Author: kannadanewsnow05

ಬೆಳಗಾವಿ : ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಉಂಟಾಗಿ, ವ್ಯಕ್ತಿಯ ಎದೆಗೆ ಸಹೋದರನೊಬ್ಬ ಕೊಡಲಿ ಇಂದ ಹಲ್ಲೆ ಮಾಡಿದ್ದು ಉದಗಟ್ಟಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಉದಗಟ್ಟಿ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಸಿದ್ದಪ್ಪ ಗೋಡೆರ್ ಎಂದು ತಿಳಿದುಬಂದಿದೆ. ಸಿದ್ದಪ್ಪನ ಎದೆಗೆ ಆತನ ಸಹೋದರರು ಕೊಡಲಿ ಇಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು, ಜಮೀನು ವಿಚಾರಕ್ಕೆ ಗಲಾಟೆ ನಡೆದಿದೆ ಕೊಡಲಿಯಿಂದ ಹಲ್ಲೆ ಮಾಡಿ ದಾಯಾದಿಗಳು ಕೊಲೆಗೆ ಯತ್ನಿಸಿದ್ದಾರೆ. ಕಬ್ಬು ಬೆಳೆದಿರುವ ಜಮೀನು ಬಿಟ್ಟು ಕೊಡುವಂತೆ ಸಿದ್ದಪ್ಪಗೆ ಸಹೋದರರು ಒತ್ತಡ ಹೇರಿದ್ದಾರೆ. ಕಬ್ಬು ಕಟಾವು ಮಾಡಿ ಬಿಟ್ಟುಕೊಡುವುದಾಗಿ ಸಿದ್ದಪ್ಪ ಗೋಡೆರ್ ಹೇಳಿದ್ದಾರೆ. ಕಬ್ಬು ಬೆಳೆಗೆ ನೀರು ಹಾಯಿಸಲು ಬಂದಿದ್ದ ಸಿದ್ದಪ್ಪನ ಮೇಲೆ ಏಕಾಏಕಿ ಕೊಡಲಿಯಿಂದ ದಾಳಿ ಮಾಡಿದ್ದಾರೆ. ಸಿದ್ದಪ್ಪಗೋಡೆರ್ ಎದೆಗೆ ಕೊಡಲಿಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದಾರೆ. ಸಿದ್ದಪ್ಪನ ಸಹೋದರನಿಂದ ಹಲ್ಲೆ…

Read More

ಬೆಂಗಳೂರು : ಬೆಂಗಳೂರಿನ ಯಲಹಂಕದ ವಾಯು ನೆಲೆಯಲ್ಲಿ ಇಂದು ಏರ್ ಶೋ 2025ಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಚಾಲನೆ ನೀಡಿದರು. ಏರೋ ಇಂಡಿಯಾ ಏರ್​ ಶೋ ನಡೆಯುತ್ತಿದ್ದು, ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ನಿನ್ನೆ ಊಟದಲ್ಲಿ ಜಿರಳೆ ಪತ್ತೆಯಾಗಿತ್ತು. ಇದೀಗ ಇಂದು ಮತ್ತೆ ಊಟದಲ್ಲಿ ಹುಳ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಹೌದು ನಿನ್ನೆ ತಾನೆ ಪೊಲೀಸರಿಗೆ ನೀಡಿದ್ದ ಬೆಳಗಿನ ಉಪಹಾರದಲ್ಲಿ ಜಿರಳೆ ಪತ್ತೆಯಾಗಿದ್ದು ಕೆಲವು ಪೊಲೀಸರು ತಿಂಡಿ ತಿನ್ನುವುದನ್ನೇ ಬಿಟ್ಟುಬಿಟ್ಟಿದ್ದರು. ಇದೀಗ ಇಂದು ಮತ್ತೆ ಊಟದಲ್ಲಿ ಹುಳ ಪತ್ತೆಯಾಗಿದ್ದು, ಪೊಲೀಸ್ ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ. ಇನ್ನು, ಎರಡು ವರ್ಷಗಳ ಹಿಂದೆ 2023ರಲ್ಲೂ ಇಂತಹದ್ದೇ ಘಟನೆ ನಡೆದಿತ್ತು. 2023ರ ಸೆಪ್ಟೆಂಬರ್ 26ರಂದು ವಿವಿಧ ಸಂಘಟನೆಗಳು ಬೆಂಗಳೂರು ಬಂದ್​ಗೆ ಕರೆ ಕೊಟ್ಟಿದ್ದವು. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ ಯಾರ್ಡ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತೆಗೆ ಯಶವಂತಪುರ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗಿತ್ತು. ಯಶವಂತಪುರ ಟ್ರಾಫಿಕ್ ಪೊಲೀಸರಿಗೆ ತಂದಿದ್ದ ಉಪಾಹಾರದಲ್ಲಿ (ರೈಸ್​…

Read More

ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ಟಿಕೆಟ್ ಅದರ ಹೆಚ್ಚಳ ಮಾಡಿ ಬಿಎಮ್ಆರ್‌ಸಿಎಲ್ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಸರಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದು, ನಾವು ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದಕ್ಕೆ ಗುಲಾಬಿ ಹೂ ಕೊಟ್ಟು ಕ್ಷಮೆ ಕೇಳಿದ ಬಿಜೆಪಿ ನಾಯಕರು, ಈಗ ಮೋದಿ ಪರವಾಗಿ ಗುಲಾಬಿ ಹೂವು ಕ್ಷಮೆ ಕೇಳಲ್ವಾ? ಎಂದು ವ್ಯಂಗ್ಯವಾಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೆಟ್ರೋ ಪ್ರಯಾಣದ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆಯಾಗಿದೆ. ತಾತ್ಕಾಲಿಕವಾಗಿ ಇದರ ಏರಿಕೆ ನಿಲ್ಲಿಸಿದರೆ ಅದು ಕೇಂದ್ರ ಸರ್ಕಾರದ್ದು. ಮೋದಿ ಪರವಾಗಿ ಬಿಜೆಪಿಗರು ಮೆಟ್ರೋ ನಿಲ್ದಾಣದಲ್ಲಿ ಕ್ಷಮೆ ಕೇಳಲಿ. ಬೇಕಿದ್ದರೆ ನಾವೇ ಬಿಜೆಪಿ ಗಳಿಗೆ ಗುಲಾಬಿ ಖರೀದಿ ಮಾಡಿಕೊಡುತ್ತೇವೆ. ಬಸ್ ಪ್ರಯಾಣದರ ಏರಿಸಿದಾಗ ನಮ್ಮ ವಿರುದ್ಧ ಪ್ರತಿಭಟನೆ ಮಾಡಿದರು. ಈಗ ಯಾಕೆ ಕೇವಲ ಮನವಿ ಕೊಡ್ತೀರಾ? ಮೋದಿ ಪರವಾಗಿ ಗುಲಾಬಿ ಕೊಟ್ಟು ಕ್ಷಮೆ ಕೇಳಲ್ವಾ? ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ…

Read More

ಬೆಂಗಳೂರು : ಬಾಕಿ ಬಿಲ್​ ಪಾವತಿ ಮಾಡದೇ ಕಳೆದ ಒಂದೂವರೆ ವರ್ಷದಿಂದ ಕಿರುಕುಳ ನೀಡುತ್ತಿದ್ದಾರೆ. ಇದರಿಂದ 400-500 ಕಿಯೋನಿಕ್ಸ್​​ ವಂಡರ್ಸ್​ಗಳು ಬೇಸತ್ತು ಹೋಗಿದ್ದಾರೆ. ಹಾಗಾಗಿ ಇಂದು ಶಿವಾನಂದ ಸರ್ಕಲ್ ಬಳಿ ಇರುವ ಕಿಯೋನಿಕ್ಸ್ ಸಂಸ್ಥೆ ಬಳಿ ವೆಂಡರ್ಸ್ ಗಳು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಕುರಿತಾಗಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ ನೀಡಿದ್ದು ಕಿಯೋನಿಕ್ಸ್ ವೆಂಡರ್ಸ್ ಗಳದ್ದು ಯಾಕೋ ಸ್ವಲ್ಪ ಅತಿಯಾಯಿತು ಎಂದು ಕಿಡಿ ಕಾರಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿ ಸರ್ಕಾರದ ಕಾಲದ ಸಿಎಜಿ ರಿಪೋರ್ಟ್ ಬಂದಿದೆ. ನಾವು ವೆಂಡರ್ಸ್ ಗಳ ಪ್ರತಿಭಟನೆಯನ್ನು ಹತ್ತಿಕ್ಕುತಿಲ್ಲ. ನಾವೇನು ಮಾಡಿದ್ದೇವೆ ಅಂತ ಅವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ? ಎಂದು ತಿಳಿಯುತ್ತಿಲ್ಲ. ಪ್ರತಿಭಟನೆ ಮಾಡೋದೇ ಆಗಿದ್ರೆ ಬಿಜೆಪಿ ಕಚೇರಿ ಮುಂದೆ ಹೋಗಿ ಅವರು ಪ್ರತಿಭಟನೆ ಮಾಡಬೇಕು. ಅವರಿಂದಾಗಿಯೇ ತಾನೇ ಕೀಯೊನಿಕ್ಸ್ ಗೆ ಪ್ರಾಬ್ಲಮ್ ಆಗಿದ್ದು? ಕಿಯೋನಿಕ್ಸ್ ವೆಂಡರ್ಸ್ ದು ಸ್ವಲ್ಪ ಅತಿಯಾಗಿದೆ ಎಂದು ಕಿಡಿ ಕಾರಿದರು. ಪ್ರಕರಣ ಹಿನ್ನೆಲೆ? ಕಿಯೋನಿಕ್ಸ್​ ರಾಜ್ಯದಲ್ಲಿ ಸುಮಾರು 48…

Read More

ಬೆಂಗಳೂರು : ಬೆಂಗಳೂರಿನ ಯಲಹಂಕ ವಾಯುಸೇನಾ ನೆಲೆಯಲ್ಲಿ ಏರೋ ಇಂಡಿಯಾ-2025 ಏರ್​ ಶೋ ನಡೆಯುತ್ತಿದೆ. ಏರ್​ಶೋಗೆ ತೆರಳುವ ವಾಹನಗಳನ್ನು ತಪಾಸಣೆಗೆ ಒಳಪಡಿಸಿ ಪ್ರವೇಶಕ್ಕೆ ಅವಕಾಶ ನೀಡುತ್ತಿರುವ ಹಿನ್ನೆಲೆಯಲ್ಲಿ ಕಿಮೀಗಟ್ಟಲೇ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ. ಇದರಿಂದ ವಿಮಾನ ನಿಲ್ದಾಣದ ಕಡೆ ಹೋಗುವ ವಾಹನ ಸವಾರರು ಟ್ರಾಫಿಕ್​ ಜಾಮ್​ನಿಂದ ಪರದಾಡಿದರು. ಏರ್ ಶೋ ಹಿನ್ನೆಲೆಯಲ್ಲಿ ಹೌದು ಯಲಹಂಕದ ಬಳಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಯಲಹಂಕದ ಸುತ್ತಮುತ್ತಲು ಟ್ರಾಫಿಕ್ ಜಾಮ್ ಉಂಟಾಗಿದ್ದು ಸವಾರರು ಪರದಾಟ ನಡೆಸುತ್ತಿದ್ದಾರೆ. ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ್ ವರೆಗೆ ರಸ್ತೆಯುದ್ದಕ್ಕೂ ವಾಹನಗಳು ನಿಂತಿವೆ. ಹೀಗಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಅಲ್ಲದೇ ಹೆಬ್ಬಾಳದ ಫ್ಲೈ ಓವರ್ ಮೇಲೆ ವಾಹನಗಳು ಸಾಲುಗಟ್ಟಿ ನಿಂತಿವೆ.

Read More

ಚಾಮರಾಜನಗರ : ಸಾಮಾನ್ಯವಾಗಿ ಕಳ್ಳರು ಮನೆ, ಬ್ಯಾಂಕ್ ಗಳನ್ನು ದರೋಡೆ ಮಾಡುವುದನ್ನು ಕೇಳಿದ್ದೇವೆ. ಆದರೆ ಚಾಮರಾಜನಗರದಲ್ಲಿ ಅಚ್ಚರಿ ಘಟನೆ ನಡೆದಿದ್ದು, ಪೊಲೀಸ್ ಠಾಣೆ ನಿಲ್ಲಿಸಿದ ಬೈಕ್ ಒಂದನ್ನೇ ಚಾಲಾಕಿ ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಹೌದು ಕಳ್ಳನೊಬ್ಬ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಿದ್ದ ಬೈಕ್ ನ್ನೇ ಕದ್ದು ಪರಾರಿಯಾಗಿರುವ ಘಟನೆ ಚಾಮರಾಜನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಚಾಲಾಕಿ ಕಳ್ಳ ಬೈಕ್ ಕದಿಯುತ್ತಿರುವ ದೃಶ್ಯ ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಡರಾತ್ರಿ ಸುಮಾರು 2 ಗಂಟೆಗೆ ಈ ಒಂದು ಘಟನೆ ನಡೆದಿದ್ದು, ನಗರದ CEN ಠಾಣೆಗೆ ನುಗ್ಗಿದ್ದಾನೆ. ಅಲ್ಲೇ ಇದ್ದಂತಹ ಬೈಕ್ ಅನ್ನು ಕದ್ದು ಪರಾರಿ ಆಗಿದ್ದಾನೆ.ಈ ಬೈಕ್ ಎನ್ ಡಿ ಪಿಎಸ್ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿದ್ದ ಬೈಕ್ ಆಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಾಕಿ ಕಳ್ಳನ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಇಂದು ಬೆಂಗಳೂರಿನ ಯಲಹಂಕದ ವಾಯು ನೆಲೆಯಲ್ಲಿ 15ನೇ ಆವೃತ್ತಿಯ ಏರ್ ಶೋ 2025 ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಒಂದು ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದ್ದು ಡಿಕೆ ಶಿವಕುಮಾರ್ ಸೇನಾ ಮುಖ್ಯಸ್ಥರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ. ಹಿರಿಬೆಳೆ ಡಿಸಿಎಂ ಡಿಕೆ ಶಿವಕುಮಾರ್ ಏರ್ ಫೋರ್ಸ್ ನಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದು ತಿಳಿಸಿದರು. 15ನೇ ಆವೃತ್ತಿಯ ಏರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗದಕ್ಕೆ ಸಂತೋಷವಾಗುತ್ತಿದೆ. ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ 2025 ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೆಂಗಳೂರು ಭಾರತದ ಏರ್ ಫೋರ್ಸ್ ನ ರಾಜಧಾನಿ ಇಲ್ಲಿನ ಏರ್ ಫೋರ್ಸ್ ನಲ್ಲಿ ಒಂದು 1.5 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಇದು ಬರೀ ಪ್ರದರ್ಶನವಲ್ಲ ನಮ್ಮ ಭದ್ರತಾ ಸಮರ್ಥ್ಯದ ಪ್ರದರ್ಶನ ಎಂದು ತಿಳಿಸಿದರು. ಏರ್ ಫೋರ್ಸ್ ನಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ. ಹೆಲಿಕ್ಯಾಪ್ಟರ್ ತಯಾರಿಕೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಏರ್ ಕ್ರಾಫ್ಟ್ ಅಧ್ಯಯನಕ್ಕೆ ಸಂಬಂಧಿಸಿದ ಅನೇಕ ಕಾಲೇಜು…

Read More

ರಾಯಚೂರು : ವೈದ್ಯರ ನಿರ್ಲಕ್ಷಕ್ಕೆ ನವಜಾತ ಶಿಶು ಬಲಿಯಾಗಿದ್ದು ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. ರಾಯಚೂರಿನ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಚಂದ್ರಶೇಖರ್ ಮತ್ತು ಪಾರ್ವತಮ್ಮ ಎಂಬ ದಂಪತಿಯ ಮಗು ಸಾವನಪ್ಪಿದೆ. ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಚಂದ್ರಶೇಖರ್ ಮತ್ತು ಪಾರ್ವತಮ್ಮ ದಂಪತಿಯ ಮಗು ಇದೀಗ ವೈದ್ಯರ ನಿರ್ಲಕ್ಷಕ್ಕೆ ಬಲಿಯಾಗಿದೆ.ಕಳೆದ ಹಲವಾರು ದಿನಗಳಿಂದ ಎಷ್ಟೋ ಬಾಣಂತಿಯರು ಸಾವನಪ್ಪಿದ್ದರು ಇದೀಗ ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ. ಗಂಡು ಮಗು ಸಾವನ್ನಪ್ಪಿದ್ದನ್ನು ವೈದ್ಯರು ತಾಯಿಗೆ ತಿಳಿಸಿಲ್ಲ. ಮಗುವಿಗ್ ICU ನಲ್ಲಿ ಚಿಕಿತೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳುತ್ತಲೇ ಬಂದಿದ್ದಾರೆ ಹೊರತು ತಾಯಿ ಪಾರ್ವತಮ್ಮಗೆ ಮಗು ಸಾವನ್ನಪ್ಪಿದ ವಿಚಾರ ತಿಳಿಸಿಲ್ಲ. ಪಾರ್ವತಮ್ಮ ಪತಿ ಚಂದ್ರಶೇಖರ ಮಾತನಾಡಿ, ನಾವು ಸಿಸೆರಿಯನ್ ಮಾಡಿ ಎಂದು ವೈದ್ಯರಿಗೆ ಹೇಳಿದ್ದೇವು. ಆದರೆ ಅವರು ನಿರ್ಲಕ್ಷ ತೋರಿ ನಾರ್ಮಲ್ ಹೆರಿಗೆ ಮಾಡಿದ್ದಾರೆ. ಈ ವೇಳೆ ಸಮಸ್ಯೆ ಆಗಿದೆ. ಮಗು ತಲೆ…

