Author: kannadanewsnow05

ಬೆಳಗಾವಿ : ಕೇವಲ 30 ಗುಂಟೆ ಜಮೀನಿಗಾಗಿ ಅಳಿಯ ಹಾಗೂ ಮಾವನ ನಡುವೆ ಗಲಾಟೆ ಏರ್ಪಟ್ಟಿದ್ದು, ಈ ವೇಳೆ ಮಾವ ಅಳಿಯನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ರಾಯಬಾಗ ತಾಲೂಕಿನ ಮೊರಬ ಗ್ರಾಮದ ಬಳಿ ಕೃತ್ಯ ನಡೆದಿದೆ. https://kannadanewsnow.com/kannada/ad-hoc-wrestling-committee-dissolved-by-indian-olympic-association/ ಆಸ್ತಿ ವಿವಾದ ಹಿನೆಲೆಯಲ್ಲಿ ಅಳಿಯನ ಮೇಲೆ ಮಾವ ಗುಂಡಿನ ದಾಳಿ ನಡೆಸಲಾಗಿದೆ. 38 ಜಮೀನಿಗಾಗಿ ಶಾಂತಿನಾಥ ಅಲಗೂರು ಗುಂಡಿನ ದಾಳಿ ನಡೆಸಲಾಗಿದೆ ಶಾಂತಿನಾಥ (32) ಮೇಲೆ ಮಾವ ಧನಪಾಲ ಆಸಂಗಿ (54) ಫೈರಿಂಗ್ ನಡೆಸಿದ್ದಾರೆ ಎನ್ನಲಾಗಿದೆ. https://kannadanewsnow.com/kannada/breaking-jds-to-contest-in-hassan-kolar-mandya-hd-kumaraswamy/ ಆತ್ಮರಕ್ಷಣೆಗಾಗಿ ಪಡೆದಿದ್ದ ರಿವಾಲ್ವರ್ದಿಂದಲೇ ಒಂದು ಸುತ್ತಿನ ಗುಂಡಿನ ದಾಳಿ ಮಾಡಿದ್ದಾರೆ ಧನಪಾಲ್. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಆರೋಪಿ ಧನಪಾಲ್ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. https://kannadanewsnow.com/kannada/former-bihar-minister-azam-khan-sentenced-to-7-years-in-jail-in-rampur-case/ ಹೊಟ್ಟೆ ಭಾಗಕ್ಕೆ ಗುಂಡು ತಾಗಿದ್ದು, ಶಾಂತಿನಾಥ್ ಸ್ಥಿತಿ ಗಂಭೀರವಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಗಾಯ ಹಿನ್ನೆಲೆ ಬೆಳಗಾವಿಯ…

Read More

ಬೆಂಗಳೂರು : ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಸದ್ಯ ಬಿಜೆಪಿ ಜೆಡಿಎಸ್ ಗೆ ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದು ಹಾಸನ ಕೋಲಾರ ಹಾಗೂ ಮಂಡ್ಯ ಕ್ಷೇತ್ರಗಳಲ್ಲಿ ಈ ಬಾರಿ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಸ್ವಾಮಿ ಘೋಷಣೆ ಮಾಡಿದ್ದಾರೆ. ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತಂತ್ರವಾಗಿ ಸ್ಪರ್ಧಿಸಿದರು ಹಾಸನ ಮಂಡ್ಯದಲ್ಲಿ ಸುಲಭವಾಗಿ ನಾವು ಜಯಿಸುತ್ತೇವೆ. ಹಾಸನ ಮಂಡ್ಯ ಕೋಲಾರದಲ್ಲಿ ಜೆಡಿಎಸ್ ಸ್ಪರ್ಧಿಸಲು ಯಾವುದೇ ಗೊಂದಲ ಇಲ್ಲ.18 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಭಲ್ಯವಿದೆ.ಆ ಪ್ರಾಬಲ್ಯ ಬಳಸಿಕೊಳ್ಳಲು ಬಿಜೆಪಿಗೆ ಹೇಳುತ್ತೇನೆ. ಎರಡು ಕ್ಷೇತ್ರಕ್ಕೆ ನಾನು ಇಷ್ಟೆಲ್ಲಾ ಮಾಹಿತಿ ಮಾಡಿಕೊಳ್ಳಬೇಕಿತ್ತಾ? ಎಂದರು. ಬಿಜೆಪಿ ಆರಂಭದಲ್ಲಿ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಿದೆ.ಚುನಾವಣಾ ಸಭೆ ಹಾಗೂ ಪ್ರಚಾರ ನಮ್ಮನ್ನ ಬಿಟ್ಟು ಮಾಡುತ್ತಿದೆ ಯಾವ ಸಭೆಗೂ ನಮ್ಮನ್ನು ಬಿಜೆಪಿಯವರು ಕರೆಯುತ್ತಿಲ್ಲ ನಮ್ಮ ಪಕ್ಷ ಒತ್ತೆಯಿಟ್ಟು ಮೈತ್ರಿ ಮಾಡಿಕೊಳ್ಳುವ ಅಗತ್ಯ ನಮಗೆ ಇಲ್ಲ ಎಂದು…

