Author: kannadanewsnow05

ಕೊಪ್ಪಳ : ಕೊಪ್ಪಳದ ಆನೆಗುಂದಿ ತೂಗು ಸೇತುವೆ ಕಾಮಗಾರಿ ನಷ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಷ್ಟ ಪರಿಹಾರದಲ್ಲಿ ಕಾನೂನು ಸಂಘರ್ಷ ಎದುರಾಗಿದ್ದು, 6 ಕೋಟಿಯ ಕಾಮಗಾರಿಗೆ 5219 ಕೋಟಿ ಪರಿಹಾರಕ್ಕೆ ಕೋರ್ಟ್ ಇದೀಗ ಆದೇಶ ನೀಡಿದೆ. ಸರ್ಕಾರಕ್ಕೆ ಹೊರ ರಾಜ್ಯದ ಗುತ್ತಿಗೆದಾರ ಇದೀಗ ಸೆಡ್ಡು ಹೊಡೆದಿದ್ದಾನೆ. ಹೀಗಾಗಿ ಸರ್ಕಾರದ ಲೆಕ್ಕಪತ್ರ ಸಮಿತಿಯು ಗುತ್ತಿಗೆದಾರಣ ಅರ್ಜಿಯಲ್ಲಿ ಪರಿಹಾರದ ಮತ್ತ ನೋಡಿ ಶಾಕ್ ಆಗಿದೆ. ಹೌದು ಸರ್ಕಾರದ ವಿರುದ್ಧವೇ ಗುತ್ತಿಗೆದಾರ ಕಾನೂನು ಸಮರ ಹೂಡಿದ್ದು, ಪ್ರಕರಣ ಸಂಬಂಧ ಇದೀಗ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. 5219 ಕೋಟಿ ಪರಿಹಾರ ಕೊಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಕಂಟ್ರಾಕ್ಟರ್ ವರಸೆಗೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಇದೀಗ ಕಂಗಾಲಾಗಿದೆ. ಆನೆಗುಂದಿ ತುಂಗಭದ್ರಾ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಸೇತುವೆ ನಿರ್ಮಾಣ ಮಾಡಲಾಗಿದೆ. ನವೆಂಬರ್ 1993ರಲ್ಲಿ ಈ ಒಂದು ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು.…

Read More

ಕೊಪ್ಪಳ : ಏಪ್ರಿಲ್ 1ರಿಂದ ತುಂಗಭದ್ರಾ ಡ್ಯಾಮ್ ನಿಂದ ಬೆಳೆಗೆ ನೀರು ಹರಿಸುವುದಿಲ್ಲ ಎಂದು ತುಂಗಭದ್ರಾ ನೀರಾವರಿ ನಿಗಮದ ಮುನಿರಾಬಾದ್ ವಲಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಮ್ ನಿಂದ ನೀರು ಹರಿಸುವುದಿಲ್ಲ. ರೈತರು ಭತ್ತ ನಾಟಿ ಮಾಡಿದರೆ ನೀರು ಸಿಗಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆಯ ಪ್ರಕಾರ ಎರಡನೇ ಬೆಳೆಗೆ ನೀರು ಬಿಡಲಾಗುತ್ತದೆ. ಮಾರ್ಚ್ 31ರವರೆಗೆ ಪ್ರತಿದಿನ ಕಾಲುವಿಗೆ ನೀರುಹರಿಸಲಾಗುತ್ತದೆ. ಏಪ್ರಿಲ್ 1ರ ನಂತರ ಬೆಳೆಗೆ ನೀರು ಹರಿಸಲ್ಲ ಆದರೆ ಕುಡಿಯುವುದಕ್ಕೆ ಮಾತ್ರ ನೀರು ಬಳಕೆ ಮಾಡಬಹುದಾಗಿದೆ. ಹಾಗಾಗಿ ಭತ್ತದ ನಾಟಿ ಮಾಡದಂತೆ ಅಧಿಕಾರಿಗಳು ರೈತರಿಗೆ ಸೂಚನೆ ನೀಡಿದ್ದಾರೆ.ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ನಾಟಿ ನಡೆಯುತ್ತಿದ್ದು, ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಭತ್ತದ ನಾಟಿ ಆರಂಭವಾಗಿದೆ. ಹಾಗಾಗಿ ಅಧಿಕಾರಿಗಳು ಭತ್ತ ನಾಟಿ ಮಾಡಬೇಡಿ ಎಂದು ರೈತರಿಗೆ ಸೂಚಿಸಿದ್ದಾರೆ.

