Subscribe to Updates
Get the latest creative news from FooBar about art, design and business.
Author: kannadanewsnow05
ಕೊಪ್ಪಳ : ಪ್ರೀತಿಸಿಮದುವೆಯಾಗಬೇಕಿದ್ದ ಪ್ರೇಮಿಗಳು ತುಂಗಭದ್ರಾ ಎಡೆದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಕೊಪ್ಪಳದ ಮುನಿರಾಬಾದ್ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಈ ಒಂದು ಘಟನೆ ನಡೆದಿದೆ. ಪ್ರೀತಿಗೆ ಕುಟುಂಬಸ್ಥರು ವಿರೋಧ ಆಗಿದ್ದಾರೆ. ನಿನ್ನೆ ಸಂಜೆ ಪ್ರವೀಣ್ ಮತ್ತು ಅಂಜಲಿ ಎನ್ನುವ ಪ್ರೇಮಿಗಳು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದು ಒಂದು ವರ್ಷದಿಂದ ಪ್ರವೀಣ್ ಮತ್ತು ಅಂಜಲಿ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯನ್ನು ಮನೆಯಲ್ಲಿ ತಿಳಿಸಿದ್ದಾರೆ.ಮನೆಯವರು ಕೂಡ ಮದುವೆ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಎರಡು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾರೆ. ನಿನ್ನೆ ಈ ಇಬ್ಬರು ಕಾಲುವೆಗೆ ಬಂದಿದ್ದು, ಮನೆಯವರು ಏನಾದರೂ ಮಾಡಿ ಬಿಡುತ್ತಾರೆ ಎನ್ನುವ ಭಯದಿಂದ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಲುವೆಗೆ ಹಾರೋದನ್ನ ಕೆಲರು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೈಸೂರು : ರಾಜ್ಯದಲ್ಲಿ ಹೃದಯಾಘಾದ ಸರಣಿ ಸಾವು ಮುಂದುವರೆದಿದ್ದು, ಮೈಸೂರಿನಲ್ಲಿ ಕೂಡ ಯುವಕನೋರ್ವ ಹೃದಯಘಾತಕ್ಕೆ ಬಲಿಯಾಗಿದ್ದಾನೆ. ದರ್ಶನ್ ಎನ್ನುವ ಯುವಕ ಹೃದಯಘಾತದಿಂದ ಸಾವನಪ್ಪಿದ್ದು, ದರ್ಶನ್ ಸಾವಿನಿಂದ ಆತನ ಸ್ನೇಹಿತರು, ಕುಟುಂಬಸ್ಥರು ಶಾಕ್ ಗೆ ಒಳಗಾಗಿದ್ದಾರೆ. ದರ್ಶನ್ಗೆ ಯಾವುದೇ ರೀತಿಯ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಆದರೆ ದರ್ಶನಕ್ಕೆ ಎರಡು ದಿನದಿಂದ ಕೆಮ್ಮು ಇತ್ತು ವೈದ್ಯರು ಕೂಡ ಪರಿಶೀಲನೆ ಮಾಡಿ ಇದು ಸಾಮಾನ್ಯ ಕೆಮ್ಮು ಅಂತ ಹೇಳಿದ್ದರು ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆತ ಸಾವನಪ್ಪಿದ್ದಾನೆ. ಆತ ಪೇಂಟ್ ಅಂಗಡಿ ಒಂದನ್ನು ಇಟ್ಟುಕೊಂಡಿದ್ದ. ಯಾವುದೇ ರೀತಿಯಾಗಿ ಕೆಟ್ಟ ಚಟಗಳು ಇರಲಿಲ್ಲ ಆರಾಮಾಗಿಯೇ ಇದ್ದ. ನಿನ್ನೆ ಅಂಗಡಿಯಲ್ಲಿದ್ದಾಗ ನನಗೆ ಸ್ವಲ್ಪ ಸುಸ್ತು ಅಂತ ಹೇಳಿ ಸುಮ್ನೆ ಆದ ಮತ್ತೆ ಮನೆಗೆ ಹೋದ 11:30ಕ್ಕೆ ಸುಸ್ತಾಗಿ ತಲೆ ಸುತ್ತುತ್ತಿದೆ ಆಗಿದೆ ಬೇಗ ಬನ್ನಿ ಅಂತ ಕರೆ ಮಾಡಿದ್ದ. ಮನೆಗೆ ಬರುವಷ್ಟರಲ್ಲಿಯೇ ವೀಕ್ ಆಗಿದ್ದ ಹಾಸ್ಪಿಟಲ್ಗೆ ಕರೆದುಕೊಂಡು ಹೋಗುವಾಗಲೇ ವೈದ್ಯರು ಮೃತಪಟ್ಟಿರುವುದು ದೃಢಪಡಿಸಿದ್ದಾರೆ ಎಂದು ಆತನ ಸ್ನೇಹಿತರು ತಿಳಿಸಿದ್ದಾರೆ.
ಬಳ್ಳಾರಿ : ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು ಮುಂದುವರೆದಿದ್ದು, ಇಂದು ಬೆಳಿಗ್ಗೆ ತಾನೇ ಕಲ್ಬುರ್ಗಿಯಲ್ಲಿ ವಾಕಿಂಗ್ ಗೆ ತೆರಳಿ ಮನೆಗೆ ಬಂದಿದ್ದ ಉಪ ಪ್ರಾಂಶುಪಾಲರು ಒಬ್ಬರು ಹೃದಯಘಾತಕೆ ಹುಲಿಯಾಗಿದ್ದರು ಇದೀಗ ಬಳ್ಳಾರಿಯಲ್ಲಿ ಹಾರ್ಟ್ ಅಟ್ಯಾಕ್ ಗೆ ಯುವಕನೊಬ್ಬ ಸಾವನಪ್ಪಿದ್ದಾನೆ. ಹೌದು ಬಳ್ಳಾರಿ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಯುವಕ ಬಲಿಯಾಗಿದ್ದಾನೆ. ಜಿಲ್ಲೆಯ ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದ ವಿ.ಗವಿಸಿದ್ದ (30) ಎನ್ನುವ ಯುವಕ ಸಾವನಪ್ಪಿದ್ದಾನೆ. ಕಳೆದ 5 ದಿನಗಳ ಹಿಂದೆ ಗವಿಸಿದ್ದನಿಗೆ ಹೃದಯಘಾತವಾಗಿತ್ತು. ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಗವಿಸಿದ್ದ ಚಿಕಿತ್ಸೆ ಕೂಡ ಪಡೆಯುತ್ತಿದ್ದ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ವಿ.ಗವಿಸಿದ್ದ ಇದೀಗ ಮೃತಪಟ್ಟಿದ್ದಾನೆ.
ಬೆಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಯುವತಿಯರ ಫೋಟೋ ಮತ್ತು ವಿಡಿಯೋ ರೆಕಾರ್ಡ್ ಮಾಡಿ ಅಶ್ಲೀಲವಾಗಿ ಪೋಸ್ಟ್ ಮಾಡುತ್ತಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದ್ದು, ಬನಶಂಕರಿ ಠಾಣೆ ಪೋಲಿಸರಿಂದ ಗುರುದೀಪ್ ಸಿಂಗ್ (26) ಎನ್ನುವ ಯುವಕನನ್ನು ಅರೆಸ್ಟ್ ಮಾಡಲಾಗಿದೆ. ಅಸಭ್ಯವಾಗಿ ಕಾಣುವಂತೆ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ನಡೆಸಿ,ಆರೋಪಿಯು ಪೋಸ್ಟ್ ಮಾಡುತ್ತಿದ್ದ. ಬೆಂಗಳೂರಿನ ಕೆಆರ್ ಪುರಂ ನಿವಾಸಿಯಾಗಿರುವ ಗುರುದೀಪ್ ಸಿಂಗನನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.ಇತ್ತೀಚಿಗೆ ಯುವತಿಯರ ಫೋಟೋ ಮತ್ತು ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಯುವತಿಯೋರ್ವಳು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಳು. ಪೊಲೀಸರು ಸುಮೋಟೋ ಕೇಸ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಯಾದಗಿರಿ : ಯಾದಗಿರಿಯಲ್ಲಿ ಹೃದಯ ವಿದ್ರಾವಕ ಘಟನೆ ಒಂದು ನಡೆದಿದ್ದು, ಜಾತಿ ನಿಂದನೆ ಪ್ರಕರಣಕ್ಕೆ ಹೆದರಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ಮಹಿಬೂಬ್ (22) ಎನ್ನುವ ನೇಣು ಬಿಗಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನ ಆತ್ಮಹತ್ಯೆ ವಿಷಯ ತಿಳಿದು ತಂದೆಗೆ ಹೃದಯಘಾತವಾಗಿದೆ. ಒಂದೇ ದಿನ ಒಂದೇ ಮನೆಯಲ್ಲಿ ಎರಡು ಸಾವು ಆಗಿವೆ ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಜಮೀನಿನಲ್ಲಿ ದಾರಿಯ ವಿಚಾರಕ್ಕೆ ಜಗಳ ಆಗಿತ್ತು. ಹಿರಿಯರು ನ್ಯಾಯ ಪಂಚಾಯತಿ ಮಾಡಿ ಬಗೆಹರಿಸಿದ್ದರು. ಆದರೂ ಬೇರೆ ಊರಿನ ಮುಖಂಡ ಜಾತಿ ನಿಂದನೆ ಪ್ರಕರಣ ದಾಖಲಿಸಲು ಮುಂದಾಗಿದ್ದ. ಜಾತಿನಿಂದನೆ ಕೇಸ್ ದಾಖಲಿಸಿ, ಜೈಲಿಗೆ ಕಳುಹಿಸುತ್ತೇನೆ ಎಂದು ಆತ ಬೆದರಿಕೆ ಹಾಕಿದ್ದ. ಜೈಲಿಗೆ ಹೋದರೆ ಮರ್ಯಾದೆ ಹೋಗುತ್ತದೆ ಎಂದು ಮೆಹಬೂಬ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ತಂದೆ ಸೈಯದ್ ಅಲಿ ಅವರಿಗೆ ಹೃದಯಾಘಾತ ಆಗಿದೆ. ಸೈಯದ್ ಅಲಿ ಅವರನ್ನು ತಕ್ಷಣ ಕಲ್ಬುರ್ಗಿಯ ಜಯದೇವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ…
ಕಲಬುರಗಿ : ರಾಜ್ಯದಲ್ಲಿ ಹೃದಯಾಘಾರದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು ನಿನ್ನೆ ತಾನೇ ಹೃದಯಾಘಾತಕೆ ಓರ್ವ ಬಾಲಕ ಸೇರಿದಂತೆ ಒಟ್ಟು ಎಂಟು ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಇದೀಗ ಕಲ್ಬುರ್ಗಿಯಲ್ಲಿ ಹೃದಯಘಾತಕ್ಕೆ ಕಾಲೇಜು ಉಪ ಪ್ರಾಂಶುಪಾಲರು ಒಬ್ಬರು ಸಾವನ್ನಪ್ಪಿದ್ದಾರೆ. ಹೌದು ಕಲ್ಬುರ್ಗಿಯಲ್ಲಿ ಹೃದಯಾಘಾತದಿಂದ ಉಪರಂಶುಪಾಲ ಸಾವನ್ನಪ್ಪಿದ್ದಾರೆ. ಕಲಬುರ್ಗಿಯ ಬಿದ್ದಾಪುರ ಕಾಲೋನಿಯ ಗುರುಬಸಯ್ಯ ಸಾಲಿಮಠ್ (53) ಎನ್ನುವವರು ಸಾವನಪ್ಪಿದ್ದಾರೆ ಕಲಬುರ್ಗಿ ನಗರದಲ್ಲಿ ಖಾಸಗಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಗುರುಬಸಯ್ಯ ಸೇವೆ ಸಲ್ಲಿಸುತ್ತಿದ್ದರು . ವಾಕಿ ಮುಗಿಸಿ ಮನೆಯಲ್ಲಿ ನೀರು ಕುಡಿದು ಕುರ್ಬಸಯ್ಯ ಕುಳಿತಿದ್ದಾಗ ತೀವ್ರ ಹೃದಯಾಘಾತ ಸಂಭವಿಸಿ ಸಾವನಪ್ಪಿದ್ದಾರೆ. ನಿನ್ನೆ ಮಧ್ಯಾಹ್ನ ಕಾಲೇಜಿನಲ್ಲಿದ್ದಾಗಲೇ ಗುರುಬಸಯ್ಯ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಅವರು ಯಾವುದೇ ಚಕಪ್ ಮಾಡಿಸಿಕೊಳ್ಳಲಿಲ್ಲ. ಆದರೆ ಇಂದು ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಬಂದು ನೀರು ಕುಡಿದು ಕುಳಿತುಕೊಂಡಾಗಲೇ ಏಕಾಏಕಿ ಹೃದಯಘಾತದಿಂದ ಸಾವನಪ್ಪಿದ್ದಾರೆ.
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಮನೆಗಳ ಮೇಲೆ ಇಂದು ಬೆಳ್ಳಂ ಬೆಳಿಗ್ಗೆ ಇಡಿ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು 5 ಕಡೆ ದಾಳಿ ನಡೆಸಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಮತ್ತು ಸಂಬಂಧಿಕರಿಗೆ ಸೇರಿದ ಮನೆಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಶಾಸಕ ಸುಬ್ಬಾರೆಡ್ಡಿ ಮನೆಗಳ ಮೇಲೆ ಇದೀಗ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಅಡಿ ದಾಳಿ ನಡೆಸಲಾಗಿದೆ.ವಿದೇಶಗಳಲ್ಲಿ ಶಾಸಕ ಸುಬ್ಬಾರೆಡ್ಡಿ ಕುಟುಂಬದ ಸದಸ್ಯರು ಆಸ್ತಿ ಹೊಂದಿದ್ದಾರೆ ಎನ್ನಲಾಗಿದ್ದು, ಶಾಸಕ ಸುಬ್ಬಾರೆಡ್ಡಿ ಬಿಜಿನೆಸ್ ಪಾರ್ಟ್ನರ್ ಗಳಿಗೆ ಸೇರಿದ ಆಸ್ತಿ ಎನ್ನಲಾಗಿದೆ. ಹಾಗಾಗಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.