Read More

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ಪದೇ ಪದೇ ಅಗ್ನಿ ಅವಗಣಗಳು ಸಂಭವಿಸುತ್ತದೆ ಎಷ್ಟೇ ಮುಂಜಾಗ್ರತಾ ಕ್ರಮ ವಹಿಸಿದರು ಕೂಡ ಈ ರೀತಿ ಅಗ್ನಿ ದುರಂತಗಳು ಸಂಭವಿಸುತ್ತಲೇ ಇವೆ. ಇದೀಗ ಇಂಡಸ್ ಕಂಪನಿಯ ಮೊಬೈಲ್ ನೆಟ್​​ವರ್ಕ್ ಟವರ್ ಬೆಂಕಿಗಾಹುತಿ ಆಗಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿ ನಡೆದಿದೆ. ಜನರೇಟರ್​ ರೂಮ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಇಡೀ ಟವರ್​ಗೆ ಬೆಂಕಿ ವ್ಯಾಪಿಸಿತ್ತು. ಜನರೇಟರ್​ಗೆ ತುಂಬಿಸಿದ್ದ ಡಿಸೇಲ್​ಗೆ ಬೆಂಕಿ ತಗುಲಿ ಟವರ್ ಹೊತ್ತಿ ಉರಿದಿತ್ತು. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರುವುದಾಗಿ ಶಂಕಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ವಾಹನದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಜಿಗಣಿ ಪೊಲೀಸ್ ಠಾಣೆ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟುಭಸ್ಮವಾಗಿರುವ ಘಟನೆ ನಡೆದಿದೆ.ಬೆಂಗಳೂರಿನ ಭೈರತಿ ಉಗ್ರಾಣದ ಬಳಿಯ ಗಾಯಿತ್ರಿ ಅಸೋಸಿಯೇಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ…

Read More

ಶಿವಮೊಗ್ಗ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ನರೇಂದ್ರ ಮೋದಿಯವರು ಶಿವಮೊಗ್ಗ ನಗರದಲ್ಲಿ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯ ಉತ್ತರ ಯತೀಂದ್ರ ವಿರುದ್ಧ ವಾಗ್ದಾಳಿ ನಡೆಸಿ ಕರ್ನಾಟಕ ಕಾಂಗ್ರೆಸ್ ನಲ್ಲಿ ಸೂಪರ್ ಸಿಎಂ ಹಾಗೂ ಶಾಡೋ ಸಿಎಂ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು. https://kannadanewsnow.com/kannada/over-400-this-time-pm-narendra-modi-blows-the-trumpet-for-lok-sabha-battle-in-shivamogga/ ರಾಜ್ಯ ಕಾಂಗ್ರೆಸ್ ನಲ್ಲಿ ಸೂಪರ್ ಸಿಎಂ ಶಾಡೋ ಸಿಎಂ ಇದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ ಡಿಕೆ ಶಿವಕುಮಾರ್ ವಿರುದ್ಧ ಮೋದಿ ಕಿಡಿ ಕಾರಿದರು ನಿನ್ನೆ ಮುಂಬೈನಲ್ಲಿ ಕಾಂಗ್ರೆಸ್ ಸಭೆಯಲ್ಲಿ ಒಂದು ನಿರ್ಣಯ ಮಾಡಿದ್ದಾರೆ ಎಂದರು. https://kannadanewsnow.com/kannada/over-400-this-time-pm-narendra-modi-blows-the-trumpet-for-lok-sabha-battle-in-shivamogga/ ಹಿಂದೂ ಸಮಾಜದ ಶಕ್ತಿಯನ್ನು ನಿರ್ಮೂಲನೆ ಮಾಡುವುದಾಗಿ ಹೇಳಿದ್ದಾರೆ ನಮ್ಮ ಶಕ್ತಿಯನ್ನು ನಾವು ಹೆಚ್ಚಿಸುವ ಕೆಲಸವನ್ನು ನಾವು ಮಾಡಬೇಕಿದೆ ಭಾಳಾ ಸಾಹೇಬ ಠಾಕರೆಯವರ ಆತ್ಮಕ್ಕೆ ಎಷ್ಟು ದುಃಖವಾಗಿರಲಿಕ್ಕಿಲ್ಲ ಎಂದು ತಿಳಿಸಿದರು. https://kannadanewsnow.com/kannada/modi-govt-wont-work-just-for-elections-bsy-at-sankalp-sammelan/ ದೇಶದ ಮಹಿಳೆಯರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ.ಇದೇ ಸಮಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳನ್ನು…

