Author: kannadanewsnow05

ಕಲಬುರಗಿ : ಗಂಡ ಹೆಂಡತಿಯ ಮಧ್ಯೆ ಗಲಾಟೆ ಸಂಭವಿಸಿದ ಹಿನ್ನೆಲೆಯಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿದಾಗ ಮನನೊಂದ ಗೃಹಿಣಿ ಓರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರ್ಗಿ ತಾಲೂಕಿನ ಮಾಡಬೂಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿಪ್ಪಾಣಿ ಗ್ರಾಮದ ಸುಜಾತ ತಳವಾರ (28) ಆತ್ಮಹತ್ಯೆ ಮಾಡಿಕೊಂಡಂತಹ ಗೃಹಿಣಿ ಎಂದು ತಿಳಿದುಬಂದಿದೆ. ಸುಜಾತ ಪತಿ ಸಿದ್ದು ಜೊತೆಗೆ ಜಗಳವಡಿದ್ದಾರೆ. ಮೃತ ಮಹಿಳೆಗೆ ಇಬ್ಬರು ಮಕ್ಕಳು ಇದ್ದು, ಲಾರಿ ಚಾಲಕನಾಗಿರುವ ಸಿದ್ದು ಮದ್ಯಪಾನ ಮಾಡಿ ಪತ್ನಿ ಜೊತೆ ಗಲಾಟೆ ಮಾಡಿಕೊಂಡಿರುವ ಪರಿಣಾಮ ಮನೆಯಲ್ಲಿ ನೇಣು ಬಿಗಿದುಕೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಆಕೆಯ ಗಂಡ ಸಿದ್ದು ಕೊಲೆ ಮಾಡಿ ನೇಣು ಹಾಕಿರುವುದಾಗಿ ಸಂಬಂಧಿಕರು ಆರೋಪ ಮಾಡಿದ್ದಾರೆ. ಈ ಒಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುರಿತು ಮಾಡಬೂಳ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Read More

ಚಾಮರಾಜನಗರ : ಇದೇ ಫೆಬ್ರವರಿ 17ರಂದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಇದೀಗ ಕಾರಣಾಂತರಗಳಿಂದ ಈ ಒಂದು ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಹೌದು ಫೆಬ್ರವರಿ 17 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದ್ದ ಸಚಿವ ಸಂಪುಟ ಸಭೆ ಇದೀಗ ಮುಂದೂಡಲಾಗಿದೆ. ಅಲ್ಲದೇ ಫೆಬ್ರವರಿ 16ರಂದು ನಿಗದಿಯಾಗಿದ್ದ ಫಲಾನುಭವಿಗಳ ಸಮಾವೇಶವ ಕೂಡ ಇದೀಗ ಮುಂದೂಡಲಾಗಿದೆ. ಚಾಮರಾಜನಗರದಲ್ಲಿ ನಿಗದಿಯಾಗಿದ್ದ ಫಲಾನುಭವಿಗಳ ಸಮಾವೇಶ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಸಂಪುಟ ಸಭೆ ಸಮಾವೇಶಕ್ಕೆ ಚಾಮರಾಜನಗರ ಜಿಲ್ಲಾ ಆಡಳಿತ ಸಿದ್ಧತೆ ನಡೆಸಿತ್ತು.

Read More

ಬೆಂಗಳೂರು : ಬೆಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಇಬ್ಬರೂ ರೌಡಿಶೀಟರ್ ಗಳನ್ನು ಅರೆಸ್ಟ್ ಮಾಡಲಾಗಿದ್ದು, ಬಂಧಿತರನ್ನು ಯೂಸುಫ್ ಶರೀಫ್ ಹಾಗೂ ಜಾಫರ್ ಸಾಧಿಕ್ ಅಲಿಯಾಸ್ ಚಪ್ಪರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.5 ಲಕ್ಷ ಮೌಲ್ಯದ 1.854 ಗ್ರಾಂ ಗಾಂಜಾ, 1 ಮೊಬೈಲ್ ಮತ್ತು 1 ಬೈಕ್ ಅನ್ನು ಜಪ್ತಿ ಮಾಡಿದ್ದಾರೆ. ಭವಾನಿ ನಗರದಲ್ಲಿ ಗಾಂಜಾ ಮಾರುತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಯೂಸುಫ್ ಶರೀಫ್ ನನ್ನ ಪೊಲೀಸರು ಬಂಧಿಸಿದ್ದಾರೆ. ನಂತರ A1 ಆರೋಪಿ ಯುಸುಫ್ ಮಾಹಿತಿ ಆಧಾರದ ಮೇಲೆ A2 ಆರೋಪಿ ಜಾಫರ್ ಸಾಧಿಕನ್ನು ಅರೆಸ್ಟ್ ಮಾಡಿದ್ದಾರೆ. ಯೂಸುಫ್ ಶರೀಫ್ ವಿರುದ್ಧ ಹೊರ ರಾಜ್ಯಗಳಲ್ಲಿ 3 ಪ್ರಕರಣಗಳು ದಾಖಲಾಗಿದ್ದು, ರೌಡಿ ಶೀಟರ್ ಎಂದು ತಿಳಿದುಬಂದಿದೆ. A2 ಜಾಫರ್ ಸಾಧಿಕ್ ವಿಧಾನಸೌಧ ಠಾಣಾ ವ್ಯಾಪ್ತಿಯ ರೌಡಿಶೀಟರ್ ಎಂದು ತಿಳಿದುಬಂದಿದೆ. ಜಾಫರ್ ಸಾಧಿಕ್ ವಿರುದ್ಧ ಕೂಡ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 9 ಪ್ರಕರಣಗಳಿವೆ ಸದ್ಯ ಇಬ್ಬರನ್ನು…

Read More

ಕೊಡಗು : ಇನ್ನೇನು ಕೆಲವೇ ತಿಂಗಳಲ್ಲಿ ಆಹಾರ ಇಲಾಖೆಯಲ್ಲಿ ಸೇವಿ ಸಲ್ಲಿಸುತ್ತಿದ್ದ ವ್ಯಕ್ತಿ ಒಬ್ಬರು ನಿವೃತ್ತಿಯಾಗುವ ಸಮಯದಲ್ಲಿ ತೀರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಹೌದು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಹೃದಯಾಘಾತದಿಂದ ಆಹಾರ ಇಲಾಖೆಯ ಡಿಡಿ ಸಾವನಪ್ಪಿದ್ದಾರೆ. ಕಚೇರಿಗೆ ತೆರಳುವಾಗ ಶ್ರೀಧರ್ಮೂರ್ತಿ (59) ಎನ್ನುವವರು ಕೊನೆಯುಸಿರೆಳೆದಿದ್ದಾರೆ. ಶ್ರೀಧರ್ ಮೂರ್ತಿ ಕೆಲವೇ ತಿಂಗಳಲ್ಲಿ ನಿವೃತ್ತಿಯಾಗುವವರಿದ್ದರು. ಇದೇ ವೇಳೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.

Read More

ಬೆಂಗಳೂರು : ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕಿಂತ ದೇಶ ದೊಡ್ಡದು. ಪಕ್ಷಕ್ಕಿಂತ ಯಾರು ಮುಖ್ಯರಲ್ಲ ಮುಂದಿನ 20 ವರ್ಷಗಳ ನಾಯಕತ್ವಕ್ಕಾಗಿ ಬಿ ವೈ ವಿಜಯೇಂದ್ರ ಅಧ್ಯಕ್ಷ ಮಾಡಿದ್ದು ಯಡಿಯೂರಪ್ಪ ವಿಜಯೇಂದ್ರರನ್ನು ಟೀಕಿಸಿದಂತೆ ಪಕ್ಷ ಟೀಕಿಸಿದಂತೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಪರೋಕ್ಷವಾಗಿ ಶಾಸಕ ಯತ್ನಾಳ್ ವಿರುದ್ಧ ಕಿಡಿ ಕಾರಿದರು. ಶಾಸಕ ಯತ್ನಾಳ್ ಗೆ ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್ ನೀಡಿರುವ ವಿಚಾರವಾಗಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಹೈಕಮಾಂಡ್ ನೋಟಿಸ್ ಏನು ಅಲ್ಲವೆಂದು ಕೆಲವರು ಮಾತನಾಡಿದ್ದಾರೆ. ರಾಜ್ಯದಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲರ ಹೇಳಿಕೆಯನ್ನು ಗಮನಿಸುತ್ತಾರೆ. ಯಾವ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ನೋಡುತ್ತಾರೆ ಎಂದರು.ನಾಳೆ ನಾವು ಸಭೆ ನಡೆಸಬೇಕು ಎಂದಿದ್ದೆವು. ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರು ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ನಾಳಿನ ಸಭೆಯನ್ನು ರದ್ದು ಮಾಡಿದ್ದೇವೆ. ನಮ್ಮ ಉದ್ದೇಶ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಒಂದಾಗಬೇಕು ಎಂಬುದಾಗಿದೆ. ರಾಜ್ಯಾಧ್ಯಕ್ಷರ ಹೆಗಲಿಗೆ ಹೆಗಲು ಕೊಟ್ಟು ಸಂಘಟನೆಗೆ ಕೈಜೋಡಿಸಬೇಕು ರಾಷ್ಟ್ರೀಯ…