Read More

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಪಾತ್ರ ಇದೆ ಎಂದು ಇತ್ತೀಚಿಗೆ ಇಡಿ ಅಧಿಕಾರಿಗಳು ದಾಖಲೆಗಳಲ್ಲಿ ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಮೈಸೂರು ನಗರಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನಗಳನ್ನು ಕೊಂಡ ಜನರಿಗೆ ಇದೀಗ ED ಬಿಗ್ ಶಾಕ್ ನೀಡಿದೆ. ಹೌದು ಮೈಸೂರಿನ ಉಪನಂದಾನಾಧಿಕಾರಿಗಳಿಗೆ ಇಡಿ ಅಧಿಕಾರಿಗಳು ಪತ್ರ ಬರೆದಿದ್ದು, ಮುಡಾದ ಸುಮಾರು 160 ಸೈಟ್ಗಳನ್ನು ಸೀಜ್ ಮಾಡುವಂತೆ ಪತ್ರ ಬರೆದಿದ್ದಾರೆ. ಮುಡಾದಲ್ಲಿ ಸೈಟ್ ಕೊಂಡವರು ಈಗಾಗಲೇ ಮನೆ ನಿರ್ಮಿಸುತ್ತಿದ್ದು, ಮನೆ ನಿರ್ಮಾಣದ ಖುಷಿಯಲ್ಲಿದ್ದವರಿಗೆ ಈಗ ನೋಟಿಸ್ ಸಂಕಷ್ಟ ತಂದೊಡ್ಡಿದೆ. ಸೈಟ್ಗಳನ್ನು ವಾಪಸ್ ನೀಡಲಾರದೆ ಮನೆ ಕಟ್ಟಲಾಗದೆ ಕಂಗಾಲಾಗಿದ್ದಾರೆ. 50:50 ಅನುಪಾತದಲ್ಲಿ ಸೈಟ್ ಪಡೆದು ಬಳಿಕ ಹಲವರಿಂದ ಮಾರಾಟ ಮಾಡಲಾಗಿತ್ತು. ಸೈಟ್ ಖರೀದಿ ಮಾಡಿ ಮನೆ ಕಟ್ಟಿ ಇದೀಗ ಜನರು ಸಂಕಷ್ಟ ಎದುರಿಸುತ್ತಿದ್ದಾರೆ.

Read More

ಕೊಪ್ಪಳ : ಕಳೆದ 2 ದಿನಗಳ ಹಿಂದೆ ಶಿವರಾಜ್ ತಂಗಡಿಗಿ ಶಾಲೆಯೊಂದರಲ್ಲಿ ತಪ್ಪಾಗಿ ಕನ್ನಡ ಬರೆದಿದ್ದ ವಿಚಾರವಾಗಿ, ಕನ್ನಡ ಬರೆಯಲು ಬರಲ್ಲ ಎಂಬ ವೈರಲ್ ಆದ ವಿಡಿಯೋ ವಿಚಾರವಾಗಿ ಶಿವರಾಜ್ ತಂಗಡಗಿ ಪ್ರತಿಕ್ರಿಯೆ ನೀಡಿದ್ದು, ನಾನು ಬಿಎಸ್ಸಿ ಪದವೀಧರ ಕನ್ನಡ ಬರೆಯಲು ಬಾರದಷ್ಟು ದಡ್ಡ ನಾನಲ್ಲ. ಪೂರ್ತಿ ಬರುವವರಿಗೆ ಕಾಯುವ ತಾಳ್ಮೆ ಇಲ್ಲದವರಿಂದ ವಿಡಿಯೋ ಮಾಡಲಾಗಿದೆ ಎಂದು ಅವರು ತಿಳಿಸಿದರು. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೂಳೆಕಲ್ ಎಂಬ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಬೇರೆ ಏನೋ ಬರೆಯಲು ಮುಂದಾಗಿದ್ದೆ. ಆದರೆ ಅಲ್ಲಿದ್ದವರು ಶುಭವಾಗಲಿ ಅಂತ ಬರೆಯಲು ಹೇಳಿದ್ದರು ಆಗ ಭ ಅಕ್ಷರದಲ್ಲಿ ಸ್ವಲ್ಪ ತಪ್ಪಾಗಿತ್ತು. ಆದರೆ ಅಕ್ಷರ ಬರೆಯಲಾರದ ಸ್ಥಿತಿಯಲ್ಲಿ ನಾನಿಲ್ಲ. ನನ್ನ ಬಗ್ಗೆ ಮಾತನಾಡುವವರು ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ.ಎಂದು ಎಚ್ಚರಿಸದರು. ಕಳೆದ 12 ವರ್ಷಗಳಿಂದ ನಾನು ರಾಜಕೀಯದಲ್ಲಿ ಇದ್ದೇನೆ. ಯಾವತ್ತಾದರೂ ತಪ್ಪಾಗಿ ಕನ್ನಡ ಮಾತನಾಡಿದ್ದೀನಾ? ಕಳೆದ ಎರಡು ವರ್ಷ ಇಲಾಖೆ ಹೇಗಿದೆ ಅಂತ ನೋಡಿ ನನ್ನ…