Read More

ಶಿವಮೊಗ್ಗ : ಲೋಕಸಭಾ ಚುನಾವನೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕಲ್ಬುರ್ಗಿಯಿಂದ ಮತ ಬೇಟೆಯನ್ನು ಆರಂಭಿಸಿದ್ದಾರೆ ಈ ನೆಲೆಯಲ್ಲಿ ಇಂದು ಶಿವಮೊಗ್ಗದಲ್ಲಿ ಆಯೋಜನೆಗೊಂಡಿರುವ ಬಿಜೆಪಿ ವಿಕಸಿತ್ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಈ ಬಾರಿ 400 ಮೇಲೆ ಎಂದು ಕನ್ನಡದಲ್ಲಿ ಲೋಕಸಮರಕ್ಕೆ ಘೋಷಣೆ ಮೊಳಗಿಸಿದರು. https://kannadanewsnow.com/kannada/modi-govt-wont-work-just-for-elections-bsy-at-sankalp-sammelan/ ಶಿವಮೊಗ್ಗದ ಫ್ರೀಡಂ ಪಾರ್ಕಿನ ಅಲ್ಲಮಪ್ರಭು ಮೈದಾನದಲ್ಲಿ ಈ ಸಮಾವೇಶ ಹಮ್ಮಿಕೊಂಡಿದ್ದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಡೀ ಮೈದಾನ ತುಂಬಿ ತಳುಕುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿಕೊಂಡವರು ಇಂದು ಒಂದಾಗಿದ್ದಾರೆ ಎಂದು ಇಂಡಿಯಾ ಮೈತ್ರಿಕೂಡದಿರುದ್ದ ಮೋದಿ ವಾಗ್ದಾಳಿ ನಡೆಸಿದರು. https://kannadanewsnow.com/kannada/narayana-murty-gifts-4-month-old-grandson-shares-worth-rs-240-crore/ ಜೂನ್ ನಾಲ್ಕರಂದು NDA ಮೈತ್ರಿಕೂಟ 400 ಗಡಿ ದಾಟಲಿದೆ. ವಿಕಸಿತ ಭಾರತಕ್ಕಾಗಿ ವಿಕಸಿತ ಕರ್ನಾಟಕಕ್ಕಾಗಿ ಹಾಗೂ ಬ್ರಷ್ಟಾಚಾರಿಗಳ ವಿರುದ್ಧ ಹೋರಾಡಲು ೪೦೦ ಕು ಅಧಿಕ ಸ್ಥಾನವನ್ನು ಗೆಲ್ಲಬೇಕು ಬಡವರ ಕಲ್ಯಾಣ ಇರುವೆಗಾಗಿ ಬಿಜೆಪಿ ಶ್ರಮಿಸುತ್ತಿದೆ ಕಾಂಗ್ರೆಸ್ನವರು ಇಡೀ ದಿನ ಸುಳ್ಳು ಹೇಳುವುದರಲ್ಲಿ ಮುಳುಗಿದ್ದಾರೆ. ತಮ್ಮ ಸುಳ್ಳು ಮರೆಮಾಚಲು ಕಾಂಗ್ರೆಸ್ ಮತ್ತೆ ಸುಳ್ಳು…