Read More

ಶಿವಮೊಗ್ಗ : ಅಕ್ರಮ ಮರಳು ದಂಧೆ ತಡೆಯಲು ಹೋದ ಗಣಿ ಮತ್ತು ಭೂವಿಜ್ಞಾನದ ಮಹಿಳಾ ಅಧಿಕಾರಿ ವಿರುದ್ಧ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಪುತ್ರ ಅತ್ಯಂತ ಕೆಟ್ಟ ಪದಗಳಿಂದ ಬೈದು ನಿಂದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿ ಜ್ಯೋತಿ ಅವರು ಶಾಸಕ ಪುತ್ರ ಬಸವೇಶ್ ವಿರುದ್ಧ ದೂರು ನೀಡಿದ್ದಾರೆ. ಹೌದು ಶಾಸಕನ ಪುತ್ರನಿಂದ ಮಹಿಳಾ ಅಧಿಕಾರಿಗೆ ನಿಂದನೆ ಆರೋಪದ ಹಿನ್ನೆಲೆಯಲ್ಲಿ ಬಸವೇಶ್ ವಿರುದ್ಧ ಮಹಿಳಾ ಅಧಿಕಾರಿ ಜ್ಯೋತಿ ದೂರು ನೀಡಿದ್ದಾರೆ. ಶಿವಮೊಗ್ಗದ ಎಸ್ಪಿ ಕಚೇರಿಗೆ ಬಂದು ಮಹಿಳಾ ಅಧಿಕಾರಿ ಜ್ಯೋತಿ ದೂರು ನೀಡಿದ್ದಾರೆ. ನಿಂದನೆ ಬಗ್ಗೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಗೆ ದೂರು ಸಲ್ಲಿಸಿದ್ದಾರೆ.ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ಜ್ಯೋತಿ ಅವರು ಅಕ್ರಮ ಮರಳು ದಂಧೆ ತಡೆಯಲು ನಿನ್ನೆ ಕಾರ್ಯಾಚರಣೆ ನಡೆಸಲು ತೆರಳಿದ್ದ ವೇಳೆ ಫೋನ್ ಮಾಡಿ ಬಸವೇಶ್ ನಿಂದನೆ ಮಾಡಿದ್ದ. ಘಟನೆ ಹಿನ್ನೆಲೆ?…

