Subscribe to Updates
Get the latest creative news from FooBar about art, design and business.
Author: kannadanewsnow05
ಹಾಸನ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಇದೀಗ ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿದ್ದು ಕೋಲಾರ ಕ್ಷೇತ್ರಕ್ಕೆ ಮಲ್ಲೇಶ ಬಾಬು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಹಾಸನದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠರಾಗಿರುವ ಎಚ್ ಡಿ ದೇವೇಗೌಡ ಕೋಲಾರದಲ್ಲಿ ಅಭ್ಯರ್ಥಿ ಮಲ್ಲೇಶ ಬಾಬು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದಾರೆ. ಈ ಕುರಿದಂತೆ ಮಾತನಾಡಿದ ಅವರು ಕೋಲಾರಕ್ಕೆ ಬೇರೆಯವರ ಪ್ರಶ್ನೆಯೇ ಬರಲ್ಲ. ಮಲ್ಲೇಶ ಬಾಬು ಈ ಬಾರಿಯ ಲೋಕಸಭೆ ಚುನಾವಣೆ ಅಭ್ಯರ್ಥಿ.ಕೋಲಾರ ಕ್ಷೇತ್ರಕ್ಕೆ ಮಲ್ಲೇಶ್ ಬಾಬು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹಾಸನದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಸ್ ಡಿ ದೇವೇಗೌಡ ಘೋಷಿಸಿದ್ದಾರೆ.
ಬೆಂಗಳೂರು : ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಕತರ್ನಾಕ್ ಅಂತರಾಜ್ಯ ಕಳ್ಳರ ಗ್ಯಾಂಗ್ ನನ್ನು ಇದೀಗ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಪ್ರಯಾಣಿಕರಿಗೆ ಪ್ರಜ್ಞೆ ತಪ್ಪುವ ವಸ್ತು ನೀಡಿ ಇವರು ಕಳ್ಳತನ ಮಾಡುತ್ತಿದ್ದರು. ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಹಣ ದೋಚುತ್ತಿದ್ದರು ಎನ್ನಲಾಗುತ್ತಿದೆ. https://kannadanewsnow.com/kannada/bell-lays-off-400-employees-in-10-minutes-calls-it-shameful/ ಇದೀಗ ರೈಲ್ವೆ ಪೊಲೀಸ್ರಿಂದ ಮೂರು ಆರೋಪಿಗಳನ್ನು ಬಂದಿಸಲಾಗಿದೆ. ಆರೋಪಿಗಳಿಂದ 24 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನ ಮಹಮ್ಮದ್ ಶೌಕತ್ ಅಲಿ, ಮಹಮ್ಮದ್ ಸತ್ತರ್, ಮೊಹಮ್ಮದ್ ಆಸಾಫ್ ಬಂಧಿತ ಆರೋಪಿಗಳು ಎಂದು ಹೇಳಲಾಗುತ್ತಿದೆ. ದರೋಡೆ ಹೇಗೆ? ಆರೋಪಿಗಳು ಸಂಪೂರ್ಣ ನಕಲಿ ದಾಖಲೆ ನೀಡಿ ಟಿಕೆಟ್ ಬುಕ್ ಮಾಡುತ್ತಿದ್ದರು ಎನ್ನಲಾಗುತ್ತಿದೆ. ನಂತರ ಪ್ರಯಾಣಿಕರ ಜೊತೆ ಪರಿಚಯ ದವರಂತೆ ಮಾತಿಗೆಳೆಯುತ್ತಾರೆ.ಎರಡು ದಿನಗಳ ಕಾಲ ಪ್ರಯಾಣ ಮಾಡುವಾಗ ಪರಿಚಯ ಮಾಡಿಕೊಳ್ಳುತ್ತಾರೆ. ಬೇರೆ ಪ್ರಯಾಣಿಕರ ಜೊತೆ ಊಟ ತಿಂಡಿ ಕೂಡ ಮಾಡುತ್ತಿದ್ದರು. https://kannadanewsnow.com/kannada/breaking-udupi-two-people-drown-ed-after-they-went-fishing-in-the-water/ ಅಲ್ಲದೆ ತುಂಬಾ ಕ್ಲೋಸ್ ಆಗುತ್ತಿದ್ದರು. ಸರಿಯಾದ ಸಮಯ ನೋಡಿ ಕೋಲ್ಡ್ರಿಂಗ್ಸ್ ನಲ್ಲಿ ಮತ್ತು ಬರುವ ಔಷಧಿ…
