Author: kannadanewsnow05

ಗುಣಪಡಿಸಲಾಗದ ಕಾಯಿಲೆಗಳಿಗೆ ಮುರುಗನ್ ಅವರ ಪರಿಹಾರ ನಮ್ಮ ಪೂರ್ವಜರು ರೋಗರಹಿತ ಜೀವನವೇ ಪರಮ ಸಂಪತ್ತು ಎಂದು ಹೇಳುತ್ತಿದ್ದರು. ಆದರೆ ಈ ಕಲಿಯುಗದಲ್ಲಿ ಅದು ತಲೆಕೆಳಗಾಗಿದೆ. ನಾವು ಸಂಪತ್ತಿನ ಹಿಂದೆ ಓಡುತ್ತೇವೆ ಮತ್ತು ರೋಗವನ್ನು ಉಚಿತ ಉಡುಗೊರೆಯಾಗಿ ಪಡೆಯುತ್ತೇವೆ. ರಾತ್ರಿಯಲ್ಲಿ ಕೆಲಸ ಮಾಡುವುದು, ಒತ್ತಡದಲ್ಲಿ ಕೆಲಸ ಮಾಡುವುದು ಮತ್ತು ಹಣ ಸಂಪಾದಿಸುವ ಒತ್ತಡ, ಇವೆಲ್ಲವೂ ನಮಗೆ ಹೆಚ್ಚು ಹೆಚ್ಚು ರೋಗಗಳನ್ನು ತರುತ್ತವೆ. ಸರಿ, ಹೋಗೋಣ. ಕಲಿಯುಗದಲ್ಲಿ ಬೇರೆ ದಾರಿಯಿಲ್ಲ. ಅದನ್ನು ಸಹಿಸಿಕೊಳ್ಳಲೇಬೇಕು. ಬಂದಿರುವ ರೋಗವನ್ನು ಹೋಗಲಾಡಿಸಲು ಏನಾದರೂ ಮಾರ್ಗವಿದೆಯೇ? ಪರಿಹಾರವಿದೆಯೇ, ಕೇಳುವವರಿಗೆ ಈ ಪೋಸ್ಟ್. ಮುರುಘಾ ದೇವರೇ, ನಿನ್ನನ್ನು ಪ್ರಾರ್ಥಿಸುತ್ತೇನೆ. “ನನ್ನ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ವೈದ್ಯಕೀಯ ವೆಚ್ಚವನ್ನು ಕಡಿಮೆ ಮಾಡಲು ನನಗೆ ಉತ್ತಮ ಮಾರ್ಗವನ್ನು ತೋರಿಸು” ಎಂದು ಹೇಳುತ್ತಾ ಈ ಪೋಸ್ಟ್ ಮೂಲಕ ಪ್ರಯಾಣಿಸೋಣ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ…

