Author: kannadanewsnow05

ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು, ವಿದ್ಯುತ್ ಅಂತಿ ದುರಸ್ತಿ ಮಾಡುವ ವೇಳೆ ಶಾಕ್ ಹೊಡೆದು ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಎಂಬ ಗ್ರಾಮದಲ್ಲಿ ನಡೆದಿದೆ. ಹೆಸ್ಕಾಂ ಸಿಬ್ಬಂದಿ ಮಾರುತಿ ಹವಲಿ (25) ಸಾವನ್ನಪ್ಪಿದ್ದಾರೆ. ವಿದ್ಯುತ್ ಕಂಬ ಹತ್ತಿ ವಿದ್ಯುತ್ ದುರಸ್ತಿ ಮಾಡುತ್ತಿದ್ದಾಗ ಈ ಒಂದು ಅವಘಡ ಸಂಭವಿಸಿದೆ. ವಿದ್ಯುತ್ ಕಂಬದಲ್ಲಿ ಹೆಸ್ಕಾಂ ಸಿಬ್ಬಂದಿ ಮೃತದೇಹ ನೇತಾಡುತ್ತಿದೆ. ಕಳೆದ 3 ಗಂಟೆಯಿಂದ ಮೃತದೇಹ ನೇತಾಡುತ್ತಿದ್ದರು ಶವ ಕೆಳಗೆ ಇಳಿಸಲು ಅಧಿಕಾರಿಗಳು ಇನ್ನೂ ಸಹ ಸ್ಥಳಕ್ಕೆ ಬಂದಿಲ್ಲ. ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಸೌದತ್ತಿ ಪೊಲೀಸ್ ಠಾಣೆಯಲ್ಲಿ ಈ ಒಂದು ಪ್ರಕರಣ ದಾಖಲಾಗಿದೆ.

Read More

ಉಡುಪಿ : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗುತ್ತಾರೆ. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಬದಲಾವಣೆ ಗಾಳಿ ರಾಜ್ಯದಲ್ಲಿ ಬೀಸಲಿದೆ ಎಂದು ಕಾಂಗ್ರೆಸ್ಸಿನ ಕೆಲವು ನಾಯಕರೇ ಹೇಳಿಕೆ ನೀಡಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ನಾನೇ 5 ವರ್ಷಗಳ ಕಾಲ ಸಿಎಂ ಆಗಿರ್ತೀನಿ ಎಂದು ಸಹ ಹೇಳಿದರು. ಇದೀಗ ಜಿ ಪರಮೇಶ್ವರ್ ಅವರು ನಾವು ಯಾವುದೇ ಬದಲಾವಣೆ ಬಯಸುವುದಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮನ್ನು ದೇವಾಲಯದಲ್ಲಿ ಮಾತನಾಡಿದ ಅವರು ನನಗೆ ಯಾವ ಬೇಸರವು ಇಲ್ಲ. ಮೂರನೇ ಬಾರಿಗೆ ನನಗೆ ಗೃಹ ಇಲಾಖೆ ಖಾತೆ ಕೊಟ್ಟಿದ್ದಾರೆ ಜವಾಬ್ದಾರಿಯಿಂದ ನಾನು ಇಲಾಖೆಯ ಕೆಲಸ ಮಾಡುತ್ತಿದ್ದೇನೆ. ಬೇಸರವಾಗುವ ಪ್ರಶ್ನೆಯೇ ಇಲ್ಲ ಎಂದು ಜಿ ಪರಮೇಶ್ವರ್ ತಿಳಿಸಿದರು. ನಾನೇ 5 ವರ್ಷ ಸಿಎಂ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದಾಗ ಸಿಎಂ ವಿಚಾರವಾಗಿ ಪದೇ ಪದೇ ಚರ್ಚೆ ಮಾಡುವುದು ಅನಗತ್ಯ ಎಂದು ತಿಳಿಸಿದರು.