Read More

ಶಿವಮೊಗ್ಗ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಕಳೆದ ಎರಡು ದಿನಗಳ ಹಿಂದೆ ಕಲಬುರ್ಗಿಯಲ್ಲಿ ಬಿಜೆಪಿ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿದ್ದು, ಇಂದು ಶಿವಮೊಗ್ಗದಲ್ಲಿ ಬಿಜೆಪಿ ವಿಕಸಿತ್ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. https://kannadanewsnow.com/kannada/narayana-murty-gifts-4-month-old-grandson-shares-worth-rs-240-crore/ ಈ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಮಾವೇಶವೋದೇಶಿಸಿ ಮಾತನಾಡಿ, ಮೋದಿ ಸರ್ಕಾರ ಕೇವಲ ಚುನಾವಣೆ ಗಾಗಿ ಮಾತ್ರ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.ಇಂದು ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಅಲ್ಲಮಪ್ರಭು ಮೈದಾನದಲ್ಲಿ ಬಿಜೆಪಿ ವಿಕಸಿತ್ ಸಂಕಲ್ಪ ಸಮಾವೇಶ ಆಯೋಜನೆಗೊಂಡಿದ್ದು ಈ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. https://kannadanewsnow.com/kannada/bengaluru-chief-minister-siddaramaiah-has-directed-to-set-up-an-expert-committee-to-resolve-the-permanent-water-crisis/ ಮೋದಿ ಸರ್ಕಾರ ಕೇವಲ ಚುನಾವಣೆ ಗಾಗಿ ಕೆಲಸ ಮಾಡುವುದಿಲ್ಲ ವರ್ಷವಿಡೀ ದೇಶದ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರವಾಗಿದೆ ಶ್ರೀರಾಮ ಮಂದಿರ ಕಟ್ಟಿ ಭಾರತೀಯರ ಕನಸನ್ನು ನನಸು ಪ್ರಧಾನಿ ಮೋದಿ ಅವರು ಮಾಡಿದ್ದಾರೆ ಒಂದು ದಿನವೂ ಶಾಂತಿ ಪಡೆಯಿದೆ ದೇಶದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು

Read More

ಬೆಂಗಳೂರು : ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಾಗಿ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಒಂದು ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ತಜ್ಞರ ಸಮಿತಿಯನ್ನು ರಚನೆ ಮಾಡಲು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲ ಮಂಡಳಿ ಮತ್ತು ಬಿಬಿಎಂಪಿ ಇಂಧನ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದೆ. ಬೆಂಗಳೂರಲ್ಲಿ 1470 MLD ನೀರು ಮಾತ್ರ ಕಾವೇರಿ ನೀರಿನಿಂದ ಬರ್ತಿದೆ. ಉಳಿದದ್ದು ಬೋರ್ ವೆಲ್ ಮೂಲಕ‌ 14 ಸಾವಿರ ಬೋರ್ ವೆಲ್ ಇದೆ. ಅದರಲ್ಲಿ 6 ಬೋರ್ ವೆಲ್ ಡ್ರೈ ಆಗಿಬಿಟ್ಟಿದೆ ಎಂದು ತಿಳಿಸಿದರು. https://kannadanewsnow.com/kannada/rs-8-lakh-cash-seized-in-tumkur/ ಕುಡಿಯುವ ನೀರಿನ ಶಾಶ್ವತ ಸಮಸ್ಯೆ ಬಗೆಹರಿಸಲು ತಜ್ಞರ ಸಮಿತಿ ರಚನೆ ಮಾಡಲು ಹೇಳಿದ್ದೇ‌ನೆ. ಕುಡಿಯುವ ನೀರು ಕುಡಿಯೋದಕ್ಕೆ ಮಾತ್ರ ಬಳಸಬೇಕು. ಕುಡಿಯುವ ನೀರು ದುರ್ಬಳಕೆ ಮಾಡಿಕೊಳ್ಳಬಾರದು. ಒಟ್ಟಾರೆ 500 ಎಂಎಲ್​ಡಿ ನೀರಿನ‌ ಕೊರತೆ ಇದೆ ಎಂದು ಸಿಎಂ ಸಿದ್ದರಾಮಯ್ಯ…

Read More

ಬೆಂಗಳೂರು: ಚುನಾವಣಾ ಬಾಂಡ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೆಗೆದುಕೊಂಡ ನಿರ್ಣಯದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೈತಿಕತೆಯ ಮುಖವಾಡ ಕಳಚಿ ಬಿದ್ದಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದರು. https://kannadanewsnow.com/kannada/pm-modi-attacks-oppn-over-rahuls-shakti-remark-says-will-sacrifice-life-for-mothers-sisters-top-points/ ಚುನಾವಣಾ ಬಾಂಡ್ ರೂಪದಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಒಂದಷ್ಟು ಹಣ ಬಂದಿದೆ. ಆದರೆ, ಅದು ಸಹಜವಾಗಿ ಬಂದಿರುವಂತದ್ದು. ಅದು ಯಾವುದೇ ಇಡಿ, ಸಿಬಿಐ ಇನ್ನಿತರ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಕೆ ಹಾಕಿ ವಸೂಲಿ ಮಾಡಿರುವಂತದ್ದಲ್ಲ ಎಂದು ಸಮರ್ಥಿಸಿಕೊಂಡರು. https://kannadanewsnow.com/kannada/bengaluru-four-arrested-for-duping-fake-diamond-by-promising-to-give-it-at-a-lower-price/ ಚುನಾವಣಾ ಬಾಂಡ್ ವಿಷಯ ಇಷ್ಟಕ್ಕೇ ನಿಲ್ಲುವುದಿಲ್ಲ. ಇದರ ಆಳ ಬಹಳ ಇದೆ. ಇದು ಇನ್ನೂ ಮುಂದುವರಿಯಲಿದೆ. ಚುನಾವಣಾ ಬಾಂಡ್​ಗೆ ಸಂಬಂಧಿಸಿದಂತೆ ಎಲ್ಲಾ ಪಕ್ಷಗಳನ್ನೂ ತನಿಖೆಗೆ ಒಳಪಡಿಸಲಿ. ಚುನಾವಣಾ ಬಾಂಡ್ ವ್ಯವಸ್ಥೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಸಾಧ್ಯ ಎಂದು ಭಾವಿಸಲಾಗಿತ್ತು. ಆದರೆ, ಇದರ ದುರುಪಯೋಗವೇ ಜಾಸ್ತಿಯಾಗಿದೆ ಎಂದು ಹೇಳಿದರು. https://kannadanewsnow.com/kannada/congress-partys-contribution-in-womens-empowerment-is-immense-minister-laxmi-hebbalkar/ ಮೋದಿಯವರು ನಾನೂ ತಿನ್ನುವುದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ ಎಂದು ಹೇಳಿಕೊಳ್ಳುತ್ತಾ ಹುಸಿ ವರ್ಚಸ್ಸು ಸೃಷ್ಟಿಸಿಕೊಂಡಿದ್ದರು. ಆ ಹುಸಿ ವರ್ಚಸ್ಸಿಗೆ ಈಗ…

Read More

ಬೆಂಗಳೂರು : ಕಡಿಮೆ ಬೆಲೆಗೆ ವಜ್ರ ಕೊಡುವುದಾಗಿ ಹೇಳಿ ನಕಲಿ ವಜ್ರ ನೀಡಿ ವಂಚಿಸುತ್ತಿದ್ದ ನಾಲ್ವರನ್ನು ಇದೀಗ ಬೆಂಗಳೂರಿನ ಏರ್ಪೋರ್ಟ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. https://kannadanewsnow.com/kannada/bisleri-international-partners-with-karnataka-government-to-recycle-plastic/ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಐಎಎಲ್ ಬಳಿ ಘಟನೆ ನಡೆದಿದೆ. ರವಿ, ನವೀನ್ ಕುಮಾರ್, ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದ್ದು ಏರ್ಪೋರ್ಟ್ ನ ಖಾಸಗಿ ಹೋಟೆಲ್ ನಲ್ಲಿ ಆರೋಪಿಗಳು ಪರಸ್ಪರ ಭೇಟಿ ಮಾಡಿದ್ದರು ಎನ್ನಲಾಗುತ್ತಿದೆ. https://kannadanewsnow.com/kannada/school-education-department-orders-finalisation-of-teacher-service-details-in-eeds-software/ ಈ ವೇಳೆ ಡೈಮಂಡ್ ವ್ಯವಹಾರ ಮಾಡುವುದಾಗಿ ಆರೋಪಿಗಳು ತಿಳಿಸಿದರು.10 ಕೋಟಿ ರೂಪಾಯಿ ಮೌಲ್ಯದ ವಜ್ರ 3 ಕೋಟಿ ರೂಪಾಯಿ ಕೊಡುವುದಾಗಿ ಹೇಳಿದ್ದರು.ಈ ವೇಳೆ ದೂರುದಾರ ಲಕ್ಷ್ಮೀನಾರಾಯಣಗೆ ನಕಲಿ ವಜ್ರ ಅನ್ನುವುದು ಗೊತ್ತಾಗಿತ್ತು. ಕೂಡಲೇ ಕೆ ಐ ಎ ಎಲ್ ಠಾಣೆ ಪೋಲಿಸರಿಗೆ ಲಕ್ಷ್ಮೀನಾರಾಯಣ ಮಾಹಿತಿ ನೀಡಿದ್ದಾನೆ.ಬಳಿಕ ನಾಲ್ವರು ಆರೋಪಿಗಳನ್ನು ಏರ್ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.

Read More

ದಾವಣಗೆರೆ : ರಂಜಾನ್ ಹಿನ್ನೆಲೆಯಲ್ಲಿ ಮನೆಯವರೆಲ್ಲರೂ ನಮಾಜ್ ಮಾಡುವುದರಲ್ಲಿ ನಿರತರಾಗಿದ್ದರು. ಈ ವೇಳೆ ಮೂರು ವರ್ಷದ ಬಾಲಕನೊಬ್ಬ ಆಟವಾಡುತ್ತ ಎದುರು ಮನೆಯ ನೀರಿನ ತೊಟ್ಟಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತುಂಗಭದ್ರಾ ಬಡಾವಣೆಯಲ್ಲಿ ನಡೆದಿದೆ. https://kannadanewsnow.com/kannada/global-recycling-day-2024-9-items-you-should-not-recycle/ ಅಸದ್ ಅಹಮದ್ (03) ಮೃತ ಬಾಲಕ ಎಂದು ಹೇಳಲಾಗುತ್ತಿದೆ. ರಂಜಾನ್​ ಹಿನ್ನೆಲೆ ಮನೆಯಲ್ಲಿ ಎಲ್ಲರೂ ಉಪವಾಸ ಇದ್ದು (ರೋಝಾ) ನಮಾಜ್​​ ಮಾಡುತ್ತಿದ್ದರು. ಬಳಿಕ ಮನೆ ಒಳಗೆ ಮಗು ಕಾಣದೇ ಇರುವುದನ್ನು ಗಮನಿಸಿ ಊರಿಡಿ ಹುಡುಕಿದ್ದಾರೆ. ಆದರೂ ಮಗು ಪತ್ತೆಯಾಗಿರಲಿಲ್ಲ. ಆಕಸ್ಮಿಕವಾಗಿ ಎದುರು ಮನೆಯಲ್ಲಿ ಪರಿಶೀಲಿಸಿದಾಗ ಮಗು ನೀರಿನ ತೊಟ್ಟಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ. https://kannadanewsnow.com/kannada/who-is-using-the-sim-card-in-your-name-check-from-the-government-website-it-will-take-1-minute/ ಆದರೆ ನೀರಲ್ಲಿ ಬಿದ್ದು ಆಗಲೇ ಎರಡು ಗಂಟೆಗಳು ಕಳೆದಿದ್ದರಿಂದ ಮಗು ಉಸಿರು ಚೆಲ್ಲಿದೆ. ತಕ್ಷಣ ಹತ್ತಿರದ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಿಲ್ಲ.ಮೃತ ಬಾಲಕನ ತಾಯಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ತನ್ನ ತವರು ಮನೆಗೆ ಹೆರಿಗೆಗಾಗಿ ಬಂದಿದ್ದರು ಎಂದು ತಿಳಿದುಬಂದಿದೆ. https://kannadanewsnow.com/kannada/bengaluru-drivers-inhuman-behaviour-on-a-mute-animal-a-calf-was-run-over-by-a-car/ ಪ್ರಕರಣಕ್ಕೆ ಸಂಬಂಧಿಸಿದಂತೆ…

Read More