Subscribe to Updates
Get the latest creative news from FooBar about art, design and business.
Author: kannadanewsnow05
ನವದೆಹಲಿ : ಚುನಾವಣಾ ಬಾಂಡ್ಗೆ ಸಂಬಂಧಿಸಿದಂತೆ ಬಿಜೆಪಿ ತಪ್ಪಾಗಿ ದೇಣಿಗೆ ಪಡೆದು ತನ್ನ ಬೊಕ್ಕಸ ತುಂಬಿಕೊಂಡಿದ್ದು, ಇದೀಗ ಕಾಂಗ್ರೆಸ್ನ ಬ್ಯಾಂಕ್ ಖಾತೆಗಳನ್ನು ರದ್ದುಪಡಿಸಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಇಂದು ನವದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಕಾಂಗ್ರೆಸ್ ಚುನಾವಣೆ ಎದುರಿಸುವ ಬಿಕ್ಕಟ್ಟು ಎದುರಿಸುತ್ತಿದೆ. ಪ್ರಚಾರಕ್ಕಾಗಿ ನಮ್ಮ ಬಳಿ ಹಣವಿಲ್ಲ. ಸೀತಾರಾಮ್ ಕೇಸರಿ ಅವರ ಕಾಲದ ನಿಧಿಗೆ ಸಂಬಂಧಿಸಿದಂತೆ ನಮಗೆ ನೋಟಿಸ್ ನೀಡಲಾಗುತ್ತಿದೆ ಎಂದರು. ದುರದೃಷ್ಟವಶಾತ್ ಇತ್ತೀಚೆಗೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿದ ನಂತರ ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದಂತೆ ಹೊರಬಿದ್ದಿರುವ ಸಂಗತಿಗಳು ಆತಂಕಕಾರಿ ಹಾಗೂ ನಾಚಿಕೆಗೇಡಿನ ಅಂಗತಿಯಾಗಿದೆ ಎಂದು ಅವರು ಹೇಳಿದರು. ಇದು ದೇಶದ ಪ್ರತಿಷ್ಠೆಗೆ ಧಕ್ಕೆ ತಂದಿದೆ, 70 ವರ್ಷಗಳಲ್ಲಿ ನಮ್ಮ ದೇಶದಲ್ಲಿ ನಿರ್ಮಿಸಲಾದ ನ್ಯಾಯಯುತ ಚುನಾವಣೆ ಹಾಗೂ ಆರೋಗ್ಯಕರ ಪ್ರಜಾಪ್ರಭುತ್ವದ ಚಿತ್ರವನ್ನು ಪ್ರಶ್ನೆ ಮಾಡಲಾಗುತ್ತಿದೆ.…
ಚೈನ್ನೈ : ಹೃದಯಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.ಇದೀಗ ಅವರಿಗೆ ಮೂರನೇ ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ಎಚ್ ಡಿ ಕುಮಾರಸ್ವಾಮಿ ಹಾರ್ಟ್ ಆಪರೇಷನ್ ಸಕ್ಸಸ್ ಆಗಿದ್ದು, ಸತತ ಎರಡು ಗಂಟೆಗಳ ಕಾಲವರೆಗೆ ನಡೆದ ಹಾರ್ಟ್ ಆಪರೇಷನ್ ಇದಿಗ ಯಶಸ್ವಿಯಾಗಿದೆ. ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಎಚ್ ಡಿ ಕುಮಾರಸ್ವಾಮಿಗೆ ಹಾರ್ಟ್ ಆಪರೇಷನ್ ನಡೆಯಿತು.ಮೂರನೇ ಬಾರಿ ಹೆಚ್‍ಡಿ ಕುಮಾರಸ್ವಾಮಿ ಹೃದಯದ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ಇತ್ತೀಚಿಗೆ ದಾಖಲಾಗಿದ್ದು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಕುಮಾರಸ್ವಾಮಿ ಅವರಿಗೆ ಇಂದು ಶಸ್ತ್ರ ಚಿಕಿತ್ಸೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಯಿತು ಎಂದು ತಿಳಿದುಬಂದಿದೆ.ಅಮೆರಿಕದ ಪರಿಣಿತ ವೈದ್ಯರು ಕುಮಾರಸ್ವಾಮಿಯವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಇದೀಗ ಶಸ್ತ್ರಚಿಕಿತ್ಸೆ ಬಳಿಕ 2-3 ದಿನ ವಿಶ್ರಾಂತಿ ಪಡೆಯುವ ಕುಮಾರಸ್ವಾಮಿ ಮಾ.25 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