Read More

ಕಲಬುರ್ಗಿ: ನಕಲಿ ಅಂಕಪಟ್ಟಿ ನೀಡಿ ಅರಣ್ಯ ವೀಕ್ಷಕ ಹುದ್ದೆಗೆ ಆಯ್ಕೆಯಾಗಿದ್ದವನ ವಿರುದ್ಧ ಇದೀಗ fir ದಾಖಲಾಗಿದೆ. ಕಲಬುರ್ಗಿ ತಾಲೂಕಿನ ಕಡಣಿ ಗ್ರಾಮದ ನಿವಾಸಿ ಬೀರಪ್ಪ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಬೀರಪ್ಪ ನಕಲಿ ಅಂಕಪಟ್ಟಿ ನೀಡಿ ಅರಣ್ಯ ವೀಕ್ಷಕ ಹುದ್ದೆಗೆ ಆಯ್ಕೆಯಾಗಿದ್ದಾನೆ ಬಳಿಕ ಆತನ ಅಸಲಿ ಮುಖ ಬಯಲಾಗುತ್ತಿದ್ದಂತೆ ಇದೀಗ ಆತನ ವಿರುದ್ಧ ಕಲಬುರ್ಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಕಲಿ ಅಂಕಪಟ್ಟಿ ನೀಡಿ ಅರಣ್ಯ ವೀಕ್ಷಕ ಹುದ್ದೆಗೆ ಬೀರಪ್ಪ ಆಯ್ಕೆಯಾಗಿದ್ದ. 2023 ಡಿಸೆಂಬರ್ 21ರಂದು ಆನ್ಲೈನ್ ಮೂಲಕ ಅರ್ಜಿ ಹಾಕಿದ ಬಿರಪ್ಪ, 2014 ಏಪ್ರಿಲ್ ನಲ್ಲಿ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಸಲ್ಲಿಸಿದ್ದ.ಎಸ್ ಎಸ್ ಎಲ್ ಸಿ ಯಲ್ಲಿ 605 ಅಂಕಗಳಿಸಿ ಉತ್ತೀರ್ಣನಾಗಿದ್ದಾಗಿ ಬೀರಪ್ಪ ಅಂಕಪಟ್ಟಿ ಸಲ್ಲಿಸಿದ್ದಾನೆ. ಶಿಕ್ಷಣ ಇಲಾಖೆಯಿಂದ ದಾಖಲೆಯ ಪರಿಶೀಲನೆ ವೇಳೆ ಈ ಒಂದು ಕೃತ್ಯ ಬಯಲಾಗಿದೆ. ಬೀರಪ್ಪ ಎಸ್ ಎಲ್ ಸಿ ಯಲ್ಲಿ ಪಡೆದಿದ್ದು ಕೇವಲ 316 ಅಂಕಗಳು ಮಾತ್ರ ಅಂಕಪಟ್ಟಿ ತಿದ್ದುಪಡಿ…

Read More

ಧಾರವಾಡ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಅನ್ನು ಪ್ರಶ್ನಿಸಿ, ಹೈಕೋರ್ಟಿಗೆ ಸಿಎಂ ಪತ್ನಿ ಪಾರ್ವತಿ ಅವರು ರಿಟ್ ಅರ್ಜಿ ಸಲ್ಲಿಸಿದ್ದು ಇಂದು ಮಧ್ಯಾಹ್ನ ಈ ಒಂದು ಅರ್ಜಿಯ ವಿಚಾರಣೆ ನಡೆಯಲಿದೆ. ಹೌದು ಇಂದು ಧಾರವಾಡದ ಹೈಕೋರ್ಟ್ ಪೀಠದಲ್ಲಿ ಸಿಎಂ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಯಲಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಅರ್ಜಿಯ ವಿಚಾರಣೆ ಕೂಡ ಇಂದು ನಡೆಯಲಿದೆ. ಮುಡಾ ಸೈಟ್ ಹಂಚಿಕೆ ಸಂಬಂಧ ಜಾರಿ ನಿರ್ದೇಶನಲಯ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ…

Read More