ಉಡುಪಿ : ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾ ನದಿಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೀನು ಹಿಡಿಯಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾ ನದಿಯಲ್ಲಿ ನಡೆದಿದೆ. ಹೊಸಾಳ ಗ್ರಾಮದ ಶ್ರೀಶ (21) ಹಾಗೂ ಪ್ರಶಾಂತ್ ಪೂಜಾರಿ (30) ಮೃತ ರ್ದುದೈವಿಗಳು ಎಂದು ಹೇಳಲಗುತ್ತಿದೆ. ಮೀನು ಹಿಡಿಯಲೆಂದು ಇಂದು(ಮಾ.26) ಬೆಳಿಗ್ಗೆ ನಾಗರ ಮಠದ ಸೀತಾ ನದಿಗೆ ಹೋಗಿದ್ದರು. ಈ ವೇಳೆ ಮೀನಿಗೆ ಬಲೆ ಹಾಕುವಾಗ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ನೀರು ಪಾಲಾಗಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಂಡ್ಯ : ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಓರ್ವ ಮುಳುಗುತ್ತಿದ್ದ ವೇಳೆ ಆತನ ರಕ್ಷಣೆಗೆ ತೆರಳಿದ ಇನ್ನೂ ಮೂವರು ಸೇರಿದಂತೆ ಒಟ್ಟು ನಾಲ್ವರು ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ನಡೆದಿದೆ. ಮೃತರನ್ನು ನಾಗೇಶ್ (40) ಭರತ್ (17) ಗುರೂಪದ (32) ಮಹದೇವ (16)ಮೃತ ದುರ್ದೈವಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಕಾವೇರಿ ನದಿಯಲ್ಲಿ ಈಜುವ ವೇಳೆ ನೀರಿನಲ್ಲಿ ಓರ್ವ ಮುಳುಗಿದ್ದ. ಈ ವೇಳೆ ರಕ್ಷಣೆಗೆ ಹೋಗಿದ್ದ ಮೂವರು ಸೇರಿದಂತೆ ನಾಲ್ವರು ಇದೀಗ ದುರ್ಮರಣ ಹೊಂದಿದ್ದಾರೆ ಎನ್ನಲಾಗುತ್ತಿದೆ. ಮೈಸೂರಿನ ಕನಕಗಿರಿಯಿಂದ ಮುತ್ತತ್ತಿ ಪ್ರವಾಸಕ್ಕೆ ಸುಮಾರು 40 ಜನರು ಬಂದಿದ್ದರು.ಒಂದೇ ಬಸ್ ನಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರು ಸೇರಿದಂತೆ 40 ಜನರು ಆಗಮಿಸಿದ್ದರು. ಇದೀಗ ಇನ್ನರ ಮೃತದೇಹ ಪತ್ತೆಯಾಗಿದ್ದು, ಮತ್ತಿಬ್ಬರ ಶವಕ್ಕಾಗಿ ಕಾರ್ಯ ಶೋಧ ಕಾರ್ಯ ಮುಂದುವರೆದಿದೆ ಘಟನೆ ಸಂಬಂಧ ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚಿಗೆ ಅಗ್ನಿ ದುರಂತಗಳ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದೀಗ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿನ ವಿಲ್ಲಾದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು ಅದೃಷ್ಟವಶಾತ್ ಅಗ್ನಿಶಾಮಕ ಠಾಣಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಾಯಿ-ಮಗಳು ಬಚಾವ್ ಆಗಿದ್ದಾರೆ. ಕಾನ್ಕಾರ್ಡ್ ಕುಪರ್ಟಿನೊ ಲೇಔಟ್ನ ವಿಲ್ಲಾದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿನ ವಿಲ್ಲಾದಲ್ಲಿ ಅನುಪ್ ಅಂಜನ್ ಮತ್ತು ಮೇಹಾ ದಂಪತಿ ವಾಸವಿದ್ದರು. ದೇವರ ಕೋಣೆಯಲ್ಲಿ ದೀಪ ಹಚ್ಚಿ ಬಾಲ್ಕನಿಯ ರೂಮ್ ನಲ್ಲಿ ತಾಯಿ-ಮಗಳು ಇದ್ದರು. ಈ ವೇಳೆ ದೇವರ ಕೋಣೆಯಲ್ಲಿದ್ದ ದೀಪದಿಂದ ಬೆಂಕಿ ಹೊತ್ತಿಕೊಂಡಿದೆ. ಗ್ರೌಂಡ್ ಪ್ಲೋರ್ನಲ್ಲಿ ಸಂಪೂರ್ಣವಾಗಿ ಬೆಂಕಿ ಆವರಿಸಿದ್ದು, ಬಾಲ್ಕನಿಯಿಂದ ಕೆಳಗೆ ಬರಲಾಗದೆ ತಾಯಿ-ಮಗಳ ರೋಧನೆ ಅನುಭವಿಸಿದ್ದರು.