ಗಿರವಿ ಇಟ್ಟ ಆಭರಣಗಳು ಶೀಘ್ರದಲ್ಲೇ ಮನೆಗೆ ತಲುಪುತ್ತವೆ ಮತ್ತು ಗಿರವಿ ಹಾಕಿದ ರಶೀದಿಯನ್ನು ಇಟ್ಟುಕೊಂಡು ಈ ಒಂದು ಮಂತ್ರವನ್ನು ನಿಯಮಿತವಾಗಿ ಪಠಿಸುತ್ತಿರಿ. ಗಿರವಿ ಇಟ್ಟ ಚಿನ್ನಾಭರಣ ಮಾತ್ರವಲ್ಲದೆ ಹೊಸ ಆಭರಣ ಪಡೆಯುವ ಸಾಧ್ಯತೆಯೂ ಹೆಚ್ಚುತ್ತದೆ ಹಣವು ಋಣವಾಗಿ ಪರಿಣಮಿಸಿ ನಮಗೆ ಭಾರವಾದಂತೆ, ಈ ಆಭರಣವು ನಮ್ಮ ಅಗತ್ಯದ ಅಣತಿಯಾಗಿ ಪರಿಣಮಿಸುತ್ತದೆ ಮತ್ತು ಅದು ಆಭರಣದ ಸಾಲವಾಗಿಯೂ ಮಾರ್ಪಟ್ಟಿದೆ ಮತ್ತು ನಮ್ಮನ್ನು ಉಸಿರುಗಟ್ಟಿಸುತ್ತದೆ. ಚಿನ್ನಾಭರಣಗಳನ್ನು ಅಡಮಾನ ಇಡುವುದು ಹಣ ಸಾಲಕ್ಕಿಂತ ಕೆಟ್ಟದಾಗಿದೆ. ಯಾಕೆಂದರೆ ಪ್ರತಿಯೊಬ್ಬರೂ ಆಭರಣ ಖರೀದಿಸಿದಾಗ ಅದನ್ನು ಆಸೆಯಿಂದ ಖರೀದಿಸುತ್ತಾರೆ. ವಾಕ್ಯ ಸಿದ್ದಿ, ಮಂತ್ರಸಿದ್ದಿ ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕ್ಕೈಕ ಜೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ 9686268564 ಇಷ್ಟ ಪಟ್ಟವರು ನೀಮ್ಮಂತೇ ಆಗಲು, ಪ್ರೀತಿಯಲ್ಲಿ ಮೋಸ ಹೋಗಿದ್ದರೆ ಮದುವೆ ವಿಳಂಬ, ಸತಿ ಪತಿ ಕಲಹ, ಸಂತಾನ, ಅತ್ತೆ ಸೋಸೆ ಕಲಹ, ಶತ್ರು ಭಾದೆ, ಅನಾರೋಗ್ಯ, ಸಾಲದ ಭಾದೆ, ಮನೆಯಲ್ಲಿ ಅಶಾಂತಿ, ಬೀಜೀನೇಸ್ಸ ನಲ್ಲಿ ನಷ್ಟ , ಕೋರ್ಟ್…
ನವದೆಹಲಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ನವದೆಹಲಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮೂವರು ನಾಯಕರು ಮೊದಲ ಬಾರಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದರು ಈ ವೇಳೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದರು. ಬಿಜೆಪಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.ಚುನಾವಣಾ ಆಯೋಗ ಇಡಿ ಸಿಬಿಐ ಐಟಿ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಚುನಾವಣಾ ಬಾಂಡ್ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಸ್ಪಕ್ಷಪಾತ ಚುನಾವಣೆ ಅನಿವಾರ್ಯ.ನಮ್ಮ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ನವಹಲಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದರು. ಫೈವ್ ಸ್ಟಾರ್ ಹೋಟೆಲ್ ಗಳಿಗೆ ಹೋಗುತ್ತಾರೆ ನಾಲ್ಕೈದು ವಿಮಾನಗಳಲ್ಲಿ ಮೀಟಿಂಗ್ ಗೆ ತೆರಳುತ್ತಾರೆ ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ತನಿಖೆ ನಡೆಸಿತ್ತಿದೆ. ಆದಷ್ಟು ಬೇಗ ಸತ್ಯ ನಮ್ಮ ಕಣ್ಣ ಮುಂದೆ…
ಎಲ್ಲವೂ ನಮ್ಮವರಿಗೆ, ಸಂಬಂಧಿಗಳಿಗೆ, ಚೇಲಾಗಳಿಗೆ ಸಿಗಬೇಕೆಂಬ ಸ್ವಾರ್ಥ : ಪರೋಕ್ಷವಾಗಿ BSY ವಿರುದ್ಧ ಸದಾನಂದಗೌಡ ಆಕ್ರೋಶ
ಬೆಂಗಳೂರು : ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಲೋಕಸಭಾ ಟಿಕೆಟ್ ಸಿಗದೇ ಇರುವುದಕ್ಕೆ ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅಸಮಾಧಾನ ಹೊರಹಾಕಿದ್ದು ಎಲ್ಲಾ ನಮ್ಮವರಿಗೆ ಸಂಬಂಧಿಗಳಿಗೆ ನಮ್ಮ ಚೇಲಾಗಳಿಗೆ ಸಿಗಬೇಕೆಂಬುದು ಸ್ವಾರ್ಥ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ವಿರುದ್ಧ ಡಿವಿ ಸದಾನಂದ ಗೌಡ ಅಸಮಾಧಾನ ಹೊರ ಹಾಕಿದರು. https://kannadanewsnow.com/kannada/mekedatu-project-will-be-stalled-if-india-comes-to-power-in-dmk-manifesto-bjp-to-congress/ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಶುದ್ದೀಕರಣ ಒಬ್ಬನಿಂದ ಆಗುವಂತಹ ಕೆಲಸವಲ್ಲ. ಪಕ್ಷ ಶುದ್ಧೀಕರಣಕ್ಕೆ ನಿರಂತರವಾದ ಹೋರಾಟ ಮಾಡುತ್ತೇನೆ.ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ ಎಲ್ಲವೂ ನಮ್ಮವರಿಗೆ ಸಂಬಂಧಿಗಳಿಗೆ ಚೇಲಾಗಳಿಗೆ ಸಿಗಬೇಕು.ಎಲ್ಲವೂ ನಮಗೆ ನಮ್ಮವರಿಗೆ ಸಿಗಬೇಕು ಎಂಬ ಸ್ವಾರ್ಥವಿದೆ. ಅಲ್ಲದೆ ಪಕ್ಷದಲ್ಲಿ ಕಾರ್ಯಕರ್ತರಿಗೆ ಯಾವುದೇ ರೀತಿಯಾದಂತಹ ಅವಕಾಶ ಕೊಡುತ್ತಿಲ್ಲ ಎಂದು ಯಡಿಯೂರಪ್ಪ ವಿರುದ್ಧ ಸನಂದ ಗೌಡ ಕಿಡಿ ಕಾರಿದ್ದಾರೆ. https://kannadanewsnow.com/kannada/italian-pm-giorgia-maloney-seeks-100000-in-compensation-for-deep-fake-video/ ನನಗೆ ಕಾಂಗ್ರೆಸ್ ನಿಂದ ಆಫರ್ ಬಂದಿರುವುದು ಸತ್ಯ. ಕಾಂಗ್ರೆಸ್ ನಿಂದ ನೀವು ಎಲ್ಲೇ ನಿಲ್ಲಿಸಿಕೊಳ್ಳುತ್ತೇವೆ ಅನ್ಯಾಯಕ್ಕೆ ನಿಮ್ಮ ಜೊತೆ ನಿಲ್ಲುತ್ತೇವೆ ಎಂದು ಆಫರ್ ಬಂದಿದೆ ಹೀಗೆ ನನಗೆ ಕಾಂಗ್ರೆಸ್ ನವರು ಆಹ್ವಾನ…
ಬೆಂಗಳೂರು : 2024 ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಗೆದ್ದು ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಕಾವೇರಿ ನದಿಗೆ ನಿರ್ಮಿಸಲು ಯೋಜಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಡೆಯುವುದಾಗಿ ಡಿಎಂಕೆ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. https://kannadanewsnow.com/kannada/italian-pm-giorgia-maloney-seeks-100000-in-compensation-for-deep-fake-video/ ಟ್ವೀಟ್ ನಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಮೇಕೆದಾಟು ಹೆಸರಿನಲ್ಲಿ ಬೊಂಡಾ-ಬಜ್ಜಿ ತಿನ್ನುತ್ತಾ ವಾಕಿಂಗ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ DK ಶಿವಕುಮಾರ ಅವರೇ, ತಮಿಳುನಾಡಿನ ನಿಮ್ಮ ಚಿನ್ನ ತಂಬಿ ಎಂ. ಕೆ. ಸ್ಟಾಲಿನ್ ಅವರು ಇಂಡಿ ಮೈತ್ರಿಕೂಟ ಗೆದ್ದರೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಬಿಡುವುದಿಲ್ಲ ಎಂಬುದನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿಯೇ ತಿಳಿಸಿದ್ದಾರೆ. https://kannadanewsnow.com/kannada/hc-orders-renewal-of-driving-licence-within-30-days-of-expiry-of-term/ ಸ್ಟ್ರಾಂಗ್ ಎಂದು ಬೀಗುವ ವೀಕ್ ಸಿಎಂ ಸಿದ್ದರಾಮಯ್ಯ ಅವರೇ, ಡಿಎಂಕೆ ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹವನ್ನು ಖಂಡಿಸಿ ಅವರನ್ನು ಇಂಡಿ ಮೈತ್ರಿಕೂಟದಿಂದ ಉಚ್ಛಾಟಿಸಿ ಎಂದು ರಾಹುಲಗಾಂಧಿ ಅವರಿಗೆ ಯಾವಾಗ…
ಬೆಂಗಳೂರು : ವಾಹನ ಚಾಲನೆ ಪರವಾನಿಗೆ ಅವಧಿ ಮುಗಿದ ನಂತರ 30 ದಿನಗಳ ಒಳಗೆ ನವೀಕರಣಗೊಳಿಸಿಕೊಳ್ಳಬೇಕು. ಒಂದು ವೇಳೆ ಅರ್ಜಿ ಸಲ್ಲಿಸದೆ ಹೋದಲ್ಲಿ, ವಾಹನ ಅಪಘಾತಕ್ಕೆ ಈಡಾದರೆ ಈ ವೇಳೆ ವಾಹನ ಮಾಲೀಕರು ತಮ್ಮ ಕೈಯಿಂದ ಅಪಘಾತಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪರವಾನಗಿ ಅವಧಿ ಮುಗಿದ ದಿನದಿಂದ 30 ದಿನಗಳಲ್ಲಿ ನವೀಕರಣಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ಸಾಕ್ಷ್ಯ ಒದಗಿಸದ ಅಂಶ ಪರಿಗಣಿಸಿರುವ ಹೈಕೋರ್ಟ್, ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾದ ಆ್ಯಂಬುಲೆನ್ಸ್ ಚಾಲಕನ ಮೇಲೆ ಮೋಟಾರು ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ ಹೊರಿಸಿದ್ದ ಶೇ.50ರಷ್ಟು ಹೊಣೆಗಾರಿಕೆಯನ್ನು ಶೇ.100ಕ್ಕೆ ಹೆಚ್ಚಿಸಿ ಆದೇಶಿಸಿದೆ. ಅಪಘಾತ ಪ್ರಕರಣವೊಂದರ ಸಂಬಂಧ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ ಈ ಆದೇಶ ಮಾಡಿದೆ. ಅವಧಿ ಮುಗಿದ 30 ದಿನಗಳ ಒಳಗೆ ವಾಹನ ಚಾಲನಾ ಪರವಾನಿಗೆಯನ್ನು ನವೀಕರಣಗೊಳಿಸುತ್ತಿದ್ದಲ್ಲಿ ಅಪಘಾತಕ್ಕೆ…
ಬೆಂಗಳೂರು : ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರು ಕರ್ನಾಟಕದಲ್ಲಿ ಬಿಜೆಪಿ ಶುದ್ಧೀಕರಣದ ಕಡೆಗೆ ನನ್ನ ನಡಿಗೆ ಎಂದು ಸದಾನಂದ ಗೌಡ ಇದೆ ವೇಳೆ ತಿಳಿಸಿದರು. https://kannadanewsnow.com/kannada/india-not-only-fulfills-the-aspirations-of-its-people-but-also-gives-hope-to-the-world-pm-modi/ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಕಾಂಗ್ರೆಸ್ ನಿಂದ ಆಹ್ವಾನ ಬಂದಿರುವುದು ಸತ್ಯ ಎಂದು ಬೆಂಗಳೂರಿನಲ್ಲಿ ಸಂಸದ ಸದಾನಂದಗೌಡ ತಿಳಿಸಿದರು. ಕರ್ನಾಟಕದಲ್ಲಿ ಬಿಜೆಪಿ ಶುದ್ಧೀಕರಣ ಕಡೆಗೆ ನನ್ನ ನಡಿಗೆ. ನನಗೆ ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ನೋವಾಗಿದೆ. ನನಗೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿರುವುದು ಸತ್ಯ. ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಬೆಂಗಳೂರಿನಲ್ಲಿ ಬಿಜೆಪಿ ಸಂಸದ ಡಿ ಬಿ ಸದಾನಂದ ತಿಳಿಸಿದರು. https://kannadanewsnow.com/kannada/india-not-only-fulfills-the-aspirations-of-its-people-but-also-gives-hope-to-the-world-pm-modi/ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ತೊರೆಯುವುದಿಲ್ಲ ಹಾಗೂ ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ ಮುಂದಿನ ನಡೆ ಏನು ಎಂದು ಹಲವರು ನನಗೆ ಕೇಳಿದ್ದಾರೆ. ಆದರೆ ನನ್ನ ಮುಂದಿನ ನಡೆ ಕರ್ನಾಟಕ…
ಗದಗ : ದೇಶದಲ್ಲಿ ಸಂವಿಧಾನದ ತಿರುಚುವ ಪ್ರಯತ್ನ ಬಿಜೆಪಿ ಸದ್ದಿಲ್ಲದೆ ನಡೆಸುತ್ತಿದೆ. ಇನ್ನೊಂದೆಡೆ ಚುನಾವಣಾ ಬಾಂಡ್ ಮೂಲಕ ಬಿಜೆಪಿ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ.ದೇಶದಲ್ಲಿ ಮೋದಿ ಸರ್ಕಾರವನ್ನು ಕಿತ್ತೊಗೆಯದಿದ್ದರೆ ಮುಂಬರುವ ದಿನಗಳಲ್ಲಿ ದೇಶದಲ್ಲಿ ಆರ್ಥಿಕ ಗುಲಾಮಗಿರಿ ಅನುಭವಿಸಬೇಕಾಗುತ್ತದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದರು. https://kannadanewsnow.com/kannada/breaking-russian-missile-attack-on-ukraines-capital-kiev/ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಗುಲಾಮಗಿರಿ ತಪ್ಪಿಸಲು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಮಾನವ ಹಕ್ಕುಗಳನ್ನಾಗಿ ಮಾಡಲಾಗುವುದು ಎಂದರು. https://kannadanewsnow.com/kannada/india-will-dominate-ai-technology-pm-modi/ ಸಂವಿಧಾನ ಕಾಪಾಡಿಕೊಳ್ಳುವ, ಮೀಸಲಾತಿ ಉಳಿಸಿಕೊಳ್ಳುವುದಕ್ಕಾಗಿ ನಾವು ಸಂವಿಧಾನ ರಕ್ಷಣೆ ಮಾಡಬೇಕಿದೆ, ಅದಕ್ಕಾಗಿ ದೇಶದ ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ದೇಶದ ರೈತರ ರೂ.72000 ಕೋಟಿ ಸಾಲಮನ್ನಾ ಮಾಡಲಾಯಿತು. ಬಿಜೆಪಿ ಅವಧಿಯಲ್ಲಿ ಅದಾನಿ, ಅಂಬಾನಿಗಳ ರೂ.6.50 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಗಿದೆ, ಇದು…
ಯಾದಗಿರಿ : ಕಳೆದ ಎರಡು ದಿನಗಳ ಹಿಂದೆ ಯಾದಗಿರಿಯಲ್ಲಿ ಅನ್ಯಕೋಮಿನ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ಬಜರಂಗದಳ ಕಾರ್ಯಕರ್ತರು ಹಿಗ್ಗಾಮುಗ್ಗ ಥಳಿಸಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಹಲ್ಲಿಗೆ ಒಳಗಾದ ಯುವಕನ ವಿರುದ್ಧ ಬಾಲಕಿಯ ಪೋಷಕರು ಪೋಕ್ಸೋ ಕೇಸ್ ದಾಖಲಿಸಿದ್ದಾರೆ. ಅನ್ಯ ಕೋಮೀನ ಬಾಲಕಿಗೆ ಪ್ರೀತಿಸಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆದಿತ್ತು ಮೂರು ದಿನಗಳ ಹಿಂದೆ ಯಾದಗಿರಿ ನಗರದಲ್ಲಿ ಈ ಘಟನೆ ನಡೆದಿತ್ತು. ಹಲ್ಲೆ ಸಂಬಂಧ ಪಟ್ಟಂತೆ ಯಾದಗಿರಿ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈಗ ಬಾಲಕಿಯ ಪೋಷಕರಿಂದ ಯುವಕನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಬಾಲಕಿಯ ಜೊತೆಗಿದ್ದ ಫೋಟೋ ವಿಡಿಯೋ ತೋರಿಸಿ ಯುವಕ ಬ್ಲಾಕ್ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿ ಯುವಕನ ವಿರುದ್ಧ ಬ್ಲಾಕ್ಮೇಲ್ ಬೆದರಿಕೆ ಆರೋಪದಡಿ ದಾಖಲಾಗಿದೆ. ಅಲ್ಲದೆ ಯುವಕನ ಕುಟುಂಬದ ಜೊತೆಗೆ 16 ಜನರು ಬಿರುದ ಕೂಡ ಯಾದಗಿರಿ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಘಟನೆ ಹಿನ್ನೆಲೆ? ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಬಜರಂಗದಳ ಮುಖಂಡರು ಯುವಕನಿಗೆ ಮನಬಂದಂತೆ…