Read More

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿಗೆ ಕ್ಷುಲ್ಲಕ ಕಾರಣಕ್ಕೆ ಕೊಲೆಗಳು ನಡೆಯುತ್ತಿವೆ. ಇಂದು ಕೂಡ ಭಾವ ಮತ್ತು ಬಾಮೈದನ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಈ ವೇಳೆ ಕೋಪಗೊಂಡ ಭಾವ ಬಾಮೈದನಿಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ತಮಿಳುನಾಡಿನ ಸೇಲಂ ಮೂಲದ ವೆಂಕಟೇಶ್ ಎಂದು ತಿಳಿದುಬಂದಿದ್ದು, ಇನ್ನು ಹತ್ಯೆಗೈದ ಭಾವನನ್ನು ರಾಮ ಎಂದು ಗುರುತಿಸಲಾಗಿದೆ.ಮೃತ ವೆಂಕಟೇಶ್ ಹಾಗೂ ಬಾವ ರಾಮ ಎಂಬಾತ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ರೋಲ್ಡ್ ಗೋಲ್ಡ್ ಚೈನ್ ಮಾರಾಟ ಮಾಡುತ್ತಿದ್ದರು. ಆದ್ರೆ ಇತ್ತೀಚೆಗೆ ಇಬ್ಬರ ನಡುವೆ ಚಿಕ್ಕ ಪುಟ್ಟ ಗಲಾಟೆಗಳಾಗುತ್ತಿತ್ತು, ಆದರೆ ಸೋಮವಾರ ಮತ್ತೆ ಬಾವ ಹಾಗೂ ಬಾಮೈದನ ನಡುವೆ ಕಿರಿಕ್ ಉಂಟಾಗಿದ್ದು, ಸಿಟ್ಟಿನಲ್ಲಿ ಆರೋಪಿ ರಾಮ ಕೈಗೆ ಸಿಕ್ಕ ಚಾಕುವಿನಲ್ಲಿ ಬಾಮೈದ ವೆಂಕಟೇಶ್ ಗೆ ಇರಿದು ಪರಾರಿ ಆಗಿದ್ದಾನೆ.ತಕ್ಷಣ ಅಲ್ಲಿಯ ಸಮೀಪ ಇದ್ದ ಆಂಬುಲೆನ್ಸ್ ನಲ್ಲಿ ಬ್ಯಾಂಡೇಜ್ ಹಾಕಿ ಏನು ಆಗಲ್ಲ ಎಂದು ಕಳಿಸಿದ್ದಾರೆ.…

Read More

ಚಿಕ್ಕಬಳ್ಳಾಪುರ : ಕೋವಿಡ್ ವೇಳೆ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಚೈನ್ನೈ ಮೂಲದ ಮೈಕ್ರೋ ಫೈನಾನ್ಸ್ ಗೆ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಗಂಭೀರವಾದ ಆರೋಪ ಮಾಡಿದರು. ಸುಧಾಕರ್ ಅವರು ಚೆನ್ನೈ ಮೂಲದ ಮೈಕ್ರೋ ಫೈನಾನ್ಸ್ ಗೆ ಹಣ ವರ್ಗಾವಣೆ ಮಾಡಿದ್ದಾರೆ. ಸುಧಾಕರ್ ಗೆ ಚಾಲೆಂಜ್ ಮಾಡುತ್ತೇನೆ. ನಾನಾ ನೀನಾ ನೋಡೇ ಬಿಡೋಣ ಡಾ.ಕೆ. ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಹಾಗೂ ಕ್ಷೇತ್ರಕ್ಕೆ ಶಾಪವಿದ್ದಂತೆ ಎಂದು ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಡಾ.ಕೆ ಸುಧಾಕರ್ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸಿದ್ದಾರೆ. ಸಂಸದ ಕೆ.ಸುಧಾಕರ್ ಚಾರಿತ್ರ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಗೊತ್ತಾಗಲಿ. ಸುಧಾಕರ್ ರದ್ದು ಹೀನ ಮನಸು, ಅವರು ಸ್ವಂತ ಶಕ್ತಿಯಿಂದ ಸಂಸದರಾಗಿಲ್ಲ. ಮೋದಿ ವರ್ಚಸ್ಸಿನಿಂದ ಮಾತ್ರ ಕೆ.ಸುಧಾಕರ್ ಸಂಸದರಾಗಿದ್ದಾರೆ. ಸುಧಾಕರ್ ಈಗಲಾದರೂ ತನ್ನ ತಪ್ಪು, ದರ್ಬಾರ್, ದಬ್ಬಾಳಿಕೆ ತಿದ್ದಿಕೊಳ್ಳಲಿ ಎಂದು ಅವರು ಆಕ್ರೋಶ ಹೊರಹಾಕಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷರು ಆಯ್ಕೆ ಪ್ರಕ್ರಿಯೆ ಸಮರ್ಪಕವಾಗಿಯೇ ಆಗಿದೆ.…