Read More

ಕಲಬುರ್ಗಿ : ಕಳೆದ ಕೆಲವು ದಿನಗಳ ಹಿಂದೆ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಇರುವಂತಹ ಜನೌಷಧ ಕೇಂದ್ರ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದೀಗ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡಿದ್ದು, 16 ಅರ್ಜಿದಾರರಿಗೆ ಸಂಬಂಧಿಸಿದಂತೆ ಹೈಕೋರ್ಟ್ ಇದೀಗ ಮಧ್ಯಂತರ ಆದೇಶ ತಡೆ ನೀಡಿದೆ. ಹೌದು, ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸಿದ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. 16 ಅರ್ಜಿದಾರರಿಗೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ದಡಿ ನೀಡಿ ಆದೇಶ ಹೊರಡಿಸಿದೆ. ಸರಕಾರಿ ಆಸ್ಪತ್ರೆಯ ಆವರಣದಲ್ಲಿನ ಜನ ಔಷಧ ಕೇಂದ್ರ ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಆದೇಶ ಪ್ರಶ್ನಿಸಿ ಕಲ್ಬುರ್ಗಿ ಹೈಕೋರ್ಟ್ ಬೀಟಕ್ಕೆ 16 ಅರ್ಜಿಗಳು ಸಲ್ಲಿಕೆಯಾಗಿದ್ದವು. ಜನೌಷಧ ಕೇಂದ್ರ ತೆರೆಯಲು ಮೂಲಸೌಕರ್ಯ ಕಲ್ಪಿಸಲು ವೆಚ್ಚವಾಗಿದೆ. ಜನರಿಗೆ ಶೇಕಡ 50 ರಿಂದ 96 ರಿಯಾಯಿತಿ ದರದಲ್ಲಿ ಔಷಧ ನೀಡಲಾಗುತ್ತಿದೆ. ಸರ್ಕಾರದ ಆದೇಶದಿಂದ ನಮ್ಮ ಮೂಲಭೂತ ಹಕ್ಕಿಗೆ ಧಕ್ಕೆ ಆಗಿದೆ ಎಂದು ಅರ್ಹೀದಾರರ ಪರ ವಾದಿಸಲಾಯಿತು.…

Read More

ಚಿಕ್ಕಮಗಳೂರು : ರಾಜ್ಯದಲ್ಲಿ ಮತ್ತೆ ಪ್ಲಾಸ್ಟಿಕ್ ಅಕ್ಕಿ ಜನರ ಹೊಟ್ಟೆ ಸೇರುತ್ತಿದೆ. ಚಿಕ್ಕಮಗಳೂರಿನ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಮಾರಾಟ ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ ಪಡಿತರ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಿಸಿರುವುದು ಬೆಳಕಿಗೆ ಬಂದಿದೆ. ಹೌದು ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಾದ್ಯಂತ ನ್ಯಾಯ ಬೆಲೆ ಅಂಗಡಿಗಳಲ್ಲಿ ನೀಡಿದ ಅಕ್ಕಿ ನೀರಿಗೆ ಹಾಕಿದರೆ ಪ್ಲಾಸ್ಟಿಕ್ ನಂತೆ ತೇಲುತ್ತಿವೆ. ತರೀಕೆರೆ ತಾಲೂಕಿನ ನೆರಲಕೆರೆ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ವಿತರಿಸಲಾಗಿತ್ತು. 50 ಕೆಜಿ ಅಕ್ಕಿಯಲ್ಲಿ ಅರ್ಧದಷ್ಟು ಪ್ಲಾಸ್ಟಿಕ್ ಮಾದರಿ ಅಕ್ಕಿ ಕಂಡು ಬಂದಿದೆ. ನ್ಯಾಯಬೆಲೆ ಅಂಗಡಿ ವಿರುದ್ಧ ಇದೀಗ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ತರೀಕೆರೆ ತಾಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಧದಷ್ಟು ಪ್ಲಾಸ್ಟಿಕ್ ವಿತರಿಸಲಾಗಿದೆ. ಪ್ಲಾಸ್ಟಿಕ್ ಮಾದರಿಯ ಅಕ್ಕಿ ನೋಡಿ ಫಲಾನುಭವಿಗಳು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ನೀರಿಗೆ ಹಾಕಿದ ತಕ್ಷಣ ಅಕ್ಕಿ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಈ ಕುರಿತು ತರೀಕೆರೆ ತಹಶೀಲ್ದಾರ್ ಗೆ ದೂರು ಸಹ ನೀಡಲಾಗಿದ್ದು, ಪ್ಲಾಸ್ಟಿಕ್…

Read More

ಮೈಸೂರು : ಐಷಾರಾಮಿ ಶೋಕಿಗಾಗಿ ದೊಡ್ಡ ದೊಡ್ಡ ವ್ಯಕ್ತಿಗಳು ಅನಿಸಿಕೊಂಡವರು ಅಮಾಯಕರ ಜೀವನದಲ್ಲಿ ಆಟ ಆಡುತ್ತಾರೆ. ಇದೀಗ ಮೈಸೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದಂತಹ ಹಯಾಬುಸಾ ಬೈಕ್ ಝೋಮ್ಯಾಟೋ ಡೆಲಿವರಿ ಬಾಯ್ ಬೈಕ್ ಗೆ ಗುದ್ದಿದ ಪರಿಣಾಮ ಡೆಲಿವರಿ ಬಾಯ್ ಹಾಗು ಹಯಾಬೂಸಾ ಬೈಕ್ ಸವಾರ ಇಬ್ಬರು ಸ್ಥಳದಲ್ಲಿ ಉಸಿರು ಚೆಲ್ಲಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹೌದು ಮೈಸೂರಿನ ಬನ್ನಿಮಂಟಪದ ಬಳಿ ಜುಲೈ 6 ರಂದು ಮಧ್ಯರಾತ್ರಿ ಒಂದು ಘಟನೆ ನಡೆದಿದ್ದು, ದುಬಾರಿ ಬೆಲೆಯ ಹಯಾಬುಸ ಬೈಕ್ ಭೀಕರ ಅಪಘಾತ ಸಂಭವಿಸಿದ್ದು, ಝೋಮ್ಯಾಟೋ ಸವಾರನಿಗೆ ಹಯಾಬುಸ ಬೈಕ್ ಅಪ್ಪಳಿಸಿದ ಪರಿಣಾಮ ಝಮಾಟೋ ಬಾಯ್ ಕಾರ್ತಿಕ್ ಸ್ಥಳದಲ್ಲಿ ಸಾವನ್ನಪ್ಪಿದ್ದು, ಇನ್ನೂ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಮೈಸೂರಿನಲ್ಲಿ ರಾಕೆಟ್ ವೇಗದಲ್ಲಿ ಬಂದು ಝೋಮ್ಯಾಟೋ ಬೈಕ್ ಗೆ ಹಯಾಬುಸ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಡೆಲಿವರಿ ಬಾಯ್ ಕಾರ್ತಿಕ್ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಸುಮಾರು 100 ಮೀಟರ್…

Read More

ಬಿಹಾರ್ : ಬಿಹಾರ ವಿಧಾನಸಭಾ ಚುನಾವಣೆಗೂ ಮೊದಲು, ಎನ್‌ಡಿಎ ಸರ್ಕಾರವು ಮಹಿಳೆಯರನ್ನು ಓಲೈಸಲು ಪ್ರಯತ್ನಿಸಿದೆ. ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅವರ ಮೀಸಲಾತಿಯನ್ನು ಹೆಚ್ಚಿಸಿದೆ. ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದ್ದು, ಸರ್ಕಾರಿ ನೌಕರಿಯಲ್ಲಿ ಮಹಿಳೆಯರಿಗೆ ಶೇಕಡ 35 ರಷ್ಟು ಮೀಸಲಾತಿ ಘೋಷಣೆ ಮಾಡಿದ್ದಾರೆ. ಹೌದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರಿಗೆ ಶೇಕಡ 35ರಷ್ಟು ಮೀಸಲಾತಿ ಘೋಷಣೆ ಮಾಡಿದ್ದಾರೆ. ಬಿಹಾರ ಚುನಾವಣೆಗೂ ಮುನ್ನ ಇದು ನಿತೀಶ್ ಸರ್ಕಾರದ ದೊಡ್ಡ ನಿರ್ಧಾರವಾಗಿದ್ದು, ಈಗ ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡಾ 35 ರಷ್ಟು ಮೀಸಲಾತಿ ಸಿಗಲಿದೆ.