Read More

ನವದೆಹಲಿ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಬಿಗಿಪಟ್ಟು ಹಿಡಿದಿದ್ದು, ಬಿ.ವೈ ವಿಜೇಂದ್ರ ವಿರುದ್ಧ ಯತ್ನಾಳ್ ಬಣದ ಸಮರ ಇದೀಗ ಮುಂದುವರೆದಿದೆ. ಹಾಗಾಗಿ ಫೆಬ್ರವರಿ 10ರಂದು ನವದೆಹಲಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಹೈಕಮಾಂಡ್ ಬಳಿ ಲಿಂಗಾಯತ ಅಸ್ತ್ರ ಹೂಡಿದ ಯತ್ನಾಳ್, ತಟಸ್ಥ ಬಣದಲ್ಲಿ ಗುರುತಿಸಿಕೊಂಡಿದ್ದ ಸಂಸದ ಬಸವರಾಜ್ ಬೊಮ್ಮಾಯಿಯನ್ನು ಭೇಟಿಯಾಗಿದ್ದಾರೆ. ಬಿವೈ ವಿಜಯೇಂದ್ರ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಯತ್ನಾಳ್ ಬಣ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಫೆಬ್ರುವರಿ 10 ರಂದು ನವದೆಹಲಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಸರ್ಕಾರಿ ನಿವಾಸದ ಪೂಜೆ ನೆಪದಲ್ಲಿ ಸಭೆಗೆ ಪ್ಲಾನ್ ಮಾಡಿಕೊಂಡಿದ್ದು, ಸಂಸದ ಬೊಮ್ಮಾಯಿ ನೇತೃತ್ವದಲ್ಲಿ ಫೆಬ್ರವರಿ 10ರಂದು ಈ ಒಂದು ಸಭೆ ನಡೆಯಲಿದೆ. ಈ ಮೂಲಕ ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಬಣ ಸಿಡಿದೆದ್ದಿದೆ.

Read More

ದಕ್ಷಿಣಕನ್ನಡ : ಭೂತ ಪ್ರೇತದ ಬಗ್ಗೆ ನಾವೆಲ್ಲ ಕಥೆಗಳಲ್ಲಿ ಕೇಳಿರುತ್ತೇವೆ. ಸಿನೆಮಾಗಳಲ್ಲಿ ನೋಡಿರುತ್ತೇವೆ. ಆದರೆ ದಕ್ಷಿಣ ಕನ್ನಡದಲ್ಲಿ ಕುಟುಂಬವೊಂದಕ್ಕೆ ಕಳೆದ 3 ತಿಂಗಳಿನಿಂದ ಪ್ರೇತ ಭಾದೆ ಕಾಡುತ್ತಿದೆ ಅಂತೇ. ಅಲ್ಲದೇ ಮೊಬೈಲ್ ನಲ್ಲಿ ವಿಚಿತ್ರ ಮುಖದ ವ್ಯಕ್ತಿಯ ಫೋಟೋ ಕೂಡ ಸೆರೆಹಿಡಿದಿದ್ದಾರೆ. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ವಿಚಿತ್ರವಾದಂತ ಮುಖ ಸೆರೆಯಾಗಿದೆ. ಮೊಬೈಲ್ ನಲ್ಲಿ ವಿಚಿತ್ರವಾದ ಮುಖ ಗೋಚರವಾಗಿದೆ. ಮಾಲಾಡಿ ಗ್ರಾಮದ ಉಮೇಶ್ ಶೆಟ್ಟಿ ಕುಟುಂಬಕ್ಕೆ ವಿಚಿತ್ರವಾದಂತಹ ಅನುಭವವಾಗುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಕುಟುಂಬಕ್ಕೆ ಪ್ರೇತ ಭಾದೆ ಕಾಡುತ್ತಿದೆಯಂತೆ. ಉಮೇಶ್ ಶೆಟ್ಟಿ ಮನೆ ಒಳಗೆ ಬಟ್ಟೆಗೆ ಆಗಾಗ ಬೆಂಕಿ ಬೀಳುತ್ತದಂತೆ. ಮನೆಯಲ್ಲಿರುವ ಪಾತ್ರೆಗಳು ಸೇರಿದಂತೆ ಎಲ್ಲ ವಸ್ತುಗಳು ಏಕಾಏಕಿ ಬೀಳುತ್ತಾವೇಯಂತೆ. ರಾತ್ರಿ ಹೊತ್ತು ನಿದ್ದೆ ಇಲ್ಲದೆ ಇಡೀ ಕುಟುಂಬ ಕಾಲ ಕಳೆಯುತ್ತಿದೆ. ಉಮೇಶ್ ಶೆಟ್ಟಿ ಪುತ್ರಿ ಮೊಬೈಲ್ ನಲ್ಲಿ ಈ ಒಂದು ವಿಲಕ್ಷಣ ಫೋಟೋವನ್ನು ಸೆರೆಹಿಡಿದಿದ್ದಾಳೆ. ಮನೆ ಒಳಗೆ ಯಾರೋ ಅತ್ತಿಂದಿತ್ತ ಓಡಾಡುತ್ತಿರುವ…