Read More

ಹಾಸನ : ಹಾಸನ ಜಿಲ್ಲೆಯಲ್ಲಿ ಹೃದಯಘಾತ ಮರಣ ಮೃದಂಗ ಮುಂದುವರೆದಿದ್ದು ಇಂದು, ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಮೆಣಸಮಕ್ಕಿ ಗ್ರಾಮದ ರೈತ ಲಕ್ಷ್ಮಣ (52) ಎನ್ನುವವರು ಸಾವನಪ್ಪಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೆಣಸಮಕ್ಕಿ ಗ್ರಾಮದ ನಿವಾಸಿಯಾಗಿರುವ ರೈತ ಲಕ್ಷ್ಮಣ ಅವರು ನಿನ್ನೆ ಜಮೀನಿನಲ್ಲಿ ಕೆಲಸ ಮಾಡಿ ಮನೆಗೆ ಬಂದಿದ್ದಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಲಕ್ಷ್ಮಣ ಕುಟುಂಬಸ್ಥರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆಂಬುಲೆನ್ಸ್ ಬರುವಷ್ಟರಲ್ಲಿ ರೈತ ಲಕ್ಷ್ಮಣ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಕಳೆದ 46 ದಿನಗಳಲ್ಲಿ 38 ಮಂದಿ ಹೃದಯಾಘಾತದಿಂದ ಹಾಸನ ಜಿಲ್ಲೆ ಒಂದರಲ್ಲೇ ಸಾವನ್ನಪ್ಪಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದಿಂದ ಸಾವಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಟೆಕ್ನಿಕಲ್ ಕಮಿಟಿ ವರದಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಇಂದು ಮದ್ಯಾಹ್ನ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಹೃದಯಾಘಾತ ತಡೆಗೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಇದೀಗ ಮುಂದಾಗಿದೆ.ಇಂದು ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸುವ ಸಾಧ್ಯತೆ ಇದೆ. ಧೂಮಪಾನ, ಮಧ್ಯಪಾನ ಹಾಗೂ ಅತಿಯಾದ ಮೊಬೈಲ್ ಬಳಕೆ ಅನೇಕ ವಿಚಾರಗಳ ಬಗ್ಗೆ ನಿಯಮ ಜಾರಿಗೆ ತರುವ ಕುರಿತು ಚಿಂತನೆ ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಭೆ ನಡೆಯಲಿದೆ. 15 ವರ್ಷದೊಳಗಿನ ಶಾಲಾ ಮಕ್ಕಳಿಗೆ ಸ್ಕ್ರೀನಿಂಗ್ ಕಡಿಮೆ ಮಾಡುವುದು, ಎಲ್ಲಾ ಶಾಲಾ ಮಕ್ಕಳ ಹೃದಯ ತಪಾಸಣೆ ಮಾಡುವುದು, ಪಠ್ಯಕ್ರಮದಲ್ಲಿ ಹೃದಯ ಆರೋಗ್ಯ ಕುರಿತು ಬೋಧನೆ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಬ್ಯಾನ್ ಮಾಡುವ ಬಗ್ಗೆ ಗಮನಹರಿಸಲಾಗುತ್ತದೆ. 18 ವರ್ಷದೊಳಗಿನ ಮಕ್ಕಳಿಗೆ ಧೂಮಪಾನ ಮತ್ತು ಮಧ್ಯಪಾನ ಮಾರಾಟಕ್ಕೆ ಕಡಿವಾಣ…

Read More

ಬೆಂಗಳೂರು : ರಾಜ್ಯದಲ್ಲಿ ಮಳೆ ಹೆಚ್ಚಾಗಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಾನ್ಸೂನ್ ಚುರುಕಾಗಿದೆ. ಈಗಾಗಲೇ ಮಲೆನಾಡು ಹಾಗೂ ಕರಾವಳಿ ಭಾಗದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಹಲವು ಅವಾಂತರಗಳು ಸಹ ಸೃಷ್ಟಿಯಾಗಿವೆ. ಇದೀಗ ಕರಾವಳಿ ಭಾಗದ 11 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕರಾವಳಿಯ ಹಲವೆಡೆ ಮನೆಗಳಿಗೆ ಹಾನಿಯಾಗಿದೆ, ವಿದ್ಯುತ್ ಕಂಬಗಳು ಬಿದ್ದಿವೆ. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಮನೆಗಳು ಕುಸಿದಿವೆ ಮತ್ತು ಬೆಳೆಗಳು ನಾಶವಾಗಿವೆ. ಜುಲೈ 7 ರಿಂದ ಕರಾವಳಿಗೆ ಮತ್ತೆ ಯೆಲ್ಲೋ ಅಲರ್ಟ್ ನೀಡಲಾಗಿದೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಇಂದು ಭಾರೀ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೂ ಇಂದು ಮಾತ್ರ ಯೆಲ್ಲೋ ಅಲರ್ಟ್ ಕೊಡಲಾಗಿದೆ. ನಾಳೆಯಿಂದ ಮಳೆ ಕಡಿಮೆ ಆಗಲಿದೆ.…

Read More

ಬೆಂಗಳೂರು : ಆನ್ಲೈನ್ ಬೆಟ್ಟಿಂಗ್ಗೆ ಬ್ರೇಕ್ ಹಾಕಲು ಇದೀಗ ರಾಜ್ಯ ಸರ್ಕಾರ ಹೊಸ ಕಾನೂನು ಸಿದ್ದಪಡಿಸಿಕೊಂಡಿದೆ. ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಒಂದು ಮಸೂದೆಯನ್ನು ಮಂಡನೆ ಮಾಡಲಿದೆ. ಕರ್ನಾಟಕ ಪೊಲೀಸ್ ತಿದ್ದುಪಡಿ-1965 ವಿಧೇಯಕ ಅಂಗಿಕಾರಕ್ಕೆ ಸರ್ಕಾರ ನಿರ್ಧರಿಸಿದ್ದು, ಹೊಸ ಕಾಯ್ದೆಯ ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ರಾಧಿಕಾರ ರಚನೆ ಮಾಡಲಿದೆ. ಅಲ್ಲದೇ ಅದೃಷ್ಟದ ಆಟ (ಲಕ್ ಗೇಮ್) ಗಳಿಗೂ ಕೂಡ ಬ್ರೇಕ್ ಬೀಳಲಿದೆ. ಪ್ರಾಧಿಕಾರದಿಂದ ದೃಢೀಕರಿಸಿದ ಕೇವಲ ಕೌಶಲ್ಯ ಆಟಗಳಿಗೆ ಮಾತ್ರ ಅನುಮತಿ ನೀಡಲಾಗಿರುತ್ತದೆ. ಆನ್ಲೈನ್ ಬೆಟ್ಟಿಂಗ್ ನಲ್ಲಿ ಭಾಗಿಯಾದವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ಬೀಳುತ್ತದೆ. ಅಲ್ಲದೇ ಬೆಟ್ಟಿಂಗ್ ಪ್ರೋತ್ಸಾಹಿಸುವವರಿಗೆ ಆರು ತಿಂಗಳ ಶಿಕ್ಷೆ ಹಾಗೂ 10,000 ದಂಡ ಬೀಳಲಿದೆ ಎಂದು ಹೇಳಲಾಗಿದೆ. ಹೌದು ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ಧಪಡಿಸಿರುವ ರಾಜ್ಯ ಸರ್ಕಾರ…

Read More

ಬೆಂಗಳೂರು : ಸಾರ್ವಜನಿಕರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ A & A ಚಿಟ್ ಫಂಡ್ ಫೈನಾನ್ಸ್ ಸಂಸ್ಥೆಯ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಕೇರಳ ಮೂಲದ ಎವಿ ಟೋಮಿ, ಶನಿ ಟೋಮಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. 2005 ರಿಂದ ಚಿಟ್ ಫಂಡ್ ಮತ್ತು ಫೈನಾನ್ಸ್ ಕಂಪನಿ ನಡೆಸುತ್ತಿದ್ದರು. ಸಾರ್ವಜನಿಕರಿಂದ ಅಡ್ಡ ಚೀಟಿ ರೂಪದಲ್ಲಿ ಹಣ ಪಡೆದಿದ್ದರು. ಆದರೆ ಇದ್ದಕ್ಕಿದ್ದಂತೆ ಆರೋಪಿಗಳು ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಹೀಗಾಗಿ ವಂಚನೆ ಮಾಡಿದ್ದಾರೆ ಎಂದು ಹಣ ಹೂಡಿಕೆ ಮಾಡಿದವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಇದೀಗ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Read More

ಬೆಂಗಳೂರು : ಕಳೆದ ವರ್ಷ ಚಿತ್ರದುರ್ಗದ ರೇಣುಕಾ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದರು. ರೇಣುಕಾಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ ಹದಿನೇಳು ಆರೋಪಿಗಳು ಜೈಲು ಶಿಕ್ಷೆ ಅನುಭವಿಸಿದ್ದರು. ಇದೀಗ ಬೆಂಗಳೂರಿನಲ್ಲಿ ರೇಣುಕಾಸ್ವಾಮಿ ರೀತಿಯೇ ಅಮಾನುಷ ಕೃತ್ಯ ನಡೆದಿದ್ದು ಹುಡುಗಿಯ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಹೌದು ದರ್ಶನ್ ಗ್ಯಾಂಗ್ ರೀತಿ ಮತ್ತೊಂದು ಗ್ಯಾಂಗ್ ಈ ಕೃತ್ಯ ಎಸಗಿದ್ದು, ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ ರೇಣುಕಾ ಸ್ವಾಮಿ ರೀತಿ ಮತ್ತೊಂದು ಅಮಾನುಷ ಕೃತ್ಯ ನಡೆದಿದ್ದು ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ರಾಕ್ಷಸರಂತೆ ವರ್ತಿಸಿದ ಇವರಿಗೆ ದರ್ಶನ್ ಸ್ಪೂರ್ತಿ ಎಂದು ಹೇಳಲಾಗುತ್ತಿದೆ. ನೀನು ರೇಣುಕಾ…

Read More

ಮೈಸೂರು : ಮೈಸೂರು ಜಿಲ್ಲೆಯಲ್ಲಿ ಆಸ್ತಿಗಾಗಿ ಸಂಬಂಧಿಕರ ನಡುವೆ ಹೊಡೆದಾಟ ನಡೆದಿದೆ. ಲಾಂಗು ಮಚ್ಚುಗಳಿಂದ ನಡು ರಸ್ತೆಯಲ್ಲಿಯೇ ಹಲ್ಲೆಗೆ ಯತ್ನ ನಡೆಸಿದ್ದಾರೆ. ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಯೋಗಮಣಿ ಎಂಬ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. 2.5ಎಕರೆ ಜಮೀನು ಯೋಗಮಣಿ ಪತಿ ರಾಜೇಶ್ ಅವರ ಹೆಸರಿನಲ್ಲಿ ಇತ್ತು. 11 ದಿನಗಳ ಹಿಂದೆ ಅನಾರೋಗ್ಯದಿಂದ ರಾಜೇಶ್ ಮೃತಪಟ್ಟಿದ್ದಾರೆ. ಜಮೀನು ತಮಗೆ ಸೇರಬೇಕು ಎಂದು ರಾಜೇಶ್ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಮಹದೇವಮ್ಮ, ಸೋಮ ಎಂಬುವವರಿಂದ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಯೋಗಮಣಿ ಕೈಮುರಿತವಾಗಿದ್ದು, ಪುತ್ರನ ಸಂಬಂಧಿಗೆ ಗಾಯಗಳಾಗಿವೆ. ಎರಡೂವರೆ ಎಕರೆ ಜಮೀನು ಯೋಗಮಣಿ ಪತಿ ರಾಜೇಶ್ ಹೆಸರಿನಲ್ಲಿತ್ತು. ರಾಜೇಶ್ ಸಂಬಂಧಿಕರಾದಂತಹ ಮಹಾದೇವಮ್ಮ, ಸೋಮ ಹಾಗೂ ಸೌಮ್ಯ ಎಂಬವರಿಂದ ಗಲಾಟೆ ಆಗಿದೆ. ಇನ್ನು ಜಮೀನು ತಮಗೆ ಸೇರಬೇಕು ಎಂದು ಇತ್ತ ಮೃತ ರಾಜೇಶ್ ಅಜ್ಜಿ ಲಿಂಗಮ್ಮ ಯೋಗಮಣಿ ಹಾಗೂ ಮಗ ಚಂದು, ಮಗಳು…

Read More

ಮೈಸೂರು : ಮೈಸೂರಿನಲ್ಲಿ ನಿನ್ನೆ ಘೋರ ಘಟನೆಯೊಂದು ನಡೆದಿದ್ದು ಭಾರಿ ಮಳೆ ಸುರಿದ ಪರಿಣಾಮ ಮನೆಯ ಮೇಲ್ಚಾವಣಿ ಒಂದು ಕುಸಿದು ಬಿದ್ದಿದೆ ಆದಷ್ಟು ಮನೆಯಲ್ಲಿದ್ದ ಮೂವರನ್ನು ಸ್ಥಳೀಯರು ಬಚಾವ್ ಮಾಡಿರುವ ಘಟನೆ ನಡೆದಿದೆ. ಹೌದು ಹೆಬ್ಬಲಗುಪ್ಪೆ ಎಂಬ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿತವಾಗಿದೆ. ಮೈಸೂರು ಜಿಲ್ಲೆಯ ಹೆಚ್‍ಡಿ ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದ ನಿವಾಸಿಯಾದ ಗೋವಿಂದ ಶೆಟ್ಟಿ ಎನ್ನುವವರ ಮನೆಯ ಮೇಲ್ಚಾವಣಿ ಕುಸಿದಿದೆ. ಮನೆ ಒಳಗೆ ಸಿಲುಕಿದ್ದ ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ರಾಧಾ, ರೋಹಿತ್ ಮತ್ತು ಸುವರ್ಣಮ್ಮ ಎನ್ನುವವರನ್ನು ಸ್ಥಳೀಯರು ಕೂಡಲೇ ರಕ್ಷಣೆ ಮಾಡಿದ್ದಾರೆ. ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Read More

ಚಿಕ್ಕಮಗಳೂರು : ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಚಿಕ್ಕಮಂಗಳೂರು ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಚಿಕ್ಕಮಂಗಳೂರು ಜಿಲ್ಲಾ ಆಡಳಿತ ಶರಣ್ ಪಂಪ್ವೆಲ್ ಗೆ ನಿರ್ಬಂಧ ವಿಧಿಸಿದೆ. ಚಿಕ್ಕಮಗಳೂರು ಜಿಲ್ಲೆಗೆ 30 ದಿನಗಳ ಕಾಲ ಪ್ರವೇಶ ಮಾಡದಂತೆ ಸೂಚನೆ ನೀಡಿದೆ. ಕೋಮು ದ್ವೇಷ ಭಾಷಣ ಮಾಡಿ ಕಾನೂನು ವ್ಯವಸ್ಥೆಗೆ ದಕ್ಕೆ ಹಿನ್ನೆಲೆಯಲ್ಲಿ ಆಗಸ್ಟ್ 4ರವರೆಗೆ ಶರಣ ಪಂಪ್ ವೆಲ್ ಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಚಿಕ್ಕಮಂಗಳೂರು ಜಿಲ್ಲಾಡಳಿತ ಕ್ರಮಕ್ಕೆ ಹಿಂದೂ ಸಂಘಟನೆ, MLC ಸಿಟಿ ರವಿ ಮತ್ತು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ, ಬೆಳಿಗ್ಗೆ 11:30 ಕ್ಕೆ ಡಿಸಿ ಮೀನಾ ನಾಗರಾಜ ಅವರನ್ನು ಹಿಂದೂ ಮುಖಂಡರು ಭೇಟಿಯಾಗಲಿದ್ದಾರೆ. ಇಂದು ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ವಿ ಎಚ್ ಪಿ ಸಂಘಟನೆ ಕುರಿತ ಬೈಠಕ್ ನಡೆಯಬೇಕಿತ್ತು. ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆ ಆಲ್ದೂರು ಹಾಗೂ ಚಿಕ್ಕಮಗಳೂರಿನಲ್ಲಿ ಬೈಟೆಕ್ ನಡೆಯಬೇಕಿತ್ತು, ಆದರೆ ಜಿಲ್ಲಾಡಳಿತ 30 ದಿನಗಳ ಕಾಲ ಶರಣ್ ಪಂಪ್ ವೆಲ್…

Read More