Read More

ಬೆಂಗಳೂರು : ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡು ಆರೋಪಿಯೊಬ್ಬ ಕಳ್ಳತನಕ್ಕೆ ಇಳಿದಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಾಫ್ಟ್ವೇರ್ ಇಂಜಿನಿಯರ್ ಕೆ.ಎ ಮೂರ್ತಿ ಎಂಬ ಆರೋಪಿಯನ್ನು ಬೆಂಗಳೂರಿನ ಮಾಗಡಿ ರೋಡ್ ಠಾಣೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಬೆಟ್ಟಿಂಗ್ ಚಿಟಕ್ಕೆ ಅಂಟಿಕೊಂಡು ಇಂಜಿನಿಯರ್ ಆಗಿದ್ದ ಕೆ.ಎ ಮೂರ್ತಿ ಅಪಾರ ದುಡ್ಡು ಕಳೆದುಕೊಂಡಿದ್ದ. ಬೆಟ್ಟಿಂಗ್ ಆಡಲು ತಂದೆಯ ಹೆಸರಿನಲ್ಲಿದ್ದ ಆಸ್ತಿಯನ್ನು ಕೂಡ ಮಾರಾಟ ಮಾಡಿದ್ದ. ದುಡಿದು ತಿನ್ನೋಣ ಅಂತ ಕುಟುಂಬಸ್ಥರು ಬೆಂಗಳೂರಿಗೆ ಬಂದಿದ್ದಾರೆ. ವಿಪರೀತ ಬೆಟ್ಟಿಂಗ್ ಚಟ ಮೈಗಂಟಿಸಿಕೊಂಡಿದ್ದ ಮೂರ್ತಿ ಸಾಲಗಾರನಾಗಿದ್ದ. ಇನ್ನು ಪುತ್ರನ ಸಾಲ ತೀರಿಸಲು ತಂದೆ ಅಣ್ಣಪ್ಪ ಆಸ್ತಿ ಮಾರಾಟ ಮಾಡಿದ್ದಾರೆ. ಸಾಫ್ಟ್ವೇರ್‌ ಇಂಜಿನಿಯರ್ ಆಗಿ ಆರೋಪಿ ಮೂರ್ತಿ ಕೆಲಸ ಮಾಡುತ್ತಿದ್ದ. ಬೆಟ್ಟಿಂಗ್ ಆಡಲು ಮನೆಗಳ್ಳತನ ಮಾಡುತ್ತಿದ್ದ. ಅಂಗಳ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯ ಸರ ಕಿತ್ತಿದ್ದ. ಆರೋಪಿ ಬಂಧಿಸಿ ಕರೆತಂದಾಗ ಹಲವು ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಕೋಣನಕುಂಟೆ, ಸದ್ದುಗುಂಟೆಪಾಳ್ಯ ಹಾಗು ಅವಲಹಳ್ಳಿ ವ್ಯಕ್ತಿಯಲ್ಲಿ ಕಳ್ಳತನ ಎಸಗಿದ್ದ ಬಂಧಿತನಿಂದ ಒಟ್ಟು 17 ಲಕ್ಷ…

Read More

ಶಿವಮೊಗ್ಗ : ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತು, ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರೇ ಮುಂದುವರೆಯುತ್ತಾರೆ. ಇದರಲ್ಲಿ ಯಾವುದೇ ರೀತಿಯ ಅನುಮಾನವೇ ಇಲ್ಲ ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿಕೆ ನೀಡಿದರು. ಇಂದು ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿ ವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ್ದು ಹೈಕಮಾಂಡ್ ಹಲವು ಹೋರಾಟ ಯಶಸ್ವಿಯಾಗಿ ರೂಪಿಸಿಕೊಂಡು ಬರುತ್ತಿದ್ದಾರೆ ವಿಜಯೇಂದ್ರ ಮಾಸ್ ಲೀಡರ್ ಅವರೊಬ್ಬ ಸಮರ್ಥ ನಾಯಕ ಕಿರಿಯವಯಸ್ಸಿನಲ್ಲಿ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ ವಿಜೇಂದ್ರ ಅವರೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ ತಿಳಿಸಿದರು. ಇನ್ನು ರಾಜ್ಯಕ್ಕೆ ರಣದೀಪ ಸಿಂಗ್ ಸುರ್ಜೆವಾಲಾ ಆಗಮಿಸಿರುವ ಕುರಿತು, ಪದೇ ಪದೇ ರಾಜ್ಯಕ್ಕೆ ಬಂದು ಸಭೆ ನಡೆಸುತ್ತಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ, ಈ ಕಾಂಗ್ರೆಸ್ ಸರ್ಕಾರ ಪತನ ಅಷ್ಟೇ ಸತ್ಯ. ಪ್ರಜಾತಂತ್ರ ವ್ಯವಸ್ಥೆಯಲ್ಲಿ 5 ವರ್ಷ ಸರ್ಕಾರ…

Read More

ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ನಾಯಕಿಯರನ್ನು ನೇಮಕಮಾಡುವ ಕುರಿತು ಕೇಂದ್ರ ಬಿಜೆಪಿ ನಾಯಕರು ಚಿಂತನೆ ನಡೆಸುತ್ತಿದ್ದು, ಈ ವಿಚಾರವಾಗಿ ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಅವರು ಬಿಜೆಪಿ ಕುರಿತು ವ್ಯಂಗ್ಯವಾಡಿದ್ದು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅರ್ಧನಾರೀಶ್ವರ ರನ್ನು ಹುಡುಕಿಕೊಳ್ಳಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟೀಯ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರನ್ನು ಹುಡುಕುತ್ತಿದ್ದಾರೆ. ಅವರು, ಅರ್ಧನಾರೀಶ್ವರರನ್ನು ಹುಡುಕಲಿ. ಎರಡು ವರ್ಷ ಆದರೂ ಅಧ್ಯಕ್ಷರನ್ನು ಆಯ್ಕೆ ಮಾಡಿಲ್ಲ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರನ್ನು ಹುಡುಕುತ್ತಿದ್ದಾರೆ ಅರ್ಧನಾರೀಶ್ವರ ರನ್ನು ಹುಡುಕಿದರು ಬಹಳ ಸಂತೋಷ ಎಂದು ವ್ಯಂಗ್ಯವಾಡಿದರು. ಸಿಎಂ ಬದಲಾವಣೆ ಬಗ್ಗೆ ಆರ್ ಅಶೋಕ್ ಹಾಗೂ ಬಿ ವೈ ವಿಜಯೇಂದ್ರ ಮಾತನಾಡಿರುವ ಕುರಿತು, ಆರ್.ಅಶೋಕ್ ವಿಜಯೇಂದ್ರ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲಿ. ಎಂದು ತಿರುಗೇಟು ನೀಡಿದರು.

Read More

ತುಮಕೂರು : ತುಮಕೂರಿನಲ್ಲಿ ದಾವಣಗೆರೆ ಪಿಎಸ್ಐ ನಾಗರಾಜಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಗನ ವಿಚಾರವಾಗಿ ಮನನೊಂದು ನಾಗರಾಜಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತುಮಕೂರು ನಗರ ಪೊಲೀಸರ ತನಿಖೆಯ ವೇಳೆ ಈ ಒಂದು ವಿಚಾರ ಬೆಳಕಿಗೆ ಬಂದಿದೆ. ಪಿಎಸ್ಐ ನಾಗರಾಜಪ್ಪ ಬರೆದಿದ್ದ ಡೆತ್ ನೋಟನ್ನು ಪೊಲೀಸರು ಪಡೆದಿದ್ದರು. ನಾಗರಾಜಯ್ಯ ಸಾವಿನ ಕಾರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದರು. ತುಮಕೂರಿಗೆ ಬರುವ ಮುನ್ನ ಮನೆಯಲ್ಲಿ ಪಿಎಸ್ಐ ನಾಗರಾಜಪ್ಪ ಜಗಳವಾಡಿದ್ದರು. ಇಂಜಿನಿಯರ್ ಮುಗಿಸಿದ್ದ ಮಗ ಮನೆಯಲ್ಲಿ ಇದ್ದಿದ್ದಕ್ಕೆ ನಾಗರಾಜಪ್ಪ ತೀವ್ರ ಬೇಸರಗೊಂಡಿದ್ದರು. ಇದೇ ವಿಚಾರವಾಗಿ ನಾಗರಾಜಪ್ಪ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ದಾವಣಗೆರೆಯಿಂದ ತುಮಕೂರಿಗೆ ಬಂದು ಲಾಡ್ಜ್ ನಲ್ಲಿ ನಾಗರಾಜಪ್ಪ ನೇಣಿಗೆ ಶರಣಾಗಿದ್ದಾರೆ. ಮಗನ ವಿಚಾರವಾಗಿ ಬೇಸರಗೊಂಡು ನಾನು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇನೆ. ನನ್ನ ಮಗನಿಗೆ ಕೆಲಸ ಸಿಗಲಿ ಎಂಬ ಉದ್ದೇಶಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಪಿಎಸ್ಐ ನಾಗರಾಜಪ್ಪ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಪಿಎಸ್ಐ ಆತ್ಮಹತ್ಯೆ ಕೇಸ್ ಶೀಘ್ರದಲ್ಲೇ ದಾವಣಗೆರೆಗೆ ವರ್ಗಾಯಿಸಲಾಗುತ್ತದೆ ದಾವಣಗೆರೆಯ ಕೆಟಿಜೆ…

Read More