Read More

ತಮಿಳುನಾಡು : ದೇಶದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ತಮಿಳುನಾಡಿನಲ್ಲಿ ಪ್ರೌಢಶಾಲೆ ವಿದ್ಯಾರ್ಥಿನಿಯ ಮೇಲೆ ಮೂವರು ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಟಿಸಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ. ಹೌದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬ ಮೇಲೆ ಶಾಲೆಯ ಮೂವರು ಶಿಕ್ಷಕರು ಅತ್ಯಾಚಾರವೆಸಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆಯು ಪ್ರದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಬಂಧಿಕರು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಾಲಕಿಯ ತಾಯಿಯ ದೂರಿನ ಆಧಾರದ ಮೇಲೆ ಅವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆ ಬಾಲಕಿ ಒಂದು ತಿಂಗಳಿಗೂ ಹೆಚ್ಚು ಕಾಲ ಶಾಲೆಗೆ ಹೋಗಿರಲಿಲ್ಲ. ಶಾಲೆಯ ಮುಖ್ಯ ಶಿಕ್ಷಕರು ವಿಚಾರಿಸಿದಾಗ, ತಾಯಿ ಹಲ್ಲೆ ನಡೆಸಿರುವುದಾಗಿ ಬಹಿರಂಗಪಡಿಸಿದರು.

Read More

ಮೈಸೂರು : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಅಕ್ರಮ ಆರೋಪದ ಕುರಿತಂತೆ KSOU ಕುಲಪತಿ ಪ್ರೊ. ಶರಣಪ್ಪ ವಿ.ಹಲಸೇ ಮತ್ತು ಸಿಬ್ಬಂದಿ ವಿರುದ್ಧ ಗಂಭೀರವಾದ ಆರೋಪ ಕೇಳಿ ಬಂದಿದೆ. KSOU ನಲ್ಲಿ ನಡೆದಂತಹ ಕೋಟ್ಯಾಂತರ ರೂಪಾಯಿಗಳ ಅಕ್ರಮದ ದಾಖಲೆಗಳನ್ನು ಕಾನೂನು ವಿದ್ಯಾರ್ಥಿ ಪುಟ್ಟಸ್ವಾಮಿ ಬಿಡುಗಡೆ ಮಾಡಿದ್ದಾರೆ. ಕೆಎಸ್ಒಯು ಕಟ್ಟಡದ ವರ್ಚುಯಲ್ ಟೂರ್ಗೆ ಫೋಟೋಗ್ರಾಫಿಕ್ ಬಿಲ್ ಮಾಡಲು 96,91,812 ಬಿಲ್ ಮಾಡಿದ ಆರೋಪ ಕೇಳಿ ಬಂದಿದೆ.ಮೈಸೂರು ಕಟ್ಟಡ ಒಂದಕ್ಕೆ 26,15,000 ಮಾಡಿದ ಆರೋಪ ಕೇಳಿ ಬಂದಿದೆ.ಇನ್ನುಳಿದ 11 ಕಟ್ಟಡಗಳ ಫೋಟೋಗ್ರಾಫಿ ಗೆ ತಲಾ 4 ಲಕ್ಷ ಮತ್ತು 5 ಲಕ್ಷ ಬಿಲ್ ಆಗಿದೆ 20 ರಿಂದ 30 ಸಾವಿರದ ಕೆಲಸಕ್ಕೆ 96 ಲಕ್ಷ ಬಿಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಕೆಎಸ್ಒಯು ಕಟ್ಟಡಕ್ಕೆ ಎಲ್ಇಡಿ ಬಲ್ಬ್ ಹಾಕಿಸಲು 2 ಕೋಟಿ ಬಿಲ್ ಮಾಡಿರುವ ಆರೋಪ ಕೇಳಿ ಬಂದಿದೆ. ಇನ್ನು ಕೆಎಸ್ಒಯು ವಸತಿಗೃಹದ ಹಾಸಿಗೆ ದಿಂಬಿಗೆ 15 ಲಕ್ಷ ರೂಪಾಯಿ, ಪುಸ್ತಕ ತುಂಬಿಕೊಂಡು…

Read More

ಬೆಂಗಳೂರು : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಶಾಸಕ ಪಿಎಂ ನರೇಂದ್ರ ಸ್ವಾಮಿಯವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪಿ.ಎಂ. ನರೇಂದ್ರ ಸ್ವಾಮಿ, ನಂ.305, ಪೂರಿಗಲಿ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ ಅವರನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1974 ರ ಸೆಕ್ಷನ್ 4 (2) ರ ಅಡಿಯಲ್ಲಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ನಾಮನಿರ್ದೇಶನ ವಿಧಾನ ಮತ್ತು ಅಧ್ಯಕ್ಷರು ಮತ್ತು ಸದಸ್ಯರ ಸೇವಾ ನಿಯಮಗಳು ಮತ್ತು ಷರತ್ತುಗಳು ಮತ್ತು ಸದಸ್ಯ ಕಾರ್ಯದರ್ಶಿಯ ನೇಮಕಾತಿ), ನಿಯಮಗಳು, 2024 ರ ಪ್ರಕಾರ, ದಿನಾಂಕ: 18.12.2024 ರ ಅಧಿಸೂಚನೆ ಸಂಖ್ಯೆ ಎಫ್ಇಇ 526 ಇಪಿಸಿ 2024 (ಭಾಗ-1) ರಲ್ಲಿ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ.ಈ ನಾಮನಿರ್ದೇಶನಕ್ಕೆ ಸಂಬಂಧಿಸಿದ ನಿಯಮಗಳು…

Read More

ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 ರಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಕುರಿತು ನಗರದಲ್ಲಿ 3 ದಿನಗಳ ಕಾಲ 5 ಕಡೆ ಎಲ್ಲಾ ಎಂಟು ವಲಯಗಳನ್ನು ಒಳಗೊಂಡಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಸಲಹೆಗಳನ್ನು ಸ್ವೀಕರಿಸುವ ಸಭೆಗಳನ್ನು ಆಯೋಜನೆ ಮಾಡಲಾಗುತ್ತಿದೆ. ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024ರ ಪರಿಶೀಲನೆ ಮತ್ತು ವರದಿಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದ್ದು, ಆ ಸಮಿತಿಗೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ರವರನ್ನು ಅಧ್ಯಕ್ಷರನ್ನಾಗಿ ನಿಯೋಜನೆ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರದೇಶದ ಅಭಿವೃದ್ಧಿಯ ಯೋಜನೆ, ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ, ಪರಿಣಾಮಕಾರಿಯಾದ, ಸಹಭಾಗಿತ್ವದ ಮತ್ತು ಸ್ಪಂದನಶೀಲ ಆಡಳಿತಕ್ಕಾಗಿ, ನಗರಾಡಳಿತದ ಮೂಲಕ ಘಟಕಗಳನ್ನಾಗಿಸುವುದಕ್ಕೆ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಸುಗಮಗೊಳಿಸುವುದಕ್ಕೆ ಹಾಗೂ ಸಹಭಾಗಿ, ದಕ್ಷ ಮತ್ತು ನ್ಯಾಯೋಚಿತ ಆಡಳಿತದ ಚೌಕಟ್ಟನ್ನು ಸ್ಥಾಪಿಸುವ ಸಲುವಾಗಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಜಾರಿಗೆ ತರಲಾಗುತ್ತಿದೆ. ಮುಂದುವರಿದು, ಮೇಲ್ಕಂಡ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸುವ ಸಲುವಾಗಿ…

Read More