್ ಮಾಡಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ, ಶಾಸಕ ಜನಾರ್ಧನ ರೆಡ್ಡಿ ಅವರ…
ವಿಜಯಪುರ : ಇಂದು ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ವಿಜಯಪುರ ತಾಲೂಕಿನ ಕನ್ನಾಳ ಕ್ರಾಸ್ ಬಳಿ ರಾಷ್ಟೀಯ ಹೆದ್ದಾರಿ NH50 ರಲ್ಲಿ ಈ ಒಂದು ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದು, ಘಟನೆಯಲ್ಲಿ ಹಲವರಿಗೆ ಗಂಭೀರವಾದ ಗಾಯಗಳಾಗಿವೆ.ಸದ್ಯ ಘಟನಾಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೋಲಿಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮೃತರ ಶವಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಈ ಒಂದು ಭೀಕರವಾದ ಕಾರು ಅಪಘಾತದಲ್ಲಿ ಗಾಯಗೊಂಡ ಇನ್ನುಳಿದ ಹಲವರಿಗೆ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕುರಿತಂತೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಅರಣ್ಯಗಳಲ್ಲಿ ಚಲನಚಿತ್ರ ಚಿತ್ರೀಕರಣದ ವೇಳೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ರಾಜ್ಯ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಖಡಕ್ ಸೂಚನೆ ನೀಡಿದ್ದಾರೆ. ರಿಷಬ್ ಶೆಟ್ಟಿ ನಟನೆಯ ಕಾಂತಾರ ಟು ಚಿತ್ರೀಕರಣದ ವೇಳೆ ಅರಣ್ಯದಲ್ಲಿ ಪಟಾಕಿ ಸ್ಫೋಟಿಸಿ ನಿಯಮ ಉಲ್ಲಂಘನೆ ಮಾಡಿದ್ದರು. ಈ ವಿಚಾರವಾಗಿ ಇದೀಗ ಈಶ್ವರ ಖಂಡ್ರೆ ಅವರು ಅರಣ್ಯದಲ್ಲಿ ಯಾವುದೇ ಚಲನಚಿತ್ರ ಮಾಡುವ ವೇಳೆ ರಾಜ್ಯ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದು ಖಡಕ್ ಸೂಚನೆ ನೀಡಿದ್ದಾರೆ. ಕಾಂತಾರ-2 ಸಿನೆಮಾಗೆ ಬಿಗ್ ರಿಲೀಫ್ ಹಾಸನ ಜಿಲ್ಲೆಯ ಸಕಲೇಶಪುರದ ಹೆರೂರು ಅರಣ್ಯದಲ್ಲಿ ಜನವರಿ 2 ರಿಂದ ಕಾಂತಾರ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈ ವೇಳೆ ಚಿತ್ರೀಕರಣಕ್ಕಾಗಿ ಗೋಮಾಳ ಜಾಗಕ್ಕೆ ಪರವಾನಿಗೆ ಪಡೆದಿರುವ ಚಿತ್ರ ತಂಡ ಕಾಡಿಗೆ ಬೆಂಕಿ ಹಚ್ಚಿ ನಾಶ ಪಡಿಸುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಈಶ್ವರ್ ಖಂದ್ರ್ ಅರಣ್ಯ ಭೂಮಿಯಲ್ಲಿ ನಿಯಮ ಉಲ್ಲಂಘನೆ ಆಗಿಲ್ಲ ಎಂಬುದು ಪ್ರಾಥಮಿಕ ವರದಿ. ಆದರೂ ಸಂಪೂರ್ಣ ವರದಿ…
ಬೆಂಗಳೂರು : ಗಂಗಾವತಿ ಕ್ಷೇತ್ರದ ಶಾಸಕ ಜನಾರ್ಧನ ರೆಡ್ಡಿ ಹಾಗೂ ಬಿಜೆಪಿಯ ಮಾಜಿ ಸಚಿವ ಶ್ರೀರಾಮುಲು ನಡುವೆ ಇದೀಗ ಬಿರುಕು ಉಂಟಾಗಿದೆ. ಉಪಚುನಾವಣೆಯಲ್ಲಿ ಸೋಲಲು ಶ್ರೀರಾಮುಲು ಕಾರಣ ಎಂದು ಜನಾರ್ದನ ರೆಡ್ಡಿ ಇತ್ತೀಚಿಗೆ ನಡೆದ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದ್ದರು. ಬಳಿಕ ಜನಾರ್ಧನ ರೆಡ್ಡಿ ಕೂಡ ಶ್ರೀರಾಮುಲು ವಿರುದ್ಧ ಗಂಭೀರವಾದ ಆರೋಪ ಮಾಡಿದ್ದರು. ಇದೀಗ ಇವರಿಬ್ಬರ ನಡುವೆ ಸಂಧಾನ ನಡೆಸಲು ಬಿಜೆಪಿ ಹೈಕಮಾಂಡ್ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಸಂಧಾನದ ಜವಾಬ್ದಾರಿ ನೀಡಿದೆ. ಹೌದು ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾರಿ ಸಚಿವ ಶ್ರೀರಾಮುಲು 30 ವರ್ಷಗಳ ಸ್ನೇಹದ ನಡುವೆ ಇದೀಗ ಬಿರುಕು ಉಂಟಾಗಿದೆ.ಹಾಗಾಗಿ ಜ್ ಇಬ್ಬರ ನಡುವೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಪ್ರಹ್ಲಾದ ಜೋಶಿಗೆ ಹೈಕಮಾಂಡ್ ಇದೀಗ ಜವಾಬ್ದಾರಿ ವಹಿಸಿದ್ದಾರೆ.ಬಿಜೆಪಿ ರಾಷ್ಟ್ರೀಯ ನಾಯಕರು ರಾಮುಲು ಕರೆದುಕೊಂಡು ದೆಹಲಿಗೆ ಬರುವಂತೆ ಜೆಪಿ ನಡ್ಡಾ ಇದೀಗ ಸೂಚನೆ ನೀಡಿದ್ದಾರೆ.ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ನಡೆದ ವಿಚಾರವಾಗಿ, ಶ್ರೀರಾಮುಲು…
ಶಿವಮೊಗ್ಗ : ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ಒಬ್ಬಳು, ತೀವ್ರ ಅನಾರೋಗ್ಯದ ಹಿನ್ನೆಲೆಯಿಂದ ಬೇಸತ್ತಿದ್ದಾಳೆ. ಈ ವೇಳೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ನೇತಾಜಿ ವೃತ್ತದ ಬಳಿಯ ವಿಜಯನಗರದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಶಿವಮೊಗ್ಗದಲ್ಲಿ ಅನಾರೋಗ್ಯಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ನೇಣು ಬಿಗಿದುಕೊಂಡು ಸೌಮ್ಯ (25) ಎನ್ನುವ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಶಿವಮೊಗ್ಗದ ನೇತಾಜಿ ವ್ರತ ಬಳಿಯ ವಿಜಯನಗರದಲ್ಲಿ ಈ ಒಂದು ಘಟನೆ ನಡೆದಿದೆ.ಮೃತ ಯುವತಿ ಸೌಮ್ಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ ಹಲವು ದಿನಗಳಿಂದ ಸೌಮ್ಯಳಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು ಇದರಿಂದ ತೀವ್ರವಾಗಿ ಆರೋಗ್ಯ ಸಮಸ್ಯೆ ಯನ್ನು ಎದುರಿಸಿದ್ದಳು. ಅನಾರೋಗ್ಯದಿಂದ ಬೇಸತ್ತು ಸೌಮ್ಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