ಬಳಿಕ ತಾಯಿ-ಮಗಳ ಕಿರುಚಾಟ ಕೇಳಿದ ಸ್ಥಳೀಯರು, ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣಾ ಸಿಬ್ಬಂದಿ, ಅಗ್ನಿ ಅವಘಡದಲ್ಲಿ ಸಿಲುಕಿದ್ದ ತಾಯಿ-ಮಗಳನ್ನು ರಕ್ಷಣೆ ಮಾಡಿ, ಬೆಂಕಿಯನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.…
ಮಹಾರಾಷ್ಟ್ರ : ಕಿಡಿಗೇಡಿಗಳು ಮಸೀದಿಯೊಂದರ ಗೋಡೆಯ ಮೇಲೆ ಶ್ರೀ ರಾಮ್ ಎಂದು ಬರಹ ಬರೆದು ಕೋಮು ಗಲಭೆಗೆ ಕಾರಣವಾದಂತ ಘಟನೆ ಮಹಾರಾಷ್ಟ್ರದ ಮುಂಬೈನ ಬೀಡ್ ಜಿಲ್ಲೆಯಲ್ಲಿ ನಡೆದಿದ್ದು ಇದೀಗ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/breaking-five-chinese-killed-in-suicide-bombing-in-pakistanbreaking-five-chinese-killed-in-suicide-bombing-in-pakistan/ ಮಜಲ್‌ಗಾಂವ್‌ನ ಮರ್ಕಝಿ ಮಸೀದಿಯ ಗೋಡೆಯ ಮೇಲೆ ಸಂಜೆಯ ಸಮಯದಲ್ಲಿ ಕಿಡಿಗೇಡಿಯೊಬ್ಬ ಶ್ರೀರಾಮ ಎಂದು ಬರೆದಿದ್ದಾನೆ. ಇದನ್ನು ವಿರೋಧಿಸಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಂಮರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಇನ್ನೂ ಉದ್ವಿಗ್ನ ವಾತಾವರಣವಿದ್ದು,ಪೊಲೀಸರು ನಾಕಾಬಂಧಿ ಹಾಕಿದ್ದಾರೆ. https://kannadanewsnow.com/kannada/breaking-bmtc-bus-conductor-assaults-woman-over-ticket-issue-in-bengaluru/ ಸಂಜೆ 5 ಗಂಟೆ ಸುಮಾರಿಗೆ ಕೆಲ ವಿರೋಧಿಗಳು ಧಾರ್ಮಿಕತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಮಸೀದಿಯ ಗೋಡೆಯ ಮೇಲೆ ಶ್ರೀರಾಮ ಎಂದು ಬರೆದಿದ್ದಾರೆ. ನಾವು ಸೆಕ್ಷನ್ 295 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ನಾವು ದುಷ್ಕರ್ಮಿಯನ್ನು ಪತ್ತೆ ಹಚ್ಚುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ ಎಂದು ಮಜಲಗಾಂವ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಧೀರಜ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು : ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ನಿರ್ವಾಹಕ ಮಹಿಳೆಯ ಮೇಲೆ ಅಟ್ಟಹಾಸ ಮೆರೆದಿದ್ದು, ಚಲಿಸುತ್ತಿದ್ದ ಬಸ್ ನಲ್ಲೆ ಹಲ್ಲೆ ಮಾಡಿ ಅಟ್ಟಹಾಸ ಮೆರೆದರುವ ಘಟನೆ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ 10 ಗಂಟೆಗೆ ಈ ಘಟನೆ ಸಂಭವಿಸಿದ್ದು, ಚಲಿಸುತ್ತಿರುವ ಬಸ್ ನಲ್ಲಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಬಸ್ ನಿರ್ವಾಹಕನ ಜೊತೆಗೆ ಮಹಿಳೆಯೊಬ್ಬರು ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ಕುಪಿತುಕೊಂಡ ನಿರ್ವಾಹಕ ಒಮ್ಮೆಲೆ ಮಹಿಳೆಯ ಮೇಲೆ ರೌದ್ರಾವತಾರ ತಾಳಿದ್ದು ಹಲ್ಲೆ ಮಾಡಿದ್ದಾನೆ. ಮಹಿಳೆಯ ಮೇಲೆ ಬಿಎಂಟಿಸಿ ನಿರ್ವಾಹಕ ಹಲ್ಲೆ ನಡೆಸಿದ್ದು, ಚಲಿಸುತ್ತಿದ್ದ ಬಸ್ ನಲ್ಲಿ ಮಹಿಳೆಯ ಮೇಲೆ ಹಲ್ಲೆ ಟಿಕೆಟ್ ವಿಚಾರವಾಗಿ ನಡೆದ ಹಲ್ಲೆಯಾಗಿದ್ದು ಇಂದು ಬೆಳಗ್ಗೆ 10 ಗಂಟೆಗೆ ನಡೆದ ಹಲ್ಲೆ ಪ್ರಕರಣವಾಗಿದೆ.ಹಲ್ಲೆಯ ದೃಶ್ಯ ಪ್ರಯಾಣಿಕರ ಮೊಬೈಲ್ ನಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ.ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು ತೀವ್ರ ಕುತೂಹಲಕ್ಕೆ ಹೇಳಿಸುವ ಮಂಡ್ಯ ಹಾಸನ ಹಾಗೂ ಕೋಲಾರ ಕ್ಷೇತ್ರಗಳಿಗೆ ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು. https://kannadanewsnow.com/kannada/people-did-not-support-regional-party-so-alliance-with-bjp-for-farmers-of-karnataka-hd-kumaraswamy/ ಇಂದು ಬೆಂಗಳೂರಿನಲ್ಲಿ ಜೆಡಿಎಸ್ ಮುಖಂಡರ ಹಾಗೂ ನಾಯಕರ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು ಈಗಾಗಲೇ ಮಂಡ್ಯ ಕೋಲಾರದ ಜಿಲ್ಲಾ ಮುಖಂಡರನ್ನು ಕರೆಸಿ ಸಭೆ ಕರೆದಿದ್ದೇನೆ. ಇಂದು ಸಂಜೆ 4 ಅಥವಾ 5:00 ಒಳಗಾಗಿ ಅಭ್ಯರ್ಥಿಗಳ ಹೆಸರು ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಎಚ್ ಡಿ ಕುಮಾರಸ್ವಾಮಿ ತಿಳಿಸಿದರು. https://kannadanewsnow.com/kannada/sumalatha-to-hold-crucial-meeting-with-her-close-friends-supporters-tomorrow/ ಈ ವೇಳೆ ಹಾಸನ ಲೋಕಸಭಾ ಕ್ಷೇತ್ರಕ್ಕೆ ಎಚ್ ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಹೆಸರು ಬಹುತೇಕ ಅಂತಿಮವಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಅಲ್ಲದೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ವತಹ ಕುಮಾರಸ್ವಾಮಿಯವರೇ ಸ್ಪರ್ಧಿಸಲಿದ್ದಾರೆ ಎಂದು…
‘ಪ್ರಾದೇಶಿಕ ಪಕ್ಷಕ್ಕೆ’ ಜನ ಬೆಂಬಲ ನೀಡಲಿಲ್ಲ, ಹೀಗಾಗಿ ನಾಡಿನ ರೈತರಿಗಾಗಿ ಬಿಜೆಪಿ ಜೊತೆಗೆ ಮೈತ್ರಿ : HD ಕುಮಾರಸ್ವಾಮಿ
ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ನಿವಾಸದಲ್ಲಿ ಜೆಡಿಎಸ್ ನ ಮಹತ್ವದ ಸಭೆ ನಡೆಯಿತು ಈ ಒಂದು ಸಭೆಯಲ್ಲಿ ಮಂಡ್ಯ ಹಾಸನ ಹಾಗೂ ಕೋಲಾರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕುರಿತಂತೆ ಚರ್ಚೆ ನಡೆಸಲಾಯಿತು. https://kannadanewsnow.com/kannada/sumalatha-to-hold-crucial-meeting-with-her-close-friends-supporters-tomorrow/ ನಾಡಿನ ರೈತರ ಹಿತಕ್ಕಾಗಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಪ್ರಾದೇಶಿಕ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿಲ್ಲ.ಪ್ರಾದೇಶಿಕ ಪಕ್ಷವಾಗಿ ನಮಗೆ ಜನ ಬೆಂಬಲ ನೀಡಿಲ್ಲ ನೆರೆ ರಾಜ್ಯಗಳಿಗೆ ಅನ್ಯಾಯವಾಗದಂತೆ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ. ನಾಡಿನ ಬಿಜೆಪಿ ಸಂಸದರಿಗೆ ಧ್ವನಿ ಇಲ್ಲ ಎಂಬ ಆರೋಪ ಇದೆ. ಸ್ವತಂತ್ರವಾಗಿ ಆಡಳಿತವನ್ನು ನಡೆಸುವ ಅಧಿಕಾರ ನಮಗೆ ಸಿಕ್ಕಿಲ್ಲ ಎಂದು ಅವರು ಬೇಸರ ಹೊರಹಾಕಿದರು. https://kannadanewsnow.com/kannada/aap-workers-gheraoed-at-pm-modis-residence-detained-by-police-for-protesting-against-kejriwals-arrest/ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ಜೆಡಿಎಸ್ ಮೈತ್ರಿಯಿಂದ ನಾವು ಮೂರೂ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಮಂಡ್ಯ ಹಾಸನ ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ, ದೇಶದಲ್ಲೆಡೆ ಮೋದಿ ಅಲೆ ಇದೆ…
ಮಂಡ್ಯ : ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಹಾಲಿ ಸಂಸದರಾಗಿರುವಂತಹ ಸುಮಲತಾ ಅಂಬರೀಶ್ ಅವರು ಬಿಜೆಪಿ ತನಗೆ ಟಿಕೆಟ್ ಕೊಡುತ್ತದೆ ಎಂದು ಬಹಳ ವಿಶ್ವಾಸ ಇಟ್ಟುಕೊಂಡಿದ್ದರು.ಆದರೆ ಇದೀಗ ಕೋಲಾರ್ ಹಾಸನ ಹಾಗೂ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಮೈತ್ರಿ ಪಕ್ಷವಾದ ಜೆಡಿಎಸ್ ಗೆ ಬಿಟ್ಟು ಕೊಟ್ಟಿದೆ.ಹೀಗಾಗಿ ಸುಮಲತಾ ಅಂಬರೀಶ್ ಅವರು ನಾಳೆ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಹೌದು ಬಿಜೆಪಿ ಟಿಕೆಟ್ ಮಿಸ್ ಆಗಿರುವ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಅವರು ನಾಳೆ ಬೆಂಗಳೂರಿನಲ್ಲಿ ತಮ್ಮ ಆಪ್ತರು ಹಾಗೂ ಬೆಂಬಲಿಗರು ಒಂದಿಗೆ ಸುದೀರ್ಘವಾಗಿ ಒಂದು ಮಹತ್ವವಾದಂತಹ ಸಭೆ ನಡೆಸಲಿದ್ದಾರೆ.ಈ ಒಂದು ಸಭೆಯಲ್ಲಿ ಆಪ್ತರ ಹಾಗೂ ಬೆಂಬಲಿಗರ ಸಲಹೆಯನ್ನು ಪಡೆದು ತಮ್ಮ ಮುಂದಿನ ನಿರ್ಧಾರವನ್ನು ತಿಳಿಸಲಿದ್ದಾರೆ.ಹೀಗಾಗಿ ನಾಳೆ ನಡೆಯುವಂತಹ ಮಾತೃ ಸಭೆಯಲ್ಲಿ ಸುಮಲತಾ ಅಂಬರೀಶ್ ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ. ಬಿಜೆಪಿ ಸಭೆಗೆ ಸುಮಲತಾ ಗೈರು ಇಂದು ಮಂಡ್ಯದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು…