Subscribe to Updates
Get the latest creative news from FooBar about art, design and business.
Author: kannadanewsnow05
ಬಾಗಲಕೋಟೆ : ರಾಜ್ಯದಲ್ಲಿ ಹೃದಯಾಘಾತದಿಂದ ಸಾವನಪುತ್ತಿರುವವರ ಸರಣಿ ಸಾವುಗಳು ಮುಂದುವರೆದಿದ್ದು, ಇದೀಗ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಮನೆಯ ಹೊರಗಡೆ ಟೀ ಕುಡಿಯುತ್ತಿರುವಾಗಲೇ ಹೃದಯಾಘಾತದಿಂದ ನಗರ ಸಭೆಯ ಮಾಜಿ ಅಧ್ಯಕ್ಷ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ಹೃದಯಾಘಾತದಿಂದ ನಗರಸಭೆಯ ಮಾಜಿ ಅಧ್ಯಕ್ಷ ಸಿದ್ದು ಮೀಸಿ (63) ಎನ್ನುವ ವ್ಯಕ್ತಿ ಸಾವನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನಗರಸಭೆಯ ಮಾಜಿ ಅಧ್ಯಕ್ಷರಾಗಿದ್ದ ಸಿದ್ದು ಮೀಸಿ ಮನೆಯ ಹೊರಗಡೆ ಚಹಾ ಕುಡಿಯುವ ವೇಳೆ ಹೃದಯಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಜಮಖಂಡಿಯ ಅಂಬೇಡ್ಕರ್ ಸರ್ಕಲ್ ಬಳಿ ಸಿದ್ದು ಮೀಸಿಯವರ ಮನೆ ಇದ್ದು, ಬೆಳಿಗ್ಗೆ ಈ ಒಂದು ಘಟನೆ ನಡೆದಿದೆ. ಮೃತ ಸಿದ್ದುಮೀಸಿ ಜಮಖಂಡಿ ತಾಲೂಕು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು ಸಹ ಆಗಿದ್ದರು.
ಬೆಂಗಳೂರು : ಕೋರ್ಟಿಗೆ ಬಂದು ಸಾಕ್ಷಿ ಹೇಳುತ್ತಾಳೆ ಎಂದು ಪತ್ನಿಗೆ ಪತಿಯೊಬ್ಬ ಚಾಕು ಇರಿದಿರುವ ಘಟನೆ ನಡೆದಿದೆ. ಪತ್ನಿ ಚಿನ್ನದ ಅಂಗಡಿಗೆ ಬಂದಾಗ ಪತ್ನಿಯ ಮೇಲೆ ಪತಿಯೊಬ್ಬ ಚಾಕುವಿನಿಂದ ಇರದಿದ್ದಾನೆ. 38 ವರ್ಷದ ಜಮುನಾ ಕುತ್ತಿಗೆಗೆ ಪಾಪಿ ಪತಿ ಗುರುಮೂರ್ತಿ ಚಾಕು ಇರಿದು ಕೊಲೆಗೆ ಯತ್ನಿಸಿರುವ ಘಟನೆ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿಂದ ನಡೆದಿದೆ. 11 ವರ್ಷದ ಕಲಹಕ್ಕೆ ಸಾಕ್ಷಿ ಹೇಳುತ್ತಾಳೆ ಅಂತ ಹಲ್ಲೆ ಮಾಡಿದ್ದಾನೆ. ಬೆಂಗಳೂರಿನ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಪತಿ ಗುರುಮೂರ್ತಿ ಅಟ್ಟಹಾಸ ಮೆರೆದಿದ್ದಾನೆ. ಮೂರು ದಿನಗಳ ಹಿಂದೆ ಪತ್ನಿ ಜಮುನಾ ಕಾಲು ಚೈನು ಖರೀದಿಗೆ ಚಿನ್ನದ ಅಂಗಡಿಗೆ ಬಂದಿದ್ದಳು ಈ ವೇಳೆ ಪತ್ನಿಯ ಹುಡುಕಿಕೊಂಡು ಪತಿ ಗುರುಮೂರ್ತಿ ಬಂದಿದ್ದ. ಜಮುನಾ ಚಲನವಲನ ಗಮನಿಸಿ ಪ್ಲಾನ್ ಮಾಡಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕಳೆದ 11 ವರ್ಷಗಳಿಂದ ಜಮುನಾ ಮತ್ತು ಗುರುಮೂರ್ತಿ ಬೇರೆಯಾಗಿದ್ದರು. ಈ ಹಿಂದೆಯು ಕೂಡ ಪತ್ನಿಗೆ ಚಾಕುವಿನಿಂದ ಗುರುಮೂರ್ತಿ ಇರಿದಿದ್ದ. ಜಮುನಾಳನ್ನು ಕೊಲೆ ಮಾಡೋಕೆ ಪತಿ…
ಬೆಂಗಳೂರು : ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಬೆಂಗಳೂರಿನಲ್ಲಿ ಬಿಕ್ಲು ಶಿವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಶಾಸಕ ಭೈರತಿ ಬಸವರಾಜ್, ಜಗದೀಶ್, ವಿಮಲ್, ಕಿರಣ್, ಅನಿಲ್ ವಿರುದ್ಧ ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಈ ಕುರಿತು ಬಿಜೆಪಿ ಶಾಸಕ ಭೈರತಿ ಬಸವರಾಜ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನನಗೆ ಯಾವುದು ಮಾಹಿತಿ ಇಲ್ಲ. ಯಾರು ಏನು ಅಂತ ಗೊತ್ತಿಲ್ಲ. ಯಾವುದೊ ದುರುದೇಶದಿಂದ ಈ ರೀತಿ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಪೊಲೀಸರಿಗೆ ಕಂಪ್ಲೇಂಟ್ ಕೊಡುವಾಗ, ನನಗೆ ಮಾಹಿತಿ ಕೇಳಬೇಕಾಗಿತ್ತು ಅಲ್ವಾ? ಏನು ಕೇಳದೆ ನನ್ನ ಮೇಲೆ FIR ದಾಖಲೆ ಮಾಡಿದ್ದಾರೆ. ಈ ವಿಚಾರ ಯಾರು ಏನು ಅಂತ ಮಾಹಿತಿ ಇಲ್ಲ ಅದಕ್ಕೂ ನನಗೂ ಯಾವುದೇ ರೀತಿ ಸಂಬಂಧ ಇಲ್ಲ. ಯಾರು ನನ್ನ ಹೆಸರು ಹೇಳಿದ್ದಾರೋ…
ಕೆಲವೊಮ್ಮೆ ವಿವಾಹದ ವಯಸ್ಸಿಗೆ ಬಂದ ಹುಡುಗ ಹುಡುಗಿಗೆ ಅನೇಕ ಅಡೆತಡೆಗಳು ಎದುರಾಗಬಹುದು. ಸಂಬಂಧಗಳು ಸರಿಹೊಂದದಿರುವುದು, ಪ್ರಸ್ತಾಪಗಳು ಮುರಿದು ಬೀಳುವುದು ಅಥವಾ ಪ್ರಸ್ತಾಪಗಳು ಬಾರದೇಯೇ ಇರಬಹುದು. ಅಂತಹ ಸಂದರ್ಭದಲ್ಲಿ ಮಾಡಬೇಕಾದ ಪರಿಹಾರಗಳೇನು ಎನ್ನುವುದನ್ನು ಎನ್ನುವುದನ್ನು ಪಂಡಿತ್ ಜ್ಞಾನೇಶ್ವರ್ ರಾವ್ ಇಲ್ಲಿ ವಿವರಿಸಿದ್ದಾರೆ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಸಿಗಂದೂರು ಚೌಡೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ call/WhatsApp 9686268564 ಮದುವೆ ತಡವಾಗುತ್ತಿದ್ದರೆ, ಅದಕ್ಕಾಗಿ ತಲೆ ಕೆಡಿಸಿಕೊಳ್ಳಬೇಡಿ ಅಥವಾ ನಿಮ್ಮ ಸಂಬಂಧವು ಮತ್ತೆ ಮತ್ತೆ ಮುರಿದು ಬೀಳುತ್ತಿದ್ದರೆ ಬೇಸರಗೊಳ್ಳಬೇಡಿ. ಇದಕ್ಕಾಗಿ ಲಾಲ್ ಕಿತಾಬ್‌ನಲ್ಲಿ ಪರಿಹಾರಗಳನ್ನು ವಿವರಿಸಲಾಗಿದೆ. ಈ ಪರಿಹಾರಗಳು ನಿಮ್ಮ ಸಮಸ್ಯೆಗಳನ್ನು ದೂರ ಮಾಡುವುದರ ಜೊತೆಗೆ, ನಿಮಗೆ ಬೇಕಾದ ಸಂಗಾತಿಯನ್ನು ಆರಿಸಿಕೊಳ್ಳಲು ಸಹ ನಿಮಗೆ ಸಹಾಯ ಮಾಡುತ್ತದೆ.…
BREAKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಮಾತಾಡೋ ನೆಪದಲ್ಲಿ ಮನೆಗೆ ಕರೆಸಿಕೊಂಡು ಬಾಲಕಿ ಮೇಲೆ ಅತ್ಯಾಚಾರ!
ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಪಕ್ಕದ ಮನೆಯಲ್ಲಿದ್ದ ಬಾಲಕಿಯನ್ನು ಮಾತನಾಡುವ ನೆನಪಲ್ಲಿ ಮನೆಗೆ ಕರೆಸಿಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.ಬಂಧಿತ ಆರೋಪಿಯನ್ನು ದೀಪು (26) ಎಂದು ತಿಳಿದುಬಂದಿದೆ. ಆರೋಪಿಯು ಮಾತನಾಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಪಕ್ಕದ ಮನೆಯವನೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ಮಾದನಾಯಕನಹಳ್ಳಿ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ. ಆರೋಪಿ ದೀಪು ಬಾಲಕಿಯ ಮನೆಯ ಪಕ್ಕದಲ್ಲೇ ವಾಸಗಿದ್ದು, ರಾತ್ರಿ ವೇಳೆ ಬೆಂಗಳೂರಿನಲ್ಲಿ ಆಟೋ ಓಡಿಸಿ ಬೆಳಿಗ್ಗೆ ಮನೆಯಲ್ಲೆ ಇರುತ್ತಿದ್ದ. ಬಾಲಕಿ ಪಕ್ಕದ ಮನೆಯವಳಾಗಿದ್ದರಿಂದ ಪರಿಚಯ ಮಾಡಿಕೊಂಡಿದ್ದ ಆರೋಪಿ 4 ತಿಂಗಳ ಹಿಂದೆ ಮಾತನಾಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಕೃತ್ಯವೆಸಗಿದ್ದಾನೆ. ಅಲ್ಲದೇ 3-4 ಬಾರಿ ಆತನ ಮನೆಗೆ ಕರೆಸಿಕೊಂಡು ಬಾಲಕಿಯ ವಿರೋಧದ ನಡುವೆಯೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಆಕೆಯ ತಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಘಟನೆ…
ಕಲಬುರ್ಗಿ : ಕಲಬುರ್ಗಿಯಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು, ಬಿರುಗಾಳಿ, ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಜೇವರ್ಗಿ ತಾಲೂಕಿನ ಮುತ್ತಕೊಡ ಗ್ರಾಮದಲ್ಲಿ ಕಳೆದ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತಳನ್ನು ಅಹಾಧ್ಯ ಮಲ್ಲಪ್ಪ ಪಸಪೂರ (5) ಎಂದು ಗುರುತಿಸಲಾಗಿದೆ. ಮನೆಯೊಳಗೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಏಕಾಏಕಿ ಮೇಲ್ಛಾವಣಿ ಕುಸಿದುಬಿದ್ದಿದ್ದು, ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಘಟನೆಯ ವೇಳೆ ಬಾಲಕಿ ಮೂವರು ಸಹೋದರಿಯರು ಇನ್ನೊಂದು ಕೋಣೆಯಲ್ಲಿದ್ದರೆ, ಅಡುಗೆ ಮನೆಯಲ್ಲಿದ್ದ ತಾಯಿ ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ. ಈ ಬಗ್ಗೆ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ : ಹಾಸನದಲ್ಲಿ ಘೋರ ಘಟನೆ ನಡೆದಿದ್ದು, ಬಾಣನಕೆರೆ ಗ್ರಾಮದಲ್ಲಿ ಹೆಜ್ಜೆನು ದಾಳಿಗೆ ಯುವಕನೊಬ್ಬ ಬಲಿಯಾಗಿದ್ದಾನೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಣನಕೆರೆ ಗ್ರಾಮದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಮೃತ ಯುವಕನನ್ನು ಬಿಕೆ ಚರಣ್ (30) ಎಂದು ತಿಳಿದು ಬಂದಿದೆ. ಚರಣ್ ತಂದೆ ಕುಮಾರ್ ಅವರಿಗೂ ಗಂಭೀರವಾದ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭಿರವಾಗಿದೆ. ಮೊನ್ನೆ ತಂದೆ ಜೊತೆ ಚರಣ್ ಜಮೀನಿಗೆ ತೆರಳಿದ್ದ ಈ ವೇಳೆ ಹೆಜ್ಜೆನು ದಾಳಿ ಮಾಡಿದೆ. ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ನಿನ್ನೆ ಬಿಕೆ ಚರಣ್ ಮೃತಪಟ್ಟಿದ್ದಾನೆ. ಘಟನೆ ಕುರಿತಂತೆ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಘೋರವದ ದುರಂತ ಒಂದು ಸಂಭವಿಸಿದ್ದು, ದನ ಮೇಯಿಸಲು ತೆರಳಿದಾಗ ಮರಕ್ಕೆ ತಗುಲಿದ್ದ ವಿದ್ಯುತ್ ತಂತಿ ತಗುಲಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ತಂತಿ ತಗುಲಿ ರೈತ ಸಾವನಪ್ಪಿದ್ದಾರೆ. ಬೈರಾಪುರ ಗ್ರಾಮದ ನಾಗೇಶ್ ಗೌಡ (65) ಎನ್ನುವ ರೈತ ದುರ್ಮರಣ ಹೊಂದಿದ್ದಾರೆ. ದನ ಮೇಯಿಸಲು ತೆರಳಿದ್ದಾಗ ಈ ಒಂದು ದುರ್ಘಟನೆ ಸಂಭವಿಸಿದೆ. ತಗುಲಿದ್ದ ವಿದ್ಯುತ್ ಪ್ರವಹಿಸಿ ರೈತ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು : ಭಾರತಕ್ಕೆ ಬಹುದೊಡ್ಡ ಗಂಡಾಂತರ ಕಾದಿದೆ. ವಿಶ್ವವೇ ತಿರುಗಿ ನೋಡುವ ಮಟ್ಟಿನ ಆಘಾತ ಎದುರಾಗಲಿದೆ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮೈಸೂರಿನ ನಮನ್ ಫೌಂಡೇಶನ್ ವತಿಯಿಂದ ನೂತನವಾಗಿ ನಿರ್ಮಾಣವಾಗಲಿರುವ ಧ್ಯಾನ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಲಿದೆ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಅರಸನ ಅರಮನೆಗೆ ಕಾರ್ಮೋಡ ಕವಿದೀತು,ಜಗತ್ತೇ ತಿರುಗಿನೋಡುವಂತಹ ಆಘಾತ ಭಾರತಕ್ಕಾಗಲಿದೆ ಎನ್ನುವ ಮೂಲಕ ದೇಶ ನಾಯಕ ಸ್ಥಾನದಲ್ಲಿರುವವರಿಗೆ ಆಪತ್ತು ಕಾದಿದೆ ಎಂಬರ್ಥದಲ್ಲಿ ಹೇಳಿರುವ ಭವಿಷ್ಯ ಈಗ ಭಾರೀ ಸಂಚಲನ ಮೂಡಿಸಿದೆ.ಆದರೆ ಅದಕ್ಕೆ ಪರಹಾರ ಮಾಡಿಕೊಂಡರೆ ಸರಿಯಾದೀತು ಎಂಬ ಪರಿಹಾರದ ಸಾಧ್ಯತೆಯನ್ನೂ ತಿಳಿಸಿದ್ದಾರೆ. ಯುಗಾದಿ ನಂತರ ಮಳೆ, ಬೆಳೆ ಬಗ್ಗೆ ನಿರ್ಧಾರ ಆಗುತ್ತದೆ. ಸಂಕ್ರಾಂತಿಯಲ್ಲಿ ರಾಜ್ಯಕ್ಕೆ ಮತ್ತು ದೊಡ್ಡ ದೊಡ್ಡ ವ್ಯಾಪಾರಸ್ಥರಿಗೆ ಇಂಥಹ ವ್ಯಾವಹಾರಿಕ ವಿಷಯಗಳು ಬರುತ್ತವೆ. ಹೀಗಾಗಿ ಸಂಕ್ರಾಂತಿವರೆಗೆ ಏನೂ ತೊಂದರೆ ಇಲ್ಲ, ಸಂಕ್ರಾಂತಿ ಫಲವನ್ನು…
ಬೆಂಗಳೂರು : ಅಭಿನಯ ಸರಸ್ವತಿಯಂದೆ ಖ್ಯಾತಿ ಪಡೆದಿದ್ದ ಬಹುಭಾಷಾ ಹಿರಿಯ ನಟಿ ಬಿ.ಸರೋಜಾದೇವಿ ಅವರ ಅಂತ್ಯಕ್ರಿಯೆ ಅವರ ಹುಟ್ಟುರಾದ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದಲ್ಲಿ ಹಿರಿಯ ನಟಿ ಬಿ ಸರೋಜಾ ದೇವಿ ಪಂಚಭೂತಗಳಲ್ಲಿ ಲೀನವಾದರು. ಸಕಲ ಸರ್ಕಾರಿ ಗೌರವದೊಂದಿಗೆ ಬಿ ಸರೋಜಾದೇವಿ ಅಂತ್ಯಕ್ರಿಯೆ ನೆರವೇರಿತು. ತಾಯಿ ರುದ್ರಮ್ಮ ಸಮಾಧಿ ಪಕ್ಕದಲ್ಲಿ ನೆರವೇರಿತು. ಈ ವೇಳೆ ಪತ್ರ ಗೌತಮ್ ಅಂತಿಮ ವಿಧಿ ವಿಧಾನ ಪೂರೈಸಿದ್ದು, ಒಕ್ಕಲಿಗ ಸಂಪ್ರದಾಯದಂತೆ ಆತ್ಯಕ್ರಿಯೆ ನೆರವೇರಿತು. ಈ ವೇಳೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಮೂರು ಸುತ್ತು ಕುಶಾಲ ತೋಪು ಸಿಡಿಸಿ ಗೌರವ ಸಲ್ಲಿಸಿತು. ಅಂತ್ಯಕ್ರಿಯೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶಾಸಕ ಸಿಪಿ ಯೋಗೇಶ್ವರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.