ಬೆಂಗಳೂರು : ಸಹ ಕಲಾವಿದೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಆರೋಪದಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ನಟ ಮಡೆನೂರು ಮನು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ತನ್ನ ವಿರುದ್ಧ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ 2025ರ ಮೇ 22ರಂದು ದಾಖಲಾಗಿರುವ ಎಫ್ಐಆರ್ ಮತ್ತು ನಗರದ 6ನೇ ಎಸಿಜೆಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಮನು ಹೈಕೊರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಂಬಂಧ ಬುಧವಾರ ಕೆಲಕಾಲ ಮನು ಮತ್ತು ಪ್ರಕರಣದ ದೂರುದಾರೆಯ ಪರ ವಕೀಲರ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಪೀಠ ವಿಚಾರಣೆಯನ್ನು ಮುಂದೂಡಿತು.
ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇಂದು ಒಂದೇ ದಿನ ಓರ್ವ ಬಾಲಕ ಸೇರಿದಂತೆ 7 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಹೃದಯಾಘಾತದಿಂದ ಗೂಡ್ಸ್ ವಾಹನ ಚಾಲಕ ಸಾವು ಬೆಳಗಾವಿ ಜಿಲ್ಲೆಯ ಸೌದತ್ತಿ ಪಟ್ಟಣದ ಎಪಿಎಂಸಿಯಲ್ಲಿ ಆವರಣದಲ್ಲಿ ಈ ಒಂದು ಘಟನೆ ನಡೆದಿದ್ದು, ಹೃದಯಾಘಾತದಿಂದ ಅಶೋಕ್ ಜೀರಿಗವಾಡ (40) ಎನ್ನುವ ವ್ಯಕ್ತಿ ಸಾವನಪ್ಪಿದ್ದಾರೆ. ಮೃತ ಅಶೋಕ್ ಸೌದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಸೌದತಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಅಶೋಕ್ ಹೆಸರು ಕಾಳು ತಂದಿದ್ದರು. ಈ ವೇಳೆ ಎದೆನೋವಿನಿಂದ ಕುಸಿದು ಬಿದ್ದು ಚಾಲಕ ಅಶೋಕ್ ಸಾವನಪ್ಪಿದ್ದಾರೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆಯಲ್ಲಿ 22 ವರ್ಷದ ಯುವಕ ಸಾವು ದಾವಣಗೆರೆಯಲ್ಲಿ ಹೃದಯಾಘಾತದಿಂದ 22 ವರ್ಷದ ಯುವಕ ಮೃತಪಟ್ಟಿದ್ದಾನೆ. ಉದ್ಯಮಿ ರೇಖಾ ಮುರುಗೇಶ್ ಅವರ ಪುತ್ರ ಅಕ್ಷಯ್ ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದ ಅಕ್ಷಯ್ ನನ್ನು…
ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತ ಮರಣ ಮೃದಂಗ ಮುಂದುವರೆದಿದ್ದು, ಇಂದು ಒಂದೇ ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು ಆರು ಜನರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಕೂಡ ಯುವಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಹೌದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮತ್ತೊಬ್ಬ ಯುವಕ ಬಲಿಯಾಗಿದ್ದು, ಹೃದಯಾಘಾತದಿಂದ ಗೊಲ್ಲರದೊಡ್ಡಿ ನಿವಾಸಿ ಗಿರೀಶ್ (25) ಇದೀಗ ಸಾವನಪ್ಪಿದ್ದಾನೆ. ದನ ಮೇಯಿಸಲು ತಳ್ಳಿದ್ದಾಗ ಗಿರೀಶ್ ಹೃದಯಘಾರದಿಂದ ಸವನ್ನಪಿದ್ದಾನೆ ಕಳೆದ ಮೂರು ದಿನಗಳಿಂದ ಗಿರೀಶ್ ಗೆ ಎದೆ ನೋವು ಕಾಣಿಸಿಕೊಂಡಿತ್ತು. ಇದೀಗ ಇಂದು ಹಾರ್ಟ್ ಅಟ್ಯಾಕ್ ಗೆ ಗಿರೀಶ್ ಬಲಿಯಾಗಿದ್ದಾನೆ.