Read More

ಬೆಂಗಳೂರು : ಮುಡಾ ಹಗರಣ ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಕಾರ ಹಿನ್ನೆಲೆಯಲ್ಲಿ ಅಂತಿಮ ವರದಿ ಸಲ್ಲಿಸಲು ಇದೀಗ ಲೋಕಾಯುಕ್ತ ಪೊಲೀಸರು ಸಿದ್ಧತೆ ಆರಂಭಿಸಿದ್ದಾರೆ. ಇಂದು ಹೈಕೋರ್ಟ್ ನಲ್ಲಿ ಪ್ರಕರಣದ ಕುರಿತು ವಿಚಾರಣೆ ವೇಳೆ ಹೈಕೋರ್ಟಿಗೆ ಸಲ್ಲಿಸಿದ ತನಿಖಾ ವರದಿ ಮರಳಿಸುವಂತೆ ಲೋಕಾಯುಕ್ತ ಪರ ವಕೀಲ ವೆಂಕಟೇಶ ಅರಬಟ್ಟಿ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದರು. ಹೈಕೋರ್ಟ್ ಗೆ ಸಲ್ಲಿಸಿದ ತನಿಖಾ ವರದಿ ಮರಳಿಸುವಂತೆ ಮನವಿ ಮಾಡಲಾಗಿದ್ದು, ಲೋಕಾಯುಕ್ತ ಪರ ವಕೀಲ ವೆಂಕಟೇಶ್ ಅರಬಟ್ಟಿ ಮನವಿ ಮಾಡಿದ್ದಾರೆ.ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟಿಗೆ ಸಲ್ಲಿಸಲಾಗಿತ್ತು. ಈ ವೇಳೆ ತನಿಖಾ ವರದಿ ಯಾರ ಕೈಗೆ ನೀಡಬೇಕೆಂದು ಈ ವೇಳೆ ಹೈಕೋರ್ಟ್ ಪ್ರಶ್ನಿಸಿದೆ. ಹಾಜರಿರುವ ಲೋಕಾಯುಕ್ತ ಇನ್ಸ್ಪೆಕ್ಟರ್ ಗೆ ಮರಳಿಸುವಂತೆ ವಕೀಲ ವೆಂಕಟೇಶ್ ಅರಬಟ್ಟಿ ಮನವಿ ಮಾಡಿದರು. ಈ ವೇಳೆ ಭೋಜನ ವಿರಾಮದ ವೇಳೆ ಕಚೇರಿಗೆ ಬಂದು ಪಡೆದುಕೊಳ್ಳಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಸೂಚನೆ ನೀಡಿದರು. ಈ ವೇಳೆ ಕ್ಯಾಪ್ ಹಾಕಿ ಬಂದಿದ್ದ ಲೋಕಾಯುಕ್ತ ಇನ್ಸ್ಪೆಕ್ಟರ್ ಗೆ ನ್ಯಾಯಾಧೀಶರು…

Read More

ಬೆಂಗಳೂರು : ಸ್ಯಾಂಡಲ್‌ವುಡ್​ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಕಳೆದ ವರ್ಷ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಪ್ರಕರಣ ವಜಾ ಬಳಿಕ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 2024 ಜೂನ್ 24 ರಂದು ಹೈಕೋರ್ಟ್ ಬಿಡುಗಡೆಗೊಳಿಸಿ ಆದೇಶ ನೀಡಿತ್ತು. ಈ ಒಂದು ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗಿದೆ. ನಟಿ ಸಂಜನಾ ಗಲ್ರಾಣಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು. ಜಾಮೀನಿನ ಮೇಲೆ ನಟಿ ಸಂಜನಾ ಜೈಲಿನಿಂದ ಹೊರಗಡೆ ಬಂದಿದ್ದರು. ಹೀಗಾಗಿ ನಟಿ ವಿರುದ್ಧ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಭೆ ನಡೆಸಿ ಸರ್ಕಾರದ ಮಟ್ಟದಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಾಸಿಕ್ಯೂಷನ್ ಅನುಮತಿ ಬರುತ್ತಿದ್ದಂತೆ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಬೆಂಗಳೂರಿನಲ್ಲಿ…

Read More